ನಿಧನ

ರೈಲು ಡಿಕ್ಕಿಯಾಗಿ ವ್ಯಕ್ತಿ ಮೃತ್ಯು

ಪುತ್ತೂರು: ರೈಲು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕಬಕ-ಪುತ್ತೂರು ರೈಲು ಹಳಿಯಲ್ಲಿ ಇಂದು ಮುಂಜಾನೆ ನಡೆದಿದೆ. ರೈಲು ಹಳಿಯಲ್ಲಿ ಮೃತದೇಹ ಕಂಡಿದ್ದು, ವ್ಯಕ್ತಿಯ ಪರಿಚಯ ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

ರೈಲು ಡಿಕ್ಕಿಯಾಗಿ ವ್ಯಕ್ತಿ ಮೃತ್ಯು Read More »

ಡಾ| ಆದಂ ಉಸ್ಮಾನ್ ನಿಧನ

ಬೆಳ್ತಂಗಡಿ : ತಲಪಾಡಿ ಕೆ.ಸಿ ರೋಡ್ ನಿವಾಸಿ ಡಾ| ಆದಂ ಉಸ್ಮಾನ್ (65) ಅಲ್ಪಕಾಲದ ಅಸೌಖ್ಯದಿಂದ ಇಂದು ತಮ್ಮ ಸ್ವಗೃಹದಲ್ಲಿ ನಿಧನರಾದರು. ಪುತ್ತೂರು, ಕಡಬ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ, ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಸುಮಾರು 14 ವರ್ಷಗಳ ಕಾಲ ಸರಕಾರಿ ಸೇವೆ ಸಲ್ಲಿಸಿ ಕಳೆದ ವರ್ಷ ನಿವೃತ್ತರಾಗಿದ್ದರು. ಮೃತದೇಹ ತಮ್ಮ ಮನೆಯಾದ ಕೆ.ಸಿ.ರೋಡ್ ಮಂಗಳೂರಿನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ.

ಡಾ| ಆದಂ ಉಸ್ಮಾನ್ ನಿಧನ Read More »

ಸಿಡಿಲು ಬಡಿದು ಕರು ಮೃತ್ಯು

ಕಲ್ಲಡ್ಕ: ಸಿಡಿಲು ಬಡಿದು ಕರುವೊಂದು ಮೃತಪಟ್ಟ ಘಟನೆ ಬುಧವಾರ ರಾತ್ರಿ ಕಲ್ಲಡ್ಕದಲ್ಲಿ ನಡೆದಿದೆ. ಕಲ್ಲಡ್ಕ ಗ್ರಾಮದ ಮುಚ್ಚಿಲ ಕಜೆ ಅಬ್ಬಾಸ್ ಎಂಬವರ ಹಟ್ಟಿಯಲ್ಲಿದ್ದ ಕರು ಸಿಡಿಲಿನ ಬಡಿತಕ್ಕೆ ಬಲಿಯಾಗಿದ್ದು, ಮನೆಯ ಸಂಪೂರ್ಣ ವಯರಿಂಗ್, ಸ್ವಿಚ್ ಬೋರ್ಡ್ ಗಳು ಹೊತ್ತಿ ಹೋಗಿದ್ದು, ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಸಿಡಿಲಿನ ಬಡಿತದಿಂದಾಗಿ ಅಪಾರ ನಷ್ಟ ಸಂಭವಿಸಿದೆ.

ಸಿಡಿಲು ಬಡಿದು ಕರು ಮೃತ್ಯು Read More »

ಮತದಾನ ಮಾಡಿದ ಕೆಲವೇ ಕ್ಷಣದಲ್ಲಿ ಮೃತಪಟ್ಟ ಮಹಿಳೆ

ಉಡುಪಿ : ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣದಲ್ಲಿ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ಸಾಸ್ತಾನ ಪಾಂಡೇಶ್ವರ ಚಡಗರ ಅಗ್ರಹಾರ ಎಂಬಲ್ಲಿ ಎ.16ರಂದು ನಡೆದಿದೆ. ಚಡಗರ ಅಗ್ರಹಾರ ನಿವಾಸಿ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ದಿ.ನಾರಾಯಣ ಉಪಾಧ್ಯ ಅವರ ಪತ್ನಿ ಪಿ.ಯಶೋಧ(83) ಮೃತ ಮಹಿಳೆ. ಚುನಾವಣಾ ಆಯೋಗ ವಿಶೇಷ ಚೇತನರು, ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದು, ಅದರಂತೆ ಪಿ.ಯಶೋಧ ಮನೆಯಲ್ಲೆ ಮತದಾನ ಮಾಡಿದ್ದರು. ಮತದಾನದ ದಿನ ಪಿ.ಯಶೋಧ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದರೂ

