ಆಟೋ ರಿಕ್ಷಾ – ಹೋಂಡಾ ಆಕ್ಟಿವಾ ನಡುವೆ ಅಪಘಾತ | ಆಕ್ಟಿವಾ ಸವಾರರಿಗೆ ಗಾಯ

ಪುತ್ತೂರು : ನರಿಮೊಗರು ಶಾಲಾ ಬಳಿ ಆಟೋರಿಕ್ಷಾ ಮತ್ತು ಹೋಂಡಾ ಆಕ್ಟಿವ ನಡುವೆ ಅಪಘಾತ ಸಂಭವಿಸಿದ್ದು ಸವಾರರಿಗೆ ಗಾಯವಾಗಿದೆ. ಅಪಘಾತ ನಡೆದ ತಕ್ಷಣ ಅಲ್ಲಿಗೆ ಆಗಮಿಸಿದ ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ ಕೂಡಲೇ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆಯನ್ನು ಮಾಡಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು ಮಾರ್ಗದ ಕೆಲಸ ಮಾಡುವ ಗುತ್ತಿಗೆ ದಾರರ ಕೆಲವು ತಪ್ಪುಗಳಿಂದ ಅಪಘಾತ ಹೆಚ್ಚುತ್ತಿದೆ. ಕಾರಣ ನರಿಮೊಗರು ಶಾಲಾ ಬಳಿ ಇರುವ 80 ವರ್ಷ ಹಳೆಯ ಕಟ್ಟಡ ಮಾರ್ಗಕ್ಕೆ ಹೊಂದಿಕೊಂಡು ಇರುವುದರಿಂದ […]

ಆಟೋ ರಿಕ್ಷಾ – ಹೋಂಡಾ ಆಕ್ಟಿವಾ ನಡುವೆ ಅಪಘಾತ | ಆಕ್ಟಿವಾ ಸವಾರರಿಗೆ ಗಾಯ Read More »

ಅಂಬಿಕಾ ವಿದ್ಯಾಲಯದಲ್ಲಿ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

ಪುತ್ತೂರು: ಅಂಬಿಕಾ ವಿದ್ಯಾಲಯ ಸಿಬಿಎಸ್‌ ಇ ಸಂಸ್ಥೆಯಲ್ಲಿ 2024-25ನೇ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ’ಸೌಪ್ರಸ್ತಾನಿಕಂ’ ನಡೆಯಿತು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ, ದೇಶಕ್ಕಾಗಿ ತಮ್ಮನ್ನು ತಾವು ಮುಡಿಪಾಗಿಡುವುದೇ ಜೀವನದ ಉದ್ದೇಶವಾಗಿರಬೇಕು. ನಾವು ದೊಡ್ಡ ದೊಡ್ಡ ಹುದ್ದೆ ಅಲಂಕರಿಸಿದರೂ ದೇಶಕ್ಕೆ ಸಂಕಷ್ಟ ಬಂದಾಗ ಓಗೊಟ್ಟು ದೇಶಸೇವಕರಾಗಿ ಸಹಕರಿಸುವ ಸತ್ಪ್ರಜೆಗಳಾಗಿ ಮೂಡಿಬರಬೇಕು ಎಂದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ನಟ್ಟೋಜ ಮಾತನಾಡಿ, ತ್ರಿಭುಜದ ಮೂರು ಬಾಹುಗಳು ಹೇಗೆ

ಅಂಬಿಕಾ ವಿದ್ಯಾಲಯದಲ್ಲಿ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ Read More »

