ಚಾಲಕನ ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ಬಿದ್ದ ಕಾರು : ಮಹಿಳೆ ಮೃತ್ಯು, ಚಾಲಕ ಗಂಭೀರ

ವಿಟ್ಲ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಅಡಿಕೆ ತೋಟಕ್ಕೆ ಬಿದ್ದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟ ಘಟನೆ ಬಿ.ಸಿ.ರೋಡು ಬೆಳ್ತಂಗಡಿ ರಾಜ್ಯ ಹೆದ್ದಾರಿಯ ಬಾಂಬಿಲ ಎಂಬಲ್ಲಿ ನಡೆದಿದೆ. ಕೋಡಿಯಾಲ್ ಬೈಲು ನಿವಾಸಿ ಭಾಗೀರಥಿ (58) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಭಾಗೀರಥಿ ಅವರು ಮಂಗಳೂರು ಕೊಡಿಯಾಲ್ ಬೈಲು ನಿವಾಸಿ ಪಿಡಬ್ಲೂಡಿ ಇಂಜಿನಿಯರ್ ಗೋಪಾಲರವರ ಸಹೋದರಿ ಎನ್ನಲಾಗಿದೆ. ಚಾಲಕ ರೂಪೇಶ್ (40) ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ರೂಪೇಶ್ ಅವರ ಪತ್ನಿ ಸುಚಿತ್ರ […]

ಚಾಲಕನ ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ಬಿದ್ದ ಕಾರು : ಮಹಿಳೆ ಮೃತ್ಯು, ಚಾಲಕ ಗಂಭೀರ Read More »

ಅ.17 : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪ್ರಸ್ತುತಪಡಿಸುವ “ನೃತ್ಯೋತ್ಕ್ರಮಣ-2024” | ಯುಗಳ ನೃತ್ಯ- ಕಲಾದೀಪ ನೃತ್ಯ ದಂಪತಿ ವಿದ್ವಾನ್ ದೀಪಕ್ ಕುಮಾರ್ ಹಾಗೂ ವಿದುಷಿ ಪ್ರೀತಿಕಲಾ ಅವರಿಂದ ನೃತ್ಯ ಪ್ರದರ್ಶನ

ಪುತ್ತೂರು: ನಗರದ ದರ್ಬೆಯಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪ್ರಸ್ತುತಪಡಿಸುವ “ನೃತ್ಯೋತ್ಕ್ರಮಣ-2024” ಅ.17 ಗುರುವಾರ ಸಂಜೆ 5.30 ರಿಂದ ಪುತ್ತೂರು ಪುರಭವನದಲ್ಲಿ ನಡೆಯಲಿದೆ ಎಂದು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯಗುರು ವಿದ್ವಾನ್ ದೀಪಕ್ ಕುಮಾರ್ ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ ವಿವರ ನೀಡಿ, ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತರಾದ ಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್ ದೀಪ ಪ್ರಜ್ವಲನೆ ಮಾಡುವರು. ಮುಖ್ಯ ಅತಿಥಿಯಾಗಿ ಮೂಡಬಿದ್ರೆ ಆಳ್ವಾಸ್

ಅ.17 : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪ್ರಸ್ತುತಪಡಿಸುವ “ನೃತ್ಯೋತ್ಕ್ರಮಣ-2024” | ಯುಗಳ ನೃತ್ಯ- ಕಲಾದೀಪ ನೃತ್ಯ ದಂಪತಿ ವಿದ್ವಾನ್ ದೀಪಕ್ ಕುಮಾರ್ ಹಾಗೂ ವಿದುಷಿ ಪ್ರೀತಿಕಲಾ ಅವರಿಂದ ನೃತ್ಯ ಪ್ರದರ್ಶನ Read More »

ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ: ಇನ್ನೋರ್ವ ಆರೋಪಿ ಸೆರೆ

ಮುಂಬಯಿ: ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಮೂರನೇ ಆರೋಪಿಯನ್ನು ಪೊಲೀಸರು ಭಾನುವಾರ ರಾತ್ರಿ ಪುಣೆಯಲ್ಲಿ ಬಂಧಿಸಿದ್ದಾರೆ. ಮೂವರು ಶೂಟರ್‌ಗಳ ಪೈಕಿ ಈತ ತನ್ನ ಸಹೋದರನೊಂದಿಗೆ ಸೇರಿಕೊಂಡು ಹತ್ಯೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ. ಬಂಧಿತ ಆರೋಪಿಯನ್ನು ಪುಣೆಯ ಪ್ರವೀಣ್ ಲೋಂಕರ್ (28) ಎಂದು ಗುರುತಿಸಲಾಗಿದೆ. ತಲೆಮರೆಸಿಕೊಂಡಿರುವ ಈತನ ಸಹೋದರ ಶುಭಂ ಲೋಂಕರ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಇದು ಮೂರನೇ ಬಂಧನವಾಗಿದೆ. ಇಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ. ಬಂಧಿತರನ್ನು ಹರ್ಯಾಣದ ಗುರ್ಮೈಲ್ ಬಲ್ಜಿತ್

ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ: ಇನ್ನೋರ್ವ ಆರೋಪಿ ಸೆರೆ Read More »

ಚಾರ್ಮಾಡಿ ಘಾಟಿಗೆ ಕಾದಿದೆ ಅಪಾಯ : ಜಿಯೋಲಾಜಿಕಲ್‌ ಸರ್ವೆ ವರದಿ ಎಚ್ಚರಿಕೆ

ಅವೈಜ್ಞಾನಿಕ ಕಾಮಗಾರಿ, ವಾಹನ ದಟ್ಟಣೆಯಿಂದ ಆಗಾಗ ಭೂ ಕುಸಿತ ಚಿಕ್ಕಮಗಳೂರು : ಮುಳ್ಳಯ್ಯನಗಿರಿ, ಚಂದ್ರದ್ರೋಣ ಪರ್ವತ ಸಾಲು, ಚಾರ್ಮಾಡಿ ಘಾಟಿ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಬೆಟ್ಟ ಪ್ರದೇಶಗಳು ಅಪಾಯವನ್ನು ಎದುರಿಸುತ್ತಿವೆ ಎಂದು ಜಿಯೋಲಾಜಿಕಲ್‌ ಸರ್ವೆ ಆಫ್‌ ಇಂಡಿಯಾ ವರದಿ ತಿಳಿಸಿದೆ. ಈ ಮಳೆಗಾಲದಲ್ಲಿ ಚಾರ್ಮಾಡಿ ಘಾಟಿಯಲ್ಲಿ ಪದೇಪದೆ ಭೂಕುಸಿತ ಸಂಭವಿಸಿ ಮಂಗಳೂರು-ಬೆಂಗಳೂರು ನಡುವಿನ ಸಂಚಾರಕ್ಕೆ ಆಗಾಗ ತೊಡಕುಂಟಾಗಿತ್ತು. ಈ ಹಿನ್ನೆಲೆಯಲ್ಲಿ ಜಿಯೋಲಾಜಿಕಲ್‌ ಸರ್ವೆ ಆಫ್‌ ಇಂಡಿಯಾ ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಪಶ್ಚಿಮ ಘಟ್ಟದ ಅಧ್ಯಯನ ನಡೆಸಿ ವರದಿ ನೀಡಿದೆ.

ಚಾರ್ಮಾಡಿ ಘಾಟಿಗೆ ಕಾದಿದೆ ಅಪಾಯ : ಜಿಯೋಲಾಜಿಕಲ್‌ ಸರ್ವೆ ವರದಿ ಎಚ್ಚರಿಕೆ Read More »

ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಮಹಿಳೆ ಹತ್ಯೆಗೆ ಯತ್ನ : ಪ್ರಕರಣ ದಾಖಲು

