ಗಣೇಶೋತ್ಸವ ಮೆರವಣಿಗೆ ವೇಳೆ ದೈವಾರಾಧನೆ ಸ್ತಬ್ಧಚಿತ್ರ ನಿಷೇಧಕ್ಕೆ ತುಳುನಾಡ ದೈವಾರಾಧನೆ ಸಂರಕ್ಷಣಾ ವೇದಿಕೆ ಆಗ್ರಹ : ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯಾಲಯಕ್ಕೆ ಮನವಿ

ಮಂಗಳೂರು: ಗಣೇಶ ಚತುರ್ಥಿಯ ಅಂಗವಾಗಿ ನಡೆಯುವ ಮೆರವಣಿಗೆಯ ವೇಳೆ ದೈವಾರಾಧನೆಗೆ ಸಂಬಂಧಿಸಿದ ಸ್ಥಬ್ಧಚಿತ್ರ, ಟ್ಯಾಬ್ಲೋಗಳನ್ನು ನಿಷೇಧಿಸಲು ಸಂಘಟನೆಯ ಮೂಲಕ ಕರೆ ನೀಡಬೇಕು ಎಂದು ತುಳುನಾಡ ದೈವಾರಾಧನೆ ಸಂರಕ್ಷಣಾ ವೇದಿಕೆ ಮೂಲಕ ಕದ್ರಿಯಲ್ಲಿರುವ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯಾಲಯಕ್ಕೆ ಮನವಿ ಮಾಡಲಾಯಿತು. ಹಿಂದೂ ಧರ್ಮದ ಅವಿಭಾಜ್ಯ ನಂಬಿಕೆಯಾಗಿರುವ ದೈವಗಳನ್ನು ಟ್ಯಾಬ್ಲೋಗಳಲ್ಲಿ ಪ್ರದರ್ಶಿಸುವುದನ್ನು ಸಂಘಟನೆ  ಸಹಿಸುವುದಿಲ್ಲ. ಈ ಕುರಿತು ಜಿಲ್ಲೆಯಿಂದ ಸಂಘಟನೆಯ ಪ್ರಮುಖರಿಗೆ, ಕಾರ್ಯಕರ್ತರಿಗೆ, ಕಾರ್ಯಕ್ರಮದ ಆಯೋಜಕರಿಗೆ ಈ ಬಗ್ಗೆ ಸ್ಪಷ್ಟ ಸೂಚನೆ ನೀಡುವುದಾಗಿ ಸಂಘಟನೆಯ ಪ್ರಮುಖರು ಭರವಸೆ […]

ಗಣೇಶೋತ್ಸವ ಮೆರವಣಿಗೆ ವೇಳೆ ದೈವಾರಾಧನೆ ಸ್ತಬ್ಧಚಿತ್ರ ನಿಷೇಧಕ್ಕೆ ತುಳುನಾಡ ದೈವಾರಾಧನೆ ಸಂರಕ್ಷಣಾ ವೇದಿಕೆ ಆಗ್ರಹ : ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯಾಲಯಕ್ಕೆ ಮನವಿ Read More »

