ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಬಿ.ಆರ್.ಅಂಬೇಡ್ಕರ್ 134ನೇ ಜನ್ಮ ದಿನಾಚರಣೆ

ಪುತ್ತೂರು: ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆಯನ್ನು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಇಡೀ ದೇಶಕ್ಕೆ ದಾರಿದೀಪವಾದ ಡಾ..ಬಿ.ಆರ್.ಅಂಬೇಡ್ಕರ್ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಅದರಲ್ಲೂ ಮಹಿಳೆಯರು ಶಿಕ್ಷಣದಲ್ಲಿ ಮುಂದೆ ಬರಬೇಕು ಎಂಬ ಚಿಂತನೆಯನ್ನಿಟ್ಟುಕೊಂಡು ಅದನ್ನು ಕಾರ್ಯರೂಪಕ್ಕೆ […]

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಬಿ.ಆರ್.ಅಂಬೇಡ್ಕರ್ 134ನೇ ಜನ್ಮ ದಿನಾಚರಣೆ Read More »

ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಬನ್ನೂರು: ಕೃಷ್ಣ ನಗರ ಅಲುಂಬುಡದಲ್ಲಿ ಕಾರ್ಯಚರಿಸುತ್ತಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏ.14 ರಂದು ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಜಿಲ್ಲಾ ದಸ್ತಾವೇಜು ಬರಹಗಾರರಾದ ಬಾಲಚಂದ್ರ ಸೊರಕೆಯವರು ದೀಪ ಬೆಳಗಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ಬಳಿಕ ಮಾತನಾಡುತ್ತಾ ಅಂಬೇಡ್ಕರ್ ಅವರ ಜೀವನ ಮೌಲ್ಯಗಳನ್ನು ಮತ್ತು ಸಂವಿಧಾನದ ರೂಪುರೇಷೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಸಮಾನ ನಾಗರಿಕ ಸಂಹಿತೆ ಜಾರಿಯಾಗದ ಹೊರತು ಎಲ್ಲರಲ್ಲೂ ಸಮಾನ ಮನೋಭಾವ ಬೆಳೆಯಲು ಸಾಧ್ಯವಿಲ್ಲ, ಈ ನಿಟ್ಟಿನಲ್ಲಿ ನಾವೆಲ್ಲರೂ ಸಮಾನರು ಎಂಬ ಭಾವನೆ ಎಲ್ಲರ ಮನಸ್ಸಿನಲ್ಲಿ

ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ Read More »

ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಶ್ರೀಮಠಕ್ಕೆ ಕ್ಷಮೆಯಾಚಿಸುವ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು | ಇಲ್ಲವಾದರೆ ತೀವ್ರ ಹೋರಾಟ ನಡೆಸಲಾಗುವುದು : ಡಿ.ಬಿ. ಬಾಲಕೃಷ್ಣ

ಬೆಳ್ತಂಗಡಿ: ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನೂತನ ಕಟ್ಟಡ ಮತ್ತು ಸಭಾಭವನದ ಲೋಕಾರ್ಪಣಾ ಸಮಾರಂಭ ಏಪ್ರಿಲ್ 20 ಆದಿತ್ಯವಾರ ಬೆಳ್ತಂಗಡಿಯ ವಾಣಿ ವಿದ್ಯಾಸಂಸ್ಥೆಗಳ ಆವರಣದಲ್ಲಿ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಈಗಾಗಲೇ ಬಿಡುಗಡೆಗೊಂಡಿದೆ. ಆದರೆ ಬೆಳ್ತಂಗಡಿ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದವರು ತಮ್ಮ ಸಂಘದ ಕಚೇರಿ ಹಾಗೂ ಸಭಾಭವನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶೃಂಗೇರಿ ಮಠದ ಸ್ವಾಮೀಜಿಗಳನ್ನು ಕರೆದು ನಮ್ಮ ಮಠದ ಸ್ವಾಮೀಜಿಗಳನ್ನು ಉದ್ದೇಶಪೂರ್ವಕವಾಗಿಯೇ ಕರೆಯದೆ ಅವಮಾನಿಸಿದ್ದಾರೆ. ಮಾತ್ರವಲ್ಲದೆ ಎರಡು ಧಾರ್ಮಿಕ ಪೀಠಗಳ ನಡುವೆ

ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಶ್ರೀಮಠಕ್ಕೆ ಕ್ಷಮೆಯಾಚಿಸುವ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು | ಇಲ್ಲವಾದರೆ ತೀವ್ರ ಹೋರಾಟ ನಡೆಸಲಾಗುವುದು : ಡಿ.ಬಿ. ಬಾಲಕೃಷ್ಣ Read More »

