ಮಹಾಕುಂಭಮೇಳಕ್ಕೆ ಹೋಗಿದ್ದ ಬೀದರ್‌ನ 6 ಮಂದಿ ಭೀಕರ ಅಪಘಾತಕ್ಕೆ ಬಲಿ

ಲಾರಿಗೆ ಹಿಂದಿನಿಂದ ಕ್ರೂಸರ್‌ ವಾಹನ ಡಿಕ್ಕಿ ಹೊಡೆದು ಅಪಘಾತ ಲಖನೌ: ಮಹಾಕುಂಭಮೇಳಕ್ಕೆ ಹೋಗಿದ್ದ ಬೀದರ್‌ನ ಒಂದೇ ಕುಟುಂಬದ 6 ಜನ ಭೀಕರ ಅಪಘತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಕಾಶಿ ಬಳಿ ನಡೆದಿದೆ. ಲಾರಿ ಮತ್ತು ಕ್ರೂಸರ್‌ ನಡುವೆ ಇಂದು ಬೆಳಗ್ಗೆ ಮಿರಾಜಾಪುರ ಜಿಲ್ಲೆಯ ರೂಪಾಪುರ ಬಳಿ ಅಪಘಾತ ಸಂಭವಿಸಿದೆ. 6 ಮಂದಿ ಸಾವನ್ನಪ್ಪಿದ್ದು ಉಳಿದವರ ಸ್ಥಿತಿ ಚಿಂತಾಜನಕವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.ಬೀದರ್ ನಗರದ ಲಾಡಗೇರಿ ಬಡಾವಣೆಯ ನಿವಾಸಿಗಳಾದ ಸುನೀತಾ(35) ಸಂತೋಷ್‌ […]

ಮಹಾಕುಂಭಮೇಳಕ್ಕೆ ಹೋಗಿದ್ದ ಬೀದರ್‌ನ 6 ಮಂದಿ ಭೀಕರ ಅಪಘಾತಕ್ಕೆ ಬಲಿ Read More »

ಹಿಂದೂ ಧಾರ್ಮಿಕ ಶಿಕ್ಷಣ ಪ್ರತೀ ಹಿಂದುವಿನ ಮನೆಯಿಂದ ಆಗಬೇಕು : ಯು.ಪೂವಪ್ಪ | ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದಡಿ 24ನೇ ಹಿಂದೂ ಧಾರ್ಮಿಕ ಶಿಕ್ಷಣ ಕೇಂದ್ರ ಉದ್ಘಾಟನೆ

ಪುತ್ತೂರು: ಕರ್ನಾಟಕ ದೇವಾಲಯ ಸಂವರ್ಧನಾ ಸಮಿತಿಯ ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದಡಿ 24ನೇ ಹಿಂದೂ ಧಾರ್ಮಿಕ ಶಿಕ್ಷಣ ಕೇಂದ್ರ ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠದ ಸಭಾಭವನದಲ್ಲಿ ಗುರುವಾರ ಸಂಜೆ ಉದ್ಘಾಟನೆಗೊಂಡಿತು. ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠದ ಆಡಳಿತಾಧಿಕಾರಿ ಯು.ಪೂವಪ್ಪ ದೀಪ ಬೆಳಗಿಸಿ ಧಾರ್ಮಿಕ ಶಿಕ್ಷಣ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಧಾರ್ಮಿಕ ಶಿಕ್ಷಣ ಪ್ರತೀ ಹಿಂದೂವಿನ ಮನೆಯಿಂದ ಆಗಬೇಕು. ದುರಾದೃಷ್ಟವಶಾತ್ ಸರಿಯಾದ ಬೋಧನೆಯ ಕೊರತೆಯಿಂದ ಧಾರ್ಮಿಕ ಶಿಕ್ಷಣ ಪಡೆಯುವಲ್ಲಿ ವಿಫಲವಾಗಿದ್ದೇವೆ. ಮಕ್ಕಳಲ್ಲಿ ಅತಿಯಾದ ಮೊಬೈಲ್‍ಚಟವೂ ಇದಕ್ಕೆ ಒಂದು ಕಾರಣವಾಗಿದೆ.

