ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಗೆ ನೂತನ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ಭಾಸ್ಕರ ದೇವಸ್ಯ, ಉಪಾಧ್ಯಕ್ಷರಾಗಿ ಸಂಜೀವ ಅಡ್ಯಾರ್ ಅವಿರೋಧವಾಗಿ ಆಯ್ಕೆ

ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ನೂತನ ಅಧ್ಯಕ್ಷರಾಗಿ ಮಾತೃಭೂಮಿ ಸೌಹಾರ್ದ ಸಹಕಾರಿಯ ಅಧ್ಯಕ್ಷ ಭಾಸ್ಕರ ದೇವಸ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸಫಲ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಅಡ್ಯಾ‌ರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಮಂಗಳೂರಿನ ಪಂಪ್ ವೆಲ್ ನಲ್ಲಿರುವ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಕಚೇರಿಯಲ್ಲಿ ಬುಧವಾರ ಚುನಾವಣಾ ಪ್ರಕ್ರಿಯೆ ನಡೆದು ಈ ಆಯ್ಕೆ ನಡೆಯಿತು. ಚುನಾವಣಾ ರಿಟರ್ನಿಂಗ್ ಅಧಿಕಾರಿ ನವೀನ್ ಕುಮಾರ್ ಎಂ.ಎಸ್, ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯನ್ನು […]

ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಗೆ ನೂತನ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ಭಾಸ್ಕರ ದೇವಸ್ಯ, ಉಪಾಧ್ಯಕ್ಷರಾಗಿ ಸಂಜೀವ ಅಡ್ಯಾರ್ ಅವಿರೋಧವಾಗಿ ಆಯ್ಕೆ Read More »

ಡೆಂಗ್ಯೂ ಶಂಕಿತ ಜ್ವರದಿಂದ ಬಳಲುತ್ತಿದ್ದ ಯುವತಿ ಮೃತ್ಯು

ಬೆಳ್ತಂಗಡಿ : ಡೆಂಗ್ಯೂ ಜ್ವರದಿಂದ ಯುವತಿಯೊಬ್ಬರು ಬಳತ್ತಿದ್ದು, ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲಿನ ದೇವಗಿರಿಯ ಬೈಕಾಟ್ ನಿವಾಸಿ ಜೋಸ್- ಮೆಡ್ಲಿ ದಂಪತಿ ಪುತ್ರಿ ಟಿನು (27) ಮೃತಪಟ್ಟವರು. ಬೆಂಗಳೂರಿನಲ್ಲಿ ನರ್ಸ್ ಆಗಿದ್ದ ಟಿನು ಅವರಿಗೆ ಶಿವಮೊಗ್ಗ ಜಿಲ್ಲೆಯ ಸಾಗರದ ಸೋಬಿಟ್ ಅವರೊಂದಿಗೆ ಎರಡೂವರೆ ವರ್ಷಗಳ ಹಿಂದೆ ವಿವಾಹವಾಗಿತ್ತು. ಇತ್ತೀಚೆಗೆ ಜ್ವರದಿಂದ ಬಳಲುತ್ತಿದ್ದು, ಡೆಂಗ್ಯೂ ಎಂದು ಶಂಕಿಸಲಾಗಿತ್ತು.

ಡೆಂಗ್ಯೂ ಶಂಕಿತ ಜ್ವರದಿಂದ ಬಳಲುತ್ತಿದ್ದ ಯುವತಿ ಮೃತ್ಯು Read More »

ಅರುಣ್ ಕುಮಾರ್ ಪುತ್ತಿಲರ ಮೇಲೆ ಲೈಂಗಿಕ ದೌರ್ಜನ್ಯದ ಜತೆಗೆ ಇದೀಗ ಅತ್ಯಾಚಾರ ಪ್ರಕರಣ ದಾಖಲು | ಪ್ರಕರಣವನ್ನು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಪೊಲೀಸರಿಂದ ಪುತ್ತೂರು ನ್ಯಾಯಾಲಯಕ್ಕೆ, ಅರ್ಜಿ

