ಭಾರೀ ಮಳೆಯ ಹಿನ್ನಲೆಯಲ್ಲಿ ದ.ಕ.ಜಿಲ್ಲಾದ್ಯಂತ ಆ.1 ರಂದು ಶಾಲಾ-ಕಾಲೇಜುಗಳಿಗೆ ರಜೆ

ಮಂಗಳೂರು: ಭಾರೀ ಮಳೆಯ ಹಿನ್ನಲೆಯಲ್ಲಿ ದ,ಕ.ಜಿಲ್ಲಾದ್ಯಂತ ಆ.1 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದು, ದ.ಕ., ಕಾಸರಗೋಡು ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ಸಮುದ್ರ ತೀರ ಪ್ರದೇಶಗಳಿಗೆ, ತುಂಬಿ ಹರಿಯುತ್ತಿರುವ ನದಿ ಸಮೀಪ ಸಾರ್ವಜನಿಕರು ತೆರಳದಂತೆ, ಮೀನುಗಾರಿಕೆಗೆ ತೆರಳದಂತೆ ಆದೇಶ ನೀಡಲಾಗಿದೆ.

ಭಾರೀ ಮಳೆಯ ಹಿನ್ನಲೆಯಲ್ಲಿ ದ.ಕ.ಜಿಲ್ಲಾದ್ಯಂತ ಆ.1 ರಂದು ಶಾಲಾ-ಕಾಲೇಜುಗಳಿಗೆ ರಜೆ Read More »

ಶಿರಾಡಿ ಘಾಟಿಯಲ್ಲಿ ಮತ್ತೆ ಭೂಕುಸಿತ | ವಾಹನ ಸಂಚಾರ ಸಂಪೂರ್ಣ ಬಂದ್

ಪುತ್ತೂರು: ಶಿರಾಡಿ ಘಾಟಿನ ಮಾರೇನಹಳ್ಳಿಯಲ್ಲಿ ಮತ್ತೊಮ್ಮೆ ಭಾರೀ ಭೂಕುಸಿತ ಉಂಟಾಗಿದೆ. ಭೂಕುಸಿತದಿಂದಾಗಿ ಹಲವು ವಾಹನಗಳು ಮಣ್ಣಿನಡಿ ಸಿಲುಕಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ವಿವರ ಇನ್ನಷ್ಟೇ ಲಭ್ಯವಾಗಿದೆ. ಭೂಕುಸಿತದ ಹಿನ್ನಲೆಯಲ್ಲಿ ಮಂಗಳೂರು – ಬೆಂಗಳೂರು ಸಂಚಾರ ಸಂಪೂರ್ಣ ಬಂದ್ ಆಗಿದೆ. ಆದ್ದರಿಂದ ತುರ್ತು ತೆರಳುವವರು ಸಂಪಾಜೆ – ಮಡಿಕೇರಿಯಾಗಿ ಅಥವಾ ಬೆಳ್ತಂಗಡಿ – ಚಾರ್ಮಾಡಿ ಘಾಟ್ ರಸ್ತೆಯ ಮೂಲಕ ತೆರಳಬಹುದು ಎಂದು ಮಾಹಿತಿ ಲಭ್ಯವಾಗಿದೆ.

ಶಿರಾಡಿ ಘಾಟಿಯಲ್ಲಿ ಮತ್ತೆ ಭೂಕುಸಿತ | ವಾಹನ ಸಂಚಾರ ಸಂಪೂರ್ಣ ಬಂದ್ Read More »