ಮತದಾನ ಮಾಡಿದ ಕೆಲವೇ ಕ್ಷಣದಲ್ಲಿ ಮೃತಪಟ್ಟ ಮಹಿಳೆ Read More »

ಕನ್ನಡದ ಹಿರಿಯ ನಟ, ನಿರ್ದೇಶಕ ದ್ವಾರಕೀಶ್ ವಿಧಿವಶ

ಬೆಂಗಳೂರು: ಕನ್ನಡದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರು ನಿಧನರಾಗಿದ್ದಾರೆ. 81 ವರ್ಷದ ದ್ವಾರಕೀಶ್ ಅವರು, ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ದ್ವಾರಕೀಶ್ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ದ್ವಾರಕೀಶ್ 1942 ಆಗಸ್ಟ್ 19ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದರು. ದ್ವಾರಕೀಶ್ ತಂದೆ ಶಾಮರಾವ್ ಮತ್ತು ತಾಯಿ ಜಯಮ್ಮ. ಶಾರದ ವಿಲಾಸ್ ಮತ್ತು ಬನುಮ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದ ದ್ವಾರಕೀಶ್, ಪ್ರೌಢಶಿಕ್ಷಣದ ನಂತರ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದರು. ನಂತರ ತಮ್ಮ

ಕನ್ನಡದ ಹಿರಿಯ ನಟ, ನಿರ್ದೇಶಕ ದ್ವಾರಕೀಶ್ ವಿಧಿವಶ Read More »

ಮೀನು ಹಿಡಿಯಲು ಹೊಳೆಗೆ ಇಳಿದ ಮಹಿಳೆ ಮೃತ್ಯು

ಉಡುಪಿ : ಸಿಗಡಿ ಮೀನು ಹಿಡಿಯಲು ಹೊಳೆಗೆ ಇಳಿದ ಮಹಿಳೆ ಮುಳುಗಿ ಮೃತಪಟ್ಟ ಘಟನೆ ಕುಂದಾಪುರದ ಕೋಣಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಕುಂದಾಪುರ ಕೋಣಿ ಗ್ರಾಮದ ವನಜ ಮೃತ ದುರ್ದೈವಿ. ವನಜ ಎಂದಿನಂತೆ ಸಿಗಡಿ ಮೀನು ಹಿಡಿಯಲು ಕೋಣಿಯ ಮಲ್ಲನಬೆಟ್ಟು ಹೊಳೆಗೆ ಹೋಗಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿದ್ದಾರೆ. ಬಳಿಕ ವನಜಾ ಅವರ ಪತಿ ವಾಸು ಹಾಗೂ ಸ್ಥಳೀಯರು ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅದಾಗಲೇ ವೈದ್ಯರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಮೀನು ಹಿಡಿಯಲು ಹೊಳೆಗೆ ಇಳಿದ ಮಹಿಳೆ ಮೃತ್ಯು Read More »

ಎರ್ಕ ಬಾಬು ಗುರುಸ್ವಾಮಿ ನಿಧನ

ಪುತ್ತೂರು : ಅರಿಯಡ್ಕ ಗ್ರಾಮದ ಎರ್ಕ ನಿವಾಸಿ ಬಾಬು ಗುರುಸ್ವಾಮಿ ಅವರು ಇಂದು ನಿಧನರಾದರು. ಬಾಬು ಗುರುಸ್ವಾಮಿ ಅವರು 53 ವರ್ಷ ಶಬರಿಮಲೆ ಯಾತ್ರೆ ಮಾಡಿದ್ದು ,ಕುಂಬ್ರ ಹಾಗೂ ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಗುರುಸ್ವಾಮಿಯಾಗಿ ಸಾವಿರಾರು ಮಂದಿಗೆ ಮಾಲಾಧಾರಣೆ ಮಾಡಿ ಶಬರಿಮಲೆ ಯಾತ್ರೆ ಮಾಡಿದ್ದರು. ಮೃತರ ಮಕ್ಕಳಾದ ಜಯಂತ್ ,ವೀಣಾ,ವಾಣಿ,ಸಂತೋಷ್ ಅವರನ್ನು ಅಗಲಿದ್ದಾರೆ.

