ಪಾಕಿಸ್ಥಾನದಲ್ಲಿ ತಾರಕಕ್ಕೇರಿದ ಯುದ್ಧ ಭೀತಿ : 36 ತಾಸಿನೊಳಗೆ ದಾಳಿ ಶುರುವಾಗಬಹುದು ಎಂದ ಸಚಿವ

ಮಧ್ಯರಾತ್ರಿ ಸುದ್ದಿಗೋಷ್ಠಿ ನಡೆಸಿದ ಪಾಕ್‌ ಸರಕಾರ ನವದೆಹಲಿ: ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತೀಕಾರ ಆಗಲೇಬೇಕು ಎಂದು ಭಾರತ ಪಣತೊಟ್ಟಿದೆ. ಭಾರತದ ಸಶಸ್ತ್ರ ಪಡೆಗಳಿಗೆ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಕಾರ್ಯಾಚರಣೆ ನಡೆಸಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಇದರ ಬೆನ್ನಿಗೆ ಪಾಕಿಸ್ಥಾನದಲ್ಲಿ ಯುದ್ಧ ಭೀತಿ ತಾರಕಕ್ಕೇರಿದೆ. ಸ್ವತಹ ಪಾಕಿಸ್ಥಾನದ ಸಚಿವರೇ 36 ತಾಸಿನೊಳಗೆ ನಮ್ಮ ಮೇಲೆ ದಾಳಿಯಾಗಬಹುದು ಎಂದು ಹೇಳಿಕೊಂಡಿದ್ದಾರೆ. ಭಯೋತ್ಪಾದನೆಗೆ ತಕ್ಕ ಹೊಡೆತ ನೀಡುವುದು ನಮ್ಮ ರಾಷ್ಟ್ರೀಯ ಸಂಕಲ್ಪ ಎಂದು ಪ್ರಧಾನಿ ಪುನರುಚ್ಚರಿಸಿದ್ದಾರೆ. ಭಾರತೀಯ ಸೇನೆಯಲ್ಲಿ ನನಗೆ […]

ಪಾಕಿಸ್ಥಾನದಲ್ಲಿ ತಾರಕಕ್ಕೇರಿದ ಯುದ್ಧ ಭೀತಿ : 36 ತಾಸಿನೊಳಗೆ ದಾಳಿ ಶುರುವಾಗಬಹುದು ಎಂದ ಸಚಿವ Read More »

ಕುಡುಪು ಕೊಲೆ ಪ್ರಕರಣ : ಯುವಕನ ಶವ ಹಸ್ತಾಂತರ

ಇನ್‌ಸ್ಪೆಕ್ಟರ್‌ ವಿರುದ್ಧ ಕರ್ತವ್ಯ ಲೋಪ ಆರೋಪ – ಉನ್ನತ ತನಿಖೆಗೆ ಒತ್ತಾಯ ಮಂಗಳೂರು: ಕುಡುಪು ಭಟ್ರ ಕಲ್ಲುರ್ಟಿ ದೈವಸ್ಥಾಣದ ಸಮೀಪ ಕೊಲೆಯಾದ ಕೇರಳದ ಯುವಕನ ಶವವನ್ನು ಆತನ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಕೇರಳದ ವಯನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿ ತಾಲೂಕಿನ ಪುಲಪಳ್ಳಿ ನಿವಾಸಿಯಾಗಿದ್ದ ಯುವಕ ಅಶ್ರಫ್‌ ಎಂಬಾತ ಏ.27ರಂದು ಯುವಕರ ಗುಂಪಿನ ಹೊಡೆತಕ್ಕೆ ಸಿಕ್ಕಿ ಸಾವಿಗೀಡಾಗಿದ್ದಾನೆ. ಮಂಗಳೂರಿನ ವೆನ್‌ಲಾಕ್ ಶವಾಗಾರದಲ್ಲಿದ್ದ ಅಶ್ರಫ್‌ನ ಮೃತದೇಹವನ್ನು ಅವನ ಕುಟುಂಬಸ್ಥರು ಗುರುತಿಸಿ ಪೊಲೀಸರಿಂದ ಪಡೆದುಕೊಂಡಿದ್ದಾರೆ. ಮಧ್ಯರಾತ್ರಿ ಕೇರಳದಿಂದ

