ಸೇನಾ ವಾಹನದ ಮೇಲೆ ಭಯೋತ್ಪಾದಕರ ದಾಳಿ : ಓರ್ವ ಉಗ್ರ ಬಲಿ

ಶ್ರೀನಗರ : ಜಮ್ಮು-ಕಾಶ್ಮೀರದ ಅಕ್ನೂರ್‌ ವಲಯದಲ್ಲಿ ಸೇನೆಯ ವಾಹನದ ಮೇಲೆ ಉಗ್ರರು ದಾಳಿ ಮಾಡಿದ್ದು, ಈ ಸಂದರ್ಭದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಉಗ್ರನನ್ನು ಸಾಯಿಸಲಾಗಿದೆ.ಅಕ್ನೂರ್‌ ಸಮೀಪ ಬಟಲ್‌ ಎಂಬಲ್ಲಿ ಮೂವರು ಉಗ್ರರು ಸೇನೆಯ ವಾಹನದ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಸೇನೆ ಕೂಡಲೇ ಈ ಪ್ರದೇಶವನ್ನು ಸುತ್ತುವರಿದು ಉಗ್ರರ ತಲಾಷೆ ಪ್ರಾರಂಭಿಸಿದೆ. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರ ಬಲಿಯಾಗಿದ್ದಾನೆ.ದೀಪಾವಳಿ ಹಬ್ಬಕ್ಕಾಗಿ ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಭಾರಿ ಬಂದೋಬಸ್ತು ಮಾಡಿದ್ದು, ಇದರ ನಡುವೆ […]

ಸೇನಾ ವಾಹನದ ಮೇಲೆ ಭಯೋತ್ಪಾದಕರ ದಾಳಿ : ಓರ್ವ ಉಗ್ರ ಬಲಿ Read More »

ಮುಂದಿನ ವರ್ಷ ಜನಗಣತಿ?

2021ರಲ್ಲಿ ಕೋವಿಡ್‌ ಕಾರಣದಿಂದ ಮುಂದೂಡಿಕೆಯಾಗಿದ್ದ ಪ್ರಕ್ರಿಯೆ ಹೊಸದಿಲ್ಲಿ: ದೇಶದ ಜನಸಂಖ್ಯೆಯ ಅಧಿಕೃತ ಸಮೀಕ್ಷೆಯಾದ ಜನಗಣತಿಯನ್ನು 2025ರಲ್ಲಿ ಆರಂಭಿಸುವ ನಿರೀಕ್ಷೆಯಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಜನಗಣತಿ ಪ್ರಕ್ರಿಯೆ 2025ರಲ್ಲಿ ಆರಂಭಗೊಂಡು 2026ರವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ಜನಗಣತಿಯ ನಂತರ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಕೆಲಸ ಆರಂಭಗೊಂಡು 2028ರಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಆಗಲಿದ್ದು ಈ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ

ಮುಂದಿನ ವರ್ಷ ಜನಗಣತಿ? Read More »