ಪುತ್ತೂರು: ಮಹಿಳೆಯೋರ್ವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಪ್ರಕರಣ ದಾಖಲಾಗಿದ್ದು ಜಾಮೀನು ಪಡೆದುಕೊಂಡಿದ್ದಾರೆ. ಇದೀಗ ಈ ಪ್ರಕರಣದೊಂದಿಗೆ  ಅತ್ಯಾಚಾರ ಪ್ರಕರಣವೂ ದಾಖಲಾಗಿದೆ. ಸಂತ್ರಸ್ತ ಮಹಿಳೆ ನ್ಯಾಯಾಧೀಶರೆದುರು 164ರಡಿ ಹೇಳಿಕೆ ನೀಡಿದ ಬಳಿಕದ ಬೆಳವಣಿಗೆಯಲ್ಲಿ ಅತ್ಯಾಚಾರ ಆರೋಪವನ್ನೂ ಸೇರಿಸಲಾಗಿದೆ ಮಾತ್ರವಲ್ಲದೆ, ಘಟನೆ ಬೆಂಗಳೂರುನಲ್ಲಿ ನಡೆದಿರುವುದರಿಂದ ಪ್ರಕರಣವನ್ನು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಪೊಲೀಸರು ಪುತ್ತೂರು ನ್ಯಾಯಾಲಯಕ್ಕೆ, ಅರ್ಜಿ ಸಲ್ಲಿಸಿದ್ದಾರೆ. ಪುತ್ತಿಲ ಅವರ ಹಿಂದುತ್ವದ ಪ್ರತಿಪಾದನೆ ಮತ್ತು ಪ್ರಖ್ಯಾತಿಯನ್ನು

ಅರುಣ್ ಕುಮಾರ್ ಪುತ್ತಿಲರ ಮೇಲೆ ಲೈಂಗಿಕ ದೌರ್ಜನ್ಯದ ಜತೆಗೆ ಇದೀಗ ಅತ್ಯಾಚಾರ ಪ್ರಕರಣ ದಾಖಲು | ಪ್ರಕರಣವನ್ನು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಪೊಲೀಸರಿಂದ ಪುತ್ತೂರು ನ್ಯಾಯಾಲಯಕ್ಕೆ, ಅರ್ಜಿ Read More »

ಸುರತ್ಕಲ್‌ : ಚಲಿಸುತ್ತಿರುವಾಗಲೇ ಬೆಂಕಿಗಾಹುತಿಯಾದ ಬಿಎಂಡಬ್ಲ್ಯು ಕಾರು

ಮಂಗಳೂರು : ಮಂಗಳೂರು-ಉಡುಪಿ ರಾಷ್ಟ್ರಿಯ ಹೆದ್ದಾರಿಯಲ್ಲಿ ಸುರತ್ಕಲ್ ಎನ್‌ಐಟಿಕೆ ಹಳೆ ಟೋಲ್‌ಗೇಟ್ ಬಳಿ ಇಂದು ಬೆಳಗ್ಗೆ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರೊಂದು ಬೆಂಕಿ ಹತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ. ಕಾರು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದಾಗ ಟನ್‌ಐಟಿಕೆ ಟೋಲ್‌ಗೇಟ್‌ ಸಮೀಪಿಸುತ್ತಿರುವಾಗ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಅವಘಡದಲ್ಲಿ ಸಾವುನೋವು ಸಂಭವಿಸಿಲ್ಲ. ಚಾಲಕ ಪಾರಾಗಿದ್ದಾರೆ. ಮಂಗಳೂರು ಉತ್ತರ ಸಂಚಾರ ಪೊಲೀಸರು, ಸುರತ್ಕಲ್ ಠಾಣೆಯ ಪೊಲಿಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಗ್ನಿಶಾಮಕ ದಳಕ್ಕೆ ಸಾರ್ವಜನಿಕರು ಮಾಹಿತಿ ನೀಡಿದ ಬಳಿಕ ಬಂದು ಬೆಂಕಿ ನಂದಿಸಿದ್ದಾರೆ.

