ಒಂದು ದೇಶ ಒಂದು ಚುನಾವಣೆ ಮಸೂದೆ ಡಿ.16ರಂದು ಮಂಡನೆ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಒಂದು ದೇಶ ಒಂದು ಚುನಾವಣೆ ಮಸೂದೆ ಡಿ.16ರಂದು ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘೆವಾಲ್ ಡಿ.16 ರಂದು ಒಂದು ದೇಶ ಒಂದು ಚುನಾವಣೆ ಮಸೂದೆ ಮಂಡಿಸಲಿದ್ದಾರೆಂದು ಮೂಲಗಳು ತಿಳಿಸಿವೆ. ಮಸೂದೆ ಮಂಡನೆ ನಂತರ ಚರ್ಚೆಗಾಗಿ ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಕಳುಹಿಸಲಾಗುವುದು. ಪ್ರಧಾನಿ ಮೋದಿ ನೇತೃತ್ವದ ಸಂಪುಟ ಇತ್ತೀಚೆಗೆ ಮಸೂದೆಗೆ ಒಪ್ಪಿಗೆ ನೀಡಿತ್ತು. ಒಪ್ಪಿಗೆ ಬೆನ್ನಲ್ಲೇ ಈಗ ಬಿಲ್‌ ಮಂಡಿಸಲು ತಯಾರಿ ನಡೆಸಲಾಗುತ್ತಿದೆ. […]

ಒಂದು ದೇಶ ಒಂದು ಚುನಾವಣೆ ಮಸೂದೆ ಡಿ.16ರಂದು ಮಂಡನೆ Read More »

6.7 ಕೆಜಿ ಗಾಂಜಾ ವಶ: ಆರೋಪಿ ಬಂಧನ

ಮುಂಬಯಿಯಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಆರೋಪಿ ಮಂಗಳೂರು: ಡ್ರಗ್ಸ್ ಮುಕ್ತ ಮಂಗಳೂ ಮಾಡಲು ದಿಟ್ಟ ಕಾರ್ಯಾಚರಣೆ ನಡೆಸುತ್ತುರುವ ಪೊಲೀಸರು ಮಾದಕ ವಸ್ತು ಸಾಗಾಟದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು, 6.7 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಮಂಗಳೂರು ಬಳಿಯ ಮೂಲ್ಕಿ ಬಪ್ಪನಾಡುವಿನಲ್ಲಿ ದಾಳಿ ನಡೆಸಿದ ಸಿಸಿಬಿ ಪೊಲೀಸರು ಅಖಿಲೇಶ್ (30) ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ವಿದ್ಯಾರ್ಥಿಗಳು ಸೇರಿದಂತೆ ಜನರಿಗೆ ಮಾರಾಟ ಮಾಡುವ ಉದ್ದೇಶದಿಂದ ಅಖಿಲೇಶ್ ಮುಂಬಯಿಯಿಂದ ಮಂಗಳೂರಿಗೆ ಗಾಂಜಾ ತರಿಸಿಕೊಂಡಿದ್ದ ಎಂದು ಪೊಲೀಸರು

6.7 ಕೆಜಿ ಗಾಂಜಾ ವಶ: ಆರೋಪಿ ಬಂಧನ Read More »

ಮಾಜಿ ಸಿ.ಎಂ. ದಿ.ಎಸ್.ಎಂ.ಕೃಷ್ಣರ ಪ್ರತಿಮೆ ವಿಕಾಸಸೌಧದ ಎದುರೇ ಸ್ಥಾಪಿಸಿ |ಸುಳ್ಯದ ಗೌಡರ ಯುವ ಸೇವಾ ಸಂಘದಿಂದ ಮನವಿ

