ಗ್ರಾಹಕರ ಸೋಗಿನಲ್ಲಿ ಅಪರಿಚಿತ ವ್ಯಕ್ತಿಯಿಂದ ಚಿನ್ನ ಕಳವು

ಹಿರಿಯಡ್ಕ: ಗ್ರಾಹಕರ ಸೋಗಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಜ್ಯುವೆಲ್ಲರಿ ಅಂಗಡಿಯಲ್ಲಿನ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಹಿರಿಯಡ್ಕದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಂಜಾರು ಗ್ರಾಮದ ರತ್ನಾಕರ ಎಂಬವರ ಹಿರಿಯಡ್ಕ ಪೇಟೆಯಲ್ಲಿರುವ ಶ್ರೀಲಕ್ಷ್ಮೀ ಅನಂತ ಪದ್ಮನಾಭ ಜ್ಯುವೆಲ್ಲರಿ ಶಾಪ್‌ಗೆ ನವರತ್ನ ಖರೀದಿ ಮಾಡಲು ಅಪರಿಚಿತ ವ್ಯಕ್ತಿಯೋರ್ವ ಬಂದಿದ್ದು, ನವರತ್ನವೊಂದನ್ನು ಖರೀದಿಸಿ ಆ ನಂತರ ಅಂಗಡಿ ಮಾಲಕರಲ್ಲಿ ಬೇರೆ ಚಿನ್ನ ತೋರಿಸಲು ಹೇಳಿ ಅವರ ಗಮನಕ್ಕೆ ಬಾರದಂತೆ ಡ್ರಾವರ್‌ಗೆ ಕೈಹಾಕಿ ರಿಪೇರಿಗಾಗಿ ಗ್ರಾಹಕರು ನೀಡಿದ್ದ […]

ಗ್ರಾಹಕರ ಸೋಗಿನಲ್ಲಿ ಅಪರಿಚಿತ ವ್ಯಕ್ತಿಯಿಂದ ಚಿನ್ನ ಕಳವು Read More »

ಪಾದಚಾರಿಗಳ ಮೇಲೆ ಹರಿದ ಖಾಸಗಿ ಬಸ್‍ : ಇಬ್ಬರು ಮೃತ್ಯು, ಓರ್ವ ಗಂಭೀರ

ಹಾಸನ: ಧರ್ಮಸ್ಥಳಕ್ಕೆ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ವೇಗವಾಗಿ ಬಂದ ಖಾಸಗಿ ಬಸ್ ಹರಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಓರ್ವ ಗಂಭೀರ ಗಾಯಗೊಂಡ ಘಟನೆ ಹಾಸನ ತಾಲೂಕಿನ ಕೆಂಚಟ್ಟಹಳ್ಳಿ ಬಳಿ ನಡೆದಿದೆ. ಸುರೇಶ್ (60), ಕುಮಾರ್ (55) ಮೃತಪಟ್ಟವರೆಂದು ಗುರುತಿಸಲಾಗಿದೆ. ಮೃತರು ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಆನಗೋಳು ಗ್ರಾಮದವರು. ಘಟನೆಯಲ್ಲಿ ಗಂಭೀರ ಗಾಯಗೊಂಡ ದಿನೇಶ್‌ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

ಪಾದಚಾರಿಗಳ ಮೇಲೆ ಹರಿದ ಖಾಸಗಿ ಬಸ್‍ : ಇಬ್ಬರು ಮೃತ್ಯು, ಓರ್ವ ಗಂಭೀರ Read More »

