ಸುದ್ದಿ

ಆರ್‌ಎಸ್‌ಎಸ್‌ ಅವಹೇಳನ : ಪ್ರಿಯಾಂಕ್‌ ಖರ್ಗೆ, ದಿನೇಶ್‌ ಗುಂಡೂರಾವ್‌ಗೆ ಕೋರ್ಟ್‌ ನೋಟಿಸ್‌

ಆರ್‌ಎಸ್‌ಎಸ್‌ನವರು ವಿಷಕಾರಿಗಳು ಎಂದಿ ಅವಹೇಳನ ಮಾಡಿದ್ದ ಪ್ರಿಯಾಂಕ್‌ ಖರ್ಗೆ ಬೆಂಗಳೂರು : ಆರ್‌ಎಸ್‌ಎಸ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹಾಗೂ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಗೆ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ನಗರದ ನಿವಾಸಿ ಹಾಗೂ ಆರ್‌ಎಸ್‌ಎಸ್ ಸದಸ್ಯರಾದ ತೇಜಸ್ […]

ಆರ್‌ಎಸ್‌ಎಸ್‌ ಅವಹೇಳನ : ಪ್ರಿಯಾಂಕ್‌ ಖರ್ಗೆ, ದಿನೇಶ್‌ ಗುಂಡೂರಾವ್‌ಗೆ ಕೋರ್ಟ್‌ ನೋಟಿಸ್‌ Read More »

ಬಾಂಗ್ಲಾದೇಶದಲ್ಲಿ ಇನ್ನೋರ್ವ ಹಿಂದು ವ್ಯಕ್ತಿಯ ಹತ್ಯೆ : ಮುಂದುವರಿದ ಕೊಲೆಗಳ ಸರಣಿ

24 ತಾಸುಗಳಲ್ಲಿ ಮೂವರು ಹಿಂದೂಗಳ ಮರ್ಡರ್‌ ಢಾಕಾ: ಬಾಂಗ್ಲಾದೇಶದಲ್ಲಿ ದಿನಸಿ ಅಂಗಡಿಯ ಮಾಲೀಕನಾಗಿದ್ದ ಹಿಂದೂ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿದೆ. ಇದು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಮೂರನೇ ಘಟನೆಯಾಗಿದೆ. ಹತ್ಯೆಯಾದವರನ್ನು ಮೋನಿ ಚಕ್ರವರ್ತಿ ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ನರಸಿಂಗ್ಡಿ ಜಿಲ್ಲೆಯಲ್ಲಿ ಅವರ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರು ಸಾವನ್ನಪ್ಪಿದ್ದಾರೆ. ಈ ಘಟನೆಗೂ ಕೆಲವು ಗಂಟೆಗಳ ಮೊದಲು, ಜಶೋರ್ ಜಿಲ್ಲೆಯಲ್ಲಿ ಕಾರ್ಖಾನೆ ಮಾಲೀಕರು ಹಾಗೂ ಪತ್ರಿಕೆಯೊಂದರ

ಬಾಂಗ್ಲಾದೇಶದಲ್ಲಿ ಇನ್ನೋರ್ವ ಹಿಂದು ವ್ಯಕ್ತಿಯ ಹತ್ಯೆ : ಮುಂದುವರಿದ ಕೊಲೆಗಳ ಸರಣಿ Read More »

