ಸಂತ ಫಿಲೋಮಿನಾ  ಕಾಲೇಜಿನ ದ್ವಿತೀಯ  ಬಿ.ಬಿ.ಎ. ವಿದ್ಯಾರ್ಥಿನಿ ಸ್ವಾತಿ ಡಿ. ಗೌಡ   ಕಂಪನಿ ಸೆಕ್ರೆಟರಿ ಪರೀಕ್ಷೆಯಲ್ಲಿ ತೇರ್ಗಡೆ.

ಪುತ್ತೂರು: ಸಂತ  ಫಿಲೋಮಿನಾ ಕಾಲೇಜಿನ ದ್ವಿತೀಯ ಬಿ.ಬಿ.ಎ. ವಿದ್ಯಾರ್ಥಿನಿ ಸ್ವಾತಿ ಡಿ ಗೌಡ ಕಂಪನಿ ಸೆಕ್ರೆಟರಿಯ ಪ್ರವೇಶ ಪರೀಕ್ಷೆ ಸಿ.ಯಸ್.ಇ.ಇ.ಟಿ. ಯಲ್ಲಿ ತೇರ್ಗಡೆ ಹೊಂದಿದ್ದಾರೆ. ಪ್ರಸ್ತುತ ವರ್ಷದಲ್ಲಿ ಕಾಲೇಜಿನ ವ್ಯವಹಾರ ಆಡಳಿತ ವಿಭಾಗ ಸಿಎಸ್ಐ ನೊಂದಿಗಿನ ಸಹಯೋಗದಿಂದ  ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸಿ ಅವರನ್ನು ಕಂಪನಿ ಸೆಕ್ರೆಟರಿ ಕೋರ್ಸ್‌ಗೆ ಅಥವಾ ತತ್ಸಮಾನ ಕೋರ್ಸ್‌ಗಳಿಗೆ ಸೇರುವಂತೆ ಅಣಿಗೊಳಿಸಲಾಗುತ್ತದೆ. ಸಂಸ್ಥೆಯು ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾದ ಏಕೈಕ ಅಧ್ಯಯನ ಕೇಂದ್ರವಾಗಿದೆ.  ಕಾಲೇಜಿನ ವ್ಯವಹಾರ ಆಡಳಿತ ವಿಭಾಗ ವಿದ್ಯಾರ್ಥಿಗಳಿಗೆ  […]

ಸಂತ ಫಿಲೋಮಿನಾ  ಕಾಲೇಜಿನ ದ್ವಿತೀಯ  ಬಿ.ಬಿ.ಎ. ವಿದ್ಯಾರ್ಥಿನಿ ಸ್ವಾತಿ ಡಿ. ಗೌಡ   ಕಂಪನಿ ಸೆಕ್ರೆಟರಿ ಪರೀಕ್ಷೆಯಲ್ಲಿ ತೇರ್ಗಡೆ. Read More »

ಮಹಾರಾಷ್ಟ್ರದಲ್ಲಿ ಭರ್ಜರಿ ಗೆಲುವಿನತ್ತ ಬಿಜೆಪಿ ದಾಪುಗಾಲು

ಜಾರ್ಖಂಡ್‌ನಲ್ಲಿ ಸರಳ ಬಹುಮತದತ್ತ ಕಾಂಗ್ರೆಸ್‌ ಮುಂಬಯಿ: ಚುನಾವಣೋತ್ತರ ಸಮೀಕ್ಷೆಗಳು ಮತ್ತೆ ಸುಳ್ಳಾಗಿವೆ. ಮಹಾರಾಷ್ಟ್ರದಲ್ಲಿ 215ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವುದರೊಂದಿಗೆ ಬಿಜೆಪಿ ನೇತೃತ್ವದ ಮಹಾಯುತಿ ನಿಚ್ಚಳ ಬಹುಮತದತ್ತ ದಾಪುಗಾಲು ಹಾಕಿದೆ. ಕಾಂಗ್ರೆಸ್‌ ನೇತೃತ್ವದ ಮಹಾ ವಿಕಾಸ್‌ ಅಘಾಡಿ ಬರೀ 56 ಕ್ಷೇತ್ರಗಳಲ್ಲಿ ಮುಂದಿದ್ದು, ಹೀನಾಯ ಸೋಲಿನತ್ತ ಮುಖಮಾಡಿದೆ. ಕಳೆದ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದ ಬಿಜೆಪಿ ಮಹಾರಾಷ್ಟ್ರ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಪುಟಿದೆದ್ದಿರುವುದು ಅಚ್ಚರಿ ಮೂಡಿಸಿದೆ. ಯಾವ ಸಮೀಕ್ಷೆಯೂ ಬಿಜೆಪಿ ನೇತೃತ್ವದ ಎನ್‌ಡಿಎ

