ಅಪಘಾತ

ಆಟವಾಡುತ್ತಿದ್ದಾಗ ಕಳಚಿಬಿದ್ದ ಗೇಟ್‌: 3 ವರ್ಷದ ಮಗು ಸಾವು

ಗೆಸ್ಟ್‌ ಹೌಸ್‌ ಒಂದರ ಗೇಟ್‌ ಕಳಚಿಬಿದ್ದು ಆಲ್ಲೇ ಆಟವಾಡುತ್ತಿದ್ದ ಮಗು ದಾರುಣವಾಗಿ ಪ್ರಾಣ ಕಳೆದುಕೊಂಡ ಘಟನೆ ಉಡುಪಿ ಬಳಿ ನಡೆದಿದೆ. ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕರೆಯಲ್ಲಿ ಘಟನೆ ನಡೆದಿದ್ದು, ಸುಧೀರ್ ಮೊಗವೀರ ಅವರ ಪುತ್ರ ಸುಶಾಂತ್ (3) ಮೃತಪಟ್ಟ ಮಗು. ಪುಟ್ಟ ಮಗು ಸುಶಾಂತ್‌ ಪ್ರತಿನಿತ್ಯವೂ ಮನೆ ಪಕ್ಕದ ಗೆಸ್ಟ್ ಹೌಸ್ ಬಳಿ ಆಟವಾಡುತ್ತಿದ್ದ. ಮಂಗಳವಾರ ಅಚಾನಕ್‌ ಆಗಿ ಗೆಸ್ಟ್‌ ಹೌಸ್‌ನ ಗೇಟ್‌ ಕಳಚಿ ಬಿದ್ದಿದ್ದು, ಆಟವಾಡುತ್ತಿದ್ದ ಮಗುವಿನ ಮೇಲೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಮಗುವನ್ನು […]

ಆಟವಾಡುತ್ತಿದ್ದಾಗ ಕಳಚಿಬಿದ್ದ ಗೇಟ್‌: 3 ವರ್ಷದ ಮಗು ಸಾವು Read More »

ಟೊಮೇಟೊ ಸಾಗಾಟದ ಟೆಂಪೋ ಪಲ್ಟಿ!!

ಬೆಳ್ತಂಗಡಿ: ಟೊಮೇಟೊ ಸಾಗಾಟದ ಟೆಂಪೋ ಪಲ್ಟಿಯಾದ ಘಟನೆ ಸೋಮವಾರ ರಾತ್ರಿ ಚಾರ್ಮಾಡಿ ಚೆಕ್ ಪೋಸ್ಟ್ ಸಮೀಪದ ವಲಸರಿ ಎಂಬಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ರಸ್ತೆ ಬದಿಯ ಚರಂಡಿಗೆ ಪಲ್ಟಿಯಾಗಿ ಬಿದ್ದಿತು. ಚಿಕ್ಕಮಗಳೂರು ಕಡೆಯಿಂದ ಉಜಿರೆಯತ್ತ ಟೊಮೇಟೊ ಸಾಗಾಟ ಮಾಡಲಾಗುತ್ತಿತ್ತು. ವಾಹನದಲ್ಲಿದ್ದವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸ್ಥಳೀಯರ ಸಹಕಾರದಿಂದ ಉರುಳಿ ಬಿದ್ದ ವಾಹನವನ್ನು ತೆರವು ಮಾಡಲಾಯಿತು.

ಟೊಮೇಟೊ ಸಾಗಾಟದ ಟೆಂಪೋ ಪಲ್ಟಿ!! Read More »

ಕಾರು-ಸ್ಕೂಟಿ ಡಿಕ್ಕಿ: ಮಹಿಳೆಗೆ ಗಾಯ

ವಿಟ್ಲ: ಕಂಬಳಬೆಟ್ಟು ಕಾರ್ಯಾಡಿ ಕ್ರಾಸ್ ಬಳಿ  ಕಾರು ಮತ್ತು ಸ್ಕೂಟಿ ಢಿಕ್ಕಿ ಹೊಡೆದು  ಮಹಿಳೆಯೋರ್ವರು ಗಾಯಗೊಂಡಿದ್ದಾರೆ. ಸ್ಕೂಟಿ ಸವಾರೆ ದಿವ್ಯಾ ಗಾಯಗೊಂಡವರು. ಕನ್ಯಾನ ನಿವಾಸಿ  ಪ್ರಕಾಶ್  ಅವರು ಪತ್ನಿ ಮತ್ತು ಮಕ್ಕಳ ಜತೆ ಕಾರಿನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಸ್ಕೂಟಿಯಲ್ಲಿದ್ದ ದಿವ್ಯಾ ಕಾರ್ಯಾಡಿ ಒಳರಸ್ತೆಯಿಂದ ಕಂಬಳಬೆಟ್ಟುವಿಗೆ ಬರುತ್ತಿದ್ದರು. ಅಪಘಾತದಿಂದ ಅವರು ರಸ್ತೆಗೆ ಎಸೆಯಲ್ಪಟ್ಟರು ಎಂದು ಹೇಳಲಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರು-ಸ್ಕೂಟಿ ಡಿಕ್ಕಿ: ಮಹಿಳೆಗೆ ಗಾಯ Read More »