2.44 ಲಕ್ಷ ನೌಕರರ ವೇತನಕ್ಕೆ ತಡೆ : ಆಸ್ತಿ ವಿವರ ನೀಡದ ಉದ್ಯೋಗಿಗಳಿಗೆ ಬಿಸಿ ಮುಟ್ಟಿಸಿದ ಸರಕಾರ

ಲಖನೌ : ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರಕಾರ ಬರೋಬ್ಬರಿ 2.44 ಲಕ್ಷ ಸರ್ಕಾರಿ ನೌಕರರ ವೇತನವನ್ನು ತಡೆಹಿಡಿದಿದೆ. ಎಲ್ಲ ಸರಕಾರಿ ಉದ್ಯೋಗಿಗಳು ತಮ್ಮ ಆಸ್ತಿ ವಿವರಗಳನ್ನು ಆಗಸ್ಟ್ 31ರೊಳಗೆ ನೀಡುವಂತೆ ಸರಕಾರ ಇತ್ತೀಚೆಗೆ ಆದೇಶಿಸಿತ್ತು. ಆದರೆ ಇದುವರೆಗೂ ಸರಕಾರಿ ನೌಕರರು ಆಸ್ತಿ ವಿವರ ನೀಡದ ಕಾರಣ ಸಂಬಳ ತಡೆಹಿಡಿದು ಬಿಸಿ ಮುಟ್ಟಿಸಿದೆ.ಸರಕಾರದ ಮುಖ್ಯ ಕಾರ್ಯದರ್ಶಿ ಎಲ್ಲ ಸರಕಾರಿ ನೌಕರರು ಆಗಸ್ಟ್ 31ರೊಳಗೆ ಚರ ಮತ್ತು ಸ್ಥಿರ ಆಸ್ತಿಗಳ ವಿವರ ನೀಡುವಂತೆ ಸೂಚಿಸಿದ್ದರು. ಮಾನವ ಸಂಪದ ಪೋರ್ಟಲ್‌ನಲ್ಲಿ

2.44 ಲಕ್ಷ ನೌಕರರ ವೇತನಕ್ಕೆ ತಡೆ : ಆಸ್ತಿ ವಿವರ ನೀಡದ ಉದ್ಯೋಗಿಗಳಿಗೆ ಬಿಸಿ ಮುಟ್ಟಿಸಿದ ಸರಕಾರ Read More »

ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

ಪುತ್ತೂರು: ದ.ಕ. ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ಸಹಯೋಗದಲ್ಲಿ 2024-25ನೇ ಸಾಲಿನ ಪುತ್ತೂರು ತಾಲೂಕು ಮಟ್ಟದ ಶಟಲ್ ಬ್ಯಾಡ್‌ಮಿಂಟನ್ ಪಂದ್ಯಾಟ ಸಾಮೆತ್ತಡ್ಕ ಸುದಾನ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಿತು. ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3181  ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಆಸ್ಕರ್ ಆನಂದ್ ಪಂದ್ಯಾಕೂಟಕ್ಕೆ ಚಾಲನೆಯನ್ನು ನೀಡಿ, ಕ್ರೀಡೆಯಿಂದ ಮನೋರಂಜನೆ, ದೈಹಿಕ ವ್ಯಾಯಾಮ ಸಿಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ,

ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ Read More »

ಮಾಜಿ ಸಚಿವ ಸುರೇಶ್‌ಕುಮಾರ್‌ ಅಸ್ವಸ್ಥ : ಐಸಿಯುನಲ್ಲಿ ಚಿಕಿತ್ಸೆ

ಬೆಂಗಳೂರು: ತೀವ್ರ ಜ್ವರದಿಂದ ಬಳಲುತ್ತಿರುವ ಬಿಜೆಪಿ ಮಾಜಿ ಸಚಿವ, ಹಾಲಿ ಶಾಸಕ ಎಸ್‌. ಸುರೇಶ್‌ ಕುಮಾರ್‌ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರು ಶೇಷಾದ್ರಿಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಸುರೇಶ್‌ ಕುಮಾರ್‌ ಅವಋ ಮೆದುಳಿಗೆ ಜ್ವರ ತಗುಲಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಕಳೆದ ತಿಂಗಳು ಬೆಂಗಳೂರಿನಿಂದ ತಿರುಪತಿಗೆ ಸೈಕಲ್ ಪ್ರಯಾಣ ಬೆಳೆಸಿದ್ದ ಸುರೇಶ್‌ಕುಮಾರ್‌ ಬಳಿಕ ದೋಸ್ತಿ ಪಾದಯಾತ್ರೆಯಲ್ಲೂ ಒಂದು ದಿನ ಭಾಗಿ ಆಗಿದ್ದರು. ಕಳೆದ 3-4 ದಿನಗಳ

ಮಾಜಿ ಸಚಿವ ಸುರೇಶ್‌ಕುಮಾರ್‌ ಅಸ್ವಸ್ಥ : ಐಸಿಯುನಲ್ಲಿ ಚಿಕಿತ್ಸೆ Read More »

ರೂಮಿನಲ್ಲಿ ಕೂಡಿ ಹಾಕಿ ಡ್ರಗ್ಸ್‌ ನೀಡಿ ಅತ್ಯಾಚಾರ : ಮಲಯಾಳಂ ಹೀರೊ ನಿವಿನ್‌ ಪೌಲಿ ವಿರುದ್ಧ ದೂರು