ಸುಳ್ಯ : ಕರ್ನಾಟಕದ ಮಾಜಿ ಮುಖ್ಯಮಂತ್ರಿ, ವಿಶೇಷವಾಗಿ ಬಿಸಿಯೂಟದಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿರುವ ದಿ. ಎಸ್.ಎಂ.ಕೃಷ್ಣರವರು ಬೆಂಗಳೂರಿನಲ್ಲಿ ವಿಕಾಸಸೌಧವನ್ನು ನಿರ್ಮಿಸಲು ಕಾರಣಕರ್ತರಾದವರು. ಈ ಹಿನ್ನಲೆಯಲ್ಲಿ ಅವರ ಪ್ರತಿಮೆಯನ್ನು ವಿಕಾಸಸೌಧದ ಎದುರು ಸ್ಥಾಪಿಸಬೇಕೆಂದು ಸುಳ್ಯ ಗೌಡರ ಯುವ ಸೇವಾ ಸಂಘದ ಪ್ರಮುಖರು ಸುಳ್ಯ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಎಸ್.ಎಂ. ಕೃಷ್ಣ ರವರು ಬೆಂಗಳೂರನ್ನು ಐಟಿಪಾರ್ಕ್ ಮಾಡುವಲ್ಲಿ ಯಶಸ್ವಿಯಾದವರು. ಇಂದು ನಾಡಿನ ಹಳ್ಳಿಗಳಿಂದ ವಿದ್ಯಾಭ್ಯಾಸ ಪಡೆದು ಐಟಿ,ಬಿಟಿಯಲ್ಲಿ ಉದ್ಯೋಗ ಹೊಂದಿ ಸ್ಥಿತಿವಂತರಾಗಿ ಹಳ್ಳಿಯಲ್ಲಿರುವ ತಮ್ಮ ಹಿರಿಯರನ್ನು,

ಮಾಜಿ ಸಿ.ಎಂ. ದಿ.ಎಸ್.ಎಂ.ಕೃಷ್ಣರ ಪ್ರತಿಮೆ ವಿಕಾಸಸೌಧದ ಎದುರೇ ಸ್ಥಾಪಿಸಿ |ಸುಳ್ಯದ ಗೌಡರ ಯುವ ಸೇವಾ ಸಂಘದಿಂದ ಮನವಿ Read More »

ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಪುತ್ತೂರು: ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಬಂಟ್ವಾಳ ಪೊಲೀಸರು ಮುಂಬೈಯಲ್ಲಿ ಬಂಧಿಸಿದ ಘಟನೆ ನಡೆದಿದೆ. ಆರ್ಯಪು ಗ್ರಾಮದ ಸಂಪ್ಯ ನಿವಾಸಿ ಅಬ್ದುಲ್ ಅಜೀಜ್ ಬಂಧಿತ ಆರೋಪಿ ಬಂಟ್ವಾಳ ಉಪವಿಭಾಗದ ಪೋಲಿಸ್ ಉಪಾಧಿಕ್ಷಕ ವಿಜಯಪ್ರಸಾದ ಅವರ ಮಾರ್ಗದರ್ಶನಲ್ಲಿ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಹಾಗೂ ಪೊಲೀಸ್ ಉಪ ನಿರೀಕ್ಷಕರಾದ ರಾಮಕೃಷ್ಣ ಕಲೈ ಮಾರ್, ದುರ್ಗಪ್ಪ, ಗೋಪಾಲ ನೇತೃತ್ವದಲ್ಲಿ ಸಿಬ್ಬಂದಿಗಳಾದ ASI ಸುಜು ಹಾಗೂ HC ಜಗದೀಶ್ ರವರು ಮಾಹಿತಿ ಸಂಗ್ರಹಿಸಿ ಮಹಾರಾಷ್ಟ್ರ ರಾಜ್ಯದ ಮುಂಬಯಿ ಎಂಬಲ್ಲಿ ದಸ್ತಗಿರಿ ಮಾಡಿದ್ದಾರೆ. ಆರೋಪಿ ಅಬ್ದುಲ್

ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ Read More »

