ಸೂತ್ರ ಕಿತ್ತ ಗಾಳಿಪಟ ರಾಜ್ಯ ಬಿಜೆಪಿ ನಾಯಕತ್ವ

ಅಂತ್ಯ ಕಾಣದ ಕಚ್ಚಾಟದಿಂದ ಕಾರ್ಯಕರ್ತರಿಗೆ ಹತಾಶೆ ಬೆಂಗಳೂರು: ಬಿಜೆಪಿಯ ಒಳಜಗಳ ಪರಾಕಾಷ್ಠೆಗೆ ತಲುಪಿದ್ದು, ಸದ್ಯ ಪಕ್ಷ ಗಟ್ಟಿ ನಾಯಕತ್ವವಿಲ್ಲದೆ ಸೂತ್ರ ಕಡಿದ ಗಾಳಿಪಟದಂತೆ ಸಿಕ್ಕದಲ್ಲೆಡೆಗೆ ಹಾರಾಡುತ್ತಿದೆ. ಕಳೆದ ಕೆಲವು ತಿಂಗಳಿಂದೀಚೆಗೆ ನಡೆಯುತ್ತಿರುವ ಬಣ ಜಗಳಕ್ಕೆ ಮದ್ದರೆಯಲು ಬಿಜೆಪಿ ಹೈಕಮಾಂಡ್‌ಗೆ ಸಾಧ್ಯವಾಗದಿರುವುದು ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನು ಚಿಂತೆಗೀಡು ಮಾಡಿದೆ.ಕಾಂಗ್ರೆಸ್‌ ಸರಕಾರದ ವಿರುದ್ಧ ಹೋರಾಡಲು ಸಾಕಷ್ಟು ವಿಷಯಗಳಿದ್ದರೂ ಪ್ರಮುಖ ವಿಪಕ್ಷವಾಗಿರುವ ಬಿಜೆಪಿ ನಾಯಕರು ತಮ್ಮಲ್ಲೇ ಕಚ್ಚಾಡುತ್ತಾ ಕಾಲಹರಣ ಮಾಡುತ್ತಿರುವುದನ್ನು ಕಂಡು ಕಂಗಾಲಾಗಿರುವ ಸಾಮಾನ್ಯ ಕಾರ್ಯಕರ್ತರು ಮುಂದೇನು ಎಂದು ಭವಿಷ್ಯದ ಬಗ್ಗೆ […]

ಸೂತ್ರ ಕಿತ್ತ ಗಾಳಿಪಟ ರಾಜ್ಯ ಬಿಜೆಪಿ ನಾಯಕತ್ವ Read More »

“ಪರೀಕ್ಷಾ ಪೆ ಚರ್ಚೆ” ಯಲ್ಲಿ ಈ ವರ್ಷ ಪ್ರಧಾನಿ ಜೊತೆ ಇರಲಿದ್ದಾರೆ ದೀಪಿಕಾ ಪಡುಕೋಣೆ, ಸದ್ಗುರು…

ಫೆ.10ರಂದು ಏಳು ಸಾಧಕರ ಜೊತೆ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಲಿರುವ ಮೋದಿ ಹೊಸದಿಲ್ಲಿ : ವಾರ್ಷಿಕ ಪರೀಕ್ಷೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ನಡೆಸುವ ಆತ್ಮೀಯ ಸಂವಾದ ಪರೀಕ್ಷಾ ಪೆ ಚರ್ಚೆಗೆ ಈ ವರ್ಷ ಹೊಸ ಆಯಾಮ ದೊರಕಲಿದೆ. ಪ್ರಧಾನಿ ಜೊತೆಗೆ ವಿವಿಧ ಕ್ಷೇತ್ರಗಳ ಏಳು ಸಾಧಕರು ಕೂಡ ಪ್ರಧಾನಿ ಪರೀಕ್ಷೆಯ ಒತ್ತಡವನ್ನು ನಿವಾರಿಸುವ ಕುರಿತು ಮಕ್ಕಳಿಗೆ ಸಲಹೆ ಸೋಚನೆಗಳನ್ನು ಕೊಡಲಿದ್ದಾರೆ. ಈ ವರ್ಷದ ʼಪರೀಕ್ಷಾ ಪೆ ಚರ್ಚಾʼ ಫೆ.10ರಂದು ಹೊಸದಿಲ್ಲಿಯ ಭಾರತ್ ಮಂಟಪದಲ್ಲಿ ನಡೆಯಲಿದೆ.