ಕೊಚ್ಚಿ: ಮಲಯಾಳಂನ ಬೆಂಗಳೂರು ಡೇಸ್, ಪ್ರೇಮಂ ಮೊದಲಾದ ಹಿಟ್ ಸಿನೆಮಾಗಳ ನಾಯಕ ನಟ ನಿವಿನ್ ಪೌಲಿ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಾಗಿದೆ. ಸಿನೆಮಾದಲ್ಲಿ ಚಾನ್ಸ್ ಕೊಡಿಸುತ್ತೇನೆ ಎಂದು ನಂಬಿಸಿ ನನ್ನ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಎರ್ನಾಕುಳಂ ಜಿಲ್ಲೆಯ ನೇರ್ಯಮಂಗಲಂ ನಿವಾಸಿ ಯುವತಿ ಉನ್ನುಕ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ದೂರು ದಾಖಲಾಗುತ್ತಿದ್ದಂತೆ ಈ ಪ್ರಕರಣ ಇಂತಹ ಪ್ರಕರಣಗಳ ತನಿಖೆಗೆ ರಚಿಸಲಾಗಿರುವ ಎಸ್‌ಐಟಿಗೆ ವರ್ಗಾವಣೆಯಾಗಿದೆ. ಹೇಮಾ ಕಮಿಷನ್ ವರದಿ ಬಹಿರಂಗಗೊಂಡ ಬಳಿಕ ತನಿಖೆಗೆ ನೇಮಕಗೊಂಡ ವಿಶೇಷ ತನಿಖಾ ತಂಡ

ರೂಮಿನಲ್ಲಿ ಕೂಡಿ ಹಾಕಿ ಡ್ರಗ್ಸ್‌ ನೀಡಿ ಅತ್ಯಾಚಾರ : ಮಲಯಾಳಂ ಹೀರೊ ನಿವಿನ್‌ ಪೌಲಿ ವಿರುದ್ಧ ದೂರು Read More »

ವೈದ್ಯಕೀಯ ವಿದ್ಯಾರ್ಥಿನಿಯ ಮತಾಂತರಕ್ಕೆ ಯತ್ನ : ಯುವಕ ಸೆರೆ

ಪ್ರೀತಿಸಿದ ಬಳಿಕ ಮತಾಂತರವಾಗಲು ಬಲವಂತ ಮಾಡಿದ ಡಾಕ್ಟರ್‌ ಉಡುಪಿ: ಮಣಿಪಾಲದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಯುವಕ ತನ್ನ ಸಹಪಾಠಿ ಯುವತಿಯನ್ನು ಪ್ರೀತಿಸಿ ಬಳಿಕ ಮತಾಂತರಕ್ಕೆ ಒತ್ತಾಯಿಸಿದ ಕುರಿತು ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಯುವಕ ದಿಲ್ಲಿಯ ಮಹಮ್ಮದ್‌ ಡ್ಯಾನಿಶ್ ಖಾನ್ ಹಾಗೂ ಯುವತಿ ರಾಜಸ್ಥಾನದ ಹಿಂದೂ ಸಮುದಾಯಕ್ಕೆ ಸೇರಿದವರು. ಯುವತಿಯೊಡನೆ ಸ್ನೇಹ ಪ್ರೇಮವಾಗಿ ಬದಲಾಗಿ ಮದುವೆಯ ಮಾತುಕತೆಯ ಹಂತಕ್ಕೆ ತಲುಪಿತ್ತು. ಆದರೆ ಮಹಮ್ಮದ್‌ ಡ್ಯಾನಿಶ್ ಖಾನ್ ದಿನ ಕಳೆದಂತೆ ನೀನು

ವೈದ್ಯಕೀಯ ವಿದ್ಯಾರ್ಥಿನಿಯ ಮತಾಂತರಕ್ಕೆ ಯತ್ನ : ಯುವಕ ಸೆರೆ Read More »

