ರೇಣುಕಾಸ್ವಾಮಿ ಕೊಲೆ ಪ್ರಕರಣ | ನಟ ದರ್ಶನ್ ಸಹಿತ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್  ಹಾಗೂ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ 14 ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ. ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಆಗಸ್ಟ್ 14ರವರೆಗೂ ವಿಸ್ತರಣೆ ಮಾಡಿ ನ್ಯಾಯಾಲಯ ಆದೇಶಿಸಿತು. ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪರಪ್ಪನ ಅಗ್ರಹಾರ ಜೈಲು ಮತ್ತು ತುಮಕೂರು ಜೈಲಿನ 24 ಜೈಲು ಸಿಬ್ಬಂದಿಯೂ ಹಾಜರಿದ್ದರು. […]

ರೇಣುಕಾಸ್ವಾಮಿ ಕೊಲೆ ಪ್ರಕರಣ | ನಟ ದರ್ಶನ್ ಸಹಿತ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ Read More »

ಶಿರಾಡಿ ಘಾಟ್ ಮತ್ತೆ ಸಂಚಾರ ಆರಂಭ  

ನೆಲ್ಯಾಡಿ : ಆ.1 ರಂದು ಮಧ್ಯಾಹ್ನದ ವೇಳೆ ಶಿರಾಡಿ ಘಾಟ್ ನಲ್ಲಿ ವಾಹನಗಳ ಸಂಚಾರ ಪುನರಾರಂಭಗೊಂಡಿದೆ. ಕಳೆದ ರಾತ್ರಿ ಶಿರಾಡಿ ಘಾಟ್ ನ ದೊಡ್ಡ ತಪ್ಲು ಬಳಿ ಗುಡ್ಡ ಜರಿದು ವಾಹನಗಳ ಮೇಲೆ ಮಣ್ಣು ಬಿದ್ದ ಪರಿಣಾಮ ಶಿರಾಡಿ ಘಾಟ್ ನಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ರಸ್ತೆಗೆ ಬಿದ್ದ ಮಣ್ಣು ತೆರವುಗೊಳಿಸಲಾಗಿದೆ. ಕೆಸರು ಮಣ್ಣಿನಲ್ಲಿ ಸಿಲುಕಿಕೊಂಡಿದ್ದ 2 ಕಂಟೈನರ್ ಹಾಗೂ 1‌ ಡಾಮರು ಸಾಗಾಟದ ಟ್ಯಾಂಕರ್ ತೆರವುಗೊಳಿಸಲಾಗಿದ್ದು ಮಧ್ಯಾಹ್ನದ ಬಳಿಕ ಸಂಚಾರ ಪುನರಾರಂಭಗೊಂಡಿದೆ. ಆದರೂ ಮಣ್ಣು ಕುಸಿಯುತ್ತಲೇ

ಶಿರಾಡಿ ಘಾಟ್ ಮತ್ತೆ ಸಂಚಾರ ಆರಂಭ   Read More »

ಭಾರೀ ಮಳೆ : ಮನೆಯಂಗಳಕ್ಕೆ ನುಗ್ಗಿದ ನೀರು

 ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನ ಪುನಾಚ  ಗ್ರಾಮದ  ಬಾಲ ಕುಮೇರಿಯ, ತೀರ್ಥರಾಮ್ ಗೌಡ ಇವರ ಕೃಷಿ ತೋಟಕ್ಕೆ, ಮನೆ ಅಂಗಳಕ್ಕೆ, ನುಗ್ಗಿದ ನೀರು, ಮನೆ ಮಂದಿ ಅಪಾಯದಿಂದ ಪಾರಾಗಿ ,ಸ್ಥಳಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದರು.  ಬಂಟ್ವಾಳ ತಹಸಿಲ್ದಾರ್ ಗೆ ಕರೆ ಮಾಡಿ ಪರಿಹಾರ  ದೊರಕಿಸಿ ಕೊಡುವಂತೆ ಮನವಿ ಮಾಡಿದ್ದಾರೆ.  ಈ ಸಂದರ್ಭದಲ್ಲಿ  ಪುನಾಚ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ  ಹರಿಪ್ರಸಾದ್ ಯಾದವ್, ಕಾರ್ಯದರ್ಶಿ ದಯಾನಂದ ಉಜಿರೆಮಾರ್, ಪಂಚಾಯತ್ ಅಧ್ಯಕ್ಷೆ

