ಇಂದು ಬುಳೇರಿಕಟ್ಟೆ ಸಾಜ ಕ್ರಾಸ್ ಬಳಿ ನೂತನ ರಿಕ್ಷಾ ತಂಗುದಾಣ ಉದ್ಘಾಟನೆ

ಬಲ್ನಾಡು: ಬುಳರಿಕಟ್ಟೆ ಸಾಜ ಕ್ರಾಸ್ ನೂತನ ರಿಕ್ಷಾ ತಂಗುದಾಣದ ಉದ್ಘಾಟನಾ ಸಮಾರಂಭ ಇಂದು ಸಂಜೆ ನಡೆಯಲಿದೆ. ಸಂಜೆ 6. ಗಂಟೆಗೆ ತಂಗುದಾಣವನ್ನು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅವರ 2023 24ನೇ ಸಾಲಿನ ಸ್ಥಳೀಯ ಪ್ರದೇಶಾಭಿರವೃದ್ಧಿ ಯೋಜನೆ ಅನುದಾನದ ಮೂಲಕ ಸುಮಾರು 4 ಲಕ್ಷ ರೂಪಾಯಿ ವೆಚ್ಚದಲ್ಲಿ ಬುಳರಿಕಟ್ಟೆ ಸಾಜ ಕ್ರಾಸ್ ಬಳಿ ಈ ನೂತನ ತಂಗುದಾಣ ನಿರ್ಮಾಣವಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಬಲ್ನಾಡು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಪರಮೇಶ್ವರಿ […]

ಇಂದು ಬುಳೇರಿಕಟ್ಟೆ ಸಾಜ ಕ್ರಾಸ್ ಬಳಿ ನೂತನ ರಿಕ್ಷಾ ತಂಗುದಾಣ ಉದ್ಘಾಟನೆ Read More »

ರಿಕ್ಷಾ-ದ್ವಿಚಕ್ರ ವಾಹನ ಡಿಕ್ಕಿ : ದ್ವಿಚಕ್ರ ವಾಹನ ಸವಾರ ಮೃತ್ಯು

ಸುಳ್ಯ : ರಿಕ್ಷಾ ಹಾಗೂ ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಪೆರಾಜೆ ಬಳಿಯ ಕಲ್ಮರ್ಪೆ ಎಂಬಲ್ಲಿ ನಡೆದಿದೆ. ಚೆಂಬು ಗ್ರಾಮದ ಕುದ್ರೆಪಾಯ ಬೊಳ್ಳೂರು ಆನಂದ ಎಂಬವರ ಪುತ್ರ ನವೀನ್ (23) ಮೃತಪಟ್ಟವರು. ನವೀನ್ ಖಾಸಗಿ ಕಾಲೇಜಿನ ಐಟಿಐ ವಿದ್ಯಾರ್ಥಿಯಾಗಿದ್ದಾರೆ ಎಂದು ತಿಳಿದುಬಂದಿದೆ

ರಿಕ್ಷಾ-ದ್ವಿಚಕ್ರ ವಾಹನ ಡಿಕ್ಕಿ : ದ್ವಿಚಕ್ರ ವಾಹನ ಸವಾರ ಮೃತ್ಯು Read More »