ಹಿಂದೂ ಧಾರ್ಮಿಕ ಶಿಕ್ಷಣ ಪ್ರತೀ ಹಿಂದುವಿನ ಮನೆಯಿಂದ ಆಗಬೇಕು : ಯು.ಪೂವಪ್ಪ | ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದಡಿ 24ನೇ ಹಿಂದೂ ಧಾರ್ಮಿಕ ಶಿಕ್ಷಣ ಕೇಂದ್ರ ಉದ್ಘಾಟನೆ Read More »

ಕ್ವಾರ್ಟ್‌ರ್ಸ್‌ಲ್ಲಿ ಜಿಎಸ್‌ಟಿ ಅಧಿಕಾರಿ ಕುಟುಂಬ ಆತ್ಮಹತ್ಯೆ

ಮೂರು ಶವಗಳು ಕೊಳೆತ ವಾಸನೆ ಬಂದ ಬಳಿಕ ಹೊರ ಜಗತ್ತಿಗೆ ತಿಳಿಯಿತು ಕೊಚ್ಚಿ : ಕೇರಳದ ಕೊಚ್ಚಿಯಲ್ಲಿರುವ ಕೇಂದ್ರ ಜಿಎಸ್‌ಟಿ ಅಧಿಕಾರಿಗಳ ವಸತಿ ಸಮುಚ್ಚಯದಲ್ಲಿ ಮೂರು ಕೊಳೆತ ಶವಗಳು ಪತ್ತೆಯಾಗಿವೆ. ಕೊಚ್ಚಿಯ ಕಕ್ಕನಾಡ್​ನಲ್ಲಿರುವ ಸಮುಚ್ಚಯದಲ್ಲಿ ಶವ ಸಿಕ್ಕಿದ್ದು, ಮೃತರನ್ನು ಹಿರಿಯ ಜಿಎಸ್‌ಟಿ ಅಧಿಕಾರಿ ಮನೀಷ್‌ ವಿಜಯ್‌, ಅವರ ಸಹೋದರಿ ಶಾಲಿನಿ ವಿಜಯ್‌ ಮತ್ತು ತಾಯಿ ಶಕುಂತಲಾ ಅಗರ್‌ವಾಲ್‌ ಎಂದು ಗುರುತಿಸಾಗಿದೆ. ಇವರು ಮೂಲತಃ ಜಾರ್ಖಂಡ್‌ನವರು. ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಭಾವಿಸಲಾಗಿದೆ. ಶವಗಳ ತೀವ್ರವಾಗಿ ಕೊಳೆತ ಸ್ಥಿತಿಯಲ್ಲಿರುವುದುರಿಂದ

ಕ್ವಾರ್ಟ್‌ರ್ಸ್‌ಲ್ಲಿ ಜಿಎಸ್‌ಟಿ ಅಧಿಕಾರಿ ಕುಟುಂಬ ಆತ್ಮಹತ್ಯೆ Read More »

ನೆಕ್ಕಿಲ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಮೈಸೂರು ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಭೇಟಿ | ಬಯೋ ಗ್ಯಾಸ್ ತಯಾರಿಕೆಯ ವಿವಿಧ ಹಂತ, ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿ ಬಗ್ಗೆ ಮಾಹಿತಿ

ಪುತ್ತೂರು: ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೈಸೂರು ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಪುತ್ತೂರು ನಗರಸಭೆಯ ನೆಕ್ಕಿಲ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಾರ್ಯಾಚರಿಸುತ್ತಿರುವ ಬಯೋ ಘಟಕ ಮತ್ತು ಹಸಿ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿ ಘಟಕಗಳ  ಅಧ್ಯಯನಕ್ಕೆ ಫೆ.20 ರಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ನಗರಸಭಾ ಪೌರಾಯುಕ್ತರಾದ  ಮಧು ಎಸ್ ಮನೋಹರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಶಬರಿನಾಥ್ ರೈ, ಘಟಕದ ಯೋಜನಾ ನಿರ್ದೇಶಕ ಡಾ. ರಾಜೇಶ್ ಬೆಜ್ಜಂಗಳ ಮತ್ತು

ನೆಕ್ಕಿಲ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಮೈಸೂರು ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಭೇಟಿ | ಬಯೋ ಗ್ಯಾಸ್ ತಯಾರಿಕೆಯ ವಿವಿಧ ಹಂತ, ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿ ಬಗ್ಗೆ ಮಾಹಿತಿ Read More »

