ಕೊಕ್ಕಡ ರಾಷ್ಟ್ರೀಕೃತ ಬ್ಯಾಂಕ್‍ ನಲ್ಲಿ ಖಾತೆ ಹೊಂದಿರುವ ಬಡ ಮಹಿಳೆಯರ ಖಾತೆಯಿಂದ ಹಣ ಲಪಟಾಯಿಸಿ ವಂಚನೆ | ಜಾಣ ಕುರುಡರಂತೆ ವರ್ತಿಸುತ್ತಿರುವ ಅಧಿಕಾರಿಗಳು

ಕೊಕ್ಕಡ: ರಾಷ್ಟ್ರೀಕೃತ ಬ್ಯಾಂಕ್ ಕೊಕ್ಕಡ ಶಾಖೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬಡ ಮಹಿಳೆಯರ ಖಾತೆಯಿಂದ ಒಂದಿಲ್ಲೊಂದು ರೀತಿಯಲ್ಲಿ ಹಣ ವರ್ಗಾವಣೆಗೊಳ್ಳುತ್ತಿರುವ ಪ್ರಕರಣ ನಡೆಯುತ್ತಿದ್ದರು ಜಾಣ ಕುರುಡರಂತೆ ವರ್ತಿಸುತ್ತಿರುವ ಅಧಿಕಾರಿಗಳು. ಅ.25ರಂದು ಮಧ್ಯಾಹ್ನ 12.45ಕ್ಕೆ ಬ್ಯಾಂಕ್ ಮ್ಯಾನೇಜರ್ ಎಂದು ಫೋನ್ ಕರೆಯ ಮೂಲಕ ನಂಬಿಸಿ. ವಾಟ್ಸಪ್ ಮುಖಾಂತರ ಮಹಿಳೆಯ ಪಾಸ್ ಬುಕ್ ನಕಲನ್ನು ಪಡೆದು ಮಹಿಳೆಯೋರ್ವರಿಗೆ ರೂ.6,500 ವಂಚಿಸಿದ ಘಟನೆ ನಡೆದಿದೆ. ಕೊಕ್ಕಡ ಗ್ರಾಮದ ಹಾರ ನಿವಾಸಿ ಟಿ.ಜೆ.ರೀನಾ ಅವರ ಬ್ಯಾಂಕ್ ಖಾತೆಯಿಂದ ರೂ. 6,500 ಅನ್ನು ಅಪರಿಚಿತ ವ್ಯಕ್ತಿ […]

ಕೊಕ್ಕಡ ರಾಷ್ಟ್ರೀಕೃತ ಬ್ಯಾಂಕ್‍ ನಲ್ಲಿ ಖಾತೆ ಹೊಂದಿರುವ ಬಡ ಮಹಿಳೆಯರ ಖಾತೆಯಿಂದ ಹಣ ಲಪಟಾಯಿಸಿ ವಂಚನೆ | ಜಾಣ ಕುರುಡರಂತೆ ವರ್ತಿಸುತ್ತಿರುವ ಅಧಿಕಾರಿಗಳು Read More »

ಬೆಂಗಳೂರಿನಲ್ಲಿ ಸ್ನಾತಕೋತ್ತರ ಪದವಿ ಸ್ವೀಕರಿಸಿದ ಪುತ್ತೂರಿನ ಲಹರಿ ಕೆ.ಎಂ.

ಪುತ್ತೂರು: ಪುತ್ತೂರಿನ ಲಹರಿ ಕೆ. ಎಂ. ಅವರು ಎಂ.ಬಿ.ಎ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರಿನ ದಯಾನಂದ ಸಾಗರ್ ಸಂಸ್ಥೆಗಳು ಏರ್ಪಡಿಸಿದ್ದ ಘಟಿಕೋತ್ಸವ ಸಮಾರಂಭದಲ್ಲಿ ಸ್ವೀಕರಿಸಿದರು. ಅವರು ದಯಾನಂದ ಸಾಗರ್ ಕಾಲೇಜ್ ಆಫ್ ಆರ್ಟ್ಸ್ ಸೈನ್ಸ್ ಅಂಡ್ ಕಾಮರ್ಸ್ ನ ವಿದ್ಯಾರ್ಥಿನಿಯಾಗಿದ್ದಾರೆ. ಲಹರಿ ಕೆ.ಎಂ. ಪುತ್ತೂರು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಮನೋಹರ್ ಕೆ ವಿ ಮತ್ತು ಮಮತಾ ಕೆ. ಎ. ದಂಪತಿ ಪುತ್ರಿ,

