ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಉಪ್ಪಿನಂಗಡಿ: ಮಹಿಳೆಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಣಾಲು ಗ್ರಾಮದ ಚಾಮೇತಮೂಲೆ ಎಂಬಲ್ಲಿ ನಡೆದಿದೆ. ಅಂಬೇಡ್ಕರ್ ಎಂಬವರ ಪತ್ನಿ ಸೀತಾ (47) ಎಂಬವರು  ಆತ್ಮಹತ್ಯೆ ಮಾಡಿಕೊಂಡವರು. ಕ್ಯಾನ್ಸರ್ ಪೀಡಿತರಾಗಿದ್ದ ಸೀತಾ ಅವರು ನಿರಂತರ ಚಿಕಿತ್ಸೆ ಪಡೆದರೂ ಗುಣಮುಖರಾಗದೆ ಇದ್ದ ಬಗ್ಗೆ ಮನನೊಂದು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ Read More »

ಕನ್ನಡ ರಾಜ್ಯೋತ್ಸವಕ್ಕೆ ಮೋದಿ ಶುಭಾಶಯ

ಹೊಸದಿಲ್ಲಿ: ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಜನತೆಗೆ ಶುಭ ಹಾರೈಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್​​​ನಲ್ಲಿ ಕನ್ನಡದಲ್ಲೇ ಸಂದೇಶ ಪ್ರಕಟಿಸುವ ಪ್ರಧಾನಿ ಕರ್ನಾಟಕದ ಜತೆ ಸದಾ ಸಂತೋಷ, ಯಶಸ್ಸು ಗಳಿಸುವಂತಾಗಲಿ ಎಂದು ಹಾರೈಸಿದ್ದಾರೆ. ಕನ್ನಡ ರಾಜ್ಯೋತ್ಸವವು ಅತ್ಯಂತ ವಿಶೇಷವಾದ ಸಂದರ್ಭವಾಗಿದ್ದು, ಇದು ಕರ್ನಾಟಕದ ಅನುಕರಣೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗುರುತಿಸುತ್ತದೆ. ರಾಜ್ಯವು ಮಹಾನ್ ವ್ಯಕ್ತಿಗಳನ್ನು ಪಡೆದಿದ್ದು, ಅವರು ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮತ್ತು ನಾವೀನ್ಯಕ್ಕೆ ಶಕ್ತಿ ತುಂಬುತ್ತಿದ್ದಾರೆ. ಕರ್ನಾಟಕದ ಜನರು ಸದಾ ಸಂತೋಷ

ಕನ್ನಡ ರಾಜ್ಯೋತ್ಸವಕ್ಕೆ ಮೋದಿ ಶುಭಾಶಯ Read More »

ಜ.1 : ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ | ದಶಮಾನೋತ್ಸವ ಸಮಿತಿ ವತಿಯಿಂದ ಪೂರ್ವಸಿದ್ಧತಾ ಸಭೆ

ಪುತ್ತೂರು: ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಜ.1 ರಂದು ನಡೆಯಲಿರುವ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ದಶಮಾನೋತ್ಸವ ಸಂಭ್ರಮದ ಸಮಾರೋಪ ಸಮಾರಂಭದ ಪೂರ್ವ ಸಿದ್ಧತೆಯಾಗಿ ಟ್ರಸ್ಟ್ ಮತ್ತು ದಶಮಾನೋತ್ಸವ ಸಮಿತಿ ವತಿಯಿಂದ ಸಭೆ ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ನಡೆಯಿತು. ದಶಮಾನೋತ್ಸವ ಸಮಿತಿ ಅಧ್ಯಕ್ಷ ಪಟೇಲ್ ಗೋಪಾಲಕೃಷ್ಣ ಗೌಡ ಚಾರ್ವಾಕ ಮಾತನಾಡಿ, ಒಕ್ಕಲಿಗ ಸ್ವಸಹಾಯ ಸಂಘ ಕೇವಲ ಒಂದು ತಾಲೂಕು, ಜಿಲ್ಲೆ, ರಾಜ್ಯಕ್ಕೆ ಸೀಮಿತವಾಗಿಲ್ಲ. ಇಂದೊಂದು ರಾಷ್ಟ್ರ ಮಟ್ಟದ ಒಕ್ಕೂಟವಾಗಿದೆ.