ಸುರತ್ಕಲ್‌ : ಚಲಿಸುತ್ತಿರುವಾಗಲೇ ಬೆಂಕಿಗಾಹುತಿಯಾದ ಬಿಎಂಡಬ್ಲ್ಯು ಕಾರು Read More »

ಕ್ಯಾಂಪ್ಕೋ ವತಿಯಿಂದ ಉನ್ನತ ಶಿಕ್ಷಣಕ್ಕಾಗಿ ದೀಕ್ಷಾ ಅವರಿಗೆ 50 ಸಾವಿರ ರೂ. ಹಸ್ತಾಂತರ

ಪುತ್ತೂರು: ಕ್ಯಾಂಪ್ಕೋ ನಿಯಮಿತ ಮಂಗಳೂರು ಸಂಸ್ಥೆಯಿಂದ ಸದಸ್ಯ ಬೆಳೆಗಾರರಿಗಾಗಿ ರೂಪಿಸಲಾದ ವಿವಿಧ ಸಹಾಯಧನ ಯೋಜನೆಗಳಡಿಯಲ್ಲಿ ಸಂಸ್ಥೆಯ ಸಕ್ರಿಯ ಸದಸ್ಯರ  ಕುಟುಂಬದವರ ಕೃಷಿ ವಿಜ್ಞಾನಕ್ಕೆ ಸಂಬಂಧಿಸಿದ ಉನ್ನತ ಶಿಕ್ಷಣಕ್ಕಾಗಿ ನೀಡಲಾಗುವ ಒಂದು ಲಕ್ಷ ರೂಪಾಯಿ ಮೊತ್ತದ ಸಹಾಯಧನದ ಮೊದಲನೇ ಕಂತಾದ ಐವತ್ತು ಸಾವಿರ ರೂಪಾಯಿ ಯನ್ನು ಕ್ಯಾoಪ್ಕೋ ಸಂಸ್ಥೆಯ ಪುತ್ತೂರು ಶಾಖೆಯ ಸಕ್ರಿಯ ಸದಸ್ಯ ಮಹಾಬಲೇಶ್ವರ ಭಟ್ ಕೆ ಅವರ ಪುತ್ರಿ ಕು.ದೀಕ್ಷಾ ಅವರ Ph.D in Bioinformatics ಶಿಕ್ಷಣಕ್ಕಾಗಿ ದಿನಾಂಕ ಹಸ್ತಾಂತರಿಸಲಾಯಿತು. ಕ್ಯಾಂಪ್ಕೋ ಪುತ್ತೂರು ಶಾಖೆಯಲ್ಲಿ ಸಂಸ್ಥೆಯ

ಕ್ಯಾಂಪ್ಕೋ ವತಿಯಿಂದ ಉನ್ನತ ಶಿಕ್ಷಣಕ್ಕಾಗಿ ದೀಕ್ಷಾ ಅವರಿಗೆ 50 ಸಾವಿರ ರೂ. ಹಸ್ತಾಂತರ Read More »

ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮಯಿ ಶ್ರೀ ಗುರುವೇ ನಮಃ

ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮಯಿ ಶ್ರೀ ಗುರುವೇ ನಮಃ ಭಾರತೀಯರಾದ ನಾವು ಗುರುಗಳನ್ನು ದೇವರೆಂದು ಪೂಜಿಸುತ್ತೇವೆ. ಅದಕ್ಕೆ ಚಿಕ್ಕದಿನಿಂದಲೇ ಈ ಶ್ಲೋಕಗಳನ್ನು ಹೇಳುತ್ತಾ ಬೆಳೆದಿದ್ದೇವೆ. ಭಾರತ ದೇಶದ ಆದರ್ಶ ಶಿಕ್ಷಕರಾದ ಡಾ ಸರ್ವಪಲ್ಲಿ ರಾಧಾಕೃಷನ್‌ ರವರನ್ನು ನೆನೆಯುವ ದಿನವಾದ ಶಿಕ್ಷಕರ ದಿನಾಚರಣೆಯು ಸೆಪ್ಟೆಂಬರ್ 5 ರಂದು ಪ್ರತಿ ವರ್ಷ ನಡೆಯುತ್ತದೆ.ಭಾರತ ದೇಶದ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ಕಲ್ಪಿಸುವ ಮೂಲಕ, ಶಿಕ್ಷಣ ಕ್ಷೇತ್ರ, ತತ್ವಜ್ಞಾನ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು ಡಾ

ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮಯಿ ಶ್ರೀ ಗುರುವೇ ನಮಃ Read More »

ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುವಾಗ ಧರಿಸಬೇಕು ಸೇಫ್ಟಿ ಹಾರ್ನೆಸ್ಟ್‌ ಬೆಲ್ಟ್‌!