ಕೇಂದ್ರದ ಮಾಜಿ ಸಚಿವ ಸುರೇಶ್‌ ಕಲ್ಮಾಡಿ ನಿಧನ

ನವದೆಹಲಿ : ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್​​ನ ಹಿರಿಯ ನಾಯಕ ಸುರೇಶ್ ಕಲ್ಮಾಡಿ ಇಂದು ನಿಧನರಾಗಿದ್ದಾರೆ. ಸುರೇಶ್ ಕಲ್ಮಾಡಿ ದೀರ್ಘಕಾಲದ ಅನಾರೋಗ್ಯದಿಂದ ಮಂಗಳವಾರ ಪುಣೆಯ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ಪಾರ್ಥಿವ ಶರೀರವನ್ನು ಪುಣೆಯ ಎರಾಂಡ್‌ವಾಣೆಯಲ್ಲಿರುವ ಕಲ್ಮಾಡಿ ಹೌಸ್‌ನಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಇರಿಸಲಾಗುವುದು. ಮಧ್ಯಾಹ್ನ 3.30ಕ್ಕೆ ವೈಕುಂಠ ಸ್ಮಶಾನಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಸುರೇಶ್‌ ಕಲ್ಮಾಡಿ ಮೂಲತಃ ಉಡುಪಿ ಸಮೀಪ ಕಲ್ಮಾಡಿಯವರು.

ಕೇಂದ್ರದ ಮಾಜಿ ಸಚಿವ ಸುರೇಶ್‌ ಕಲ್ಮಾಡಿ ನಿಧನ Read More »

ಪ್ರತಾಪ್‌ ಸಿಂಹ ರಾಜ್ಯ ರಾಜಕಾರಣಕ್ಕೆ ಎಂಟ್ರಿಯಾಗುವುದು ಪಕ್ಕಾ

ಚಾಮರಾಜ ಕ್ಷೇತ್ರದಿಂದ ಕಣಕ್ಕಿಳಿಯಲು ತಯಾರಿ ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ರಾಜ್ಯ ರಾಜಕಾರಣಕ್ಕೆ ಎಂಟ್ರಿಯಾಗಲು ತೀರ್ಮಾನಿಸಿದ್ದಾರೆ. ಎರಡು ಬಾರಿ ಮೈಸೂರು-ಕೊಡಗು ಸಂಸದರಾಗಿದ್ದ ಅವರಿಗೆ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಕ್ಕಿರಲಿಲ್ಲ. ಆದರೆ ಇದೀಗ ಪ್ರತಾಪ್ ಸಿಂಹ ರಾಷ್ಟ್ರ ರಾಜಕಾರಣ ಬಿಟ್ಟು ರಾಜ್ಯ ರಾಜಕಾರಣದತ್ತ ಹೆಜ್ಜೆ ಇಟ್ಟಿದ್ದಾರೆ. ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುವ ಸುಳಿವು ನೀಡಿದ್ದಾರೆ. ಅಲ್ಲದೇ ತಮಗೆ ಯಾವ ಕ್ಷೇತ್ರದಿಂದ ಸ್ಪರ್ಧಿಸುವ ಒಲವಿದೆ ಎಂಬ ಕುರಿತೂ ಸಹ ಮಾಹಿತಿ ಬಿಚ್ಚಿಟ್ಟಿದ್ದಾರೆ. ಈ

ಪ್ರತಾಪ್‌ ಸಿಂಹ ರಾಜ್ಯ ರಾಜಕಾರಣಕ್ಕೆ ಎಂಟ್ರಿಯಾಗುವುದು ಪಕ್ಕಾ Read More »

ಉಪ್ಪಿನಂಗಡಿ : ಕೋಳಿಅಂಕಕ್ಕೆ ಪೊಲೀಸ್‌ ದಾಳಿ, ಓರ್ವನ ಬಂಧನ

ಉಪ್ಪಿನಂಗಡಿ : ಇಲ್ಲಿಗೆ ಸಮೀಪದ ಕಜೆಕ್ಕಾರ್ ಗುಡ್ದ ಎಂಬಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಕೋಳಿಅಂಕ ನಡೆಸುತ್ತಿದ್ದ ಪ್ರದೇಶಕ್ಕೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ ಮೂರು ಕೋಳಿ, ಮೂರು ದ್ವಿಚಕ್ರವಾಹನಗಳ ಸಹಿತ ಓರ್ವನನ್ನು ಬಂಧಿಸಿದ ಘಟನೆ ವರದಿಯಾಗಿದೆ. ಬಂಧಿತನನ್ನು ಉರುವಾಲು ಗ್ರಾಮದ ನೋಣಯ್ಯ ಮುಗೇರ ಎಂದು ಗುರುತಿಸಲಾಗಿದ್ದು, ಘಟನಾ ಸ್ಥಳದಿಂದ ಪೊಲೀಸ್ ದಾಳಿಯ ವೇಳೆ ಪರಾರಿಯಾದವರನ್ನು ವಿಜಯ ಕಜೆಕ್ಕಾರ್, ರವಿ ಕಜೆಕ್ಕಾರ್, ಉದಯ ಪೆರಿಯಡ್ಕ ಮತ್ತು ಇತರ ಇಬ್ಬರು ಎಂದು ಗುರುತಿಸಲಾಗಿದೆ. ಬಂಧಿತನಿಂದ ಕೋಳಿ ಅಂಕಕ್ಕೆ ಬಳಸಲಾಗುತ್ತಿರುವ ಸಲಕರಣೆಗಳನ್ನು ಜೂಜಿಗೆ