ಸುವರ್ಣ ಪ್ರತಿಭೆ : ಆಪ್ತ ಚಂದ್ರಮತಿ ಮುಳಿಯ

ಬದುಕಿಗೆ ನಮ್ಮಲ್ಲಿರುವ ಜ್ಞಾನ ಕೌಶಲ್ಯಗಳು ದಾರಿದೀಪವಾಗುತ್ತವೆ. ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ಪ್ರತಿಭೆ ಸುಪ್ತವಾಗಿರುತ್ತದೆ. ಅಂತಹ ಸುವರ್ಣ ಪ್ರತಿಭೆ ಪುತ್ತೂರು ವಿವೇಕಾನಂದ ಸೆಂಟ್ರಲ್ ಶಾಲಾ 9ನೇ ತರಗತಿಯ ಕು.ಆಪ್ತ ಚಂದ್ರಮತಿ ಮುಳಿಯ. ಮಡಿಕೇರಿ, ಪುತ್ತೂರಿನಲ್ಲಿ ತನ್ನ ಪ್ರಾಥಮಿಕ ಶಿಕ್ಷಣ ಪಡೆದಿರುವ ಕು.ಆಪ್ತ 6ನೇ ತರಗತಿಯಲ್ಲಿರುವಾಗಲೇ ವಿವಿಧ ವಿಜ್ಞಾನ ಯೋಜನೆಗಳಲ್ಲಿ ತೊಡಗಿಸಿ ಏನಾದರೊಂದು ಸಾಧನೆ ಮಾಡಬೇಕೆಂಬ ಕನಸು ಹೊಂದಿರುವ ಪ್ರತಿಭಾವಂತೆ. ಕು.ಆಪ್ತ ಚಂದ್ರಮತಿ ಮುಳಿಯ, ಆಫ್ರಿಕಾದ “ಟುನೀಷಿಯಾ ಅಸೋಸಿಯೇಷನ್ ಫಾರ್ ದಿ ಫ್ಯೂಚರ್ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ

ಸುವರ್ಣ ಪ್ರತಿಭೆ : ಆಪ್ತ ಚಂದ್ರಮತಿ ಮುಳಿಯ Read More »

ಆ.5 ರಿಂದ ಪ್ರತಿಷ್ಠಿತ ‘ರಾಧಾ’ಸ್’ ಸಿಲ್ಕ್ಸ್ & ಟೆಕ್ಸ್ ಟೈಲ್ ಹಾಗೂ ರೆಡಿಮೇಡ್ ಫ್ಯಾಮಿಲಿ ಶೋರೂಂನಲ್ಲಿ ‘ಮಾನ್ಸೂನ್ ಮೇಳ’ ಆರಂಭ

ಪುತ್ತೂರು: ಇಲ್ಲಿಯ ಕೋರ್ಟ್ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ‘ರಾಧಾ’ಸ್’ ಸಿಲ್ಕ್ಸ್ & ಟೆಕ್ಸ್ ಟೈಲ್ ಹಾಗೂ ರೆಡಿಮೇಡ್‍ಫ್ಯಾಮಿಲಿ ಶೋರೂಂನಲ್ಲಿ ಈ ಬಾರಿ ಮಾನ್ಸೂನ್ ಸೇಲ್‍‘ಮಾನ್ಸೂನ್ ಮೇಳ’ ಆ.5 ರಿಂದ ಆರಂಭಗೊಳ್ಳಲಿದೆ.ಮಾನ್ಸೂನ್ ಮೇಳದ ಅಂಗವಾಗಿ ಪ್ರತಿ ದಿನ ಹೊಸ ಸಂಗ್ರಹದೊಂದಿಗೆ ಅತೀ ಕಡಿಮೆ ಬೆಲೆಯಲ್ಲಿ ಸಾರೀ, ರೆಡಿಮೇಡ್ ಬಟ್ಟೆಗಳನ್ನು ಗ್ರಾಹಕರಿಗೆ ಒದಗಿಸಲಾಗುವುದು. ಪುತ್ತೂರಿನ ಫ್ಯಾಶನ್ ಲೋಕದ ಅತಿ ದೊಡ್ಡ ಉತ್ಸವ ಇದಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಆ.5 ರಿಂದ ಪ್ರತಿಷ್ಠಿತ ‘ರಾಧಾ’ಸ್’ ಸಿಲ್ಕ್ಸ್ & ಟೆಕ್ಸ್ ಟೈಲ್ ಹಾಗೂ ರೆಡಿಮೇಡ್ ಫ್ಯಾಮಿಲಿ ಶೋರೂಂನಲ್ಲಿ ‘ಮಾನ್ಸೂನ್ ಮೇಳ’ ಆರಂಭ Read More »

