ಎಡನೀರು ಶ್ರೀಗಳ ವಾಹನಕ್ಕೆ ಅಡ್ಡಿ | ವಿಶ್ವಹಿಂದೂ ಪರಿಷದ್‍ ನಿಂದ ಖಂಡನೆ

ಮಂಗಳೂರು: ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಸಂಚರಿಸುತಿದ್ದ ವಾಹನಕ್ಕೆ ಕಿಡಿಗೇಡಿಗಳು ತಡೆಯೊಡ್ಡಿ ಕೃತ್ಯ ಎಸಗಿದ ಘಟನೆಯನ್ನು ವಿಶ್ವ ಹಿಂದೂ ಪರಿಷದ್ ಬಲವಾಗಿ ಖಂಡಿಸುತ್ತದೆ. ಪೂಜ್ಯ ಸಾಧು ಸಂತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈ ಕುರಿತು ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿ  ಶರಣ್ ಪಂಪವೆಲ್ ಕೇರಳ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಎಡನೀರು ಶ್ರೀಗಳ ವಾಹನಕ್ಕೆ ಅಡ್ಡಿ | ವಿಶ್ವಹಿಂದೂ ಪರಿಷದ್‍ ನಿಂದ ಖಂಡನೆ Read More »

ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅನಾಜೆ ಶಾಖೆಯಲ್ಲಿ ಗಣಹೋಮ

ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅನಾಜೆ ಶಾಖೆಯಲ್ಲಿ ಗಣಪತಿ ಹೋಮ ಇಂದು ಬೆಳಿಗ್ಗೆ ನಡೆಯಿತು. ಅರ್ಚಕ  ರಾಧಾಕೃಷ್ಣ ಶಗ್ರಿತ್ತಾಯ ವೈದಿಕ ವಿಧಿವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ನವೀನ್ ಡಿ, ಉಪಾಧ್ಯಕ್ಷೆ ಪವಿತ್ರ ಕೆ. ಪಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಧುಕರ್ ಎಚ್., ನಿರ್ದೇಶಕ ನಮಿತ ಸೇರಾಜೆ, ಶಿವ ಪ್ರಸಾದ್, ಜಯರಾಮ್ ಪೂಜಾರಿ, ಬಾಬು ಶೆಟ್ಟಿ, ನರಿಮೊಗರು ಗ್ರಾಮ ಪಂಚಾಯತ್ ಸದಸ್ಯೆ ವಸಂತಿ ಗಂಡಿ, ಅನಾಜೆ ಹಾಲು  ಉತ್ಪಾದಕರ ಸಂಘದ ಅಧ್ಯಕ್ಷ ಹರ್ಷ

ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅನಾಜೆ ಶಾಖೆಯಲ್ಲಿ ಗಣಹೋಮ Read More »

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಎನ್‍ ಎಸ್‍ ಎಸ್‍ ಘಟಕದ ವಾರ್ಷಿಕ ಕಾರ್ಯ ಚಟುವಟಿಕೆಗಳ ಉದ್ಘಾಟನೆ, ಪ್ರಶಿಕ್ಷಣ ಕಾರ್ಯಕ್ರಮ | ಎನ್. ಎಸ್. ಎಸ್. ವಿದ್ಯಾರ್ಥಿಗಳನ್ನು ಸಮಾಜಮುಖಿಗಳನ್ನಾಗಿ ಮಾಡುವ ಅದ್ಬುತ ವೇದಿಕೆ : ಡಾ. ಲಕ್ಷ್ಮೀನಾರಾಯಣ ಕೆ.ಎಸ್.

ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2024-25ನೇ ಸಾಲಿನ ವಾರ್ಷಿಕ ಕಾರ್ಯ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಶಿಕ್ಷಣ ಕಾರ್ಯಕ್ರಮ ಮಹಾವಿದ್ಯಾಲಯದ ಸುಜ್ಞಾನ  ದೀಪಿಕಾ ಸಭಾಂಗಣದಲ್ಲಿ ನಡೆಯಿತು. ಉಜಿರೆ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿ(ಸ್ವಾಯತ್ತ)ನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಲಕ್ಷ್ಮೀನಾರಾಯಣ ಕೆ.ಎಸ್. ಕಾರ್ಯಕ್ರಮ ಉದ್ಘಾಟಿಸಿ, ಎನ್.ಎಸ್.ಎಸ್.ನ ಹುಟ್ಟು, ಬೆಳವಣಿಗೆ, ಕಾರ್ಯಕ್ರಮಗಳ ರೂಪುರೇಷೆ ಹಾಗೂ ವಿದ್ಯಾರ್ಥಿಗಳು ಯಾವ ರೀತಿ ಈ ಘಟಕದಲ್ಲಿ ತಮ್ಮನ್ನು ತಾವು ತೊಡಗಿಸಬಹುದು ಎಂಬುದನ್ನು ವಿವರಿಸಿದರು. ಇಂದಿನ ಆಧುನಿಕ ಕಾಲಘಟ್ಟದಲ್ಲಿ ಓದು

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಎನ್‍ ಎಸ್‍ ಎಸ್‍ ಘಟಕದ ವಾರ್ಷಿಕ ಕಾರ್ಯ ಚಟುವಟಿಕೆಗಳ ಉದ್ಘಾಟನೆ, ಪ್ರಶಿಕ್ಷಣ ಕಾರ್ಯಕ್ರಮ | ಎನ್. ಎಸ್. ಎಸ್. ವಿದ್ಯಾರ್ಥಿಗಳನ್ನು ಸಮಾಜಮುಖಿಗಳನ್ನಾಗಿ ಮಾಡುವ ಅದ್ಬುತ ವೇದಿಕೆ : ಡಾ. ಲಕ್ಷ್ಮೀನಾರಾಯಣ ಕೆ.ಎಸ್. Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ವಿಶನ್‌-24’ ಉದ್ಘಾಟನೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಗಣಕ ವಿಜ್ಞಾನ ವಿಭಾಗ ಹಾಗೂ ಪಿನ್ಯಾಕಲ್‌ ಐಟಿ ಕ್ಲಬ್‌ ಗಳ ಜಂಟಿ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಆಯೋಜಿಸಲಾದ ಇಂಟ್ರಾ ಡಿಪಾರ್ಟ್‌ಮೆಂಟ್‌ ಐಟಿ ಫೆಸ್ಟ್‌ ವಿಶನ್‌ 24ನ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್‌ ಮೊಂತೇರೊ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ನಮ್ಮ ವರ್ತನೆಗೆ ಆಂತರಿಕ ತುಮುಲವೇ ಕಾರಣ. ಆದ್ದರಿಂದ ಮನಸ್ಸನು ಆದಷ್ಟು ಶುದ್ಧವಾಗಿರಿಸಿಕೊಳ್ಳಬೇಕು. ನಾವು ಸಮಾಜಕ್ಕೆ ನೀಡುವ ಕೊಡುಗೆಗಳಿಂದಲೇ ಜನರು ನಮ್ಮನ್ನು ನೆನಪಿಸುತ್ತಾರೆ. ಆದುದರಿಂದ

ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ವಿಶನ್‌-24’ ಉದ್ಘಾಟನೆ Read More »

