ಪಿಗ್ಮಿ ಸಂಗ್ರಾಹಕ ವಿಜಯ್ ರೆಬೆಲ್ಲೋ ನಿಧನ

ಪುತ್ತೂರು: ಕೂರ್ನಡ್ಕ ನಿವಾಸಿ ಚಾರ್ಲಿ ರೆಬೆಲ್ಲೋರವರ ಪುತ್ರ ಪಿಗ್ಮಿ ಸಂಗ್ರಾಹಕ ವಿಜಯ್ ರೆಬೆಲ್ಲೋ (45) ರವರು ಮಂಗಳವಾರ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಸೋಮವಾರ ರಾತ್ರಿ ಮಲಗಿದ್ದವರು, ಮಂಗಳವಾರ ಬೆಳಿಗ್ಗೆ ಎದ್ದಿಲ್ಲ. ಪಿಗ್ಮಿ ಸಂಗ್ರಹಕ್ಕೆ ವಿಜಯ್ ಬಂದಿಲ್ಲ ಎಂದು ಗ್ರಾಹಕರು ಕರೆ ಮಾಡಿದಾಗ, ಮೊಬೈಲ್ ಕರೆ ಸ್ವೀಕರಿಸಿಲ್ಲ. ಬಳಿಕ ಮನೆ ಮಾಲಕರಿಗೆ ಕರೆ ಮಾಡಿ ವಿಚಾರಿಸಿದರು. ಅವರು ಮನೆ ಬಳಿ ಹೋಗಿ ನೋಡಿದಾಗ, ವಿಜಯ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ವಿಜಯ್ ಅವರು ಅವಿವಾಹಿತರಾಗಿದ್ದು, ಮುಕ್ವೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ […]

ಪಿಗ್ಮಿ ಸಂಗ್ರಾಹಕ ವಿಜಯ್ ರೆಬೆಲ್ಲೋ ನಿಧನ Read More »

ಪ್ರೇರಣಾ ಸಂಸ್ಥೆಯ “ಪ್ರೇರಣಾ ಸಮ್ಮರ್ ಕ್ಯಾಂಪ್-2025” ಸಮಾರೋಪ | ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ | ನಮ್ಮನ್ನು ನಾವು ಅರಿತುಕೊಳ್ಳಲು ಶಿಬಿರ ಪೂರಕ ವಾತಾವರಣ ಕಲ್ಪಿಸುತ್ತದೆ : ವಚನಾ ಪ್ರದೀಪ್‍ | ಪ್ರೇರಣಾ ಬೇಸಿಗೆ ಶಿಬಿರ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದೆ : ಡಿ.ವಿ.ಮನೋಹರ್ | ಪ್ರೇರಣಾ ಬೇಸಿಗೆ ಶಿಬಿರ ಮಕ್ಕಳಿಗೆ ಉತ್ತಮ ಚಟುವಟಿಕೆಗಳಿಗೆ ಪ್ರೇರಣೆ ನೀಡಿದೆ : ಉಲ್ಲಾಸ ಪೈ | ಮಕ್ಕಳಲ್ಲಿನ ಸುಪ್ತ ಪ್ರತಿಭೆ ಹೊರ ಹಾಕಲು ಶಿಬಿರದ ಪಾತ್ರ ಬಹುಮುಖ್ಯ : ಕೆ.ರಾಜೇಂದ್ರ ಪ್ರಸಾದ್‍ ಶೆಟ್ಟಿ,