ಈಗ ಗೋಲ್‌ಗಪ್ಪಾ ಮೇಲೆ ಆರೋಗ್ಯ ಇಲಾಖೆ ಕಣ್ಣು

ರುಚಿ ಹೆಚ್ಚಿಸಲು ಯೂರಿಯಾ, ಹಾರ್ಪಿಕ್‌ ಬಳಸುವ ಆರೋಪದ ಹಿನ್ನೆಲೆಯಲ್ಲಿ ಪರಿಶೀಲನೆ ಬೆಂಗಳೂರು: ಗೋಬಿ ಮಂಚೂರಿ, ಕೇಕ್‌, ಬಾಂಬೆ ಮಿಠಾಯಿ ಇತ್ಯಾದಿ ತಿನಿಸುಗಳಲ್ಲಿರುವ ರಾಸಾಯನಿಕ ಅಂಶವನ್ನು ಪತ್ತೆಹಚ್ಚಿರುವ ಆರೋಗ್ಯ ಇಲಾಖೆಯ ಕಣ್ಣು ಈಗ ಜನಪ್ರಿಯ ಸ್ಟ್ರೀಟ್‌ ಫುಡ್‌ ಪಾನಿಪುರಿ ಮೇಲೆ ಬಿದ್ದಿದೆ. ಗೋಲ್‌ಗಪ್ಪಾ ಎಂದೂ ಕರೆಯಲಾಗುವ ಪಾನಿಪುರಿಯಲ್ಲಿ ರುಚಿ ಹೆಚ್ಚಳಕ್ಕೆ ಯೂರಿಯಾ ಗೊಬ್ಬರ ಹಾಗೂ ಹಾರ್ಪಿಕ್ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ಪ್ರಾರಂಭಿಸಿದ್ದಾರೆ.ಕೆಲವು ರಾಜ್ಯಗಳಲ್ಲಿ ಗೋಲ್‌ಗಪ್ಪಾದ ರುಚಿ ಹೆಚ್ಚಿಸಲು ಅಪಾಯಕಾರಿ

ಈಗ ಗೋಲ್‌ಗಪ್ಪಾ ಮೇಲೆ ಆರೋಗ್ಯ ಇಲಾಖೆ ಕಣ್ಣು Read More »

ಬೀಡಿ ಕಳ್ಳತನ ಆರೋಪಿ ಉಳ್ಳಾಲದಲ್ಲಿ ಬಂಧನ | ಎರಡು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ

ಪುತ್ತೂರು: ಬೀಡಿ ಕಳ್ಳತನ ಆರೋಪದಲ್ಲಿ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಉಳ್ಳಾಲದಲ್ಲಿ ಬಂಧಿಸಿದ್ದಾರೆ. ಆರೋಪಿಯು ಎರಡು ವರ್ಷಗಳ ಹಿಂದೆ ಪುತ್ತೂರಿನ ಬೀಡಿ ಬ್ರಾಂಚೊಂದರಿಂದ ಸಾವಿರಾರು ರೂಪಾಯಿ ಮೌಲ್ಯದ ಬೀಡಿಗಳನ್ನು ಕದ್ದು ಸಿಕ್ಕಿ ಹಾಕಿಕೊಂಡಿದ್ದ. ಬಂಧಿತ ಆರೋಪಿ ಕಡಬ ತಾಲೂಕಿನ ಕುದ್ಮಾರು ಗ್ರಾಮದ ಏರ್ಕಮೆ ನಿವಾಸಿ ಮಹಮ್ಮದ್  ಕುಂಞಿ ಎಂದು ಗುರುತಿಸಲಾಗಿದೆ. 2022ರಲ್ಲಿ ಕೂರ್ನಡ್ಕದ ಬೀಡಿ ಬ್ರಾಂಚೊಂದರಲ್ಲಿ ಸುಮಾರು 22 ಸಾವಿರ ರೂಪಾಯಿ ಮೌಲ್ಯದ ಬೀಡಿಗಳನ್ನು ಕಳವು ಮಾಡಿದ

ಬೀಡಿ ಕಳ್ಳತನ ಆರೋಪಿ ಉಳ್ಳಾಲದಲ್ಲಿ ಬಂಧನ | ಎರಡು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ Read More »

