ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ  ಮೃತ ದೇಹ ಪತ್ತೆ

ಬೆಳ್ತಂಗಡಿ :  ಧರ್ಮಸ್ಥಳ ನೇತ್ರಾವತಿ ನದಿ ನೀರಿನಲ್ಲಿ ಸುಮಾರು 50-55 ವರ್ಷದ ಅಪರಿಚಿತ ಗಂಡಸಿನ ಮೃತ ದೇಹ ನ.21ರಂದು ಪತ್ತೆಯಾಗಿದೆ. ನದಿಯಲ್ಲಿದ್ದ ಮೃತದೇಹವನ್ನು ಎತ್ತುವಲ್ಲಿ ಶೌರ್ಯ ವಿಪತ್ತು ತಂಡ ಸಹಕರಿಸಿದೆ. ಕಪ್ಪು ಬಣ್ಣದ ಒಳಚಡ್ಡಿ ಮಾತ್ರ ಧರಿಸಿಕೊಂಡಿದ್ದು, ಎಡಕಾಲಿನ ಪಾದದ ಬಳಿ ಹಳೆಯ ಗಾಯವಿರುತ್ತದೆ. ಮೃತದೇಹನ್ನು ಮಂಗಳೂರು ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹವನ್ನು ಶವಗಾರದ ವಾರೀಸುದಾರರ ಪತ್ತೆಯ ಬಗ್ಗೆ ಇರಿಸಲಾಗಿದೆ, ಮೃತರ ವಾರೀಸುದಾರರು ಪತ್ತೆಯಾದಲ್ಲಿ ಪೋಲಿಸ್‍ ಠಾಣೆ: ೮೨೭೭೯೮೬೪೪೭ ಮತ್ತು ಬೆಳ್ತಂಗಡಿ ಗ್ರಾಮಾಂತರ ವೃತ್ತ […]

ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ  ಮೃತ ದೇಹ ಪತ್ತೆ Read More »

ಕೇಂದ್ರ ಸರಕಾರಿ ನೌಕರನಿಂದ 2.5 ಕೋ.ರೂ.ಸುಲಿಗೆ : ಹನಿಟ್ರ್ಯಾಪ್‌ ಗ್ಯಾಂಗ್‌ ಸೆರೆ

ಬೆಂಗಳೂರು: ಖಾಸಗಿ ವೀಡಿಯೊ ಇದೆ ಎಂದು ಬೆದರಿಸಿ ಕೇಂದ್ರ ಸರ್ಕಾರಿ ಊದ್ಯೋಗಿಯೊಬ್ಬರನ್ನು ಬ್ಲಾಕ್‌ಮೇಲ್‌ ಮಾಡಿ 2.5 ಕೋಟಿ ರೂ. ಹಣ ವಸೂಲಿ ಮಾಡಿದ್ದ ಬೆಂಗಳೂರಿನ ಹನಿಟ್ರ್ಯಾಪ್ ಗ್ಯಾಂಗನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ತಬ್ಸಂ ಬೇಗಂ, ಅಜೀಮ್ ಉದ್ದಿನ್, ಆನಂದ್ ಹಾಗೂ ಅಭಿಷೇಕ್ ಎಂದು ಗುರುತಿಸಲಾಗಿದೆ. ವಂಚನೆಗೊಳಗಾದ ವ್ಯಕ್ತಿಯನ್ನು ಆರ್‌ಟಿ ನಗರದ ಜಿಮ್ ಒಂದರಲ್ಲಿ ಆರೋಪಿ ತಬ್ಸಂ ಬೇಗಂ ಪರಿಚಯ ಮಾಡಿಕೊಂಡಿದ್ದಳು. ನಂತರದ ದಿನಗಳಲ್ಲಿ ಮಗು ಒಂದನ್ನು ದತ್ತು ಪಡೆದಿದ್ದೇನೆ ಎಂದು ಅವರಿಂದ ಸಹಾಯ ಪಡೆದಿದ್ದಳು.

