ವಿಧಾನ ಪರಿಷತ್ ಉಪಚುನಾವಣೆ | ಉಜಿರೆ, ಬೆಳಾಲು, ಕಳಿಯ ಗ್ರಾಮ ಪಂಚಾಯಿತಿಯಲ್ಲಿ ಚುನಾವಣಾ ಪ್ರಚಾರ ಸಭೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಪರವಾಗಿ ಉಜಿರೆ, ಬೆಳಾಲು ಹಾಗೂ ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತಯಾಚನೆ ಹಾಗೂ ಚುನಾವಣಾ ಸಭೆ ನಡೆಸಲಾಯಿತು. ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಮತದಾನ ಎನ್ನುವುದು ದೇಶದ ಸಂವಿಧಾನ ನಮಗೆ ಕಲ್ಪಿಸಿದ ಹಕ್ಕು. ಚುನಾವಣೆಯ ದಿನ ನಮ್ಮ ಕರ್ತವ್ಯ ನಿರ್ವಹಿಸಲು ಕಡ್ಡಾಯ ಮತದಾನ ಮಾಡಬೇಕು. ಸ್ಥಳೀಯ ಪ್ರಾಧಿಕಾರದ ಉಪ ಚುನಾವಣೆಯ ದಿನ ಎಲ್ಲಾ […]

ವಿಧಾನ ಪರಿಷತ್ ಉಪಚುನಾವಣೆ | ಉಜಿರೆ, ಬೆಳಾಲು, ಕಳಿಯ ಗ್ರಾಮ ಪಂಚಾಯಿತಿಯಲ್ಲಿ ಚುನಾವಣಾ ಪ್ರಚಾರ ಸಭೆ Read More »

ಟರ್ಫ್ ಕ್ಲಬ್ ಮೆಂಬರ್‌ಶಿಪ್‌ ಕೊಡಿಸಲು ಲಂಚ ಪಡೆದ ಸಿದ್ದರಾಮಯ್ಯ : ಶೋಭಾ ಕರಂದ್ಲಾಜೆ ಆರೋಪ

ಬೆಂಗಳೂರು: ನಗರದ ಟರ್ಫ್ ಕ್ಲಬ್ ಮೆಂಬರ್‌ಶಿಪ್‌ ಕೊಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಲಂಚ ಪಡೆದಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಟರ್ಫ್ ಕ್ಲಬ್‌ನಲ್ಲಿ ವಿವೇಕಾನಂದ ಎನ್ನುವವರಿಗೆ ಸದಸ್ಯತ್ವ (ಸ್ಟುವರ್ಟ್) ಕೊಡಿಸೋಕೆ 1.30 ಕೋಟಿ ರೂ. ಹಣ ಸಿದ್ದರಾಮಯ್ಯ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಚೆಕ್‌ನಲ್ಲಿ ಈ ಹಣ ಪಡೆದಿದ್ದಾರೆ. ಈ‌ ಸಂಬಂಧ ಪೊಲೀಸರು ಬಿ ರಿಪೋರ್ಟ್ ಹಾಕಿದ್ರು. ಇದಕ್ಕೆ ಕೋರ್ಟ್ ಛೀಮಾರಿ ಹಾಕಿದೆ. ಈ

ಟರ್ಫ್ ಕ್ಲಬ್ ಮೆಂಬರ್‌ಶಿಪ್‌ ಕೊಡಿಸಲು ಲಂಚ ಪಡೆದ ಸಿದ್ದರಾಮಯ್ಯ : ಶೋಭಾ ಕರಂದ್ಲಾಜೆ ಆರೋಪ Read More »

ಪ್ರಹ್ಲಾದ ಜೋಶಿ ಸಹೋದರ-ಸಹೋದರಿ ವಿರುದ್ಧ 2 ಕೋಟಿ ರೂ. ವಂಚನೆ ದೂರು

ನನಗೆ ಸಹೋದರಿಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ ಜೋಶಿ ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಆರೋಪದ ಮೇಲೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ, ಸಹೋದರಿ ವಿಜಯಲಕ್ಷ್ಮೀ ಜೋಶಿ ಸೇರಿ ಮೂವರ ವಿರುದ್ಧ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ, ಸಹೋದರಿ ವಿಜಯಲಕ್ಷ್ಮಿ ಜೋಶಿ ಹಾಗೂ ಗೋಪಾಲ್ ಜೋಶಿ ಮಗ ಅಜಯ್ ಜೋಶಿ ಭರವಸೆ ನೀಡಿ ಎರಡು ಕೋಟಿ ರೂಪಾಯಿ

