ಶಾಂತಿಗೋಡು  ಧರೆ ಕುಸಿದು ಮನೆಗೆ ಹಾನಿ

ಪುತ್ತೂರು : ಶಾಂತಿಗೋಡು ಗ್ರಾಮದಲ್ಲಿ ಸುರಿದ  ಭಾರೀ ಪ್ರಮಾಣದ ಮಳೆಯಿಂದ  ಧರೆ ಕುಸಿದು ಮನೆಗಳಿಗೆ ಹಾನಿಯಾದ ಘಟನೆ ನಡೆದಿದೆ.    ಪಾನಂಬು  ತುಂಗಮ್ಮ  ಇವರ ಮನೆಯ ಹಿಂಬದಿ ಧರೆ ಕುಸಿದ ನಿನ್ನೆ ರಾತ್ರಿ ನಡೆದಿದೆ.  ನಿನ್ನೆ  ನಡೆದ ಭಾರೀ ಮಳೆಯಿಂದ ರಾತ್ರಿ ವೇಳೆ ಕುಸಿತ ಧರೆ ಮನೆಯ ಹಿಂಬದಿ ಗೋಡೆಗೆ ತಾಗಿ ಧರೆ ನಿಂತಿದೆ. ಮನೆಯಲ್ಲಿ ಇದ್ದ ವಸ್ತುಗಳನ್ನು  ಸ‍್ಥಳಾಂತರಿಸಲಾಗಿದೆ.

ಶಾಂತಿಗೋಡು  ಧರೆ ಕುಸಿದು ಮನೆಗೆ ಹಾನಿ Read More »

ವಯನಾಡು : 190 ಅಡಿ ಉದ್ದದ ಸೇತುವೆಯನ್ನು 16 ಗಂಟೆಯಲ್ಲಿ ನಿರ್ಮಿಸಿದ ಸೈನಿಕರು | 24 ಟನ್‌ ತೂಕದ ಸಾಮರ್ಥ್ಯವನ್ನು ಹೊಂದಿದ ಸೇತುವೆ

ಕೇರಳ :  ಚೂರಲ್ಮಲ ಮತ್ತು ಮುಂಡಕ್ಕೈಗೆ  ಸಂರ್ಪಕ್ಕೆ ಕಲ್ಪಿಸುವ ಚಾರಲ್‌ಮಲೈ ನದಿಗೆ ಅಡ್ಡಲಾಗಿ ಕಟ್ಟಲಾದ 190 ಅಡಿ ಉದ್ದದ ಸೇತುವೆಯನ್ನು ಭಾರತೀಯ ಸೇನೆ ಕೇವಲ 16 ಗಂಟೆಯಲ್ಲಿ ಪೂರ್ಣಗೊಳಿಸಿದೆ. ಜುಲೈ 31 ರ ರಾತ್ರಿ 9 ಗಂಟೆಗೆ ನಿರ್ಮಾಣಕ್ಕೆ ಕೈ ಹಾಕಿದ ಸೇನೆಯ ಎಂಜಿನಿಯರ್‌ಗಳು ಆಗಸ್ಟ್ 01 ರ ಸಂಜೆ 5:30ಕ್ಕೆ ಪೂರ್ಣಗೊಳಿಸಿದರು. ಈ ಸೇತುವೆ 24 ಟನ್‌ ತೂಕದ ಸಾಮರ್ಥ್ಯವನ್ನು ಹೊಂದಿದೆ. ಎಲ್ಲಾ ರೀತಿಯ ಸವಾಲುಗಳನ್ನು ಮೀರಿ ಮದ್ರಾಸ್ ಎಂಜಿನಿಯರ್ಸ್ ಗ್ರೂಪ್‌ನ ಮೇಜ್ ಸೀತಾ ಶೆಲ್ಕೆ

ವಯನಾಡು : 190 ಅಡಿ ಉದ್ದದ ಸೇತುವೆಯನ್ನು 16 ಗಂಟೆಯಲ್ಲಿ ನಿರ್ಮಿಸಿದ ಸೈನಿಕರು | 24 ಟನ್‌ ತೂಕದ ಸಾಮರ್ಥ್ಯವನ್ನು ಹೊಂದಿದ ಸೇತುವೆ Read More »