ಕೇಂದ್ರ ಸರಕಾರಿ ನೌಕರನಿಂದ 2.5 ಕೋ.ರೂ.ಸುಲಿಗೆ : ಹನಿಟ್ರ್ಯಾಪ್‌ ಗ್ಯಾಂಗ್‌ ಸೆರೆ Read More »

ಎಲ್ಲರ ಚಿತ್ತ ನಾಳಿನ ಫಲಿತಾಂಶದತ್ತ

ಮಹಾರಾಷ್ಟ್ರ, ಜಾರ್ಖಂಡ್‌ ವಿಧಾನಸಭೆ ಚುನಾವಣೆ ಮತ ಎಣಿಕೆ ನಾಳೆ ಕುತೂಹಲ ಕೆರಳಿಸಿದ ಕರ್ನಾಟಕದ ಮೂರು ಕ್ಷೇತ್ರಗಳು ಬೆಂಗಳೂರು: ಕರ್ನಾಟಕದ ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ, ಎರಡು ರಾಜ್ಯಗಳ ವಿಧಾನಸಭೆ ಚುನಾವಣೆ ಹಾಗೂ ಇದರ ಜೊತೆಗೆ ನಡೆದಿರುವ ಕೆಲವು ರಾಜ್ಯಗಳ ಉಪಚುನಾವಣೆ ಫಲಿತಾಂಶ ಶನಿವಾರ ಪ್ರಕಟವಾಗಲಿದ್ದು, ದೇಶದಲ್ಲಿ ಈಗಾಗಲೇ ಈ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನ ವಿಧಾನಸಭೆಗಳಿಗೆ, ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳ 30ಕ್ಕೂ ಅಧಿಕ ವಿಧಾನಸಭೆ ಕ್ಷೇತ್ರಗಳಿಗೆ ಮತ್ತು ಮಹಾರಾಷ್ಟ್ರದ ಒಂದು ಲೋಕಸಭಾ ಕ್ಷೇತ್ರಕ್ಕೆ

ಎಲ್ಲರ ಚಿತ್ತ ನಾಳಿನ ಫಲಿತಾಂಶದತ್ತ Read More »

ಟ್ರಾಯ್‌ ಹೆಸರಿನಲ್ಲಿ ಐಟಿ ಉದ್ಯೋಗಿಯನ್ನು ಬೆದರಿಸಿ 1.71 ಕೋ. ರೂ. ಲಪಟಾಯಿಸಿದ ಸೈಬರ್‌ ವಂಚಕರು

ಅಮೆರಿಕದಲ್ಲಿ ದುಡಿದು ಗಳಿಸಿದ ಹಣವೆಲ್ಲ ಸೈಬರ್‌ ವಂಚಕರ ಪಾಲು ಮಂಗಳೂರು : ಸೈಬರ್‌ ವಂಚನೆಗಳ ಬಗ್ಗೆ ಎಷ್ಟೇ ಅರಿವು ಮೂಡಿಸಿದರೂ ಜನರು ಇನ್ನೂ ಮೋಸ ಹೋಗುವುದು ನಿಂತಿಲ್ಲ. ಅದರಲ್ಲೂ ಬ್ಯಾಂಕ್‌, ಐಟಿ ಉದ್ಯೋಗಿಗಳಂತ ವಿದ್ಯಾವಂತರೇ ಆನ್‌ಲೈನ್‌ ವಂಚಕರ ಬಲೆಗೆ ಬಿದ್ದು ಭಾರಿ ಮೊತ್ತದ ಹಣ ಕಳೆದುಕೊಳ್ಳುತ್ತಿರುವುದು ನಿತ್ಯ ಸಂಭವಿಸುತ್ತಿರುತ್ತದೆ. ಮಂಗಳೂರಿನಲ್ಲಿ ಇತ್ತೀಚೆಗೆ ಇದೇ ಮಾದರಿಯ ವಂಚನೆಯೊಂದು ನಡೆದಿದ್ದು, ಅಮೆರಿಕದಲ್ಲಿ ಐಟಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಮೂಲತಃ ಮುಂಬಯಿಯ ವ್ಯಕ್ತಿಯೊಬ್ಬರು ಬರೋಬ್ಬರಿ 1.71 ಕೋ. ರೂ. ಕಳೆದುಕೊಂಡು ಪರಿತಪಿಸುತ್ತಿದ್ದಾರೆ. ನ.