ಎನ್‌ಆರ್‌ಸಿಗೆ ಅರ್ಜಿ ಸಲ್ಲಿಸದಿದ್ದರೆ ಆಧಾರ್‌ ಸಿಗುವುದಿಲ್ಲ

ಗುವಾಹಟಿ: 2014ರಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಭಾಗವಾಗಲು ಅರ್ಜಿ ಸಲ್ಲಿಸದ ಜನರಿಗೆ ಆಧಾರ್ ಕಾರ್ಡ್‌ಗಳನ್ನು ನೀಡದಿರಲು ಅಸ್ಸಾಂ ಸರ್ಕಾರ ನಿರ್ಧಾರಿಸಿದೆ.ಧುಬ್ರಿ, ಬಾರ್ಪೇಟಾ, ಮೊರಿಗಾಂವ್‌ ಜಿಲ್ಲೆಗಳಲ್ಲಿ ಒಟ್ಟು ಆಧಾರ್‌ ಕಾರ್ಡ್‌ಗಳ ಸಂಖ್ಯೆ ಅಲ್ಲಿನ ಜನಸಂಖ್ಯೆಗಿಂತ ಹೆಚ್ಚಿದೆ. ಈ ಮೂರು ಜಿಲ್ಲೆಗಳಲ್ಲಿ ಮುಸ್ಲಿಂ ಬಹುಸಂಖ್ಯಾತರಾಗಿದ್ದು, ಯೋಜಿತ ಜನಸಂಖ್ಯೆಯ ಅಂಕಿಅಂಶಗಳಿಗೆ ವಿರುದ್ಧವಾಗಿ ನೀಡಲಾದ ಆಧಾರ್ ಕಾರ್ಡ್‌ಗಳ ಶೇಕಡಾವಾರು ಪ್ರಮಾಣವು ಕ್ರಮವಾಗಿ ಧುಬ್ರಿ, ಬಾರ್ಪೇಟಾ ಮತ್ತು ಮೊರಿಗಾಂವ್‌ಗೆ ಶೇ.103, ಶೇ.103 ಮತ್ತು ಶೇ.101 ಆಗಿದೆ. ಆದ್ದರಿಂದಭವಿಷ್ಯದಲ್ಲಿ ಆಧಾರ್ ಕಾರ್ಡ್‌ಗಳ ವಿತರಣೆಗಾಗಿ ಸ್ಟ್ಯಾಂಡರ್ಡ್

ಎನ್‌ಆರ್‌ಸಿಗೆ ಅರ್ಜಿ ಸಲ್ಲಿಸದಿದ್ದರೆ ಆಧಾರ್‌ ಸಿಗುವುದಿಲ್ಲ Read More »

ಜೈಲರ್‌ ವಿಲನ್‌ ವಿನಾಯಕನ್‌ ವಿಮಾನ ನಿಲ್ದಾಣದಲ್ಲಿ ಬಂಧನ

ಹೈದರಾಬಾದ್‌: ರಜನಿಕಾಂತ್‌ ಅಭಿನಯದ ‘ಜೈಲರ್’ ಸಿನಿಮಾದ ವಿಲನ್, ಮಲಯಾಳಂನ ಖ್ಯಾತ ನಟ ವಿನಾಯಕನ್ ಅವರನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ. ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ವಿನಾಯಕನ್ ಅವರನ್ನು ಏರ್​ಪೋರ್ಟ್ ಪೊಲೀಸರು ಬಂಧಿಸಿದ್ದಾರೆ. ಏರ್​ಪೋರ್ಟ್​ ಭದ್ರತೆ ಸಿಬ್ಬಂದಿ (ಸಿಐಎಸ್​ಎಫ್) ನೀಡಿರುವ ದೂರಿನ ಆಧಾರದ ಮೇಲೆ ಎಫ್​ಐಆರ್ ದಾಖಲಾಗಿದೆ. ಗೋವಾಕ್ಕೆ ಹೋಗುತ್ತಿದ್ದ ವಿನಾಯಕನ್, ಕನೆಕ್ಟಿಂಗ್ ಫ್ಲೈಟ್​ ಹತ್ತಲೆಂದು ಹೈದರಾಬಾದ್​ನಲ್ಲಿ ಇಳಿದಾಗ ವಿಮಾನ ನಿಲ್ದಾಣದ ಸಿಐಎಸ್​ಎಫ್ ಸಿಬ್ಬಂದಿಯೊಂದಿಗೆ ಜಗಳವಾಡಿ, ಹಲ್ಲೆ ಮಾಡಿದ್ದಾರೆ ಎಂದು