ಕುಡುಪು ಕೊಲೆ ಪ್ರಕರಣ : ಯುವಕನ ಶವ ಹಸ್ತಾಂತರ Read More »

ದೇವಸ್ಥಾನದ ಗೋಡೆ ಕುಸಿದು 8 ಮಂದಿ ಸಾವು

ಉತ್ಸವದ ವೇಳೆಯೇ ಭಾರಿ ಗಾಳಿ-ಮಳೆಗೆ ಕುಸಿದ ಗೋಡೆ ಹೈದರಾಬಾದ್‌: ಆಂಧ್ರ ಪ್ರದೇಶದ ವಿಶಾಖಪಟ್ಟಣದ ಸಿಂಹಾಚಲಂನಲ್ಲಿರುವ ಸಿಂಹಾದ್ರಿ ಅಪ್ಪಣ್ಣಸ್ವಾಮಿ ದೇವಸ್ಥಾನದ ಗೋಡೆ ಕುಸಿದು ಎಂಟು ಜನರು ಸಾವನ್ನಪ್ಪಿರುವ ಘಟನೆ ಬುಧವಾರ ಮುಂಜಾನೆ ವೇಳೆ ಸಂಭವಿಸಿದೆ. ದೇವಸ್ಥಾನದಲ್ಲಿ ನಡೆಯುತ್ತಿದ್ದ ಚಂದನೋತ್ಸವಂ ವೇಳೆ ಈ ಅವಘಡ ಸಂಭವಿಸಿದೆ. ಇಂದು ಬೆಳಗ್ಗೆ ಚಂದನೋತ್ಸವದಲ್ಲಿ ವರಾಹ ಲಕ್ಷ್ಮೀ ನರಸಿಂಹಸ್ವಾಮಿಯ ನಿಜರೂಪ ದರ್ಶನಕ್ಕಾಗಿ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ಇದೇ ವೇಳೆ ದೇವಸ್ಥಾನದಲ್ಲಿ ಇತ್ತೀಚಿಗೆ ನಿರ್ಮಿಸಲಾಗಿದ್ದ 20 ಅಡಿ ಉದ್ದದ ಹೊಸ ಗೋಡೆಯೊಂದು ಕುಸಿದಿದೆ. ಪರಿಣಾಮ

ದೇವಸ್ಥಾನದ ಗೋಡೆ ಕುಸಿದು 8 ಮಂದಿ ಸಾವು Read More »

ಕ್ರಿಕೆಟ್‌ ಪಂದ್ಯಾಟದ ವೇಳೆ ಯುವಕನ ಹತ್ಯೆ : 20 ಮಂದಿ ಬಂಧನ

ಕೊನೆಗೂ ಕುಡುಪು ಕೊಲೆ ರಹಸ್ಯ ಬೇಧಿಸಿದ ಪೊಲೀಸರು ಮಂಗಳೂರು : ಕುಡುಪು ಭಟ್ರ ಕಲ್ಲುರ್ಟಿ ದೈವಸ್ಥಾನ ಸಮೀಪ ಅಪರಿಚಿತ ಯುವಕನ್ನು ಹೊಡೆದು ಸಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ 20 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕ್ರಿಕೆಟ್‌ ಪಂದ್ಯಾಟ ನಡೆಯುತ್ತಿರುವಾಗ ಈ ವ್ಯಕ್ತಿ ಮಧ್ಯೆ ಬಂದು ಕಿರಿಕ್‌ ಮಾಡಿದಾಗ ಯುವಕರ ಗುಂಪು ಕೆರಳಿ ಅವನನ್ನು ಹಿಗ್ಗಾಮುಗ್ಗಾ ಥಳಿಸಿದೆ. ಈ ಹೊಡೆತಗಳಿಂದ ಸಾವು ಸಂಭವಿಸಿದೆ ಎಂದು ವಿಧಿವಿಜ್ಞಾನ ವರದಿ ದೃಢಪಡಿಸಿದೆ. ಏ.27ರಂದು ಸಂಜೆ ನಿರ್ಜನ ಸ್ಥಳದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಯುವಕನ ಮೃತದೇಹ

ಕ್ರಿಕೆಟ್‌ ಪಂದ್ಯಾಟದ ವೇಳೆ ಯುವಕನ ಹತ್ಯೆ : 20 ಮಂದಿ ಬಂಧನ Read More »

