ಪುತ್ತೂರಿನಲ್ಲಿ ಭಾವ ತೀರ ಯಾನ ಸಿನಿಮಾ ಮಾ. 18 ರಂದು 10:30 ಕ್ಕೆ ಹಾಗೂ  ಸಂಜೆ  7:15ಕ್ಕೆ ಚಿತ್ರ ಪ್ರದರ್ಶನ

ಪುತ್ತೂರು : ಸುಳ್ಯದ ಯುವ ಸಂಗೀತ ನಿರ್ದೇಶಕ ಮಯೂರ ಅಂಬೆಕಲ್ಲು ಹಾಗು ತೇಜಸ್‍ ಕಿರಣ್‍ ರವರ ನಿರ್ದೇಶನದಿಂದ ಮೂಡಿಬಂದ “ಭಾವ ತೀರ ಯಾನ” ಸಿನಿಮಾ ರಾಜ್ಯಾದ್ಯಂತ ಅದ್ಭುತವಾಗಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ ಪುತ್ತೂರಿನ ಭಾರತ್ ಸಿನಿಮಾಸ್‍ನಲ್ಲಿ ಭಾವ ತೀರ ಯಾನ ಮಾ. 18 (ನಾಳೆ) ರಂದು 10:30 ಕ್ಕೆ ಹಾಗೂ  ಸಂಜೆ  7:15ರ ಸಮಯಕ್ಕೆ  ಚಿತ್ರ ಪ್ರದರ್ಶನಗೊಳ್ಳಲಿದೆ.  ಕೌಂಟ‌ರ್’ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗುವವರು Book My Show Appನಲ್ಲಿ  ticketಗಳನ್ನು ಕಾಯ್ದಿರಿಸಿಕೊಳ್ಳಬಹುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಪುತ್ತೂರಿನಲ್ಲಿ ಭಾವ ತೀರ ಯಾನ ಸಿನಿಮಾ ಮಾ. 18 ರಂದು 10:30 ಕ್ಕೆ ಹಾಗೂ  ಸಂಜೆ  7:15ಕ್ಕೆ ಚಿತ್ರ ಪ್ರದರ್ಶನ Read More »

ಮನೆಯಲ್ಲಿದ್ದ ಕಾರು ಹಿಂದಕ್ಕೆ ಚಲಿಸಿ ವ್ಯಕ್ತಿಯೋರ್ವ ಮೃತ್ಯು

ಸುಳ್ಯ : ಅಂಗಳದಲ್ಲಿ ನಿಂತಿದ್ದ ಕಾರು ಹಿಂದಕ್ಕೆ ಚಲಿಸಿದಾಗ ವ್ಯಕ್ತಿಯೋರ್ವರು ಮೇಲೇ ಹರಿದುಹೋಗಿರುವ ಪರಿಣಾಮ ಮೃತಪಟ್ಟ ಘಟನೆ ಸುಳ್ಯದಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ನಿವೃತ್ತ ರೇಂಜರ್ ಜೋಸೆಫ್ (74) ಎಂದು ಪತ್ತೆಹಚ್ಚಲಾಗಿದೆ. ಸುಳ್ಯ ಕರಿಕ್ಕಳದ ಮುಚ್ಚಿಲದಲ್ಲಿರುವ ತಮ್ಮ ಮನೆಯ ಅಂಗಳದಲ್ಲಿ ನಿಂತಿದ್ದಾಗ ಕಾರು ಹಿಮ್ಮುಖ ಚಲಿಸಿ ನಿವೃತ್ತ ಜೋಸೇಫ್ ಅವರಿಗೆ ಗುದ್ದಿದಾಗ ಕುಸಿದು ಬಿದ್ದರೆನ್ನಲಾಗಿದೆ. ಮನೆಯಲ್ಲಿ ಅವರ ಪತ್ನಿ ಮಾತ್ರ ಇದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಮೃತಪಟ್ಟರು ಎನ್ನಲಾಗಿದೆ. ಅರಣ್ಯ ಇಲಾಖೆಯಲ್ಲಿ

ಮನೆಯಲ್ಲಿದ್ದ ಕಾರು ಹಿಂದಕ್ಕೆ ಚಲಿಸಿ ವ್ಯಕ್ತಿಯೋರ್ವ ಮೃತ್ಯು Read More »