ಶಾಸಕರ ಬೆಂಗಳೂರು ಕಾರ್ಯಕ್ರಮ ರದ್ದು | ಪುತ್ತೂರಿಗೆ ಭೇಟಿ ನೀಡುವಂತೆ ಸಿಎಂ ಬಳಿ ಅಶೋಕ್ ರೈ ಮನವಿ

ಪುತ್ತೂರು: ದ ಕ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು ಕೆಲವೊಂದು ಅನಾಹುತಗಳು ಸಂಭವಿಸುತ್ತಿದ್ದು ಕ್ಷೇತ್ರದ ಭೇಟಿ ಹಾಗೂ ತುರ್ತು ವ್ಯವಸ್ಥೆ ಕೈಗೊಳ್ಳುವ ಉದ್ದೇಶದಿಂದ ಬೆಂಗಳೂರು ಕಾರ್ಯಕ್ರಮವನ್ನು ರದ್ದುಗೊಳಿಸಿದ ಶಾಸಕ ಅಶೋಕ್ ರೈ ಯವರು ಇಂದು ಪುತ್ತೂರಿನಲ್ಲಿ ವಿವಿಧ ಕಡೆಗಳಿಗೆ ಭೇಟಿ ನೀಡಲಿದ್ದಾರೆ. ಇಂದು ಬೆಂಗಳೂರಿನಲ್ಲಿ ವಿವಿಧ ಸಚಿವರ ಭೇಟಿ ಹಾಗೂ ಕಂಬಳ ಸಮಿತಿ ಸಭೆಯನ್ನು ಕರೆಯಲಾಗಿತ್ತು. ಎಲ್ಲಾ ಕಾರ್ಯಕ್ರಮವನ್ನು ರದ್ದುಗೊಳಿಸಿ ಇಂದು ಪುತ್ತೂರಿಗೆ ಬರಲಿದ್ದು ಮಳೆಯ ಕಾರಣಕ್ಕೆ ಅನೇಕ ಕಡೆಗಳಲ್ಲಿ ಧರೆ ಕುಸಿತ, ಮನೆಗಳಿಗೆ ಹಾಗೂ ಕೃಷಿಗಳಿಗೆ ಹಾನಿಯಾಗಿದ್ದು

ಶಾಸಕರ ಬೆಂಗಳೂರು ಕಾರ್ಯಕ್ರಮ ರದ್ದು | ಪುತ್ತೂರಿಗೆ ಭೇಟಿ ನೀಡುವಂತೆ ಸಿಎಂ ಬಳಿ ಅಶೋಕ್ ರೈ ಮನವಿ Read More »

ಏಕ – ಕಾಯರ್ತಡಿ ರಸ್ತೆಯಲ್ಲಿ ಬರೆ ಕುಸಿತ

ಪುತ್ತೂರು : ಭಾರೀ ಮಳೆಯಿಂದಾಗಿ  ಚಿಕ್ಕಮುಡ್ನೂರಿನ ಏಕ – ಕಾಯರ್ತಡಿ ರಸ್ತೆಯಲ್ಲಿ  ಬರೆ  ಕುಸಿದ ಘಟನೆ ಸಂಭವಿಸಿದೆ. ಏಕ – ಕಾಯರ್ತಡಿ ರಸ್ತೆ ಸಮೀಪದ ಬರೆ ಕುಸಿದಿದ್ದು, ರಸ್ತೆ ಅಪಾಯದಲ್ಲಿದೆ. ತಕ್ಷಣ ತಹಶೀಲ್ದಾರರು ಭೇಟಿ ನೀಡಿ ಸೂಕ್ತ ವ್ಯವಸ‍್ಥೆ ಕಲ್ಪಿಸುವಂತೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಟಿ.ಎಸ್.ಕೆಮ್ಮಾಯಿ ಆಗ್ರಹಿಸಿದ್ದಾರೆ.

