ಅಡಿಕೆ ಮೇಲೆ ಮತ್ತೆ ಕ್ಯಾನ್ಸರ್‌ ತೂಗುಗತ್ತಿ | ಬಾಯಿಕ್ಯಾನ್ಸರ್‌ಗೆ ಮುಖ್ಯ ಕಾರಣ ಅಡಿಕೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ

ಮಂಗಳೂರು : ಕರಾವಳಿ ಜನರ ಆರ್ಥಿಕತೆಯ ಜೀವನಾಡಿಯಾಗಿರುವ ಅಡಿಕೆ ಮೇಲೆ ಮತ್ತೆ ಕ್ಯಾನ್ಸರ್‌ ತೂಗುಗತ್ತಿ ನೇತಾಡಲಾರಂಭಿಸಿದೆ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ)ಯ ಅಂಗ ಸಂಸ್ಥೆ ಇಂಟರ್‌ನ್ಯಾಷನಲ್‌ ಏಜೆನ್ಸಿ ಫಾರ್‌ ರೀಸರ್ಚ್ ಆ್ಯಂಡ್‌ ಕ್ಯಾನ್ಸರ್‌(ಐಎಆರ್‌ಸಿ) ಅಡಿಕೆ ಬಳಕೆ ನಿಯಂತ್ರಿಸಿದರೆ ವಿಶ್ವದಲ್ಲಿ ಬಾಯಿ ಕ್ಯಾನ್ಸರ್‌ ಪ್ರಮಾಣವನ್ನು ಬಹುತೇಕ ತಗ್ಗಿಸಬಹುದು ಎಂದು ಇತ್ತೀಚೆಗೆ ವರದಿ ನೀಡಿದೆ. ಈ ವರದಿ ಅಡಿಕೆ ಬಳಕೆ ಮೇಲೆ ನಿಯಂತ್ರಣ ಹೇರಲು ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಬೆಳೆಗಾರರಲ್ಲಿ ಆತಂಕ ಮೂಡಿದೆ. ಇಂಟರ್‌ ನ್ಯಾಷನಲ್‌ ಏಜೆನ್ಸಿ ಫಾರ್‌ ರೀಸರ್ಚ್ ಆ್ಯಂಡ್‌ […]

ಅಡಿಕೆ ಮೇಲೆ ಮತ್ತೆ ಕ್ಯಾನ್ಸರ್‌ ತೂಗುಗತ್ತಿ | ಬಾಯಿಕ್ಯಾನ್ಸರ್‌ಗೆ ಮುಖ್ಯ ಕಾರಣ ಅಡಿಕೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ Read More »

ಮೇಸ್ತ್ರೀ ಕೆಲಸ ಸಹಾಯಕರಾಗಿದ್ದ ಶಿವಪ್ಪ ಸಾವಿನ ಪ್ರಕರಣ | ಮಾಲಕ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಸಾಲ್ಮರ ಕೆರೆಮೂಲೆ ನಿವಾಸಿ ಶಿವಪ್ಪ ಅವರು ಮೃತಪಟ್ಟ ವಿಚಾರಕ್ಕೆ ಸಂಬಂಧಿಸಿ ಕೆಲಸ ಮಾಡುತ್ತಿದ್ದ ಮಾಲಕರ ಸಹಿತ ಮೂವರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಶಿವಪ್ಪ ಅವರ ಅಳಿಯ ಶಶಿ ಕೆರೆಮೂಲೆ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನ.16ರಂದು ಬೆಳಿಗ್ಗೆ ತಾವೋ ವುಡ್ ಇಂಡಸ್ಟ್ರೀಸ್ ನ ಮಾಲೀಕರಾದ ಹೆನ್ರಿ ತಾಮ್ರ ಅವರು ಶಿವಪ್ಪ ಅವರನ್ನು ಮರದ ಕೆಲಸಕ್ಕೆ ಕರೆದುಕೊಂಡು ಹೋಗಿದ್ದು ಬಳಿಕ ಅವರನ್ನು ಹೆನ್ರಿ ತಾವೋ, ಸ್ಪ್ಯಾನಿ  ಹಾಗೂ ಇನ್ನೊಬ್ಬರು

ಮೇಸ್ತ್ರೀ ಕೆಲಸ ಸಹಾಯಕರಾಗಿದ್ದ ಶಿವಪ್ಪ ಸಾವಿನ ಪ್ರಕರಣ | ಮಾಲಕ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲು Read More »