ಮುಂಜಾನೆ ಜೈಲಿನಿಂದ ಬಿಡುಗಡೆಯಾದ ಅಲ್ಲು ಅರ್ಜುನ್‌

ತೆಲಂಗಾಣ ಸರಕಾರದ ಮೇಲೆ ತಿರುಗಿದ ಅಭಿಮಾನಿಗಳ ಆಕ್ರೋಶ ಹೈದರಾಬಾದ್‌ : ಪುಷ್ಪ-2 ಸೂಪರ್‌ ಹಿಟ್‌ ಚಿತ್ರದ ಪ್ರೀಮಿಯರ್‌ ಶೋ ವೇಳೆ ಹೈದರಾಬಾದ್​ನ ಸಂಧ್ಯಾ ಥಿಯೇಟರ್​ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಮಧ್ಯಾಹ್ನ ಬಂಧನಕ್ಕೊಳಗಾಗಿದ್ದ ಜನಪ್ರಿಯ ಹೀರೊ ಅಲ್ಲು ಅರ್ಜುನ್‌ ಒಂದು ರಾತ್ರಿಯನ್ನಿಡೀ ಜೈಲಿನಲ್ಲಿ ಕಳೆದು ಇಂದು ಮುಂಜಾನೆ ಬಿಡುಗಡೆಯಾಗಿದ್ದಾರೆ. ಕೆಳಹಂತದ ಕೋರ್ಟ್​ ಅವರಿಗೆ 14 ದಿನ ನ್ಯಾಯಂಗ ಬಂಧನ ವಿಧಿಸಿದರೂ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಆದರೆ ಕೋರ್ಟ್ ತೀರ್ಪಿನ ಪ್ರತಿ ಜೈಲು

ಮುಂಜಾನೆ ಜೈಲಿನಿಂದ ಬಿಡುಗಡೆಯಾದ ಅಲ್ಲು ಅರ್ಜುನ್‌ Read More »

ಮೈತುಂಬ ಗುಂಡುಗಳು ಇದ್ದರೂ ಗಣಿತದ ಆ ಮಹಾತಜ್ಞ ಬರೆಯುತ್ತಲೇ ಇದ್ದ…

21ನೇ ವರ್ಷಕ್ಕೆ ಉಸಿರು ಚೆಲ್ಲಿದ್ದ ಗಣಿತದ ಮೇರು ಪ್ರತಿಭೆಯ ದುರಂತ ಕಥೆ ಫ್ರಾನ್ಸ್ ದೇಶದ ಅತ್ಯಂತ ಪ್ರತಿಭಾವಂತ ಗಣಿತ ತಜ್ಞನ ಬದುಕು ದುರಂತವಾದದ್ದು ಯಾಕೆ? ಆತನ ಕಥೆಯನ್ನು ಓದುತ್ತಾ ಹೋಗಿ.ಅವನ ಹೆಸರು ಎವರೆಸ್ಟ್ ಗಾಲ್ವಾ (Everest Galois). ಆತ ಬದುಕಿದ್ದು 21 ವರ್ಷ ಮಾತ್ರ. ಆದರೆ ಅಷ್ಟರಲ್ಲಿ ಆತ ತಾನೆಷ್ಟು ಪ್ರತಿಭಾವಂತ ಎಂದು ಸಾಬೀತು ಮಾಡಿ ಆಗಿತ್ತು. ಆತನ ಬಾಲ್ಯದ ಒಂದು ಘಟನೆ… ಬಾಲ್ಯದಲ್ಲಿ ಅವನು ಒಂದನೇ ತರಗತಿಯಲ್ಲಿ ಓದುತ್ತಿದ್ದಾಗ ತುಂಬ ತಂಟೆ ಮಾಡುತ್ತಿದ್ದ. ಅದನ್ನು ಸಹಿಸಿಕೊಳ್ಳಲು

ಮೈತುಂಬ ಗುಂಡುಗಳು ಇದ್ದರೂ ಗಣಿತದ ಆ ಮಹಾತಜ್ಞ ಬರೆಯುತ್ತಲೇ ಇದ್ದ… Read More »