ಬಾಣಂತಿ ಹೊಟ್ಟೆಯಲ್ಲಿ ಹತ್ತಿ ಉಂಡೆ ಬಿಟ್ಟು ಹೊಲಿಗೆ ಹಾಕಿದ ವೈದ್ಯರು

ಜಿಮ್ಸ್‌ ಆಸ್ಪತ್ರೆ ವೈದ್ಯರ ಯಡವಟ್ಟು ಕಲಬುರಗಿ: ಇಲ್ಲಿನ ಜಿಮ್ಸ್‌ ಆಸ್ಪತ್ರೆಯ ವೈದ್ಯರು ಮಹಿಳೆಯೊಬ್ಬರಿಗೆ ಸಿಸೇರಿಯನ್‌ ಮಾಡುವ ವೇಳೆ ಹೊಟ್ಟೆಯಲ್ಲೇ ಬಟ್ಟೆ ಉಂಡೆ ಹಾಗೂ ಹತ್ತಿ ಬಿಟ್ಟು ಹೊಲಿಗೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಕಳೆದ ಫೆ.5ರಂದು ಭಾಗ್ಯಶ್ರೀ ಎಂಬ ಮಹಿಳೆಗೆ ಸಿಸೇರಿಯನ್‌ ಆಗಿತ್ತು. ಈ ವೇಳೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಹೊಟೆಯಲ್ಲೇ ಬಟ್ಟೆ ಉಂಡೆ ಹಾಗೂ ಹತ್ತಿ ಬಿಟ್ಟು ಹೊಲಿಗೆ ಹಾಕಿದ್ದಾರೆ. ತಕ್ಷಣಕ್ಕೆ ಇದು ಮಹಿಳೆಯ ಅರಿವಿಗೆ ಬಂದಿಲ್ಲ. ಒಂದು ವಾರದ ಬಳಿಕ ಹೊಟ್ಟೆನೋವು ಕಾಣಿಸಿಕೊಂಡಿದೆ. ಈ

ಬಾಣಂತಿ ಹೊಟ್ಟೆಯಲ್ಲಿ ಹತ್ತಿ ಉಂಡೆ ಬಿಟ್ಟು ಹೊಲಿಗೆ ಹಾಕಿದ ವೈದ್ಯರು Read More »

ಟೋಲ್‌ಗೇಟ್‌ಗೆ ಸಡ್ಡು : ಪ್ರತ್ಯೇಕ ರಸ್ತೆ ನಿರ್ಮಿಸಲು ಮುಂದಾದ ಗಡಿನಾಡ ಜನ

ವಿನಾಯಿತಿ ನೀಡದ ತಲಪಾಡಿ ಟೋಲ್‌ಗೇಟ್‌ಗೆ ಗಡಿ ಭಾಗದವರಿಂದ ತಿರುಗೇಟು ಮಂಗಳೂರು: ಕೇರಳದ ಮಂಜೇಶ್ವರ ಪಂಚಾಯಿತಿ ವ್ಯಾಪ್ತಿಯ ಗಡಿನಾಡ ಕನ್ನಡಿಗರು ತಮಗೆ ವಿನಾಯಿತಿ ನೀಡದ ತಲಪಾಡಿ ಹೆದ್ದಾರಿ ಟೋಲ್‌ಗೇಟ್‌ಗೆ ಸಡ್ಡುಹೊಡೆದು ಪಕ್ಕದಲ್ಲೇ ಬೇರೆಯೇ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತಲಪಾಡಿ ಟೋಲ್‌ಗೇಟ್‌ನಲ್ಲಿ ವಿನಾಯಿತಿ ನೀಡುವಂತೆ ಹಲವು ಸಮಯಗಳಿಂದ ಒತ್ತಾಯಿಸುದ್ದರೂ ಟೋಲ್ ಸಂಸ್ಥೆ ಸ್ಪಂದಿಸಿಲ್ಲ. ಹೀಗಾಗಿ ತಲಪಾಡಿ ಟೋಲ್‌ಗೇಟ್‌ನಲ್ಲಿ ಗಡಿ ಪ್ರದೇಶದ ಜನರಿಗೆ ಆಗುತ್ತಿರುವ ಅನ್ಯಾಯ ಪ್ರತಿಭಟಿಸಿ ಹೆದ್ದಾರಿಯ ಹತ್ತಿರದಲ್ಲೇ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತಲಪಾಡಿ ಟೋಲ್‌ಗೇಟ್‌ ಸ್ಥಾಪಿಸಿದ ಆರಂಭದಲ್ಲಿ

ಟೋಲ್‌ಗೇಟ್‌ಗೆ ಸಡ್ಡು : ಪ್ರತ್ಯೇಕ ರಸ್ತೆ ನಿರ್ಮಿಸಲು ಮುಂದಾದ ಗಡಿನಾಡ ಜನ Read More »