ಏಕ – ಕಾಯರ್ತಡಿ ರಸ್ತೆಯಲ್ಲಿ ಬರೆ ಕುಸಿತ Read More »

ದಕ್ಷಿಣ ಕನ್ನಡ  : ನೆರೆ ಹಾವಳಿ ಪ್ರದೇಶಗಳಿಗೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾಮ್ ಭೇಟಿ

ಮಂಗಳೂರು : ಭಾರೀ ಮಳೆಯಿಂದಾಗಿ ನೆರೆ ಹಾವಳಿ ಪ್ರದೇಶಗಳಿಗೆ ಇಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅದ್ಯಪಾಡಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಅವಲೋಕಿಸಿದ ಸಚಿವ ದಿನೇಶ್ ಗುಂಡೂರಾವ್, ಅಕ್ಕ ಪಕ್ಕದ ಗ್ರಾಮಗಳು ಜಲಾವೃತವಾಗಿರುವ ಬಗ್ಗೆ ಸ್ಥಳೀಯ ನಿವಾಸಿಗಳ ಜೊತೆ ಸಚಿವರ ಜೊತೆ ಚರ್ಚೆ ನಡೆಸಿದರು. ಪ್ರತಿ ವರ್ಷ ಅದ್ಯಪಾಡಿಯಲ್ಲಿ ಫಲ್ಗುಣಿ ನದಿಯ ನೆರೆ ಪ್ರವಾಹದ ಬಗ್ಗೆ ಈ ವೇಳೆ ಸಚಿವರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ತೋಟ

ದಕ್ಷಿಣ ಕನ್ನಡ  : ನೆರೆ ಹಾವಳಿ ಪ್ರದೇಶಗಳಿಗೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾಮ್ ಭೇಟಿ Read More »

ವಯನಾಡು ಭೂಕುಸಿತ 308ಕ್ಕೇರಿದ ಸಾವಿನ ಸಂಖ್ಯೆ

 ಕೇರಳ : ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 308ಕ್ಕೆ ಏರಿಕೆಯಾಗಿದೆ. ಇನ್ನೂ ನೂರಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆಯಿದ್ದು, ಭಾರತೀಯ ಸೇನೆ, ಎನ್‌ಡಿಆರ್‌ಎಫ್‌ ಸೇರಿದಂತೆ 40ಕ್ಕೂ ಹೆಚ್ಚು ರಕ್ಷಣಾ ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಲು ಭಾರತೀಯ ಸೇನೆಯು 190 ಅಡಿ ಉದ್ದದ ಸೇತುವೆಯನ್ನು ನಿರ್ಮಿಸಿದೆ. ಈ ಸೇತುವೆಯು ಇರುವಂಜಿಪ್ಪುಳ ನದಿಯ ಮೇಲೆ ಮುಂಡಕ್ಕೆ ಮತ್ತು ಚೂರಲ್ಮಲದ ನೆರೆ ಪೀಡಿತ ಪ್ರದೇಶಗಳನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. ಮಂಗಳವಾರ ಸಂಭವಿಸಿದ ಭೀಕರ

ವಯನಾಡು ಭೂಕುಸಿತ 308ಕ್ಕೇರಿದ ಸಾವಿನ ಸಂಖ್ಯೆ Read More »

ಕುಮಾರಧಾರ ನದಿ ಸಮೀಪ  ಶವ ಪತ್ತೆ

ಕಡಬ: ಕುಮಾರಧಾರ ನದಿ ಸಮೀಪದ ಅರ್ಬಿತೋಡು ಎಂಬಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿರುವುದು ವರದಿಯಾಗಿದೆ. ಐತ್ತೂರು ಗ್ರಾ.ಪಂ ವ್ಯಾಪ್ತಿಯ ನೆಕ್ಕಿಲಾಡಿ ಗ್ರಾಮದ ಕೆರ್ಮಾಯಿಯ ರಮೇಶ ఎంబ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಕೆ.ಎಫ್,ಡಿ ಸಿ ಯ ಅರ್ಬಿತೋಡು ಬಳಿ ನದಿಯಲ್ಲಿ ಬರುವ ತೆಂಗಿನ ಕಾಯಿ ತೆಗೆಯುವ ಸಲುವಾಗಿ ನದಿ ಪಕ್ಕ ಇಳಿದಿರುವ ಶಂಕೆ ವ್ಯಕ್ತವಾಗಿದೆ. ಹೆಚ್ಚಿನ ಮಾಹಿತಿ ಪೊಲೀಸರ ಪರಿಶೀಲನೆ ಬಳಿಕ ತಿಳಿದು ಬರಲಿದೆ.