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ | ವಿಷುಕಣಿ ಬಲಿ ಉತ್ಸವ –ಸಹಸ್ರಾರು ಮಂದಿಗೆ ಅನ್ನಸಂತರ್ಪಣೆ

ಪುತ್ತೂರು: ವಿಷುಕಣಿ ದಿನವಾದ ಸೋಮವಾರ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳ ಗಡಣವೇ ತುಂಬಿತ್ತು. ವಿಷುಕಣಿ ಹಬ್ಬದ ಅಂಗವಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ವಿಶೇಷ ವಿಷುಕಣಿ ಬಲಿ ಉತ್ಸವ ನಡೆಯಿತು. ಬೆಳಿಗ್ಗೆ ಶ್ರೀ ದೇವಸ್ಥಾನದ ಗರ್ಭಗುಡಿಯಲ್ಲಿ ಕಣಿ ಇಡಲಾಯಿತು. ಬಳಿಕ ಒಳಾಂಗಣದಲ್ಲಿ ವಿಷುಕಣಿ ಬಲಿ ಉತ್ಸವ ನಡೆಯಿತು. ಒಳಾಂಗಣದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ತುಂಬಿದ್ದು, ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ದೇವಸ್ಥಾನ್ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‍,

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ | ವಿಷುಕಣಿ ಬಲಿ ಉತ್ಸವ –ಸಹಸ್ರಾರು ಮಂದಿಗೆ ಅನ್ನಸಂತರ್ಪಣೆ Read More »

ಲೋಕಕಲ್ಯಾಣಾರ್ಥವಾಗಿ ಬಾರ್ಯ ದೇವಸ್ಥಾನದಲ್ಲಿ ಮಹಾವಿಷ್ಣು ಯಾಗ

ಭಗವಂತನನ್ನು  ನಾಮಸಂಕೀರ್ತನೆ ಮೂಲಕ ಸುಲಭವಾಗಿ ಒಲಿಸಿಕೊಳ್ಳಬಹುದು. ವಿಷ್ಣು ಸಹಸ್ರನಾಮವನ್ನು ಶ್ರದ್ಧಾಭಕ್ತಿಯಿಂದ ಪಠಿಸುವುದರಿಂದ ದುರಿತಗಳು ನಿವಾರಣೆಯಾಗಿ ಶ್ರೇಯಸ್ಸನ್ನು ಪಡೆಯಲು ಸಾಧ್ಯ. ಬಾರ್ಯದಂತಹ ಗ್ರಾಮದಲ್ಲಿ ಶ್ರದ್ಧಾಭಕ್ತಿಯಿಂದ ಭಕ್ತರು ಯಾಗದಲ್ಲಿ ಪಾಲ್ಗೊಂಡಿರುವುದು ಶುಭಸಂಕೇತವೆಂದು ಬ್ರಹ್ಮಶ್ರೀ ಕೆಮ್ಮಿoಜೆ ಕಾರ್ತಿಕ ತಂತ್ರಿಗಳು ತಿಳಿಸಿದರು. ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಲೋಕಕಲ್ಯಾಣರ್ಥವಾಗಿ ಜರಗಿದ ಶ್ರೀ ಮಹಾವಿಷ್ಣುಯಾಗದ ಧಾರ್ಮಿಕ ಸಭೆಯಲ್ಲಿ ಯಾಗದ ಫಲಶ್ರುತಿಯ ಬಗ್ಗೆ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ  ಪುತ್ತೂರಿನ ದ್ವಾರಕಾ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ  ಗೋಪಾಲಕೃಷ್ಣ ಭಟ್ ಆಡಳಿತ ಟ್ರಸ್ಟ್ ಮತ್ತು ಭಕ್ತಾಭಿಮಾನಿಗಳು

ಲೋಕಕಲ್ಯಾಣಾರ್ಥವಾಗಿ ಬಾರ್ಯ ದೇವಸ್ಥಾನದಲ್ಲಿ ಮಹಾವಿಷ್ಣು ಯಾಗ Read More »

