ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಶರವೂರು ಜಾತ್ರೋತ್ಸವ

ಶರವೂರು : ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಶರವೂರು ಜಾತ್ರೋತ್ಸವದ ಅಂಗವಾಗಿ ಶ್ರೀ ದೇವಿಯ ವರ್ಷಾವಧಿ ಉತ್ಸವ, ಪರಿವಾರ ದೈವಗಳಿಗೆ ಭಂಡಾರ ಹಿಡಿದು ನೇಮೋತ್ಸವ ಹಾಗೂ ಶ್ರೀ ಭದ್ರಕಾಳಿ ಅಮ್ಮನವರ ಗುಡಿಯಲ್ಲಿ ಪೂಜೆ ಮಾ. 14 ರಿಂದ ಮಾ. 24 ರವರೆಗೆ ನಡೆಯಲಿದೆ. ಮಾ. 14 ರಂದು ಬೆಳಗ್ಗೆ 8 ಗಂಟೆಗೆ ಸ್ವಸ್ತಿ ಪುಣ್ಯಾಹ ವಾಚನ, ನವಕ ಪ್ರಧಾನ, ಗಣಹೋಮ, ಕಲಶಾಭಿಷೇಕ, ಗೊನೆ ಮುಹೂರ್ತ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ 7 ಗಂಟೆಗೆ ಧ್ವಜಾರೋಹಣ, ಮಹಾಪೂಜೆ, ಭೂತಬಲಿ, […]

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಶರವೂರು ಜಾತ್ರೋತ್ಸವ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಚಾಕ್ರಿ ಸೇವಾಧಾರಿ ಉಮೇಶ್ ಗೌಡ ಹೃದಯಾಘಾತದಿಂದ ನಿಧನ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವಕ್ಕೆ ಮುಂಡ್ಯ ಹಾಕುವ ಸಂದರ್ಭ ಗದ್ದೆಯಲ್ಲಿ ಚೆಂಡು ಉರುಳಿಸುವ ಮತ್ತು ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಕಟ್ಟೆಯಿಂದ ಕಟ್ಟೆಗೆ ಶ್ರೀದೇವರ ವಸ್ತ್ರ ಕೊಂಡೊಯ್ಯುವ ಚಾಕ್ರಿ ಸೇವೆ ಮಾಡುತ್ತಿದ್ದ ಬಲ್ನಾಡು ನಿವಾಸಿ ಉಮೇಶ್ ಗೌಡ(47ವ) ರವರು ಮಾ. 14 ರಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು. ಬಲ್ನಾಡು ಕುಕ್ಕಪ್ಪ ಗೌಡರ ಪುತ್ರರಾಗಿರುವ ಉಮೇಶ್‌ ಗೌಡ ಅವರು ದೇವಸ್ಥಾನದ ಗದ್ದೆಯ ಬಳಿ ಬಾಡಿಗೆ ಮನೆಯಲ್ಲಿ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಚಾಕ್ರಿ ಸೇವಾಧಾರಿ ಉಮೇಶ್ ಗೌಡ ಹೃದಯಾಘಾತದಿಂದ ನಿಧನ Read More »