ಹೋಟೆಲ್‌ನಲ್ಲಿ ಭೀಕರ ಬೆಂಕಿ ಅವಘಡ : 15 ಮಂದಿ ಜೀವಂತ ದಹನ

ಕೋಲ್ಕತ್ತಾ: ಕೋಲ್ಕತ್ತಾದ ಬುರ್ರಾಬಜಾರ್​ನಲ್ಲಿರುವ ಹೋಟೆಲ್​ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 15 ಮಂದಿ ಜೀವಂತ ಸುಟ್ಟು ಕರಕಲಾಗಿರುವ ಘಟನೆ ಸಂಭವಿಸಿದೆ. ಅನೇಕ ಮಂದಿಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹಣ್ಣಿನ ಮಾರುಕಟ್ಟೆ ಪ್ರದೇಶದಲ್ಲಿರುವ ಹೋಟೆಲ್ ರಿತುರಾಜ್‌ನಲ್ಲಿ ನಿನ್ನೆ ರಾತ್ರಿ 8.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಹೋಟೆಲ್ ಸಿಬ್ಬಂದಿಯೊಬ್ಬರು ಮಹಡಿಯಿಂದ ಹಾರಿ ಸಾವನ್ನಪ್ಪಿದ್ದಾರೆ. ಹೋಟೆಲ್‌ನಿಂದ 15 ಶವಗಳನ್ನು ಹೊರತೆಗೆಯಲಾಗಿದ್ದು, ಹಲವರನ್ನು ರಕ್ಷಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಮನೋಜ್ ವರ್ಮಾ ತಿಳಿಸಿದ್ದಾರೆ. ಕೋಲ್ಕತ್ತ ನಗರದ ಹಳೆ

ಹೋಟೆಲ್‌ನಲ್ಲಿ ಭೀಕರ ಬೆಂಕಿ ಅವಘಡ : 15 ಮಂದಿ ಜೀವಂತ ದಹನ Read More »

ಪತಿಯ ತಿಥಿಯ ದಿನವೇ ಪತ್ನಿ ಅಸ್ವಸ್ಥಗೊಂಡು ನಿಧನ

ಸುಳ್ಯ; ಪತಿಯ ತಿಥಿಯ ದಿನವೇ ಪತ್ನಿ ಅಸ್ವಸ್ಥಗೊಂಡು ನಿಧನ ಹೊಂದಿರುವ ಘಟನೆ ಕನಕಮಜಲಿನಲ್ಲಿ ನಡೆದಿದೆ. ಕನಕಮಜಲು ಗ್ರಾಮದ ನೆಡಿಲು ಸೋಮಪ್ಪ ಗೌಡರು ಏ.17 ರಂದು ನಿಧನ ಹೊಂದಿದ್ದರು. ಹನ್ನೊಂದನೇ ದಿನದ ಕಾರ್ಯಕ್ರಮ ಏ. 28 ರಂದು ನಡೆಯುತ್ತಿತ್ತು. ಕಾರ್ಯಕ್ರಮ ನಡೆಯುತ್ತಿರುವಾಗಲೇ ಮಧ್ಯಾಹ್ನದ ವೇಳೆಗೆ ಪತ್ನಿ ಸುಬ್ಬಕ್ಕೆ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ, ಕೂಡಲೇ ಸುಳ್ಯ ಆಸ್ಪತ್ರೆಗೆ ಕರೆತಂದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ. ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಪತಿಯ ತಿಥಿಯ ದಿನವೇ ಪತ್ನಿ ಅಸ್ವಸ್ಥಗೊಂಡು ನಿಧನ Read More »

ಕಾರಂತರು ಶಿಸ್ತು, ಸಮಯ ಪ್ರಜ್ಞೆಗೆ ಹೆಸರುವಾಸಿ : ಕೋಟ ಶ್ರೀನಿವಾಸ ಪೂಜಾರಿ | ವಿವೇಕಾನಂದ ಕಾಲೇಜಿನಲ್ಲಿ ವಿಚಾರ ಗೋಷ್ಠಿ

