ಲಾರಿ – ಗೂಡ್ಸ್ ವಾಹನಕ್ಕೆ ಡಿಕ್ಕಿ | ಡಿಕ್ಕಿಹೊಡೆದು ಲಾರಿ ಚಾಲಕ ಪರಾರಿ

ಬೆಳ್ತಂಗಡಿ: ಸುಲ್ಕೇರಿ ಗ್ರಾಮದ ನರ್ಸರಿ ಬಳಿ ಲಾರಿಯೊಂದು ಗೂಡ್ಸ್ ವಾಹನಕ್ಕೆ ಢಿಕ್ಕಿ ಹೊಡೆದ ಘಟನೆ ಎ. 24ರಂದು ಸುಲ್ಕೇರಿ ನರ್ಸರಿ ಬಳಿ ನಡೆದಿದೆ. ಲಾರಿ ಚಾಲಕನ ದುಡುಕುತನದಿಂದ ರಸ್ತೆಯ ಬಲಬದಿಗೆ ಚಲಾಯಿಸಿದ ಪರಿಣಾಮ ನಾರಾವಿ ಕಡೆಯಿಂದ ಬರುತ್ತಿದ್ದ ಕಾಯರ್ತಡ್ಕ ಗ್ರಾಮದ ಕಳಂಜ ಮರಕಡ ನಿವಾಸಿ ಗಣೇಶ್ ಗೌಡ (49ವ)ರವರ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಆ ನಂತರ ಲಾರಿ ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದಾರೆ. ಅಪಘಾತದಿಂದ ಗಣೇಶ್ ಗೌಡರ ವಾಹನ ಜಖಂಗೊಂಡಿದರ ಜೊತೆಗೆ ಗಾಯವಾಗಿದೆ ಎನ್ನಲಾಗಿದೆ. ಉಜಿರೆಯ ಖಾಸಗಿ […]

ಲಾರಿ – ಗೂಡ್ಸ್ ವಾಹನಕ್ಕೆ ಡಿಕ್ಕಿ | ಡಿಕ್ಕಿಹೊಡೆದು ಲಾರಿ ಚಾಲಕ ಪರಾರಿ Read More »

ಪಾಕ್‌ ಪ್ರಜೆಗಳ ಬಳಿಕ ಈಗ ಬಾಂಗ್ಲಾದೇಶದ ಪ್ರಜೆಗಳ ಗಡಿಪಾರು

550ಕ್ಕೂ ಅಧಿಕ ಬಾಂಗ್ಲಾದೇಶಿಯರ ಬಂಧನ; ಗಡಿಪಾರು ಮಾಡಲು ಕ್ರಮ ಹೊಸದಿಲ್ಲಿ: ಪಹಲ್ಗಾಮ್‌ ಉಗ್ರ ದಾಳಿಯ ಬಳಿಕ ಪಾಕಿಸ್ಥಾನಿ ಪ್ರಜೆಗಳಿಗೆ ದೇಶಬಿಟ್ಟು ಹೋಗಲು ಹೇಳಿದ ಬಳಿಕ ಈಗ ಬಾಂಗ್ಲಾದೇಶದ ಅಕ್ರಮ ಪ್ರಜೆಗಳಿಗೆ ಗೇಟ್‌ಪಾಸ್‌ ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯವಾದ ಗುಜರಾತಿನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶ ಪ್ರಜೆಗಳನ್ನು ಗುರುತಿಸುವ ಕಾರ್ಯಾಚರಣೆ ಪ್ರಾರಂಭಿಸಲಾಗಿದ್ದು, ಭಾರತದಿಂದ ಹೊರಗೆ ಕಳುಹಿಸಲು ಸಿದ್ಧತೆಗಳನ್ನು ನಡೆಸಿದೆ. ರಾಜ್ಯಾದ್ಯಂತ ನಡೆದ ಬೃಹತ್ ಕಾರ್ಯಾಚರಣೆಯಲ್ಲಿ, ನಕಲಿ ದಾಖಲೆಗಳೊಂದಿಗೆ ಭಾರತದಲ್ಲಿ ವಾಸಿಸುತ್ತಿರುವ 550ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಅಹಮದಾಬಾದ್

ಪಾಕ್‌ ಪ್ರಜೆಗಳ ಬಳಿಕ ಈಗ ಬಾಂಗ್ಲಾದೇಶದ ಪ್ರಜೆಗಳ ಗಡಿಪಾರು Read More »

ಉಡುಪಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್‌ ಬೆಂಕಿಗಾಹುತಿ

ಧಗಧಗನೇ ಉರಿದ ಬಸ್‌; 25 ಪ್ರಯಾಣಿಕರು ಅದೃಷ್ಟವಶಾತ್‌ ಪಾರು ಮಂಡ್ಯ: ಉಡುಪಿಯಿಂದ‌ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್‌ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಇಂದು ನಸುಕಿನ ಹೊತ್ತು ಮಂಡ್ಯದ ಬಳಿ ಸಂಭವಿಸಿದ್ದು, ಅದೃಷ್ಟವಶಾತ್‌ ಎಲ್ಲ ಪ್ರಯಾಣಿಕರು ಪಾರಾಗಿದ್ದಾರೆ. ಚಲಿಸುತ್ತಿರುವಾಗಲೇ ಬಸ್ಸಿನಲ್ಲಿ ಬೆಂಕಿ‌ ಕಾಣಿಸಿಕೊಂಡಿದ್ದು, ನೋಡು ನೋಡುತ್ತಿದ್ದಂತೆ ಬಸ್ ಧಗಧಗನೆ ಹೊತ್ತಿ ಉರಿದಿದೆ. ಚಾಲಕನ ಸಮಯ ಪ್ರಜ್ಞಯಿಂದಾಗಿ ಅದೃಷ್ಟವಶಾತ್ 25 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕದಬಹಳ್ಳಿ‌ ಬಳಿ ಈ ಘಟನೆ ಮುಂಜಾನೆ 5 ಗಂಟೆ

ಉಡುಪಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್‌ ಬೆಂಕಿಗಾಹುತಿ Read More »

ಮೋದಿಯವರೇ ದಯವಿಟ್ಟು ಪಾಕಿಸ್ಥಾನವನ್ನು ವಶಪಡಿಸಿಕೊಂಡು ನಮ್ಮನ್ನು ಸಾಲದ ಬಲೆಯಿಂದ ಪಾರು ಮಾಡಿ…

ಸಿಂಧೂ ನದಿ ಜಲ ಒಪ್ಪಂದ ರದ್ದಾದ ಬಳಿಕ ತಮ್ಮ ಸರಕಾರದ ಕಾಲೆಳೆದ ಪಾಕಿಸ್ಥಾನಿಯರು ಇಸ್ಲಾಮಾಬಾದ್‌: ನಾವು ಇನ್ನು ಸ್ನಾನಕ್ಕೂ ಭಾರತದ ಬಳಿ ನೀರಿಗಾಗಿ ಅಂಗಲಾಚಬೇಕಾಬಹುದು, ಮೋದಿಯವರೇ ಆದಷ್ಟು ಬೇಗ ದಾಳಿ ಮಾಡಿ ಪಾಕಿಸ್ಥಾನವನ್ನು ವಶಪಡಿಸಿಕೊಳ್ಳಿ. ಹೀಗಾದರೆ ಕನಿಷ್ಠ ಪಾಕಿಸ್ಥಾನ ಪ್ರಪಂಚದ ಅರ್ಧಕ್ಕೂ ಹೆಚ್ಚು ದೇಶಗಳಿಗೆ ಸಾಲ ಮರು ಪಾವತಿ ಮಾಡುವುದರಿಂದಲಾದರೂ ಬಚಾವಾಗಬಹದು… ಇದು ಪಾಕಿಸ್ಥಾನದ ಜನರು ಭಾರತದ ಪ್ರತಿಕಾರದ ಕ್ರಮಗಳ ಬಳಿಕ ತಮ್ಮ ದೇಶವನ್ನು ಟ್ರೋಲ್‌ ಮಾಡಿಕೊಂಡ ಪರಿ. ಪಹಲ್ಗಾಂವ್‌ ದಾಳಿಗೆ ಪ್ರತಿಕಾರವಾಗಿ ಐತಿಹಾಸಿಕ ಸಿಂಧೂ ಜಲ

ಮೋದಿಯವರೇ ದಯವಿಟ್ಟು ಪಾಕಿಸ್ಥಾನವನ್ನು ವಶಪಡಿಸಿಕೊಂಡು ನಮ್ಮನ್ನು ಸಾಲದ ಬಲೆಯಿಂದ ಪಾರು ಮಾಡಿ… Read More »