ವಿದ್ಯುತ್ ತಂತಿ ತುಳಿದು ತಾಯಿ-ಮಗು ಸಜೀವ ದಹನ!! | 5 ಬೆಸ್ಕಾಂ ಅಧಿಕಾರಿಗಳಿಗೆ ಜಾಮೀನು!!

ಬೆಂಗಳೂರು: ವಿದ್ಯುತ್ ತಂತಿ ತುಳಿದು ತಾಯಿ ಮತ್ತು ಮಗು ಸಾವಿಗೀಡಾದ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂಯ ಐವರು ಅಧಿಕಾರಿಗಳನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಸೋಮವಾರ ಮೂಲಗಳು ತಿಳಿಸಿವೆ. ಬೆಸ್ಕಾಂ ಕಚೇರಿಯಿಂದ 100 ಮೀಟರ್ ದೂರದಲ್ಲಿರುವ ವೈಟ್‌ಫೀಲ್ಡ್ ಮುಖ್ಯರಸ್ತೆಯ ಹೋಪ್ ಫಾರ್ಮ್ ಜಂಕ್ಷನ್ ಬಳಿ ಭಾನುವಾರ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸೌಂದರ್ಯ (23) ಮತ್ತು ಅವರ ಒಂಬತ್ತು ತಿಂಗಳ ಮಗು ಸಜೀವ ದಹನವಾಗಿದ್ದರು.

ವಿದ್ಯುತ್ ತಂತಿ ತುಳಿದು ತಾಯಿ-ಮಗು ಸಜೀವ ದಹನ!! | 5 ಬೆಸ್ಕಾಂ ಅಧಿಕಾರಿಗಳಿಗೆ ಜಾಮೀನು!! Read More »

ದ್ವಿಚಕ್ರ ವಾಹನಗಳೆರಡು ಮುಖಾಮುಖಿ ಡಿಕ್ಕಿ

ವಿಟ್ಲ: ದ್ವಿಚಕ್ರಗಳೆರಡು ಡಿಕ್ಕಿ ಹೊಡೆದುಕೊಂಡ ಪರಿಣಾಮ ಮೂವರು ಗಾಯಗೊಂಡ ಘಟನೆ ಕಂಬಳಬೆಟ್ಟು ಸಮೀಪ ನಡೆದಿದೆ. ಮೂವರ ಪೈಕಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ದ್ವಿಚಕ್ರ ವಾಹನಗಳೆರಡು ಮುಖಾಮುಖಿ ಡಿಕ್ಕಿ Read More »

ವ್ಯಕ್ತಿಯ ಮೃತದೇಹ ಪತ್ತೆ

ಉಪ್ಪಿನಂಗಡಿ: 34ನೇ ನೆಕ್ಕಿಲಾಡಿ ಯ ರಾಷ್ಟ್ರೀಯ ಹೆದ್ದಾರಿ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹ ಇಂದು ಪತ್ತೆಯಾಗಿದೆ. ಆಂಧ್ರ ಮೂಲಕ ಶೇಖ್ ಖಾನ್ ಮೃತವ್ಯಕ್ತಿ ಎನ್ನಲಾಗಿದೆ. ಯಾವುದೋ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಹಿಟ್ & ರನ್ ಶಂಕೆ ವ್ಯಕ್ತವಾಗಿದೆ. ಉಪ್ಪಿನಂಗಡಿ ಹಾಗೂ ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ವ್ಯಕ್ತಿಯ ಮೃತದೇಹ ಪತ್ತೆ Read More »

ತಾಳೆ ಮರದಿಂದ ಬಿದ್ದು ಮೃತ್ಯು

ಕೊಳ್ತಿಗೆ: ತಾಳೆ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕೊಳ್ತಿಗೆಯಲ್ಲಿ ನಡೆದಿದೆ. ಕೊಳ್ತಿಗೆ ಗ್ರಾಮದ ಪಾಂಬಾರು ನಿವಾಸಿ ಜಯಂತ ಪೂಜಾರಿ ಮೃತಪಟ್ಟವರು. ತಾಳೆ ಮರಕ್ಕೆ ಏರಿ ಮೂರ್ತೆ ಮಾಡುವ ಸಂದರ್ಭದಲ್ಲಿ ಆಯತಪ್ಪಿ ಕೆಳಕ್ಕೆ ಬಿದ್ದ ಜಯಂತ ಪೂಜಾರಿ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.  ಮೃತರು ಪತ್ನಿ,ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ತಾಳೆ ಮರದಿಂದ ಬಿದ್ದು ಮೃತ್ಯು Read More »

ಬೆಂಕಿ ತಗುಲಿ ಹಿರಿಯ ನಾಗರಿಕೆ ಸಾವು!!

