ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಾಗುತ್ತಿರುವ ದೌರ್ಜನ್ಯ ಖಂಡಿಸಿ ನಾಳೆ ಮಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ

ಮಂಗಳೂರು: ಬಾಂಗ್ಲಾದೇಶದಲ್ಲಿ ಮುಸ್ಲಿಂ ಮೂಲಭೂತವಾದಿಗಳಿಂದ ಹಿಂದುಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಲು ಹಿಂದು ಸಂಘಟನೆಗಳು ಮಂಗಳೂರಿನಲ್ಲಿ ಡಿ.4ರಂದು ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿವೆ. ಬೆಳಗ್ಗೆ ಮಂಗಳೂರಿನ ಜ್ಯೋತಿ ವೃತ್ತದಿಂದ ಮಿನಿ ವಿಧಾನಸೌಧ ತನಕ ಬೃಹತ್‌ ಮೆರವಣಿಗೆ ನಡೆಸಿ ಮನವಿ ಸಲ್ಲಿಸಲಾಗುವುದು. ಹಲವು ಪ್ರಮುಖ ಹಿಂದು ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಪ್ರತಿಭಟನೆ ಯಾವುದೇ ಪಕ್ಷದ ಪರ ಅಥವಾ ವಿರೋಧವಾಗಿ ಅಲ್ಲ, ಸಮಸ್ತ ಹಿಂದುಗಳ ರಕ್ಷಣೆಗಾಗಿ ಪಕ್ಷಭೇದವಿಲ್ಲದೆ ನಡೆಯಲಿದೆ. ಹಿಂದುಗಳ ಹಿತ ಬಯಸುವ ಎಲ್ಲರೂ ಮುಕ್ತವಾಗಿ ಪಾಲ್ಗೊಳ್ಳಬಹುದು ಎಂದು […]

ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಾಗುತ್ತಿರುವ ದೌರ್ಜನ್ಯ ಖಂಡಿಸಿ ನಾಳೆ ಮಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ Read More »

ಅಕ್ಷಯ ಕಾಲೇಜಿನಲ್ಲಿ ಪ್ರಿನ್ಸ್ ಆ್ಯಂಡ್‍ ಪ್ರಿನ್ಸಸ್, ಪತ್ತೂರು ಫ್ಯಾಷನ್‍ ಶೋ ಆಡಿಷನ್ ಉದ್ಘಾಟನೆ | 200 ಕ್ಕೂ ಮಿಕ್ಕಿ ಸ್ಪರ್ಧಾಳುಗಳು ಭಾಗಿ

ಪುತ್ತೂರು: ಅಕ್ಷಯ ಎಜ್ಯುಕೇಶನಲ್ ಆ್ಯಂಡ್‍ ಚಾರಿಟೇಬಲ್‍ ಟ್ರಸ್ಟ್‍ ನಡಿ ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನ ಫ್ಯಾಷನ್ ಡಿಸೈನಿಂಗ್‍್ ವಿಭಾಗ  ಫಸೇರಾ ಹಾಗೂ ಸಾಂಸ್ಕೃತಿಕ  ಲಲಿತಾ ಕಲಾ ಸಂಘದ ವತಿಯಿಂದ ಪ್ರಿನ್ಸ್ ಆ್ಯಂಡ್‍ ಪ್ರಿನ್ಸಸ್ ಫ್ಯಾಷನ್‍ ಶೋ ಅಡಿಷನ್ ಕಾರ್ಯಕ್ರಮದ ಉದ್ಘಾಟನೆ ಕಾಲೇಜಿನ ಸಭಾಭವನದಲ್ಲಿ  ನಡೆಯಿತು. ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಮಾಜಿ ಅಧ್ಯಕ್ಷ, ಬನ್ನೂರು ಎ.ವಿ.ಜಿ ಸ್ಕೂಲ್ ಸಂಚಾಲಕ ವೆಂಕಟ್ರಮಣ ಗೌಡ ಕಳುವಾಜೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕನಸುಕಾಣಬೇಕು. ಆದರೆ ಆ ಕನಸು