ಉಪ್ಪಿನಂಗಡಿ : ಕೋಳಿಅಂಕಕ್ಕೆ ಪೊಲೀಸ್‌ ದಾಳಿ, ಓರ್ವನ ಬಂಧನ Read More »

ಹೊಗೆಯಿಂದ ಉಸಿರುಕಟ್ಟಿ ಮಂಗಳೂರಿನ ಮಹಿಳೆ ಸಾವು

ಫ್ಲ್ಯಾಟ್‌ಗೆ ಬೆಂಕಿಹತ್ತಿಕೊಂಡಾಗ ಹೊರ ಬರಲಾಗದೆ ಸಾವು ಬೆಂಗಳೂರು: ಬೆಂಕಿ ಹತ್ತಿಕೊಂಡಾಗ ಉಸಿರುಗಟ್ಟಿ ಮಂಗಳೂರು ಮೂಲದ ಮಹಿಳಾ ಟೆಕ್ಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದ ಸುಬ್ರಮಣ್ಯ ಬಡಾವಣೆಯಲ್ಲಿ ನಡೆದಿದ್ದು ತಡವಾಗಿ ವರದಿಯಾಗಿದೆ. ಜನವರಿ 3ರಂದು ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶರ್ಮಿಳಾ (34) ಮೃತ ದುರ್ದೈವಿ. ಶರ್ಮಿಳಾ ಮೂಲತಃ ಮಂಗಳೂರಿನವರು. ಒಂದು ವರ್ಷದ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ಅಕ್ಸೆಂಚರ್ ಸಾಫ್ಟ್‌ವೇರ್ ಕಂಪನಿಯಲ್ಲಿ ಇಂಜಿನಿಯರ್ ಆಗಿ ಸೇರಿದ್ದರು. ಶರ್ಮಿಳಾ ವಾಸವಿದ್ದ ಫ್ಲ್ಯಾಟ್‌ನ ರೂಮ್‌ನಲ್ಲಿ ಜ.3ರಂದು ರಾತ್ರಿ

ಹೊಗೆಯಿಂದ ಉಸಿರುಕಟ್ಟಿ ಮಂಗಳೂರಿನ ಮಹಿಳೆ ಸಾವು Read More »