ಕುಮಾರಧಾರ ನದಿ ಸಮೀಪ  ಶವ ಪತ್ತೆ Read More »

ಧರೆ ಕುಸಿತ : ಮಣ್ಣಿನಡಿ ಸಿಲುಕಿದ ಜಾನುವಾರುಗಳು

ಪುತ್ತೂರು : ಧರೆ ಕುಸಿದು ಮೂರು ಮನೆಗಳಿಗೆ ಹಾನಿಯುಂಟಾದ ಘಟನೆ ಸಂಭವಿಸಿದೆ.  ಬೆಳ್ಳಿಪ್ಪಾಡಿ ಅಂದ್ರಿಗೇರಿ ಎಂಬಲ್ಲಿ ನಡೆದಿದೆ. ಘಟನೆಯಿಂದಾಗಿ ಮನೆಗಳಿಗೆ ಹಾನಿಯಾಗಿದ್ದು, ಹಟ್ಟಿಯಲ್ಲಿದ್ದ ದನಕರುಗಳು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದೆನ್ನಲಾಗಿದೆ.

ಧರೆ ಕುಸಿತ : ಮಣ್ಣಿನಡಿ ಸಿಲುಕಿದ ಜಾನುವಾರುಗಳು Read More »

ತೆಂಕಿಲ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ | ಸಂಚಾರ ಬಂದ್

ಪುತ್ತೂರು : ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್ ತೆಂಕಿಲದಲ್ಲಿ ಇಂದು ಮುಂಜಾನೆ ಗುಡ್ಡ ಕುಸಿದಿದೆ. ಪರಿಣಾಮ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಬದಲಿ ರಸ್ತೆಯಾಗಿ ಪುತ್ತೂರು ಪೇಟೆ ಬಳಸಿ ವಾಹನ ಸಂಚರಿಸಬೇಕಾಗಿದೆ. ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ತೆಂಕಿಲದಲ್ಲಿ ಆಗಾಗ ಗುಡ್ಡ ಕುಸಿಯುತ್ತಲೇ ಇದ್ದು, ಇದೀಗ ಭಾರಿ ಪ್ರಮಾಣದ ಮಣ್ಣು ರಸ್ತೆಯ ಮೇಲೆ ಬಿದ್ದಿದೆ. ಈಗಾಗಲೇ ನಗರಸಭೆ ಅಧಿಕಾರಿಗಳು, ಪೊಲೀಸರು ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ತೆಂಕಿಲ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ | ಸಂಚಾರ ಬಂದ್ Read More »

ಭಾರೀ ಮಳೆಯ ಹಿನ್ನಲೆ ದ.ಕ ಜಿಲ್ಲಾದ್ಯಂತ ಆ. 2 ರಂದು ಶಾಲಾ- ಕಾಲೇಜುಗಳಿಗೆ ರಜೆ

ಮಂಗಳೂರು: ಭಾರೀ ಮಳೆಯ ಹಿನ್ನಲೆಯಲ್ಲಿ ದ.ಕ.ಜಿಲ್ಲಾದ್ಯಂತ ಆ.2 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದು, ದ.ಕ. ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ಸಮುದ್ರ ತೀರ ಪ್ರದೇಶಗಳಿಗೆ, ತುಂಬಿ ಹರಿಯುತ್ತಿರುವ ನದಿ ಸಮೀಪ ಸಾರ್ವಜನಿಕರು ತೆರಳದಂತೆ, ಮೀನುಗಾರಿಕೆಗೆ ತೆರಳದಂತೆ ಆದೇಶ ನೀಡಲಾಗಿದೆ.

ಭಾರೀ ಮಳೆಯ ಹಿನ್ನಲೆ ದ.ಕ ಜಿಲ್ಲಾದ್ಯಂತ ಆ. 2 ರಂದು ಶಾಲಾ- ಕಾಲೇಜುಗಳಿಗೆ ರಜೆ Read More »

error: Content is protected !!
Scroll to Top