ಸುಳ್ಯ: ಮಹಿಳೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕಲ್ಕರ್ವೆ ಜಯಭಾರತಿ (56) ಅವರ ಕೊಲೆಗೆ ಯತ್ನಿಸಲಾಗಿದೆ ಎಂದು ತಿಳಿದು ಬಂದಿದೆ. ಜಯಭಾರತಿ  ಮನೆಯಲ್ಲಿ ಶನಿವಾರ ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಮಹಿಳೆಯ ಬಾವ ಶಂಕರ ಎಂಬವರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಗಂಭೀರ ಗಾಯಗೊಂಡಿರುವ ಮಹಿಳೆಯನ್ನು ಸಂಬಂಧಿಕರು ಸುಳ್ಯದ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಮಹಿಳೆ ಹತ್ಯೆಗೆ ಯತ್ನ : ಪ್ರಕರಣ ದಾಖಲು Read More »

ಗುಜರಾತ್‌ನಲ್ಲಿ 5000 ಕೋ.ರೂ. ಮೌಲ್ಯದ ಕೊಕೇನ್‌ ವಶ

ಹೊಸದಿಲ್ಲಿ : ದಿಲ್ಲಿಯ ಬಳಿಕ ಈಗ ಗುಜರಾತ್‌ನಲ್ಲಿ ಭಾರಿ ಪ್ರಮಾಣದ ಮಾದಕ ವಸ್ತು ವಶವಾಗಿದೆ. ಗುಜರಾತಿನ ಅಂಕಲೇಶ್ವರ ನಗರದ ಗೋದಾಮೊಂದರಿಂದ ಪೊಲೀಸರು 5000 ಕೋ. ರೂ. ಬೆಲೆಬಾಳುವ ಕೊಕೇನ್‌ ಡ್ರಗ್‌ ವಶಪಡಿಸಿಕೊಂಡಿದ್ದಾರೆ. ದಿಲ್ಲಿ ಮತ್ತು ಗುಜರಾತ್‌ ಪೊಲೀಸರು ಆವ್ಕರ್‌ ಡ್ರಗ್ಸ್‌ ಲಿಮಿಟೆಡ್‌ ಕಂಪನಿಯ ಗೋದಾಮಿಗೆ ಖಚಿತ ಮಾಹಿತಿಯ ಆಧಾರದಲ್ಲಿ ದಾಳಿ ಮಾಡಿದಾಗ 518 ಕೆಜಿ ಕೊಕೇನ್‌ ವಶವಾಗಿದೆ. ಇದರ ಈಗಿನ ಮಾರುಕಟ್ಟೆ ಮೌಲ್ಯ 5000 ಕೋ.ರೂ.ಗೂ ಹೆಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲದಿನಗಳ ಹಿಂದೆಯಷ್ಟೇ ದಿಲ್ಲಿ ಪೊಲೀಸರು

ಗುಜರಾತ್‌ನಲ್ಲಿ 5000 ಕೋ.ರೂ. ಮೌಲ್ಯದ ಕೊಕೇನ್‌ ವಶ Read More »

ನ.1ರಂದು ಕನ್ನಡ ಬಾವುಟ ಹಾರಿಸುವುದು ಕಡ್ಡಾಯ

ಧ್ವಜಗಳಿಗೆ ಈಗಲೇ ಭಾರಿ ಬೇಡಿಕೆ ಬೆಂಗಳೂರು: ಈ ಬಾರಿ ರಾಜ್ಯೋತ್ಸವ ದಿನವಾದ ನವಂಬರ್‌ 1ರಂದು ಎಲ್ಲೆಡೆ ಕಡ್ಡಾಯವಾಗಿ ಕನ್ನಡ ಧ್ವಜ ಹಾರಿಸಬೇಕೆಂದು ಸರಕಾರ ಆದೇಶಿಸಿದೆ. ಇದರಿಂದಾಗಿ ಧ್ವಜ ತಯಾರಿಸುವವರಿಗೆ ಈಗಾಗಲೇ ಭಾರಿ ಬೇಡಿಕೆ ಬರಲಾರಂಭಿಸಿದೆ. ಅಂತೆಯೇ ಧ್ವಜದ ಬೆಲೆಯೂ ತುಸು ಹೆಚ್ಚಾಗಿದೆ. ಎಲ್ಲ ಶಾಲಾ, ಕಾಲೇಜುಗಳು, ಕಾರ್ಖಾನೆಗಳು ಮತ್ತು ಐಟಿಬಿಟಿ ಕಂಪನಿಗಳು, ಸರಕಾರಿ, ಖಾಸಗಿ ಸಂಸ್ಥೆಗಳು ಕನ್ನಡ ಬಾವುಟವನ್ನು ಕಡ್ಡಾಯವಾಗಿ ಹಾರಿಸಲೇಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಜೊತೆಗೆ ಈ ಬಾರಿ