ವಕ್ಫ್‌ ಮಂಡಳಿ ನಿಷೇಧ : ಬಿಜೆಪಿ ಒತ್ತಾಯ

ಕಾಂಗ್ರೆಸ್‌ನಿಂದಾಗಿ ವಕ್ಫ್‌ಗೆ ವಿಶೇಷ ಅಧಿಕಾರ ಎಂದು ಆರೋಪ ಬೆಂಗಳೂರು: ರೈತರ ಕೃಷಿ ಜಮೀನು ಕಿತ್ತುಕೊಳ್ಳುತ್ತಿರುವ ವಕ್ಫ್‌ ಮಂಡಳಿಯನ್ನು ನಿಷೇಧಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ. ವಕ್ಫ್ ಮಂಡಳಿ ರೈತರ ಜಮೀನು ಕಿತ್ತುಕೊಳ್ಳುತ್ತಿದ್ದು, ರೈತರಿಗೆ ನೋಟಿಸ್ ನೀಡಿದೆ. ಈ ಮಂಡಳಿಯನ್ನು ಕೂಡಲೇ ಸರ್ಕಾರ ನಿಷೇಧಿಸಬೇಕೆಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣ ಸ್ವಾಮಿ ಆಗ್ರಹಿಸಿದ್ದಾರೆ. ಕಳೆದ 70 ವರ್ಷಗಳಿಂದ ವಕ್ಫ್ ಬೋರ್ಡ್‌ಗೆ ಅಧಿಕಾರ ನೀಡುವ ಮೂಲಕ ಸಮಸ್ಯೆ ಮತ್ತು ಗೊಂದಲ ಸೃಷ್ಟಿಸಲು ಕಾಂಗ್ರೆಸ್ ಪಕ್ಷವೇ ಕಾರಣವಾಗಿದೆ. ವಕ್ಫ್ ಬೋರ್ಡ್

ವಕ್ಫ್‌ ಮಂಡಳಿ ನಿಷೇಧ : ಬಿಜೆಪಿ ಒತ್ತಾಯ Read More »

ಪಾಣಾಜೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನಿಂದ ಶ್ರಮದಾನ

ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪಾಣಾಜೆ , ತುಳುನಾಡು ಫ್ರೆಂಡ್ಸ್ ತೂಂಬಡ್ಕ ಓಂ ಫ್ರೆಂಡ್ಸ್  ಭರಣ್ಯ ಮತ್ತು ಗ್ರಾಮಸ್ಥರ ನೆರವಿನಿಂದ ಶ್ರಮದಾನ ನಡೆಯಿತು. ರಣಮಂಗಳ ದೇವಸ್ಥಾನ ಮತ್ತು ಪಾಣಾಜೆ ಗ್ರಾಮದ ಮೂರು ಮತ್ತು ನಾಲ್ಕನೇ ವಾರ್ಡಿನ ಪ್ರಧಾನ ಸಂಪರ್ಕ ರಸ್ತೆಯ ಗುಂಡಿಗಳನ್ನು ಶ್ರಮದಾನದ ಮೂಲಕ ಮುಚ್ಚಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ರಮೇಶ್ ಭಟ್ ಬೊಲ್ಲುಕಲ್ಲು, ಪ್ರವೀಣ್ ರೈ ಕೋಟೆ ಉಪಹಾರ ಮತ್ತು ತಂಪು ಪಾನೀಯದ ವ್ಯವಸ್ಥೆಯನ್ನು ಮಾಡಿದರು

ಪಾಣಾಜೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನಿಂದ ಶ್ರಮದಾನ Read More »