ಅಕ್ಷಯ ಕಾಲೇಜಿನಲ್ಲಿ ಪ್ರಿನ್ಸ್ ಆ್ಯಂಡ್‍ ಪ್ರಿನ್ಸಸ್, ಪತ್ತೂರು ಫ್ಯಾಷನ್‍ ಶೋ ಆಡಿಷನ್ ಉದ್ಘಾಟನೆ | 200 ಕ್ಕೂ ಮಿಕ್ಕಿ ಸ್ಪರ್ಧಾಳುಗಳು ಭಾಗಿ Read More »

ಜೋಡಿ ಕೊಲೆ ಕೃತ್ಯ : ಬಾಲಿವುಡ್‌ ನಟಿಯ ಸಹೋದರಿ ಬಂಧನ

ಕಟ್ಟಡಕ್ಕೆ ಬೆಂಕಿಹಚ್ಚಿ ಪ್ರಿಯಕರ, ಆತನ ಸ್ನೇಹಿತನ ಹತ್ಯೆ ಮುಂಬಯಿ: ಪ್ರಿಯಕರ ಹಾಗೂ ಆತನ ಸ್ನೇಹಿತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್‌ನ ಜನಪ್ರಿಯ ನಟಿ ನರ್ಗಿಸ್‌ ಫಕ್ರಿಯ ಸಹೋದರಿ ಅಲಿಯಾ ಫಕ್ರಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಿಂದಿಯ ರಾಕ್‌ಸ್ಟಾರ್‌ ಸೇರಿದಂತೆ ಹಲವು ಭಾರತೀಯ ಸಿನೆಮಾಗಳಲ್ಲಿ ನಟಿಸಿರುವ ನರ್ಗಿಸ್‌ ಫಕ್ರಿ ಮೂಲತಃ ಅಮೆರಿಕದವರು. ಅವರ ಸಹೋದರಿ ಅಲಿಯಾ ಫಕ್ರಿ ಕೂಡ ಸೆಲೆಬ್ರಿಟಿಯಾಗಿದ್ದು, ಆಕೆಯ ಮೇಲೆ ನ್ಯೂಯಾರ್ಕ್‌ನಲ್ಲಿ ಬಾಯ್‌ಫ್ರೆಂಡ್‌ ಮತ್ತು ಆತನ ಗೆಳೆಯನನ್ನು ಕೊಂದ ಆರೋಪವಿದೆ. ಬಾಯ್‌ಫ್ರೆಂಡ್‌ ಎಡ್ವರ್ಡ್‌ ಜೇಕಬ್‌ (35) ಮತ್ತು

ಜೋಡಿ ಕೊಲೆ ಕೃತ್ಯ : ಬಾಲಿವುಡ್‌ ನಟಿಯ ಸಹೋದರಿ ಬಂಧನ Read More »

ಭೀಕರ ಅಪಘಾತ : ಐವರು ಎಂಬಿಬಿಎಸ್‌ ವಿದ್ಯಾರ್ಥಿಗಳು ಸಾವು

ತಿರುವನಂತಪುರಂ: ಕೇರಳದ ಅಲಪುಳ ಜಿಲ್ಲೆಯ ಚಂಗನಶ್ಶೇರಿ ಸಮೀಪ ನಿನ್ನೆ ರಾತ್ರಿ ಭಾರಿ ಮಳೆಯಿಂದಾಗಿ ರಸ್ತೆ ಸರಿಯಾಗಿ ಗೋಚರಿಸದೆ ಸರ್ಕಾರಿ ಬಸ್‌ಗೆ ಕಾರೊಂದು ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಂದನಂ ಮೆಡಿಕಲ್‌ ಕಾಲೇಜಿನ ಪ್ರಥಮ ವರ್ಷ ಎಂಬಿಬಿಎಸ್‌ ವಿದ್ಯಾರ್ಥಿಗಳಾದ ಸಂದೀಪ್ ವಲ್ಸನ್, ಆಯೂಷ್ ಶಾಜಿ, ಮಹಮ್ಮದ್ ಇಬ್ರಾಹಿಂ ಪಿಪಿ, ದೇವನಂದನ್, ಮಹಮ್ಮದ್ ಅಬ್ದುಲ್ ಜಬ್ಬರ್ ಮೃತಪಟ್ಟವರು. ಕರ್ಲಕೋಡ್ ಎಂಬಲ್ಲಿ ಸೋಮವಾರ ತಡರಾತ್ರಿ ಅಪಘಾತ ಸಂಭವಿಸಿದೆ. ಭೀಕರ ಅಪಘಾತದ