ನ.1ರಂದು ಕನ್ನಡ ಬಾವುಟ ಹಾರಿಸುವುದು ಕಡ್ಡಾಯ Read More »

ಕಾಡುಕೋಣ ಬೇಟೆ | ಉಪ್ಪಿನಂಗಡಿ ಅರಣ್ಯಾಧಿಕಾರಿಗಳ ತಂಡದಿಂದ ಪತ್ತೆ | ಆರೋಪಿಗಳು ಪರಾರಿ

ಉಪ್ಪಿನಂಗಡಿ : ವಲಯ ಅರಣ್ಯ ವ್ಯಾಪ್ತಿಯ ಮೀಸಲು ಅರಣ್ಯ ಪ್ರದೇಶದಲ್ಲಿ ಹಾಡಹಗಲೇ ನಾಲ್ವರು ಬೇಟೆಗಾರರ ತಂಡ ಭಾರೀ ಗಾತ್ರದ ಕಾಡುಕೋಣವನ್ನು ಕೊಂದು ಒಣ ಮಾಂಸವನ್ನಾಗಿ ಪರಿವರ್ತಿಸಿದ ಘಟನೆಯನ್ನು ಉಪ್ಪಿನಂಗಡಿ ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿದೆ. ನಿಡ್ಲೆ ಗ್ರಾಮದ ಬೂಡುಜಾಲಿನಲ್ಲಿ ಮೀಸಲು ಅರಣ್ಯದ ಅಂಚಿನಲ್ಲಿರುವ ತೋಟದಲ್ಲಿ ಕಾಡುಕೋಣವೊಂದನ್ನು ಗುಂಡಿಕ್ಕಿ ಕೊಂದು ಕಾಡಿನಲ್ಲೇ ಕತ್ತರಿಸಿ ಪಿಕಪ್ ವಾಹನದ ಮೂಲಕ ಸಾಗಿಸಿರುವ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ಬೂಡುಜಾಲು ಅರಣ್ಯ ಅಂಚಿನಲ್ಲಿ ಇರುವ ತೋಟಕ್ಕೆ ಬೃಹತ್ ಗಾತ್ರದ ಕಾಡುಕೋಣ ಬರುತ್ತಿತ್ತೆನ್ನಲಾಗಿದ್ದು, ಇದಕ್ಕಾಗಿ

ಕಾಡುಕೋಣ ಬೇಟೆ | ಉಪ್ಪಿನಂಗಡಿ ಅರಣ್ಯಾಧಿಕಾರಿಗಳ ತಂಡದಿಂದ ಪತ್ತೆ | ಆರೋಪಿಗಳು ಪರಾರಿ Read More »

ಜೀವನದಲ್ಲಿ ಈ ತಪ್ಪುಗಳನ್ನು ತಪ್ಪಿಯೂ ಮಾಡಬೇಡಿ!