ಬೆಂಗಳೂರಿನಲ್ಲಿ ಸ್ನಾತಕೋತ್ತರ ಪದವಿ ಸ್ವೀಕರಿಸಿದ ಪುತ್ತೂರಿನ ಲಹರಿ ಕೆ.ಎಂ. Read More »

ಭಾರತೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಸಂಘ ದ.ಕ., ಉಡುಪಿ ಜಿಲ್ಲಾ ವಲಯ ಸಂಘಟನಾ ಪುತ್ತೂರು ಘಟಕದ ತ್ರೈಮಾಸಿಕ ಸಭೆ | ನ.18 ರಂದು ಗುರುವಾಯನಕೆರೆಯಲ್ಲಿ ಸಂಘದ ವಾರ್ಷಿಕೋತ್ಸವ ಸಮಾರಂಭ

ಪುತ್ತೂರು: ಭಾರತೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಸಂಘ ದ.ಕ., ಉಡುಪಿ ಜಿಲ್ಲಾ ವಲಯ ಸಂಘಟನಾ ಪುತ್ತೂರು ಘಟಕದ ತ್ರೈಮಾಸಿಕ ಸಭೆ ಭಾನುವಾರ ಕುಂಬ್ರ ರೈತ ಸಮುದಾಯ ಭವನದಲ್ಲಿ ನಡೆಯಿತು. ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಪಿ.ಗೌಡ ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ನ.18 ರಂದು ಗುರುವಾಯನಕೆರೆಯಲ್ಲಿ ನಡೆಯುವ ಸಂಘ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ಸಭೆಯ ಉದ್ದೇಶವಾಗಿದ್ದು, ಕಾರ್ಯಕ್ರಮಕ್ಕೆ ಹೊರಗಿನಿಂದ ಯಾವುದೇ ಫಂಡ್‍ ಬರುವುದಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಸದಸ್ಯರು ಧನ ಸಹಾಯ ನೀಡುವಂತೆ ಅವರು

ಭಾರತೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಸಂಘ ದ.ಕ., ಉಡುಪಿ ಜಿಲ್ಲಾ ವಲಯ ಸಂಘಟನಾ ಪುತ್ತೂರು ಘಟಕದ ತ್ರೈಮಾಸಿಕ ಸಭೆ | ನ.18 ರಂದು ಗುರುವಾಯನಕೆರೆಯಲ್ಲಿ ಸಂಘದ ವಾರ್ಷಿಕೋತ್ಸವ ಸಮಾರಂಭ Read More »

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ | ‘ನನಗಲ್ಲ ನಿನಗೆ’ ಎನ್ನುವ ಸೇವಾ ಭಾವನೆಯೇ ದೇಶ ಸೇವೆಯ ಮೊದಲ ಹೆಜ್ಜೆ : ಡಾ.ನಂದೀಶ್ ವೈ.ಡಿ.

ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2023-24ನೇ ಸಾಲಿನ ಎನ್. ಎಸ್. ಎಸ್. ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ, ಸಹಾಯಕ ಪ್ರಾಧ್ಯಾಪಕ ಡಾ. ನಂದೀಶ್ ವೈ. ಡಿ., ಭಾವನಾತ್ಮಕ ಬುದ್ಧಿವಂತಿಕೆ ಮತ್ತು ದೇಶ ಪ್ರೇಮ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ನಮ್ಮ ಮನಸ್ಸು ಯಾವ ರೀತಿ ಯೋಚನೆ ಮಾಡುತ್ತದೆಯೋ ಅದೇ