ಕೌಕ್ರಾಡಿಯ ದಲಿತೆ ವೃದ್ಧೆ ರಾಧಮ್ಮ ಮನೆ ದ್ವಂಸ ಪ್ರಕರಣ | ದಲಿತ, ರೈತ ಕಾರ್ಮಿಕ ಹಾಗೂ ಸಮಾನ ಮನಸ್ಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ಪುತ್ತೂರು: ಕೌಕ್ರಾಡಿ ಗ್ರಾಮದ ವೃದ್ಧೆ ದಲಿತೆ ರಾಧಮ್ಮ ಅವರ ಮನೆಯನ್ನು ಕಾನೂನು ಬಾಹಿರವಾಗಿ, ಆದೇಶರಹಿತವಾಗಿ ದ್ವಂಸ ಮಾಡಿದ ಕಡಬ ತಹಸೀಲ್ದಾರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಅಮಾನತು ಮಾಡಬೇಕು ಹಾಗೂ ಸುಳ್ಳು ಕೇಸು ದಾಖಲಿಸಿದ ವಿಎ ಅವರನ್ನು ಉಚ್ಛಾಟಿಸುವಂತೆ ಒತ್ತಾಯಿಸಿ ದಲಿತ, ರೈತ ಕಾರ್ಮಿಕ ಹಾಗೂ ಸಮಾನ ಮನಸ್ಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ಕಿಲ್ಲೇ ಮೈದಾನದ ಬಳಿ ಇರುವ ಅಮರ್ ಜವಾನ್ ಸ್ಮಾರಕದ ಬಳಿ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಸಿಪಿಎಂ ಮುಖಂಡ ಬಿ.ಎಂ.ಭಟ್‍ ಮಾತನಾಡಿ, ರಾಜ್ಯ ರೈತ ಸಂಘದ

ಕೌಕ್ರಾಡಿಯ ದಲಿತೆ ವೃದ್ಧೆ ರಾಧಮ್ಮ ಮನೆ ದ್ವಂಸ ಪ್ರಕರಣ | ದಲಿತ, ರೈತ ಕಾರ್ಮಿಕ ಹಾಗೂ ಸಮಾನ ಮನಸ್ಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ Read More »

ತ್ರಿನೇತ್ರದತ್ತ ಸೌಹಾರ್ದ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ | ಅಧ್ಯಕ್ಷರಾಗಿ ನಿತಿನ್‍ ಪಕ್ಕಳ, ಉಪಾಧ್ಯಕ್ಷರಾಗಿ ಕೆ.ರಾಜೇಂದ್ರ ಪ್ರಸಾದ್ ಶೆಟ್ಟಿ ಆಯ್ಕೆ

ಪುತ್ತೂರು: ಬೊಳುವಾರಿನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ತ್ರೀನೇತ್ರದತ್ತ ಸೌಹಾರ್ದ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶುಕ್ರವಾರ ಸಂಘದ ಕಚೇರಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ನಿತೀನ್‍ ಪಕ್ಕಳ, ಉಪಾಧ್ಯಕ್ಷರಾಗಿ ಕೆ.ರಾಜೇಂದ್ರ ಪ್ರಸಾದ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷತೆಗಾಗಿ ನಿತಿನ್ ಪಕ್ಕಳ ಅವರನ್ನು ಸದಸ್ಯ ನಿತಿನ್ ಮಂಗಳ ಸೂಚಿಸಿದರು. ಕೆ.ರಾಜೇಂದ್ರ ಪ್ರಸಾದ್ ಶೆಟ್ಟಿ ಅನುಮೋದಿಸಿದರು. ಉಪಾಧ್ಯಕ್ಷತೆಗಾಗಿ ಕೆ.ರಾಜೇಂದ್ರ ಪ್ರಸಾದ್ ಶೆಟ್ಟಿ ಅವರನ್ನು ನಿತಿನ್ ಮಂಗಳ ಸೂಚಿಸಿದರು. ಪ್ರಜ್ವಲ್ ಕೆ.ಆರ್. ಅನುಮೋದಿಸಿದರು.