ಪುತ್ತೂರು: ಪ್ರತಿಷ್ಠಿತ ಪ್ರೇರಣಾ ಸಂಸ್ಥೆ ಹಾಗೂ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೆಲ್ಲಿಕಟ್ಟೆಯಲ್ಲಿರುವ ಒಕ್ಕಲಿಗ ಸೌಧದಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿರುವ “ಪ್ರೇರಣಾ ಸಮ್ಮರ್ ಕ್ಯಾಂಪ್-2025” ಇದರ ಸಮಾರೋಪ ಸಮಾರಂಭ ಇಂದು ಖಾಸಗಿ ಬಸ್ ನಿಲ್ದಾಣದ ಎದುರಿನ ಒಕ್ಕಲಿಗ ಸೌಧದಲ್ಲಿ ನಡೆಯಿತು. ನಮ್ಮನ್ನು ನಾವು ಅರಿತುಕೊಳ್ಳಲು ಶಿಬಿರ ಪೂರಕ ವಾತಾವರಣ ಕಲ್ಪಿಸುತ್ತದೆ : ವಚನಾ ಪ್ರದೀಪ್‍ ಮುಖ್ಯ ಅತಿಥಿಯಾಗಿ ಪುತ್ತೂರು ಅದಿವ ಸಂಸ್ಥೆಯ ಪಾಲುದಾರರಾದ ವಚನಾ ಪ್ರದೀಪ್ ಮಾತನಾಡಿ ನಮ್ಮ ಬಗ್ಗೆ ನಾವು ಅರಿತುಕೊಳ್ಳಲು ಮಕ್ಕಳಿಗೆ ಶಿಬಿರ

ಪ್ರೇರಣಾ ಸಂಸ್ಥೆಯ “ಪ್ರೇರಣಾ ಸಮ್ಮರ್ ಕ್ಯಾಂಪ್-2025” ಸಮಾರೋಪ | ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ | ನಮ್ಮನ್ನು ನಾವು ಅರಿತುಕೊಳ್ಳಲು ಶಿಬಿರ ಪೂರಕ ವಾತಾವರಣ ಕಲ್ಪಿಸುತ್ತದೆ : ವಚನಾ ಪ್ರದೀಪ್‍ | ಪ್ರೇರಣಾ ಬೇಸಿಗೆ ಶಿಬಿರ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದೆ : ಡಿ.ವಿ.ಮನೋಹರ್ | ಪ್ರೇರಣಾ ಬೇಸಿಗೆ ಶಿಬಿರ ಮಕ್ಕಳಿಗೆ ಉತ್ತಮ ಚಟುವಟಿಕೆಗಳಿಗೆ ಪ್ರೇರಣೆ ನೀಡಿದೆ : ಉಲ್ಲಾಸ ಪೈ | ಮಕ್ಕಳಲ್ಲಿನ ಸುಪ್ತ ಪ್ರತಿಭೆ ಹೊರ ಹಾಕಲು ಶಿಬಿರದ ಪಾತ್ರ ಬಹುಮುಖ್ಯ : ಕೆ.ರಾಜೇಂದ್ರ ಪ್ರಸಾದ್‍ ಶೆಟ್ಟಿ, Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆ ಪೆರ್ನೆ ಶೌರ್ಯ ಘಟಕದಿಂದ ಕಡೇಶಿವಾಲಯ ದೇವಸ್ಥಾನದಲ್ಲಿ  ಸ್ವಚ್ಛತಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಕಡೇಶಿವಾಲಯ, ಮತ್ತು  ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ, ಕಡೇಶಿವಾಲಯ ಚಿಂತಾಮಣಿ ಶ್ರೀಲಕ್ಷ್ಮೀ ನರಸಿಂಹಸ್ವಾಮಿ. ದೇವಸ್ಥಾನದಲ್ಲಿ  ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಡೇಶಿವಾಲಯ ಜಾತ್ರೋತ್ಸವದ ಸಂದರ್ಭದ  ಪ್ರಯುಕ್ತ ಏ.13 ಭಾನುವಾರದಂದು  ಸ್ವಚ್ಛತಾ ಕಾರ್ಯಕ್ರಮ ಸೇವೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ  ದೇವಸ್ಥಾನದ  ಆಡಳಿತ  ಸಮಿತಿಯವರು, ವಲಯ ಮೇಲ್ವಿಚಾರಕರು, ಸಂಯೋಜಕರು, ಸೇವಾಪ್ರತಿನಿಧಿ, ಒಕ್ಕೂಟದ ಅಧ್ಯಕ್ಷರು  ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆ ಪೆರ್ನೆ ಶೌರ್ಯ ಘಟಕದಿಂದ ಕಡೇಶಿವಾಲಯ ದೇವಸ್ಥಾನದಲ್ಲಿ  ಸ್ವಚ್ಛತಾ ಕಾರ್ಯಕ್ರಮ Read More »