ತಹಶೀಲ್ದಾರ್‌ ಕಚೇರಿಯಲ್ಲಿ ಆತ್ಮಹತ್ಯೆ ಪ್ರಕರಣ : ರಾಜ್ಯಪಾಲರಿಗೆ ಬಂದ ಪತ್ರದಲ್ಲಿದೆ ಬೇರೆಯೇ ಮಾಹಿತಿ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪಿಎ ಆರೋಪಿಯಾಗಿರುವ ಪ್ರಕರಣಕ್ಕೆ ತಿರುವು ಬೆಂಗಳೂರು: ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ನ.5ರಂದು ಸಂಭವಿಸಿದ ಎಸ್‌ಡಿಎ ರುದ್ರೇಶ್ (ರುದ್ರಣ್ಣ ಯಡವಣ್ಣವರ) ಆತ್ಮಹತ್ಯೆ ಕೊಲೆ ಪ್ರಕರಣ ಎಂಬುದಾಗಿ ರಾಜ್ಯಪಾಲರಿಗೆ ಅನಾಮಧೇಯ ಪ್ರತವೊಂದು ಬರುವುದರೊಂದಿಗೆ ಈ ಪ್ರಕರಣ ತಿರುವು ಪಡೆದುಕೊಂಡಿದೆ. ರುದ್ರೇಶ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಕೊಲೆ ಎಂಬ ಒಕ್ಕಣೆಯುಳ್ಳ ಅನಾಮಧೇಯ ಪತ್ರವೊಂದು ರಾಜ್ಯಪಾಲರು, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ನಗರ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿ, ಪ್ರಕರಣದ ತನಿಖಾಧಿಕಾರಿ ಸೇರಿ ಹಲವರಿಗೆ ಬಂದಿದೆ. ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಎಸ್‌ಡಿಎ

ತಹಶೀಲ್ದಾರ್‌ ಕಚೇರಿಯಲ್ಲಿ ಆತ್ಮಹತ್ಯೆ ಪ್ರಕರಣ : ರಾಜ್ಯಪಾಲರಿಗೆ ಬಂದ ಪತ್ರದಲ್ಲಿದೆ ಬೇರೆಯೇ ಮಾಹಿತಿ Read More »

ಅಬಕಾರಿ ಇಲಾಖೆ ಭ್ರಷ್ಟಾಚಾರ ತನಿಖೆಗೆ ಎಸ್‌ಐಟಿ ರಚಿಸಿ : ಅಶೋಕ್‌ ಆಗ್ರಹ | ಮದ್ಯ ಮಾರಾಟಗಾರರ ಆರೋಪ ಸುಳ್ಳಾದರೆ ಲೈಸೆನ್ಸ್‌ ರದ್ದುಮಾಡಿ ಎಂದು ಸವಾಲು

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ನಡೆದಿರುವ 700 ಕೋಟಿ ರೂ. ಭ್ರಷ್ಟಾಚಾರ ಆರೋಪ ಕುರಿತು ಎಸ್‌ಐಟಿ ರಚನೆ ಮಾಡಿ ತನಿಖೆ ನಡೆಸಿ ಎಂದು ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಆಗ್ರಹಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಹೊರಿಸಿದ್ದ ಶೇ.40ರಷ್ಟು ಕಮಿಷನ್ ಆರೋಪವನ್ನು ಲೋಕಾಯುಕ್ತ ಸಂಸ್ಥೆ ಸುಳ್ಳೆಂದು ಸಾಬೀತು ಮಾಡಿದೆ. ರಾಜ್ಯದ ಜನರಿಗೆ ಶೇ.40 ಪರ್ಸೆಂಟ್‌ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ 100 ಪರ್ಸೆಂಟ್‌ ಭ್ರಷ್ಟರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.18 ತಿಂಗಳ ಕಾಂಗ್ರೆಸ್ ಸರ್ಕಾರದ

ಅಬಕಾರಿ ಇಲಾಖೆ ಭ್ರಷ್ಟಾಚಾರ ತನಿಖೆಗೆ ಎಸ್‌ಐಟಿ ರಚಿಸಿ : ಅಶೋಕ್‌ ಆಗ್ರಹ | ಮದ್ಯ ಮಾರಾಟಗಾರರ ಆರೋಪ ಸುಳ್ಳಾದರೆ ಲೈಸೆನ್ಸ್‌ ರದ್ದುಮಾಡಿ ಎಂದು ಸವಾಲು Read More »