ಧರೆ ಕುಸಿತ: ಸವಣೂರು-ಬಂಬಿಲ-ಅಂಕತಡ್ಕ ರಸ್ತೆ ಸಂಚಾರ ನಿರ್ಬಂಧಿಸುವಂತೆ ಒತ್ತಾಯ

ಸವಣೂರು : ಭಾರೀ ಮಳೆಯಿಂದಗಾಗಿ ಸವಣೂರು-ಬಂಬಿಲ- ಅಂಕತಡ್ಕ ರಸ್ತೆಯ ನಾಡೋಳಿ ಎಂಬಲ್ಲಿ ಧರೆ ಕುಸಿಯುತ್ತಿದ್ದ ಕಾರಣ ಮಳೆ ಕಡಿಮೆಯಾಗುವ ತನಕ ಸಂಚಾರ ನಿರ್ಬಂಧಿಸಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ. ನಾಡೋಳಿಯಲ್ಲಿ ನೂತನ ಸೇತುವೆ ನಿರ್ಮಾಣ ಸಮಯದಲ್ಲಿ ರಸ್ತೆ ಅಗಲೀಕರಣ ಹಾಗೂ ಸೇತುವೆಗೆ ಹೊಂದಿಕೊಂಡಂತೆ ರಸ್ತೆ ನಿರ್ಮಾಣ ಸಲುವಾಗಿ ಬೃಹತ್ ಬರೆಯನ್ನು ಅಗೆಯಲಾಗಿದ್ದು,ಈ ರಸ್ತೆಯ ಎರಡೂ ಬದಿಯ ಬರೆ ಈಗ ಮಳೆಗಾಲದಲ್ಲಿ ದಿನೇ ದಿನೇ ಕುಸಿಯುತ್ತಿದೆ. ಬರೆಯ ಮೇಲೆ ವಿದ್ಯುತ್ ಕಂಬ ಹಾದು ಹೋಗಿದ್ದು, ಅದು ಕೂಡ ಈಗ ಕುಸಿಯುವ ಹಂತಕ್ಕೆ

ಧರೆ ಕುಸಿತ: ಸವಣೂರು-ಬಂಬಿಲ-ಅಂಕತಡ್ಕ ರಸ್ತೆ ಸಂಚಾರ ನಿರ್ಬಂಧಿಸುವಂತೆ ಒತ್ತಾಯ Read More »

ವಯನಾಡು ಭೂಕುಸಿತ : 200 ಕ್ಕೇರಿದ ಸಾವಿನ ಸಂಖ್ಯೆ l ಮತ್ತಷ್ಟು ಹೆಚ್ಚಾಗುವ ಸಂಭವ

ವಯನಾಡು : ವಯನಾಡು ಜಿಲ್ಲೆಯಲ್ಲಿ ಸಂಭವಿಸಿರುವ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 200 ಕ್ಕೆ ಏರಿಕೆಯಾಗಿದೆ.  ಸಾಕಷ್ಟು ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಜಿಲ್ಲಾ ಕೇಂದ್ರದಿಂದ 25 ಕಿ.ಮೀ. ದೂರದಲ್ಲಿರುವ ಮೆಪ್ಪಾಡಿ ಪಟ್ಟಣದ ಸಮೀಪದ ಚೂರಲ್ಮಲ ಮತ್ತು ಮುಂಡಕ್ಕೈ ಪ್ರದೇಶಗಳಲ್ಲಿ ಸಂಭವಿಸಿದ ಭೂಕುಸಿತದಿಂದ 130 ಜನರು ಗಾಯಗೊಂಡಿದ್ದಾರೆ. ಸಾಕಷ್ಟು ಜನರು ಅವಶೇಷಗಳ ಅಡಿ ಸಿಲುಕಿರುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಮಲಪ್ಪುರಂ ಜಿಲ್ಲೆಯ ಪೋಥುಕಲ್‌ನಲ್ಲಿ ಕೆಲವರ ಶವಗಳು ಪತ್ತೆಯಾಗಿವೆ. ಗುರುತು ಪತ್ತೆ ಕಾರ್ಯ