ಜ.1 : ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ | ದಶಮಾನೋತ್ಸವ ಸಮಿತಿ ವತಿಯಿಂದ ಪೂರ್ವಸಿದ್ಧತಾ ಸಭೆ Read More »

ನ.17ರಿಂದ ಕಂಬಳ ಋತು ಆರಂಭ

ಪಿಲಿಕುಳದಲ್ಲಿ ಹಲವು ವರ್ಷಗಳ ಬಳಿಕ ಮೊದಲ ಕಂಬಳ ಮಂಗಳೂರು: ಈ ಕಂಬಳ ಋತುವಿನ ಮೊದಲ ಕಂಬಳ ನ.17ರಂದು ಪಿಲಿಕುಳದಲ್ಲಿ ನಡೆಯಲಿದೆ. ಹಿಂದೆ ಪಿಲಿಕುಳದಲ್ಲಿ ಕಂಬಳ ನಡೆಯುತ್ತಿದ್ದರೂ ನಿಂತುಹೋಗಿ ಬಹಳ ವರ್ಷಗಳಾಗಿತ್ತು. ಹೀಗಾಗಿ ಕಂಬಳ ಋತುವನ್ನು ಪಿಲಿಕುಳದಿಂದ ಪ್ರಾರಂಭಿಸಲು ಕಂಬಳ ಸಮಿತಿ ತೀರ್ಮಾನಿಸಿದೆ. ಈ ಕಂಬಳಕ್ಕೆ ಸಕಲ ಸಿದ್ಧತೆಗಳನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಕೈಗೊಂಡಿದೆ. ಈಗಾಗಲೇ ಒಂದೆರಡು ಕಡೆ ಸಾಂಪ್ರದಾಯಿಕವಾಗಿ ಜೂನಿಯರ್‌ ಮತ್ತು ಸಬ್‌ಜೂನಿಯರ್‌ ಕಂಬಳಗಳು ನಡೆದಿವೆ. ಇವುಗಳಲ್ಲಿ ಸೀಮಿತ ಸಂಖ್ಯೆಯ ಕೋಣಗಳಷ್ಟೇ ಭಾಗವಹಿಸಿವೆ. ಇದೇ ಮಾದರಿಯ ಇನ್ನೊಂದು

ನ.17ರಿಂದ ಕಂಬಳ ಋತು ಆರಂಭ Read More »

ಅಳಕೆಮಜಲು ಶ್ರೀ ಶಾರದಾಂಭ ಭಜನಾ ಮಂಡಳಿ ನೂತನ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಪುತ್ತೂರು: ಅಳಕೆಮಜಲು ಅಶೋಕ ನಗರ ಶ್ರೀ ಶಾರದಾಂಭ ಭಜನಾ ಮಂಡಳಿ ವಾರ್ಷಿಕ ಲೆಕ್ಕ ಪತ್ರ ಮಂಡನೆ ಹಾಗೂ ನೂತನ ಸಮಿತಿಯನ್ನು ಭಜನಾ ಮಂಡಳಿಯ ಅಧ್ಯಕ್ಷ ಜಗದೀಶ್ ಪೂಜಾರಿ, ಗೌರವ ಸಲಹೆಗಾರ ರಾಜಾರಾಮ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ನೇಮಿಸಲಾಯಿತು. ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ ಕೃಷ್ಣಕಿಶೋರ್ ಭಟ್ ಪೆಲತ್ತಿಂಜ, ಉಪಾಧ್ಯಕ್ಷರಾಗಿ ಉದಯ್ ಕುಲಾಲ್ ಪುಂಡಿಕಾಯಿ, ಪ್ರಧಾನ ಕಾರ್ಯದರ್ಶಿಯಾಗಿ ಸಂಜೀವ ಗೌಡ ಪೆಲತ್ತಿಂಜ ಜೊತೆ ಕಾರ್ಯದರ್ಶಿಯಾಗಿ ಪ್ರದೀಪ್ ಉರಿಮಜಲು, ಕೋಶಾಧಿಕಾರಿಯಾಗಿ ಸತೀಶ್ ನಾಯ್ಕ್ ಪುಂಡಿಕಾಯಿ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ

ಅಳಕೆಮಜಲು ಶ್ರೀ ಶಾರದಾಂಭ ಭಜನಾ ಮಂಡಳಿ ನೂತನ ಸಮಿತಿಗೆ ಪದಾಧಿಕಾರಿಗಳ ಆಯ್ಕೆ Read More »

ಪುರಾತನ ದೇವಸ್ಥಾನಕ್ಕೂ ಬಂತು ವಕ್ಫ್‌ ನೋಟಿಸ್‌

ಒಂದು ವರ್ಷದ ಹಿಂದೆ ಪಹಣಿ ತಿದ್ದುಪಡಿ ಮಾಡಿರುವ ಅನುಮಾನ ಮಂಡ್ಯ : ವಕ್ಫ್ ನೋಟಿಸ್‌ಗಳಿಂದ ರೈತರು ಮತ್ತು ಮಠಗಳು ಕಂಗಾಲಾಗಿರುವ ಹೊತ್ತಲ್ಲೇ ಪುರಾತನ ದೇವಸ್ಥಾನದ ಆಸ್ತಿಯನ್ನೂ ವಕ್ಫ್‌ ಮಂಡಳಿಗೆ ಸೇರಿಸಿರುವುದು ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಪುರಾತನ ಶ್ರೀ ಚಿಕ್ಕಮ್ಮ ಚಿಕ್ಕದೇವಿ ದೇವಸ್ಥಾನದ ಪಹಣಿಯಲ್ಲಿಯೂ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ತಿಳಿದುಬಂದಿದೆ. ಇದು ಗ್ರಾಮಸ್ಥರನ್ನು ಕೆರಳಿಸಿದೆ. ರಾಜ್ಯದಾದ್ಯಂತ ವಕ್ಫ್ ವಿಚಾರದ ಬಗ್ಗೆ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ದೇಗುಲದ ಆಸ್ತಿ ದಾಖಲೆ ನೋಡಿದ ಗ್ರಾಮಸ್ಥರಿಗೆ ಶಾಕ್

ಪುರಾತನ ದೇವಸ್ಥಾನಕ್ಕೂ ಬಂತು ವಕ್ಫ್‌ ನೋಟಿಸ್‌ Read More »

ಮುಂಬಯಿ – ಕನ್ನಡ ಸಾಹಿತ್ಯದ ಶಕ್ತಿಕೇಂದ್ರ

ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯದ ಬೆಳವಣಿಗೆಯಲ್ಲಿ ಮುಂಬಯಿ ಕನ್ನಡಿಗರ ಕೊಡುಗೆ ಭಾರಿ ದೊಡ್ಡದು ಕನ್ನಡ ರಾಜ್ಯೋತ್ಸವ ನಾಡಿನ ಕದವನ್ನು ತಟ್ಟುತ್ತಿರುವಾಗ ದೇಶದಾದ್ಯಂತ ಹರಡಿರುವ ಮತ್ತು ಕನ್ನಡವನ್ನು ಬೆಳೆಸಿರುವ ಮಹನೀಯರ ಕೊಡುಗೆಗಳನ್ನು ಉಲ್ಲೇಖ ಮಾಡದೆ ಮುಂದೆ ಹೋಗುವ ಹಾಗೆಯೇ ಇಲ್ಲ.ಅದರಲ್ಲಿಯೂ ಮಹಾರಾಷ್ಟ್ರದ ನಗರಗಳಾದ ಮುಂಬಯಿ, ಸೊಲ್ಲಾಪುರ, ಪುಣೆ, ನಾಂದೇಡ್, ಸಾಂಗ್ಲಿ, ಕೊಲ್ಲಾಪುರ ಮತ್ತು ಉಸ್ಮಾನಾಬಾದ್‌ಗಳಲ್ಲಿ ನೆಲೆಸಿರುವ ಅಂದಾಜು ಅರುವತ್ತು ಲಕ್ಷದಷ್ಟಿರುವ ಕನ್ನಡಿಗರು ತಮ್ಮ ಕನ್ನಡದ ಪ್ರೀತಿಯನ್ನು, ಅಸ್ಮಿತೆಯನ್ನು ಜತನದಿಂದ ಕಾಪಾಡಿಕೊಂಡು ಬರುತ್ತಿರುವುದನ್ನು ನೋಡಿದಾಗ ಅಭಿಮಾನದಿಂದ ನಮ್ಮ ಎದೆ ಉಬ್ಬುತ್ತದೆ.