ಅತ್ಯಾಚಾರಿಯನ್ನು ಗುಂಡಿಕ್ಕಿ ಸಾಯಿಸಿದ ಅನ್ನಪೂರ್ಣ ಈಗ ಜನರ ದೃಷ್ಟಿಯಲ್ಲಿ ಲೇಡಿ ಸಿಂಗಂ

ಮುಂದಿನ ತಿಂಗಳೇ ಹಸೆಮಣೆಯೇರಲಿದ್ದಾರೆ ಹುಬ್ಬಳ್ಳಿಯ ಈ ದಿಟ್ಟ ಮಹಿಳಾ ಪೊಲೀಸ್‌ ಅಧಿಕಾರಿ ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕತ್ತುಹಿಚುಕಿ ಕೊಲೆ ಮಾಡಿದ್ದ ಆರೋಪಿಯನ್ನು ಗುಂಡಿಕ್ಕಿ ಸಾಯಿಸಿದ ಮಹಿಳಾ ಇನ್‌ಸ್ಪೆಕ್ಟರ್‌ ಅನ್ನಪೂರ್ಣ ರಾತ್ರಿ ಬೆಳಗಾಗುವುದರೊಳಗೆ ದೇಶಾದ್ಯಂತ ಮನೆ ಮಾತಾಗಿ ಲೇಡಿ ಸಿಂಗಂ ಎಂದು ಕರೆಸಿಕೊಂಡಿದ್ದಾರೆ. ವಾಟ್ಸಪ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸೇರಿದಂತೆ ಸೋಷಿಯಲ್‌‌ ಮೀಡಿಯಾಗಳಲ್ಲಿ ಅನ್ನಪೂರ್ಣ ಕುರಿತು ಪುಂಖಾನುಪುಂಖವಾಗಿ ಪೋಸ್ಟ್‌ಗಳು ಹರಿದಾಡುತ್ತಿವೆ. ಮಹಿಳೆಯಾಗಿ ಅನ್ನಪೂರ್ಣ ತೋರಿಸಿದ ದಿಟ್ಟತನಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಾಕಷ್ಟು ಮಂದಿ ಅನ್ನಪೂರ್ಣ

ಅತ್ಯಾಚಾರಿಯನ್ನು ಗುಂಡಿಕ್ಕಿ ಸಾಯಿಸಿದ ಅನ್ನಪೂರ್ಣ ಈಗ ಜನರ ದೃಷ್ಟಿಯಲ್ಲಿ ಲೇಡಿ ಸಿಂಗಂ Read More »

ನಟ ಸಲ್ಮಾನ್‌ ಖಾನ್‌ಗೆ ಮತ್ತೆ ಜೀವ ಬೆದರಿಕೆ

ಮನೆಗೆ ನುಗ್ಗಿ ಸಾಯಿಸುತ್ತೇವೆ, ಇಲ್ಲವೇ ಕಾರು ಸ್ಫೋಟಿಸುತ್ತೇವೆ ಎಂದು ಧಮಕಿ ಮುಂಬಯಿ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ಮತ್ತೊಮ್ಮೆ ಜೀವ ಬೆದರಿಕೆ ಸಂದೇಶ ಬಂದಿದೆ. ಮುಂಬಯಿಯ ವರ್ಲಿ ವಿಭಾಗದ ಸಂಚಾರಿ ಪೊಲೀಸರ ವಾಟ್ಸಪ್‌ ನಂಬರ್‌ಗೆ ಕಳುಹಿಸಿರುವ ಸಂದೇಶದಲ್ಲಿ ನಟನನ್ನು ಮನೆಗೆ ನುಗ್ಗಿ ಅಥವಾ ಕಾರು ಸ್ಫೋಟಿಸಿ ಸಾಯಿಸಿಲಿದ್ದೇವೆ ಎಂದು ಬೆದರಿಕೆಯೊಡ್ಡಲಾಗಿದೆ. ಒಂದು ವರ್ಷದ ಹಿಂದೆ ನಟನ ಮನೆಯೆದುರು ಇಬ್ಬರು ವ್ಯಕ್ತಿಗಳು ಬೈಕಿನಲ್ಲಿ ಬಂದು ಗುಂಡು ಹಾರಿಸಿದ್ದರು. ಅನಂತರ ಸಲ್ಮಾನ್‌ ಖಾನ್‌ಗೆ ಪದೇ ಪದೆ ಜೀವ ಬೆದರಿಕೆ ಸಂದೇಶಗಳು

ನಟ ಸಲ್ಮಾನ್‌ ಖಾನ್‌ಗೆ ಮತ್ತೆ ಜೀವ ಬೆದರಿಕೆ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ  1001ನೇ ವಾರದ ಸಭೆ ಉದ್ಘಾಟನೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ

ಅಡ್ಕ ಸ್ಥಳ ಶ್ರೀ ರಾಮ್ ಭಟ್ ರವರ ಮನೆಯ ಆವರಣದಲ್ಲಿ ಭಾಗ್ಯಶ್ರೀ ಸಂಘದ 1001ನೇ ವಾರದ ಸಭೆ ಹಾಗೂ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟನೆಯನ್ನು ಒಕ್ಕೂಟದ ಅಧ್ಯಕ್ಷರಾದ ಪುಷ್ಪಾಕರ ರೈ ಹಾಗೂ ಯೋಜನಾಧಿಕಾರಿ ರಮೇಶ್ ರವರು ವಿಧಿವತ್ತಾಗಿ ಏ.11 ರಂದು ಉದ್ಘಾಟಿಸಿ ಯೋಜನೆಯ ಕಾರ್ಯಕ್ರಮದ ಬಗ್ಗೆ ಸೂಕ್ತ ಮಾಹಿತಿ ನೀಡಿದರು. ಸಂಘದ ಸದಸ್ಯರಾದ ರೇವತಿಯವರು ತಮ್ಮ ಸಂಘದ ಸಾಧನೆಯನ್ನು ವಿವರಿಸುತ್ತಾ ಸದ್ರಿ ಸಂಘ 18.05 2006 ರಂದು ಆರಂಭಗೊಂಡು ಈ ತನಕ ಸಂಘದ ಉಳಿತಾಯ 179660 ಮಾಡಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ  1001ನೇ ವಾರದ ಸಭೆ ಉದ್ಘಾಟನೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ Read More »

ಯುವತಿಗೆ ಕಿರುಕುಳ ನೀಡಿದ ಆರೋಪಿ ಕೇರಳದಲ್ಲಿ ಸೆರೆ

ರಾಜ್ಯಾದ್ಯಂತ ಅಕ್ರೋಶಕ್ಕೆ ಕಾರಣವಾಗಿದ್ದ ಕೃತ್ಯದ ಆರೋಪಿ ಬೆಂಗಳೂರು : ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಹಿಂದಿನಿಂದ ಬಂದು ಕಿರುಕುಳ ನೀಡಿ ಪಲಾಯನ ಮಾಡಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದು ಸುಮಾರು 10 ದಿನಗಳ ಬಳಿಕ ಆರೋಪಿ ಸಂತೋಷ್ ಡೆನಿಯಲ್​​​ನನ್ನು ಕೇರಳ ಕೋಝಿಕ್ಕೋಡ್‌ ಸಮೀಪದ ಹಳ್ಳಿಯೊಂದರಿಂದ ಬಂಧಿಸಲಾಗಿದೆ. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಆರೋಪಿಯ ಚಲನವಲನ ಪತ್ತೆಗೆ 1,800ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದರು. ಆರೋಪಿ ಪತ್ತೆಗಾಗಿ ಡಿಸಿಪಿ ಸಾರಾ

ಯುವತಿಗೆ ಕಿರುಕುಳ ನೀಡಿದ ಆರೋಪಿ ಕೇರಳದಲ್ಲಿ ಸೆರೆ Read More »

ಛಲದಂಕ ಚಕ್ರೇಶ್ವರ ತಾಳ ಮದ್ದಳೆ ಮತ್ತು ಸನ್ಮಾನ

ಶ್ರೀ ಉಮಾ ಮಹೇಶ್ವರ ಯಕ್ಷಕಲಾ ಇಷುದಿ ನಿಡ್ಲೆ ಸಂಯೋಜನೆಯಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಸಹಯೋಗದೊಂದಿಗೆ ಛಲದಂಕ ಚಕ್ರೇಶ್ವರ ತಾಳ ಮದ್ದಳೆ ಜರಗಿತು. ಭಾಗವತರಾಗಿ ಮಹೇಶ ಕನ್ಯಾಡಿ, ಶಾಲಿನಿ ಹೆಬ್ಬಾರ್ ಹಿಮ್ಮೇಳದಲ್ಲಿ ಮುರಾರಿ ಕಡoಬಳಿತ್ತಾಯ, ಶ್ರೀಪತಿಭಟ್ ಉಪ್ಪಿನಂಗಡಿ, ಅರ್ಥದಾರಿಗಳಾಗಿ ನಿಡ್ಲೆ ಈಶ್ವರ ಪ್ರಸಾದ್ ಪಿ.ವಿ. (ಕೌರವ), ರವಿ ಭಟ್ ನೆಲ್ಯಾಡಿ (ಭೀಮ-1),  ದಿವಾಕರ ಆಚಾರ್ಯ ಗೇರುಕಟ್ಟೆ (ಸಂಜಯ), ಹರೀಶ ಆಚಾರ್ಯ ಬಾರ್ಯ (ಅಶ್ವತ್ಥಾಮ), ಸುಬ್ರಹ್ಮಣ್ಯ ಭಟ್ಪೆರ್ವೋಡಿ (ಬೇಹಿನಚರ),

ಛಲದಂಕ ಚಕ್ರೇಶ್ವರ ತಾಳ ಮದ್ದಳೆ ಮತ್ತು ಸನ್ಮಾನ Read More »

error: Content is protected !!
Scroll to Top