ಭಾರೀ ಮಳೆ : ಮನೆಯಂಗಳಕ್ಕೆ ನುಗ್ಗಿದ ನೀರು Read More »

ಶಿರಾಡಿಘಾಟ್‌ನಲ್ಲಿ ಮತ್ತೆ ಗುಡ್ಡ ಕುಸಿತ

ಶಿರಾಡಿ ಘಾಟಿ :  ಶಿರಾಡಿಘಾಟ್‌ನಲ್ಲಿ ಗುಡ್ಡ ಕುಸಿತದ ತೆರವು ಕಾರ್ಯ ನಡೆಯುತ್ತಿದ್ದಂತೆ,  ಮತ್ತೆ ಗುಡ್ಡ ಕುಸಿತ ಗುರುವಾರ ಸಂಭವಿಸಿದೆ.  ಪರಿಣಾಮ ಕೆಲವೇ ನಿಮಿಷಗಳ ಹಿಂದೆಯಷ್ಟೇ ತೆರವಾಗಿದ್ದ ರಸ್ತೆ ಮತ್ತೆ ಬಂದ್‌ ಆಗಿದೆ.  ಮಣ್ಣಿನಡಿ ಕೆಲವು ವಾಹನಗಳು ಸಿಲುಕಿವೆ. ಗುಡ್ಡ ಕುಸಿತದ ರಭಸಕ್ಕೆ ಕಂಟೇನರ್ ಪಲ್ಟಿಯಾಗಿದ್ದು, ಮತ್ತೊಂದು ಬೃಹತ್ ಕಂಟೇನರ್ ಮಣ್ಣಿನಡಿ ಸಿಲುಕಿದೆ. ಪಲ್ಟಿಯಾಗಿರುವ ಕಂಟೇನರ್‌ನಲ್ಲಿ ಚಾಲಕ ಸಿಲುಕಿದ್ದಾನೆ. ಮಳೆ ಹೆಚ್ಚಾಗಿರುವುದರಿಂದ ಗುಡ್ಡ ಕುಸಿದಿದೆ. ಶಿರಾಡಿಘಾಟ್ ರಸ್ತೆಯಲ್ಲಿ ಮತ್ತೆ ವಾಹನ ಸಂಚಾರ ಬಂದ್ ಆಗಿದೆ.

ಶಿರಾಡಿಘಾಟ್‌ನಲ್ಲಿ ಮತ್ತೆ ಗುಡ್ಡ ಕುಸಿತ Read More »

ಶ್ರೀ ಮಹಾಲಿಂಗೇಶ್ವರ ವಠಾರದಲ್ಲಿ 58ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ | ಚಪ್ಪರ ಮುಹೂರ್ತ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರ, ಪುತ್ತೂರು ಇದರ 58ನೇ ವರ್ಷದ ಗಣೇಶೋತ್ಸವದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು. ಸೆ.07ರಿಂದ ಸೆ.10ರವರೆಗೆ ಶ್ರೀ ಗಣೇಶೋತ್ಸವ ನಾಲ್ಕು ದಿನಗಳ ಕಾಲ ನಡೆಯಲಿದ್ದು, ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್‍.ಭಟ್‍ ವೈದಿಕ ವಿದಿವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ. ಎಂ.ಕೆ. ಪ್ರಸಾದ್, ಅಧ್ಯಕ್ಷ ಸುಧೀಂದ್ರ

ಶ್ರೀ ಮಹಾಲಿಂಗೇಶ್ವರ ವಠಾರದಲ್ಲಿ 58ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ | ಚಪ್ಪರ ಮುಹೂರ್ತ Read More »

ಶ್ರೀಕೃಷ್ಣ ಲೋಕ : ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ವಿವೇಕಾನಂದ ಶಿಶು ಮಂದಿರದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದಲ್ಲಿ ನಡೆಯಲಿರುವ ಶ್ರೀ ಕೃಷ್ಣಲೋಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇಂದು ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಇದರ ಅಧ್ಯಕ್ಷ ಪುತ್ತೂರು ಉಮೇಶ ನಾಯಕ್ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಪುತ್ತೂರಿನ ಹೃದಯ ಭಾಗದಲ್ಲಿರುವ ವಿವೇಕಾನಂದ ಶಿಶು ಮಂದಿರವು ನಂದಗೋಕುಲದಂತೆ ಬೆಳಗಲಿ, ಶ್ರೀಕೃಷ್ಣಲೋಕ ಕಾರ್ಯಕ್ರಮವು ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಜರುಗಲಿ ಎಂದು