ಮಕ್ಕಳ ಸುರಕ್ಷತೆಗೆ ನಿಯಮ ಕಡ್ಡಾಯಗೊಳಿಸಲು ಚಿಂತನೆ ಬೆಂಗಳೂರು: ಮಕ್ಕಳನ್ನು ಸ್ಕೂಟಿ ಅಥವಾ ಬೈಕಿನಲ್ಲಿ ಕರೆದೊಯ್ಯುವಾಗ ಸೇಫ್ಟಿ ಹಾರ್ನೆಸ್ಟ್‌ ಬೆಲ್ಟ್‌ ಧರಿಸುವ ನಿಯಮ ಕಡ್ಡಾಯಗೊಳಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಒಂಬತ್ತು ತಿಂಗಳ ಮಗುವಿನಿಂದ ತೊಡಗಿ ನಾಲ್ಕು ವರ್ಷದೊಳಗಿನ ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಕರೆದೊಯ್ಯುವಾಗ ಶಿಶು ಸುರಕ್ಷಾ ಕವಚ ಅಥವಾ ಸುರಕ್ಷತಾ ಬೆಲ್ಟ್ (ಸೇಫ್ಟಿ ಹಾರ್ನೆಸ್ ಬೆಲ್ಟ್) ಧರಿಸುವುದನ್ನು ಕಡ್ಡಾಯಗೊಳಿಸಲು ಚಿಂತನೆ ನಡೆದಿದೆ. ಕೇಂದ್ರ ಸರ್ಕಾರ ಈಗಾಗಲೇ ಈ ನಿಯಮವನ್ನು ಕಡ್ಡಾಯಗೊಳಿಸಿದ್ದರೂ ಕರ್ನಾಟಕದಲ್ಲಿ ಇದು ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಗೆ

ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುವಾಗ ಧರಿಸಬೇಕು ಸೇಫ್ಟಿ ಹಾರ್ನೆಸ್ಟ್‌ ಬೆಲ್ಟ್‌! Read More »

ಪ್ರವಾಹ ತಡೆಯಲು ವಿಫಲರಾದ 30 ಅಧಿಕಾರಿಗಳನ್ನು ಗಲ್ಲಿಗೇರಿಸಲು ಆದೇಶ

ಕಿಮ್ ಜೊಂಗ್ ಉನ್ ಆಡಳಿತದಲ್ಲಿ ಕರ್ತವ್ಯಲೋಪ ಮಾಡಿದರೆ ಅಧಿಕಾರಿಗಳಿಗೆ ಉಳಿಗಾಲವಿಲ್ಲ ಕೊರಿಯಾ: ಕಳೆದ ಜುಲೈನಲ್ಲಿ ಉತ್ತರ ಕೊರಿಯಾದಲ್ಲಿ ಉಂಟಾಗಿದ್ದ ಭೀಕರ ಪ್ರವಾಹವನ್ನು ತಡೆಯಲು ವಿಫಲರಾದ ಆರೋಪ ಹೊರಿಸಿ 30 ಸರಕಾರಿ ಅಧಿಕಾರಿಗಳನ್ನು ಗಲ್ಲಿಗೇರಿಸಲು ಅಲ್ಲಿನ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಆದೇಶಿಸಿದ್ದಾರೆ.ಜುಲೈನಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ 4000ಕ್ಕೂ ಅಧಿಕ ಜನ ಸಾವಿಗೀಡಾಗಿದ್ದರು. ಇದಕ್ಕೆ ಅಧಿಕಾರಿಗಳ ಕರ್ತವ್ಯಲೋಪ ಕಾರಣ ಎಂದು ಹೇಳಿರುವ ಕಿಮ್ ಜೊಂಗ್ ಉನ್ 30 ಅಧಿಕಾರಿಗಳನ್ನು ಹೊಣೆ ಮಾಡಿ ಅವರನ್ನು ಸಾಯಿಸಲು ಆದೇಶಿಸಿದ್ದಾರೆ ಎಂದು ಉತ್ತರ

ಪ್ರವಾಹ ತಡೆಯಲು ವಿಫಲರಾದ 30 ಅಧಿಕಾರಿಗಳನ್ನು ಗಲ್ಲಿಗೇರಿಸಲು ಆದೇಶ Read More »