ವೈದ್ಯಾಧಿಕಾರಿ ಮೇಲೆ ಹಲ್ಲೆ : ಇಂದು ಮಹಿಳಾ ಠಾಣೆ ಎದುರು ಪ್ರತಿಭಟನೆ

ಪುತ್ತೂರು: ಶುಕ್ರವಾರ ನಡೆದ ವೈದ್ಯಾಧಿಕಾರಿ ಮೇಲಿನ ಹಲ್ಲೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸದ ಕಾರಣ ಇಂದು ಪುತ್ತೂರಿನಲ್ಲಿ ಅಗತ್ಯ ಸೇವೆಗಳು ಲಭ್ಯವಿರುದಿಲ್ಲ ಮತ್ತು ಆಸ್ಪತ್ರೆಗಳಲ್ಲಿ ತುರ್ತು ಸೇವೆಗಳು ಮುಂದುವರಿಯಲಿದೆ. ಈ ಕುರಿತು ಐಎಂಎ ನ ಕಾರ್ಯದರ್ಶಿ ಡಾ. ಗಣೇಶ್ ಪ್ರಸಾದ್‌ ಮುದ್ರಾಜೆ ಪ್ರಕಟಣೆ ನೀಡಿದ್ದಾರೆ. ಇಂದು ಬೆಳಿಗ್ಗೆ 10 ಗಂಟೆಗೆ ಪುತ್ತೂರು ಮಹಿಳಾ ಠಾಣೆಯ ಎದುರು ಪ್ರತಿಭಟನೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ವೈದ್ಯಾಧಿಕಾರಿ ಮೇಲೆ ಹಲ್ಲೆ : ಇಂದು ಮಹಿಳಾ ಠಾಣೆ ಎದುರು ಪ್ರತಿಭಟನೆ Read More »

ರಾಜ್ಯದಲ್ಲಿ ಇನ್ನು ಇರಲ್ಲ ಬೈಕ್‌ ಟ್ಯಾಕ್ಸಿ ಸೇವೆ

ರ‍್ಯಾಪಿಡೊ, ಉಬರ್​ ಬೈಕ್​ ಟ್ಯಾಕ್ಸಿ ಸೇವೆ ರದ್ದುಪಡಿಸಲು ಸರಕಾರ ಆದೇಶ ಬೆಂಗಳೂರು: ಹೈಕೋರ್ಟ್‌ ಆದೇಶವನ್ನು ಅನುಸರಿಸಿ ರಾಜ್ಯದಲ್ಲಿ ಕರ್ನಾಟಕದಲ್ಲಿ ರ‍್ಯಾಪಿಡೊ, ಉಬರ್​ ಬೈಕ್​ ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಸಾರಿಗೆ ಇಲಾಖೆಯ ಕಾರ್ಯದರ್ಶಿ ಮತ್ತು ಸಾರಿಗೆ ಇಲಾಖೆಯ ಆಯುಕ್ತರಿಗೆ ಪತ್ರ ಬರೆಯಲಾಗಿದ್ದು, ಹೈಕೋರ್ಟ್ ಆದೇಶ ಪಾಲಿಸುವಂತೆ ಸೂಚನೆ ನೀಡಿದ್ದಾರೆ. ಆ ಮೂಲಕ ರಾಜ್ಯದ ಆಟೋ ಮತ್ತು ಕ್ಯಾಬ್ ಚಾಲಕರ ಹಲವಾರು ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಮೋಟಾರ್

ರಾಜ್ಯದಲ್ಲಿ ಇನ್ನು ಇರಲ್ಲ ಬೈಕ್‌ ಟ್ಯಾಕ್ಸಿ ಸೇವೆ Read More »

ಇಂದು ಪೋಪ್‌ ಫ್ರಾನ್ಸಿಸ್‌ ಅಂತ್ಯಕ್ರಿಯೆ

ರಾಷ್ಟ್ರಪತಿ ದ್ರೌಪದಿ ಮುರ್ಮು, ಡೊನಾಲ್ಡ್‌ ಟ್ರಂಪ್‌ ಸಹಿತ ಗಣ್ಯರು ಭಾಗಿ ವ್ಯಾಟಿಕನ್ ಸಿಟಿ: ಕಳೆದ 21ರಂದು ನಿಧನರಾದ ಕ್ರೈಸ್ತರ ಪರಮೋಚ್ಚಗುರು ಪೋಪ್ ಫ್ರಾನ್ಸಿಸ್ (88) ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಸೇಂಟ್ ಪೀಟರ್ಸ್ ಸ್ಕ್ವಯರ್ ಪ್ರಾಂತ್ಯದ ಸಂತ ಮರಿಯಾ ಮಗೊಯ್ರ್‌ನಲ್ಲಿ ಶನಿವಾರ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲಿಯೇ ತಮ್ಮ ಅಂತ್ಯಕ್ರಿಯೆ ನಡೆಯಬೇಕು ಎಂಬುದು ಪೋಪ್ ಅವರ ಅಂತಿಮ ಇಚ್ಛೆಯಾಗಿತ್ತು. ಹಾಗಾಗಿ, ಅಲ್ಲಿಯೇ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ವ್ಯಾಟಿಕನ್ ಸಿಟಿ ತಿಳಿಸಿದೆ. ಪೋಪ್ ಅವರ ಪಾರ್ಥಿವ ಶರೀರವನ್ನು