ಸಲ್ಮಾನ್‌ ಖಾನ್‌ಗೆ ಮತ್ತೆ ಜೀವ ಬೆದರಿಕೆ ಕರೆ

5 ಕೋಟಿ ರೂ. ಕೊಟ್ಟು, ದೇವಸ್ಥಾನಕ್ಕೆ ಹೋಗಿ ಕ್ಷಮೆ ಯಾಚಿಸದಿದ್ದರೆ ಫಿನಿಶ್‌ ಎಂದು ಧಮಕಿ ಮುಂಬಯಿ : ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ಮತ್ತೊಂದು ಜೀವ ಬೆದರಿಕೆ ಕರೆ ಬಂದಿದೆ. ಈ ಸಲ ಬೆದರಿಕೆ ಹಾಕಿದವ ಲಾರೆನ್ಸ್‌ ಬಿಷ್ಣೋಯ್‌ಯ ಸಹೋದರನ ಹೆಸರು ಹೇಳಿಕೊಂಡಿದ್ದಾನೆ. ಇದರೊಂದಿಗೆ ಕಳೆದ 10 ದಿನಗಳಲ್ಲಿ ಸಲ್ಮಾನ್‌ಗೆ ಮೂರು ಬೆದರಿಕೆಗಳು ಬಂದಿವೆ.ಮುಂಬಯಿ ಟ್ರಾಫಿಕ್‌ ಪೊಲೀಸರಿಗೆ ಕರೆ ಬಂದಿದ್ದು, ಸಲ್ಮಾನ್ ಖಾನ್ ದೇವಸ್ಥಾನಕ್ಕೆ ಹೋಗಿ ತಪ್ಪಾಯ್ತು ಎಂದು ಕ್ಷಮೆ ಕೇಳಬೇಕು ಅಥವಾ 5 ಕೋಟಿ ರೂ.

ಸಲ್ಮಾನ್‌ ಖಾನ್‌ಗೆ ಮತ್ತೆ ಜೀವ ಬೆದರಿಕೆ ಕರೆ Read More »

ವಕ್ಫ್‌ ಕಾಯ್ದೆ ನೆಹರು ಸೃಷ್ಟಿ : ಶೋಭಾ ಕರಂದ್ಲಾಜೆ

ಮುಸ್ಲಿಮರ ಓಲೈಕೆಗಾಗಿ ಹಿಂದು ಮಠ, ಮಂದಿರಗಳನ್ನು ಸರಕಾರ ವಕ್ಫ್‌ಗೆ ಸೇರಿಸುತ್ತಿದೆ ಎಂದು ಆರೋಪ ವಿಜಯಪುರ: ಅಂಬೇಡ್ಕರ್ ಸಂವಿಧಾನದಲ್ಲಿ ವಕ್ಪ್ ಕಾಯ್ದೆ ಬಗ್ಗೆ ಉಲ್ಲೇಖವೇ ಇಲ್ಲ. 1954-55ರಲ್ಲಿ ನೆಹರು ಸರ್ಕಾರ ವಕ್ಪ್ ಕಾಯ್ದೆಯನ್ನು ಸಂವಿಧಾನಕ್ಕೆ ಸೇರಿಸಿ ಅದಕ್ಕೆ ಹೆಚ್ಚಿನ ಅಧಿಕಾರ ನೀಡಿತ್ತು ಎಂದು ಕೇಂದ್ರ ಸಚಿವೆ ಶೋಭಾ ಕರ‌ಂದ್ಲಾಜೆ ಹೇಳಿದ್ದಾರೆ.ವಕ್ಫ್ ಆಸ್ತಿ ವಿಚಾರವಾಗಿ ಬಿಜೆಪಿ ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಸೋಮಚಾರ ವಿಜಯಪುರದಲ್ಲಿ ಮಾತನಾಡಿದ ಅವರು, ವಕ್ಫ್ ಮಂಡಳಿ ಅಸಾಂವಿಧಾನಿಕ ಸಂಸ್ಥೆಯಾಗಿದ್ದು, ಕಾಂಗ್ರೆಸ್‌ನ ಮುಸ್ಲಿಂ ತುಷ್ಟೀಕರಣದ ಭಾಗವಾಗಿ ಮಾಜಿ

ವಕ್ಫ್‌ ಕಾಯ್ದೆ ನೆಹರು ಸೃಷ್ಟಿ : ಶೋಭಾ ಕರಂದ್ಲಾಜೆ Read More »