ನಳ ಚರಿತ್ರೆ ತಾಳಮದ್ದಳೆ

ಬಲ್ಯ ಗ್ರಾಮದ ಶ್ರೀ ಕ್ಷೇತ್ರ ಬೀರುಕ್ಕು ಶ್ರೀ ನಾಗದೇವರು, ರಾಜನ್ ದೈವ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ಉತ್ಸವದ ಪ್ರಯುಕ್ತ ಶ್ರೀ ವಿನಾಯಕ ಯಕ್ಷಗಾನ ಮಂಡಳಿ ರಾಮನಗರ ಮತ್ತು ಅತಿಥಿ ಕಲಾವಿದರಿಂದ ನಳಚರಿತ್ರೆ ತಾಳಮದ್ದಳೆ ಜರಗಿತು. ಭಾಗವತರಾಗಿ ಡಿ. ಕುಸುಮಾಕರ ಹಳೆ ನೇರೇಂಕಿ ಹಿಮ್ಮೇಳದಲ್ಲಿ ಮುರಳೀಧರ ಕಲ್ಲೂರಾಯ ಕುಂಜೂರು ಪಂಜ,ಹರಿ ದೇವಾಡಿಗ ನಗ್ರಿ, ಅರ್ಥಧಾರಿಗಳಾಗಿ ಗುಡ್ಡಪ್ಪ ಬಲ್ಯ(ಋತುಪರ್ಣ) ಅಮ್ಮಿಗೌಡ ನಾಲ್ಗುತ್ತು(ಬಾಹುಕ )ದಿವಾಕರ ಆಚಾರ್ಯ ಗೇರುಕಟ್ಟೆ(ದಮಯಂತಿ )ಜಯರಾಮ ನಾಲ್ಗುತ್ತು(ಭೀಮಕ ಮತ್ತು ಶನಿ )ಗಂಗಾಧರ ಶೆಟ್ಟಿ ಹೊಸಮನೆ(ನಳ )ತಿಮ್ಮಪ್ಪ ಪುಳಿತ್ತಡಿ(ಸುದೇವ)

ನಳ ಚರಿತ್ರೆ ತಾಳಮದ್ದಳೆ Read More »

ಮಲ್ಪೆ : ಮೀನುಗಾರಿಕೆ ದೋಣಿ ಬೆಂಕಿಗಾಹುತಿ

ಉಡುಪಿ: ಮಲ್ಪೆಯ ಬಾಪುತೋಟ ಬಳಿಯ ಮೀನುಗಾರಿಕಾ ಬಂದರಿನ ಸೇತುವೆ ಪಕ್ಕದ ದಕ್ಕೆಯಲ್ಲಿ ನಿಲ್ಲಿಸಲಾಗಿದ್ದ ಮೀನುಗಾರಿಕಾ ಬೋಟಿಗೆ ತಡರಾತ್ರಿ ಬೆಂಕಿ ಹತ್ತಿಕೊಂಡು ಸಂಪೂರ್ಣ ಸುಟ್ಟು ಹೋಗಿದೆ. ಮಲ್ಪೆಯ ಜನಾರ್ದನ ಟಿ. ಕಾಂಚನ್ ಎಂಬವರಿಗೆ ಸೇರಿದ ‘ರವಿಪ್ರಕಾಶ್’ ಎಂಬ ಸಣ್ಣಟ್ರಾಲ್ (ಫಿಶಿಂಗ್) ಬೋಟಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯ ದೋಣಿಯವರು ಗಮನಿಸಿ ಸಕಾಲದಲ್ಲಿ ಮಾಹಿತಿ ನೀಡಿದ್ದರಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಆ ಬೋಟಿನ ಮೀನುಗಾರರು ಮೀನುಗಾರಿಕೆ ಮುಗಿಸಿಬಂದು ಬೋಟನ್ನು ಬಾಪುತೋಟದ ಬಳಿಯ ದಕ್ಕೆಯಲ್ಲಿ ನಿಲ್ಲಿಸಿದ್ದರು. ಸ್ಥಳೀಯರು ಮತ್ತು ಅಗ್ನಿಶಾಮಕ ದಳದವರು ಸಕಾಲದಲ್ಲಿ

ಮಲ್ಪೆ : ಮೀನುಗಾರಿಕೆ ದೋಣಿ ಬೆಂಕಿಗಾಹುತಿ Read More »

