ಮಚ್ಚಿಮಲೆ ಬಲ್ನಾಡು ರಸ್ತೆಯಲ್ಲಿ ಆಗುತ್ತಿರುವ ಕುಸಿತ | ಸರಿಪಡಿಸುವ ಕುರಿತು ಕಿಶೋರ್ ಕುಮಾರ್ ಪುತ್ತೂರು ಭರವಸೆ

ಪುತ್ತೂರು: ತಾಲೂಕಿನ ಮಚ್ಚಿಮಲೆ ಬಲ್ನಾಡು ರಸ್ತೆಯಲ್ಲಿ ಹಿಂದಿನ ಮಳೆಗಾಲದಲ್ಲಿ ಗುಡ್ಡ ಕುಸಿತದಿಂದ ಅನಾಹುತದಿಂದಾದ ರಸ್ತೆ ಹಾನಿಯಾದ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿ ಯಾವ  ರೀತಿಯಾಗಿ ರಸ್ತೆ ಸರಿಪಡಿಸಿ ಪರಿಹಾರ ನೀಡಬಹುದು ಎಂಬ ಬಗ್ಗೆ ಸ್ಥಳೀಯರ ಮನವಿಯ ಮೇರೆಗೆ  ಪರಿಶೀಲನೆ ನಡೆಸಿ ಮಚ್ಚಿಮಲೆ ನಿವಾಸಿಗಳ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಇರುವ ಶಿಥಲವಾದ ಬ್ರಿಡ್ಜ್ ಹಾಗೂ ತೋಡಿನ ಬದಿಯಲ್ಲಿ ಕಾಲುದಾರಿ ಸವಕಳಿ ಉಂಟಾಗಿರುವುದನ್ನು ವೀಕ್ಷಣೆ […]

ಮಚ್ಚಿಮಲೆ ಬಲ್ನಾಡು ರಸ್ತೆಯಲ್ಲಿ ಆಗುತ್ತಿರುವ ಕುಸಿತ | ಸರಿಪಡಿಸುವ ಕುರಿತು ಕಿಶೋರ್ ಕುಮಾರ್ ಪುತ್ತೂರು ಭರವಸೆ Read More »

ಮಾಣಿ-ಸಂಪಾಜೆ ಹೈವೇ ಚತುಷ್ಪಥಕ್ಕೆ ಡಿಪಿಆರ್‌ ತಯಾರಿಸಲು ಸರ್ಕಾರದ ಅನುಮೋದನೆ | ಸಂಸದ ಕ್ಯಾ. ಬ್ರಿಜೇಶ್‌ ಚೌಟರ ಸತತ ಪ್ರಯತ್ನಕ್ಕೆ ದೊರೆತ ಫಲ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ-275ರಲ್ಲಿ ಮಾಣಿಯಿಂದ ಸಂಪಾಜೆವರೆಗಿನ ರಸ್ತೆಯನ್ನು ಚತುಷ್ಪಥವಾಗಿ ವಿಸ್ತರಿಸುವುದಕ್ಕೆ ಸಂಬಂಧಿಸಿ ವಿಸ್ತೃತ ಯೋಜನಾ ವರದಿ(ಡಿಪಿಆರ್‌) ತಯಾರಿಸುವುದಕ್ಕೆ ಇದೀಗ ರಾಜ್ಯ ಸರ್ಕಾರದಿಂದ ಅನುಮತಿ ದೊರೆತಿರುವುದಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ತಿಳಿಸಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಕಳೆದ ವಾರ ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಣಿ-ಸಂಪಾಜೆ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸಲು ಡಿಪಿಆರ್‌ ತಯಾರಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕ್ಯಾ. ಚೌಟ ಅವರು ಖುದ್ದು ಮನವಿ ಮಾಡಿದ್ದರು. ಈ ಮನವಿಗೆ

ಮಾಣಿ-ಸಂಪಾಜೆ ಹೈವೇ ಚತುಷ್ಪಥಕ್ಕೆ ಡಿಪಿಆರ್‌ ತಯಾರಿಸಲು ಸರ್ಕಾರದ ಅನುಮೋದನೆ | ಸಂಸದ ಕ್ಯಾ. ಬ್ರಿಜೇಶ್‌ ಚೌಟರ ಸತತ ಪ್ರಯತ್ನಕ್ಕೆ ದೊರೆತ ಫಲ Read More »