ಭೀಕರ ಅಪಘಾತ : ಐವರು ಎಂಬಿಬಿಎಸ್‌ ವಿದ್ಯಾರ್ಥಿಗಳು ಸಾವು Read More »

ಸಿಡಿಲು ಬಡಿದು ಕೆಯ್ಯೂರಿನ ನಾರಾಯಣ ಮೃತ್ಯು

ಪುತ್ತೂರು: ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕೆಯ್ಯೂರಿನಲ್ಲಿ ನಡೆದಿದೆ. ಕೆಯೂರು ನಿವಾಸಿ ನಾರಾಯಣ (45) ಮೃತ ವ್ಯಕ್ತಿ. ಮನೆಯ ಮುಂಭಾಗದ ಶೀಟ್ ನಲ್ಲಿ ಬಲ್ಬು ಹೊತ್ತುತ್ತಿಲ್ಲ ಎಂದು ಸರಿ ಪಡಿಸುತ್ತಿದ್ದ ಸಂದರ್ಭ ಸಿಡಿಲು ಬಡಿದು ನೆಲಕ್ಕೆ ಕುಸಿದು ಬಿದ್ದ ನಾರಾಯಣ ಅವರನ್ನು ಕೂಡಲೇ ಆಸ್ಪತ್ರೆಗೆ ಕಕರೆತರಲಾಯಿತಾದರೂ ಅವರು ದಾರಿ ಮಧ್ಯೆ ಮೃತಪಟ್ಟಿದ್ದರು. ಮೃತರು ಕುಟುಂಬಸ್ಥರನ್ನು ಅಗಲಿದ್ದಾರೆ.

ಸಿಡಿಲು ಬಡಿದು ಕೆಯ್ಯೂರಿನ ನಾರಾಯಣ ಮೃತ್ಯು Read More »

ಕರಾವಳಿಯಲ್ಲಿ ಫೆಂಗಲ್‌ ಪ್ರಭಾವದಿಂದ ಭಾರಿ ಮಳೆ : ಸಿಡಿಲಿಗೆ ಓರ್ವ ಬಲಿ

ಅಕಾಲಿಕ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ; ಕಾರ್ಯಕ್ರಮಗಳೆಲ್ಲ ರದ್ದು ಬೆಂಗಳೂರು: ಫೆಂಗಲ್ ಚಂಡಮಾರುತದ ಪರಿಣಾಮವಾಗಿ ಕರಾವಳಿಯಲ್ಲಿ ನಿನ್ನೆ ಸಂಜೆಯಿಂದೀಚೆಗೆ ಗುಡುಗು ಮಿಂಚಿನೊಂದಿಗೆ ಧಾರಾಕಾರ ಮಳೆ ಸುರಿಯುತ್ತಿದೆ. ಅಕಾಲಿಕ ಮಳೆ ಹಲವು ಅನಾಹುತಗಳನ್ನೂ ಸೃಷ್ಟಿಸಿದೆ. ಸಿಡಿಲು ಬಡಿದು ಪುತ್ತೂರಿನ ಕೆಯ್ಯೂರು ಸಮೀಪ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಬಂಟ್ವಾಳದಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದು ಅಪಾರ ಹಾನಿಯಾಗಿದೆ. ಮನೆ ಮಂದಿ ಅದೃಷ್ಟವಶಾತ್‌ ಪಾರಾಗಿದ್ದಾರೆ. ಉಡುಪಿ ಜಿಲ್ಲೆಯ ಕೆಲವೆಡೆಗಳಲ್ಲಿ ಮಳೆಯಿಂದಾಗಿ ಕೃತಕ ನೆರೆ ಸೃಷ್ಟಿಯಾಗಿ ಜನರು ಸಮಸ್ಯೆ ಅನುಭವಿಸಿದ್ದಾರೆ. ನಿನ್ನೆ ರಾತ್ರಿಯಿಂದೀಚೆಗೆ ಎಡೆಬಿಡದೆ ಮಳೆ