ಡಾ. ಚಿನ್ನಪ್ಪ ಗೌಡರಿಗೆ ಡಾ. ಜಿ.ಶಂ.ಪ ತಜ್ಞ ಪ್ರಶಸ್ತಿ

ಮಂಗಳೂರು: 2023ನೇ ಸಾಲಿನ ಡಾ. ಜಿ.ಶಂ.ಪ ತಜ್ಞ ಪ್ರಶಸ್ತಿಯನ್ನು ಡಾ. ಕೆ. ಚಿನ್ನಪ್ಪ ಗೌಡ ಅವರಿಗೆ ಘೋಷಿಸಲಾಗಿದೆ. ಜನಪದ ಆರಾಧನೆಯ ‘ಮಧ್ಯಂತರ ಜಗತ್ತು’ ಮತ್ತು ಅದರ ‘ಸಂಕೀರ್ಣ ಪಠ್ಯ’, ಜಾನಪದದ ಅರ್ಥ ಮತ್ತು ಕಾರ್ಯಗಳ ವಿವೇಚನೆ, ಜಾನಪದ ಪ್ರಕಾರವೊಂದರ ಪ್ರದರ್ಶನ ಸಂದರ್ಭದ ಆಚೆಗಿರುವ ವಿವರಗಳ ಪರಿಕಲ್ಪನೆಗಳನ್ನು ವಿವರಿಸಿ ಜಾನಪದ ಅಧ್ಯಯನದಲ್ಲಿ ವಿಶೇಷವಾಗಿ ತೊಡಗಿಸಿಕೊಂಡವರು ಡಾ. ಕೆ.ಚಿನ್ನಪ್ಪ ಗೌಡ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಚಿನ್ನಪ್ಪ ಗೌಡ ಅವರು ಭೂತಾರಾಧನೆಯ ಅತ್ಯಂತ ಪ್ರಾಚೀನವೂ ವಿಶಿಷ್ಟವೂ ಆದ ‘ಜಾಲಾಟ’ದ

ಡಾ. ಚಿನ್ನಪ್ಪ ಗೌಡರಿಗೆ ಡಾ. ಜಿ.ಶಂ.ಪ ತಜ್ಞ ಪ್ರಶಸ್ತಿ Read More »

ಪಟಾಕಿ ಡಬ್ಬಾದ ಮೇಲೆ ಕುಳಿತುಕೊಳ್ಳುವ ಸವಾಲು ಸ್ವೀಕರಿಸಿ ಪ್ರಾಣ ಕಳೆದುಕೊಂಡ ಯುವಕ

ಆಟೋರಿಕ್ಷಾ ಸಿಗುವ ಎಂಬ ಆಸೆಯಿಂದ ಅಪಾಯಕಾರಿ ಆಟ ಆಡಿದ ಯುವಕ ಬೆಂಗಳೂರು : ಪಟಾಕಿ ಜೊತೆ ಹುಡುಗಾಟವಾಡಲು ಹೋಗಿ ಯುವಕ ಪ್ರಾಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನ ಕೋಣನಕುಂಟೆ ವ್ಯಾಪ್ತಿಯ ವಿವರ್ಸ್ ಕಾಲೋನಿಯಲ್ಲಿ ನಡೆದಿದೆ. ಶಬರೀಶ್​ (32) ಮೃತ ಯುವಕ. ಯುವಕರ ಹುಚ್ಚಾಟದ ದೃಶ್ಯ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಕ್ಟೋಬರ್ 31ರಂದು ಐದಾರು ಮಂದಿ ಯುವಕರು ಶಬರೀಶ್​ಗೆ ಪಟಾಕಿ ತುಂಬಿಸಿದ ಡಬ್ಬಾದ ಮೇಲೆ ಕುಳೀತುಕೊಳ್ಳಲು ಸವಾಲು ಹಾಕುತ್ತಾರೆ. ಡಬ್ಬಾದಲ್ಲಿ ಪಟಾಕಿ ತುಂಬಿಸಿ ಬೆಂಕಿಹಚ್ಚಿ ಅದರ ಮೇಲೆ ಶಬರೀಶ್​ನನ್ನು