ಮಹಾಭಾರತ ಸರಣಿಯಲ್ಲಿ ಗಾಂಧಾರಿ  ವಿವಾಹ ತಾಳಮದ್ದಳೆ

ಉಪ್ಪಿನಂಗಡಿ  : ಉಪ್ಪಿನಂಗಡಿ  ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 69ನೇ ಕಾರ್ಯಕ್ರಮವಾಗಿ ಗಾಂಧಾರಿ ವಿವಾಹ  ತಾಳಮದ್ದಳೆಯು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ,ಪ್ರಕಾಶ ಅಭ್ಯಂಕರ ಬೆಳ್ತಂಗಡಿ,ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಸುರೇಶ್ ರಾವ್. ಬಿ ಹಿಮ್ಮೇಳದಲ್ಲಿ  ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ ಆಳ್ವ ಬಾರ್ಯ, ಅರ್ಜುನ ಅಭ್ಯಂಕರ ಬೆಳ್ತಂಗಡಿ,  ಅರ್ಥಧಾರಿಗಳಾಗಿ ಸತೀಶ ಶಿರ್ಲಾಲು (ದ್ವಾಪರ), ರವೀಂದ್ರದರ್ಬೆ ( ಕಲಿ)

ಮಹಾಭಾರತ ಸರಣಿಯಲ್ಲಿ ಗಾಂಧಾರಿ  ವಿವಾಹ ತಾಳಮದ್ದಳೆ Read More »

ವೃದ್ಧ ತಂದೆ ತಾಯಿಯನ್ನು ಉಪೇಕ್ಷಿಸಿದರೆ ಮಕ್ಕಳಿಗೆ ಸಿಗಲ್ಲ ಆಸ್ತಿ

ಪೋಷಕರಿಂದ ವರ್ಗಾವಣೆ ಆಗಿರುವ ಆಸ್ತಿ, ಬರೆಸಿಕೊಂಡಿರುವ ಉಯಿಲು ರದ್ದುಪಡಿಸಲು ಆದೇಶ ಬೆಂಗಳೂರು : ವಯಸ್ಸಾದ ತಂದೆ ತಾಯಿಯನ್ನು ಉಪೇಕ್ಷಿಸಿದರೆ ಅವರ ಆಸ್ತಿ ಮಕ್ಕಳಿಗೆ ಸಿಗಲ್ಲ. ಹೀಗೊಂದು ಆದೇಶವನ್ನು ಕರ್ನಾಟಕ ಸರಕಾರ ನೀಡಿದೆ. ವಯಸ್ಸಾದ ತಂದೆ ತಾಯಿಯನ್ನು ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಗಳಿಗೆ ತಂದು ದಾಖಲಿಸಿ ಮಕ್ಕಳು ನಾಪತ್ತೆಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಕರಾರ ಈ ಆದೇಶ ಹೊರಡಿಸಿದೆ. ಬೆಳಗಾವಿ ಜಿಲ್ಲೆಯೊಂದರಲ್ಲೇ ಇಂಥ 150ಕ್ಕೂ ಹೆಚ್ಚು ಪ್ರಕರಣಗಳು ಇತ್ತೀಚೆಗೆ ಪತ್ತೆಯಾಗಿದ್ದವು. ಸಂಧ್ಯಾಕಾಲದಲ್ಲಿ ಹೆತ್ತ ತಂದೆ-ತಾಯಿಯನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ. ಭಾರತೀಯ

ವೃದ್ಧ ತಂದೆ ತಾಯಿಯನ್ನು ಉಪೇಕ್ಷಿಸಿದರೆ ಮಕ್ಕಳಿಗೆ ಸಿಗಲ್ಲ ಆಸ್ತಿ Read More »

ಸಂಸದ ತೇಜಸ್ವಿ ಸೂರ್ಯ ದಂಪತಿ  ಕಾಪು ಮಾರಿಯಮ್ಮ ದೇವಸ್ಥಾನ ಭೇಟಿ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ,  ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ದಂಪತಿ  ಭಾನುವಾರ ಸಂಜೆ ಕಾಪು ಶ್ರೀ ಹೊಸ ಮಾರಿಯಮ್ಮ ದೇವಸ್ಥಾನ ಸಂದರ್ಶಿಸಿ ದೇವಿಯ ದರ್ಶನ ಪಡೆದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ ಅವರು ದೇವಸ್ಥಾನದ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಸಮ್ಮುಖದಲ್ಲಿ ದಂಪತಿಗೆ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿದರು. ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ

ಸಂಸದ ತೇಜಸ್ವಿ ಸೂರ್ಯ ದಂಪತಿ  ಕಾಪು ಮಾರಿಯಮ್ಮ ದೇವಸ್ಥಾನ ಭೇಟಿ Read More »

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಪರೀಕ್ಷೆ : ಹರ್ಷಿತಾ ಕೆ ಪ್ರಥಮ ರ‍್ಯಾಂಕ್

ಪುತ್ತೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ (MA-Education) ಪರೀಕ್ಷೆಯಲ್ಲಿ  ಹರ್ಷಿತಾ ಕೆ ಅವರಿಗೆ ಪ್ರಥಮ ರ‍್ಯಾಂಕ್ ಲಭಿಸಿದೆ. ಪೆರ್ಲಂಪಾಡಿ ಕಜೆ ಜಯಾನಂದ ಕೆ ಮತ್ತು ಶಕುಂತಲಾ ದಂಪತಿ ಪುತ್ರಿ, ಬೆಳ್ಳಾರೆ ತಡಗಜೆ ಪ್ರಜ್ವಲ್ ನಾಯಕ್ ಟಿ ಅವರ ಪತ್ನಿ.ಯಾಗಿರುವ ಹರ್ಷಿತಾ ಕೆ. ಎಂಎಸ್ಸಿ ಗಣಿತಶಾಸ್ತ್ರ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮತ್ತು ಬಿ.ಎಡ್ ಪದವಿಯನ್ನು ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ ಮಂಗಳೂರು ಇಲ್ಲಿ ಪೂರೈಸಿರುತ್ತಾರೆ. ಡಾ. ಶಿವಪ್ರಕಾಶ್ ಮತ್ತು ಡಾ. ಕುಮಾರಸ್ವಾಮಿ ಇವರ ಮಾರ್ಗದರ್ಶನದಲ್ಲಿ ”ICT use

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಪರೀಕ್ಷೆ : ಹರ್ಷಿತಾ ಕೆ ಪ್ರಥಮ ರ‍್ಯಾಂಕ್ Read More »

ರೈಲು ಡಿಕ್ಕಿ ಹೊಡೆದು ಮೃತ್ಯು

ಪುತ್ತೂರು: ರೈಲು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಎಡಮಂಗಲ ಮರ್ದೂರಡ್ಕ ಎಂಬಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ವಿಶ್ವನಾಥ ಮೃತಪಟ್ಟವರು. ವಿಶ್ವನಾಥರು ರೈಲ್ವೆ ಟ್ರ್ಯಾಕ್ ಬಳಿ ಕುಳಿತು ಮೊಬೈಲ್ ನೋಡುತ್ತಿದ್ದಾಗ ರಾತ್ರಿ 10 ಗಂಟೆ ಸುಮಾರಿಗೆ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ರೈಲು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ರೈಲು ಡಿಕ್ಕಿ ಹೊಡೆದು ಮೃತ್ಯು Read More »

ನಾಳೆಯೇ ಸುನೀತಾ ವಿಲ್ಲಿಯಮ್ಸ್‌ ಭೂಮಿಗೆ ಮರಳುವ ಸಾಧ್ಯತೆ

9 ತಿಂಗಳ ಅಂತರಿಕ್ಷ ವಾಸಕ್ಕೆ ಕೊನೆಗೂ ಮುಕ್ತಿ ಸನ್ನಿಹಿತ ನ್ಯೂಯಾರ್ಕ್‌ : ಒಂಬತ್ತು ತಿಂಗಳಿಂದ ಅಂತರಿಕ್ಷದಲ್ಲಿ ಸಿಕ್ಕಿಬಿದ್ದಿರುವ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲ್ಲಿಯಮ್ಸ್‌ ಅವರನ್ನು ಭೂಮಿಗೆ ಕರೆತರಲು ಕ್ಷಣಗಣನೆ ಶುರುವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಂಗಳವಾರ ಸಂಜೆಗಾಗುವಾಗ ಸುನೀತಾ ವಿಲ್ಲಿಯಮ್ಸ್‌ ಇರುವ ಗಗನನೌಕೆ ಭೂಮಿ ಸ್ಪರ್ಶ ಮಾಡಲಿದೆ. ಆ ಮೂಲಕ ಸುದೀರ್ಘ 9 ತಿಂಗಳ ಅಂತರಿಕ್ಷ ವಾಸ ಅಂತ್ಯಗೊಳ್ಳಲಿದೆ. ಆರಂಭದಲ್ಲಿ ಬುಧವಾರ ಅಥವಾ ಗುರುವಾರ ಇಬ್ಬರು ಗಗನಯಾತ್ರಿಗಳನ್ನು ವಾಪಸ್‌ ಕರೆತರಲು ಯೋಜನೆ ರಚಿಸಲಾಗಿತ್ತು. ಆದರೆ ಈ