ಕರಾವಳಿಯಲ್ಲಿ ಫೆಂಗಲ್‌ ಪ್ರಭಾವದಿಂದ ಭಾರಿ ಮಳೆ : ಸಿಡಿಲಿಗೆ ಓರ್ವ ಬಲಿ Read More »

ದುಷ್ಕರ್ಮಿಗಳಿಂದ ಬಿಜೆಪಿ ಕಾರ್ಯಕರ್ತ ಸಂದೀಪ್ ಹತ್ಯೆ | ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರಗಿಸುವಂತೆ ಸೂಚನೆ : ಕಿಶೋರ್ ಕುಮಾರ್ ಪುತ್ತೂರು

ಕಡಬ: ಠಾಣಾ ವ್ಯಾಪ್ತಿಯ ಬಿಳಿನೆಲೆಯಲ್ಲಿ ದುಷ್ಕರ್ಮಿಗಳಿಂದ ಬಿಜೆಪಿ ಕಾರ್ಯಕರ್ತ ಸಂದೀಪ್ ಎಂಬವರ ಹತ್ಯೆಯಾಗಿದ್ದು, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರಗಿಸುವಂತೆ ಸೂಚನೆ ನೀಡಿದ್ದಾರೆ. ವಿಷಯ ತಿಳಿದು ತುರ್ತಾಗಿ ಕಡಬ ಪೊಲೀಸ್ ಠಾಣೆಗೆ ಭೇಟಿ ನೀಡಿ ಈ ಕುರಿತು ಮಾತನಾಡಿರುವ ಕಿಶೋರ್ ಕುಮಾರ್ ಪುತ್ತೂರು ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು, ಎಸ್.ಪಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಕೃತ್ಯದ ಕುರಿತು ತನಿಖೆ ನಡೆಸಿ ನಮ್ಮ ಕಾರ್ಯಕರ್ತನ ಹತ್ಯೆಯ ಹಿಂದಿರುವ

ದುಷ್ಕರ್ಮಿಗಳಿಂದ ಬಿಜೆಪಿ ಕಾರ್ಯಕರ್ತ ಸಂದೀಪ್ ಹತ್ಯೆ | ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರಗಿಸುವಂತೆ ಸೂಚನೆ : ಕಿಶೋರ್ ಕುಮಾರ್ ಪುತ್ತೂರು Read More »

ಕಡಬದಿಂದ ನಾಪತ್ತೆಯಾಗಿದ್ದ ಸಂದೀಪ್ ಗೌಡ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

ಕಡಬ: ತಾಲೂಕಿನ ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ಶಾಂತಪ್ಪ ಗೌಡ ಅವರ ಪುತ್ರ ಸಂದೀಪ್ ಗೌಡ (29) ನಾಪತ್ತೆಯಾಗಿದ್ದು, ಇದೀಗ ಅವರ ಮೃತದೇಹ ನೆಟ್ಟಣ ರೈಲು ನಿಲ್ದಾಣದ ಸುಮಾರು ಒಂದುವರೆ ಕಿ.ಮೀ ದೂರದ ನಾರಡ್ಕ ಎಂಬಲ್ಲಿ ದಟ್ಟ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಂದೀಪ್ ಅವರು ನೆಟ್ಟಣ ನಿವಾಸಿ ಪ್ರತೀಕ್ ಎಂಬಾತನೊಂದಿಗೆ ಕಾರಿನಲ್ಲಿ ಹೋಗಿದ್ದಾನೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ಪ್ರತೀಕ್ ಆತನನ್ನು ಕೊಲೆ ಮಾಡಿದ್ದಾನೆ ಎಂಬ ವಿಷಯ ನಿನ್ನ ಎಲ್ಲೆಡೆ ಹರಡಿತ್ತು.

