ನಿಧನ

ಪ್ರೇಮ ವೈಫಲ್ಯ: ಸೋಮೇಶ್ವರದ ಯುವಕ ಒಮಾನಿನಲ್ಲಿ ಆತ್ಮಹತ್ಯೆ

ಉಳ್ಳಾಲ: ಪ್ರೇಮ ವೈಫಲ್ಯದ ಕಾರಣಕ್ಕ. ಒಮಾನ್‌ನಲ್ಲಿ ಉದ್ಯೋಗ ಮಾಡುತ್ತಿದ್ದ ಸೋಮೇಶ್ವರದ ಯುವಕನೊಬ್ಬ ತನ್ನ ಕೊಠಡಿಯಲ್ಲೇ ‌ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮೃತನನ್ನು ಪುನೀತ್ ಪೂಜಾರಿ(32) ಎಂದು ಗುರುತಿಸಲಾಗಿದೆ. ಕಳೆದ ಒಂದೂವರೆ ವರ್ಷದಿಂದ ಒಮಾನ್‌ನ ಲಿಫ್ಟ್ ಕಂಪನಿಯೊಂದರಲ್ಲಿ ಪುನೀತ್ ಕೆಲಸ ಮಾಡುತ್ತಿದ್ದರು. ಒಂದೂವರೆ ತಿಂಗಳ ಹಿಂದಷ್ಟೇ ಊರಿಗೆ ಬಂದು ಮತ್ತೆ ಒಮಾನ್‌ಗೆ ತೆರಳಿದ್ದರು. ಪುನೀತ್ ಉರ್ವಾ ಮೂಲದ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಆ ಯುವತಿ ಪುನೀತ್ ಅವರ ಕರೆ, ಸಂದೇಶಗಳಿಗೆ ‌ಸ್ಪಂದನೆ ನೀಡುತ್ತಿರಲಿಲ್ಲ. […]

ಪ್ರೇಮ ವೈಫಲ್ಯ: ಸೋಮೇಶ್ವರದ ಯುವಕ ಒಮಾನಿನಲ್ಲಿ ಆತ್ಮಹತ್ಯೆ Read More »

ಪಿಯುಸಿ ವಿದ್ಯಾರ್ಥಿನಿಯನ್ನು ಬಲಿ ಪಡೆದ ಕಾಡಾನೆ

ಮಡಿಕೇರಿ: ಕಾಡಾನೆಯ ದಾಳಿಗೆ ವಿದ್ಯಾರ್ಥಿನಿಯೊಬ್ಬಳು ಬಲಿಯಾದ ಘಟನೆ ಬೆಟ್ಟತ್ತೂರಿನಲ್ಲಿ ‌ನಡೆದಿದೆ. ಪೂಜಾ(17) ಎಂಬಾಕೆಯೇ ಮೃತ ದುರ್ದೈವಿ. ಮಡಿಕೇರಿಯ ಸಂತ ಜೋಸೆಫ್ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿದ್ದಳು ಎಂದು ತಿಳಿದು ಬಂದಿದೆ. ಫೆ. 28 ರಂದು ಕಾಲೇಜು ಮುಗಿಸಿ ಬೆಟ್ಟತ್ತೂರಿನ ತನ್ನ ಮನೆಯ ಸಮೀಪ ಬಸ್ಸಿನಿಂದ ಇಳಿದಿದ್ದಳು. ಆ ಬಳಿಕ ಆಕೆಯನ್ನು ಕಾಡಾನೆ ದಾಳಿ ನಡೆಸಿ ಕೊಂದಿದೆ ಎಂದು ಹೇಳಲಾಗಿದೆ. ಪ್ರಕರಣ ನಡೆದ ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಲೇ ಇಂತಹ

ಪಿಯುಸಿ ವಿದ್ಯಾರ್ಥಿನಿಯನ್ನು ಬಲಿ ಪಡೆದ ಕಾಡಾನೆ Read More »

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

ಬೆಳಗಾವಿ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಚ ಘಟನೆ ಚಿಕ್ಕೋಡಿಯ ಬಂಬಲವಾಡ ಗ್ರಾಮದಲ್ಲಿ ನಡೆದಿದೆ. ಭೂಮಿಕಾ ಮಾಳಂಗಿ(17) ಮೃತ ದುರ್ದೈವಿ. ಇಂದಿನಿಂದ ದ್ವಿತೀಯ ಪಿಯು ಅಂತಿಮ ಪರೀಕ್ಷೆ ಆರಂಭವಾಗಿದ್ದು, ಆಕೆ ಅದಕ್ಕಾಗಿ ಉತ್ತಮ ಸಿದ್ಧತೆ ಸಹ ಮಾಡಿಕೊಂಡಿದ್ದರು. ಇಂದು ಬೆಳಗ್ಗೆಯೂ ಪರೀಕ್ಷೆಗೆ ತೆರಳುವುದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ. ಆದರೆ ಬೆಳಗ್ಗೆ ಸ್ನಾನ ಮುಗಿಸಿ ಬರುತ್ತಿದ್ದ ಹಾಗೆಯೇ ಆಕೆಗೆ ಎದೆ ನೋವು ಕಾಣಿಸಿಕೊಂಡಿದ್ದು, ಕುಸಿದು ಬಿದ್ದಿದ್ದಾಳೆ. ತಕ್ಷಣವೇ ಅವಳನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಾಯಿತಾದರೂ

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ Read More »

ಬೀದಿ ದೀಪದ ಕಂಬ ಬಿದ್ದು ವ್ಯಕ್ತಿ ಸಾವು

ಮಂಗಳೂರು: ಬೀದಿ ದೀಪದ ಕಂಬ ಮುರಿದು ಬಿದ್ದು ಮೀನುಗಾರ ಕಾರ್ಮಿಕ ಮೃತಪಟ್ಟ ಘಟನೆ ಬಂದರು ಧಕ್ಕೆಯಲ್ಲಿ ನಡೆದಿದೆ. ತಮಿಳುನಾಡು ಮೂಲದ ಮುರುಗನ್ (35) ಎಂಬವರೇ ಮೃತ ದುರ್ದೈವಿ. ಅವರು ಧಕ್ಕೆಯಲ್ಲಿ ಮೀನು ತುಂಬಿ ತರುವುದು, ಐಸ್ ಹಾಕುವುದು ಸೇರಿದಂತೆ ಇನ್ನಿತರ ಕೆಲಸಗಳನ್ನು ಮಾಡುತ್ತಿದ್ದರು. ಮುರುಗನ್ ಮೀನು ಹೊತ್ತು ತಂದು ಕುಳಿತಿದ್ದ ವೇಳೆ ಬೀದಿ ದೀಪದ ಕಂಬ ಅವರ ಮೇಲೆ ಮುರಿದು ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆ ವೇಳೆಗೆ ಅವರು ಮೃತರಾಗಿದ್ದಾರೆ. ಮೃತ ರು

ಬೀದಿ ದೀಪದ ಕಂಬ ಬಿದ್ದು ವ್ಯಕ್ತಿ ಸಾವು Read More »

ಕುರ್ಚಿಯಿಂದ ಕುಸಿದು ಬಿದ್ದು ಯುವಕ ಸಾವು

ಕಾರ್ಕಳ: ಮನೆಯಲ್ಲಿ ಕುರ್ಚಿಯಲ್ಲಿ ಕುಳಿತುಕೊಂಡಿದ್ದ ಯುವಕನೊಬ್ಬ ಕುಸಿದು ಬಿದ್ದು ಮೃತಪಟ್ಟ ಘಟನೆ ಯರ್ಲಪ್ಪಾಡಿಯಲ್ಲಿ ನಡೆದಿದೆ. ಸುಹೇಶ್ (22) ಎಂಬವರೇ ‌ಮೃತ ದುರ್ದೈವಿ. ಮಧ್ಯಾಹ್ನ ವೇಳೆ ಮನೆಯ ಊಟದ ಕೋಣೆಯಲ್ಲಿ ಕುಳಿತಿದ್ದ ಅವರು ಏಕಾಏಕಿ ಬೊಬ್ಬೆ ಹೊಡೆಯುತ್ತಾ ಕೆಳಕ್ಕೆ ಬಿದ್ದಿದ್ದಾಗಿ ತಿಳಿದು ಬಂದಿದೆ. ಆ ಬಳಿಕ ಅಸ್ವಸ್ಥರಾಗಿ ನರಳಾಡುತ್ತಿದ್ದ ಅವರನ್ನು ಕಾರ್ಕಳದ ‌ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಸುಹೇಶ್ ಅವರು ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಕಾರ್ಕಳ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕುರ್ಚಿಯಿಂದ ಕುಸಿದು ಬಿದ್ದು ಯುವಕ ಸಾವು Read More »

ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು: ಹಿರಿಯ ಪತ್ರಕರ್ತ ಸುಂದರ ಕಬಕ ಅವರು ಅನಾರೋಗ್ಯದ ಕಾರಣ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರು ರಾಜ್ಯ ಮಟ್ಟದ ಹಲವು ಟಿವಿ ಚಾನಲ್‌ಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಚೆನ್ನೈ, ಹೈದರಾಬಾದ್, ಬೆಂಗಳೂರುಗಳಲ್ಲಿ ಪ್ರಮುಖ ಖಾಸಗಿ ಸ್ಯಾಟಲೈಟ್ ಚಾನೆಲ್‌ಗಳಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿದ್ದರು.