ಕೆಎಸ್‌ಆರ್‌ಟಿಸಿ ಪ್ರೀಮಿಯರ್‌ ಬಸ್‌ಗಳ ಟಿಕೆಟ್‌ ದರ ಕಡಿತ

ಬೆಂಗಳೂರು-ಮಂಗಳೂರು ಸೇರಿ ಕೆಲವು ರೂಟ್‌ಗಳಲ್ಲಿ ರಿಯಾಯಿತಿ ದರ ಅನ್ವಯ ಬೆಂಗಳೂರು: ಬೆಂಗಳೂರು-ಮಂಗಳೂರು ಸೇರಿದಂತೆ ಆಯ್ದ ಕೆಲವು ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಮಾರ್ಚ್‌ವರೆಗೆ ಪ್ರೀಮಿಯರ್ ಬಸ್‌ಗಳಲ್ಲಿ ಶೇ.5 ರಿಂದ ಶೇ.15 ಟಿಕೆಟ್ ದರ ಕಡಿತದ ಕೊಡುಗೆ ಸರ್ಕಾರ ಮಾಡಿದೆ. ಕೆಎಸ್‌ಆರ್‌ಟಿಸಿ ನಿಗಮದ ಪ್ರತಿಷ್ಠಿತ ಸಾರಿಗೆಗಳ ಅಥವಾ ಪ್ರೀಮಿಯರ್ ಬಸ್‌ಗಳ ಪ್ರಯಾಣ ದರಗಳಲ್ಲಿ ಶೇ.5-15 ರಿಯಾಯಿತಿ ಘೋಷಿಸಿದೆ. ಜನವರಿಯಿಂದ ಮಾರ್ಚ್‌ವರೆಗೆ ಪ್ರಯಾಣಿಕರ ದಟ್ಟಣೆ ಕಡಿಮೆಯಿರುವ ಹಿನ್ನೆಲೆ ಟಿಕೆಟ್ ದರವನ್ನು ಕಡಿಮೆ ಮಾಡಿದೆ. ಆದರೆ ಈ ದರ ವಾರದ ದಿನಗಳಲ್ಲಿ ಮಾತ್ರ

ಕೆಎಸ್‌ಆರ್‌ಟಿಸಿ ಪ್ರೀಮಿಯರ್‌ ಬಸ್‌ಗಳ ಟಿಕೆಟ್‌ ದರ ಕಡಿತ Read More »

ಸಾರ್ವಜನಿಕ ಸ್ಥಳದಲ್ಲಿ ಮಾರಾಕಾಸ್ತ್ರ ಹಿಡಿದ ಪುಂಡರು: ಆರೋಪಿಗಳ ಬಂಧನ, ಗಾಂಜಾ ವಶ

ದಾವಣಗೆರೆ: ಸಾರ್ವಜನಿಕ ಸ್ಥಳದಲ್ಲಿ ಮಚ್ಚು ಹಿಡಿದು ಪುಂಡಾಟ ಮೆರೆದ ಇಬ್ಬರು ರೌಡಿ ಶೀಟರ್‌ಗಳನ್ನು ಕೆಟಿಜೆ ನಗರ ಪೊಲೀಸರು ವಶಕ್ಕೆ ಪಡೆದಿದ್ದು, ಅವರಿಂದ ಭಾರೀ ಪ್ರಮಾಣದ ಗಾಂಜಾ ಜಪ್ತಿ ‌ಮಾಡಲಾಗಿದೆ. ಬಂಧಿತ ಆರೋಪಿಗಳನ್ನು ಸಾಹಿಲ್ ಮತ್ತು ರಾಕೇಶ್ ಎಂದು ಗುರುತಿಸಲಾಗಿದೆ. ಮೂರು ದಿನಗಳ ಹಿಂದೆ ನಿಟ್ಟುವಳ್ಳಿ ಶ್ರೀರಾಮ ಬಡಾವಣೆಯಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆದಿತ್ತು.‌ ಈ ಸಮಯದಲ್ಲಿ ಅಟೋದಲ್ಲಿ ಬಂದ ಆರೋಪಿಗಳಿಬ್ಬರು ಲಾಂಗ್, ಮಚ್ಚು ಹಿಡಿದು ಓಡಾಟ ನಡೆಸಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಆಧಾರದಲ್ಲಿ

ಸಾರ್ವಜನಿಕ ಸ್ಥಳದಲ್ಲಿ ಮಾರಾಕಾಸ್ತ್ರ ಹಿಡಿದ ಪುಂಡರು: ಆರೋಪಿಗಳ ಬಂಧನ, ಗಾಂಜಾ ವಶ Read More »