ಪ್ರಹ್ಲಾದ ಜೋಶಿ ಸಹೋದರ-ಸಹೋದರಿ ವಿರುದ್ಧ 2 ಕೋಟಿ ರೂ. ವಂಚನೆ ದೂರು Read More »

ಮುಡಾದ ಪ್ರಮುಖ ದಾಖಲೆಪತ್ರಗಳೇ ನಾಪತ್ತೆ

ಇ.ಡಿ. ಪರಿಶೀಲನೆ ವೇಳೆ ಭೂ ದಾಖಲೆಗಳು ನಾಪತ್ತೆಯಾಗಿರುವುದು ಬಯಲು ಬೆಂಗಳೂರು: ಮುಡಾ ಸೈಟ್ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಅಚ್ಚರಿದಾಯಕ ಸುದ್ದಿ ಹೊರಬಿದ್ದಿದೆ. ಮೈಸೂರಿನ ಮುಡಾ ಕಚೇರಿಯಲ್ಲಿ ಇ.ಡಿ ಅಧಿಕಾರಿಗಳ ದಾಳಿ ವೇಳೆ 1992ರ ಪ್ರಮುಖ ದಾಖಲೆಯೇ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಬಹುಕೋಟಿ ಹಗರಣ ಪ್ರಕರಣದಲ್ಲಿ ಶುಕ್ರವಾರ ಮುಡಾ ಕಚೇರಿ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ

ಮುಡಾದ ಪ್ರಮುಖ ದಾಖಲೆಪತ್ರಗಳೇ ನಾಪತ್ತೆ Read More »

ವಿದ್ಯಾಮಾತಾ ಅಕಾಡೆಮಿಯಲ್ಲಿ ರಾಷ್ಟ್ರೀಯ ಮಿಲಿಟರಿ ಶಾಲಾ (RMS) ಪ್ರವೇಶ ಪರೀಕ್ಷೆಯ ಪೂರ್ವ ಸಿದ್ದತಾ ತರಗತಿ ಪ್ರಾರಂಭ | ಆನ್ಲೈನ್ ಮೂಲಕ ತರಬೇತಿ

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿ ರಾಷ್ಟ್ರೀಯ ಮಿಲಿಟರಿ ಶಾಲೆಯ ಪ್ರವೇಶ ಪರೀಕ್ಷೆ(RMS)ಗೆ ಪೂರ್ವಭಾವಿಯಾಗಿ ತರಬೇತಿ ಪ್ರಾರಂಭಿಸಲಿದ್ದು, ಈಗಾಗಲೆ ದಾಖಲಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ವಿದ್ಯಾಮಾತಾ ಅಕಾಡೆಮಿಯು ಈಗಾಗಲೇ ಸೈನಿಕ ಶಾಲಾ ಪ್ರವೇಶ ಪರೀಕ್ಷೆ ಸೇರಿದಂತೆ ವಿವಿಧ ವಸತಿಯುಕ್ತ ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಿ ಸಂಸ್ಥೆಯ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಗೊಂಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ರಾಷ್ಟ್ರೀಯ ಮಿಲಿಟರಿ ಶಾಲೆ (RMS) ಪರೀಕ್ಷೆಯ ತರಬೇತಿ ತರಗತಿಗಳು ವಾರದಲ್ಲಿ 5 ದಿನ ರಾತ್ರಿ ಗಂಟೆ 8.00ರಿಂದ

ವಿದ್ಯಾಮಾತಾ ಅಕಾಡೆಮಿಯಲ್ಲಿ ರಾಷ್ಟ್ರೀಯ ಮಿಲಿಟರಿ ಶಾಲಾ (RMS) ಪ್ರವೇಶ ಪರೀಕ್ಷೆಯ ಪೂರ್ವ ಸಿದ್ದತಾ ತರಗತಿ ಪ್ರಾರಂಭ | ಆನ್ಲೈನ್ ಮೂಲಕ ತರಬೇತಿ Read More »

ಅಶೋಕ‌ ಜನ-ಮನಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗೆ ಆಹ್ವಾನ

ಪುತ್ತೂರು: ನ.2 ರಂದು ಶಾಸಕ ಅಶೋಕ್ ರೈ ನೇತೃತ್ವದ ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೀಪಾವಳಿ ಪ್ರಯುಕ್ತ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ‌ನಡೆಯಲಿರುವ ಅಶೋಕ ಜನಮನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ‌ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಆಹ್ವಾನ ನೀಡಲಾಯಿತು. ಶುಕ್ರವಾರ ಬೆಂಗಳೂರಿನಲ್ಲಿ ಇಬ್ಬರನ್ನು ಭೇಟಿಯಾದ ಶಾಸಕರು ಪುತ್ತೂರಿನ ಐತಿಹಾಸಿಕ ಈ ಕಾರ್ಯಕ್ರಮಕ್ಕೆ ಬಂದು ಹಾರೈಸುವಂತೆ ‌ಮನವಿ ಮಾಡಿದರು. ಕಾರ್ಯಕ್ರಮಕ್ಕೆ ಬರುವುದಾಗಿ ಇಬ್ಬರೂ ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ. ವರ್ಷಂಪ್ರತಿ ದೀಪಾವಳಿ