ಮಂಗಳೂರು: ಬೆಂಕಿ ತಗುಲಿ ಗಂಭೀರ ಗಾಯಗೊಂಡಿದ್ದ ಹಿರಿಯ ನಾಗರಿಕರೋರ್ವರು ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕೂಳೂರು ಪೊಯ್ಯೇಲು ನಿವಾಸಿ ದಿ. ಮದನಪ್ಪ ಶೆಟ್ಟಿ ಅವರ ಪತ್ನಿ ಸುನೀತಾ ಎಂ. (84) ಮೃತಪಟ್ಟವರು. ನವಂಬರ್ 14ರಂದು ದೇವರ ಕೋಣೆಯಲ್ಲಿಟ್ಟಿದ್ದ ದೀಪದಿಂದ ಸೀರೆಗೆ ಬೆಂಕಿ ಹತ್ತಿಕೊಂಡಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಬೆಂಕಿ ತಗುಲಿ ಹಿರಿಯ ನಾಗರಿಕೆ ಸಾವು!! Read More »

ಸುರಕ್ಷತಾ ವೈಫಲ್ಯ: ಪ್ಯಾರಾ ಸೈಲಿಂಗ್’ನಿಂದ ಬಿದ್ದು ಗಾಯಗೊಂಡ ಬಾಲಕ

ಮಲ್ಪೆ: ವಿಂಚ್ ಬೋಟ್ ಪ್ಯಾರಾ ಸೈಲಿಂಗ್ ಮಾಡುತ್ತಿದ್ದ ಪ್ರವಾಸಿಗ ಬಾಲಕನೋರ್ವ ಕೆಳಗೆ ಬಿದ್ದು ಗಾಯಗೊಂಡಿರುವ ಘಟನೆ ಮಲ್ಪೆ ಬೀಚ್ನಲ್ಲಿ ಸಂಭವಿಸಿದೆ. ಬೆಂಗಳೂರು ಮೂಲದ ಇಕ್ಯಾನ್ ಚೌಧರಿ (12) ಗಾಯಗೊಂಡ ಬಾಲಕ. 10 ಮೀಟರ್ ಎತ್ತರದಿಂದ ಬೋಟಿಗೆ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿದೆ. ಸರಿಯಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಸುರಕ್ಷತಾ ವೈಫಲ್ಯ: ಪ್ಯಾರಾ ಸೈಲಿಂಗ್’ನಿಂದ ಬಿದ್ದು ಗಾಯಗೊಂಡ ಬಾಲಕ Read More »

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ:  ಬೈಕ್ ಸವಾರನಿಗೆ ಗಾಯ

ನೆಲ್ಯಾಡಿ: ಬೈಕ್ ಚಲಾಯಿಸಿಕೊಂಡು ಬಂದು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ ಸವಾರ ಗಾಯಗೊಂಡಿರುವ ಘಟನೆ ಗುರುವಾರ ಸಂಭವಿಸಿದೆ. ಬಂಟ್ವಾಳ ತಾಲೂಕಿನ ಕರೋಪಾಡಿ ನಿವಾಸ ದೀಕ್ಷಿತ್ (23) ಗಾಯಗೊಂಡವರು. ಉಪ್ಪಿನಂಗಡಿಯಿಂದ ನೆಲ್ಯಾಡಿ ಕಡೆಗೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಕೋಲ್ಪೆಯಲ್ಲಿ ಹೆದ್ದಾರಿ ಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿದೆ. ಲಾರಿ ನೆಲ್ಯಾಡಿಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದು ಚಾಲಕ ಕೋಲ್ಪೆ ಯಲ್ಲಿ ಲಾರಿ ನಿಲ್ಲಿಸಿ ಊಟಕ್ಕೆ ತೆರಳಿದ್ದರು. ಗಾಯಾಳು ಬೈಕ್ ಸವಾರ ದೀಕ್ಷಿತ್ ಅವರನ್ನು ಮಂಗಳೂರು ಆಸ್ಪತ್ರೆಗೆ

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ:  ಬೈಕ್ ಸವಾರನಿಗೆ ಗಾಯ Read More »

error: Content is protected !!
Scroll to Top