ONGC ಪೈಪ್‌ಲೈನ್ ‌ಸ್ಪೋಟ: ಭಾರೀ ಪ್ರಮಾಣದಲ್ಲಿ ಅನಿಲ ಸೋರಿಕೆ

ಆಂಧ್ರಪ್ರದೇಶ: ರಾಜ್ಯದ ಕೊನಸಿಮಾ ಜಿಲ್ಲೆಯ ಮಾಲಿಕಿಪುರಂ ಮಂಡಲದ ಇರುಸುಮುಂಡ ಗ್ರಾಮದಲ್ಲಿ ಒಎನ್‌ಜಿಸಿ ಪೈಪ್‌ಲೈನ್ ಸ್ಪೋಟವಾದ ಪರಿಣಾಮ ಭಾರೀ ಪ್ರಮಾಣದಲ್ಲಿ ಅನಿಲ ಸೋರಿಕೆಯಾಗಿದೆ. ಈ ಹಿನ್ನೆಲೆ ಹತ್ತಿರದ ಮೂರು ಗ್ರಾಮಗಳ ಜನರನ್ನು ಸ್ಥಳಾಂತರ ಮಾಡಲಾಗಿದೆ. ಹಾಗೆಯೇ ವಿದ್ಯುತ್ ಉಪಕರಣಗಳು, ಸ್ಟೌ, ಗ್ಯಾಸ್ ಸೇರಿದಂತೆ ಯಾವುದೇ ಬೆಂಕಿ ಹೊತ್ತುವ ಸಲಕರಣೆಗಳನ್ನು ಬಳಕೆ ಮಾಡದಂತೆ ಸೂಚಿಸಲಾಗಿದೆ. ಸ್ಥಳದಲ್ಲಿ ಪರಿಸ್ಥಿತಿ ನಿಭಾಯಿಸಲು ONGC ತಂಡವನ್ನು ನಿಯೋಜಿಸಲಾಗಿದೆ. ONGC ಬಾವಿ ಮರು ಕೊರೆಯುವ ಕೆಲಸ ನಡೆಯುವ ಸಮಯದಲ್ಲಿ ಈ ದುರಂತ ಸಂಭವಿಸಿದೆ.

ONGC ಪೈಪ್‌ಲೈನ್ ‌ಸ್ಪೋಟ: ಭಾರೀ ಪ್ರಮಾಣದಲ್ಲಿ ಅನಿಲ ಸೋರಿಕೆ Read More »

ಹರಿದ್ವಾರಕ್ಕೆ ಹಿಂದೂಯೇತರರ ನಿಷೇಧ: ಉತ್ತರಾಖಂಡ್ ಸಿಎಂ ಹೇಳಿದ್ದೇನು?

ಡೆಹ್ರಾಡೂನ್: ಹರಿದ್ವಾರ ಮತ್ತು ಇನ್ನಿತರ ಹಿಂದೂಗಳ ಧಾರ್ಮಿಕ ಯಾತ್ರಾ ಸ್ಥಳಗಳಿಗೆ ಹಿಂದೂಯೇತರರ ಪ್ರವೇಶ‌ ನಿರ್ಬಂಧಿಸುವ ಕುರಿತು ಉತ್ತರಾಖಂಡ್ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಅಲ್ಲಿನ ಸಿಎಂ ಪುಷ್ಕರ್ ಸಿಂಗ್ ಧಾಮಿ ಮಾತನಾಡಿದ್ದು, ಪವಿತ್ರ ನಗರ ಹರಿದ್ವಾರ. ಆ ದೇವ ಭೂಮಿಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಸ್ವರೂಪವನ್ನು ಕಾಪಾಡಲು ಸರ್ಕಾರ ಬದ್ಧ.‌ ಅಲ್ಲಿನ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಹಿಂದೂಯೇತರರಿಗೆ ಪ್ರವೇಶ ನಿರ್ಬಂಧಕ್ಕೆ ಚಿಂತನೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಹರಿದ್ವಾರದಲ್ಲಿ 2027 ರಲ್ಲಿ ಅರ್ಧ ಕುಂಭ ಮೇಳ ನಡೆಯಲಿದೆ‌.

ಹರಿದ್ವಾರಕ್ಕೆ ಹಿಂದೂಯೇತರರ ನಿಷೇಧ: ಉತ್ತರಾಖಂಡ್ ಸಿಎಂ ಹೇಳಿದ್ದೇನು? Read More »

error: Content is protected !!
Scroll to Top