ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಕಿಟ್ ವಿತರಣೆ

ವಿಟ್ಲ : ಶ್ರೀ  ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ)  ವಿಟ್ಲ ಇವರ ವಾತ್ಸಲ್ಯ ಕಾರ್ಯಕ್ರಮದಡಿ ಪೆರ್ನೆ ವಲಯದ  ಕೆದಿಲ ನಿವಾಸಿ ವಾತ್ಸಲ್ಯ ಸದಸ್ಯೆ  ಕಮಲ ಅವರಿಗೆ  ಮಂಜೂರಾದ ವಾತ್ಸಲ್ಯ ಕಿಟ್ಟನ್ನು ವಿತರಿಸಲಾಗಿದೆ. ಮಾತೃ ಶ್ರೀ ಹೇಮಾವತಿ ಅಮ್ಮನವರ ಆಶಯದಂತೆ ನಡೆಯುವ  ವಾತ್ಸಲ್ಯ ಕಾರ್ಯಕ್ರಮದಡಿ ವಾತ್ಸಲ್ಯ ಕಿಟ್ ಅನ್ನು ಜ್ಞಾನವಿಕಾಸ ಸಮನ್ವಯಧಿಕಾರಿ ದೀಪಾ  ವಿತರಿಸಿದರು. ಈ ಸಂದರ್ಭದಲ್ಲಿ  ಕೆದಿಲ A ಒಕ್ಕೂಟದ  ಸೇವಾಪ್ರತಿನಿದಿ ಶಾರದಾ,  B ಒಕ್ಕೂಟದ ಸೇವಾಪ್ರತಿನಿದಿ ಜಯಂತಿ, ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ […]

ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಕಿಟ್ ವಿತರಣೆ Read More »

70 ಚದರ ಕಿಲೋ ಮೀಟರ್‌ ವ್ಯಾಪಿಸಿದ ಭೀಕರ ಕಾಡ್ಗಿಚ್ಚು : ಸಾವಿನ ಸಂಖ್ಯೆ 10ಕ್ಕೇರಿಕೆ

ಹಾಲಿವುಡ್‌ ತಾರೆಯರ, ಸೆಲೆಬ್ರಿಟಿಗಳ ಬಂಗಲೆಗಳ ಸಹಿತ 5000 ಕಟ್ಟಡಗಳು ಸುಟ್ಟು ಕರಕಲು ವಾಷಿಂಗ್ಟನ್‌ : ಅಮೆರಿಕದ ಲಾಸ್‌ ಏಂಜೆಲ್ಸ್‌ನಲ್ಲಿ ಕಾಣಿಸಿಕೊಂಡಿರುವ ಭೀಕರ ಕಾಡ್ಗಿಚ್ಚು ಸುಮಾರು 70 ಚದರ ಕಿಲೋಮೀಟರ್‌ ವ್ಯಾಪಿಸಿದ್ದು, ಸಾವಿರಾರು ಕಟ್ಟಡಗಳನ್ನು ಆಪೋಶನ ತೆಗೆದುಕೊಂಡಿದೆ ಹಾಗೂ ಮೃತರ ಸಂಖ್ಯೆ 10ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 5000ಕ್ಕೂ ಅಧಿಕ ಕಟ್ಟಡಗಳು ಬೆಂಕಿಗಾಹುತಿಯಾಗಿದ್ದು, ಅನೇಕ ಹಾಲಿವುಡ್‌ ನಟಿ, ನಟಿಯರು ಹಾಗೂ ಸೆಲೆಬ್ರಿಟಿಗಳ ಮನೆಗಳು ಕೂಡ ಸುಟ್ಟು ಕರಕಲಾಗಿವೆ.ಗಾಳಿಯಿಂದಾಗಿ ಬೆಂಕಿ ಕೆನ್ನಾಲೆಗಳು ಧಗದಗಿಸುತ್ತಾ ವ್ಯಾಪಿಸುತ್ತಿದ್ದು, ಬಲವಾದ ಗಾಳಿ ಬೀಸುತ್ತಿರುವುದರಿಂದ ನಿಯಂತ್ರಣಕ್ಕೆ