ಪಾರಾ ಒಲಿಂಪಿಕ್ ಕೂಟದಲ್ಲಿ ನಿತೇಶ್ ಬರೆದರು ರೋಚಕ ಅಧ್ಯಾಯ

ಚಿನ್ನದ ಪದಕ ತಂದು ಕೊಟ್ಟ ಅಪಘಾತದಲ್ಲಿ ಕಾಲು ಕಳೆದುಕೊಂಡ ನಿತೇಶ್ ಈ ಬಾರಿ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪಾರಾ ಒಲಿಂಪಿಕ್ಸ್ ಕ್ರೀಡೆಗಳು ಭಾರತಕ್ಕೆ ಬಂಗಾರದ ಬೆಳೆಯನ್ನೇ ತಂದುಕೊಡುತ್ತಿವೆ. ಮೊನ್ನೆ ಮೊನ್ನೆ ವೀಲ್‌ಚೇರ್ ಮೇಲೆ ಕುಳಿತು ಮುದ್ದು ನಗುವಿನ ಅವನಿ ಲಕೀರಾ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದದ್ದು ನಮಗೆ ಮರೆತು ಹೋಗುವ ಮೊದಲೇ ನಮ್ಮದೇ ಭಾರತದ ನಿತೇಶ್ ಕುಮಾರ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿಶ್ವವಿಜಯಿ ಆಗಿ ಮೂಡಿಬಂದಿದ್ದಾರೆ. 2009ರಲ್ಲಿ ವಿಶಾಖಪಟ್ಟಣದಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ

ಪಾರಾ ಒಲಿಂಪಿಕ್ ಕೂಟದಲ್ಲಿ ನಿತೇಶ್ ಬರೆದರು ರೋಚಕ ಅಧ್ಯಾಯ Read More »

ಪ್ರತಿಷ್ಠಿತ ಮುಳಿಯ ಜ್ಯುವೆಲ್ಸ್ ನಲ್ಲಿ ‘ಡೈಮಂಡ್ ಫೆಸ್ಟ್’ ನ ಎರಡನೇ ಆವೃತ್ತಿಗೆ ಚಾಲನೆ

ಪುತ್ತೂರು: ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ಆ.30 ರಿಂದ ಸೆ.26ರ ತನಕ ನಡೆಯಲಿರುವ `ಡೈಮಂಡ್ ಫೆಸ್ಟ್’ನ ಎರಡನೇ ಆವೃತ್ತಿಗೆ ಸೋಮವಾರ ಅಧಿಕೃತವಾಗಿ ಚಾಲನೆ ನೀಡಲಾಯಿತು. ಶಾಸಕ ಅಶೋಕ್ ಕುಮಾರ್ ರೈಯವರ ಪತ್ನಿ ಸುಮಾ ಅಶೋಕ್ ಡೈಮಂಡ್ ಫೆಸ್ಟ್‌ನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಮುಳಿಯದ ಡೈಮಂಡ್ ಫೆಸ್ಟ್‌ನಲ್ಲಿ ಕನಿಷ್ಠ ಬೆಲೆಯಲ್ಲಿ ಖರೀದಿಸಬಹುದಾದ ಆಭರಣಗಳಿದ್ದು ಜನ ಸಾಮಾನ್ಯರಿಗೂ ಖರಿದಿಸಬಹುದು. ಉತ್ತಮ ವೆರಾಟಿ, ಆಕರ್ಷಕ ವಿನ್ಯಾಸಗಳ ಆಭರಣಗಳು ಉತ್ತಮ ಬೆಲೆಯಲ್ಲಿ ಆಕರ್ಷಕ ಕೊಡುಗೆಗಳೊಂದಿಗೆ ಗ್ರಾಹಕರು ಖರೀದಿಸಬಹುದು. ಮುಳಿಯ ಜ್ಯುವೆಲ್ಸ್

ಪ್ರತಿಷ್ಠಿತ ಮುಳಿಯ ಜ್ಯುವೆಲ್ಸ್ ನಲ್ಲಿ ‘ಡೈಮಂಡ್ ಫೆಸ್ಟ್’ ನ ಎರಡನೇ ಆವೃತ್ತಿಗೆ ಚಾಲನೆ Read More »

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕಡಬ ಶಾಖೆ ಯಶಸ್ವಿ 16ನೇ ವರ್ಷಕ್ಕೆ ಪಾದಾರ್ಪಣೆ | ಗಣಹೋಮ, ಲಕ್ಷ್ಮೀ ಪೂಜೆ

