ಅಂಬಿಕಾ ಸಿಬಿಎಸ್‌ ಇ ವಿದ್ಯಾರ್ಥಿಗಳಿಗೆ ಈಜು ಸ್ಪರ್ಧೆಯಲ್ಲಿ ಹಲವು ಬಹುಮಾನ

ಪುತ್ತೂರು : ಮಂಗಳೂರಿನ ಶಕ್ತಿ ವಿದ್ಯಾಸಂಸ್ಥೆಯಲ್ಲಿ ನಡೆದ ವಿದ್ಯಾ ಭಾರತಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಅಂಬಿಕಾ ಸಿಬಿಎಸ್‌ಇ ವಿದ್ಯಾಸಂಸ್ಥೆಯ ಹತ್ತನೇ ತರಗತಿಯ ವಿದ್ಯಾರ್ಥಿ ವರ್ಧಿನ್ ದೀಪಕ್  ರೈ 17 ವರ್ಷಕ್ಕಿಂತ ಕೆಳಗಿನ ಹುಡುಗರ ವಿಭಾಗದ  50 ಮೀಟರ್ ಬಟರ್ ಫ್ಲೈ, 100 ಮೀಟರ್ ಬ್ರೆಸ್ಟ್‌ಸ್ಟ್ರೋಕ್,  50 ಮೀಟರ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಆರನೇ ತರಗತಿಯ ವಿದ್ಯಾರ್ಥಿ ಪ್ರತ್ಯುಷ್ ಎಲ್.ಎಸ್. ಗೌಡ  14 ವರ್ಷ  ಕೆಳಗಿನ   ಹುಡುಗರ ವಿಭಾಗದ  50 ಮೀಟರ್ ಬಟರ್ ಫ್ಲೈ ಮತ್ತು […]

ಅಂಬಿಕಾ ಸಿಬಿಎಸ್‌ ಇ ವಿದ್ಯಾರ್ಥಿಗಳಿಗೆ ಈಜು ಸ್ಪರ್ಧೆಯಲ್ಲಿ ಹಲವು ಬಹುಮಾನ Read More »

ವಿವೇಕಾನಂದ ಕಾಲೇಜಿನಲ್ಲಿ 50 ಅಡಿ ಕೇಸರಿ ಧ್ವಜ ಸ್ಥಾಪನೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಯ ವಿವೇಕಾನಂದ ಪ್ರತಿಮೆಯ ಬಳಿ ವಿದ್ಯಾರ್ಥಿಗಳಿಂದ ಬೃಹತ್ 50 ಅಡಿಯ ಕೇಸರಿ ದ್ವಜವನ್ನು ಸ್ಥಾಪಿಸಲಾಯಿತು. ‘ಗಣೇಶೋತ್ಸವ’ ದ ತಯಾರಿಯ ಸಂಕೇತವಾಗಿ ಈ ಧ್ವಜ ಸ್ಥಾಪಿಸಲಾಯಿತು. ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯ ನಿರ್ವಹಣಾ ಅಧಿಕಾರಿ ಭಾಸ್ಕರ್ ಮತ್ತು ಪುತ್ತೂರು ನಗರಮಂಡಲ ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ನಿತೇಶ್ ಕಲ್ಲೇಗ ತೆಂಗಿನಕಾಯಿ ಹೊಡೆಯುವ ಮೂಲಕ ಚಾಲನೆ ನೀಡಿದರು.ಜೊತೆಗೆ ವಿವಿಧ ಸಂಸ್ಥೆಯ ದೇಶಭಕ್ತ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿವೇಕಾನಂದ ಕಾಲೇಜಿನಲ್ಲಿ 50 ಅಡಿ ಕೇಸರಿ ಧ್ವಜ ಸ್ಥಾಪನೆ Read More »

ಪುತ್ತೂರು ಬಿಜೆಪಿ ಗ್ರಾಮಾಂತರ ಹಾಗೂ ನಗರ ಮಂಡಲಕ್ಕೆ ಪದಾಧಿಕಾರಿಗಳ ನೇಮಕ | ಮಹಾಶಕ್ತಿ ಕೇಂದ್ರಕ್ಕೆ ಅಧ್ಯಕ್ಷ, ಕಾರ್ಯದರ್ಶಿಗಳ ಆಯ್ಕೆ