70 ಚದರ ಕಿಲೋ ಮೀಟರ್‌ ವ್ಯಾಪಿಸಿದ ಭೀಕರ ಕಾಡ್ಗಿಚ್ಚು : ಸಾವಿನ ಸಂಖ್ಯೆ 10ಕ್ಕೇರಿಕೆ Read More »

ಮಂಗಳೂರಿನಲ್ಲಿ ಹೈಡ್ರೋವಿಡ್ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಮಂಗಳೂರು : ಮಂಗಳೂರು ನಗರ ಪೊಲೀಸರ ಸಿಸಿಬಿ ಘಟಕವು ಗೋವಾದಿಂದ ಮಂಗಳೂರು ಮತ್ತು ಕೇರಳಕ್ಕೆ ಹೈಡೋವಿಡ್ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸಿ, 73 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಶಮೀರ್ ಪಿ.ಕೆ (42) ಎಂದು ಪತ್ತೆಹಚ್ಚಲಾಗಿದೆ. ಬಂಧಿತ  ಶಮೀರ್ ಪಿ.ಕೆಯನ್ನು ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ ಹಿಡಿದು ಬಂದಿಸಲಾಗಿದೆ. ಆತನಿಂದ 738 ಗ್ರಾಂ ಹೈಡ್ರೋವಿಡ್ ಗಾಂಜಾ, ಕಾರು, ಮೊಬೈಲ್ ಫೋನ್ ಸೇರಿದಂತೆ ಒಟ್ಟು 80 ಲಕ್ಷ

ಮಂಗಳೂರಿನಲ್ಲಿ ಹೈಡ್ರೋವಿಡ್ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ Read More »

ಬೈಕ್ ಗೆ  ಬಸ್‌ ಡಿಕ್ಕಿ | ಬೈಕ್‍ ಸವಾರ ಗಂಭೀರ ಗಾಯ

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣ ಜಂಕ್ಷನ್ ಬಳಿ ಬೈಕ್ ಗೆ ತಡೆರಹಿತ ಬಸ್ ಡಿಕ್ಕಿಯಾದ ಘಟನೆ ನಡೆದಿದೆ. ಡಿಕ್ಕಿಯಾದ ಪರಿಣಾಮ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಚಿಕಿತ್ಸೆಗೆ  ದಾಖಲಾಗಿದ್ದಾರೆ. ಗಾಯಗೊಂಡವರನ್ನು ಮುಲ್ಕಿ ಅಂಚೆ ಕಚೇರಿಯ ಅಂಚೆಪಾಲಕ ಕೊಲ್ಲೂರು ನಿವಾಸಿ ಪಾಂಡುರಂಗ ರಾವ್ ಎನ್ನಲಾಗಿದೆ. ಗಾಯಾಳು ಪಾಂಡುರಂಗ ರಾವ್ ತಮ್ಮ ಬೈಕ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಮುಲ್ಕಿ ಜಂಕ್ಷನ್ ಬಳಿ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ವೇಳೆ  ಉಡುಪಿ ಕಡೆಯಿಂದ ಸರ್ವಿಸ್ ರಸ್ತೆಯಲ್ಲಿ ಬಂದ ತಡೆರಹಿತ

ಬೈಕ್ ಗೆ  ಬಸ್‌ ಡಿಕ್ಕಿ | ಬೈಕ್‍ ಸವಾರ ಗಂಭೀರ ಗಾಯ Read More »