ನಾಳೆಯೇ ಸುನೀತಾ ವಿಲ್ಲಿಯಮ್ಸ್‌ ಭೂಮಿಗೆ ಮರಳುವ ಸಾಧ್ಯತೆ Read More »

ನಂದಿ ರಥಯಾತ್ರೆ ಪುರಪ್ರವೇಶ : ದರ್ಬೆಯಲ್ಲಿ ಸ್ವಾಗತ

ಪುತ್ತೂರು: ಗೋಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್, ಪುತ್ತೂರು ನಂದಿ ರಥಯಾತ್ರೆ ಸಂಚಲನ ಸಮಿತಿ ವತಿಯಿಂದ ಭಾನುವಾರ ಪುತ್ತೂರಿಗೆ ಆಗಮಿಸಿದ ನಂದಿ ರಥ ಯಾತ್ರೆಗೆ ದರ್ಬೆಯಲ್ಲಿ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು. ದರ್ಬೆಯಲ್ಲಿ ಎಡನೀರು ಸಂಸ್ಥಾನದ ಶ್ರೀ ಸಚ್ಚೇದಾನಂದ ಭಾರತೀ ಶ್ರೀಪಾಂಗಳವರು ದೇಶಿ ನಂದಿಗೆ ಹಾರಾರ್ಪಣೆ ಮಾಡಿ ಶ್ರೀ ಕೃಷ್ಣನ ವಿಗ್ರಹಕ್ಕೆ ಪುಷ್ಪಾರ್ಚಣೆ ಮಾಡಿದರು. ಡಾ. ಸಚಿನ್ ಶಂಕರ್ ಹಾರಕೆರೆಯವರು ತೆಂಗಿನ ಕಾಯಿ ಒಡೆಯುವ ಮೂಲಕ ನಂದಿ ರಥಯಾತ್ರೆಗೆ ಚಾಲನೆ ನೀಡಿದರು.

ನಂದಿ ರಥಯಾತ್ರೆ ಪುರಪ್ರವೇಶ : ದರ್ಬೆಯಲ್ಲಿ ಸ್ವಾಗತ Read More »

ಒಂದು ವರ್ಷದಲ್ಲಿ 59 ಸಲ ಡ್ರಗ್ಸ್‌ ಸಾಗಾಟ : ಆದರೂ ಸಿಕ್ಕಿಬೀಳಲಿಲ್ಲ ಈ ಚಾಲಾಕಿಯರು

ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿದ ಬೃಹತ್‌ ಡ್ರಗ್ಸ್‌ ಜಾಲದಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ? ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿರುವ ರಾಜ್ಯದ ಅತಿದೊಡ್ಡ ಡ್ರಗ್ಸ್ ಜಾಲದ ಹಲವು ಮಾಹಿತಿಗಳು ಬೆಚ್ಚಿಬೀಳಿಸುವಂತಿದೆ. ದಾಖಲೆಯ 75 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಜೊತೆ ಸಿಕ್ಕಿಬಿದ್ದಿರುವ ಇಬ್ಬರು ವಿದೇಶಿ ಮಹಿಳೆಯರು ಈ ಮೊದಲು ಒಂದು ವರ್ಷದ ಅವಧಿಯಲ್ಲಿ ವಿಮಾನ ನಿಲ್ದಾಣದ ಮೂಲಕ 59 ಸಲ ಡ್ರಗ್ಸ್‌ ಸಾಗಿಸಿದ್ದರೂ ಸಿಕ್ಕಿಬೀಳದೆ ಪಾರಾಗಿದ್ದರು. ಆದರೆ ಅದು ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆಯೊಂದು ಕಾಡುತ್ತಿದೆ. ರನ್ಯಾ ರಾವ್‌

ಒಂದು ವರ್ಷದಲ್ಲಿ 59 ಸಲ ಡ್ರಗ್ಸ್‌ ಸಾಗಾಟ : ಆದರೂ ಸಿಕ್ಕಿಬೀಳಲಿಲ್ಲ ಈ ಚಾಲಾಕಿಯರು Read More »

error: Content is protected !!
Scroll to Top