ಮಹಾರಾಷ್ಟ್ರದಲ್ಲಿ ಭರ್ಜರಿ ಗೆಲುವಿನತ್ತ ಬಿಜೆಪಿ ದಾಪುಗಾಲು Read More »

ಸಿ.ಪಿ.ಯೋಗೀಶ್ವರ್‌, ಅನ್ನಪೂರ್ಣ ಗೆಲುವು : ಬಿಜೆಪಿಗೆ ತೀವ್ರ ಮುಖಭಂಗ

ರಾಮನಗರ: ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ ಯೋಗೇಶ್ವರ್‌ ಗೆದ್ದು ಬೀಗಿದ್ದಾರೆ. ಕೊನೆ ಕ್ಷಣದಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಜಂಪ್‌ ಆದರೂ ಜನತೆ ಯೋಗೇಶ್ವರ್‌ ಕೈಹಿಡಿದಿದ್ದಾರೆ. ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ಗೆಲುವು ಸಾಧಿಸಿರುವುದರಿಂದ ಈ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಸಮಾಧಾನದ ನಿಟ್ಟುಸಿರು ಬಿಟ್ಟಿದೆ. ಮೊದಲ 6 ಸುತ್ತಿನಲ್ಲಿ ನಿಖಿಲ್‌ ಮುನ್ನಡೆಯಲ್ಲಿದ್ದರು. ಆದರೆ ಚನ್ನಪಟ್ಟಣ ನಗರದ ಇವಿಎಂ ಓಪನ್‌ ಆಗುತ್ತಿದ್ದಂತೆ ಯೋಗೇಶ್ವರ್‌ ಅವರಿಗೆ ಭರ್ಜರಿ ಮುನ್ನಡೆ ಸಿಕ್ಕಿತ್ತು. ಈ ಮುನ್ನಡೆಯನ್ನು ಯೋಗೇಶ್ವರ್‌ ಕೊನೆಯವರೆಗೂ ಉಳಿಸಿಕೊಂಡು ಬಂದಿದ್ದರು.ಯೋಗೇಶ್ವರ್‌ಗೆ 2 ಬಾರಿ ಸೋಲಿನ ಅನುಕಂಪ

ಸಿ.ಪಿ.ಯೋಗೀಶ್ವರ್‌, ಅನ್ನಪೂರ್ಣ ಗೆಲುವು : ಬಿಜೆಪಿಗೆ ತೀವ್ರ ಮುಖಭಂಗ Read More »

ಪಾಪೆಮಜಲು ನಿವಾಸಿ ಯೋಗೀಶ್‍ ಭಂಡಾರಿ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಡಗನ್ನೂರು ಗ್ರಾಮದ ತಲೆಂಜಿ ಸಾಮಾಜಿಕ ಗೇರು ನೆಡುತೋಪು ಅರಣ್ಯ ಪ್ರದೇಶದಲ್ಲಿ ನಡೆದಿದೆ. ಅರಿಯಡ್ಕ ಗ್ರಾಮದ ಪಾಪೆಮಜಲು ನಿವಾಸಿ ಯೋಗೀಶ್ ಭಂಡಾರಿ ಆತ್ಮಹತ್ಯೆ ಮಾಡಿಕೊಂಡವರು. ಬೆಳಗಿನ ಜಾವ ವ್ಯಕ್ತಿಯೊಬ್ಬರು ಹಾಲು ಕೊಂಡೊಯ್ಯುವ ಸಂದರ್ಭದಲ್ಲಿ ಪಕ್ಕದ ಕಾಡಿನಿಂದ ಮೊಬೈಲ್ ರಿಂಗಣಿಸುವ ಶಬ್ದ ಕೇಳಿಸಿ ಅದನ್ನು ಆಲಿಸಿಕೊಂಡು ಆ ಸ್ಥಳಕ್ಕೆ ತೆರಳಿದಾಗ ಯೋಗೀಶ್ ಭಂಡಾರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ

ಪಾಪೆಮಜಲು ನಿವಾಸಿ ಯೋಗೀಶ್‍ ಭಂಡಾರಿ ನೇಣು ಬಿಗಿದು ಆತ್ಮಹತ್ಯೆ Read More »

ಕ್ಯಾಂಪ್ಕೋ ಪುತ್ತೂರು ಶಾಖೆಯ ನವೀಕೃತ ಕಚೇರಿ ಉದ್ಘಾಟನೆ, ಸದಸ್ಯ ಬೆಳೆಗಾರರ ಸಭೆ

ಪುತ್ತೂರು: ಕ್ಯಾಂಪ್ಕೋ ಪುತ್ತೂರು ಶಾಖೆಯ ನವೀಕೃತ ಕಚೇರಿ ಉದ್ಘಾಟನೆ ಶ್ರೀ ಮಹಾಮಾಯಿ ದೇವಸ್ಥಾನದ ಬಳಿಯ ಕಟ್ಟಡದಲ್ಲಿ ನಡೆಯಿತು. ಶಾಖೆಯನ್ನು ಹಿರಿಯ ಸದಸ್ಯ ಬೆಳೆಗಾರರಾದ ಎನ್. ಎಸ್. ಹರಿಹರ್ ರಾವ್ ಕೊಡಿಪ್ಪಾಡಿ, ಸುರೇಶ್ ಬಲ್ನಾಡು, ಬಿ. ಟಿ. ನಾರಾಯಣ ಭಟ್, ಕೆ. ಟಿ. ಭಟ್ ಉದ್ಘಾಟಿಸಿದರು. ಸದಸ್ಯರ ಬೇಡಿಕೆಯಂತೆ ಸಣ್ಣ ಮಟ್ಟದ ಮಣ್ಣು ತಪಾಸಣೆ ಯಂತ್ರವನ್ನು ಕ್ಯಾಂಪ್ಕೊ ಖರೀದಿಸಿದ್ದು, ಈ ಮೊಬೈಲ್ ಸಾಯಿಲ್ ಟೆಸ್ಟ್ ಯಂತ್ರವನ್ನು ಪುತ್ತೂರಿನಲ್ಲಿ ಇರಿಸಿ ಬೆಳೆಗಾರರ ಬಳಕೆಗೆ ಲಭ್ಯವಾಗುವಂತೆ ಮಾಡಲಾಗುವುದು. 1.45 ಲಕ್ಷ ಸದಸ್ಯರಿದ್ದು,

ಕ್ಯಾಂಪ್ಕೋ ಪುತ್ತೂರು ಶಾಖೆಯ ನವೀಕೃತ ಕಚೇರಿ ಉದ್ಘಾಟನೆ, ಸದಸ್ಯ ಬೆಳೆಗಾರರ ಸಭೆ Read More »

ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ 200ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ

ಜಾರ್ಖಂಡ್‌ನಲ್ಲಿ ಬಿಜೆಪಿ-ಕಾಂಗ್ರೆಸ್‌ ನಡುವೆ ಭಾರಿ ಹಣಾಹಣಿ ಮುಂಬಯಿ: ಮಹಾರಾಷ್ಟ್ರದ ಮತ ಎಣಿಕೆ ಮುಂದುವರಿದಿರುವಂತೆ ಬಿಜೆಪಿ ನೇತೃತ್ವದ ಮಹಾಯೂತಿ ಮೈತ್ರಿಕೂಟ ಭಾರಿ ಮುನ್ನಡೆ ಸಾಧಿಸಿದೆ. 288 ಕ್ಷೇತ್ರಗಳ ಪೈಕಿ 207 ಕ್ಷೇತ್ರಗಳಲ್ಲಿ ಮಹಾಯುತಿ ಮುಂದೆ ಇದೆ. ಕಾಂಗ್ರೆಸ್‌ ನೇತೃತ್ವದ ಮಹಾ ವಿಕಾಸ್‌ ಅಘಾಡಿ 76 ಕ್ಷೇತ್ರಗಳಲ್ಲಷ್ಟೇ ಮುನ್ನಡೆ ಕಾಯ್ದುಕೊಂಡಿದೆ. ಜಾರ್ಖಂಡ್‌ನಲ್ಲಿ ಮಾತ್ರ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿ ನಡೆಯುತ್ತಿದೆ. ಕ್ಷಣಕ್ಷಣಕ್ಕೂ ಟ್ರೆಂಡ್‌ ಬದಲಾಗುತ್ತಿದ್ದು, ಸದ್ಯ ಬಿಜೆಪಿ 41ರಲ್ಲಿ ಮತ್ತು ಕಾಂಗ್ರೆಸ್‌ 37 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.ಕರ್ನಾಟಕದ

ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ 200ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ Read More »

ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ : ವಿವೇಕಾನಂದ ಇಂಜಿನಿಯರಿಂಗ್‍ ಕಾಲೇಜು ತಂಡಕ್ಕೆ ದ್ವಿತೀಯ ಸ್ಥಾನ

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮಹಿಳೆಯರ ಕಬಡ್ಡಿ ತಂಡವು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿಕೊಂಡಿದೆ. ಬೆಂಗಳೂರಿನ ರಾಜರಾಜೇಶ್ವರಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ನಡೆದ ಈ ಕ್ರೀಡಾ ಕೂಟದಲ್ಲಿ ರಾಜ್ಯಾದ್ಯಂತ ಎಂಟು ವಿಭಾಗದ ಒಟ್ಟು ೧೬ ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಅತ್ಯುತ್ತಮ ನಿರ್ವಹಣೆಯನ್ನು ನೀಡಿದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ತಂಡವನ್ನು ಸಮರ್ಥವಾಗಿ ಮುನ್ನಡೆಸಿದ ನಾಯಕಿ, ತೃತೀಯ ವರ್ಷದ ಕಂಪ್ಯೂಟರ್ ಸೈನ್ಸ್

ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ : ವಿವೇಕಾನಂದ ಇಂಜಿನಿಯರಿಂಗ್‍ ಕಾಲೇಜು ತಂಡಕ್ಕೆ ದ್ವಿತೀಯ ಸ್ಥಾನ Read More »

ಇಂದು (ನ.23) : ಕನಕ ಸಂಭ್ರಮ

ಪುತ್ತೂರು : ಇನ್ನೆರ್‍  ವ್ಹೀಲ್‍ ಕ್ಲಬ್‍ 50 ವರ್ಷ ಪೂರೈಸಿದ ಸಲುವಾಗಿ ಕನಕ ಸಂಭ್ರಮ ನ.23 ರಂದು ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ. ಸಂಜೆ 4:30 ಗಂಟೆಗೆ ಉಧ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಯಾಗಿ  ಇನ್ನೆರ್ ವ್ಹೀಲ್‍ ಕ್ಲಬ್ ಜಿಲ್ಲಾಧ್ಯಕ್ಷ ವೈಶಾಲಿ ಕುಡುವ,   ಪರಿಸರವಾದಿ, ಬೆಂಗಳೂರು ಪಿಲಾಂತ್ರೊಪಿಸ್ಟ್,  ರೇವತಿ ಕಾಮತ್‍, ಪಾಲ್ಗೊಳ್ಳರಿದ್ದಾರೆ ಎಂದು ಇನ್ನೆರ್‍ ವ್ಹೀಲ್‍ ಕ್ಲಬ್ ಅಧ್ಯಕ್ಷೆ ರಾಜೇಶ್ವರಿ, ಕಾರ್ಯದರ್ಶಿ ವಚನ ಜಯರಾಮ್‍ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು (ನ.23) : ಕನಕ ಸಂಭ್ರಮ Read More »