ಕರ್ನಾಟಕ ‘SSLC ಪೂರ್ವ ಸಿದ್ಧತಾ ಪರೀಕ್ಷೆ’ಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಬೆಂಗಳೂರು :2024-25ನೇ ಸಾಲಿನ ರಾಜ್ಯಮಟ್ಟದ ಎಸ್ ಎಸ್ ಎಲ್ ಸಿ ಪೂರ್ವಸಿದ್ಧತಾ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2024-25ನೇ ಸಾಲಿನ ರಾಜ್ಯಮಟ್ಟದ ಎಸ್ ಎಸ್ ಎಲ್ ಸಿ ಪೂರ್ವಸಿದ್ಧತಾ ಪರೀಕ್ಷೆಯನ್ನು ದಿನಾಂಕ 25-02-2025ರಿಂದ 04-03-2025ರವರೆಗೆ ನಡೆಸಲು ತೀರ್ಮಾನಿಸಲಾಗಿರುತ್ತದೆ. ಸದರಿ ಪೂರ್ವ ಸಿದ್ಧತಾ ಪರೀಕ್ಷೆಯ ಕೆಲವು ವಿಷಯಗಳ ಸಮಯವನ್ನು ಮಾರ್ಪಾಡು ಮಾಡಿ, ಪರಿಷ್ಕೃತ ವೇಳಾಪಟ್ಟಿಯನ್ನು ಮಂಡಳಿಯ ಜಾಲತಾಣದಲ್ಲಿ ಪ್ರಕಟಿಸಲಾಗಿದೆ

ಕರ್ನಾಟಕ ‘SSLC ಪೂರ್ವ ಸಿದ್ಧತಾ ಪರೀಕ್ಷೆ’ಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ Read More »

ಪ್ರತಿಷ್ಠಿತ ಉಪ್ಪಿನಂಗಡಿ ಸಿ.ಎ. ಬ್ಯಾಂಕ್‍ ಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ | ಅಧ್ಯಕ್ಷರಾಗಿ ಸುನಿಲ್‍ ಕುಮಾರ್ ದಡ್ಡು, ಉಪಾಧ್ಯಕ್ಷರಾಗಿ ದಯಾನಂದ ಸರೋಳಿ ಆಯ್ಕೆ

ಉಪ್ಪಿನಂಗಡಿ: ಪ್ರತಿಷ್ಟಿತ ಉಪ್ಪಿನಂಗಡಿ ಸಿ.ಎ.ಬ್ಯಾಂಕ್ ನ ಅಧ್ಯಕ್ಷರಾಗಿ ಸುನಿಲ್ ಕುಮಾರ್ ದಡ್ಡು ಹಾಗೂ ಉಪಾಧ್ಯಕ್ಷರಾಗಿ ದಯಾನಂದ ಸರೋಳಿ ಆಯ್ಕೆಯಾಗಿದ್ದಾರೆ. ಫೆ.2 ರಂದು ಬ್ಯಾಂಕ್‍ ನ ಆಡಳಿತ ಮಂಡಳಿಗೆ ಚುನಾವಣೆ ನಡೆದಿದ್ದು, ಬಿಜೆಪಿ ಬೆಂಬಲಿತ ಸಹಕಾರಿ ಭಾರತಿಯ 11 ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಓರ್ವ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಎಲ್ಲಾ 12 ಸ್ಥಾನಗಳು ಸಹಕಾರಿ ಭಾರತಿ ತೆಕ್ಕೆಗೆ ಬಿದ್ದಿತ್ತು. ಫೆ.11 ರಂದು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಸುನಿಲ್ ಕುಮಾರ್ ದಡ್ಡು, ಉಪಾಧ್ಯಕ್ಷರಾಗಿ ದಯಾನಂದ

ಪ್ರತಿಷ್ಠಿತ ಉಪ್ಪಿನಂಗಡಿ ಸಿ.ಎ. ಬ್ಯಾಂಕ್‍ ಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ | ಅಧ್ಯಕ್ಷರಾಗಿ ಸುನಿಲ್‍ ಕುಮಾರ್ ದಡ್ಡು, ಉಪಾಧ್ಯಕ್ಷರಾಗಿ ದಯಾನಂದ ಸರೋಳಿ ಆಯ್ಕೆ Read More »