ಕಡಬದಿಂದ ನಾಪತ್ತೆಯಾಗಿದ್ದ ಸಂದೀಪ್ ಗೌಡ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ Read More »

ಮಕ್ಕಳ ಮನಸ್ಸಲ್ಲಿ ‘ಸಾತ್ವಿಕ ದೀಪ’ ಹಚ್ಚಿ : ಪೋಷಕರಿಗೆ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ಕರೆ | ಪೆರಿಯಡ್ಕ ಬಿಜಿಎಸ್ ಸರ್ವೋದಯ ಪ್ರೌಢಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ-ಸಾಂಸ್ಕೃತಿಕ ಕಾರ್ಯಕ್ರಮ

ಉಪ್ಪಿನಂಗಡಿ: ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವಲ್ಲಿ ಪೋಷಕರು ಮುಂದಾಗುತ್ತಿಲ್ಲ. ಮಕ್ಕಳ ಮನಸ್ಸನ್ನು ಅಸ್ಥಿರಗೊಳಿಸುವ ಕೆಲಸ ತಂದೆ ತಾಯಿಯಿಂದ ನಡೆಯುತ್ತಿರುವ ಕಾರಣವೇ ಸಮಾಜದಲ್ಲಿ ಶಕ್ತಿವಂತ ಮತ್ತು ಶಕ್ತಿಹೀನ ಮನಸ್ಥಿತಿಗಳು ಹುಟ್ಟಿಕೊಳ್ಳುತ್ತಿವೆ. ಮಕ್ಕಳ ಅಂತ;ಕರಣದ ಶಕ್ತಿಯನ್ನು ಉದ್ದೀಪನ ಮಾಡುವ ಮೂಲಕ ಅವರ ಮನಸ್ಸಲ್ಲಿ ಸಾತ್ವಿಕ ದೀಪ ಹಚ್ಚುವ ಕೆಲಸ ಪೋಷಕರಿಂದ ನಡೆಯಬೇಕಾಗಿರುವುದು ಅತೀ ಅಗತ್ಯವಾಗಿದೆ ಎಂದು ಮಂಗಳೂರು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ನುಡಿದರು. ಪೆರಿಯಡ್ಕ ಬಿಜಿಎಸ್ ಸರ್ವೋದಯ ಪ್ರೌಢಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ-ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನಾ

ಮಕ್ಕಳ ಮನಸ್ಸಲ್ಲಿ ‘ಸಾತ್ವಿಕ ದೀಪ’ ಹಚ್ಚಿ : ಪೋಷಕರಿಗೆ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ಕರೆ | ಪೆರಿಯಡ್ಕ ಬಿಜಿಎಸ್ ಸರ್ವೋದಯ ಪ್ರೌಢಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ-ಸಾಂಸ್ಕೃತಿಕ ಕಾರ್ಯಕ್ರಮ Read More »

ಡಿ.3 (ನಾಳೆ) : ಭಾರೀ ಮಳೆ ಹಿನ್ನಲೆ : ದ.ಕ.ಜಿಲ್ಲಾಧ್ಯಂತ ಶಾಲಾ- ಪಿಯು ಕಾಲೇಜುಗಳಿಗೆ ರಜೆ

ಮಂಗಳೂರು: ಭಾರೀ ಮಳೆಯ ಹಿನ್ನಲೆಯಲ್ಲಿ ನಾಳೆ (ಡಿ.3) ದ.ಕ.ಜಿಲ್ಲೆಯಾದ್ಯಂತ ಶಾಲಾ- ಪದವಿಪೂರ್ವ ಕಾಲೇಜುಗಳಿಗೆ ರಜೆ ನೀಡಲಾಗಿದೆ. ದ.ಕ.ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಪೆಂಗಲ್ ಚಂಡ ಮಾರುತ ಹಿನ್ಲೆಯಲ್ಲಿ ದ.ಕ.ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುವುದರಿಂದ ಆರೆಂಜ್ ಅಲರ್ಟ್‍ ಘೊಷಿಸಲಾಗಿದೆ.

ಡಿ.3 (ನಾಳೆ) : ಭಾರೀ ಮಳೆ ಹಿನ್ನಲೆ : ದ.ಕ.ಜಿಲ್ಲಾಧ್ಯಂತ ಶಾಲಾ- ಪಿಯು ಕಾಲೇಜುಗಳಿಗೆ ರಜೆ Read More »

error: Content is protected !!
Scroll to Top