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ | ‘ನನಗಲ್ಲ ನಿನಗೆ’ ಎನ್ನುವ ಸೇವಾ ಭಾವನೆಯೇ ದೇಶ ಸೇವೆಯ ಮೊದಲ ಹೆಜ್ಜೆ : ಡಾ.ನಂದೀಶ್ ವೈ.ಡಿ. Read More »

ಸವಣೂರು ಶಕ್ತಿ ಕೇಂದ್ರ ಬೂತ್ 65 ರಲ್ಲಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ

ಸವಣೂರು: ಶಕ್ತಿ ಕೇಂದ್ರ ಬೂತ್ 65 ರಲ್ಲಿ ಭಾನುವಾರ ನರೇಂದ್ರ ಮೋದಿ ಯವರ ಮನ್ ಕೀ ಬಾತ್ ಕಾರ್ಯಕ್ರಮದ ವೀಕ್ಷಣೆ ಮಾಡಲಾಯಿತು. ಉಮೇಶ್ ಆಚಾರ್ಯ ಅಟ್ಟೊಳೆ ಅವರ ಮನೆಯಲ್ಲಿ ಮನ್‍ ಕೀ ಬಾತ್ ವೀಕ್ಷಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡಂಜಿ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಚೇತನ್ ಕೋಡಿ ಬೈಲು, ಬೂತ್ ಸಂಖ್ಯೆ 65 ರ ಅಧ್ಯಕ್ಷ ತೀರ್ಥರಾಮ ಕೆಡಂಜಿ, ಕಾರ್ಯದರ್ಶಿ ಸತೀಶ್ ಬಲ್ಯಾಯ, ಪಂಚಾಯತ್ ಸದಸ್ಯರಾದ

ಸವಣೂರು ಶಕ್ತಿ ಕೇಂದ್ರ ಬೂತ್ 65 ರಲ್ಲಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ Read More »

ಮಲ್ಟಿಪ್ಲೆಕ್ಸ್‌ಗಳಿಗೆ ಬೀಳಲಿದೆ ಮೂಗುದಾರ : ಟಿಕೆಟ್‌ ದರ ನಿಗದಿಗೆ ಮಾನದಂಡ

ಟಿಕೆಟ್‌ ದರ 250 ರೂ. ಮೀರದಂತೆ ಆದೇಶ ಹೊರಡಿಸುವ ಭರವಸೆ ಬೆಂಗಳೂರು : ಸಿಕ್ಕಾಪಟ್ಟೆ ಟಿಕೆಟ್‌ ದರ ವಸೂಲು ಮಾಡುವ ಮಲ್ಟಿಪ್ಲೆಕ್ಸ್‌ಗಳಿಗೆ ಮೂಗುದಾರ ಹಾಕಲು ಸರಕಾರ ಮುಂದಾಗಿದೆ. ಮುಂಬಯಿ ಬಿಟ್ಟರೆ ಕರ್ನಾಟಕದಲ್ಲೇ ಸಿನಿಮಾ ಟಿಕೆಟ್ ದರ ಹೆಚ್ಚಿದೆ. ರಾಜ್ಯದಲ್ಲಿ ಟಿಕೆಟ್ ದರ ನಿಗದಿಗೆ ಯಾವುದೇ ಮಾನದಂಡಗಳಿಲ್ಲರುವುದರಿಂದ ಮಲ್ಟಿಪ್ಲೆಕ್ಸ್‌ಗಳು ತಮಗಿಚ್ಚೆ ಬಂದಂತೆ ಟಿಕೆಟ್‌ ದರ ನಿಗದಿ ಮಾಡಿ ಪ್ರೇಕ್ಷಕರನ್ನು ಸುಲಿಯುತ್ತಿವೆ. ಸ್ಟಾರ್‌ ನಟರ ಸಿನೆಮಾ ಬಿಡುಗಡೆಯಾದರೆ ಟಿಕೆಟ್‌ ದರ 1000-1200 ಆಗುವುದೂ ಇದೆ. ಈ ಹಿನ್ನೆಲೆಯಲ್ಲಿ ಮಲ್ಟಿಪ್ಲೆಕ್ಸ್‌ಗಳ ಟಿಕೆಟ್‌