ಇಂದು ಪೋಪ್‌ ಫ್ರಾನ್ಸಿಸ್‌ ಅಂತ್ಯಕ್ರಿಯೆ Read More »

ಕಾಶ್ಮೀರದ ಪಹಲ್ಗಾಮಾದಲ್ಲಿ ನಡೆದ ಹಿಂದೂಗಳ ಹತ್ಯೆ ಪ್ರಕರಣ ಖಂಡಿಸಿ ಬೆಳ್ಳಾರೆಯಲ್ಲಿ ಬೃಹತ್‍ ಪ್ರತಿಭಟನಾ ಮೆರವಣಿಗೆ | ಬೆಳ್ಳಾರೆ, ನಿಂತಿಕಲ್ಲು ಅಂಗಡಿ ಮಾಲಕರು, ಎಲ್ಲಾ ವಾಹನ ಚಾಲಕರು ಸಹಸ್ರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗಿ

ಬೆಳ್ಳಾರೆ: ದೇಶಭಕ್ತ ನಾಗರಿಕರು ಬೆಳ್ಳಾರೆ ವಲಯದಿಂದ ಕಾಶ್ಮೀರದ ಪಹಲ್ಗಾಮಾದಲ್ಲಿ ಉಗ್ರಗಾಮಿಗಳಿಂದ ಹತರಾದ ಹಿಂದೂ ಬಾಂಧವರಿಗೆ ಶ್ರದ್ಧಾಂಜಲಿ ಸಭೆ ಹಾಗೂ ಘಟನೆಯನ್ನು ಖಂಡಿಸಿ ಬೃಹತ್‍ ಪ್ರತಿಭಟನಾ ಮೆರವಣಿಗೆ ಬೆಳ್ಳಾರೆಯಲ್ಲಿ ಶುಕ್ರವಾರ ಸಂಜೆ ನಡೆಯಿತು. ಬೆಳ್ಳಾರೆ ಕೆಳಗಿನ ಪೇಟೆಯ ಶ್ರೀ ವೆಂಕಟ್ರಮಣ ದೇವಸ್ಥಾನದಿಂದ ಬಸ್‍ ನಿಲ್ದಾಣದ ವರೆಗೆ ನಾಗರಿಕರು ದೀಪ ಹಿಡಿದುಕೊಂಡು ಪ್ರತಿಭಟನಾ ಮೆರವಣಿಗೆ ನಡೆಸಿದರು.   ಸಾಮಾಜಿಕ ಕಾರ್ಯಕತ‍್ ಮೋಹನ್‍ ದಾಸ್‍ ಬಲ್ಕಾಡಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಬೆಳ್ಳಾರೆ ಮತ್ತು ನಿಂತಿಕಲ್ಲಿನ ಎಲ್ಲಾ ಅಂಗಡಿ ಮಾಲಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು

ಕಾಶ್ಮೀರದ ಪಹಲ್ಗಾಮಾದಲ್ಲಿ ನಡೆದ ಹಿಂದೂಗಳ ಹತ್ಯೆ ಪ್ರಕರಣ ಖಂಡಿಸಿ ಬೆಳ್ಳಾರೆಯಲ್ಲಿ ಬೃಹತ್‍ ಪ್ರತಿಭಟನಾ ಮೆರವಣಿಗೆ | ಬೆಳ್ಳಾರೆ, ನಿಂತಿಕಲ್ಲು ಅಂಗಡಿ ಮಾಲಕರು, ಎಲ್ಲಾ ವಾಹನ ಚಾಲಕರು ಸಹಸ್ರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗಿ Read More »

ಏ.27 : ಬಿಎಸ್‌ಎಫ್ ಕ್ಷೇಮಾಭಿವೃದ್ಧಿ ಸಂಘದ ರೂಪುರೇಶೆ ರಚನೆ ಕುರಿತು ಸಮಾರಂಭ | ಮಾಜಿ ಬಿಎಸ್‍ ಎಫ್‍ ಡೆಪ್ಯುಟಿ ಕಮಾಡೆಂಟ್‍ ಡಿ.ಚಂದಪ್ಪ ಮೂಲ್ಯ ಭಾಗಿ