ಪೇಜಾವರ ಶ್ರೀಗಳನ್ನು ಪುಡಿ ರಾಜಕಾರಣಿ ಎಂದ ಕಾಂಗ್ರೇಸ್‍ ಮುಖಂಡ ಬಿ.ಕೆ ಹರಿಪ್ರಸಾದ್ ಹೇಳಿಕೆ ಖಂಡನೀಯ : ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ಕಾಂಗ್ರೇಸ್‍  ಮುಖಂಡ ಬಿ.ಕೆ ಹರಿಪ್ರಸಾದ್  ಪೇಜಾವರ ಶ್ರೀಗಳನ್ನು ಪುಡಿ ರಾಜಕಾರಣಿ ಎಂಬ ಹೇಳಿಕೆಯನ್ನು ಹಿಂದೂ ಸಮಾಜ ತೀವ್ರ ಖಂಡಿಸುತ್ತದೆ. ಈ ರೀತಿಯ ಹೇಳಿಕೆಗಳನ್ನು ನೀಡಿ ಸಂಪ್ರದಾಯ ಮತ್ತು ನಂಬಿಕೆಗಳಿಗೆ ದ್ರೋಹ ಎಸಗುತ್ತಿರುವ ಬಿ.ಕೆ ಹರಿಪ್ರಸಾದ್ ನಾಲಗೆಯನ್ನು ಹಿಡಿತದಲ್ಲಿಟ್ಟುಕೊಂಡು ಮಾತನಾಡುವುದು ಸೂಕ್ತ. ಪೂರ್ವಾಗ್ರಹ ಪೀಡಿತರಾಗಿ ಈ ರೀತಿಯಾಗಿ ಮಾತನಾಡಿ  ಸಮಾಜದಲ್ಲಿ ಶಾಂತಿ ಕೆದಡುವ ಪ್ರಯತ್ನವಿದು. ಹಿಂದೂ ಸಮಾಜಕ್ಕೆ ಪ್ರಾತಸ್ಮರಣಿಯರಾಗಿರುವ ಶ್ರೀಗಳಿಗೆ ಈ ರೀತಿಯ ಹೇಳಿಕೆ ನೀಡಿರುವುದು ಸಮಸ್ತ ಹಿಂದೂ  ಸಮಾಜಕ್ಕೆ  ಮಾಡಿರುವ ಅವಮಾನ. ಬಿ.ಕೆ ಹರಿಪ್ರಸಾದ್ ಸ್ವಾಮಿಜೀಯವರಲ್ಲಿ ಕ್ಷಮೆಯಾಚಿಸಬೇಕು

ಪೇಜಾವರ ಶ್ರೀಗಳನ್ನು ಪುಡಿ ರಾಜಕಾರಣಿ ಎಂದ ಕಾಂಗ್ರೇಸ್‍ ಮುಖಂಡ ಬಿ.ಕೆ ಹರಿಪ್ರಸಾದ್ ಹೇಳಿಕೆ ಖಂಡನೀಯ : ಅರುಣ್ ಕುಮಾರ್ ಪುತ್ತಿಲ Read More »

ಅಕ್ಷಯ ಕಾಲೇಜಿನಲ್ಲಿ “ಡೆಲಿಸಿಯಾ” ಹಾಸ್ಪಿಟಲಿಟಿ ಕ್ಲಬ್ ಆತಿಥ್ಯ ಉದ್ಯಮದ ಕುರಿತು ಸಂವಾದ

ಪುತ್ತೂರು: ಪುತ್ತೂರು : ಅಕ್ಷಯ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ  ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಬಿ.ಎಚ್.ಎಸ್. ವಿಭಾಗ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ   “ಡೆಲಿಸಿಯಾ” ಹಾಸ್ಪಿಟಲಿಟಿ ಕ್ಲಬ್  ಆತಿಥ್ಯ ಉದ್ಯಮದ  ಕುರಿತು  ಸಂವಾದ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಪೆಸ್ಟ್ರಿ ಶೇಫ್ Ncl ಕ್ರೂಸ್ ಲೈನ್ ನ ಯತೀರಾಜ್ ಪೂಜಾರಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಹಾಸ್ಪಿಟಾಲಿಟಿ ಸೈನ್ಸ್  ಗ್ರಾಹಕರಿಗೆ ಆಹಾರ ಮತ್ತು ವಸತಿ ಅಗತ್ಯಗಳನ್ನು ಪೂರೈಸುವ ಸೇವಾ ಉದ್ಯಮವಾಗಿದೆ. ಹಾಸ್ಪಿಟಾಲಿಟಿ ಸೈನ್ಸ್ ನಲ್ಲಿ ವಿವಿಧ ಆಡಳಿತಾತ್ಮಕ,ವ್ಯವಸ್ಥಾಪನಾ

ಅಕ್ಷಯ ಕಾಲೇಜಿನಲ್ಲಿ “ಡೆಲಿಸಿಯಾ” ಹಾಸ್ಪಿಟಲಿಟಿ ಕ್ಲಬ್ ಆತಿಥ್ಯ ಉದ್ಯಮದ ಕುರಿತು ಸಂವಾದ Read More »