ಸಂತಫಿಲೋಮಿನ(ಸ್ವಾಯತ್ತ) ಕಾಲೇಜಿನ ವಿದ್ಯಾರ್ಥಿನಿಯರು ಅಂತರ್ ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ವಿದ್ಯಾರ್ಥಿನಿಯರು 64 ಕೆಜಿ ವಿಭಾಗದ ಸೌತ್ ವೆಸ್ಟ್ ಝೋನ್ ವೇಟ್ ಲಿಫ್ಟಿಂಗ್ ಸ್ಪರ್ಧೆಗೆ ಅಂತರ್ ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಆಯ್ಕೆ ಟ್ರಯಲ್ ನಡೆಯಿತು. ಬ್ಯೂಲಾ ಪಿ. ಟಿ. 64 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ಸ್ಪರ್ಧೆಗೆ ಆಯ್ಕೆಯಾದರು. ದ್ವಿತೀಯ ಬಿಎಸ್ಸಿ ಯ. ಸ್ಪಂದನಾ 45 ಕೆಜಿ ವಿಭಾಗದಲ್ಲಿ ಆಯ್ಕೆಯಾದರು. ಅಂತರ್ ವಿಶ್ವವಿದ್ಯಾಲಯದ ಸ್ಪರ್ಧೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆಯಲಿದೆ.

ಸಂತಫಿಲೋಮಿನ(ಸ್ವಾಯತ್ತ) ಕಾಲೇಜಿನ ವಿದ್ಯಾರ್ಥಿನಿಯರು ಅಂತರ್ ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆ Read More »

ಬಿಪಿಎಲ್ ಕಾರ್ಡ್‌ಗಳು ರದ್ದಾಗುತ್ತಿವೆಯೇ ಎನ್ನುವ ಪ್ರಶ್ನೆಯೇ ತಪ್ಪು ಎಂದ ಸಿದ್ದರಾಮಯ್ಯ

ಅನರ್ಹ ಕಾರ್ಡ್‌ಗಳು ಮಾತ್ರ ರದ್ದು ಎಂದು ಸ್ಪಷ್ಟನೆ ಬೆಂಗಳೂರು : ಅನರ್ಹರ ಬಿಪಿಎಲ್ ಕಾರ್ಡ್‌ಗಳನ್ನು ಮಾತ್ರ ವಾಪಾಸ್ ಪಡೆಯಬಹುದು. ಅರ್ಹರ ಕಾರ್ಡ್‌ಗಳಿಗೆ ಯಾವುದೇ ತೊಂದರೆ ಇಲ್ಲ.ಬಿಪಿಎಲ್ ಕಾರ್ಡ್‌ಗಳು ರದ್ದಾಗುತ್ತಿವೆಯೇ ಎನ್ನುವ ಪ್ರಶ್ನೆಯೇ ಪೂರ್ತಿ ತಪ್ಪು. ಅನರ್ಹರ ಕಾರ್ಡ್‌ಗಳನ್ನು ವಾಪಾಸ್ ಪಡೆಯಬಹುದು ಎನ್ನುವ ಆಲೋಚನೆ ಮಾತ್ರ ನಮ್ಮದಾಗಿದೆ. ಈ ಬಗ್ಗೆ ಇನ್ನೂ ಆಹಾರ ಇಲಾಖೆ ಪರಿಶೀಲಿಸುತ್ತಿದೆ. ಅಂತಿಮ ತೀರ್ಮಾನ ಆಗಿಲ್ಲ. ಅನರ್ಹರಿಗೆ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಪಿಎಲ್‌ ಕಾರ್ಡ್‌ಗಳು ರದ್ದಾಗುತ್ತಿರುವ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಬಿಪಿಎಲ್ ಕಾರ್ಡ್‌ಗಳು ರದ್ದಾಗುತ್ತಿವೆಯೇ ಎನ್ನುವ ಪ್ರಶ್ನೆಯೇ ತಪ್ಪು ಎಂದ ಸಿದ್ದರಾಮಯ್ಯ Read More »

ನರೇಂದ್ರ ಮೋದಿಗೆ ನೈಜೀರಿಯಾದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ | ದಿ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್‌ಗೆ ಪಾತ್ರರಾದ ಪ್ರಧಾನಿ

ಹೊಸದಿಲ್ಲಿ : ನೈಜೀರಿಯಾ ಸರ್ಕಾರ ‘ದಿ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್’ ಪುರಸ್ಕಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿ ಗೌರವಿಸಿದೆ. ಇದು ನೈಜೀರಿಯಾದ ಎರಡನೇ ಅತ್ಯುನ್ನತ ನಾಗರಿಕ ಗೌರವವಾಗಿದೆ. ಆ ಮೂಲಕ ಈ ಗೌರವ ಪಡೆದ ಎರಡನೇ ವಿದೇಶಿ ಗಣ್ಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ. ನೈಜೀರಿಯಾ ಅಧ್ಯಕ್ಷ ಬೋಲಾ ಅಹ್ಮದ್ ತಿನುಡು ಅವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಬಳಿಕ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ

ನರೇಂದ್ರ ಮೋದಿಗೆ ನೈಜೀರಿಯಾದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ | ದಿ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್‌ಗೆ ಪಾತ್ರರಾದ ಪ್ರಧಾನಿ Read More »