ಎಸ್‌ಎಸ್‌ಎಲ್‌ಸಿ ತೇರ್ಗಡೆಗೆ ಶೇ.35 ಅಂಕ ಕಡ್ಡಾಯ

ಗರಿಷ್ಠ ಮೂರು ವಿಷಯಗಳಲ್ಲಿ ಶೇ.10ರಷ್ಟು ಕೃಪಾಂಕ ಸಿಗಲಿದೆ ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ತಂದಿದ್ದ ಶೇ.10ರಷ್ಟು ಗ್ರೇಸ್ ಮಾರ್ಕ್ಸ್ ನೀಡುವ ಪದ್ಧತಿ ಈ ವರ್ಷದಿಂದ ರದ್ದಾಗಿದ್ದು, 2024ಕ್ಕೂ ಹಿಂದೆ ಇದ್ದಂತೆ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಕನಿಷ್ಠ ಅಂಕವನ್ನು ಶೇ.35ಕ್ಕೆ ನಿಗದಿ ಮಾಡಲಾಗಿದೆ.ಗ್ರೇಸ್ ಮಾರ್ಕ್ಸ್ ನೀಡುವ ಪದ್ಧತಿ ಶಿಕ್ಷಣದ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೆ, ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನಸ್ಥಿತಿಗೆ ಅಡ್ಡಿಯಾಗಿದೆ ಎಂಬ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ವಿವಿಧ ವಲಯಗಳಿಂದ ತೀವ್ರ ಟೀಕೆಗಳು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರೇಸ್ ಅಂಕಗಳನ್ನು

ಎಸ್‌ಎಸ್‌ಎಲ್‌ಸಿ ತೇರ್ಗಡೆಗೆ ಶೇ.35 ಅಂಕ ಕಡ್ಡಾಯ Read More »

ಹಣಕ್ಕಾಗಿ ದೈವನರ್ತಕಗೆ ಪೀಡನೆ, ಬೆದರಿಕೆ | ವಿಟ್ಲದ ದಲಿತ ಮುಖಂಡ ಸೇಸಪ್ಪ ಬೆದ್ರಕಾಡು ವಿರುದ್ಧ ಪ್ರಕರಣ ದಾಖಲಿಸುವಂತೆ ವಿಟ್ಲ ಪೊಲೀಸರಿಗೆ ಬಂಟ್ವಾಳ ನ್ಯಾಯಾಲಯ ಆದೇಶ

ವಿಟ್ಲ: ಹಣಕ್ಕಾಗಿ ದೈವನರ್ತಕಗೆ ಪೀಡನೆ, ಬೆದರಿಕೆ ನೀಡಿದ ಆರೋಪದಲ್ಲಿ ವಿಟ್ಲದ ದಲಿತ ಮುಖಂಡ ಸೇಸಪ್ಪ ಬೆದ್ರಕಾಡು ವಿರುದ್ಧ ಪ್ರಕರಣ ದಾಖಲಿಸುವಂತೆ ವಿಟ್ಲ ಪೊಲೀಸರಿಗೆ ಬಂಟ್ವಾಳ ನ್ಯಾಯಾಲಯ ಆದೇಶ ನೀಡಿದೆ. ವಿಟ್ಲದ ದಲಿತ ಸೇವಾ ಸಮಿತಿಯ ಮುಖಂಡ ಸೇಸಪ್ಪ ಬೆದ್ರಕಾಡು ವಿರುದ್ಧ ಕಸಬಾ ಗ್ರಾಮದ ಸುರುಳಿಮೂಲೆ ನಿವಾಸಿ ದೈವನರ್ತಕ ಆನಂದ ಎಸ್. ಎಂಬವರು ಬಂಟ್ವಾಳ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು‌. ನಾಟಿ ವೈದ್ಯ, ಜ್ಯೋತಿಷ್ಯದ ಜೊತೆಗೆ ದೈವನರ್ತಕರಾಗಿರುವ ಆನಂದ ಅವರು ವಿಟ್ಲದ ನೆಕ್ಕರೆ ಕಾಡು ನಿವಾಸಿ ಕಮಲಾ ಎಂಬವರ

ಹಣಕ್ಕಾಗಿ ದೈವನರ್ತಕಗೆ ಪೀಡನೆ, ಬೆದರಿಕೆ | ವಿಟ್ಲದ ದಲಿತ ಮುಖಂಡ ಸೇಸಪ್ಪ ಬೆದ್ರಕಾಡು ವಿರುದ್ಧ ಪ್ರಕರಣ ದಾಖಲಿಸುವಂತೆ ವಿಟ್ಲ ಪೊಲೀಸರಿಗೆ ಬಂಟ್ವಾಳ ನ್ಯಾಯಾಲಯ ಆದೇಶ Read More »