ಸ್ಕೌಟ್ ಮತ್ತು ಬುಲ್ ಬುಲ್ ಅರ್ಹತಾ ಪತ್ರ ವಿತರಣೆ

ಆನೆಗುಂದಿ ಶ್ರೀ ಸರಸ್ವತಿ ಪೀಠ ಸೂರ್ಯ ಚೈತನ್ಯ ಹೈಸ್ಕೂಲ್ ಕುತ್ಯಾರು ಇಲ್ಲಿನ ಸ್ಕೌಟ್ ಮತ್ತು ಬುಲ್ ಬುಲ್ ಘಟಕದ ದ್ವಿತೀಯ ಸೋಪಾನ ಪರೀಕ್ಷೆಯಲ್ಲಿ ಉತ್ತಿರ್ಣರಾದ ವಿದ್ಯಾರ್ಥಿಗಳಿಗೆ ಅರ್ಹತಾ ಪತ್ರಗಳನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ. ಸೂರ್ಯಕುಮಾರ ಹಳೆಯಂಗಡಿ ಇವರ ಅಧ್ಯಕ್ಷತೆಯಲ್ಲಿ ವಿತರಿಸಲಾಯಿತು. ಅರುಣ್ ಪಿ ಆಚಾರ್ಯ ಮುಂಬೈ  ಮುಖ್ಯ ಅತಿಥಿಯಾಗಿ ಶುಭ ಹಾರೈಸಿದರು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಗುರುರಾಜ ಕೆ ಜೆ ಮಂಗಳೂರು, ಜನಾರ್ದನ ಬಜಕೂಡ್ಲು,ಸುಧೀಶ್, ಶೈಕ್ಷಣಿಕ ಸಲಹೆಗಾರ ದಿವಾಕರ ಆಚಾರ್ಯ ಗೇರುಕಟ್ಟೆ, ಮುಖ್ಯ

ಸ್ಕೌಟ್ ಮತ್ತು ಬುಲ್ ಬುಲ್ ಅರ್ಹತಾ ಪತ್ರ ವಿತರಣೆ Read More »

ಕಲ್ಲಡ್ಕ ವಲಯದ  ಮಾಮೇಶ್ವರ  ಒಕ್ಕೂಟದ  ಉಮಾಮಹೇಶ್ವರ ದೇವಸ್ಥಾನದ  ಸಮುದಾಯ ಭವನ ರಚನೆಗೆ  ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ  ಅನುದಾನ ಮಂಜೂರು

ಕಲ್ಲಡ್ಕ  : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವಿಟ್ಲ, ಕಲ್ಲಡ್ಕ ವಲಯದ  ಮಾಮೇಶ್ವರ ಒಕ್ಕೂಟದ ಉಮಾಮಹೇಶ್ವರ ದೇವಸ್ಥಾನದ ಸಮುದಾಯ ಭವನ ರಚನೆಗೆ  ಶ್ರೀ ಕ್ಷೇತ್ರದಿಂದ ಮಂಜೂರಾಗಿರುವ ರೂ.1,50,000/- ಅನುದಾನದ ಮಂಜೂರಾತಿ ಪತ್ರವನ್ನು ನೀಡಲಾಯಿತು. ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ರಮೇಶ್  ದೇವಸ್ಥಾನದ ಆಡಳಿತ ಸಮಿತಿಯವರಿಗೆ  ಕ್ಷೇತ್ರದಿಂದ ಮಂಜೂರಾಗಿರುವ ರೂ.1,50,000/- ಅನುದಾನದ ಮಂಜೂರಾತಿ ಪತ್ರವನ್ನು ದೇವಸ್ಥಾನದ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯದ

ಕಲ್ಲಡ್ಕ ವಲಯದ  ಮಾಮೇಶ್ವರ  ಒಕ್ಕೂಟದ  ಉಮಾಮಹೇಶ್ವರ ದೇವಸ್ಥಾನದ  ಸಮುದಾಯ ಭವನ ರಚನೆಗೆ  ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ  ಅನುದಾನ ಮಂಜೂರು Read More »

ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ಪುತ್ತೂರು: ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಸತ್ಯನಾರಾಯಣ ದೇವರ ಪ್ರತಿಷ್ಠಾಪನೆಯ 24ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಶುಕ್ರವಾರ ನಡೆಯಿತು. ಪೂಜೆ ಅಂಗವಾಗಿ ಬೆಳಗ್ಗೆ 6 ರಿಂದ ಪಂಚಗವ್ಯ ಪುಣ್ಯಾಹ ಪುರಸ್ಸರ ಕಲಶ ಪ್ರತಿಷ್ಠೆ, ಪಂಚಾಮೃತಾಭಿಷೇಕ, ಕಲಶಾಭಿಷೇಕ, 10 ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಮಧ್ಯಾಹ್ನ 1 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆಯಾಗಿ, ಬಳಿಕ ಅನ್ನಸಂತರ್ಪಣೆ ಜರಗಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ Read More »

ಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಷ್ಮೀ ದೇವಿಗೆ ಸೂರ್ಯರಶ್ಮಿಯ ಸ್ಪರ್ಶ, ದೇವಿಗೆ ವಿಶೇಷ ಪೂಜೆ

ಪುತ್ತೂರು: ಪುತ್ತೂರು ರೈಲು ನಿಲ್ದಾಣದ ಬಳಿಯ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶುಕ್ರವಾರ ಮೀನ ಸಂಕ್ರಮಣದಂದು ಮುಂಜಾನೆ ಸೂರ್ಯನ ಕಿರಣಗಳು ಕ್ಷೇತ್ರದ ಮೂರು ಬಾಗಿಲುಗಳನ್ನು ದಾಟಿ ಗರ್ಭಗುಡಿಯಲ್ಲಿ ನೆಲೆಯಾಗಿರುವ ದೇವಿಯ ಬಿಂಬಕ್ಕೆ ಸ್ಪರ್ಶವಾಯಿತು. ಕ್ಷೇತ್ರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮೀನ ಸಂಕ್ರಮಣದ ದಿನ ಗರ್ಭಗುಡಿಯಲ್ಲಿರುವ ಮಹಾಲಕ್ಷ್ಮೀ ದೇವಿಯ ಬಿಂಬಕ್ಕೆ ಮುಂಜಾನೆ ಸೂರ್ಯ ರಶ್ಮಿಯ ಸ್ಪರ್ಶವಾಯಿತು.. ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿ ಎನ್.ಐತ್ತಪ್ಪ ಸಪಲ್ಯರ ನೇತೃತ್ವದಲ್ಲಿ ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ ನೆರವೇರಿತು. ವೈದಿಕರಿಂದ ವೇದ, ಘೋಷ

ಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಷ್ಮೀ ದೇವಿಗೆ ಸೂರ್ಯರಶ್ಮಿಯ ಸ್ಪರ್ಶ, ದೇವಿಗೆ ವಿಶೇಷ ಪೂಜೆ Read More »

ಕುಸಿದು ಬಿದ್ದು 7ನೇ ತರಗತಿ ವಿದ್ಯಾರ್ಥಿನಿ ಮೃತ್ಯು

ಕೊಡಗು : ಏಕಾಏಕಿ ಕುಸಿದುಬಿದ್ದು 7 ನೇ ತರಗತಿ ಬಾಲಕಿ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕ್ಯಾತೆ ಗ್ರಾಮದಲ್ಲಿ ನಡೆದಿದೆ. ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ 7 ನೇ ತರಗತಿ ಓದುತ್ತಿದ್ದ ಪೂರ್ವಿಕಾ ಎಂಬ ಕುಸಿದು ಬಿದ್ದು ಮೃತಪಟ್ಟವಳು. . ಕೂಡಲೇ ಶಿಕ್ಷಕರು ಕೂಡ್ಲಿಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿ ನಂತರದ ಹಾಸನದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಾರ್ಗಮಧ್ಯೆ ಬಾಲಕಿ ಮೃತಪಟ್ಟಿದ್ದಾಳೆ. ಬಾಲಕಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಕುಸಿದು ಬಿದ್ದು 7ನೇ ತರಗತಿ ವಿದ್ಯಾರ್ಥಿನಿ ಮೃತ್ಯು Read More »

ಬೈಕ್ ಮತ್ತು ಆಕ್ಟಿವಾ ನಡುವೆ ಅಪಘಾತ

ಪುತ್ತೂರು: ಬೈಕ್ ಮತ್ತು ಆಕ್ಟಿವಾ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಸಂಟ್ಯಾರ್ ನಲ್ಲಿ ನಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನಗಳು ನುಜ್ಜು ಗುಜ್ಜಾಗಿದೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಬೈಕ್ ಮತ್ತು ಆಕ್ಟಿವಾ ನಡುವೆ ಅಪಘಾತ Read More »