55ನೇ ದಿನಕ್ಕೆ ಕಾಲಿರಿಸಿದ ಭಾವ ತೀರ ಯಾನ |  ನಾಳೆ ಬೆಳಗ್ಗೆ 11ಗಂಟೆಗೆ ಚಿತ್ರ ಪ್ರದರ್ಶನ

ಪುತ್ತೂರು : ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 55ನೇ ವಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ನಾಳೆ ಏ.16 ಬುಧವಾರದಂದು ಬೆಳಗ್ಗೆ 11:00 ಗಂಟೆಗೆ ಚಿತ್ರ ಪ್ರದರ್ಶನಗೊಳ್ಳಲಿದೆ.

55ನೇ ದಿನಕ್ಕೆ ಕಾಲಿರಿಸಿದ ಭಾವ ತೀರ ಯಾನ |  ನಾಳೆ ಬೆಳಗ್ಗೆ 11ಗಂಟೆಗೆ ಚಿತ್ರ ಪ್ರದರ್ಶನ Read More »

ರಾಷ್ಟ್ರೀಯ ಮಟ್ಟದ ಮ್ಯಾನೇಜ್ಮೆಂಟ್ ಆ್ಯಂಡ್ ಕಲ್ಚರ್ ಫೆಸ್ಟಿವಲ್ ನಲ್ಲಿ ಕೆ.ಎಸ್.ಎಸ್ ಕಾಲೇಜಿಗೆ ಬಹುಮಾನ

ಮಂಗಳೂರು ವಿಶ್ವವಿದ್ಯಾಲಯದ ಉದ್ಯಮಾಡಳಿತ ವಿಭಾಗವು ಆಯೋಜಿಸಿರುವ ರಾಷ್ಟ್ರೀಯ ಮಟ್ಟದ ಮ್ಯಾನೇಜ್ಮೆಂಟ್ ಹಾಗೂ ಕಲ್ಚರಲ್ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ  ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದರು. ಏಕ ವ್ಯಕ್ತಿ ಗಾಯನ ಸ್ಪರ್ಧೆಯಲ್ಲಿ  ಮಯೂರಿ ಎಂ ಜಿ   ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ರಾಷ್ಟ್ರೀಯ ಮಟ್ಟದ ಮ್ಯಾನೇಜ್ಮೆಂಟ್ ಆ್ಯಂಡ್ ಕಲ್ಚರ್ ಫೆಸ್ಟಿವಲ್ ನಲ್ಲಿ ಕೆ.ಎಸ್.ಎಸ್ ಕಾಲೇಜಿಗೆ ಬಹುಮಾನ Read More »

ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭೃಗು ಶಾಪ ತಾಳಮದ್ದಳೆ

ಶ್ರೀ ದುರ್ಗಾಂಬಾ ಕಲಾ ಸಂಗಮ  ಶರವೂರು ವತಿಯಿಂದ ಶನಿವಾರದಂದು  ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭೃಗು ಶಾಪ ತಾಳಮದ್ದಳೆ ನಡೆಯಿತು  ಭಾಗವತರಾಗಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ದಿವಾಕರ ಆಚಾರ್ಯ ಹಳೆನೇರೆಂಕಿ(ದೇವೇಂದ್ರ), ಗುರುಪ್ರಸಾದ್ ಆಲಂಕಾರು(ಬೃಹಸ್ಪತಿ), ದಿವಾಕರ ಆಚಾರ್ಯ ಹಳೆನೇರೆಂಕಿ(ತಮಾಸುರ), ಜಯರಾಂ ಗೌಡ ಬಲ್ಯ(ಖ್ಯಾತಿ 1), ದಿವಾಕರ ಆಚಾರ್ಯ ಹಳೆನೇರೆಂಕಿ(ಖ್ಯಾತಿ 2), ರಾಘವೇಂದ್ರ ಭಟ್ ತೋಟಂತಿಲ(ವಿಷ್ಣು), ರಾಮ್ ಪ್ರಸಾದ್ ಆಲಂಕಾರು(ಭೃಗು), ಹರಿಶ್ಚಂದ್ರ ಗೌಡ ಕೋಡ್ಲ ಭಾಗವಹಿಸಿದ್ದರು. ಮಹಾಬಲ ರೈ ನಗ್ರಿ

ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭೃಗು ಶಾಪ ತಾಳಮದ್ದಳೆ Read More »

ಡಿವೈಡರ್ ಗೆ ಡಿಕ್ಕಿಹೊಡೆದ  ಬಸ್‍ | 13ಮಂದಿಗೆ ಗಂಭೀರ ಗಾಯ

ನೆಲ್ಯಾಡಿ: ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್‌ಆರ್ ಟಿಸಿ ಬಸ್ಸೊಂದು ಡಿವೈಡರ್‌ಗೆ ಡಿಕ್ಕಿಯಾದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಅಡ್ಡಹೊಳೆ ಹೆಚ್ ಪಿ ಪೆಟ್ರೋಲ್ ಪಂಪ್‌ನ ಮುಂಭಾಗದಲ್ಲಿ ನಿನ್ನೆ ರಾತ್ರಿ ನಡೆದಿದೆ. ಘಟನೆಯಲ್ಲಿ ಬಸ್ಸಿನಲ್ಲಿದ್ದ ದಂಪತಿ ಸಹಿತ ಮೂವರು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು 10 ಮಂದಿಗೆ ಸಣ್ಣಪುಟ್ಟ ಗಾಯವಾಗಿರುವುದಾಗಿ ವರದಿಯಾಗಿದೆ. ಕುಂದಾಪುರ ಡಿಪೋಗೆ ಸೇರಿದ ಕೆಎಸ್‌ಆರ್ ಟಿಸಿ ಬಸ್ಸು ಇದಾಗಿದ್ದು, ಬಸ್ಸಿನ ಟಯರ್ ಸ್ಪೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಡಿವೈಡರ್‌ಗೆ ಡಿಕ್ಕಿಯಾಗಿದೆ

ಡಿವೈಡರ್ ಗೆ ಡಿಕ್ಕಿಹೊಡೆದ  ಬಸ್‍ | 13ಮಂದಿಗೆ ಗಂಭೀರ ಗಾಯ Read More »

ದ್ವೇಷ ಸಾಧಿಸಲು ಅಂಗಡಿಗೆ ನುಗ್ಗಿ ಬೆಂಕಿ ಹಚ್ಚಿದ್ದ ಪಾಪಿ : ಚಿಕಿತ್ಸೆ ಫಲಿಸದೆ ಮಹಿಳೆ ಸಾವು

ಕಾಸರಗೋಡು : ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಎದುರಿನ ಅಂಗಡಿಯವ ಸಾರ್ವಜನಿಕರೆದುರೇ ಬೆಂಕಿ ಹಚ್ಚಿದ ಪರಿಣಾಮ ಗಂಭೀರವಾದ ಸುಟ್ಟ ಗಾಯಗಳಾಗಿದ್ದ ಅಂಗಡಿ ಮಾಲಕಿ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೆ ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕುಂಬಳೆ ಸಮೀಪದ ಬೇಡಡ್ಕ ನಿವಾಸಿ ರಮಿತಾ (32) ಕೊಲೆಯಾಗಿರುವ ಮಹಿಳೆ. ತಮಿಳುನಾಡು ಮೂಲದ ರಾಮಾಮೃತಂ (57) ಎಂಬಾತ ಬೆಂಕಿ ಹಚ್ಚಿದ ಆರೋಪಿ. ರಮಿತಾ ಬೇಡಡ್ಕದ ಮನ್ನಡ್ಕ ಎಂಬಲ್ಲಿ ಸಣ್ಣ ಕಿರಾಣಿ ಅಂಗಡಿಯೊಂದನ್ನು ನಡೆಸುತ್ತಿದ್ದರು. ಅವರ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಆರೋಪಿ ರಾಮಾಮೃತಂ ಮಹಿಳೆಯ ಅಂಗಡಿಯ ಎದುರೇ