ಪುತ್ತೂರು: ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಹಾಗೂ ನಗರ ಮಂಡಲಕ್ಕೆ ಪದಾಧಿಕಾರಿಗಳನ್ನು  ನೇಮಕದ ಜತೆಗೆ ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷ, ಕಾರ್ಯದರ್ಶಿಗಳನ್ನು ನೇಮಿಸಿದೆ ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷರಾಗಿ ಹರಿಪ್ರಸಾದ್ ಯಾದವ್, ಸುನೀಲ್ ದಡ್ಡು, ಯತೀಂದ್ರ ಕೊಚ್ಚಿ ದಿವ್ಯಾ ಪುರುಷೋತ್ತಮ್, ವಿದ್ಯಾದರ ಜೈನ್, ಕುಮಾರ ನರಸಿಂಹ ಭಟ್, ಕಾರ್ಯದರ್ಶಿಗಳಾಗಿ ಶ್ರೀ ಕೃಷ್ಣ ವಿಟ್ಲ, ರತನ್ ರೈ, ಪ್ರೀತಂ ಪೂಂಜ, ಪುನೀತ್ ಮಾಡತ್ತಾರು. ನಾಗವೇಣಿ ಕೆ.. ಸೌಮ್ಯ ಬಾಲಸುಬ್ರಮಣ್ಯ ನಹುಷ ಭಟ್ ಪಿ.ವಿ., ಕಾರ್ಯಾಲಯ ಕಾರ್ಯದರ್ಶಿಯಾಗಿ ಅಶೋಕ ಮೂಡಂಬೈಲ್ ನೇಮಕಗೊಂಡಿದ್ದಾರೆ.

ಪುತ್ತೂರು ಬಿಜೆಪಿ ಗ್ರಾಮಾಂತರ ಹಾಗೂ ನಗರ ಮಂಡಲಕ್ಕೆ ಪದಾಧಿಕಾರಿಗಳ ನೇಮಕ | ಮಹಾಶಕ್ತಿ ಕೇಂದ್ರಕ್ಕೆ ಅಧ್ಯಕ್ಷ, ಕಾರ್ಯದರ್ಶಿಗಳ ಆಯ್ಕೆ Read More »

ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ | ಶ್ರೀ ಕೃಷ್ಣ ಲೀಲೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವೀರಮಂಗಲ ವೈಷ್ಣವಿ ಮಹಿಳಾ ಮಂಡಲದ 23ನೇ ವರ್ಷಾಚರಣೆ ಪ್ರಯುಕ್ತ 12ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ ಇಂದು ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಕಲಾ ಕೇಂದ್ರದ 21ನೇ ವರ್ಷಾಚರಣೆ ಪ್ರಯುಕ್ರ 4ನೇ ವರ್ಷದ ಶ್ರೀ ಕೃಷ್ಣ ಲೀಲೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ರಾಧಾಕೃಷ್ಣ ಶಗ್ರಿತ್ತಾಯ, ದೇವಸ್ಥಾನದ ವಿಶ್ವಸ್ಥ ಮಂಡಳಿ ಅಧ್ಯಕ್ಷ ಉಮೇಶ್‍ ಕೋಡಿಬೈಲು, ಕಾರ್ಯದರ್ಶಿ ಹರ್ಷ ಗುತ್ತು, ವೀರಮಂಗಲ ಪಿಎಂಶ್ರೀ

ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ | ಶ್ರೀ ಕೃಷ್ಣ ಲೀಲೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಹಳಿ ತಪ್ಪಿದ ಸಬರಮತಿ ಎಕ್ಸ್‌ಪ್ರೆಸ್‌ ರೈಲು | ತಪ್ಪಿದ ಅನಾಹುತ

ಉತ್ತರ ಪ್ರದೇಶ  : ಸಬರಮತಿ ಎಕ್ಸ್‌ಪ್ರೆಸ್‌ ರೈಲಿನ 22 ಬೋಗಿಗಳು ಹಳಿ ತಪ್ಪಿದೆ. ಅದೃಷ್ಟವಶಾತ್ ಯವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಾನ್ಸುರ್‌ ಮತ್ತು ಭೀಮಸೇನ್ ನಡುವೆ ಸಬರಮತಿ ಎಕ್ಸೆಸ್ ರೈಲಿನ 22 ಬೋಗಿಗಳು ಹಳಿ ತಪ್ಪಿದೆ. ಅದೇ ಹಳಿ ಮೇಲೆ ಮೆಮೊ ರೈಲೊಂದು ಬರುತ್ತಿತ್ತು. ಅದೃಷ್ಟವಷಾತ್ ಯಾವುದೇ ಸಾವುನೋವು ಸಂಭವಿಸಿಲ್ಲ. ಪ್ರಯಾಣಿಕರನ್ನು ಬಸ್ಸಿನ ಮೂಲಕ ಕಾನ್ಸುರ್‌ ರೈಲ್ವೆ ಸ್ಟೇಷನ್ ತಲುಪಿಸಿದ್ದೇವೆ ಎಂದು ಜಿಲ್ಲಾ ಮಾಜಿಸ್ಟ್ರೇಟ್ ರಾಕೇಶ್ ವರ್ಮಾ ತಿಳಿಸಿದ್ದಾರೆ. ಸಬರಮತಿ ಎಕ್ಸ್‌ಪ್ರೆಸ್‌) ರೈಲು ಕಾನ್ಸುರ್‌ ಹತ್ತಿರ ನಸುಕಿನ 2:35 ಗಂಟೆಗೆ