ಪುತ್ತೂರು: ಕಾರಂತರು ಒಂದು ತುಂಬಿದ ಕೊಡವಿದ್ದಂತೆ. ಅವರು ಎಂದೂ ಪ್ರಶಸ್ತಿಯ ಹಿಂದೆ ಹೋದವರಲ್ಲ. ಕಾರಂತರಲ್ಲಿ ಹಾಸ್ಯ ಪ್ರಜ್ಞೆಯೂ ಇತ್ತು. ಅವರು ಬಹಳ ನೇರವಾಗಿ ಮಾತನಾಡುವ ವ್ಯಕ್ತಿ. ಕಾರಂತರ ವಿಚಾರಗಳನ್ನು ಮುಂದಿನ ಜನಾಂಗಕ್ಕೆ ತಿಳಿಸುವುದು ಅವಶ್ಯ ಎಂದು ಉಡುಪಿ ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಮಂಗಳವಾರ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ (ಸ್ವಾಯತ್ತ) ವಿವೇಕಾನಂದ ಸಂಶೋಧನಾ ಕೇಂದ್ರ, ಡಾ.ಕೆ ಶಿವರಾಮ ಕಾರಂತ ಅಧ್ಯಯನ ಕೇಂದ್ರ, ಕನ್ನಡ ವಿಭಾಗ ಮತ್ತು ಐಕ್ಯುಎಸಿ ಸಹಯೋಗದಲ್ಲಿ

ಕಾರಂತರು ಶಿಸ್ತು, ಸಮಯ ಪ್ರಜ್ಞೆಗೆ ಹೆಸರುವಾಸಿ : ಕೋಟ ಶ್ರೀನಿವಾಸ ಪೂಜಾರಿ | ವಿವೇಕಾನಂದ ಕಾಲೇಜಿನಲ್ಲಿ ವಿಚಾರ ಗೋಷ್ಠಿ Read More »

ಎಂಡಿ ಹೋಮಿಯೋಪಥಿ ಪರೀಕ್ಷೆಯಲ್ಲಿ ಶ್ರೀವಿದ್ಯಾ ಭಟ್‍ ವಿವಿಗೆ 8ನೇ ರ‍್ಯಾಂಕ್

ಪುತ್ತೂರು: ಶ್ರೀವಿದ್ಯಾ ಭಟ್ ಅವರು ಎಂಡಿ ಹೋಮಿಯೋಪಥಿ ಪರೀಕ್ಷೆಯಲ್ಲಿ ವಿಶ್ವವಿದ್ಯಾನಿಲಯಕ್ಕೆ  8ನೇ ರ‍್ಯಾಂಕ್ ಗಳಿಸಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಲ್ಲಿ ನಡೆದ ಅರ್ಗನಾನ್ ಆಫ್ ಮೆಡಿಸಿನ್ ಮತ್ತು ಹೋಮಿಯೋಪಥಿ ಫಿಲಾಸಫಿ ವಿಷಯದ ಎಂಡಿ ಹೋಮಿಯೋಪಥಿ ಪರೀಕ್ಷೆಯಲ್ಲಿ ವಿಶ್ವವಿದ್ಯಾನಿಲಯಕ್ಕೆ  8ನೇ ರ‍್ಯಾಂಕ್ ಗಳಿಸಿದ್ದಾರೆ ಅವರು ಪುತ್ತೂರು ಬೆದ್ರಾಳ ನಿವಾಸಿ ಮನ್ವಿತ್ ಕುಮಾರ್ ಅವರ ಪತ್ನಿ , ಪಳ್ಳ ಮುಳ್ಳೇರಿಯ ನಿವಾಸಿ  ದಿ. ಶ್ರೀಮನ್ನಾರಾಯಣ ಭಟ್ ಹಾಗೂ ಸರಸ್ವತಿ ದಂಪತಿ ಪುತ್ರಿ

ಎಂಡಿ ಹೋಮಿಯೋಪಥಿ ಪರೀಕ್ಷೆಯಲ್ಲಿ ಶ್ರೀವಿದ್ಯಾ ಭಟ್‍ ವಿವಿಗೆ 8ನೇ ರ‍್ಯಾಂಕ್ Read More »

ಚಲಿಸುತ್ತಿದ್ದ ಕಾರಿನಲ್ಲಿ ಯುವಕರಿಂದ ಅಪಾಯಕಾರಿ ಸ್ಟಂಟ್ : ಪ್ರಕರಣ ದಾಖಲು..!!