ನಾಳೆ (ಸೆ.6) : ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಷಡಾಧಾರ ಪ್ರತಿಷ್ಠೆ ಹಾಗೂ ಶತ ಚಂಡಿಕಾಯಾಗ

ಕಡಬ : ತಾಲೂಕಿನ ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಷಡಾಧಾರ ಪ್ರತಿಷ್ಠೆ ಹಾಗೂ ಶತ ಚಂಡಿಕಾ ಯಾಗ ಸೆ.6 ಶುಕ್ರವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7.20 ರಿಂದ 7.40 ರ ಸಮಯ ನಡೆಯುವ ಕನ್ಯಾಲಗ್ನ ಸುಮುಹೂರ್ತದಲ್ಲಿ ‘ಷಡಾಧಾರ ಪ್ರತಿಷ್ಠೆ’ ಜರಗಲಿದೆ. ಕಾರ್ಯಕ್ರಮದ ಪೂರ್ವಭಾವಿಯಾಗಿ ನೂತನ ಗರ್ಭಗೃಹಕ್ಕೆ ಇಷ್ಟಿಕಾಸ್ಥಾಪನ-ಗರ್ಭಪಾತ್ರನ್ಯಾಸ, ಪಾದುಕಾನ್ಯಾಸ ಕಾರ್ಯಕ್ರಮ ಈಗಾಗಲೇ ನಡೆದಿದೆ. ನಿಧಿಕುಂಭದ ಒಳಗೆ ತುಂಬಿಸುವ ಚಿನ್ನ, ಬೆಳ್ಳಿ, ನವರತ್ನಗಳನ್ನು ಅರ್ಪಿಸಲು  ಭಕ್ತಾಭಿಮಾನಿ ಅವಕಾಶವಿದ್ದು, ಸೆ.6 ಶುಕ್ರವಾರ ಬೆಳಿಗ್ಗೆ 7

ನಾಳೆ (ಸೆ.6) : ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಷಡಾಧಾರ ಪ್ರತಿಷ್ಠೆ ಹಾಗೂ ಶತ ಚಂಡಿಕಾಯಾಗ Read More »

14ರ ಬಾಲಕ ಹಾರಿಸಿದ ಗುಂಡಿಗೆ ಇಬ್ಬರು ಶಿಕ್ಷಕರ ಸಹಿತ 4 ಮಂದಿ ಬಲಿ

ವಾಷಿಂಗ್ಟನ್‌: ಅಮೆರಿಕದ ಜಾರ್ಜಿಯಾ ರಾಜ್ಯದ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರು ಸಾವನ್ನಪ್ಪಿದ್ದಾರೆ. ಒಂಬತ್ತು ಮಂದಿ ಗಾಯಗೊಂಡಿದ್ದಾರೆ.ಬಂದೂಕುಧಾರಿ ಬಾಲಕ ಬಂಧನದಲ್ಲಿದ್ದಾನೆ. ಜಾರ್ಜಿಯಾದ ವಿಂಡರ್‌ನಲ್ಲಿರುವ ಅಪಾಲಾಚಿ ಹೈಸ್ಕೂಲ್‌ನ ಕೋಲ್ಟ್ ಕ್ರೇ (14) ಎಂಬ ವಿದ್ಯಾರ್ಥಿ ಗುಂಡಿನ ದಾಳಿ ನಡೆಸಿದಾತ ಎಂದು ಗುರುತಿಸಲಾಗಿದೆ.ಪೊಲೀಸರು ಗುಂಡಿನ ದಾಳಿ ಮತ್ತು ಅದರ ಹಿಂದಿನ ಉದ್ದೇಶದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ವರ್ಷ ಅಮೆರಿಕದಲ್ಲಿ ಕನಿಷ್ಠ 385 ಗುಂಡಿನ ದಾಳಿ ಪ್ರಕರಣಗಳು ಸಂಭವಿಸಿವೆ.

14ರ ಬಾಲಕ ಹಾರಿಸಿದ ಗುಂಡಿಗೆ ಇಬ್ಬರು ಶಿಕ್ಷಕರ ಸಹಿತ 4 ಮಂದಿ ಬಲಿ Read More »

error: Content is protected !!
Scroll to Top