“ಪರೀಕ್ಷಾ ಪೆ ಚರ್ಚೆ” ಯಲ್ಲಿ ಈ ವರ್ಷ ಪ್ರಧಾನಿ ಜೊತೆ ಇರಲಿದ್ದಾರೆ ದೀಪಿಕಾ ಪಡುಕೋಣೆ, ಸದ್ಗುರು… Read More »

ಕೋಡಿಂಬಾಡಿ ಗ್ರಾಪಂ ವ್ಯಾಪ್ತಿಯ ವಿಶೇಷ ಚೇತನರಿಗೆ ನೀರಿನ ಟ್ಯಾಂಕ್ ವಿತರಣೆ

ಪುತ್ತೂರು: ಗ್ರಾಮದ ಕಟ್ಟಕಡೇಯ ಬಡವನ ಮನೆಗೂ ಸರಕಾರದಿಂದ ಸೌಲಭ್ಯ ದೊರೆತಾಗ ಮಾತ್ರ ನಾವು ಜನಪ್ರತಿನಿಧಿಯಾಗಿ ಮಾಡುವ ಸೇವೆಗೆ ಗೌರವ ದೊರೆತ ತೃಪ್ತಿ ದೊರೆಯುತ್ತದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.ಅವರು ಕೋಡಿಂಬಾಡಿ ಗ್ರಾಪಂ ಕಚೇರಿಯಲ್ಲಿ ಗ್ರಾಪಂ ನಿಧಿಯಿಂದ ಗ್ರಾಮದ 8 ಮಂದಿ ವಿಶೇಷ ಚೇತನ ವ್ಯಕ್ತಿಗಳಿಗೆ ನೀರಿನ ಟ್ಯಾಂಕ್ ವಿತರಿಸಿ ಮಾತನಾಡಿದರು. ರಾಜ್ಯದ ಕಾಂಗ್ರೆಸ್ ಸರಕರದ ಪಂಚ ಗ್ಯಾರಂಟಿ ಯೋಜನೆಗಳು ಪ್ರತೀ ಕುಟುಂಬಕ್ಕೂ ದೊರೆಯುತ್ತಿದೆ. ಇಂದು ಬಡವರ ಮೂರು ಹೊತ್ತಿನ ಊಟಕ್ಕೂ ಈ ಯೋಜನೆ ಸಹಕಾರಿಯಾಗಿದೆ.

ಕೋಡಿಂಬಾಡಿ ಗ್ರಾಪಂ ವ್ಯಾಪ್ತಿಯ ವಿಶೇಷ ಚೇತನರಿಗೆ ನೀರಿನ ಟ್ಯಾಂಕ್ ವಿತರಣೆ Read More »

ಹೈಸ್ಕೂಲ್‌ ವಿದ್ಯಾರ್ಥಿನಿ ಮೇಲೆ ಶಿಕ್ಷಕರಿಂದಲೇ ಅತ್ಯಾಚಾರ

ಚೆನ್ನೈ : ಹೈಸ್ಕೂಲ್‌ ವಿದ್ಯಾರ್ಥಿನಿಯ ಮೇಲೆ ಆಕೆಯ ಶಾಲೆಯ ಮೂವರು ಶಿಕ್ಷಕರೇ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ಸಂಭವಿಸಿದೆ. ಈ ಕೃತ್ಯಕ್ಕೆ ಭಾರಿ ಆಕ್ರೋಶ ವ್ಯಕ್ತವಾದ ಬಳಿಕ ಪೊಲೀಸರು ಶಿಕ್ಷಕರನ್ನು ಬಂಧಿಸಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಬಾಲಕಿಯ ತಾಯಿಯ ದೂರಿನ ಆಧಾರದ ಮೇಲೆ ಶಿಕ್ಷಕರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆ ಬಾಲಕಿ ಒಂದು ತಿಂಗಳಿಗೂ ಹೆಚ್ಚು ಕಾಲ ಶಾಲೆಗೆ ಹೋಗಿರಲಿಲ್ಲ. ಶಾಲೆಯ ಮುಖ್ಯ ಶಿಕ್ಷಕರು ವಿಚಾರಿಸಿದಾಗ ಮಗಳ ಮೇಲೆ ಶಾಲೆಯಲ್ಲಿ

