ನಿಧನ

ಕನ್ನಡ ಚಿತ್ರರಂಗ, ಟಿವಿ ಲೋಕದ ಹಿರಿಯ ನಟ ಸರಿಗಮ ವಿಜಿ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗ ಹಾಗೂ ಟಿವಿ ಲೋಕದ ಹಿರಿಯ ನಟ ಸರಿಗಮ ವಿಜಿ (76) ಕೆಲ ದಿನಗಳ ಅನಾರೋಗ್ಯದಿಂದ ಇಂದು ಬೆಳಿಗ್ಗೆ ನಿಧನರಾದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿಜಿ ಅವರಿಗೆ ಶ್ವಾಸಕೋಶದ ಸಮಸ್ಯೆ ಎದುರಾಗಿದ್ದು,ಯಶಂಪುರದ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆಗೆ ಸ್ಪಂದಿಸದೆ ವಿಜಿ ಅವರು ಇಂದು  ನಿಧನ ಹೊಂದಿದ್ದಾರೆ ವಿಜಿ ಅವರದ್ದು ಬಲು ಸುದೀರ್ಘವಾದ ಸಿನಿಮಾ ಮತ್ತು ರಂಗಭೂಮಿ ಪಯಣ. ನಾಟಕಗಳಲ್ಲಿ ನಟಿಸುತ್ತಿದ್ದ ವಿಜಿ ಅವರ ‘ಸಂಸಾರದಲ್ಲಿ ಸರಿಗಮ’ ನಾಟಕ ಬಹಳ ಹೆಸರು […]

ಕನ್ನಡ ಚಿತ್ರರಂಗ, ಟಿವಿ ಲೋಕದ ಹಿರಿಯ ನಟ ಸರಿಗಮ ವಿಜಿ ನಿಧನ Read More »

ಬೈಕ್‍ ಅಪಘಾತದಲ್ಲಿ ಬಾಲಕಿ ಮೃತ್ಯು

ಬಂಟ್ವಾಳ : ಬೈಕ್ – ಬೈಕ್ ಗಳ ನಡುವೆ ಅಪಘಾತ ಸಂಭವಿಸಿರುವ   ಘಟನೆ ಇಂದು ರಾತ್ರಿ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರಾಮಲ್ ಕಟ್ಟೆಯಲ್ಲಿ ನಡೆದಿದೆ.           ಘಟನೆಯಿಂದ ಬೈಕ್ ನಲ್ಲಿ ಸಹಪ್ರಯಾಣಿಕೆಯಾಗಿದ್ದ ಬಾಲಕಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕುಕ್ಕಿಪಾಡಿ ಗ್ರಾಮದ ಕೊಡಂಬೆಟ್ಟು ನಿವಾಸಿ ಇಸ್ಮತ್ ಆಯಿಶಾ (13) ಮೃತಪಟ್ಟ ಬಾಲಕಿ. ಬೈಕ್ ಚಾಲಕ ಬಾಲಕಿಯ ತಂದೆ ಅಬ್ದುಲ್ ರಹಮಾನಿಗೆ ಗಾಯಗಳಾಗಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಮಲ್ ಕಟ್ಟೆಯಿಂದ ಹೆದ್ದಾರಿಯಲ್ಲಿ ರಾಂಗ್ ಸೈಡ್ ನಲ್ಲಿ ಬಂದ ನೆತ್ತರಕೆರೆ

ಬೈಕ್‍ ಅಪಘಾತದಲ್ಲಿ ಬಾಲಕಿ ಮೃತ್ಯು Read More »