ಜಿ.ಎಲ್‍.ಆಚಾರ್ಯ ಸಂಸ್ಮರಣಾ ಕಾರ್ಯಕ್ರಮ | ಜಿ.ಎಲ್‍.ಆಚಾರ್ಯರು ಸಮಾಜಕ್ಕೆ ಸ್ಪೂರ್ತಿಯಾಗಿದ್ದರು : ಹರಿಕೃಷ್ಣ ಪುನರೂರು

ಪುತ್ತೂರು: ಸಮಾಜ ಸೇವಕರಾಗಿ, ಹಿರಿಯರ ನೆಲೆಯಲ್ಲಿ ಜಿ.ಎಲ್‍.ಆಾಚಾರ್ಯ ಅವರು ಸಮಾಜಕ್ಕೆ ಸ್ಪೂರ್ತಿಯಾಗಿದ್ದರು. ಅವರ ಕುರಿತು ಮುಂದಿನ ಪೀಳಿಗೆಯ ಸಮಾಜಕ್ಕೆ ತಿಳಿಯಬೇಕು. ಈ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಪ್ರಶಸ್ತಿ ರಚನೆಯಾಗಬೇಕು ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಪೂರ್ವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು. ಅವರು ಭಾನುವಾರ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಹಾಗೂ ಜಿ.ಎಲ್‍.ಆಚಾರ್ಯ ಜನ್ಮಶತಮಾನೋತ್ಸವ ಸಮಿತಿ ಜಂಟಿ ಆಾಶ್ರಯದಲ್ಲಿ ಜಿ.ಎಲ್‍.ಆಚಾರ್ಯ ಸಂಸ್ಮರಣಾ ಕಾರ್ಯಕ್ರಮವನ್ನು ಬೈಪಾಸ್‍ರಸ್ತೆಯಲ್ಲಿರುವ ಆಶ್ಮಿ ಕಂಫರ್ಟ್ಸ್  ನಲ್ಲಿ ಉದ್ಘಾಟಿಸಿ ಮಾತನಾಡಿದರು.

ಜಿ.ಎಲ್‍.ಆಚಾರ್ಯ ಸಂಸ್ಮರಣಾ ಕಾರ್ಯಕ್ರಮ | ಜಿ.ಎಲ್‍.ಆಚಾರ್ಯರು ಸಮಾಜಕ್ಕೆ ಸ್ಪೂರ್ತಿಯಾಗಿದ್ದರು : ಹರಿಕೃಷ್ಣ ಪುನರೂರು Read More »

ಕೆದಿಲ ಗ್ರಾಮದ ಗಡಿಯಾರದಲ್ಲಿ ಸಿಡಿಲು ಬಡಿದು ಬಾಲಕ ಮೃತ್ಯು

ಬಂಟ್ವಾಳ: ಸಿಡಿಲು ಬಡಿದು ಬಾಲಕನೋರ್ವ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಗಡಿಯಾರದಲ್ಲಿ ಭಾನುವಾರ ಸಂಜೆ ನಡೆದಿದೆ. ಕೆದಿಲ ಗ್ರಾಮದ ಗಡಿಯಾರ ನಿವಾಸಿ ಸುಭೋದ್ ಸಿ. (14) ಸಿಡಿಲು ಬಡಿದು ಮೃತಪಟ್ಟವರು. ಈ ಕುರಿತು ಕಂದಾಯ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದು, ಮರಣೋತ್ತರ ಪರೀಕ್ಷೆಗಾಗಿ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಕೆದಿಲ ಗ್ರಾಮದ ಗಡಿಯಾರದಲ್ಲಿ ಸಿಡಿಲು ಬಡಿದು ಬಾಲಕ ಮೃತ್ಯು Read More »

ಡಿವೈಡರ್‍ ಗೆ ಕಾರು ಡಿಕ್ಕಿ : ಪ್ರಯಾಣಿಕ ಮೃತ್ಯು

ನೆಲ್ಯಾಡಿ: ಕಾರೊಂದು ಡಿವೈಡರ್‍ ಗೆ ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕ ಮೃತಪಟ್ಟ ಘಟನೆ ಇಂದು ಸಂಜೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಮಣ್ಣಗುಂಡಿಯಲ್ಲಿ ನಡೆದಿದೆ. ಮೃತಪಟ್ಟ ಕಾರು ಪ್ರಯಾಣಿಕ ಕುಂಬ್ರ ನಿವಾಸಿ ಎನ್ನಲಾಗಿದೆ. ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಡಿವೈಡರ್‍ ಗೆ ಕಾರು ಡಿಕ್ಕಿ : ಪ್ರಯಾಣಿಕ ಮೃತ್ಯು Read More »

error: Content is protected !!
Scroll to Top