ಇಂದು ಜಮೆಯಾಗಲಿದೆ ಗೃಹಲಕ್ಷ್ಮಿ ಹಣ

ಸತತ ಟೀಕೆಗಳ ಬಳಿಕ ಎಚ್ಚೆತ್ತ ಸರಕಾರ ಬೆಂಗಳೂರು: ಮಹಿಳೆಯರು ಕಳೆದ ಮೂರು ತಿಂಗಳಿಂದ ಕಾಯುತ್ತಿದ್ದ ಗೃಹಲಕ್ಷ್ಮಿ ಹಣ ಇಂದು ಬಿಡುಗಡೆಯಾಗಲಿದೆ. ಸಾಲು ಸಾಲು ಟೀಕೆ, ಆಕ್ರೋಶದ ವ್ಯಕ್ತವಾದ ನಂತರ ಎಚ್ಚೆತ್ತ ಸರಕಾರ ಮೂರು ತಿಂಗಳಿಂದ ಬಂದ್ ಆಗಿದ್ದ ಗೃಹಲಕ್ಷ್ಮಿ ಹಣ ಜಮೆ ಪ್ರಕ್ರಿಯೆಗೆ ಶುಕ್ರವಾರದಿಂದ ಚಾಲನೆ ನೀಡಲಿದೆ. ಶುಕ್ರವಾರ ನವೆಂಬರ್ ತಿಂಗಳ ದುಡ್ಡು ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ. ಡಿಸೆಂಬರ್ ತಿಂಗಳ ದುಡ್ಡನ್ನು ಮುಂದಿನ ಸೋಮವಾರ ಫಲಾನುಭವಿಗಳ ಖಾತೆಗೆ ಹಾಕಲಾಗುತ್ತದೆ. ಗೃಹಲಕ್ಷ್ಮಿ ಹಣ ಸ್ಥಗಿತವಾದ ಬಗ್ಗೆ ಸತತವಾಗಿ

ಇಂದು ಜಮೆಯಾಗಲಿದೆ ಗೃಹಲಕ್ಷ್ಮಿ ಹಣ Read More »

ಹಳ್ಳಿಯ ಬೇರುಗಳು ಸಾಹಿತ್ಯವನ್ನು ಸೃಷ್ಟಿಸುತ್ತವೆ : ಡಾ. ನರೇಂದ್ರ ರೈ ದೇರ್ಲ | ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಬರವಣಿಗೆ ಮಾಧ್ಯಮ ಶಿಬಿರ

ಸುಳ್ಯ: ಸುಖ ಯಾವುದನ್ನು ಸೃಷ್ಟಿಸುವುದಿಲ್ಲ ಸತತ ಪರಿಶ್ರಮದಿಂದ ಸಾಹಿತ್ಯ ಸೃಷ್ಟಿಯಾಗುತ್ತದೆ. ಆ ನಿಟ್ಟಿನಲ್ಲಿ ಹಳ್ಳಿಯ ಬೇರುಗಳು ಸಾಹಿತ್ಯವನ್ನು ಸೃಷ್ಟಿಸುತ್ತವೆ ಎಂದು ನಿವೃತ್ತ ಪ್ರಾಧ್ಯಾಪಕರಾದ ಡಾ. ನರೇಂದ್ರ ರೈ‌ ದೇರ್ಲ ಅಭಿಪ್ರಾಯಪಟ್ಟರು. ಅವರು ಸುಳ್ಯದ  ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಸಂಘ, ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಹಮ್ಮಿಕೊಂಡ “ಬರವಣಿಗೆ ಮಾಧ್ಯಮ ಶಿಬಿರ”ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಬದುಕನ್ನು ಕಟ್ಟಿಕೊಡುವ ಮಾಧ್ಯಮ ಬರವಣಿಗೆ ಶಾಶ್ವತವಾಗಿಸುತ್ತದೆ.  ನಿಮ್ಮ ಒಂದೇ ಒಂದು ಬರಹ ಕೂಡ ನಿಮ್ಮನ್ನು ಶಾಶ್ವತವಾಗಿಸಬಹುದು. ಆ

ಹಳ್ಳಿಯ ಬೇರುಗಳು ಸಾಹಿತ್ಯವನ್ನು ಸೃಷ್ಟಿಸುತ್ತವೆ : ಡಾ. ನರೇಂದ್ರ ರೈ ದೇರ್ಲ | ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಬರವಣಿಗೆ ಮಾಧ್ಯಮ ಶಿಬಿರ Read More »

error: Content is protected !!
Scroll to Top