ನೃತ್ಯ ಗುರು ಕಮಲಾಕ್ಷ ಆಚಾರ್ ನಿಧನ

ಬೆಳ್ತಂಗಡಿ: ನೃತ್ಯ ಗುರು ಕಮಲಾಕ್ಷ ಆಚಾರ್ ( 77)ಮಂಗಳೂರಿನಲ್ಲಿ ವಯೋ ಸಹಜ ಅಸೌಖ್ಯದಿಂದ ಮಂಗಳವಾರ ನಿಧನ ಹೊಂದಿದರು. 2022 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಅವರು ತಾಲೂಕಿನ ಪ್ರಥಮ ಭರತನಾಟ್ಯ ಗುರುವಾಗಿದ್ದರು. ಬೆಳ್ತಂಗಡಿಯಲ್ಲಿ ನೃತ್ಯ ನಿಕೇತನ ಸಂಸ್ಥೆಯನ್ನು ಹುಟ್ಟು ಹಾಕಿ ಸಾವಿರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ ತರಬೇತಿ ನೀಡಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಮುಖ್ಯ ಶಿಕ್ಷಕರಾಗಿ,ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.1986 ರಿಂದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ನೃತ್ಯ ಪರೀಕ್ಷಕರಾಗಿ ಸಲಹೆಗಾರರಾಗಿ

ನೃತ್ಯ ಗುರು ಕಮಲಾಕ್ಷ ಆಚಾರ್ ನಿಧನ Read More »

ಲಕ್ಷ್ಮೀ ಜ್ಯುವೆಲ್ಸ್ ಮಾಲಕ ಭಾಸ್ಕರ ಆಚಾರ್ಯ ನಿಧನ

ಪುತ್ತೂರು: ಕೋರ್ಟ್‍ ರಸ್ತೆಯಲ್ಲಿರುವ ಲಕ್ಷ್ಮೀ ಜ್ಯುವೆಲ್ಸ್ ಮಾಲಕ, ಪುತ್ತೂರಿನ ಪರ್ಲಡ್ಕ ನಿವಾಸಿ ಭಾಸ್ಕರ ಆಚಾರ್ಯ (73 ವ.) ಇಂದು ಬೆಳಿಗ್ಗೆ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಲಕ್ಷ್ಮೀ ಜ್ಯುವೆಲ್ಸ್ ಮಾಲಕರಾಗಿದ್ದ ಅವರು ಮೊದಲು ದರ್ಬೆಯಲ್ಲಿ ಲಕ್ಷ್ಕೀ ಜ್ಯುವೆಲ್ಸ್ ನ್ನು ಆರಂಭಿಸಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

ಲಕ್ಷ್ಮೀ ಜ್ಯುವೆಲ್ಸ್ ಮಾಲಕ ಭಾಸ್ಕರ ಆಚಾರ್ಯ ನಿಧನ Read More »

ಸಾಲಭಾದೆಯಿಂದ ಯುವಕ ಆತ್ಮಹತ್ಯೆ

ಮೂಡಬಿದಿರೆ : ಸಾಲ ಭಾದೆಯಿಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡುಬಿದ್ರೆಯಲ್ಲಿ ಬುಧವಾರ ಸಂಜೆ ನಡೆದಿದೆ. ನಸ್ರುಲ್ಲಾ(29) ಆತ್ಮಹತ್ಯೆ ಮಾಡಿಕೊಂಡ ಯುವಕ ಎನ್ನಲಾಗಿದೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ನಸ್ರುಲ್ಲಾ ಎಂಬುವವರು  ಮೂರು ತಿಂಗಳ ಹಿಂದೆ ಊರಿಗೆ ಮರಳಿದ್ದರು. ಈ ವೇಳೆ ಸಾಲದ ಚಿಂತೆಯಲ್ಲಿದ್ದರೆನ್ನಲಾಗಿದೆ. ಮನೆಯಲ್ಲಿದ್ದ ಸಮಯದಲ್ಲಿ ಸಾಲ ಕೊಟ್ಟ ಬ್ಯಾಂಕ್ ನವರು, ಸಾಲದವರು ಆತನ ಮನೆಗೆ ಬಂದು ಹೋಗುತ್ತಿದ್ದರೆನ್ನಲಾಗಿದ್ದು, ಇದರಿಂದ ಮಾನಸಿಕವಾಗಿ ನೊಂದಿದ್ದರು. ಬುಧವಾರ ಬೆಡ್ ರೂಂನಲ್ಲಿ ಫ್ಯಾನಿಗೆ ಚೂಡಿದಾರದ ವೇಲಿನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ಸಾಲಭಾದೆಯಿಂದ ಯುವಕ ಆತ್ಮಹತ್ಯೆ Read More »

ರೈಲಿ ನಡಿಗೆ ಸಿಲುಕಿ ವ್ಯಕ್ತಿ ಮೃತ್ಯು..!