ಹೆಜ್ಜೇನು ಕಡಿತ : ಇಬ್ಬರಿಗೆ ಗಂಭೀರ ಗಾಯ

ನೆಲ್ಯಾಡಿ: ಹೆಜ್ಜೇನು ದಾಳಿ ನಡೆಸಿ ಇಬ್ಬರು ಗಾಯಗೊಂಡು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಿನ್ನೆ ಬೆಳಿಗ್ಗೆ ನೆಲ್ಯಾಡಿ ಗ್ರಾಮದ ಮಾದೇರಿ ಸಮೀಪದ ತುಂಬೆತ್ತಡ್ಕ ಎಂಬಲ್ಲಿ ನಡೆದಿದೆ. ಗಾಯಗೊಂಡವರು ಮಾದೇರಿ ತುಂಬೆತ್ತಡ್ಕ ನಿವಾಸಿ ರೂಪಾವತಿ(30) ಹಾಗೂ ತಿಮ್ಮಪ್ಪ ಕುಂಬಾರ(49) ಎನ್ನಲಾಗಿದೆ. ರೂಪಾವತಿ ಎಂಬವರಿಗೆ ಮನೆ ಸಮೀಪವೇ ಏಕಾಏಕಿ ಹೆಜ್ಜೇನುಗಳು ದಾಳಿ ಮಾಡಿವೆ. ಇದರಿಂದ ವಿಚಲಿತಗೊಂಡ ರೂಪಾವತಿ ಜೋರಾಗಿ ಕಿರುಚಿದ್ದಾರೆ.  ರೂಪಾವತಿಯವರ ಬೊಬ್ಬೆ ಕೇಳಿ ಪಕ್ಕದ ಮನೆಯ ತಿಮ್ಮಪ್ಪ ಕುಂಬಾರ ಎನ್ನುವವರು ರಕ್ಷಣೆಗಾಗಿ ಗೋಣಿ ಚೀಲ ಹಿಡಿದು ಬಂದಿದ್ದರು.

ಹೆಜ್ಜೇನು ಕಡಿತ : ಇಬ್ಬರಿಗೆ ಗಂಭೀರ ಗಾಯ Read More »

ಕಾಂಗ್ರೆಸ್‌ ಸಂವಿಧಾನ್‌ ಸಮಾವೇಶಕ್ಕೆ ಭೀಮ ಸಂಗಮದ ಮೂಲಕ ಬಿಜೆಪಿ ತಿರುಗೇಟು

ಜ.25ರವರೆಗೆ ರಾಜ್ಯಾದ್ಯಂತ ಬಿಜೆಪಿಯಿಂದ ವಿವಿಧ ಹಂತಗಳಲ್ಲಿ ಅಭಿಯಾನ ಬೆಂಗಳೂರು: ಕಾಂಗ್ರೆಸ್‌ನ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ಸಮಾವೇಶಕ್ಕೆ ಪ್ರತಿಯಾಗಿ ಬಿಜೆಪಿ ಭೀಮ ಸಮಗಮ ಸಭಿಯಾನ ನಡೆಸಲಿದೆ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನದ ಕಾರಣ ಅರ್ಧಕ್ಕೆ ನಿಂತಿದ್ದ ಬೆಳಗಾವಿಯ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ಸಮಾವೇಶ 21ರಂದು ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕೆ ತಿರುಗೇಟು ನೀಡುವ ಸಲುವಾಗಿ ಬಿಜೆಪಿ ಭೀಮ ಸಂಗಮ ಅಭಿಯಾನ ಆರಂಭಿಸಲು ಚಿಂತನೆ ನಡೆಸಿದೆ.

ಕಾಂಗ್ರೆಸ್‌ ಸಂವಿಧಾನ್‌ ಸಮಾವೇಶಕ್ಕೆ ಭೀಮ ಸಂಗಮದ ಮೂಲಕ ಬಿಜೆಪಿ ತಿರುಗೇಟು Read More »

ಕಾಡಿನ ರಹಸ್ಯ ಸ್ಥಳದಲ್ಲಿದೆಯೇ ನಕ್ಸಲರ ಶಸ್ತ್ರಾಸ್ತ್ರ?