ದ್ವೇಷ ಸಾಧಿಸಲು ಅಂಗಡಿಗೆ ನುಗ್ಗಿ ಬೆಂಕಿ ಹಚ್ಚಿದ್ದ ಪಾಪಿ : ಚಿಕಿತ್ಸೆ ಫಲಿಸದೆ ಮಹಿಳೆ ಸಾವು Read More »

ಪಿಎಂಶ್ರೀ ವೀರಮಂಗಲ ಶಾಲೆಯಲ್ಲಿ ಡಾ. ಬಿ ಆರ್.  ಅಂಬೇಡ್ಕರ್ ಜಯಂತಿ ಆಚರಣೆ

ಪುತ್ತೂರು: ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಭೀಮಾರಾವ್ ಅಂಬೇಡ್ಕರ್ ರವರ 134 ನೆಯ ಜನ್ಮ ದಿನಾಚರಣೆಯನ್ನು ಆಚರಿಸಿ ಸಂವಿಧಾನ ಪೀಠಿಕೆಯನ್ನು ಓದಲಾಯಿತು. ಎಸ್. ಡಿ. ಎಂ. ಸಿ. ಅದಕ್ಷರಾದ ರವಿಚಂದ್ರ ಇವರು ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚಣೆಗೈದರು. ಶಾಲಾ ಮುಖ್ಯಗುರು ತಾರಾನಾಥ ಪಿ ಇವರು ಅಂಬೇಡ್ಕರ್ರವರ ಬಾಲ್ಯ ಜೀವನವನ್ನು ಅವರ ಶೈಕ್ಷಣಿಕ ಬದುಕನ್ನು ವಿವರಿಸಿದರು. ಸಂವಿಧಾನದ ದಾಖಲಿಸಿದ ಸಂಗತಿಗಳನ್ನು ವಿವರಿಸಲಾಯಿತು.  ಶಾಲಾ ಶಿಕ್ಷಕರಾದ ಹರಿಣಾಕ್ಷಿ, ಶೋಭಾ,ಶ್ರೀಲತಾ, ಕವಿತಾ,ಹೇಮಾವತಿ,ಶಿಲ್ಪರಾಣಿ, ಸೌಮ್ಯ ಉಪಸ್ಥಿತರಿದ್ದರು

ಪಿಎಂಶ್ರೀ ವೀರಮಂಗಲ ಶಾಲೆಯಲ್ಲಿ ಡಾ. ಬಿ ಆರ್.  ಅಂಬೇಡ್ಕರ್ ಜಯಂತಿ ಆಚರಣೆ Read More »

ಕಾರುಗಳ ನಡುವೆ ಅಪಘಾತ

ಪುತ್ತೂರು: ಕಾರು- ಕಾರುಗಳ ನಡುವೆ ಡಿಕ್ಕಿಯಾದ ಘಟನೆ ಕುಂಬ್ರ ಸಮೀಪದಲ್ಲಿ ನಡೆದಿದೆ. ಪುತ್ತೂರಿನಿಂದ ಮಡಿಕೇರಿ ಕಡೆ ತೆರಳುತ್ತಿದ್ದ ಸ್ವಿಫ್ಟ್ ಕಾರು ಹಾಗೂ ಪುತ್ತೂರು ಕಡೆಗೆ ಬರುತ್ತಿದ್ದ ಕಿಯಾ ಕಾರು ಮುಖಾಮುಖಿಯಾಗಿ ಡಿಕ್ಕಿಯಾಗಿದೆ. ಡಿಕ್ಕಿಯ ಪರಿಣಾಮ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳಕ್ಕೆ ಪೊಲೀಸರು ಬೇಟಿ ಪರಿಶೀಲನೆ ನಡೆಸಿದ್ದಾರೆ.

ಕಾರುಗಳ ನಡುವೆ ಅಪಘಾತ Read More »

error: Content is protected !!
Scroll to Top