ಜೈಲರ್‌ ವಿಲನ್‌ ವಿನಾಯಕನ್‌ ವಿಮಾನ ನಿಲ್ದಾಣದಲ್ಲಿ ಬಂಧನ Read More »

ಸಾಧನೆಗೆ ಯಾವ ವೈಕಲ್ಯವೂ ಅಡ್ಡಿ ಆಗಲಿಲ್ಲ – ಮರಿಯಪ್ಪನ್ ತಂಗವೇಲು

ಸತತ 3 ಪಾರಾ ಒಲಿಂಪಿಕ್ಸ್ ಕೂಟಗಳಲ್ಲಿ ಪದಕ ಗೆದ್ದ ಏಕೈಕ ಕ್ರೀಡಾಪಟು 2024ರ ಪ್ಯಾರಿಸ್ ಪಾರಾ ಒಲಿಂಪಿಕ್ಸ್ ಕೂಟದಲ್ಲಿ ಭಾರತ ಇದುವರೆಗಿನ ಎಲ್ಲ ದಾಖಲೆಗಳನ್ನು ಮುರಿದು ಹೊಸ ದಾಖಲೆಗಳನ್ನು ಬರೆದಿದೆ. ಈ ಲೇಖನ ಬರೆದು ಮುಗಿಸುವ ಹೊತ್ತಿಗೆ ಭಾರತದ ಪದಕ ಟ್ಯಾಲಿಯು 27ಕ್ಕೆ ತಲುಪಿದೆ. ಅದರಲ್ಲಿ 6 ಚಿನ್ನ, 9 ಬೆಳ್ಳಿ ಮತ್ತು 12 ಕಂಚಿನ ಪದಕಗಳು ಸೇರಿವೆ. 12 ಕ್ರೀಡಾ ವಿಭಾಗಗಳಲ್ಲಿ ಕೇವಲ 84 ಪಾರಾ ಅಥ್ಲಿಟ್‌ಗಳು ಭಾಗವಹಿಸಿ ಇಷ್ಟೊಂದು ಪದಕಗಳನ್ನು ಗೆದ್ದದ್ದು ನಿಜಕ್ಕೂ ಅದ್ಭುತ

ಸಾಧನೆಗೆ ಯಾವ ವೈಕಲ್ಯವೂ ಅಡ್ಡಿ ಆಗಲಿಲ್ಲ – ಮರಿಯಪ್ಪನ್ ತಂಗವೇಲು Read More »

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 58ನೇ ವರ್ಷದ ಶ್ರೀ ಗಣೇಶೋತ್ಸವಕ್ಕೆ ಚಾಲನೆ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಶ್ರೀ ಮಹಾಲಿಂಗೇಶ್ವರ ವಠಾರದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ 58ನೇ ವರ್ಷದ ಶ್ರೀ ಗಣೇಶೋತ್ಸವಕ್ಕೆ ಶನಿವಾರ ಶ್ರೀ ಗಣೇಶನ ಮೂರ್ತಿ ಪ್ರತಿಷ್ಠೆ ಮೂಲಕ ಚಾಲನೆ ನೀಡಲಾಯಿತು. ಶನಿವಾರ ಬೆಳಿಗ್ಗೆ 8 ಕ್ಕೆ ಭಜನೆ ನಡೆಯಿತು. 8.30 ಕ್ಕೆ ಶ್ರೀ ದೇವರ ಪ್ರತಿಷ್ಠೆ ನಡೆಯಿತು. ಬಳಿಕ ಧ್ವಜಾರೋಹಣವನ್ನು ಉದ್ಯಮಿ ವಾಮನ್ ಪೈ ನೆರವೇರಿಸಿದರು. ಮಧ್ಯಾಹ್ನ 11.30 ಕ್ಕೆ ಗಣಪತಿ ಹವನ, ಮಹಾಪೂಜೆ, ಪ್ರಸಾದ ವಿತರಣೆಯಾಗಿ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 58ನೇ ವರ್ಷದ ಶ್ರೀ ಗಣೇಶೋತ್ಸವಕ್ಕೆ ಚಾಲನೆ Read More »