ಹಳಿ ತಪ್ಪಿದ ಸಬರಮತಿ ಎಕ್ಸ್‌ಪ್ರೆಸ್‌ ರೈಲು | ತಪ್ಪಿದ ಅನಾಹುತ Read More »

ಕೋಲ್ಕತ್ತಾ ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ | ಪುತ್ತೂರಿನಲ್ಲೂ ಸರಕಾರಿ ಸಹಿತ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ಬಂದ್ ಮಾಡಿ ಮುಷ್ಕರ

ಪುತ್ತೂರು: ಕೋಲ್ಕತ್ತಾದ ಆರ್ ಜಿ ಆರ್ ವೈದ್ಯಕೀಯ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯೆ ಮೇಲೆ ನಡೆದ ಅತ್ಯಾಚಾರ, ಹತ್ಯೆ ಘಟನೆಯನ್ನು ಖಂಡಿಸಿ ಪುತ್ತೂರಿನಲ್ಲೂ ಸರಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ,  ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಯನ್ನು ಹೊರತುಪಡಿಸಿ ಹೊರಗೋಗಿ, ಒಳರೋಗಿ ವಿಭಾಗವನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು. ಪುತ್ತೂರು ತಾಲೂಕಿನಲ್ಲಿ ಇರುವ ಆಧುನಿಕ ವೈದ್ಯ ಪದ್ದತಿಯ ಸೇವೆ ನೀಡುತ್ತಿರುವ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್ ಗಳಲ್ಲಿ ಎಲ್ಲಾ ತುರ್ತು ಹಾಗೂ ಗಂಭೀರವಲ್ಲದ ಸಾಮಾನ್ಯ ವೈದ್ಯಕೀಯ ಸೇವೆಗಳು ಲಭ್ಯವಿರಲಿಲ್ಲ.

ಕೋಲ್ಕತ್ತಾ ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ | ಪುತ್ತೂರಿನಲ್ಲೂ ಸರಕಾರಿ ಸಹಿತ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ಬಂದ್ ಮಾಡಿ ಮುಷ್ಕರ Read More »

ವಿದ್ಯಾರಶ್ಮಿಯಲ್ಲಿ ಪ್ರೇರಣಾ ರಸಪ್ರಶ್ನೆ ಸ್ಪರ್ಧೆ

ಸವಣೂರು: ಪುತ್ತೂರಿನ ಸಮರ್ಪಣಾ ಚಾರಿಟೇಬ್’ಲ್ ಟ್ರಸ್ಟ್’ನ flagship ಕಾರ್ಯಕ್ರಮವಾದ ಶಿಷ್ಯ ವೇತನ (Scholarship) ವಿತರಣಾ ಕಾರ್ಯಕ್ರಮದ ಅಂಗವಾಗಿ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮವು ಸವಣೂರಿನ ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಸಮರ್ಪಣಾ ಚಾರಿಟೇಬ್’ಲ್ ಟ್ರಸ್ಟ್’ನ ಈ ಮೌಲಿಕವಾದ ಕಾರ್ಯಕ್ರಮವನ್ನು ದ.ಕ. ಜಿಲ್ಲೆಯಾದ್ಯಂತದ ಪದವಿಪೂರ್ವ ಕಾಲೇಜುಗಳಲ್ಲಿ ನಡೆಸುವ ಜವಾಬ್ದಾರಿಯನ್ನು ಪುತ್ತೂರಿನ ಪ್ರೇರಣಾ ಸಂಸ್ಥೆಯು ವಹಿಸಿಕೊಂಡಿದೆ. ಈ ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿ ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ನೀಡಲಾಗುವುದು. ಇದರ ಜೊತೆಗೆ ದ್ವಿತೀಯ ಪಿಯುಸಿ

ವಿದ್ಯಾರಶ್ಮಿಯಲ್ಲಿ ಪ್ರೇರಣಾ ರಸಪ್ರಶ್ನೆ ಸ್ಪರ್ಧೆ Read More »

ಮುಡಾ ಸೈಟ್ ಹಂಚಿಕೆ ಹಗರಣ | ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಅನುಮತಿ | ಸಿಎಂ ರಾಜೀನಾಮೆಗೆ ಕ್ಷಣಗಣನೆ