ನಕ್ಸಲರು ಬಳಸುತ್ತಿದ್ದ ಎಕೆ 47, ಮಷಿನ್‌ ಗನ್‌ ಅರಣ್ಯದೊಳಗೆ ಬಚ್ಚಿಟ್ಟಿರುವ ಶಂಕೆ ಬೆಂಗಳೂರು: ಮುಖ್ಯಮಂತ್ರಿ ಸಮ್ಮುಖದಲ್ಲಿ ಶರಣಾದ ನಕ್ಸಲರು ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದರು. ಆದರೆ ಇನ್ನೂ ಆ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿಲ್ಲ. ಒಪ್ಪಿಸುವ ಪ್ರತಿ ಶಸ್ತ್ರಾಸ್ತ್ರಕ್ಕೆ ಪರಿಹಾರ ರೂಪದಲ್ಲಿ ಹಣ ಕೊಡುವುದಾಗಿ ಸರಕಾರ ಪ್ಯಾಕೇಜ್‌ನಲ್ಲಿ ಘೋಷಿಸಿದೆ. ಹೀಗಾಗಿ ನಕ್ಸಲರ ಶಸ್ತ್ರಾಸ್ತ್ರಗಳು ಎಲ್ಲಿವೆ ಎಂಬ ಕುತೂಹಲ ಇದೆ. ಆಧುನಿಕ ಶಸ್ತ್ರಾಸ್ತ್ರಗಳನ್ನು ನಕ್ಸಲರು ಕಾಡಿನ ರಹಸ್ಯ ಸ್ಥಳದಲ್ಲಿ ಅಡಗಿಸಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಶರಣಾದ ಯಾವೊಬ್ಬ ನಕ್ಸಲ್‌ ಕೂಡ ಆಯುಧಗಳನ್ನು ಪೊಲೀಸರಿಗೆ ನೀಡಿಲ್ಲ.

ಕಾಡಿನ ರಹಸ್ಯ ಸ್ಥಳದಲ್ಲಿದೆಯೇ ನಕ್ಸಲರ ಶಸ್ತ್ರಾಸ್ತ್ರ? Read More »

ಮಹಿಳೆಯ ಬ್ಯಾಗಿನಿಂದ ಚಿನ್ನಾಭರಣ ಕಳವು | ಆರೋಪಿ ನಸೀಮಾ ಬಂಧನ

ಉಪ್ಪಿನಂಗಡಿ: ಮಹಿಳೆಯೋರ್ವರ ಬ್ಯಾಗಿನಿಂದ 114 ಗ್ರಾಂ ತೂಕದ ಚಿನ್ನಾಭರಣದ ಬಾಕ್ಸ್ ಎಗರಿಸಿದ್ದ ಪ್ರಕರಣ ಬಸ್‍ ನಿಲ್ದಾಣದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ಬಂಟ್ವಾಳ ತಾಲೂಕು ಕೊಮಿನಡ್ಕ ಮನೆ ನಿವಾಸಿ ನಸೀಮಾ (31) ಎಂಬಾಕೆಯನ್ನು ಬಂಧಿಸಿ, ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಕಡಬ ತಾಲೂಕು ಬಂಟಿ ಗ್ರಾಮದ ನೆಕ್ಕಿತದ ನಿವಾಸಿ ಮುಸ್ತಫಾ ಅವರ ಪತ್ನಿ ಅಬೀಬಾ ಅವರು ಭಾವನ ಪತ್ನಿ ಹಸೀರಾಬಾನು ಮದುವೆ ಕಾರ್ಯಕ್ರಮಕ್ಕೆ ಹೊರಡುವ ಮೊದಲು ಮನೆಯಲ್ಲಿದ್ದ ಅವರ ಸುಮಾರು 8 ಗ್ರಾಂ ತೂಕದ ಚಿನ್ನದ ನೆಕ್ಸಸ್ -1

ಮಹಿಳೆಯ ಬ್ಯಾಗಿನಿಂದ ಚಿನ್ನಾಭರಣ ಕಳವು | ಆರೋಪಿ ನಸೀಮಾ ಬಂಧನ Read More »

