ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ವಿಸ್ತರಣೆ

ಮೊಬೈಲ್‌ ಫೋನ್‌ ಮೂಲಕವೇ ಟಿಕೆಟ್‌ನ ಹಣ ಪಾವತಿಸಬಹುದು ಬೆಂಗಳೂರು: ಕೆಎಸ್​ಆರ್​ಟಿಸಿ ಬಸ್​ನಲ್ಲಿ ಪ್ರಯಾಣಿಸುವಾಗ ಕಂಡಕ್ಟರ್ ಜತೆ ಚಿಲ್ಲರೆಗಾಗಿ ಜಗಳ ಮಾಡಬೇಕಿಲ್ಲ. ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ಬಹುತೇಕ ಎಲ್ಲ ಕೆಎಸ್​ಆರ್​​ಟಿಸಿ ಬಸ್​ಗಳಿಗೂ ಇದೀಗ ವಿಸ್ತರಣೆಯಾಗಿದ್ದು, ಯುಪಿಐ ಆ್ಯಪ್ ಮೂಲಕವೇ ಟಿಕೆಟ್ ಹಣ ಪಾವತಿ ಮಾಡಬಹುದಾಗಿದೆ. ಸುಮಾರು 9,000 ಬಸ್‌ಗಳಲ್ಲಿ ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆಯನ್ನು ನ.6ರಂದು ಕೆಎಸ್​ಆರ್​​ಟಿಸಿ ಬಸ್​​ಗಳಲ್ಲಿ ಆರಂಭಿಸಲಾಗಿತ್ತು. ಸದ್ಯ ನಿಗಮದ ಎಲ್ಲ 8,941 ಬಸ್‌ಗಳಿಗೆ ಈ ವ್ಯವಸ್ಥೆಯನ್ನು […]

ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ವಿಸ್ತರಣೆ Read More »

ಎಲ್.ಎಸ್ ಶೇಷಗಿರಿರಾಯರು ಕನ್ನಡದ ನಿಜವಾದ ಅಸ್ಮಿತೆ

ಅವರು ಬದುಕಿದ್ದರೆ ಈಗ ನೂರು ತುಂಬುತ್ತಿತ್ತು 2007ರಲ್ಲಿ ಉಡುಪಿಯಲ್ಲಿ ನಡೆದ ಅಖಿಲ ಭಾರತ 74ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರ ಮಾತುಗಳಿಗೆ, ಸಜ್ಜನಿಕೆಗೆ ಶರಣಾಗಿದ್ದೆ. ಅಷ್ಟು ದೊಡ್ಡ ಲೇಖಕರಾಗಿದ್ದರೂ ತಾನು ಏನೂ ಅಲ್ಲ ಎಂಬ ಅವರ ಆರಂಭದ ಮಾತುಗಳು ಹೃದಯದಲ್ಲಿ ಗಟ್ಟಿಯಾಗಿ ಕೂತಿದ್ದವು. ಪ್ರೊ.ಎಲ್.ಎಸ್ ಶೇಷಗಿರಿರಾಯರು ಕನ್ನಡ ಸಾರಸ್ವತ ಲೋಕದ ಧ್ರುವತಾರೆ ಎಂದು ನನಗೆ ಅಂದು ಅರ್ಥವಾಗಿ ಹೋಗಿತ್ತು. ಬಾಲ್ಯದಲ್ಲಿ ಓದಿದ್ದ 510 ಭಾರತ ಭಾರತಿ ಪುಸ್ತಕಗಳು ನಾನು ಬಾಲ್ಯದಲ್ಲಿ ಅತಿಹೆಚ್ಚು ಓದಿದ್ದು ‘ಭಾರತ

ಎಲ್.ಎಸ್ ಶೇಷಗಿರಿರಾಯರು ಕನ್ನಡದ ನಿಜವಾದ ಅಸ್ಮಿತೆ Read More »

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ

ಪುತ್ತೂರು:ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಜ್ಞಾನ ವಿಕಾಸ ಕಾರ್ಯಕ್ರಮದಡಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮಂಗಳವಾರ ಬೊಳವಾರು ವಿಶ್ವಕರ್ಮ ಸಭಾ ಭನವದಲ್ಲಿ ನಡೆಯಿತು. ವಕೀಲರು, ಜೇಸಿಐಯ ರಾಷ್ಟ್ರೀಯ ಸಂಯೋಜಕಿ  ಸ್ವಾತಿ ಜಗನ್ನಾಥ ರೈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜ್ಞಾನ ವಿಕಾಸದಿಂದಾಗಿ ಮಹಿಳೆಯರ ಜೀವನ ಶೈಲಿಯಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಯೋಜನೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮುಖಾಂತರ ಮಹಿಳೆಯರಲ್ಲಿ ನಂಬಿಕೆ, ಧೈರ್ಯ, ಆತ್ಮಸ್ಥೈರ್ಯ ವೃದ್ಧಿಯಾಗಿದೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ Read More »