ಪಾದಚಾರಿಗಳಿಗೆ ಕಾರು ಡಿಕ್ಕಿ | ಇಬ್ಬರ  ದುರ್ಮರಣ | ಕಾರನ್ನು ವಶಕ್ಕೆ ಪಡೆದ ಸುಳ್ಯ ಪೋಲಿಸರು

ಸುಳ್ಯ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಕಾರು ಹರಿದುಕೊಂಡು ಹೋಗಿರುವ ಘಟನೆ ಮಾಣಿ-ಮೈಸೂರು ಹೆದ್ದಾರಿಯ ಸುಳ್ಯ ತಾಲೂಕಿನ ಕನಕಮಜಲುವಿನಲ್ಲಿ ನಡೆದಿದೆ.  ಕಾರು ಅಪಘಾತದಲ್ಲಿ ಪಾದಚಾರಿಗಳಿಬ್ಬರು  ಸಾವನ್ನಪ್ಪಿದ್ದಾರೆ. ಸಾವಿಗೆ ಕಾರಣವಾದ ಕಾರನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪುತ್ತೂರು ಬೆಟ್ಟಂಪಾಡಿಯ ರಾಮಯ್ಯ ರೈ ಮತ್ತು ಕನಕಮಜಲಿನ ಜನಾರ್ದನ ರೈ ಅವರು ಫೆ. 8ರಂದು ರಾತ್ರಿ ನಡೆದ ಕಾರು ಡಿಕ್ಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಫೆ. 9ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಅಪಘಾತ ಎಸಗಿದ ಕಾರು ಚಾಲಕ ಘಟನ ಸ್ಥಳದಲ್ಲಿ

ಪಾದಚಾರಿಗಳಿಗೆ ಕಾರು ಡಿಕ್ಕಿ | ಇಬ್ಬರ  ದುರ್ಮರಣ | ಕಾರನ್ನು ವಶಕ್ಕೆ ಪಡೆದ ಸುಳ್ಯ ಪೋಲಿಸರು Read More »

ತಾಲೂಕು ಪಂಚಾಯತ್ ನಲ್ಲಿ ವಿಶ್ವ ಸುರಕ್ಷತಾ ಅಂತರ್ಜಾಲ ದಿನ | ಇಂಟರ್ನೆಟ್ ಬಳಕೆದಾರರು ಎಚ್ಚರದಿಂದಿರಿ : ನವೀನ್ ಕುಮಾರ್ ಭಂಡಾರಿ

ಪುತ್ತೂರು: ಜಗತ್ತು ಇಂಟರ್ನೆಟ್ ಎಂಬ ಜಾಲದಲ್ಲಿ ಮುಳುಗಿದ್ದು ಪ್ರಸ್ತುತ ವಿವಿಧ ರೀತಿಯಲ್ಲಿ ವಂಚಿಸುವ ಜಾಲವೇ ಸಮಾಜವನ್ನು ಕಾಡುತ್ತಿದೆ. ಆದ್ದರಿಂದ ಇಂಟರ್ನೆಟ್ ಬಳಕೆದಾರರು ಎಚ್ಚರಿಕೆಯಿಂದ ಇರಬೇಕು ಎಂದು ಪುತ್ತೂರು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅಭಿಪ್ರಾಯಪಟ್ಟರು. ಅವರು ಇಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು‌ ಮಾಹಿತಿ ತಂತ್ರಜ್ಞಾನ ಇಲಾಖೆ, ತಾಲೂಕು ಪಂಚಾಯತ್ ಪುತ್ತೂರು ವತಿಯಿಂದ ವಿಶ್ವ ಸುರಕ್ಷತಾ ಅಂತರ್ಜಾಲ ದಿನದಲ್ಲಿ ಮಾತನಾಡಿದರು. ಮೊಬೈಲ್ ನಲ್ಲಿ ಹಲವು ಆನ್ ಲೈನ್ ವ್ಯವಹಾರವನ್ನು ಮಾಡುತ್ತಿದ್ದೇವೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡು ಹಲವು ವಂಚಕರು

ತಾಲೂಕು ಪಂಚಾಯತ್ ನಲ್ಲಿ ವಿಶ್ವ ಸುರಕ್ಷತಾ ಅಂತರ್ಜಾಲ ದಿನ | ಇಂಟರ್ನೆಟ್ ಬಳಕೆದಾರರು ಎಚ್ಚರದಿಂದಿರಿ : ನವೀನ್ ಕುಮಾರ್ ಭಂಡಾರಿ Read More »