ಧರ್ಮಸ್ಥಳಕ್ಕೆ ಬರುತ್ತಿದ್ದ ಪಾದಯಾತ್ರಿಗಳಿಗೆ ಬಸ್‌ ಡಿಕ್ಕಿ : ಇಬ್ಬರು ಸಾವು

ಹಾಸನ: ಧರ್ಮಸ್ಥಳಕ್ಕೆ ತೆರಳುತ್ತಿದ್ದ ಪಾದಯಾತ್ರಿಗಳಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡ ಘಟನೆ ಹಾಸನ ತಾಲೂಕಿನ ಕೆಂಚಟ್ಟಹಳ್ಳಿ ಬಳಿ ನಡೆದಿದೆ. ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ನಾಡಿನೆಲ್ಲೆಡೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಆಗಮಿಸುವುದು ವಾಡಿಕೆ.ಸುರೇಶ್ (60) ಮತ್ತು ಕುಮಾರ್ (55) ಬಸ್‌ ಡಿಕ್ಕಿ ಹೊಡೆದು ಮೃತಪಟ್ಟಿರುವ ದುರ್ದೈವಿಗಳು. ಮೃತರು ಮಂಡ್ಯ ಜಿಲ್ಲೆ, ಕೆ.ಆರ್ ಪೇಟೆ ತಾಲೂಕಿನ ಆನಗೋಳು ಗ್ರಾಮದವರು. ಗಂಭೀರ ಗಾಯಗೊಂಡ ದಿನೇಶ್‌ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಇಂದು ಮುಂಜಾನೆ ಧರ್ಮಸ್ಥಳಕ್ಕೆ ರಸ್ತೆ ಬದಿ

ಧರ್ಮಸ್ಥಳಕ್ಕೆ ಬರುತ್ತಿದ್ದ ಪಾದಯಾತ್ರಿಗಳಿಗೆ ಬಸ್‌ ಡಿಕ್ಕಿ : ಇಬ್ಬರು ಸಾವು Read More »

ಶಿಥಿಲಾವಸ್ಥೆಯಲ್ಲಿರುವ ಪಾಣಾಜೆಯ ಆಶಕ್ತ ಕುಟುಂಬದ ಮನೆ | ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನಿಂದ ದುರಸ್ತಿ ಕಾರ್ಯ ವಹಿಸುವ ಸಂಕಲ್ಪ

ಪುತ್ತೂರು: ಪಾಣಾಜೆ ಗ್ರಾಮದ ದೇವಸ್ಯ ಉದಯ ಕುಮಾರ್ ಮಣಿಯಾಣಿ ಅವರ ಮನೆಯ ಮೇಲ್ಚಾವಣಿಯು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ವಾಸಕ್ಕೆ ಯೋಗ್ಯವಲ್ಲದ ಕಾರಣ ಈ ಮನೆಯ ದುರಸ್ತಿ ಕಾರ್ಯವನ್ನು ಅಟಲ್ ಜೀ ಜನ್ಮ ಶತಾಬ್ದಿಯ ಪ್ರಯುಕ್ತ ಪುತ್ತಿಲಪರಿವಾರ ಸೇವಾ ಟ್ರಸ್ಟ್ ವಹಿಸಿಕೊಳ್ಳುವ ಸಂಕಲ್ಪ ಮಾಡಲಾಯಿತು. ಉದಯ ಕುಮಾರ್ ಮಣಿಯಾಣಿ ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ದುರಸ್ತಿಯ ಬಗ್ಗೆ ಸಂಕಲ್ಪ ಮಾಡಲಾಯಿತು. ಪುತ್ತಿಲಪರಿವಾರ ಸೇವಾ ಟ್ರಸ್ಟ್ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಮಂಡಲ ಪ್ರದಾನ ಕಾರ್ಯದರ್ಶಿ ಉಮೇಶ್

ಶಿಥಿಲಾವಸ್ಥೆಯಲ್ಲಿರುವ ಪಾಣಾಜೆಯ ಆಶಕ್ತ ಕುಟುಂಬದ ಮನೆ | ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನಿಂದ ದುರಸ್ತಿ ಕಾರ್ಯ ವಹಿಸುವ ಸಂಕಲ್ಪ Read More »

ಕೊಬ್ಬರಿ ಎಣ್ಣೆ ಬಲು ದುಬಾರಿ : ಲೀಟರ್‌ಗೆ 300 ರೂ.