ಬಿಜೆಪಿ 147ನೇ ಬೂತ್ ನ ನೂತನ ಅಧ್ಯಕ್ಷರಾಗಿ ಗಣೇಶ್ ದೊಳ, ಕಾರ್ಯದರ್ಶಿಯಾಗಿ ಕೇಶವ ಗೌಡ ಬರೆಮೇಲು  ಆಯ್ಕೆ

ಪುತ್ತೂರು: ಭಾರತೀಯ ಜನತಾ ಪಾರ್ಟಿ 147ನೇ ಬೂತ್  ನೂತನ ಅಧ್ಯಕ್ಷರಾಗಿ ಗಣೇಶ್ ದೊಳ, ಕಾರ್ಯದರ್ಶಿಯಾಗಿ ಕೇಶವ ಗೌಡ ಬರೆಮೇಲು  ಆಯ್ಕೆಯಾಗಿದ್ದಾರೆ. ಪರಮಾರ್ಗ ಯೋಗೇಶ್ ಅವರ ಮನೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಜಿಲ್ಲಾ ಸದಸ್ಯತ್ವ ಜಿಲ್ಲಾ ಸಂಚಾಲಕರು ಮತ್ತು ಚುನಾವಣಾ ಸಹಯೋಗಿಯಾಗಿರುವ ನಿತೇಶ್ ಕುಮಾರ್ ಶಾಂತಿವನ  ಆಯ್ಕೆ ಪ್ರಕ್ರಿಯೆ ನಡೆಸಿದರು. ನೂತನ ಸದಸ್ಯರಾಗಿ ದಿನೇಶ್ ದೊಳ, ಪವಿತ್ರ ಆನಂದ ಗೌಡ, ರಮೇಶ್ ಕಾಯರ್ ಮುಗೇರು, ರಮೇಶ್ ಗೌಡ, ಸಂಧ್ಯಾ ಗಣೇಶ್ ಸಾಲಿಯಾನ್, ಹರಿಣಾಕ್ಷಿ, ಸಂದೀಪ್,

ಬಿಜೆಪಿ 147ನೇ ಬೂತ್ ನ ನೂತನ ಅಧ್ಯಕ್ಷರಾಗಿ ಗಣೇಶ್ ದೊಳ, ಕಾರ್ಯದರ್ಶಿಯಾಗಿ ಕೇಶವ ಗೌಡ ಬರೆಮೇಲು  ಆಯ್ಕೆ Read More »

ರಾಜ್ಯ ಕಾನೂನು ವಿವಿ ಅಂತರ್ ಕಾಲೇಜು ಮಟ್ಟದ ಚದುರಂಗ ಸ್ಪರ್ಧೆ | ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಮಹಿಳಾ ತಂಡಕ್ಕೆ ದ್ವಿತೀಯ ಸ್ಥಾನ

ಪುತ್ತೂರು: ನೆಹರೂ ನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ವಿಶಿಷ್ಟ ಸಾಧನೆಯನ್ನು ಮಾಡುತ್ತಿದ್ದಾರೆ. ಇದೀಗ ಅದಕ್ಕೆ ಉದಾಹರಣೆ ಎಂಬಂತೆ ಚದರಂಗ ಸ್ಪರ್ಧೆಯಲ್ಲಿ ಸಾಧನೆ ಮಾಡುವ ಮೂಲಕ ಗುರುತಿಸಿಕೊಂಡಿದ್ದಾರೆ. ಚಿತ್ರದುರ್ಗದ ಎಸ್ ಜೆ ಎಂ ಕಾನೂನು ಮಹಾವಿದ್ಯಾಲಯ ಮತ್ತು ಕರ್ನಾಟಕ ಕಾನೂನು ವಿಶ್ವ ವಿದ್ಯಾಲಯ ಆಯೋಜಿಸಿದ ಕರ್ನಾಟಕ ಕಾನೂನು ವಿವಿ ಅಂತರ್ ಕಾಲೇಜು ಪುರುಷ ಹಾಗೂ ಮಹಿಳೆಯರ ಚದರಂಗ ಸ್ಪರ್ಧೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಮಹಿಳೆಯರ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ರಾಜ್ಯ ಕಾನೂನು ವಿವಿ ಅಂತರ್ ಕಾಲೇಜು ಮಟ್ಟದ ಚದುರಂಗ ಸ್ಪರ್ಧೆ | ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಮಹಿಳಾ ತಂಡಕ್ಕೆ ದ್ವಿತೀಯ ಸ್ಥಾನ Read More »