ಟ್ರಾಯ್‌ ಹೆಸರಿನಲ್ಲಿ ಐಟಿ ಉದ್ಯೋಗಿಯನ್ನು ಬೆದರಿಸಿ 1.71 ಕೋ. ರೂ. ಲಪಟಾಯಿಸಿದ ಸೈಬರ್‌ ವಂಚಕರು Read More »

ಮಾರ್ಚ್​ 14ರಿಂದ ಮೇ 25ರ ತನಕ ಐಪಿಎಲ್‌ ಟೂರ್ನಿ

ಕ್ರಿಕೆಟ್‌ ಹಬ್ಬದ ವೇಳಾಪಟ್ಟಿ ಬಹಿರಂಗ ಮುಂಬಯಿ : 18ನೇ ಆವೃತ್ತಿಯ ಐಪಿಎಲ್‌ನ ವೇಳಾಪಟ್ಟಿ ಬಹಿರಂಗವಾಗಿದೆ. ಕ್ರೀಡಾ ವೆಬ್‌ಸೈಟ್‌ ಒಂದರಲ್ಲಿ ಮುಂದಿನ ಮೂರು ವರ್ಷಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಐಪಿಎಲ್‌ ಸಹಿತ ಪ್ರಮುಖ ಕ್ರೀಡಾಕೂಟಗಳ ನೇರ ಪ್ರಸಾರ ಮಾಡುವ ಇಎಸ್​ಪಿಎನ್ ಟಿವಿ ವಾಹಿನಿಗೆ ಸೇರಿದ ಇಎಸ್​ಪಿಎನ್ ಕ್ರಿಕ್​ಇನ್ಫೋ ಎಂಬ ವೆಬ್‌ಸೈಟ್‌ ಐಪಿಎಲ್‌ ವೇಳಾಪಟ್ಟಿಯನ್ನು ಬಹಿರಂಗಗೊಳಿಸಿದೆ. ಆದರೆ ಬಿಸಿಸಿಐ ಇನ್ನೂ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಇಎಸ್​ಪಿಎನ್ ಕ್ರಿಕ್​ಇನ್ಫೋ ಪ್ರಕಾರ ಮುಂದಿನ ಆವೃತ್ತಿಯ ಐಪಿಎಲ್ ಮಾರ್ಚ್​ 14ರಿಂದ ಆರಂಭವಾಗಲಿದ್ದು, ಮೇ

ಮಾರ್ಚ್​ 14ರಿಂದ ಮೇ 25ರ ತನಕ ಐಪಿಎಲ್‌ ಟೂರ್ನಿ Read More »

ಅಂಬಿಕಾದಲ್ಲಿ ದ.ಕ. ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜನೆ |ದೇಸೀಯ ಕಲೆಗಳ ಅರಿವು ವಿದ್ಯಾರ್ಥಿಗಳಿಗಿರಬೇಕು : ಸುಬ್ರಹ್ಮಣ್ಯ ನಟ್ಟೋಜ

ಪುತ್ತೂರು: ಶಿಕ್ಷಣ ಕೇವಲ ಪಠ್ಯ ಸಂಗತಿಗಳನ್ನು ತಿಳಿಸಿದರೆ ಸಾಲದು. ಭಾರತೀಯತೆ, ದೇಸೀಯ ಕಲೆಗಳನ್ನೂ ಮಕ್ಕಳಿಗೆ ಅರ್ಥ ಮಾಡಿಸಿಕೊಡಬೇಕು. ಆ ನೆಲೆಯಲ್ಲಿ ಯೋಚಿಸುವಾಗ ನಾನಾ ಬಗೆಯ ಸ್ಪರ್ಧೆಗಳ ಅನಿವಾರ್ಯತೆ ಇದೆ. ಮನರಂಜನೆಯ ಮೂಲಕ ನಮ್ಮತನವೆಂಬುದು ವಿದ್ಯಾರ್ಥಿಗಳಲ್ಲಿ ಹಂಚಿಕೆಯಾಗುವುದಕ್ಕೆ ಸ್ಪರ್ಧೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು. ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ದ.ಕ. ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಹಾಗೂ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಸಹಯೋಗದಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ

ಅಂಬಿಕಾದಲ್ಲಿ ದ.ಕ. ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜನೆ |ದೇಸೀಯ ಕಲೆಗಳ ಅರಿವು ವಿದ್ಯಾರ್ಥಿಗಳಿಗಿರಬೇಕು : ಸುಬ್ರಹ್ಮಣ್ಯ ನಟ್ಟೋಜ Read More »

ವಾಹನಗಳ ಮೇಲೆ ಉಗ್ರರ ದಾಳಿ : 50ಕ್ಕೂ ಹೆಚ್ಚು ಮಂದಿ ಸಾವು

ಇಸ್ಲಾಮಾನಾದ್: ಪಾಕಿಸ್ಥಾನದಲ್ಲಿ ನಾಗರಿಕರನ್ನು ಕರೆದೊಯ್ಯುತ್ತಿದ್ದ ವಾಹನಗಳ ಮೇಲೆ ಉಗ್ರರ ದಾಳಿ ನಡೆದಿದ್ದು, 50 ಜನರು ಸಾವನ್ನಪ್ಪಿದ್ದಾರೆ. 20 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಪಖ್ತೂನ್‌ಖ್ವಾ ಪ್ರಾಂತ್ಯದ ಕರ‍್ರಂ ಜಿಲ್ಲೆಯಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದೆ. ಪರಾಚಿನಾರ್‌ನಿಂದ ಖೈಬರ್ ಪಖ್ತೂನ್‌ಖ್ವಾದ ರಾಜಧಾನಿ ಪೇಷಾವರ್ ಕಡೆಗೆ ಹೊರಟಿದ್ದ ವಾಹನಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.ಎಂಟು ಮಹಿಳೆಯರು ಮತ್ತು ಐದು ಮಕ್ಕಳು ಸೇರಿದಂತೆ 50 ಜನರು ಸಾವನ್ನಪ್ಪಿದ್ದು, 20 ಜನರು ಗಾಯಗೊಂಡಿದ್ದಾರೆ. ಸಾವನ್ನಪ್ಪಿದವರ

ವಾಹನಗಳ ಮೇಲೆ ಉಗ್ರರ ದಾಳಿ : 50ಕ್ಕೂ ಹೆಚ್ಚು ಮಂದಿ ಸಾವು Read More »

ನ.30 : ಕುಂತೂರು ಪದವುನಲ್ಲಿ ಕಡಬ ತಾಲೂಕು ಸಾಹಿತ್ಯ ಸಮ್ಮೇಳನ

ಕಡಬ: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಕಡಬ ತಾಲೂಕು ಘಟಕದ ವತಿಯಿಂದ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನ ನ.30 ಶನಿವಾರ ಕುಂತೂರು ಪದವು ಸೈಂಟ್ ಜಾರ್ಜ್ ಕನ್ನಡ ಮಾಧ್ಯಮ ಪ್ರೌಢ ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಕಡಬ ತಾಲೂಕು ಘಟಕದ ಅಧ್ಯಕ್ಷ ಸೇಸಪ್ಪ ರೈ ರಾಮಕುಂಜ ಹೇಳಿದರು. ಅವರು ಕಡಬದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮ್ಮೇಳನದ  ಸರ್ವಾಧ್ಯಕ್ಷ ಕರುಣಾಕರ ಗೋಗಟೆ ಅವರ ಅಧ್ಯಕ್ಷತೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸ್ವಾಗತ ಸಮಿತಿಯ ನೇತೃತ್ವದಲ್ಲಿ ಎಲ್ಲಾ ಕಾರ್ಯಗಳು ನಡೆಯಲಿದೆ

ನ.30 : ಕುಂತೂರು ಪದವುನಲ್ಲಿ ಕಡಬ ತಾಲೂಕು ಸಾಹಿತ್ಯ ಸಮ್ಮೇಳನ Read More »