ಒಂದೇ ವರ್ಷದಲ್ಲಿ ದುಪ್ಪಟ್ಟಾದ ಬೆಲೆಯಿಂದ ಜನ ಕಂಗಾಲು ಕಾರ್ಕಳ : ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಜೀವನ ದುಸ್ತರವಾಗಿದೆ. ಈಗ ಅಡುಗೆ ಎಣ್ಣೆ ಬೆಲೆಯೂ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಸೂರ್ಯಕಾಂತಿ, ನೆಲಕಡಲೆ, ಸಾಸಿವೆ, ತಾಳೆಎಣ್ಣೆ ಸೇರಿದಂತೆ ಎಲ್ಲ ರೀತಿಯ ಖಾದ್ಯತೈಲದ ಬೆಲೆ ಏರಿಕೆಯಾಗಿದೆ. ಕೊಬ್ಬರಿ ಎಣ್ಣೆ ಬೆಲೆ ಅಂಕೆಗೆ ಸಿಗದಂತೆ ಏರುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ತೆಂಗಿನಎಣ್ಣೆ ಬೆಲೆ ಲೀಟರಿಗೆ 300 ರೂ. ಸಮೀಪಿಸಿದೆ. ತೆಂಗು ಯಥೇಚ್ಚವಾಗಿ ಬೆಳೆಯುವ ಕರಾವಳಿಯಲ್ಲೂ ಲೀಟರಿಗೆ 250-260 ಆಗಿದ್ದು, ಜನರು ಕಂಗಾಲಾಗಿದ್ದಾರೆ.

ಕೊಬ್ಬರಿ ಎಣ್ಣೆ ಬಲು ದುಬಾರಿ : ಲೀಟರ್‌ಗೆ 300 ರೂ. Read More »

ಎಸ್‌ಡಿಪಿಐ ಪುತ್ತೂರು ವತಿಯಿಂದ ಬ್ರಹ್ಮರಕೊಟ್ಲು ಟೋಲ್‌ಗೇಟ್ ವಿರುದ್ಧ ಸಹಿ ಸಂಗ್ರಹ

ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ವತಿಯಿಂದ ಬ್ರಹ್ಮರಕೊಟ್ಲು ಟೋಲ್‌ಗೇಟ್‌ ತೆರವಿಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಜಿಲ್ಲಾದ್ಯಂತ ಸಾರ್ವಜನಿಕ ಸಹಿ ಸಂಗ್ರಹ ಅಭಿಯಾನ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಾಂಧಿಕಟ್ಟೆ ಬಳಿ, ಕಬಕ ಜಂಕ್ಷನ್, ವಿಟ್ಲ ಜಂಕ್ಷನ್, ಕುಂಬ್ರ ಜಂಕ್ಷನ್ ಹಾಗೂ ಉಪ್ಪಿನಂಗಡಿ ಪೇಟೆಯಲ್ಲಿ ನಡೆಯಿತು. ವಿವಿಧ ಪಕ್ಷಗಳ ಮುಖಂಡರು, ಧಾರ್ಮಿಕ ಸಾಮಾಜಿಕ ಮುಖಂಡರು, ವಿದ್ಯಾರ್ಥಿಗಳು, ಲಾರಿ ಚಾಲಕರು, ರಿಕ್ಷಾ ಚಾಲಕರು ಮತ್ತು ಸಾರ್ವಜನಿಕರು ಅತ್ಯುತ್ಸಾಹದಿಂದ ಪಾಲ್ಗೊಂಡು ಎಸ್ ಡಿ ಪಿ

ಎಸ್‌ಡಿಪಿಐ ಪುತ್ತೂರು ವತಿಯಿಂದ ಬ್ರಹ್ಮರಕೊಟ್ಲು ಟೋಲ್‌ಗೇಟ್ ವಿರುದ್ಧ ಸಹಿ ಸಂಗ್ರಹ Read More »