ಕಡಬ: ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕಡಬ ಶಾಖೆ ಯಶಸ್ವಿ 16ನೇ ವರ್ಷಕ್ಕೆ ಇಂದು ಪಾದಾರ್ಪಣೆ ಮಾಡಿತು. ಪಾದಾರ್ಪಣೆ ಅಂಗವಾಗಿ ಇಂದು ಕಡಬ ಶಾಖೆಯಲ್ಲಿ ಗಣಹೋಮ, ಲಕ್ಷ್ಮೀ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಕಡಬ ಶಾಖಾ ಸಲಹಾ ಸಮಿತಿ ಅಧ್ಯಕ್ಷ, ನಿರ್ದೇಶಕ ಸುದರ್ಶನ ಗೌಡ ಕೆ., ನಿರ್ದೇಶಕ ಪ್ರವೀಣ್‍ ಕುಂಟ್ಯಾನ, ಕಡಬ ಸಲಹಾ ಸಮಿತಿ ಸದಸ್ಯರಾದ ನೀಲಾವತಿ ಶಿವರಾಮ್, ಕೃಷ್ಣಪ್ಪ ಗೌಡ ಕೊಂಬಾರು, ಚಂದ್ರಶೇಖರ ಕೋಡಿಬೈಲು, ಭಾಸ್ಕರ ಗೌಡ

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕಡಬ ಶಾಖೆ ಯಶಸ್ವಿ 16ನೇ ವರ್ಷಕ್ಕೆ ಪಾದಾರ್ಪಣೆ | ಗಣಹೋಮ, ಲಕ್ಷ್ಮೀ ಪೂಜೆ Read More »

ಪುತ್ತೂರು ನಗರಸಭೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಲೀಲಾವತಿ, ಉಪಾಧ್ಯಕ್ಷರಾಗಿ ಬಾಲಚಂದ್ರ ಆಯ್ಕೆ | ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸುಂದರ ಪೂಜಾರಿ ಬಡಾವು ಆಯ್ಕೆ

ಪುತ್ತೂರು: ನಗರಸಭೆಯ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಬಿಜೆಪಿಗೇ ಒಲಿದಿದ್ದು, ಅಧ್ಯಕ್ಷರಾಗಿ ಲೀಲಾವತಿ ಹಾಗೂ ಉಪಾಧ್ಯಕ್ಷರಾಗಿ ಬಾಲಚಂದ್ರ ಸೊರಕೆ ಅವಿರೋಧವಾಗಿ ಆಯ್ಕೆಯಾದರು. ಮಂಗಳವಾರ ಚುನಾವಣೆ ನಡೆದಿದ್ದು, ಚುನಾವಣಾಧಿಕಾರಿ, ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಘೋಷಣೆ ಮಾಡಿದರು. ಅಧ್ಯಕ್ಷ ಸ್ಥಾನ ಮಹಿಳೆ ಎಸ್.ಸಿ ಗೆ ಮೀಸಲಾಗಿದ್ದು, ಈ ಸ್ಥಾನಕ್ಕೆ ಲೀಲಾವತಿ, ಉಪಾಧ್ಯಕ್ಷತೆಗೆ ಬಾಲಚಂದ್ರ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಹುದ್ದೆಗೆ ಸುಂದರ ಪೂಜಾರಿ ಬಡಾವು ಅವರನ್ನು ಬಿಜೆಪಿ ಆಯ್ಕೆ ಮಾಡಿತ್ತು. 31 ಸದಸ್ಯರಿರುವ ನಗರಸಭೆಯಲ್ಲಿ ಬಿಜೆಪಿಯ 25 ಸದಸ್ಯರಿದ್ದಾರೆ.

ಪುತ್ತೂರು ನಗರಸಭೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಲೀಲಾವತಿ, ಉಪಾಧ್ಯಕ್ಷರಾಗಿ ಬಾಲಚಂದ್ರ ಆಯ್ಕೆ | ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸುಂದರ ಪೂಜಾರಿ ಬಡಾವು ಆಯ್ಕೆ Read More »

error: Content is protected !!
Scroll to Top