ಮುಕ್ಕದಲ್ಲಿ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆ ಸೆರೆ

ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಬಾಂಗ್ಲಾದೇಶದ ಅಕ್ರಮ ಪ್ರಜೆ ಮಂಗಳೂರು: ಸುರತ್ಕಲ್‌ ಸಮೀಪ ಮುಕ್ಕದಲ್ಲಿ ಅಕ್ರಮವಾಗಿ ವಾಸವಾಗಿದ್ದ ಬಾಂಗ್ಲಾದೇಶದ ಪ್ರಜೆಯೊಬ್ಬನನ್ನು ರಾಜ್ಯ ಆಂತರಿಕ ಭದ್ರತಾ ವಿಭಾಗ ಮತ್ತು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆಯ ಅನರುಲ್ ಶೇಖ್​ (25) ಸೆರೆಯಾದವ.ಅನರುಲ್ ಶೇಖ್ ಮೂರು ವರ್ಷಗಳ ಹಿಂದೆ ಅಂತಾರಾಷ್ಟ್ರಿಯ ಗಡಿರೇಖೆ ಲಾಲ್​​​ಗೋಲ್ ಮೂಲಕ ಅಕ್ರಮವಾಗಿ ಭಾರತದೊಳಗೆ ಪ್ರವೇಶಿಸಿದ್ದ. ಬಳಿಕ ಪಶ್ಚಿಮ ಬಂಗಾಳದ ಮುರ್ಷಿದಾಬಾದ್​ನಿಂದ ಉಡುಪಿಗೆ ಬಂದಿದ್ದ. ಇಲ್ಲಿಂದ ಮಂಗಳೂರು ಹೊರವಲಯದ ಮುಕ್ಕ ಗ್ರಾಮದ ರೋಹನ್ ಎಸ್ಟೇಟ್​​ನಲ್ಲಿ ಕಟ್ಟಡ

ಮುಕ್ಕದಲ್ಲಿ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆ ಸೆರೆ Read More »

ಮೇರಠ್‌ : ಒಂದೇ ಕುಟುಂಬದ ಐವರ ಕೊಲೆ

ಮೂರು ಮಕ್ಕಳ ಶವಗಳನ್ನು ಮಂಚದೊಳಗಿಟ್ಟಿದ್ದ ಹಂತಕರು ಲಖನೌ: ಉತ್ತರ ಪ್ರದೇಶದ ಮೇರಠ್‌ ಜಿಲ್ಲೆಯ ಲಿಸಡಿ ಗೇಟ್‌ ಎಂಬಲ್ಲಿ ಒಂದೇ ಕುಟುಂಬದ ಐದು ಮಂದಿ ಕೊಲೆಯಾದ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆಯಾಗಿದ್ದಾರೆ. ತಂದೆ, ತಾಯಿ ಮತ್ತು ಮೂರು ಮಕ್ಕಳನ್ನು ಕೊಲೆಮಾಡಿದ್ದಾರೆ. ತಂದೆ, ತಾಯಿ ಶವ ನೆಲದಲ್ಲಿ ಬಿದ್ದಿದ್ದರೆ ಮಕ್ಕಳ ಶವಗಳು ಮಂಚದೊಳಗಿನ ಬಾಕ್ಸ್‌ನಲ್ಲಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದವರನ್ನು ಮೊಯಿನ್‌, ಅವರ ಹೆಂಡತಿ ಅಸ್ಮಾ ಮಕ್ಕಳಾದ ಅಫ್ಸಾ (8), ಅಜೀಜ (4) ಮತ್ತು ಅದಿಬ(1) ಎಂದು ಗುರುತಿಸಲಾಗಿದೆ. ಕೆಲದಿನಗಳಿಂದ ಮನೆಯವರು

ಮೇರಠ್‌ : ಒಂದೇ ಕುಟುಂಬದ ಐವರ ಕೊಲೆ Read More »

error: Content is protected !!
Scroll to Top