ಪತ್ರಕರ್ತ ಸುಂದರ ಕಬಕ ನಿಧನ Read More »

ಕೆಲಸಕ್ಕೆ ತೆರಳಿದ್ದ ಯುವಕ ಶವವಾಗಿ ಪತ್ತೆ

ಹಾಸನ: ಕೆಲಸಕ್ಕೆಂದು ಫ್ಯಾಕ್ಟರಿಗೆ ಹೋಗಿದ್ದ ಯುವಕ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಹನುಮಂತಪುರ ಸಮೀಪ ನಡೆದಿದೆ. ಮೃತ ಯುವಕನನ್ನು ಪುನೀತ್(27) ಎಂದು ಗುರುತಿಸಲಾಗಿದೆ. ಕಳೆದ ಆರು ತಿಂಗಳಿನಿಂದ ಹನುಮಂತಪುರ ಬಳಿಯ ಕಾರ್ಖಾನೆಯಲ್ಲಿ ಎಲೆಕ್ಟ್ರಿಷಿಯನ್ ಕೆಲಸಕ್ಕೆ ಸೇರಿದ್ದ. ಆತ ಎಂದಿನಂತೆ ಬುಧವಾರ ಸಹ ಸಮವಸ್ತ್ರ ಧರಿಸಿ ಕೆಲಸಕ್ಕೆಂದು ಹೋಗಿದ್ದಾಗಿ ತಿಳಿದು ಬಂದಿದೆ. ಪುನೀತ್ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ತಂದಿರುವ ಪೊಲೀಸರು, ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಸಾವಿಗೆ ಕಾರಣ ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಕೆಲಸಕ್ಕೆ ತೆರಳಿದ್ದ ಯುವಕ ಶವವಾಗಿ ಪತ್ತೆ Read More »

ಜನ್ಮದಿನದಂದೇ ಅಪಘಾತದಲ್ಲಿ ಯುವಕ ಮೃತ್ಯು

ಬೆಂಗಳೂರು: ತನ್ನ ಜನ್ಮದಿನದಂದೇ ಯುವಕನೊಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಬೆಂಗಳೂರು ಉತ್ತರದ ಐವರಕಂಡಪುರದಲ್ಲಿ ನಡೆದಿದೆ. ಪವನ್ (24) ಎಂಬಾತನೇ ಮೃತ ದುರ್ದೈವಿ. ಗೆಳೆಯರ ಜೊತೆಗೆ ಬರ್ತ್‌ಡೇ ಮಾಡಿ ಪವನ್ ಮನೆಗೆ ತೆರಳುತ್ತಿದ್ದು ಈ ವೇಳೆ ಆತನ ಬೈಕ್‌ಗೆ ಎದುರಿನಿಂದ ಬರುತ್ತಿದ್ದ ಗೂಡ್ಸ್ ‌ವಾಹನ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ‌ಪವನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸೋಲದೇವನಹಳ್ಳಿ ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷಾ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಜನ್ಮದಿನದಂದೇ ಅಪಘಾತದಲ್ಲಿ ಯುವಕ ಮೃತ್ಯು Read More »

ಅನಾರೋಗ್ಯದಿಂದ ಯುವಕ ಸಾವು

ಪುತ್ತೂರು: ಅಲ್ಪ ಕಾಲದ ಅಸೌಖ್ಯದಿಂದ ಯುವಕನೊಬ್ಬ ಮೃತಪಟ್ಚ ಘಟನೆ ನಡೆದಿದೆ. ಏನೇಕಲ್ಲು ಗ್ರಾಮದ ಪದ್ಮಡ್ಕ ನಿವಾಸಿ ಸುಜಿತ್(27) ಎಂಬವರೇ ಮೃತ ದುರ್ದೈವಿ. ಇವರು ಅನಾರೋಗ್ಯದ ಹಿನ್ನೆಲೆ ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರ ಅಂತ್ಯ ಸಂಸ್ಕಾರ ಅವರ ತಾಯಿಯ ತವರು ಮನೆಯಾದ ಕೂತ್ಕುಂಜದ ಚಿದ್ದಲ್ಲು ದಾಮೋದರ ಗೌಡ ಅವರ ಮನೆಯಲ್ಲಿ ನಡೆಯಿತು. ಮೃತರು ತಾಯಿ, ಸಹೋದರರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಅನಾರೋಗ್ಯದಿಂದ ಯುವಕ ಸಾವು Read More »

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ನಳಿನಿ ಲೋಕಪ್ಪ ಗೌಡ ನಿಧನ

ಪುತ್ತೂರು: ಸಮಾಜ ಸೇವಕಿ, ಧಾರ್ಮಿಕ ಮುಂದಾಳು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ನರಿಮೊಗರಿನ ಮುಂಡೂರು ಗ್ರಾಮದ ಕೆರೆಮನೆ ನಿವಾಸಿ ನಳಿನಿ ಲೋಕಪ್ಪ ಗೌಡ(74) ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರು ಮುಂಡೂರು ಮೃತ್ಯುಂಜಯೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಲೋಕಪ್ಪ ಗೌಡ ಅವರ ಪತ್ನಿ. ಮೃತರು ಪತಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ನಳಿನಿ ಲೋಕಪ್ಪ ಗೌಡ ನಿಧನ Read More »

error: Content is protected !!
Scroll to Top