ಯಕ್ಷಭಾರತಿ ದಶಮಾನೋತ್ಸವ: ಭಾರತ ಮಾತಾಪೂಜನ, “ದಶಪರ್ವ ಸ್ಮರಣ ಸಂಚಿಕೆ” ಬಿಡುಗಡೆ

ಬೆಳ್ತಂಗಡಿ : ಯಕ್ಷ ಭಾರತಿ ರಿ.ಬೆಳ್ತಂಗಡಿ ಇದರ ದಶವರ್ಷದ ಪ್ರಯುಕ್ತ ಉಜಿರೆ  ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಭಾರತ ಮಾತಾ ಪೂಜನ  ಕಾರ್ಯಕ್ರಮವು ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯರ ಅಧ್ಯಕ್ಷತೆಯಲ್ಲಿ ಜರುಗಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟ ದಶಪರ್ವ ಸಂಚಿಕೆ ಬಿಡುಗಡೆಗೊಳಿಸಿ ಯಕ್ಷಗಾನದೊಂದಿಗೆ ಸಂಸ್ಕಾರ ಶಿಕ್ಸಣ ಮತ್ತು ಅರೋಗ್ಯ ಸೇವಾಕಾರ್ಯಗಳನ್ನು ಯಕ್ಷ ಭಾರತಿ ನಡೆಸಿರುವುದು ಅಪೂರ್ವವಾಗಿದೆ. ಉಳಿದ ಸಂಘ ಸಂಸ್ಥೆಗಳಿಗೆ ಮಾದರಿಯಾಗಿರುವ ಯಕ್ಷಭಾರತಿ ಸಂಸ್ಥೆಗೆ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ

ಯಕ್ಷಭಾರತಿ ದಶಮಾನೋತ್ಸವ: ಭಾರತ ಮಾತಾಪೂಜನ, “ದಶಪರ್ವ ಸ್ಮರಣ ಸಂಚಿಕೆ” ಬಿಡುಗಡೆ Read More »

ವಿಟ್ಲ (ಫೆ.13 ರಿಂದ ಫೆ.17) :ಶ್ರೀ ಮಹಾವೀರ ಸ್ವಾಮಿ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠೆ| ಶೌರ್ಯ ವಿಪತ್ತು ನಿರ್ವಹಣಾ  ಘಟಕ  ತಂಡ ಸದಸ್ಯರಿಂದ ಶ್ರಮದಾನ

ವಿಟ್ಲ : ಭ/ಶ್ರೀ1008 ಚಂದ್ರನಾಥ ಸ್ವಾಮಿ ಬಸದಿ ತೀರ್ಥಂಕರರ ಮತ್ತು ಭ/1008 ಶ್ರೀ ಮಹಾವೀರ ಸ್ವಾಮಿ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠೆ ಹಾಗೂ ಶ್ರೀ ಯಕ್ಷಿ ಪದ್ಮಾವತಿ ಅಮ್ಮನವರ ಮತ್ತು ಶ್ರೀ ಯಕ್ಷಿ ಜ್ವಾಲಾಮಾಲಿನಿ ಅಮ್ಮನವರ ಪ್ರತಿಷ್ಠಾ ಮಹೋತ್ಸವವು ಫೆ.13ರಿಂದ ಫೆ.17ರವರೆಗೆ ಮೆಗಿನಪೇಟೆ ಜೈನ ಬಸದಿಯಲ್ಲಿ ನಡೆಯಲಿದೆ. ಇದಕ್ಕೆ  ಪೂರಕವಾಗಿ ಭಗವಾನ್ ಚಂದ್ರನಾಥಸ್ವಾಮಿ ನೂತನ ಬಿಂಬವನ್ನು ಆರ್ಕುಳ ದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ, ಇದರ ಕೆದಿಲ ಹಾಗೂ ವಿಟ್ಲ

ವಿಟ್ಲ (ಫೆ.13 ರಿಂದ ಫೆ.17) :ಶ್ರೀ ಮಹಾವೀರ ಸ್ವಾಮಿ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠೆ| ಶೌರ್ಯ ವಿಪತ್ತು ನಿರ್ವಹಣಾ  ಘಟಕ  ತಂಡ ಸದಸ್ಯರಿಂದ ಶ್ರಮದಾನ Read More »

ಪುತ್ತೂರು (ಫೆ.11) ನೆಹರು ನಗರ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವದ ವಾರ್ಷಿಕ ಜಾತ್ರೋತ್ಸವ