ವಯನಾಡು ಭೂಕುಸಿತ : 200 ಕ್ಕೇರಿದ ಸಾವಿನ ಸಂಖ್ಯೆ l ಮತ್ತಷ್ಟು ಹೆಚ್ಚಾಗುವ ಸಂಭವ Read More »

ಈಶ್ವರಮಂಗಲ ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದಿಂದ ಕಂಡಡೊಂಜಿ ದಿನ ಕಾರ್ಯಕ್ರಮ |  ಸಾಂಪ್ರದಾಯಿಕ ಆಟಗಳಲ್ಲಿ ಸಂಭ್ರಮಿಸಿದ ಜನರು | ಕಾರ್ಯಕ್ರಮಕ್ಕೆ ಮೆರುಗು ತಂದ ಜಾನಪದ ಸೊಗಡು ವಿಷಯಾಧಾರೀತ  ನೃತ್ಯ ಗಾನ ಸಾಂಸ್ಕೃತಿಕ ವೈಭವ

ಕಾವು : ಈಶ್ವರಮಂಗಲ ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘ ಇದರ ನೇತೃತ್ವದಲ್ಲಿ  ಒಕ್ಕಲಿಗ ಗೌಡ ಸೇವಾ ಸಂಘ,ಮಹಿಳಾ ಸಂಘ ಮತ್ತು ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಈಶ್ವರಮಂಗಲ ವಲಯ ಇದರ ಸಹಕಾರದೊಂದಿಗೆ  ಕಂಡಡೊಂಜಿ ದಿನ ಕಾರ್ಯಕ್ರಮ ಈಶ್ವರಮಂಗಲ ಮರಕ್ಕಡ ಗದ್ದೆಯಲ್ಲಿ ಜು 28 ರಂದು ನಡೆಯಿತು.   ಕಾರ್ಯಕ್ರಮವನ್ನು ಈಶ್ವರಮಂಗಲ   ಮರಕ್ಕಡ ಗದ್ದೆಯ ಮಾಲಕ  ಗಿರೀಶ್ ರೈ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭಹಾರೈಸಿದರು. ಅಧ್ಯಕ್ಷತೆಯನ್ನು  ಒಕ್ಕಲಿಗ ಗೌಡ ಸೇವಾ ಸಂಘ ಅಧ್ಯಕ್ಷ ನಾಗಪ್ಪ

ಈಶ್ವರಮಂಗಲ ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದಿಂದ ಕಂಡಡೊಂಜಿ ದಿನ ಕಾರ್ಯಕ್ರಮ |  ಸಾಂಪ್ರದಾಯಿಕ ಆಟಗಳಲ್ಲಿ ಸಂಭ್ರಮಿಸಿದ ಜನರು | ಕಾರ್ಯಕ್ರಮಕ್ಕೆ ಮೆರುಗು ತಂದ ಜಾನಪದ ಸೊಗಡು ವಿಷಯಾಧಾರೀತ  ನೃತ್ಯ ಗಾನ ಸಾಂಸ್ಕೃತಿಕ ವೈಭವ Read More »

ಚಲಿಸುತ್ತಿದ್ದ ಬಸ್ ನಲ್ಲಿ ಕಾಣಿಸಿಕೊಂಡ ಬೆಂಕಿ | ತಪ್ಪಿದ ಅನಾಹುತ

ಸುಳ್ಯ : ಸುಳ್ಯ ಸಮೀಪ ಚಲಿಸುತ್ತಿದ್ದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಸುಳ್ಯ ಬಸ್ ನಿಲ್ದಾಣದಿಂದ ಸುಳ್ಯ-ಕೊಯನಾಡು ಮಾರ್ಗವಾಗಿ ಹೊರಡಬೇಕಿದ್ದ ಬಸ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರುವ ಘಟನೆ ನಡೆದಿದೆ. ಬಸ್ ನಲ್ಲಿದ್ದವರನ್ನು ತಕ್ಷಣ ಕೆಳಗೆ ಇಳಿಸಲಾಯಿತು. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯನಡೆಸಿದರು.

ಚಲಿಸುತ್ತಿದ್ದ ಬಸ್ ನಲ್ಲಿ ಕಾಣಿಸಿಕೊಂಡ ಬೆಂಕಿ | ತಪ್ಪಿದ ಅನಾಹುತ Read More »

ಚಲಿಸುತ್ತಿದ್ದ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಹೃದಯಾಘಾತ | ಬಸ್‍ ನ್ನು ತುರ್ತು ವಾಹನವಾಗಿ ಪರಿವರ್ತಿಸಿ ಆಸ್ಪತ್ರೆಗೆ ಕರೆದೊಯ್ದ ಚಾಲಕ

ಮಂಗಳೂರು : ಚಲಿಸುತ್ತಿದ್ದ ಬಸ್‌ನಲ್ಲಿ ವಿದ್ಯಾರ್ಥಿನಿಗೆ ಹೃದಯಾಘಾತವಾಗಿದ್ದ ಘಟನೆ ಮಂಗಳೂರಿನಲ್ಲಿ ನಡೆದಿದೆ.  ಬಸ್ ಚಾಲಕ ಹಾಗೂ ನಿರ್ವಾಹಕ ಸಮಯ ಪ್ರಜ್ಞೆ ಮೆರೆದು ಜೀವ ರಕ್ಷಿಸಿದರು.   ಮಂಗಳೂರಿನ ಕೂಳೂರು ಮಾರ್ಗ 13ಎಫ್‌ನಲ್ಲಿ ಎಂದಿನಂತೆ ಕೃಷ್ಣ ಪ್ರಸಾದ್ ಬಸ್ ಪ್ರಯಾಣಿಕರೊಂದಿಗೆ ತೆರಳುತ್ತಿದ್ದಾಗ ಕಾಲೇಜು ವಿದ್ಯಾರ್ಥಿನಿಯೊಬ್ಬರಲ್ಲಿ ಹಠಾತ್ ಹೃದಯಾಘಾತದ ಲಕ್ಷಣಗಳು ಕಾಣಿಸಿವೆ. ತಕ್ಷಣವೇ ಬಸ್‌ ಚಾಲಕ ಗಜೇಂದ್ರ ಕುಂದ‌ರ್ ಮತ್ತು ಕಂಡಕ್ಟರ್ ಮಹೇಶ್ ಪೂಜಾರಿ ಬಸ್ ಅನ್ನು ತುರ್ತು ವಾಹನವನ್ನಾಗಿ ಪರಿವರ್ತಿಸಿದರು. ಬಸ್‌ನಲ್ಲಿದ್ದ ಎಮರ್ಜೆನ್ಸಿ ಸೈರನ್ ಚಾಲೂ ಮಾಡಿದ ಅವರು

ಚಲಿಸುತ್ತಿದ್ದ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಹೃದಯಾಘಾತ | ಬಸ್‍ ನ್ನು ತುರ್ತು ವಾಹನವಾಗಿ ಪರಿವರ್ತಿಸಿ ಆಸ್ಪತ್ರೆಗೆ ಕರೆದೊಯ್ದ ಚಾಲಕ Read More »

ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ: ನರೇಂದ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಬಹುಮಾನ

ಪುತ್ತೂರು: ಕಡಬ ಸರಸ್ವತಿ ವಿದ್ಯಾಕೇಂದ್ರದಲ್ಲಿ ವಿದ್ಯಾಭಾರತಿ ಕರ್ನಾಟಕದ ವತಿಯಿಂದ ನಡೆದ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನರೇಂದ್ರ ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಗಳಿಸಿದ್ದಾರೆ. ಪ್ರಥಮ ವಾಣಿಜ್ಯ ವಿಭಾಗದ ಸಾತ್ವಿಕ್ ಎಸ್. ದ್ವಿತೀಯ, ಲಿಖಿತ್ ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಪದಾಧಿಕಾರಿಗಳು, ಪ್ರಾಂಶುಪಾಲರು, ಉಪನ್ಯಾಸಕ ವೃಂದ ಮತ್ತು ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.

ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ: ನರೇಂದ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಬಹುಮಾನ Read More »

error: Content is protected !!
Scroll to Top