ವಿಕ್ರಂ ಗೌಡ ಸಹಚರರಿಗಾಗಿ ವ್ಯಾಪಕ ಶೋಧ

ಗಡಿಭಾಗಗಳಲ್ಲಿ ನಾಕಾಬಂಧಿ ಹಾಕಿ ವಾಹನ ತಪಾಸಣೆ ಕಾರ್ಕಳ : ಎನ್‌ಕೌಂಟರ್‌ಗೆ ಬಲಿಯಾಗಿರುವ ನಕ್ಸಲ್ ನಾಯಕ ವಿಕ್ರಂ ಗೌಡನ ಸಹಚರರ ಪತ್ತೆಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಹೆಬ್ರಿಯ ಪೀತಬೈಲಿನಲ್ಲಿ ಎನ್‌ಕೌಂಟರ್‌ ನಡೆಯುವ ಸಂದರ್ಭದಲ್ಲಿ ವಿಕ್ರಂ ಗೌಡನ ಜೊತೆಗೆ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಇದ್ದ. ಅವರು ಕಾಡಿನೊಳಗೆ ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ ಎಂದು ಎಎನ್‌ಎಫ್‌ ಅಧಿಕಾರಿಗಳು ಹೇಳುತ್ತಿದ್ದಾರೆ. ಇವರಲ್ಲದೆ ನಕ್ಸಲ್‌ ತಂಡದಲ್ಲಿ ಇನ್ನೂ ಕೆಲವರಿದ್ದು, ಒಟ್ಟು ಆರು ಮಂದಿ ಬಂದಿರುವ ಅನುಮಾನವಿದೆ. ಈ ಹಿನ್ನೆಲೆಯಲ್ಲಿ ಗಡಿಭಾಗಗಳಲ್ಲಿ ಚೆಕ್‌ಪೋಸ್ಟ್‌

ವಿಕ್ರಂ ಗೌಡ ಸಹಚರರಿಗಾಗಿ ವ್ಯಾಪಕ ಶೋಧ Read More »

ಒಕ್ಕಲಿಗ ಸ್ವಸಹಾಯ ಟ್ರಸ್ಟ್ ದಶಮಾನೋತ್ಸವ | 50 ವರ್ಷ ದಾಂಪತ್ಯ ಜೀವನ ಪೂರೈಸಿದ ಸವಣೂರು ಗ್ರಾಮದ ನಾಲ್ಕು ಮಂದಿ ದಂಪತಿಗಳಿಗೆ ಸನ್ಮಾನ

ಸವಣೂರು :ಒಕ್ಕಲಿಗ ಸ್ವಸಹಾಯ ಟ್ರಸ್ಟ್ ದಶಮಾನೋತ್ಸವ ಸಂಭ್ರಮದ ಅಂಗವಾಗಿ ತಾಲೂಕಿನ ಪ್ರತೀ ಗ್ರಾಮ ಪಂಚಾಯತ್‍ ವ್ಯಾಪ್ತಿಯಲ್ಲಿರುವ 50 ವರ್ಷ ದಾಂಪತ್ಯ ಜೀವನ ಪೂರೈಸಿದ ಸಮುದಾಯದವರಿಗೆ ಸನ್ಮಾನ ಕಾರ್ಯಕ್ರಮ ನಡೆಸುತ್ತಾ ಬಂದಿದೆ. ಇಂದು  ಸವಣೂರು ಗ್ರಾಮ ಒಕ್ಕೂಟದ ನಾಲ್ಕು ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಸವಣೂರು ಯುವ ಸಭಾಭವನದಲ್ಲಿ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ದಶಮಾನೋತ್ಸವ ಸಮಿತಿ ಅಧ್ಯಕ್ಷ ಪಟೇಲ್‍ ಗೋಪಾಲಕೃಷ್ಣ ಗೌಡ, ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಅಧ್ಯಕ್ಷ ಡಿ.ವಿ.ಮನೋಹರ ಗೌಡ, ಉಪಾಧ್ಯಕ್ಷ ಪ್ರವೀಣ್ ಕುಂಟ್ಯಾನ, ಸವಣೂರು ಪ್ರಾಥಮಿಕ ಕೃಷಿಪತ್ತಿನ

ಒಕ್ಕಲಿಗ ಸ್ವಸಹಾಯ ಟ್ರಸ್ಟ್ ದಶಮಾನೋತ್ಸವ | 50 ವರ್ಷ ದಾಂಪತ್ಯ ಜೀವನ ಪೂರೈಸಿದ ಸವಣೂರು ಗ್ರಾಮದ ನಾಲ್ಕು ಮಂದಿ ದಂಪತಿಗಳಿಗೆ ಸನ್ಮಾನ Read More »

error: Content is protected !!
Scroll to Top