ಅಶೋಕ‌ ಜನ-ಮನಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗೆ ಆಹ್ವಾನ Read More »

ಗುಡಿಸಲಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳು | ನಗದು, ದಾಖಲೆ ಪತ್ರ, ದಿನಸಿ ಸಾಮಾಗ್ರಿ ಬೆಂಕಿಗಾಹುತಿ

ಪುತ್ತೂರು: ಮಗನೊಂದಿಗೆ ವಾಸವಿದ್ದ ಬಡ ಮಹಿಳೆಯ ಗುಡಿಸಲಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಇಟ್ಟ ಘಟನೆ ಪುತ್ತೂರು ತಾಲೂಕಿನ ಕುಂಬ್ರ ಸಮೀಪದ ಸಾರಪುಣಿಪಾದಡ್ಕ ಎಂಬಲ್ಲಿ ನಡೆದಿದೆ. ಪಾದೆಡ್ನ ನಿವಾಸಿ ಪದ್ಮಾವತಿ ಹಾಗೂ ಅವರ 8 ವರ್ಷದ ಪುತ್ರ ವಾಸ್ತವ್ಯವಿದ್ದ, ಶೀಟ್ ಅಳವಡಿಸಿರುವ ಗುಡಿಸಲು ಮನೆಯಲ್ಲಿ ಬೆಂಕಿ ಅವಘಡ ನಡೆದಿದೆ. ಬೆಂಕಿ ಅವಘಡದಿಂದ ಮನೆಯೊಳಗೆ ಬ್ಯಾಗ್‌ನಲ್ಲಿ ಇರಿಸಿದ್ದ 15 ಸಾವಿರ ನಗದು,  ಆಧಾರ್ ಕಾರ್ಡ್ ಸಹಿತ ದಾಖಲೆ ಪತ್ರಗಳು, ದಿನಸಿ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ. ಗೋಡೆ ಇಲ್ಲದ ಗುಡಿಸಲಿನ ಸುತ್ತ

ಗುಡಿಸಲಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳು | ನಗದು, ದಾಖಲೆ ಪತ್ರ, ದಿನಸಿ ಸಾಮಾಗ್ರಿ ಬೆಂಕಿಗಾಹುತಿ Read More »

ಶೈಕ್ಷಣಿಕ ಸಾಧನೆಗೆ ಕ್ರೀಡೆ ಪೂರಕವಾದದ್ದು : ಪಾರ್ಥ ವಾರಣಾಸಿ | ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

ಪುತ್ತೂರು: ಕ್ರೀಡೆ ಕೇವಲ ಸ್ಪರ್ಧೆಗಷ್ಟೇ ಸೀಮಿತವಲ್ಲ. ದೈಹಿಕ, ಮಾನಸಿಕ ಆರೋಗ್ಯ, ಮೆದುಳಿನ ಚುರುಕುತನಕ್ಕೆ  ಅತ್ಯಂತ ಉಪಕಾರಿ. ಅದರಲ್ಲೂ ಶೈಕ್ಷಣಿಕ ಸಾಧನೆಗೆ ಅತಿ ಅವಶ್ಯಕ. ಆದ್ದರಿಂದ ದಿನಕ್ಕೆ 30  ರಿಂದ 90 ನಿಮಿಷಗಳ ವರೆಗೆ ಆಟೋಟ, ನೃತ್ಯ ಮುಂತಾದವುಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಈಜು ತರಬೇತುದಾರ ಪಾರ್ಥ ವಾರಣಾಸಿ ಹೇಳಿದರು. ಅವರು ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ ನಡೆದ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಶೈಕ್ಷಣಿಕ ಸಾಧನೆಗೆ ಕ್ರೀಡೆ ಪೂರಕವಾದದ್ದು : ಪಾರ್ಥ ವಾರಣಾಸಿ | ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ Read More »

ಸಂವಿಧಾನ ಕೊಟ್ಟಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿ ಹೋಯ್ತು?