ಹೈಸ್ಕೂಲ್‌ ವಿದ್ಯಾರ್ಥಿನಿ ಮೇಲೆ ಶಿಕ್ಷಕರಿಂದಲೇ ಅತ್ಯಾಚಾರ Read More »

ಪುತ್ತೂರಿನ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಗೆ ‘ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಸಾಂಘಿಕ ಪ್ರಶಸ್ತಿ | ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ನಗರದ ಗವಿಸಿದ್ದೇಶ್ವರ ವೇದಿಕೆಯಲ್ಲಿ ಫೆ.5 ರಂದು ನಡೆದ ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಹಾಗೂ ಸ್ವಾಮಿ ವಿವೇಕಾನಂದ ರಾಷ್ಟ್ರೀಯ, ರಾಜ್ಯ ಸದ್ಭಾವನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಪ್ರೇರಣಾ ಸಂಸ್ಥೆಯ ನಿರ್ದೇಶಕರಾದ ನಾಗೇಶ್‍ ಕೆಡೆಂಜಿ, ವಸಂತ ವೀರಮಂಗಲ

ಪುತ್ತೂರು: ನಗರದ ಏಳ್ಮುಡಿಯಲ್ಲಿರುವ ಪ್ರಭು ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ನೀಡುವ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಸಾಂಘಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಫೆ.5 ಬುಧವಾರ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ನಗರದ ಗವಿಸಿದ್ದೇಶ್ವರ ವೇದಿಕೆಯಲ್ಲಿ ಫೆ.5 ರಂದು ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಹಾಗೂ ಸ್ವಾಮಿ ವಿವೇಕಾನಂದ ರಾಷ್ಟ್ರೀಯ, ರಾಜ್ಯ ಸದ್ಭಾವನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ‘ಪ್ರೇರಣಾ’ ಸಂಸ್ಥೆಯ ನಿರ್ದೇಶಕರಾದ ನಾಗೇಶ್‍ ಕೆಡೆಂಜಿ ಹಾಗೂ ವಸಂತ

ಪುತ್ತೂರಿನ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಗೆ ‘ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಸಾಂಘಿಕ ಪ್ರಶಸ್ತಿ | ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ನಗರದ ಗವಿಸಿದ್ದೇಶ್ವರ ವೇದಿಕೆಯಲ್ಲಿ ಫೆ.5 ರಂದು ನಡೆದ ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಹಾಗೂ ಸ್ವಾಮಿ ವಿವೇಕಾನಂದ ರಾಷ್ಟ್ರೀಯ, ರಾಜ್ಯ ಸದ್ಭಾವನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಪ್ರೇರಣಾ ಸಂಸ್ಥೆಯ ನಿರ್ದೇಶಕರಾದ ನಾಗೇಶ್‍ ಕೆಡೆಂಜಿ, ವಸಂತ ವೀರಮಂಗಲ Read More »

ಬಾಂಗ್ಲಾದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ : ಶೇಖ್ ಮುಜಿಬುರ್ ರೆಹಮಾನ್ ಸ್ಮಾರಕ, ಮನೆ ಧ್ವಂಸ

ಮಾಜಿ ಪ್ರಧಾನಿ ಶೇಖ್‌ ಹಸೀನಾ ಭಾಷಣದಿಂದ ಕೆರಳಿದ ವಿರೋಧಿಗಳ ಕೃತ್ಯ ಢಾಕಾ: ದಂಗೆಯಿಂದ ಕಂಗಾಲಾಗಿರುವ ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಪಲಾಯನ ಮಾಡಿ ಭಾರತದಲ್ಲಿ ಆಶ್ರಯ ಪಡೆದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಮಾಡಿದ ಭಾಷಣದಿಂದ ಕೆರಳಿದ ವಿರೋಧಿ ಬಣ ರಾಜಧಾನಿ ಢಾಕಾದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಿ ಅಪಾರ ನಾಶನಷ್ಟ ಉಂಟುಮಾಡಿದೆ. ಶೇಖ್ ಹಸೀನಾ ತಂದೆ, ಬಾಂಗ್ಲಾದೇಶ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಸ್ಮಾರಕ ಮತ್ತು ಅವರ ನಿವಾಸವನ್ನು ಧ್ವಂಸಗೊಳಿಸಲಾಗಿದೆ. ಮನೆಗೆ ಬೆಂಕಿ ಹಚ್ಚಿ, ಜೆಸಿಬಿ, ಕ್ರೇನ್