ಜೈಲಿಗೆ ಗಾಂಜಾ ಎಸೆದ ಯುವಕರು |  ವೀಡಿಯೋ ವೈರಲ್

ಮಂಗಳೂರು : ಮಂಗಳೂರಿನ ಜೈಲಿನೊಳಗೆ ಮಾದಕ ವಸ್ತು ಪೂರೈಕೆಯಾಗೋ ದೃಶ್ಯ ಸೆರೆಯಾದಿದಲ್ಲದೆ, ಮಾಜಿ ಮೇಯರ್ ಕಣ್ಣೆದುರಲ್ಲೇ ಜೈಲಿಗೆ ನಿಷೇಧಿತ ವಸ್ತು  ರವಾಣೆಯಾಗಿದೆ. ದ.ಕ. ಜಿಲ್ಲಾ ಕಾರಾಗೃಹಕ್ಕೆ ಯುವಕರು ಬೈಕ್ ನಲ್ಲಿ ಬಂದು ಗಾಂಜಾ ಎಸೆಯುತ್ತಿರುವ ವೀಡಿಯೋ ಜಾಲತಾಣದಲ್ಲಿ ವೈರಲ್‍ ಆಗಿದೆ. ಗಾಂಜಾ ಎಸೆಯುವ ದೃಶ್ಯ ಕಾರೊಂದರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಂತಹದ್ದೆ ಘಟನೆಗಳು ಹಿಂದಿನ ದಿನಗಳಿಂದ ಸಾಕಷ್ಟು ನಡೆಯುತ್ತಿತ್ತು ಎಂಬ ವಿಷಯ ತಿಳಿಸು ಬಂದಿದೆ. ಗಾಂಜಾ ಎಸೆದು ಓಡಿದ ಯುವಕರಿಗೆ ಜೈಲಿನಲ್ಲಿ ಅಕ್ರಮ ತಡೆಗಟ್ಟಲು ಹಾಗೂ  ಭದ್ರತೆ ಹೆಚ್ಚಿಸಲು

ಜೈಲಿಗೆ ಗಾಂಜಾ ಎಸೆದ ಯುವಕರು |  ವೀಡಿಯೋ ವೈರಲ್ Read More »

ಸಹಾಯಕ ಪ್ರಾಧ್ಯಾಪಕಿ ರಾಜೇಶ್ವರಿ ಎಂ. ಅವರಿಗೆ ಡಾಕ್ಟರೇಟ್ ಪದವಿ

ಪುತ್ತೂರು: ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಸಿಎ ವಿಭಾಗದ ಸಹಾಯಕ ಪ್ರಾಧ್ಯಾಪಕಿ ರಾಜೇಶ್ವರಿ ಎಂ. ಅವರಿಗೆ ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ. ಪಯನೀಯರಿಂಗ್ ಫೇಶಿಯಲ್ ಇಮೋಶನ್ ಅನಾಲಿಟಿಕ್ಸ್; ಏನ್ ಇನೋವೇಟಿವ್ ಫ್ಯೂಷನ್ ಆಫ್ ಡೀಪ್ ಲರ್ನಿಂಗ್ ಎಂಡ್ ವೈಟ್ ನಾರ್ಮಲೈಸ್ಡ್ ಗ್ರೇಡಿಯೆಂಟ್ ಬೂಸ್ಟಿಂಗ್ ಟೆಕ್ನಿಕ್ ಎನ್ನುವ ವಿಷಯದ ಬಗ್ಗೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊಫೆಸರ್ ಡಾ.ಸುರೇಶ.ಡಿ ಹಾಗೂ ಎ.ಜೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ವಿಭಾಗದ

ಸಹಾಯಕ ಪ್ರಾಧ್ಯಾಪಕಿ ರಾಜೇಶ್ವರಿ ಎಂ. ಅವರಿಗೆ ಡಾಕ್ಟರೇಟ್ ಪದವಿ Read More »

ಮನ್ನಡ್ಕಪಾದೆ ಗುಡ್ಡಕ್ಕೆ ತಗುಲಿದ ಬೆಂಕಿ

ಕಕ್ಕಿಂಜೆ : ಮನ್ನಡ್ಕಪಾದೆ ಗುಡ್ಡಕ್ಕೆ ಬೆಂಕಿ ಬಿದ್ದ ಘಟನೆ ಇಂದು ಕಕ್ಕಿಂಜೆಯಲ್ಲಿ ನಡೆದಿದೆ. ಸುಮಾರು 2 ಎಕರೆ ಪ್ರದೇಶದಲ್ಲಿ ಬೆಂಕಿ  ಆವರಿಸಿದೆ ಎನ್ನಲಾಗಿದೆ. ಯಾವುದೇ ರೀತಿ ಹೆಚ್ಚಿನ ಹಾನಿಯಾಗಿಲ್ಲವೆಂದು ತಿಳಿದುಬಂದಿದೆ.  