ಕಡಬ : ಚಲಿಸುತ್ತಿದ್ದ ಕಾರಿನಲ್ಲಿ ಬಾಗಿಲು ಹಾಗೂ  ಕಾರಿನ ಮೇಲ್ಬಾಗದಲ್ಲಿ ಕುಳಿತು ಹರಸಾಹಸವನ್ನು ಮಾಡುತ್ತಾ ಚಲಿಸುತ್ತಿದ್ದ ಇತರ ವಾಹನಗಳ ಸಂಚಾರಕ್ಕೆ ತೊಂದರೆಯನ್ನುಂಟು ಮಾಡಿ ಹುಚ್ಚಾಟ ಮೆರೆದ ಘಟನೆ ಎ. 27 ಭಾನುವಾರದಂದು ರಾತ್ರಿ ಕಡಬದಲ್ಲಿ ನಡೆದಿದೆ. ಕಡಬ-ಉಪ್ಪಿನಂಗಡಿ ರಾಜ್ಯ ರಸ್ತೆಯಲ್ಲಿ ಕಡಬದಿಂದ ಅಲಂಕಾರು ತನಕ 15 ಕಿ.ಮೀ. ದೂರ ಹಲವು ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ಕರ್ಕಶವಾಗಿ ನಿರಂತರ ಹಾರ್ನ್ ಹಾಕುತ್ತಾ ಸಂಚಾರ ನಿಯಮವನ್ನು  ಉಲ್ಲಂಘಿಸಿ ವಾಹನ ಚಲಾಯಿಸಿರುವಂತಹ ಆರೋಪಗಳು ಸಾರ್ವಜನಿಕರಿಂದ ಕೇಳಿ ಬಂದಿದೆ. ಇದಕ್ಕೆ ಪೂರಕ

ಚಲಿಸುತ್ತಿದ್ದ ಕಾರಿನಲ್ಲಿ ಯುವಕರಿಂದ ಅಪಾಯಕಾರಿ ಸ್ಟಂಟ್ : ಪ್ರಕರಣ ದಾಖಲು..!! Read More »

ಮೇ 1 : ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ನವೀಕೃತ ಮಳಿಗೆಯ ಉದ್ಘಾಟನಾ ಸಮಾರಂಭದ ಪ್ರಯುಕ್ತ ಕಾರ್ಮಿಕ ದಿನಾಚರಣೆ

ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ನವೀಕೃತ ಮಳಿಗೆಯ ಉದ್ಘಾಟನಾ ಸಮಾರಂಭದ ಪ್ರಯುಕ್ತ ಸ್ವಚ್ಚ ಪುತ್ತೂರು ಕಾರ್ಯಕ್ರಮದ  ಅಂಗವಾಗಿ ಕಾರ್ಮಿಕ ದಿನಾಚರಣೆ ಮೇ 1 ರಂದು ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಸಭಾಂಗಣದಲ್ಲಿ ಜರಗಲಿರುವುದು. ಕಾರ್ಯಕ್ರಮದಲ್ಲಿ  ಪೌರಕಾರ್ಮಿಕರಿಗೆ ಹಾಗೂ ನಗರಸಭೆ ಸಿಬ್ಬಂದಿಗಳಿಗೆ ಅಧಿಕಾರಿಗಳು ಮತ್ತು ಸರ್ವ ಸದಸ್ಯರಿಗೆ ಗೌರವಾರ್ಪಣೆ  ಕಾರ್ಯಕ್ರಮ ಜರಗಲಿದೆ. ಸ್ವಚ್ಚ ಪುತ್ತೂರು ಯೋಜನೆಯಲ್ಲಿ ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಸಂಸ್ಥೆಯು ಪ್ರಮುಖ ಪಾತ್ರ ವಹಿಸಿರುವುದರಿಂದ  ಈ ಯೋಜನೆಯ ಭಾಗೀದಾರರು  ಎಂಬ ನೆಲೆಯಲ್ಲಿ ನಗರಸಭೆಗೆ ಸಂಬಂಧಿಸಿದವರನ್ನು ಗೌರವಿಸಲು ಈ

ಮೇ 1 : ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ನವೀಕೃತ ಮಳಿಗೆಯ ಉದ್ಘಾಟನಾ ಸಮಾರಂಭದ ಪ್ರಯುಕ್ತ ಕಾರ್ಮಿಕ ದಿನಾಚರಣೆ Read More »

error: Content is protected !!
Scroll to Top