ವಿಮರ್ಶೆ ಮಾಡುವ ಅಧಿಕಾರ ಕಿತ್ತುಕೊಳ್ಳುವ ಮಂದಿಗೆ ಧಿಕ್ಕಾರವಿರಲಿ ಮಾರ್ಟಿನ್ ಸಿನಿಮಾ ತುಂಬಾ ಕೆಟ್ಟದಾಗಿದೆ ಎಂದು ಪೋಸ್ಟ್ ಮಾಡಿದ ಯು ಟ್ಯೂಬರ್ ಒಬ್ಬರ ಬಂಧನವಾಗಿದೆ. ಮಾರ್ಟಿನ್ ಸಿನಿಮಾದ ಹೀರೋನ ಅಭಿಮಾನಿಗಳು ಕೊಟ್ಟ ದೂರನ್ನು ಪರಿಗಣಿಸಿ ಪೊಲೀಸರು ಆತನನ್ನು ಬಂಧಿಸಿ ಪೋಸ್ಟ್ ಡಿಲೀಟ್ ಮಾಡಿಸಿದ್ದಾರೆ. ಈ ಮಟ್ಟಿಗೆ ಮಾರ್ಟಿನ್ ಸಿನಿಮಾ ಒಂದು ಕೆಟ್ಟ ದಾಖಲೆಯನ್ನು ಮಾಡಿದೆ. ವಿಮರ್ಶೆ ಮಾಡುವ ಅಧಿಕಾರ ಅಭಿವ್ಯಕ್ತಿ ಸ್ವಾತಂತ್ರ್ಯ ಅಲ್ಲವೇ? ಸಿನಿಮಾ ಇಂದು ಇಂಡಸ್ಟ್ರಿ ಎಂದು ಕರೆಸಿಕೊಂಡು ತುಂಬಾ ದಶಕಗಳೇ ಆಯಿತು. ಹಾಗಿರುವಾಗ ಒಂದು ಸಿನಿಮಾ

ಸಂವಿಧಾನ ಕೊಟ್ಟಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿ ಹೋಯ್ತು? Read More »

ಬೈಕ್ ಅಪಘಾತಗೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾದ ಬಿಜೆಪಿ ಮೊಗರು ಬೂತ್ ನ ಮಾಜಿ ಅಧ್ಯಕ್ಷ ಜಗದೀಶ್ ಇಡ್ಯಾಡಿ | ಸವಣೂರು ಬಿಜೆಪಿ ಶಕ್ತಿ ಕೇಂದ್ರದಿಂದ ಧನಸಹಾಯ ಹಸ್ತಾಂತರ

ಸವಣೂರು: ಬೈಕ್‍ ಅಪಘಾತದಿಂದ ಗಂಭೀರ ಗಾಯಗೊಂಡು ಎರಡು ಬಾಡಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಬಿಜೆಪಿ ಮೊಗರು ಬೂತ್ ನ ಮಾಜಿ ಅಧ್ಯಕ್ಷ ಜಗದೀಶ್ ಇಡ್ಯಾಡಿ ಅವರಿಗೆ ಸವಣೂರು ಬಿಜೆಪಿ ಶಕ್ತಿ ಕೇಂದ್ರದಿಂದ ಧನಸಹಾಯ ನೀಡಲಾಯಿತು. ಜಗದೀಶ್‍ ಅವರು ಬೈಕ್ ನಲ್ಲಿ ಚಲಾಯಿಸುತ್ತಿದ್ದ ವೇಳೆ ನಾಯಿಯೊಂದು ಅಡ್ಡ ಬಂದು ಬೈಕ್ ಮಗುಚಿದ ಪರಿಣಾಮ ಕಾಲಿಗೆ ಗಂಭೀರ ಗಾಯವಾಗಿತ್ತು. ಈ ಸಂಧರ್ಭದಲ್ಲಿ ಸವಣೂರು ಶಕ್ತಿಕೇಂದ್ರದ ಅಧ್ಯಕ್ಷ ಚೇತನ್ ಕೊಡಿಬೈಲ್, ಸುಳ್ಯ ಮಂಡಲ ಎಸ್.ಟಿ. ಮೋರ್ಚಾದ ಅಧ್ಯಕ್ಷ ಗಂಗಾಧರ ಪೆರಿಯಡ್ಕ, ಸುಳ್ಯ

ಬೈಕ್ ಅಪಘಾತಗೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾದ ಬಿಜೆಪಿ ಮೊಗರು ಬೂತ್ ನ ಮಾಜಿ ಅಧ್ಯಕ್ಷ ಜಗದೀಶ್ ಇಡ್ಯಾಡಿ | ಸವಣೂರು ಬಿಜೆಪಿ ಶಕ್ತಿ ಕೇಂದ್ರದಿಂದ ಧನಸಹಾಯ ಹಸ್ತಾಂತರ Read More »

error: Content is protected !!
Scroll to Top