ಬಾಂಗ್ಲಾದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ : ಶೇಖ್ ಮುಜಿಬುರ್ ರೆಹಮಾನ್ ಸ್ಮಾರಕ, ಮನೆ ಧ್ವಂಸ Read More »

ಪ್ರತಿವರ್ಷ 500 ವಿಶೇಷ ಚೇತನ ಮಹಿಳೆಯರ ವಿವಾಹಕ್ಕೆ ತಲಾ 10 ಲ.ರೂ. ಕೊಡುಗೆ

ಅದಾನಿ ಪುತ್ರ ಜೀತ್‌ ಅದಾನಿಯಿಂದ ವಿಶೇಷ ಚೇತನರಿಗೆ ಮದುವೆ ಉಡುಗೊರೆ ಹೊಸದಿಲ್ಲಿ: ಕೈಗಾರಿಕೋದ್ಯಮಿ ಗೌತಮ್‌ ಅದಾನಿ ಅವರ ಪುತ್ರ ಜೀತ್‌ ಅದಾನಿ ತನ್ನ ಮದುವೆ ಸಂದರ್ಭದಲ್ಲಿ ವಿಶೇಷ ಚೇತನ ಮಹಿಳೆಯರಿಗೆ ದೊಡ್ಡ ಉಡುಗೊರೆಯೊಂದನ್ನು ನೀಡಿದ್ದಾರೆ. ಪ್ರತಿವರ್ಷ 500 ವಿಶೇಷ ಚೇತನ ಮಹಿಳೆಯರ ಮದುವೆಗೆ ತಲಾ 10 ಲ.ರೂ.ಯಂತೆ ದೇಣಿಗೆ ನೀಡುವುದಾಗಿ ಜೀತ್‌ ಅದಾನಿ ವಾಗ್ದಾನ ಮಾಡಿದ್ದಾರೆ. ಜೀತ್‌ ಅದಾನಿ ಅವರು ಫೆ.7ರಂದು ದಿವಾ ಶಾ ಅವರನ್ನು ವಿವಾಹವಾಗಲಿದ್ದಾರೆ. ಜೀತ್ ಮತ್ತು ದಿವಾ ತಮ್ಮ ದಾಂಪತ್ಯ ಜೀವನವನ್ನು ಒಂದು

ಪ್ರತಿವರ್ಷ 500 ವಿಶೇಷ ಚೇತನ ಮಹಿಳೆಯರ ವಿವಾಹಕ್ಕೆ ತಲಾ 10 ಲ.ರೂ. ಕೊಡುಗೆ Read More »

ದಿಲ್ಲಿ : ಆಪ್‌ ಹ್ಯಾಟ್ರಿಕ್‌ ಕನಸು ಭಗ್ನ?

ಸಮೀಕ್ಷೆಗಳೆಲ್ಲ ಬಿಜೆಪಿ ಪರ; ಮತದಾರರ ಮನದಾಳ ನಿಗೂಢ ಹೊಸದಿಲ್ಲಿ : ದಿಲ್ಲಿಯಲ್ಲಿ ಕೊನೆಗೂ ಅರವಿಂದ ಕೇಂಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಾರ್ಟಿ (ಆಪ್‌) ನಾಗಾಲೋಟಕ್ಕೆ ಬ್ರೇಕ್‌ ಹಾಕುವಲ್ಲಿ ಬಿಜೆಪಿ ಯಶಸ್ವಿಯಾಗಲಿದೆಯೇ? ಚುನಾವಣೋತ್ತರ ಸಮೀಕ್ಷೆಗಳನ್ನು ನಂಬುವುದಾದರೆ ಮೂರು ದಶಕಗಳ ಬಳಿಕ ದಿಲ್ಲಿಯಲ್ಲಿ ಬಿಜೆಪಿ ಗೆದ್ದು ಅಧಿಕಾರ ಹಿಡಿಯಲಿದೆ. ಈ ಮೂಲಕ ಹ್ಯಾಟ್ರಿಕ್‌ ಗೆಲುವು ಸಾಧಿಸುವ ಆಪ್‌ ಕನಸು ಭಗ್ನಗೊಳ್ಳಲಿದೆ. ಆದರೆ ಕಳೆದ ಲೋಕಸಭಾ ಚುನಾವಣೆ ಮತ್ತು ನಂತರ ನಡೆದ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಚುನಾವಣೋತ್ತರ ಸಮೀಕ್ಷೆಗಳೆಲ್ಲ ಬುಡಮೇಲಾಗಿರುವುದರಿಂದ