ಭೀಕರ ಕಾರು ಅಪಘಾತ | ನವವಿವಾಹಿತೆ ಮೃತ್ಯು

ಬಿ.ಸಿ.ರೋಡ್ : ನವ ದಂಪತಿಗಳು ಇಬ್ಬರು ಪ್ರಯಾಣಿಸುತ್ತಿದ್ದ ಕಾರು  ಬೀಕರ  ಅಪಘಾತದಲ್ಲಿ ನವವಿವಾಹಿತೆ ಮೃತಪಟ್ಟು, ಪತಿ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ರಸ್ತೆಯ ಬಂಟ್ವಾಳದ ತಲಪಾಡಿ ಎಂಬಲ್ಲಿ ನಡೆದಿದೆ. ಪೆರ್ನೆ ಸಮೀಪದ ಒಡ್ಯದಗಯ ನಿವಾಸಿ ಅನಿಶ್ ಕೃಷ್ಣ ಎಂಬವರ ಪತ್ನಿ ಮಾನಸ  ಸಾವನ್ನಪ್ಪಿದ ನವವಿವಾಹಿತೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಅನಿಶ್ ಕೃಷ್ಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಬಿಸಿರೋಡಿನ ಕಡೆಯಿಂದ ‌ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ದವದಂಪತಿಗಳ ಆಲ್ಟೋ ಕಾರು ನಿಯಂತ್ರಣ ಕಳೆದುಕೊಂಡು

ಭೀಕರ ಕಾರು ಅಪಘಾತ | ನವವಿವಾಹಿತೆ ಮೃತ್ಯು Read More »

ಗಂಡನ ನಡೆಗೆ ಬೇಸತ್ತು ಹೆಂಡತಿ ಆತ್ಮಹತ್ಯೆ !

ಬೆಂಗಳೂರು: ಹೆಂಡತಿಗೆ ಪ್ರತಿನಿತ್ಯ ಅಶ್ಲೀಲ ವೀಡಿಯೋ ತೋರಿಸಿ ಕಿರುಕುಳ ನೀಡುತ್ತಿದ್ದ ಪರಿಣಾಮ ಬೇಸತ್ತು ಹೆಂಡತಿ ಪೆಟ್ರೋಲ್  ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹುಳಿಮಾವು ಅಕ್ಷಯನಗರದಲ್ಲಿ ನಡೆದಿದೆ. ಅನುಷಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಈಕೆಯ ಪತಿ ಶ್ರೀಹರಿ ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋ ತೋರಿಸಿ ಹೀಗೆ ಸಹಕರಿಸು ಎಂದು ಟಾರ್ಚರ್ ಕೊಡುತ್ತಿದ್ದ. ಅಲ್ಲದೇ ಆಕೆಯ ಮುಂದೆಯೇ ಇನ್ನೊಂದು ಹುಡುಗಿಯ ಜೊತೆ ಸಲುಗೆ ಬೆಳೆಸಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಹೆಂಡತಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಎರಡು ತಿಂಗಳಿಂದ ಡೈವರ್ಸ್ ಕೊಡುವಂತೆ ಪೀಡಿಸುತ್ತಿದ್ದ.

ಗಂಡನ ನಡೆಗೆ ಬೇಸತ್ತು ಹೆಂಡತಿ ಆತ್ಮಹತ್ಯೆ ! Read More »

ಜಗತ್ತು ಕಂಡ ಶ್ರೇಷ್ಟ ತತ್ವಶಾಸ್ತ್ರಜ್ಞ ಡಾ.ರಾಧಾಕೃಷ್ಣನ್‌ ರವರು-ಡಾ.ತುಕಾರಾಂ ಪೂಜಾರಿ | ಅಕ್ಷಯ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ | ಸಾಧಕ ಶಿಕ್ಷಕರಿಗೆ ಗುರು ಪುರಸ್ಕಾರ, ಗೌರವ ಸಮ್ಮಾನ