ನಿವೃತ್ತ ಯೋಧ ಕೂಸಪ್ಪ ಶೆಟ್ಟಿ ನಿಧನ

ವಿಟ್ಲ : ವಿಟ್ಲದ ಮಂಗಲಪದವು ನಿವಾಸಿ ನಿವೃತ್ತ ಸೈನಿಕ ಕೂಸಪ್ಪ ಶೆಟ್ಟಿ(81) ವಯೋ ಸಹಜವಾಗಿ  ಸ್ವಗೃಹದಲ್ಲಿ ನಿಧನರಾಗಿದ್ದಾರೆ.   ಇವರು ಪುತ್ತೂರು ಮಾಜಿ ಸೈನಿಕ ಸಂಘದ ಅತ್ಯಂತ ಹಿರಿಯ ಸದಸ್ಯರಾಗಿದ್ದು, ಭಾರತೀಯ ಭೂಸೇನೆಯಲ್ಲಿ 20 ವರ್ಷಗಳ ಸೇವೆ ಗೈದಿದ್ದ ಇವರು 1962 ಮತ್ತು 1971 ರ ಯುದ್ಧದಲ್ಲಿ ಭಾಗವಹಿಸಿದ್ದಾರೆ. ಪುತ್ತೂರು ಮಾಜಿ ಸೈನಿಕ ಸಂಘದ ಅಧ್ಯಕ್ಷ ಎಂ. ಕೆ. ನಾರಾಯಣ ಭಟ್, ಉಪಾಧ್ಯಕ್ಷ ದಾಸಪ್ಪ ಪೂಜಾರಿ, ಕಾರ್ಯದರ್ಶಿ ನಾಗಪ್ಪ ಗೌಡ ಮತ್ತು ಅನೇಕ ಮಾಜಿ ಸೈನಿಕರು ಮೃತರ

ನಿವೃತ್ತ ಯೋಧ ಕೂಸಪ್ಪ ಶೆಟ್ಟಿ ನಿಧನ Read More »

ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ನ್ಯಾಯ ಒದಗಿಸುವಂತೆ ಇತಿಹಾಸ ಪ್ರಸಿದ್ದ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ.

ಪುತ್ತೂರು: ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮತ್ತು ದೌರ್ಜನ್ಯದಿಂದ ನೊಂದ ಅಲ್ಪಸಂಖ್ಯಾತರಾಗಿರುವ ಹಿಂದೂಗಳಿಗೆ ನ್ಯಾಯ ಒದಗಿಸುವಂತೆ ಪುತ್ತೂರು ಬಿಜೆಪಿ ಮಂಡಲದ ವತಿಯಿಂದ ಇತಿಹಾಸ ಪ್ರಸಿದ್ಧ ಮಹಾತೋಭಾರ ಪುತ್ತೂರು ಶ್ರೀ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಲಾಯಿತು. ಇದೇ ಸಂದರ್ಭ ಡಿ.4ರಂದು ಮಂಗಳೂರಿನಲ್ಲಿ ನಡೆಯುವ ಪ್ರತಿಭಟನೆಯ ಯಶಸ್ಸಿಗಾಗಿ ಪ್ರಾರ್ಥನೆ ಮಾಡಲಾಯಿತು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷೆ ದಯಾನಂದ ಶೆಟ್ಟಿ ಉಜಿರುಮಾರು, ನಗರ ಮಂಡಲದ ಅಧ್ಯಕ್ಷೆ ಶಿವಕುಮಾ‌ರ್ ಕಲ್ಲಿಮಾ‌ರ್, ಶಶಿಧ‌ರ್ ನಾಯಕ್, ಸಂತೋಷ್ ರೈ ಕೈಕಾರ, ನಾಗೇಶ್ ಟಿ.ಎಸ್, ನಾಗೇಂದ್ರ ಬಾಳಿಗೆ

ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ನ್ಯಾಯ ಒದಗಿಸುವಂತೆ ಇತಿಹಾಸ ಪ್ರಸಿದ್ದ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ. Read More »

ಮಲೇಶಿಯಾದ ಕೌಲಲಾಂಪುರದಲ್ಲಿ  ಏಷ್ಯನ್ ಪೆಸಿಫಿಕ್ ಡೆಫ್ ಚೆಸ್   ಸ್ಪರ್ಧೆ | ಯಶಸ್ವಿ ಕುದುಮಾನಿಗೆ  ಕಂಚಿನ ಪದಕ