ಅನಿಷ್ಟಗಳಿಗೆಲ್ಲ ಜಾತಿ ವ್ಯವಸ್ಥೆ ಕಾರಣ ಎನ್ನುವವರೇ ಅದನ್ನು ಪೋಷಿಸುತ್ತಿದ್ದಾರೆ: ಪೇಜಾವರ ಶ್ರೀ

ಬಿ.ಕೆ.ಹರಿಪ್ರಸಾದ್‌ರ ಪುಡಿ ರಾಜಕಾರಣಿ ಟೀಕೆಗೆ ಶ್ರೀಗಳ ತಿರುಗೇಟು ಮಂಗಳೂರು: ಒಂದು ಕಡೆ ನಾವು ಜಾತ್ಯಾತೀತರು ಎನ್ನುವುದು. ಇನ್ನೊಂದು ಕಡೆ ಎಲ್ಲ ವಲಯದಲ್ಲೂ ಜಾತಿ ವ್ಯವಸ್ಥೆಯನ್ನು ಪೋಷಿಸುವುದು. ಜಾತಿ ವ್ಯವಸ್ಥೆಯನ್ನು ಅನಿಷ್ಟಗಳಿಗೆ ಮೂಲ ಎನ್ನುವವರೇ ಅದನ್ನು ಪೋಷಿಸುತ್ತಿದ್ದಾರೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಜಾತ್ಯಾತೀತ ಎಂದು ಹೇಳಿಕೊಳ್ಳುವಾಗ ಇಲ್ಲಿ ಜಾತಿ, ಪಂಗಡಗಳ ಲೆಕ್ಕಾಚಾರ ಯಾಕೆ ಎಂದು ಉಡುಪಿ ಪ್ರಶ್ನಿಸಿ ಶ್ರೀಗಳು ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಬಿ.ಕೆ ಹರಿಪ್ರಸಾದ್ ತನ್ನ ವಿರುದ್ಧ ಮಾಡಿದ

ಅನಿಷ್ಟಗಳಿಗೆಲ್ಲ ಜಾತಿ ವ್ಯವಸ್ಥೆ ಕಾರಣ ಎನ್ನುವವರೇ ಅದನ್ನು ಪೋಷಿಸುತ್ತಿದ್ದಾರೆ: ಪೇಜಾವರ ಶ್ರೀ Read More »

ಜಗದಗಲ ಇವೆ ಅಚ್ಚರಿಯ ಸಂಗತಿಗಳು!

ನಂಬಲು ಕಷ್ಟವಾದರೂ ನಂಬಲೇ ಬೇಕು ನಾವು ಕಣ್ಣು ತೆರೆದು ನೋಡಿದರೆ ಜಗತ್ತಿನಲ್ಲಿ ನಮ್ಮ ಊಹೆಗೂ ಮೀರಿದ ಸಂಗತಿಗಳು ಇವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಪಟ್ಟಿ ಮಾಡೋಣ. 1) ಜಗತ್ತಿನ ಅತಿ ಸಣ್ಣ ದೇಶ ಅಂದರೆ ವ್ಯಾಟಿಕನ್. ಅದರ ಜನಸಂಖ್ಯೆ ಕೇವಲ 453. ಅದರ ವಿಸ್ತೀರ್ಣ 0.44 ಚದರ ಕಿಲೋಮೀಟರ್. ಈ ದೇಶವನ್ನು ಕಾಲ್ನಡಿಗೆಯಲ್ಲಿ ಸುತ್ತಿಬರಲು 30 ನಿಮಿಷ ಸಾಕು. 2) ವ್ಯಾಟಿಕನ್ ದೇಶದಲ್ಲಿ ಆದಾಯ ತೆರಿಗೆ ಇಲ್ಲ. ಅಲ್ಲಿ ಬಸ್ಸು, ರೈಲು, ಕ್ಯಾಬ್‌ಗಳಂತಹ ಸಾರ್ವಜನಿಕ ಸಾರಿಗೆ ಇಲ್ಲವೇ

ಜಗದಗಲ ಇವೆ ಅಚ್ಚರಿಯ ಸಂಗತಿಗಳು! Read More »

error: Content is protected !!
Scroll to Top