ತ್ರಿನೇತ್ರದತ್ತ ಸೌಹಾರ್ದ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ | ಅಧ್ಯಕ್ಷರಾಗಿ ನಿತಿನ್‍ ಪಕ್ಕಳ, ಉಪಾಧ್ಯಕ್ಷರಾಗಿ ಕೆ.ರಾಜೇಂದ್ರ ಪ್ರಸಾದ್ ಶೆಟ್ಟಿ ಆಯ್ಕೆ Read More »

ಪುಷ್ಪ ಚಿತ್ರದ ಚಿತ್ರದ ಹೀರೊ ಅಲ್ಲು ಅರ್ಜುನ್‌ ಬಂಧನ

ಮಹಿಳೆ ಸಾವು ಪ್ರಕರಣಕ್ಕೆ ಸಂಬಂಧಿಸಿ ಬೆಡ್‌ರೂಮ್‌ನಿಂದಲೇ ಎತ್ತಾಕಿಕೊಂಡು ಹೋದ ಪೊಲೀಸರು ಹೈದರಾಬಾದ್‌ : ಪುಷ್ಪ-2 ಸಿನೆಮಾದ ಪ್ರಿಂಇಯರ್‌ ಶೋ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಚಿತ್ರದ ಹೀರೊ ಅಲ್ಲು ಅರ್ಜುನ್ ಅವರನ್ನು ತೆಲಂಗಾಣದ ಚೀಕಟಪಲ್ಲಿ ಪೊಲೀಸರು ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ‘ಪುಷ್ಪ 2’ ಸಿನಿಮಾ ಬಿಡುಗಡೆ ವೇಳೆ ಅಲ್ಲು ಅರ್ಜುನ್ ಸಂಧ್ಯಾ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸಂಭವಿಸಿದ ನೂಕುನುಗ್ಗಲು ಮತ್ತು ಕಾಲ್ತುಳಿತದಲ್ಲಿ ಓರ್ವ ಮಹಿಳೆ ಸಾವಿಗೀಡಾಗಿ ಅವರ

ಪುಷ್ಪ ಚಿತ್ರದ ಚಿತ್ರದ ಹೀರೊ ಅಲ್ಲು ಅರ್ಜುನ್‌ ಬಂಧನ Read More »

ಬಸ್‍ ಬ್ರೇಕ್‍ ಫೈಲ್‍| ಕ್ಷಣಾರ್ಧದಲ್ಲೇ  ತಪ್ಪಿದ ದುರಂತ

ಮಂಗಳೂರು: ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ವಿಶಾಲ್ ಟ್ರಾವೆಲ್ಸ್ ಬಸ್ ಬ್ರೇಕ್‍ ಫೈಲ್‍ ಆಗಿರುವ ಘಟನೆ ಗುರುವಾರ ಬೆಳಗ್ಗೆ ನಗರದ ಬಲ್ಲಾಳ್‌ಬಾಗ್ ಬಳಿ ನಡೆದಿದೆ. ಈ ದುರಂತದಲ್ಲಿ ಯಾವುದೆ ಅಪಾಯ ಸಂಭವಿಸದೆ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಬೆಳಗ್ಗೆ 8 ಗಂಟೆ ವೇಳೆಗೆ ಘಟನೆ ನಡೆದಿದ್ದು, ಲಾಲ್‌ಬಾಗ್ ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಇಳಿಸಿ ಮುಂದುವರಿದ ಬಸ್ ಬಲ್ಲಾಳ್‌ಬಾಗ್ ತಂಗುದಾಣದತ್ತ ಬಂದಿದೆ. ಈ ವೇಳೆ ಚಾಲಕ ಸಿದ್ದಿಕ್ ಎರ್ಮಾಳ್ ಅವರಿಗೆ ಬಸ್ಸಿನ ಬ್ರೇಕ್ ಫೈಲ್‍ ಆಗಿದೆ ಎಂದು  ತಿಳಿದ

ಬಸ್‍ ಬ್ರೇಕ್‍ ಫೈಲ್‍| ಕ್ಷಣಾರ್ಧದಲ್ಲೇ  ತಪ್ಪಿದ ದುರಂತ Read More »

error: Content is protected !!
Scroll to Top