ಶ್ರೀಕೃಷ್ಣ ಲೋಕ : ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಪಬ್‌ಜಿ ಗೇಮ್‌ನ ಯುವತಿ ನಾಪತ್ತೆ

ಮಂಗಳೂರು : ಮೊಬೈಲ್‌ನಲ್ಲಿ ಪಬ್‌ಜಿ ಆಟವಾಡುವ ಹವ್ಯಾಸವಿದ್ದ ಯುವತಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಕೆಲಿಸ್ತಾ ಫೆರಾವೊ (18) ನಾಪತ್ತೆಯಾದ ಯುವತಿ. ಇವರು ಎಸ್ ಎಸ್ ಎಲ್ ಸಿ ಬಳಿಕ ಆಟೊಮೊಬೈಲ್‌ ಕೋರ್ಸ್‌ಗೆ ಸೇರ್ಪಡೆಗೊಂಡಿದ್ದರು. ಈಕೆ ಮಂಗಳವಾರ ಮಧ್ಯಾಹ್ನ 12.15ರ ಸುಮಾರಿಗೆ ಮನೆಯಿಂದ ಹೊರಗೆ ಹೋಗಿದ್ದರು‌.‌ ಇದು ಮನೆಯವರ ಗಮನಕ್ಕೆ ಬಂದ ಕೂಡಲೇ ಅವರು ಹುಡುಕಾಟ ಆರಂಭಿಸಿದರು. ಸಿಸಿ ಕ್ಯಾಮಾರದಲ್ಲಿ ಪರಿಶೀಲಿಸಿದಾಗ ಈಕೆ ಆಟೋರಿಕ್ಷಾದಲ್ಲಿ ಹೋಗುತ್ತಿರುವ ದೃಶ್ಯ ದಾಖಲಾಗಿತ್ತು. ಕೆಲಿಸ್ತಾ ಕನ್ನಡ, ತುಳು, ಇಂಗ್ಲಿಷ್‌, ಕೊಂಕಣಿ

ಪಬ್‌ಜಿ ಗೇಮ್‌ನ ಯುವತಿ ನಾಪತ್ತೆ Read More »

ಲಾಭಾಂಶ ಪಡೆಯಲು ಸಂಘದ ನಿಯಮಗಳನ್ನು ಪಾಲಿಸಬೇಕು- ಅಚ್ಚುತ ಮೂಡೆತ್ತಾಯ | ನವೋದಯ ಒಕ್ಕೂಟದ ವತಿಯಿಂದ ಮಕ್ಕಳಿಗೆ ಪುಸ್ತಕ ವಿತರಣೆ, ಪ್ರೋತ್ಸಾಹಧನ, ನವೋದಯ ಗುಂಪುಗಳಿಗೆ ಲಾಭಾಂಶ ವಿತರಣೆ

ಕಾವು: ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಮತ್ತು ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಕಾರದೊಂದಿಗೆ ನವೋದಯ ಒಕ್ಕೂಟದ ವತಿಯಿಂದ ಮಕ್ಕಳಿಗೆ ಪುಸ್ತಕ ವಿತರಣೆ, ಪ್ರೋತ್ಸಾಹಧನ, ಹಾಗೂ ನವೋದಯ ಗುಂಪುಗಳಿಗೆ ಲಾಭಾಂಶ ವಿತರಣಾ ಕಾರ್ಯಕ್ರಮ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಿವಸದನ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ನಿಯಮ ನಿಭಂದನೆಗಳನ್ನು ಸರಿಯಾಗಿ ಪಾಲಿಸಿದಲ್ಲಿ ಅನೇಕ ಸೌಲಭ್ಯಗಳ ಜೊತೆಗೆ ಲಾಭಾಂಶವನ್ನು

ಲಾಭಾಂಶ ಪಡೆಯಲು ಸಂಘದ ನಿಯಮಗಳನ್ನು ಪಾಲಿಸಬೇಕು- ಅಚ್ಚುತ ಮೂಡೆತ್ತಾಯ | ನವೋದಯ ಒಕ್ಕೂಟದ ವತಿಯಿಂದ ಮಕ್ಕಳಿಗೆ ಪುಸ್ತಕ ವಿತರಣೆ, ಪ್ರೋತ್ಸಾಹಧನ, ನವೋದಯ ಗುಂಪುಗಳಿಗೆ ಲಾಭಾಂಶ ವಿತರಣೆ Read More »