ಮುಂಬಯಿ – ಕನ್ನಡ ಸಾಹಿತ್ಯದ ಶಕ್ತಿಕೇಂದ್ರ Read More »

Best Ontario Online Internet Casinos 2024 Ontario Betting Site

Best Ontario Online Internet Casinos 2024 Ontario Betting Sites 10+ Legitimate On Sites Regarding Real Money Content Online Casino Wildz Casino Ontario From A Glance Like Apps? Love These First Region Casinos ♠️ Table Games Other Great Online Betting Options Casumo Ontario Casino – The Best Online Casino In Ontario With Regard To Casino And

Best Ontario Online Internet Casinos 2024 Ontario Betting Site Read More »

Aplikacja Total On Line Casino Jak Pobrać? Total Casino Blo

Aplikacja Total On Line Casino Jak Pobrać? Total Casino Blog Automaty Entire Casino Blog Content Słoneczne Hity Z Total Casino – Najlepsze Gry Mhh Lato Aplikacja Total Casino Grunzochse Pobrać? Co To Jest Blik I Jak Działa W Kasynie Internetowym? Polskie Live Casino At Redbet – Stawki I Rodzaje Gier Halloween Kasyno Bonus Free Rounds

Aplikacja Total On Line Casino Jak Pobrać? Total Casino Blo Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ಐಒಟಿ ಮಾದರಿಗಳ ಪ್ರದರ್ಶನ ಕಾರ್ಯಕ್ರಮ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಗಣಕ ವಿಜ್ಞಾನ ವಿಭಾಗ, ಪಿನ್ಯಾಕಲ್‌ಐಟಿ ಕ್ಲಬ್‌ಹಾಗೂ ಐಐಸಿಗಳ ಸಂಯುಕ್ತ ಆಶ್ರಯದಲ್ಲಿ ಐಒಟಿ ಮಾದರಿಗಳ ಪ್ರದರ್ಶನವನ್ನು ಬುಧವಾರ ಆಯೋಜಿಸಲಾಯಿತು. ಕಾಲೇಜಿನ ಪ್ರಿನ್ಸಿಪಾಲ್ ವಂ.ಡಾ. ಆ್ಯಂಟನಿ ಪ್ರಕಾಶ್‌ಮೊಂತೇರೊ ಅಧ್ಯಕ್ಷತೆ ವಹಿಸಿ, ಸಾಧಿಸುವ ಛಲ ಹಾಗೂ ಒಳ್ಳೆಯ ಮನಸ್ಸಿದ್ದಲ್ಲಿ ಯಾವುದೇ ಕಾರ್ಯವೂ ಕಷ್ಟವೆಂದೆನಿಸುವುದಿಲ್ಲ. ಯಾವುದೇ ಪರಿಸ್ಥಿತಿಯ ಬಗ್ಗೆ ದೂರು ನೀಡಬೇಡಿ ಬದಲಿಗೆ ಪೂರಕವಾಗಿ ಯೋಚನೆ ಮಾಡಲು ಪ್ರಾರಂಭಿಸಿ. ಐಒಟಿ ಮಾದರಿಗಳ ಪ್ರದರ್ಶನವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದಕ್ಕಾಗಿ ಸಂಘಟಕರನ್ನು ಪ್ರಶಂಶಿಸಿದರು. ಕಾಲೇಜಿನ ಬಿಸಿಎ ವಿಭಾಗದ ವಿದ್ಯಾರ್ಥಿಗಳು ಹದಿನೈದಕ್ಕೂ ಹೆಚ್ಚಿನ

ಸಂತ ಫಿಲೋಮಿನಾ ಕಾಲೇಜಿನಲ್ಲಿ ಐಒಟಿ ಮಾದರಿಗಳ ಪ್ರದರ್ಶನ ಕಾರ್ಯಕ್ರಮ Read More »

error: Content is protected !!
Scroll to Top