ಮೈಸೂರು: ಮುಡಾ ಸೈಟ್ ಹಂಚಿಕೆ ಹಗರಣಕ್ಕೆ ಸಂಬಂಧಿಸಿ ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಶನಿವಾರ ಬೆಳಗ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅನುಮತಿ ನೀಡಿದ್ದಾರೆ. ದೂರುದಾರ, ಸಾಮಾಜಿಕ ಹೋರಾಟಗಾರ ಟಿಜೆ ಅಬ್ರಹಾಂ, ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಒಳ್ಳೆಯ ಸಂಗತಿಯಾಗಿದೆ. ನನಗೂ ರಾಜಭವನದಿಂದ ಕರೆ ಬಂದಿದೆ. ಈಗಾಗಲೇ ಮಡಿಕೇರಿಯಿಂದ ನಾನು ಹೊರಟಿದ್ದೇನೆ. ಮಧ್ಯಾಹ್ನದ ವೇಳೆಗೆ ನಾನು ಅವರನ್ನು ಭೇಟಿಯಾಗಲಿದ್ದೇನೆ. ಮುಂದಿನ ಕಾನೂನು ಹೋರಾಟ ಕೂಡ ತುಂಬಾ ದೀರ್ಘವಾಗಿ ಇರಲಿದೆ ಎಂದು ಅವರು

ಮುಡಾ ಸೈಟ್ ಹಂಚಿಕೆ ಹಗರಣ | ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಅನುಮತಿ | ಸಿಎಂ ರಾಜೀನಾಮೆಗೆ ಕ್ಷಣಗಣನೆ Read More »

ಪಾದಚಾರಿ ಮಹಿಳೆಗೆ ಸ್ಕೂಟರ್ ಡಿಕ್ಕಿ ಹೊಡೆದು ಪರಾರಿ : ಪ್ರಕರಣ ದಾಖಲು

ಪುತ್ತೂರು : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಸ್ಕೂಟರ್ ಸವಾರ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಉಪ್ಪಿನಂಗಡಿ ಎಸ್.ಬಿ.ಐ ಬ್ಯಾಂಕ್ ಬಳಿ ನಡೆದಿದೆ. ಈ ಬಗ್ಗೆ ಮಹಿಳೆ ನೀಡಿದ ದೂರಿನ ಮೇರೆಗೆ ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಿಚಿತ ಸ್ಕೂಟರ್ ಸವಾರ ಉಪ್ಪಿನಂಗಡಿಯ ಎಸ್.ಬಿ.ಐ ಬ್ಯಾಂಕ್ ಬಳಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ, ಡಾಮಾರು ರಸ್ತೆ ಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಪಡಿಸಿದ್ದು, ಅಪಘಾತದ ಪರಿಣಾಮ ಮಹಿಳೆ ರಸ್ತೆಗೆ ಬಿದ್ದು ಸಣ್ಣ

ಪಾದಚಾರಿ ಮಹಿಳೆಗೆ ಸ್ಕೂಟರ್ ಡಿಕ್ಕಿ ಹೊಡೆದು ಪರಾರಿ : ಪ್ರಕರಣ ದಾಖಲು Read More »

ತರಕಾರಿ ಲಾರಿ-ಖಾಸಗಿ ಬಸ್ ಡಿಕ್ಕಿ | ಲಾರಿ ಚಾಲಕ ಮೃತ್ಯು, ಹಲವರಿಗೆ ಗಾಯ

ಉಪ್ಪಿನಂಗಡಿ: ಖಾಸಗಿ ಬಸ್ಸು ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿ, ಲಾರಿ ಚಾಲಕ ಮೃತಪಟ್ಟು, ಬಸ್ಸಿನಲ್ಲಿದ್ದ ಹಲವರು ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನೆ ಎಂಬಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಅಫಘಾತದಲ್ಲಿ ಲಾರಿ ಚಾಲಕ ಗಂಭೀರ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ತಪಟ್ಟಿರುವುದಾಗಿ ತಿಳಿದು ಬಂದಿದೆ. ಖಾಸಗಿ ಬಸ್ ಹಾಗೂ ಕ್ಯಾಂಟರ್ ವಾಹನದ ನಡುವೆ ಈ ಢಿಕ್ಕಿ ಸಂಭವಿಸಿದೆ. ಖಾಸಗಿ ಬಸ್ಸು ಮಂಗಳೂರಿನಿಂದ ಬೆಂಗಳೂರಿಗೆ ಸಮಚರಿಸುತಿತ್ತು. ಕ್ಯಾಂಟರ್ ವಾಹನ ತರಕಾರಿ

ತರಕಾರಿ ಲಾರಿ-ಖಾಸಗಿ ಬಸ್ ಡಿಕ್ಕಿ | ಲಾರಿ ಚಾಲಕ ಮೃತ್ಯು, ಹಲವರಿಗೆ ಗಾಯ Read More »

error: Content is protected !!
Scroll to Top