ಬಂಟ್ವಾಳ : ಮಲೇಶಿಯಾದ ಕೌಲಲಾಂಪುರದಲ್ಲಿ  ನಡೆದ ಏಷ್ಯನ್ ಪೆಸಿಫಿಕ್ ಡೆಫ್ ಚೆಸ್   ಸ್ಪರ್ಧೆಯಲ್ಲಿ ಯಶಶ್ವಿ ಕುದುಮಾನು  ಕಂಚಿನ ಪದಕ  ಪಡೆದಿದ್ದಾರೆ. ಇವರು ಮಂಗಳೂರು  ಶ್ರೀನಿವಾಸ ಕಾಲೇಜಿನಲ್ಲಿ  MCA ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ.    ಯಶಶ್ವಿ ಕುದುಮಾನು ಬಂಟ್ವಾಳ ತಾಲೂಕು  ಕೆದಿಲ ಗ್ರಾಮದ ಕುದುಮಾನು ತಿಮ್ಮಪ್ಪ, ಯೋಶೋಧ  ದಂಪತಿ ಪುತ್ರಿ

ಮಲೇಶಿಯಾದ ಕೌಲಲಾಂಪುರದಲ್ಲಿ  ಏಷ್ಯನ್ ಪೆಸಿಫಿಕ್ ಡೆಫ್ ಚೆಸ್   ಸ್ಪರ್ಧೆ | ಯಶಸ್ವಿ ಕುದುಮಾನಿಗೆ  ಕಂಚಿನ ಪದಕ Read More »

ಆರ್‌ಎಸ್ಎಸ್ ಪ್ರಚಾರಕ ಪ್ರಸಾದ್ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆ

ಬೆಳ್ತಂಗಡಿ, ಡಿ.2: ಸೋಮವಾರ ಸಂಜೆ ನೇತ್ರಾವತಿ ನದಿಗೆ ಇಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಬೆಳಾಲು ಗ್ರಾಮದ ಕೂಡಿಗೆ ಎಂಬಲ್ಲಿ ನಡೆದಿದೆ. ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ್ (38) ಎಂಬವರು ಯಾವುದೋ ಕಾರಣಕ್ಕೆ ನದಿಗೆ ಇಳಿದಿದ್ದರು ಬಳಿಕ ಮುಳುಗಿ ನಾಪತ್ತೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಭೇಟಿ ನೀಡಿದ್ದು, ಮುಳುಗು ತಜ್ಞ ಈಶ್ವರ್ ಮಲ್ಪೆಗೂ ಮಾಹಿತಿ ನೀಡಲಾಗಿತ್ತು. ಆದರೆ ಮುಳುಗು ತಜ್ಞ ಬೆಳ್ತಂಗಡಿಯ ಸಂಜಯ

ಆರ್‌ಎಸ್ಎಸ್ ಪ್ರಚಾರಕ ಪ್ರಸಾದ್ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆ Read More »

ಸಚಿವ ಜಮೀರ್‌ ಕೈ ಹಿಡಿದು ಕರೆತಂದ ಪಂಜುರ್ಲಿ ದೈವ ವೇಷಧಾರಿಗಳು : ತುಳುನಾಡಿನವರ ಆಕ್ರೋಶ

ಮನೋರಂಜನಾ ಕಾರ್ಯಕ್ರಮದಲ್ಲಿ ದೈವಾರಾಧನೆಯ ಅಣಕು ಬೆಂಗಳೂರು: ಕಾಂತಾರ ಸಿನೆಮಾ ಬಂದ ಬಳಿಕ ತುಳುನಾಡಿನ ಪವಿತ್ರ ದೈವಾರಾಧನೆಯನ್ನು ನಕಲು ಮಾಡಿ ಅದೇ ರೀತಿಯ ವೇಷಭೂಷಣ ಧರಿಸಿ ನೃತ್ಯ ಮಾಡುವ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಈ ಬಗ್ಗೆ ತುಳುನಾಡಿನವರು ಎಷ್ಟೇ ಆಕ್ರೋಶ ವ್ಯಕ್ತಪಡಿಸಿದರೂ ಪ್ರಯೋಜನವಾಗುತ್ತಿಲ್ಲ. ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇದೇ ಮಾದರಿಯ ಘಟನೆಯೊಂದು ನಡೆದಿದ್ದು, ಇದರ ವೀಡಿಯೊ ವೈರಲ್‌ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಂಜುರ್ಲಿ ದೈವದಂತೆ ವೇಷ ಧರಿಸಿದ ಇಬ್ಬರು

ಸಚಿವ ಜಮೀರ್‌ ಕೈ ಹಿಡಿದು ಕರೆತಂದ ಪಂಜುರ್ಲಿ ದೈವ ವೇಷಧಾರಿಗಳು : ತುಳುನಾಡಿನವರ ಆಕ್ರೋಶ Read More »

error: Content is protected !!
Scroll to Top