ಪುತ್ತೂರು: ಓರ್ವ ರಾಯಭಾರಿಯಾಗಿ, ಅಧ್ಯಾಪಕನಾಗಿ, ರಾಜನೀತಿ ನಿಪುಣನಾಗಿ, ಎಲ್ಲರಿಗೂ ಅಚ್ಚುಮೆಚ್ಚಿನವರಾಗಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರವರು ಗುರುತಿಸಿಕೊಂಡಿದ್ದರು. ವಿದ್ಯಾರ್ಥಿಗಳ ಹೃದಯವನ್ನು ತಟ್ಟುವಲ್ಲಿ ಅವರು ನಿಸ್ಸೀಮರಾಗಿದ್ದರು ಮಾತ್ರವಲ್ಲ ಜಗತ್ತು ಕಂಡ ಅತೀ ಶ್ರೇಷ್ಟ ತತ್ವಶಾಸ್ತ್ರಜ್ಞರವರಲ್ಲಿ ಡಾ.ರಾಧಾಕೃಷ್ಣನ್‌ರವರೂ ಕೂಡ ಓರ್ವರಾಗಿದ್ದರು ಎಂದು ಬಂಟ್ವಾಳ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಂ ಪೂಜಾರಿರವರು ಹೇಳಿದರು. ಸಂಪ್ಯದ ಅಕ್ಷಯ ಎಜ್ಯಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್‌ ನಡಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಸಾಧಕ ಶಿಕ್ಷಕರಿಗೆ ಗುರು ಪುರಸ್ಕಾರ

ಜಗತ್ತು ಕಂಡ ಶ್ರೇಷ್ಟ ತತ್ವಶಾಸ್ತ್ರಜ್ಞ ಡಾ.ರಾಧಾಕೃಷ್ಣನ್‌ ರವರು-ಡಾ.ತುಕಾರಾಂ ಪೂಜಾರಿ | ಅಕ್ಷಯ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ | ಸಾಧಕ ಶಿಕ್ಷಕರಿಗೆ ಗುರು ಪುರಸ್ಕಾರ, ಗೌರವ ಸಮ್ಮಾನ Read More »

ನರಿಮೊಗರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಾಗೇಶ್‍ ನಾಯಕ್ ನಿಧನ

ಪುತ್ತೂರು: ನರಿಮೊಗರು ಗ್ರಾಮದ ಸೇರಾಜೆ ರಾಮಣ್ಣ ನಾಯಕ್ ರ ಪುತ್ರ, ನರಿಮೊಗರು ಗ್ರಾ.ಪಂ ಮಾಜಿ ಸದಸ್ಯರು, ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪವಾ ಸಮಿತಿ ಮಾಜಿ ಸದಸ್ಯ ನಾಗೇಶ್ ನಾಯಕ್ (63.) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ನರಿಮೊಗರಿನಲ್ಲಿ ಅನುಗ್ರಹ ಸ್ಟೋರ್ಸ್ ಅಂಗಡಿ ಹಾಗೂ ಬೀಡಿ ಬ್ರಾಂಚ್ ನಡೆಸುತ್ತಿದ್ದರು. ಅವರು ಎಪಿಎಂಸಿ ಮಾಜಿ ನಿರ್ದೇಶಕ, ನರಿಮೊಗರು ಗ್ರಾ.ಪಂ ಮಾಜಿ ಸದಸ್ಯ, ಮುಂಡೂರು ಶ್ರೀಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರು ಸೇರಿದಂತೆ ವಿವಿಧ ಸಾಮಾಜಿಕ, ಧಾರ್ಮಿಕ

ನರಿಮೊಗರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಾಗೇಶ್‍ ನಾಯಕ್ ನಿಧನ Read More »

error: Content is protected !!
Scroll to Top