ಮನ್ನಡ್ಕಪಾದೆ ಗುಡ್ಡಕ್ಕೆ ತಗುಲಿದ ಬೆಂಕಿ Read More »

ವೈದ್ಯರ ಎಡವಟ್ಟಿನಿಂದ ಹೆರಿಗೆ ಶಸ್ತ್ರ ಚಿಕಿತ್ಸೆ ವೇಳೆ ಹೊಟ್ಟೆಯಲ್ಲೇ ಉಳಿದುಕೊಂಡ ಬಟ್ಟೆ | ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ನಗರ ಠಾಣೆಗೆ ದೂರು

ಪುತ್ತೂರು: ವೈದ್ಯರೊಬ್ಬರ ಎಡವಟ್ಟಿನಿಂದ ಹೆರಿಗೆಯಾದ ಬಳಿಕ ನಡೆಸಿದ ಶಸ್ತ್ರ ಚಿಕಿತ್ಸೆಯಲ್ಲಿ ಬಟ್ಟೆ ಮಹಿಳೆಯ ಹೊಟ್ಟೆಯೊಳಗೆ ಉಳಿದು ಬಾಣಂತಿಯೊಬ್ಬರು ಸುಮಾರು ಮೂರು ತಿಂಗಳು ನರಕಯಾತನೆ ಅನುಭವಿಸಿದ್ದು, ಈ ಕುರಿತು ಪುತ್ತೂರು ನಗರ ಠಾಣೆಗೆ ಪುತ್ತೂರಿನ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಭಾನುವಾರ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ ಎಂದು ಬಾಣಂತಿಯ ಪತಿ ಗಗನ್ ದೀಪ್ ತಿಳಿಸಿದರು.ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹೆರಿಗೆಯ ಸಂದರ್ಭ ನಗರದ ಆಸ್ಪತ್ರೆಯೊಂದರ ವೈದ್ಯರ ನಿರ್ಲಕ್ಷತೆಯಿಂದ ಬಟ್ಟೆ ಹೊಟ್ಟೆಯಲ್ಲೇ ಉಳಿದು, ಅದನ್ನು ತಿಳಿದ ಬಳಿಕವೂ ತೆರವು

ವೈದ್ಯರ ಎಡವಟ್ಟಿನಿಂದ ಹೆರಿಗೆ ಶಸ್ತ್ರ ಚಿಕಿತ್ಸೆ ವೇಳೆ ಹೊಟ್ಟೆಯಲ್ಲೇ ಉಳಿದುಕೊಂಡ ಬಟ್ಟೆ | ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ನಗರ ಠಾಣೆಗೆ ದೂರು Read More »

ಎಂಟು ದಿನಗಳಲ್ಲಿ ಗೃಹಲಕ್ಷ್ಮಿ ಹಣ ಜಮೆ : ಲಕ್ಷ್ಮಿ ಹೆಬ್ಬಾಳ್ಕರ್‌

ಬೆಂಗಳೂರು: ಎಂಟು ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಮಾಡುವುದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಅಪಪ್ರಚಾರ ಮಾಡಲಿ. ನಾವು ಈಗಾಗಲೇ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದೇವೆ. ತಾಲೂಕು ಪಂಚಾಯಿತಿ ಮುಖಾಂತರ ಬಿಡುಗಡೆಯಾಗಬೇಕಿರುವುದರಿಂದ ಸ್ವಲ್ಪ ತಡವಾಗಿದೆ. ಯಾವುದೇ ಕಾರಣಕ್ಕೂ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ನಿಲ್ಲೋದಿಲ್ಲ. 8-10 ದಿನಗಳಲ್ಲಿ ಬರುತ್ತೆ ಅಂತ ಹೇಳಿದ್ದೆ. 2 ದಿನ ಕಳೆದಿದೆ. ಇನ್ನು 8 ದಿನಗಳಲ್ಲಿ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಭರವಸೆ

ಎಂಟು ದಿನಗಳಲ್ಲಿ ಗೃಹಲಕ್ಷ್ಮಿ ಹಣ ಜಮೆ : ಲಕ್ಷ್ಮಿ ಹೆಬ್ಬಾಳ್ಕರ್‌ Read More »

ಜನರ ನಿರೀಕ್ಷೆ, ಅಪೇಕ್ಷೆಗಳೆಲ್ಲ ಮಣ್ಣುಪಾಲು : ಬಹಿರಂಗ ಪತ್ರದಲ್ಲಿ ವಿಜಯೇಂದ್ರ ಟೀಕೆ

ಈ ಬಾರಿ ಎಷ್ಟು ಸಾಲ ಮಾಡಲಿದ್ದೀರಿ ಎಂದು ಜನ ಆತಂಕದಿಂದ ನೋಡುತ್ತಿದ್ದಾರೆ ಎಂದು ಲೇವಡಿ ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 7ರಂದು ದಾಖಲೆಯ 16ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನಾಲ್ಕು ಪುಟಗಳ ಬಹಿರಂಗ ಪತ್ರ ಬರೆದಿದ್ದಾರೆ. ಈ ಬಾರಿಯ ಬಜೆಟ್​ನಲ್ಲಿ ಎಷ್ಟು ಸಾಲ ಮಾಡಲಿದ್ದೀರಿ ಎಂದು ಜನ ಆತಂಕದಿಂದ ನೋಡುತ್ತಿದ್ದಾರೆ. ನೌಕರರಿಗೆ ಸಂಬಳ ಕೊಡಲಾಗದ, ವಿದ್ಯುತ್ ಬಿಲ್ ಭರಿಸಲಾಗದ, ಗುತ್ತಿಗೆದಾರರ ಬಾಕಿ ಪಾವತಿಸಲಾಗದ ದಾರುಣ

ಜನರ ನಿರೀಕ್ಷೆ, ಅಪೇಕ್ಷೆಗಳೆಲ್ಲ ಮಣ್ಣುಪಾಲು : ಬಹಿರಂಗ ಪತ್ರದಲ್ಲಿ ವಿಜಯೇಂದ್ರ ಟೀಕೆ Read More »

ಎಪಿಎಂಸಿ ರಸ್ತೆಯಲ್ಲಿ ಸರಣಿ ಕಳ್ಳತನ

ಪುತ್ತೂರು : ಆದರ್ಶ ಆಸ್ಪತ್ರೆಯ ಬಳಿ ಇರುವ ಮೆಡಿಕಲ್, ಸೆಲೂನ್ ಮತ್ತು ಪಕ್ಕದ ಕಟ್ಟಡದಲ್ಲಿರುವ ಕ್ಲಿನಿಕ್ ಹಾಗೂ ಅಂಗಡಿಗಳಿಗೆ ಕಳ್ಳರು ನುಗ್ಗಿ ನಗದು ಕಳವು ಮಾಡಿರುವುದಾಗಿ ಇಂದು ಬೆಳಗ್ಗೆ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಎಪಿಎಂಸಿ ರಸ್ತೆಯಲ್ಲಿ ಸರಣಿ ಕಳ್ಳತನ Read More »

ಹಾಲು ಸಾಗಾಟದ ವಾಹನ ಪಲ್ಟಿ

ಬೆಳ್ತಂಗಡಿ:  ಮಾಲಾಡಿಯ ಕೊದಬೈಲು ಇಂಡಿಯನ್ ಪೆಟ್ರೋಲ್ ಬಂಕ್ ಸಮೀಪದ ಅರ್ತಿಲ ಎಂಬಲ್ಲಿ ಹಾಲು ಸಾಗಾಟದ ವಾಹನವೊಂದು ಪಲ್ಟಿಯಾದ ಘಟನೆ ನಡೆದಿದೆ. ಮಂಗಳೂರು ಕಡೆಯಿಂದ ಧರ್ಮಸ್ಥಳ ಕಡೆ ಬರುತ್ತಿದ್ದ ನಂದಿನಿ ಹಾಲಿನ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತದಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಈ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಲು ಸಾಗಾಟದ ವಾಹನ ಪಲ್ಟಿ Read More »

error: Content is protected !!
Scroll to Top