ಪುತ್ತೂರು: ನೆಹರು ನಗರ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವದ ವಾರ್ಷಿಕ ಜಾತ್ರೋತ್ಸವ ಫೆ. 11ರಂದು ನಡೆಯಿತು. ಬೆಳಗ್ಗೆ ಕಾರ್ಜಾಲು ಗುತ್ತಿನಲ್ಲಿ ಸ್ಥಳ ಶುದ್ಧಿ ಹೋಮ ಮತ್ತು ಕಲಶ ಪ್ರತಿಷ್ಠೆ ನಡೆಯಿತು. ಬೆಳಗ್ಗೆ11-30ಕ್ಕೆ ಕಲ್ಲೇಗ ದೈವಸ್ಥಾನದಲ್ಲಿ ಗಣಹೋಮ ಹಾಗೂ ಶ್ರೀ ದೈವಗಳ ತಂಬಿಲ ಮತ್ತು ನಾಗತಂಬಿಲ, ಮಧ್ಯಾಹ್ನ 12.30 ರಿಂದ ಕಲ್ಲೇಗ ದೈವಸ್ಥಾನದಲ್ಲಿ ಅನ್ನಸಂತರ್ಪಣಾ ಕಾರ್ಯಕ್ರಮ ನೆರವೇರಿತು. ರಾತ್ರಿ ಗಂಟೆ 7.30ಕ್ಕೆ ಸರಿಯಾಗಿ ಶ್ರೀದೈವಗಳ ಮೂಲನೆಲೆ ಕಾರ್ಜಾಲು ಗುತ್ತಿನಿಂದ ಭಂಡಾರ ಹೊರಡಲಿದ್ದು. ರಾತ್ರಿ ಗಂಟೆ 9:30ಕ್ಕೆ ಗೊಂದೊಳು

ಪುತ್ತೂರು (ಫೆ.11) ನೆಹರು ನಗರ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವದ ವಾರ್ಷಿಕ ಜಾತ್ರೋತ್ಸವ Read More »

ಆನಡ್ಕ – ಪುತ್ತೂರು  ಬಸ್‍ ಮತ್ತೆ ಸ್ಥಗಿತ | ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ತಯರಾದ ಪ್ರಯಾಣಿಕರು

ಪುತ್ತೂರು :  ಆನಡ್ಕದಿಂದ ಪುತ್ತೂರಿಗೆ ಹಲವು ಸಮಯಗಳಿಂದ ಬಾರದೆ ಇದ್ದ ಬಸ್ಸಿನ ಸಂಚಾರವನ್ನು ಗ್ರಾಮಸ್ಥರ ಪ್ರತಿಭಟನೆಯ ಎಚ್ಚರಿಕೆಗೆ ಮಣಿದು ಆರಂಭಗೊಳಿಸಿದರಾದರೂ ಇದೀಗ ಮತ್ತೆ ಬಸ್ ಸಂಚಾರ ಸ್ಥಗಿತಗೊಂಡಿರುವ ಬಗೆ ಪ್ರಯಾಣಿಕರು ದಿಗ್ಭ್ರಮೆ ವ್ಯಕ್ತ ಪಡಿಸಿದ್ದು, ಪ್ರತಿಭಟನೆಗೆ ಸಿದ್ದತೆ ನಡೆಯುತ್ತಿದೆ ಎಂದು ಕೇಳಿಬಂದಿದೆ.   ಆನಡ್ಕ – ಪುತ್ತೂರು  ಭಾಗಕ್ಕೆ ಬೆಳಗ್ಗೆ 8:00 ಗಂಟೆಗೆ ಹೊರಡುವ ಬಸ್‍ ಇಲ್ಲ ಎಂಬ ಮಾಹಿತಿ ಒಂದು ವಾರದ ಹಿಂದೆ ಕೇಳಿದ್ದೇವೆ. ಇದರಿಂದ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಿಗೆ ತೆರಳಲು ಸಮಸ್ಯೆಗಳಾಗಿವೆ. ಈ ಕಾರಣ ಬಸ್‍

ಆನಡ್ಕ – ಪುತ್ತೂರು  ಬಸ್‍ ಮತ್ತೆ ಸ್ಥಗಿತ | ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ತಯರಾದ ಪ್ರಯಾಣಿಕರು Read More »

error: Content is protected !!
Scroll to Top