ತಪ್ಪು ರಿಪೀಟ್ ಆದರೆ ನಾವು ಜನರ ವಿಶ್ವಾಸ ಕಳೆದುಕೊಳ್ಳುತ್ತೇವೆ ಮಹಾತ್ಮಾ ಗಾಂಧೀಜಿ ಸಪ್ತ ಮಹಾಪಾತಕಗಳ ಬಗ್ಗೆ ಹೇಳಿದ್ದರು. ಆ ಏಳು ಪಾತಕಗಳು ಇಂದಿಗೂ ಪ್ರಸ್ತುತವಾಗಿವೆ. ಮುಂದೆಯೂ ಪ್ರಸ್ತುತವೇ ಆಗಿರುತ್ತವೆ. ಅವುಗಳು ಸಾರ್ವಕಾಲಿಕ ಸತ್ಯಗಳು. ಪ್ರಮಾದಗಳು, ತಪ್ಪುಗಳು, ಪಾಪಗಳು ಮತ್ತು ಪಾತಕಗಳು ಗೊತ್ತಿಲ್ಲದೆ ಮಾಡುವ ತಪ್ಪುಗಳು ಪ್ರಮಾದಗಳು. ಅವುಗಳಿಗೆ ಕ್ಷಮೆ ಇದೆ. ಗೊತ್ತಿದ್ದೂ ಮಾಡುವುದು ತಪ್ಪುಗಳು. ಆ ತಪ್ಪುಗಳಿಗೆ ಕ್ಷಮೆ ಕೇಳಿ ಒಮ್ಮೆ ತಪ್ಪಿಸಿಕೊಳ್ಳಬಹುದು. ಆದರೆ ಕ್ಷಮಿಸುವ ಅಧಿಕಾರ ನಿಮ್ಮ ತಪ್ಪುಗಳಿಂದ ನೊಂದವರಿಗೆ ಮಾತ್ರ ಇರುತ್ತದೆ. ಅದೇ ತಪ್ಪು

ಜೀವನದಲ್ಲಿ ಈ ತಪ್ಪುಗಳನ್ನು ತಪ್ಪಿಯೂ ಮಾಡಬೇಡಿ! Read More »

ವಿಧಾನ ಪರಿಷತ್ ಉಪಚುನಾವಣೆ : ಪುತ್ತೂರಿನಲ್ಲಿ ಜನಪ್ರತಿನಿಧಿ, ಕಾರ್ಯಕರ್ತರ ಸಮಾವೇಶ | ಈ ಬಾರಿಯ ಉಪಚುನಾವಣೆ ಕರ್ನಾಟಕಕ್ಕೆ ದಿಕ್ಸೂಚಿ ನೀಡುವ ಚುನಾವಣೆ : ಕ್ಯಾ.ಬ್ರಿಜೇಶ್‍ ಚೌಟ

ಪುತ್ತೂರು: ಈ ಬಾರಿಯ ವಿಧಾನ ಪರಿಷತ್ ಉಪಚುನಾವಣೆ ಕರ್ನಾಟಕಕ್ಕೆ ದಿಕ್ಸೂಚಿ ಕೊಡುವಂತಹ ಚುನಾವಣೆ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿಕೊಡಬೇಕು ಎಂದು ದ.ಕ.ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್‍ ಚೌಟ ಹೇಳಿದರು. ಅವರು ಭಾನುವಾರ ನಗರದ ಜೈನಭವನದಲ್ಲಿ ವಿಧಾನಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ಕಾರ್ಯಕರ್ತರಿಗಾಗಿ, ಕಾರ್ಯಕರ್ತರಿಂದ ಕಾರ್ಯಕರ್ತರನ್ನು ಆರಿಸುವ ಚುನಾವಣೆ ಇದಾಗಿದ್ದು, ಈ ಸ್ಥಾನಕ್ಕೆ ನ್ಯಾಯ ನೀಡಿರುವ ಕೋಟಾ ಶ್ರೀನಿವಾಸ ಪೂಜಾರಿ ಸ್ಥಾನಕ್ಕೆ, ಸ್ಥಳೀಯ ಜನಪ್ರತಿನಿಧಿಗಳ ಸಮಸ್ಯೆಗಳಿಗೆ ಧ್ವನಿವಾಗಲು ಕಿಶೋರ್

ವಿಧಾನ ಪರಿಷತ್ ಉಪಚುನಾವಣೆ : ಪುತ್ತೂರಿನಲ್ಲಿ ಜನಪ್ರತಿನಿಧಿ, ಕಾರ್ಯಕರ್ತರ ಸಮಾವೇಶ | ಈ ಬಾರಿಯ ಉಪಚುನಾವಣೆ ಕರ್ನಾಟಕಕ್ಕೆ ದಿಕ್ಸೂಚಿ ನೀಡುವ ಚುನಾವಣೆ : ಕ್ಯಾ.ಬ್ರಿಜೇಶ್‍ ಚೌಟ Read More »

error: Content is protected !!
Scroll to Top