ವಾಹನಗಳ ಎಚ್‍ ಎಸ್‍ ಆರ್‍ ಪಿ ನಂಬರ್ ಪ್ಲೇಟ್ ಅವಧಿ ವಿಸ್ತರಣೆ | ಮಾ.31 ರ ವರೆಗೆ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಗೆಜೆಟ್‌ ಅಧಿಸೂಚನೆ

ಬೆಂಗಳೂರು : ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಗಡುವನ್ನು ಮತ್ತೆ ವಿಸ್ತರಣೆ ಮಾಡಲಾಗಿದ್ದು, ಮಾ.31 ರ ವರೆಗೆ ಅವಧಿ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ. ಏ.1, 2019ಕ್ಕಿಂತ ಮುಂಚಿತವಾಗಿ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ ಎಚ್‌ ಎಸ್‌ ಆರ್‌ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಆಗಸ್ಟ್ 17, 2023ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಇನ್ನೂ ಬಹಳಷ್ಟು ವಾಹನ ಸವಾರರು ಎಚ್‌ ಎಸ್‌ಆರ್‌ ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಲ್ಲ. ಮತ್ತೆ ಗಡುವು ವಿಸ್ತರಿಸುವಂತೆ ಮನವಿ ಮಾಡಿದ

ವಾಹನಗಳ ಎಚ್‍ ಎಸ್‍ ಆರ್‍ ಪಿ ನಂಬರ್ ಪ್ಲೇಟ್ ಅವಧಿ ವಿಸ್ತರಣೆ | ಮಾ.31 ರ ವರೆಗೆ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಗೆಜೆಟ್‌ ಅಧಿಸೂಚನೆ Read More »

ಫೆ.25 : ಪಾಲನಾ ಕಾರ್ಯ ಹಾಗೂ ದ್ವಿಪಥ ಮಾರ್ಗ ಬದಲಾವಣೆ ಕಾಮಗಾರಿ ನಿಮಿತ್ತ ವಿದ್ಯುತ್‍ ನಿಲುಗಡೆ | ಎಲ್ಲೆಲ್ಲಿ ? ಇಲ್ಲಿದೆ ಡಿಟೈಲ್ಸ್

ಪುತ್ತೂರು: 110/33/11 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ಪಾಲನಾ ಕಾರ್ಯ ಹಾಗೂ ಕಾವು-ಸುಳ್ಯ ಮಾರ್ಗವನ್ನು ಕೌಡಿಚ್ಚಾರಿನಿಂದ ಕಾವು ವೃತ್ತದ ವರೆಗೆ ದ್ವಿಪಥ ಮಾರ್ಗವಾಗಿ ಬದಲಾಯಿಸುವ ಕಾಮಗಾರಿ ಇರುವುದರಿಂದ ಫೆ.25 ಮಂಗಳವಾರ ಬೆಳಗ್ಗೆ 9.30 ರಿಂದ ಸಂಜೆ 5 ಗಂಟೆಗೆ ತನಕ ವಿದ್ಯುತ್‍ ನಿಲುಗಡೆ ಮಾಡಲಾಗುವುದು. 110/33/11 ಕೆವಿ ಮಾಡಾವು ವಿದ್ಯುತ್‍ ಉಪಕೇಂದ್ರದಿಂದ ಹೊರಡುವ 33/11 ಕೆವಿ ಬೆಳ್ಳಾರೆ ಹಾಗೂ 33/11 ಕೆವಿ ಕಾವು ಮತ್ತು ಸುಳ್ಯ ವಿದ್ಯುತ್‍ ಮಾರ್ಗದಲ್ಲಿ ವಿದ್ಯುತ್‍ ನಿಲುಗಡೆ ಮಾಡಲಾಗುವುದು. ಆದ್ದರಿಂದ 110/33/11 ಕೆವಿ ಮಾಡಾವು

ಫೆ.25 : ಪಾಲನಾ ಕಾರ್ಯ ಹಾಗೂ ದ್ವಿಪಥ ಮಾರ್ಗ ಬದಲಾವಣೆ ಕಾಮಗಾರಿ ನಿಮಿತ್ತ ವಿದ್ಯುತ್‍ ನಿಲುಗಡೆ | ಎಲ್ಲೆಲ್ಲಿ ? ಇಲ್ಲಿದೆ ಡಿಟೈಲ್ಸ್ Read More »

error: Content is protected !!
Scroll to Top