ಮಲ್ಟಿಪ್ಲೆಕ್ಸ್‌ಗಳಿಗೆ ಬೀಳಲಿದೆ ಮೂಗುದಾರ : ಟಿಕೆಟ್‌ ದರ ನಿಗದಿಗೆ ಮಾನದಂಡ Read More »

ಪಾಲೆತ್ತಾಡಿ ನಿವಾಸಿ ರಾಮಣ್ಣ ಗೌಡ ಹೃದಯಾಘಾತದಿಂದ ನಿಧನ

ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಮಣಿಕ್ಕಳ ಪಾಲೆತ್ತಾಡಿ ನಿವಾಸಿ ರಾಮಣ್ಣ ಗೌಡ (69) ಅ.26 ರಂದು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಪ್ರಗತಿಪರ ಕೃಷಿಕರಾಗಿರುವ ರಾಮಣ್ಣ ಗೌಡರು ಮಧ್ಯಾಹ್ನದವರೆಗೂ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ಹಠಾತ್ರನೆ ಎದೆನೋವು ಕಾಣಿಸಿಕೊಂಡಿದ್ದು, ಉಪ್ಪಿನಂಗಡಿ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದರು. ಮೃತ ರಾಮಣ್ಯಗೌಡರವರು ಪತ್ನಿ ಚಂದ್ರಾವತಿ, ಪುತ್ರಿಯರಾದ ಶಶಿಕಲಾ, ಚೈತ್ರ, ಪುತ್ರರಾದ ಧನಂಜಯ, ಲೋಕೇಶ್ ಹಾಗೂ ಸಹೋದರಾರದ ಮುಂಬೈ ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆಕ್ಕಡಿ, ಸಂಯುಕ್ತ ಕರ್ನಾಟಕ ಪುತ್ತೂರು ತಾಲೂಕು ವರದಿಗಾರ ಮೇಘ ಪಾಲೆತ್ತಡಿ

ಪಾಲೆತ್ತಾಡಿ ನಿವಾಸಿ ರಾಮಣ್ಣ ಗೌಡ ಹೃದಯಾಘಾತದಿಂದ ನಿಧನ Read More »

ಮುಂಬಯಿ: ಬಾಂದ್ರ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಿಂದ 9 ಮಂದಿಗೆ ಗಾಯ

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರಿಂದ ಗಿಜಿಗುಡುತ್ತಿದ್ದ ರೈಲ್ವೆ ಸ್ಟೇಷನ್‌ ಮುಂಬಯಿ: ಉಪನಗರ ಬಾಂದ್ರ ಟರ್ಮಿನಸ್‌ ರೈಲು ನಿಲ್ದಾಣದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ ಕನಿಷ್ಠ 9 ಮಂದಿ ಗಾಯಗೊಂಡ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.ಬಾಂದ್ರ ಟರ್ಮಿನಸ್‌ನ ಪ್ಲಾಟ್‌ಫಾರ್ಮ್‌ 1ರಲ್ಲಿ ಕಾಲ್ತುಳಿತ ಸಂಭವಿಸಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ರೈಲು ನಿಲ್ದಾಣದಲ್ಲಿ ಊರಿಗೆ ಹೋಗುವ ಪ್ರಯಾಣಿಕರ ದಟ್ಟಣೆಯಿತ್ತು. ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಯಾಣಿಕರು ಗಿಜಿಗುಡುತ್ತಿದ್ದರು. 1ನೇ ನಂಬರ್‌ ಪ್ಲಾಟ್‌ಫಾರ್ಮ್‌ನಲ್ಲಿ ಬಾಂದ್ರ-ಗೋರಖ್‌ಪುರ ಎಕ್ಸ್‌ಪ್ರೆಸ್‌ ರೈಲು ಹೊರಡುವ ತುಸು ಮುನ್ನ ಕಾಲ್ತುಳಿತ ಸಂಭವಿಸಿದೆ. 9 ಮಂದಿ ಗಾಯಗೊಂಡಿದ್ದು,