ಪುತ್ತೂರು: ಕರಾವಳಿ ಪ್ರದೇಶದ ಮಾಜಿ ಬಿಎಸ್‌ಎಫ್ ಯೋಧರ ಮತ್ತು ಅವರ ಕುಟುಂಬಗಳ ಕ್ಷೇಮಾಭಿವೃದ್ಧಿ ಹಾಗೂ ಕಲ್ಯಾಣಕ್ಕಾಗಿ ಸರಕಾರದಿಂದ ಮಾಜಿ ಯೋಧರಿಗೆ ಮತ್ತು ವಿಧವೆಯರಿಗೆ ಸಿಗುವ ಸವಲತ್ತುಗಳನ್ನು ಒದಗಿಸುವ ಸದುದ್ದೇಶದಿಂದ, ಬಿಎಸ್‌ಎಫ್ ಕ್ಷೇಮಾಭಿವೃದ್ಧಿ ಸಂಘದ ರೂಪುರೇಶಗಳನ್ನು ರಚಿಸುವ ಉದ್ದೇಶದಿಂದ ಸಮಾರಂಭವನ್ನು ಏ.27 ಭಾನುವಾರ ಬಿ.ಸಿ.ರೋಡು ಲಯನ್ಸ್ ಸೇವಾ ಮಂದಿರದಲ್ಲಿ ಆಯೋಜಿಸಲಾಗಿದೆ. ಬೆಂಗಳೂರು ಮಾಜಿ ಬಿಎಸ್‍ ಎಫ್‍ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ, ಮಾಜಿ ಬಿಎಸ್‍ ಎಫ್‍ ಡೆಪ್ಯುಟಿ ಕಮಾಡೆಂಟ್‍ ಡಿ.ಚಂದಪ್ಪ ಮೂಲ್ಯ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಬಿ.ಸಿ.ರೋಡಿನ ಸಾಮಾಜಿಕ ಕಾರ್ಯಕರ್ತ,

ಏ.27 : ಬಿಎಸ್‌ಎಫ್ ಕ್ಷೇಮಾಭಿವೃದ್ಧಿ ಸಂಘದ ರೂಪುರೇಶೆ ರಚನೆ ಕುರಿತು ಸಮಾರಂಭ | ಮಾಜಿ ಬಿಎಸ್‍ ಎಫ್‍ ಡೆಪ್ಯುಟಿ ಕಮಾಡೆಂಟ್‍ ಡಿ.ಚಂದಪ್ಪ ಮೂಲ್ಯ ಭಾಗಿ Read More »

ಏ.27 : ವಾಸ್ತು ಬಗ್ಗೆ ಚಿಂತನ – ಮಂಥನ : ಪೂರ್ವಭಾವಿ ಸಭೆ

ಪುತ್ತೂರು: ಆನೆಗುಂದಿ ಗುರುಸೇವಾ ಪರಿಷತ್ ಮಹಾಮಂಡಲ ಪುತ್ತೂರು ವತಿಯಿಂದ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಏಪ್ರಿಲ್ 27ರಂದು ನಡೆಯಲಿರುವ ವಾಸ್ತು ಬಗ್ಗೆ ಚಿಂತನ – ಮಂಥನ 2025ರ ಪೂರ್ವಭಾವಿ ಸಭೆ ಮಂಗಳವಾರ ಬೊಳುವಾರಿನಲ್ಲಿ ನಡೆಯಿತು. ಮಹಾಮಂಡಲದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ಅವರು ವಾಸ್ತು ಬಗ್ಗೆ ಚಿಂತನ – ಮಂಥನ ಕಾರ್ಯಕ್ರಮದ ಮಾಹಿತಿ ನೀಡಲಿದ್ದಾರೆ.  ಬೆಳಿಗ್ಗೆ 10 ಗಂಟೆಗೆ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಕಾರ್ಯಕ್ರಮ ಆರಂಭವಾಗಲಿದೆ. ಸಂಪನ್ಮೂಲ ವ್ಯಕ್ತಿಯಾಗಿರುವ ವಾಸ್ತು ತಜ್ಞ ಎನ್. ಹರಿಶ್ಚಂದ್ರ ಆಚಾರ್ಯ ನೆಟ್ಟಣಿಗೆ ಅವರು ವಾಸ್ತುವಿನ

ಏ.27 : ವಾಸ್ತು ಬಗ್ಗೆ ಚಿಂತನ – ಮಂಥನ : ಪೂರ್ವಭಾವಿ ಸಭೆ Read More »

error: Content is protected !!
Scroll to Top