ಎರ್ಕ ಬಾಬು ಗುರುಸ್ವಾಮಿ ನಿಧನ Read More »

ಕೋಳಿ ಅಂಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ ಘಟನೆ

ಕನಕಮಜಲು: ಕನಕಮಜಲು ಗ್ರಾಮದ ಸುಣ್ಣಮೂಲೆ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೋರ್ವ ಕೋಳಿ ಅಂಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.  ನೇಣು ಬಿಗಿದುಕೊಂಡ ವ್ಯಕ್ತಿ ಬಾಬಣ್ಣ ಎಂದು ಗುರುತಿಸಲಾಗಿದೆ.ಕೋಳಿ ಅಂಗಡಿಯ ಹತ್ತಿರದಲ್ಲಿ ಇವರ ರೂಮ್ ಇದ್ದು ಅಲ್ಲಿಂದ ಕೋಳಿ ಅಂಗಡಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಆರೋಗ್ಯ ಸಮಸ್ಯೆ ಇತ್ತು ಎಂದು ಹೇಳಲಾಗುತ್ತಿದ್ದು ರೂಮ್ ನಲ್ಲಿ ಇವರು ಒಬ್ಬರೇ ವಾಸಿಸುತ್ತಿದ್ದರು. ಇದೀಗ ಸ್ಥಳಕ್ಕೆ ಪೋಲಿಸ್ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೋಳಿ ಅಂಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ ಘಟನೆ Read More »

ಕಾಣಿಯೂರು ಬಸ್ ನಿಲ್ದಾಣದಲ್ಲಿ ಮೃತದೇಹ ಪತ್ತೆ

ಕಾಣಿಯೂರು: ಕಾಣಿಯೂರು ಬಸ್ ನಿಲ್ದಾಣದಲ್ಲಿ ಸ್ಥಳೀಯ ಗಂಡಸಿನ ಮೃತದೇಹವೊಂದು ಪತ್ತೆಯಾಗಿದೆ. ತಮಿಳು ಮೂಲದ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಮೋಹನ್ ರಾಜ್ ಮೃತಪಟ್ಟವರು. ಬುಧವಾರ ರಾತ್ರಿ ವಿಪರೀತ ಮದ್ಯಪಾನ ಮಾಡಿದ ಪರಿಣಾಮ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತರಿಗೆ ಮೂವರು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

ಕಾಣಿಯೂರು ಬಸ್ ನಿಲ್ದಾಣದಲ್ಲಿ ಮೃತದೇಹ ಪತ್ತೆ Read More »

ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಒಂದೇ ಮನೆಯ ಐದು ಮಂದಿ ಸಾವು

ಮಹಾರಾಷ್ಟ್ರ : ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಒಂದೇ ಮನೆಯ ಆರು ಜನರು ಬಾವಿಗೆ ಬಿದ್ದ ಘಟನೆ ನೆವಾಸ ತಾಲೂಕಿನ ವಕಾಡಿ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.ಪಾಳು ಬಿದ್ದ ಬಾವಿಯನ್ನು ಮುಚ್ಚಲಾಗಿತ್ತು. ಅದರಲ್ಲಿ ಕಸವನ್ನು ಶೇಖರಣೆ ಮಾಡಲಾಗಿತ್ತು. ಹೀಗಾಗಿ ಅದರಲ್ಲಿ ವಿಷ ಅನಿಲ ಸೇರಿತ್ತು ಎನ್ನಲಾಗುತ್ತಿದೆ. ಇದೇ ಬಾವಿಗೆ ಮನೆಯ ಬೆಕ್ಕು ಬಿದ್ದದ್ದನ್ನು ಗಮನಿಸಿದ ಮನೆ ಮಂದಿ ಅದನ್ನು ಕಾಪಾಡಲೆಂದು ಮುಂದಾಗುತ್ತಾರೆ. ಈ ವೇಳೆ ಒಬ್ಬರಂತೆ ಒಬ್ಬರು ಬಾವಿಗೆ ಇಳಿಯುತ್ತಾರೆ. ಒಟ್ಟು ಆರು ಜನರು ಬಾವಿಗೆ ಇಳಿದಿದ್ದು,

ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಒಂದೇ ಮನೆಯ ಐದು ಮಂದಿ ಸಾವು Read More »

error: Content is protected !!
Scroll to Top