ಪುತ್ತೂರು : ರೈಲಿನಡಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಪುತ್ತೂರಿನ ಕಬಕದಲ್ಲಿ ನಡೆದಿದೆ ಮೃತರನ್ನು ಕಲ್ಲಾಜೆ ಕೆದಿಲ ಗ್ರಾಮದ ಭರತ್ ಪೂಜಾರಿ (67) ಎನ್ನಲಾಗಿದೆ. ಸ್ಥಳಕ್ಕೆ ಪುತ್ತೂರು ನಗರ ಪೊಲೀಸರು ರೈಲ್ವೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ರೈಲಿ ನಡಿಗೆ ಸಿಲುಕಿ ವ್ಯಕ್ತಿ ಮೃತ್ಯು..! Read More »

ನಿವೃತ್ತ ಅಧ್ಯಾಪಕ, ಯಕ್ಷಗಾನ ಅರ್ಥಧಾರಿ ಪಕಳಕುಂಜ ಶಾಂ ಭಟ್ ನಿಧನ

ವಿಟ್ಲ : ನಿವೃತ್ತ ಅಧ್ಯಾಪಕ , ಪ್ರಸಿದ್ಧ ಯಕ್ಷಗಾನ ಅರ್ಥಧಾರಿ ಪಕಳಕುಂಜ ಶಾಂ ಭಟ್ (77) ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಶಾಂ ಭಟ್‍ ಅವರು ವಿಟ್ಲದ ವಿಠಲ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ನಿವೃತ್ತರಾಗಿದ್ದರು. ಯಕ್ಷಗಾನ ಅರ್ಥದಾರಿಯಾಗಿ ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ್ದು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ನಿವೃತ್ತ ಅಧ್ಯಾಪಕ, ಯಕ್ಷಗಾನ ಅರ್ಥಧಾರಿ ಪಕಳಕುಂಜ ಶಾಂ ಭಟ್ ನಿಧನ Read More »

ಟ್ಯಾಕ್ಟರಿಗೆ ಡಿಕ್ಕಿ ಹೊಡೆದ ಬೈಕ್‍ | ಸ್ಥಳದಲ್ಲೇ ಮೂವರ ಮೃತ್ಯು

ತುಮಕೂರು : ಬೈಕೊಂದು ಮುಂದೆ ಸಾಗುತ್ತಿದ್ದ ಟ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಘಟನೆ ತುಮಕೂರು ತಾಲೂಕಿನ ಓಬಳಾಪುರ ಗೇಟ್ ಬಳಿ ನಡೆದಿದೆ. ಡಿಕ್ಕಿ ಹೊಡೆದ  ಪರಿಣಾಮ ಬೈಕ್‌ನಲ್ಲಿದ್ದ ತಾಯಿ ಹಾಗೂ ಇಬ್ಬರು ಪುತ್ರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಮಧುಗಿರಿ ತಾಲೂಕಿನ ಪುರವರ ಹೋಬಳಿ ಗೊಂದಿಹಳ್ಳಿ ಗ್ರಾಮದ ನಿವಾಸಿ ಮುತ್ತಾಝ್ (38), ಅವರ ಪುತ್ರರಾದ ಮುಹಮ್ಮದ್ ಆಸಿಫ್(12) ಹಾಗೂ ಶಾಕಿರ್ ಹುಸೇನ್ (22) ಎಂದು ಗುರುತಿಸಲಾಗಿದೆ. ಈ ಮೂವರು ಇಂದು ಮುಂಜಾನೆ ಬೈಕ್‌ನಲ್ಲಿ ತುಮಕೂರಿನಿಂದ ತಮ್ಮ ಊರಿಗೆ ತೆರಳುತ್ತಿದ್ದು, ಮುಂಜಾನೆ