ದಿಲ್ಲಿ : ಆಪ್‌ ಹ್ಯಾಟ್ರಿಕ್‌ ಕನಸು ಭಗ್ನ? Read More »

ಬಿಜೆಪಿ ಮುಖಂಡ ರಾಜೇಶ್‍ ಬನ್ನೂರು ಮನೆ ಧ್ವಂಸ ಪ್ರಕರಣ | ಇದೊಂದು ದರೋಡೆ ಪ್ರಕರಣವಾಗಿದ್ದು, ಅಪರಾಧಿಗಳನ್ನು ಪತ್ತೆಹಚ್ಚಿ ದರೋಡೆ ಪ್ರಕರಣ ದಾಖಲಿಸಿ | ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್‍ ಆಗ್ರಹ

ಪುತ್ತೂರು: ಬಿಜೆಪಿ ಮುಖಂಡ ರಾಜೇಶ್‍ ಬನ್ನೂರು ಕಳೆದ ಹಲವಾರು ವರ್ಷಗಳಿಂದ ವಾಸವಾಗಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿದ್ದ ಮನೆಯನ್ನು ರಾತ್ರೋ ರಾತ್ರಿ ಕೆಡವಿದ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದು, ಇದೊಂದು ದರೋಡೆ ಕೃತ್ಯ. ಈ ಹಿನ್ನಲೆಯಲ್ಲಿ ಅಪರಾಧಿಗಳನ್ನು ಪತ್ತೆಹಚ್ಚಿ ದರೋಡೆ ಪ್ರಕರಣ ದಾಖಲಿಸಬೇಕು ಎಂದು ಮಾಜಿ ಸಂಸದ ನಳಿನ್‍ ಕುಮಾರ್ ಕಟೀಲ್‍ ಪೊಲೀಸ್ ಇಲಾಖೆಗೆ ಆಗ್ರಹಿಸಿದರು. ಮಂಗಳವಾರ ರಾತ್ರೋ ರಾತ್ರಿ ಅಂದರೆ ಸುಮಾರು ಮಧ್ಯರಾತ್ರಿ 2 ಗಂಟೆ ಹೊತ್ತಿಗೆ ದೇವಸ್ಥಾನದ ವಠಾರದಲ್ಲಿ ರಾಜೇಶ್‍ ಬನ್ನೂರು ಅವರ ಮನೆಯನ್ನು

ಬಿಜೆಪಿ ಮುಖಂಡ ರಾಜೇಶ್‍ ಬನ್ನೂರು ಮನೆ ಧ್ವಂಸ ಪ್ರಕರಣ | ಇದೊಂದು ದರೋಡೆ ಪ್ರಕರಣವಾಗಿದ್ದು, ಅಪರಾಧಿಗಳನ್ನು ಪತ್ತೆಹಚ್ಚಿ ದರೋಡೆ ಪ್ರಕರಣ ದಾಖಲಿಸಿ | ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್‍ ಆಗ್ರಹ Read More »

ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ  ಸಾಮೂಹಿಕ ಧರಣಿ

ಮಂಗಳೂರು : ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯು ನಂತೂರು ಜಂಕ್ಷನ್‌ನಲ್ಲಿ ಬುಧವಾರ ಪ್ರತಿಭಟನೆ ನಡೆಸಿತು. ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಪರಿಹಾರ, ಭ್ರಮರಕೊಟ್ಲು ಟೋಲ್ ಗೇಟ್ ತೆರವು, ಹೊಸ ಟೋಲ್ ಗೇಟ್ ನಿರ್ಮಿಸುವ ಮುನ್ನ ಟೋಲ್ ಗೇಟ್ ನಿಯಮಾವಳಿ ಪಾಲನೆ, ನಂತೂರು ಮೇಲ್ಸೇತುವೆ ಹಾಗೂ ಕೂಳೂರು ಸೇತುವೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಮಿತಿ ಮುಂದಿಟ್ಟಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮುನೀರ್ ಕಾಟಿಪಳ್ಳ

ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ  ಸಾಮೂಹಿಕ ಧರಣಿ Read More »

error: Content is protected !!
Scroll to Top