ವಿಟ್ಲದ ವ್ಯಕ್ತಿ ನಾಪತ್ತೆ

ವಿಟ್ಲ: ವಿಟ್ಲದ ನೆಕ್ಕಿಲಾರು ನಿವಾಸಿಯೊಬ್ಬರು ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ ಎಂದು ವಿಟ್ಲ ಪೊಲೀಸರಿಗೆ ದೂರು ನೀಡಲಾಗಿದೆ. ಸಂಘಕ್ಕೆ ಹಣ ಕಟ್ಟಲೆಂದು ಮನೆಯಿಂದ ಹೋದ ಹೇಮಂತ್ (37)  ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ. ಹೇಮಂತ್ ಎಂಬವರು ಜುಲೈ 22ರಂದು ನೆಕ್ಕಿಲಾರು ಮನೆಯಿಂದ ಸಂಘಕ್ಕೆ ಹಣ ಕಟ್ಟಲು ಹೋದವರು ಮನೆಗೆ ಬಾರದೇ ಇದ್ದು ಅವರ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಎಂದು ಬರುತ್ತದೆ. ಸಂಬಂಧಿಕರಲ್ಲಿ ವಿಚಾರಿಸಿದಾಗ ಎಲ್ಲಿಯೂ ಹೇಮಂತ್ ಪತ್ತೆಯಾಗಿಲ್ಲ.ಹೇಮಂತ್ ರವರು 5 ವರೆ ಅಡಿ ಎತ್ತರವಿದ್ದು, ಕನ್ನಡ, ತುಳು

ವಿಟ್ಲದ ವ್ಯಕ್ತಿ ನಾಪತ್ತೆ Read More »

ಅಂಬಿಕಾ ಸಿಬಿಎಸ್‍ ಇ ವಿದ್ಯಾಲಯದಿಂದ ‘ಆಟಿದ ಬೆನ್ನಿಡ್ ಕೇಸರ್ದ ಗೊಬ್ಬು’

ಪುತ್ತೂರು: ಬಪ್ಪಳಿಗೆ ಅಂಬಿಕಾ ಸಿಬಿಎಸ್‍ ಇ ವಿದ್ಯಾಲಯದ ವತಿಯಿಂದ ‘ಆಟಿದ ಬೆನ್ನಿಡ್ ಕೇಸರ್ದ ಗೊಬ್ಬು’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಪ್ರಗತಿಪರ ಕೃಷಿಕ ಮಾಧವ ಗೌಡ ಕಾಂತಿಲ ಮಾತನಾಡಿ, ಇಂದಿನ ಕಾಲಘಟ್ಟದ ಕೃಷಿ ಕಾರ್ಯದಲ್ಲಿ ಗಣನೀಯ ಬದಲಾವಣೆ ಕಂಡಿದ್ದು, ಈ ಬದಲಾವಣೆಯು ಮಾನವರ ಆರೋಗ್ಯದ ಮೇಲೂ ಪ್ರಭಾವ ಬೀರಿದೆ. ಆದುದರಿಂದ ಆಧುನಿಕ ತಂತ್ರಜ್ಞಾನದ ಜೊತೆಗೆ ಸಾಂಪ್ರದಾಯಿಕ ಕೃಷಿ ಪದ್ಧತಿಯ ಪಾಲನೆಯೂ ಅವಶ್ಯಕ ಎಂದರು. ಅಂಬಿಕಾ ಸಮೂಹ ಸಂಸ್ಥೆಯ ಅಧ್ಯಕ್ಷ ಸುಬ್ರಹ್ಮಣ್ಯ ನಟೋಜ ಮಾತನಾಡಿ, ಕೋರೊನಾದಂತಹ ಸಂದಿಗ್ದ ಪರಿಸ್ಥಿತಿಯಲ್ಲೂ

ಅಂಬಿಕಾ ಸಿಬಿಎಸ್‍ ಇ ವಿದ್ಯಾಲಯದಿಂದ ‘ಆಟಿದ ಬೆನ್ನಿಡ್ ಕೇಸರ್ದ ಗೊಬ್ಬು’ Read More »

error: Content is protected !!
Scroll to Top