ಟ್ಯಾಕ್ಟರಿಗೆ ಡಿಕ್ಕಿ ಹೊಡೆದ ಬೈಕ್‍ | ಸ್ಥಳದಲ್ಲೇ ಮೂವರ ಮೃತ್ಯು Read More »

ಮೌಲ್ಯಯುತ ಕಾದಂಬರಿಗಳ ಲೇಖಕ ನಾ.ಡಿ.ಸೋಜ

ನೂರಾರು ಶ್ರೇಷ್ಠ ಕೃತಿಗಳನ್ನು ಬರೆದ ಹಿರಿಯ ಸಾಹಿತಿ ಕನ್ನಡದ ಹಿರಿಯ ಸಾಹಿತಿ ಡಾ. ನಾ. ಡಿಸೋಜ (87) ನಿನ್ನೆ ಸಂಜೆ ಮಂಗಳೂರಿನಲ್ಲಿ ನಿಧನರಾಗಿದ್ದಾರೆ. ಕನ್ನಡ ಮತ್ತು ಮಾತೃಭಾಷೆಯಾದ ಕೊಂಕಣಿಯಲ್ಲಿ ನೂರರಷ್ಟು ಶ್ರೇಷ್ಠ ಕೃತಿಗಳನ್ನು ಶ್ರೀಮಂತವಾಗಿ ಬರೆದವರು ಅವರು. ಒಂದು ಸಣ್ಣ ಗ್ರಾಮದಲ್ಲಿ ಬದುಕಿನ ಉದ್ದಕ್ಕೂ ವಾಸವಾಗಿದ್ದುಕೊಂಡು ಜಾಗತಿಕ ಮಟ್ಟಕ್ಕೆ ಸಂವಾದಿಯಾಗುವ 40 ಮೌಲ್ಯಯುತ ಕಾದಂಬರಿಗಳನ್ನು ಬರೆದದ್ದು ಅವರ ಶ್ರೇಷ್ಠ ಕೊಡುಗೆ ಎಂದು ಖಂಡಿತವಾಗಿ ಹೇಳಬಹುದು. ಪ್ರಕೃತಿಯ ಹಿನ್ನೆಲೆಯ ಶಕ್ತಿಶಾಲಿ ಕಾದಂಬರಿಗಳು ವಿಶೇಷವಾಗಿ ಕಾದಂಬರಿಯ ಕ್ಷೇತ್ರ ಅವರಿಗೆ ಹೃದಯಕ್ಕೆ

ಮೌಲ್ಯಯುತ ಕಾದಂಬರಿಗಳ ಲೇಖಕ ನಾ.ಡಿ.ಸೋಜ Read More »

ಮುಂಡೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ನಿಧನ

ಮುಂಡೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಕುರೆಮಜಲು (55) ನಿಧನ ಹೊಂದಿದರು. ಸಂಜೀವ ಪೂಜಾರಿ ಅವರು ಮುಂಡೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿ, ಕುಕ್ಕಿನಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾಗಿ, ಮೃತ್ಯುಂಜೇಶ್ವರ ದೇವಸ್ಥಾನದ ಮಾಜಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ಕಾಂಗ್ರೆಸ್ ನ ಸಕ್ರಿಯ ಕಾರ್ಯಕರ್ತರಾಗಿದ್ದರು. ಮೃತರು ಪತ್ನಿ ಮತ್ತು ಮೂರು ಮಕ್ಕಳನ್ನು ಅಗಲಿದ್ದಾರೆ.

ಮುಂಡೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ನಿಧನ Read More »

error: Content is protected !!
Scroll to Top