ಗುಂಡ್ಯ ಹೆದ್ದಾರಿಯಲ್ಲಿ ಸರಣಿ ಅಪಘಾತ | 20 ಕ್ಕೂ ಅಧಿಕ ಮಂದಿಗೆ ಗಾಯ

ಪುತ್ತೂರು: ಸರಕಾರಿ ಬಸ್, ಖಾಸಗಿ ಬಸ್ ಹಾಗೂ ಕಾರಿನ ನಡುವೆ ನಡೆದ ಸರಣಿ ಅಪಘಾತದಲ್ಲಿ 20 ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪ ಇಂದು ಬೆಳ್ಳಂಬೆಳಗ್ಗೆ ನಡೆದಿದೆ. ಬೆಂಗಳೂರು ಮೂಲದ ಕಾಲೇಜು ವಿದ್ಯಾರ್ಥಿಗಳು ಕುಂದಾಪುರಕ್ಕೆ ಪ್ರವಾಸಕ್ಕೆಂದು ತೆರಳಿ ಹಿಂತಿರುಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಪಲ್ಟಿಯಾಗಿ ಕೆಎಸ್ಸಾರ್ಟಿಸಿ ಬಸ್ ಗೆ ಢಿಕ್ಕಿ ಹೊಡೆದಿದೆ. ಈ ಸಂದರ್ಭ ಹಿಂದಿನಿಂದ ಬರುತ್ತಿದ್ದ ಕಾರೊಂದು ಕೆಎಸ್ಸಾರ್ಟಿಸಿ ಬಸ್ ಗೆ ಢಿಕ್ಕಿ ಹೊಡೆದು

ಗುಂಡ್ಯ ಹೆದ್ದಾರಿಯಲ್ಲಿ ಸರಣಿ ಅಪಘಾತ | 20 ಕ್ಕೂ ಅಧಿಕ ಮಂದಿಗೆ ಗಾಯ Read More »

ಗ್ರಂಥಾಲಯ ಮೇಲ್ವಿಚಾರಕರಿಗೆ ಡಿಜಿಟಲ್ ಸಾಕ್ಷರತೆ, ನಾಯಕತ್ವ ಕುರಿತು ತರಬೇತಿ

ಪುತ್ತೂರು: ಶಿಕ್ಷಣ ಪೌಂಡೇಶನ್ ಸಂಸ್ಥೆಯ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಡಿ ಪುತ್ತೂರು, ಕಡಬ ಹಾಗೂ ಸುಳ್ಯ ತಾಲೂಕಿನ ಗ್ರಂಥಾಲಯ ಮೇಲ್ವಿಚಾರಕರಿಗೆ  ಒಂದು ದಿನದ ಡಿಜಿಟಲ್ ಸಾಕ್ಷರತೆ ಹಾಗೂ ನಾಯಕತ್ವ ಮತ್ತು ಸಹಭಾಗಿತ್ವ ಚಟುವಟಿಕೆಗಳನ್ನೊಳಗೊಂಡ  ತರಬೇತಿಯನ್ನು ಪುತ್ತೂರು ತಾಲೂಕು ಪಂಚಾಯತ್  ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಭಾರತಮಾತೆ ಹಾಗೂ ಗ್ರಂಥಾಲಯ ಪಿತಾಮಹ ಎಸ್. ಆರ್. ರಂಗನಾಥನ್ ರವರ ಭಾವಚಿತ್ರಕ್ಕೆ  ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಡಿಜಿಟಲ್ ಸಾಕ್ಷರತೆಯ

ಗ್ರಂಥಾಲಯ ಮೇಲ್ವಿಚಾರಕರಿಗೆ ಡಿಜಿಟಲ್ ಸಾಕ್ಷರತೆ, ನಾಯಕತ್ವ ಕುರಿತು ತರಬೇತಿ Read More »

error: Content is protected !!
Scroll to Top