ಮುಂಬಯಿ: ಬಾಂದ್ರ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಿಂದ 9 ಮಂದಿಗೆ ಗಾಯ Read More »

ಮಾಜಿ ಸಚಿವರಿಗೆ ಹನಿಟ್ರ್ಯಾಪ್‌ : ಕಾಂಗ್ರೆಸ್‌ ನಾಯಕಿ ಬಂಧನ

ಬೆಂಗಳೂರು : ಮಾಜಿ ಸಚಿವ ಮಾಲೀಕಯ್ಯ ಗುತ್ತೆದಾರ್‌ ಅವರನ್ನು ಹನಿಟ್ರ್ಯಾಪ್ ಬಲೆಗೆ ಕೆಡವಿ 20 ಲ.ರೂ. ವಸೂಲು ಮಾಡಲು ಯತ್ನಿಸಿದ ಕಾಂಗ್ರೆಸ್‌ ನಾಯಕಿ ಹಾಗೂ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಂಗ್ರೆಸ್‌ನ ನಲಪಾಡ್ ಬ್ರಿಗೇಡ್‌ನ ಕಲಬುರಗಿ ಜಿಲ್ಲಾಧ್ಯಕ್ಷೆ ಮಂಜುಳಾ ಪಾಟೀಲ್‌ (32) ಹಾಗೂ ಆಕೆಯ ಪತಿ ಶಿವರಾಜ್‌ ಪಾಟೀಲ್‌ (39) ವೀಡಿಯೊ ತುಣುಕುಗಳನ್ನು ತೋರಿಸಿ ಮಾಲೀಕಯ್ಯ ಗುತ್ತೆದಾರ್‌ ಅವರನ್ನು ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದರು. ಗುತ್ತೆದಾರ್‌ ನೀಡಿದ ದೂರಿನ ಪ್ರಕಾರ ಬೆಂಗಳೂರು ಸಿಸಿಬಿ ಪೊಲೀಸ್ದಂಪತಿಯನ್ನು ಬಂಧಿಸಿದ್ದಾರೆ.ಮಂಜುಳಾ ಪಾಟೀಲ್‌ ಮಾಜಿ

ಮಾಜಿ ಸಚಿವರಿಗೆ ಹನಿಟ್ರ್ಯಾಪ್‌ : ಕಾಂಗ್ರೆಸ್‌ ನಾಯಕಿ ಬಂಧನ Read More »

ಸ್ಕೂಟರ್–ಬೈಕ್ ಅಪಘಾತ : ಮೂರು ಮಂದಿಗೆ ಗಾಯ

ಪುತ್ತೂರು: ಬೈಕ್ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಗಾಯಗೊಂಡ ಘಟನೆ ಪುತ್ತೂರು – ಉಪ್ಪಿನಂಗಡಿ ರಸ್ತೆಯ ಕೇಪುಳು ಜಂಕ್ಷನ್ ನಲ್ಲಿ ನಡೆದಿದೆ. ಪುತ್ತೂರಿನಿಂದ ಉಪ್ಪಿನಂಗಡಿಗೆ ತೆರಳುತ್ತಿದ್ದ ಬೈಕ್ ಮತ್ತು ಕೇವುಳು ರಸ್ತೆಯಿಂದ ಮುಖ್ಯ ರಸ್ತೆಗೆ ಬರುತ್ತಿದ್ದ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದೆ. ಸ್ಕೂಟರ್ ನಲ್ಲಿದ್ದ ಸವಾರ ಮತ್ತು ಹಿಂಬದಿ ಸವಾರ ಹಾಗು ಬೈಕ್ ಸವಾರನಿಗೆ ಗಾಯವಾಗಿದೆ.

ಸ್ಕೂಟರ್–ಬೈಕ್ ಅಪಘಾತ : ಮೂರು ಮಂದಿಗೆ ಗಾಯ Read More »

error: Content is protected !!
Scroll to Top