ರಿಕ್ಷಾ – ಕಾರು ನಡುವೆ ಡಿಕ್ಕಿ | ರಿಕ್ಷಾ ಚಾಲಕ ಗಂಭೀರ ಗಾಯ

ಮಾಣಿ: ಕಾರೊಂದು ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಪಲ್ಟಿಯಾಗಿ ಆಟೋ ಚಾಲಕ ಗಂಭೀರ ಗಾಯಗೊಂಡ ಘಟನೆ ಸೂರಿಕುಮೇರು ಜಂಕ್ಷನ್‍ ಬಳಿ ನಡೆದಿದೆ. ರಿಕ್ಷಾ ಚಾಲಕ ಗಂಭೀರ ಗಾಯಗೊಂಡಿದ್ದು ಕೂಡಲೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಪರಿಣಾಮ ಆಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿಯಬೇಕಿದೆ.

ರಿಕ್ಷಾ – ಕಾರು ನಡುವೆ ಡಿಕ್ಕಿ | ರಿಕ್ಷಾ ಚಾಲಕ ಗಂಭೀರ ಗಾಯ Read More »

ತುಳುನಾಡಿನ ರಂಗಭೂಮಿ ಹಾಗೂ ಚಲನಚಿತ್ರ ಹಾಸ್ಯ ಕಲಾವಿದ ವಿವೇಕ್‍  ಮಾಡೂರ್ ಹೃದಯಘಾತದಿಂದ ನಿಧನ

ಉಳ್ಳಾಲ: ತುಳು ಚಿತ್ರರಂಗದಲ್ಲಿ ನಟನೆಯ ಮೂಲಕ ಕುಬ್ಜ ದೇಹದಿಂದಲೇ ಕಲಾ ಪ್ರೇಮಿಗಳನ್ನು ರಂಜಿಸುತ್ತಿದ್ದ ಪ್ರಚಂಡ ಕುಳ್ಳ ಖ್ಯಾತಿಯ ವಿವೇಕ್‌ ಮಾಡೂರು (52) ಇಂದು ಬೆಳಗ್ಗೆ ಹೃದಯಾಘಾತದಿಂದ ಮಾಡೂರಿನ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ನಿನ್ನೆ ರಾತ್ರಿ ತಮ್ಮ ಮನೆಯ ಶೌಚಾಲಯದಲ್ಲಿ ಬಿದ್ದಿದ್ದ ವಿವೇಕ್‌,  ನಿದ್ದೆಗೆ ಜಾರಿ ವಿಶ್ರಾಂತಿ ಪಡೆದಿದ್ದಾರೆ. ಬೆಳಗ್ಗೆ ಮನೆ ಮಂದಿ ಎಬ್ಬಿಸುವಾಗ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಟೆಲಿಫೋನ್‌ ಎಸ್‌ಟಿಡಿ ಬೂತ್‌ ನಡೆಸುತ್ತಿದ್ದ ವಿವೇಕ್‌ ಅವರು ಬೂತ್‌ ಮುಚ್ಚಿದ ನಂತರ ಅಣ್ಣನ ದಿನಸಿ ಅಂಗಡಿಯಲ್ಲಿ ಪ್ಲಾಸ್ಟಿಕ್‌ ಮನೆ

ತುಳುನಾಡಿನ ರಂಗಭೂಮಿ ಹಾಗೂ ಚಲನಚಿತ್ರ ಹಾಸ್ಯ ಕಲಾವಿದ ವಿವೇಕ್‍  ಮಾಡೂರ್ ಹೃದಯಘಾತದಿಂದ ನಿಧನ Read More »

error: Content is protected !!
Scroll to Top