ಪಟಾಕಿ ಡಬ್ಬಾದ ಮೇಲೆ ಕುಳಿತುಕೊಳ್ಳುವ ಸವಾಲು ಸ್ವೀಕರಿಸಿ ಪ್ರಾಣ ಕಳೆದುಕೊಂಡ ಯುವಕ Read More »

ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅವಧಿ ನ.30ರ ತನಕ ವಿಸ್ತರಣೆ

ಇನ್ನೂ ಒಂದೂವರೆ ಕೋಟಿ ವಾಹನಗಳಿಗೆ ನಂಬರ್‌ ಪ್ಲೇಟ್‌ ಅಳವಡಿಕೆಯಾಗಿಲ್ಲ ಬೆಂಗಳೂರು: ಸಾರಿಗೆ ಇಲಾಖೆ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸುವ ಗಡುವನ್ನು ಮತ್ತೊಮ್ಮೆ ವಿಸ್ತರಿಸಿ ವಾಹನ ಮಾಲಕರಿಗೆ ತುಸು ನೆಮ್ಮದಿ ನೀಡಿದೆ. ಈಗಾಗಲೇ ಮೂರಕ್ಕೂ ಅಧಿಕ ಬಾರಿ ಗಡುವು ವಿಸ್ತರಣೆ ಮಾಡಲಾಗಿದೆ. ಆದರೆ ಇನ್ನೂ ಸುಮಾರು 1.5 ಕೋಟಿ ವಾಹನಗಳು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ಬಾಕಿ ಇರುವುದರಿಂದ ಅಂತಿಮ ಗಡುವನ್ನು ವಿಸ್ತರಣೆ ಮಾಡಲಾಗಿದೆ.ಸಾರಿಗೆ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಪುಷ್ಪಾ ವಿ. ಎಸ್. ಎಚ್‌ಎಸ್‌ಆರ್‌ಪಿ ಗಡುವನ್ನು

ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅವಧಿ ನ.30ರ ತನಕ ವಿಸ್ತರಣೆ Read More »

ಮುಡಾ ಹಗರಣ : ನಾಳೆ ಲೋಕಾಯುಕ್ತ ಪೊಲೀಸರಿಂದ ಸಿದ್ದರಾಮಯ್ಯ ವಿಚಾರಣೆ

40 ವರ್ಷದ ರಾಜಕಾರಣದಲ್ಲಿ ಮೊದಲ ಸಲ ಹಗರಣದ ಕೇಸಿನಲ್ಲಿ ವಿಚಾರಣೆ ಎದುರಿಸಲಿರುವ ಸಿದ್ದರಾಮಯ್ಯ ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) 14 ಸೈಟ್‌ಗಳನ್ನು ಅಕ್ರಮವಾಗಿ ಪಡೆದುಕೊಂಡ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಿಚಾರಣೆಗೆ ಹಾಜರಾಗಲು ಲೋಕಾಯುಕ್ತ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ. ನ.6ರಂದು ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.ಮುಡಾ ಹಗರಣಕ್ಕೆ ಸಂಬಂಧಿಸಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರನ್ನು ಲೋಕಾಯುಕ್ತ ಪೊಲೀಸರು ಈಗಾಗಲೇ ವಿಚಾರಣೆ ನಡೆಸಿದ್ದಾರೆ. ಆಗಲೇ ಸಿದ್ದರಾಮಯ್ಯನವರು ಲೋಕಾಯುಕ್ತ ವಿಚಾರಣೆ ಎದುರಿಸಲಿರುವುದು ಖಾತ್ರಿಯಾಗಿತ್ತು.ಸಿದ್ದರಾಮಯ್ಯನವರ 40

ಮುಡಾ ಹಗರಣ : ನಾಳೆ ಲೋಕಾಯುಕ್ತ ಪೊಲೀಸರಿಂದ ಸಿದ್ದರಾಮಯ್ಯ ವಿಚಾರಣೆ Read More »

error: Content is protected !!
Scroll to Top