ರೋಹಿತ್‌ ಶರ್ಮಾ ಬೆನ್ನಲ್ಲೇ ವಿರಾಟ್‌ ಕೊಹ್ಲಿ ಟೆಸ್ಟ್‌ಗೆ ವಿದಾಯ

ನಿರ್ಧಾರ ಪನರ್‌ ಪರಿಶೀಲಿಸಲು ಬಿಸಿಸಿಐ ಮನವಿ ಮುಂಬಯಿ: ರೋಹಿತ್‌ ಶರ್ಮ ಬಳಿಕ ವಿರಾಟ್‌ ಕೊಹ್ಲಿ ಕೂಡ ಟಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಲು ಮುಂದಾಗಿದ್ದಾರೆ. ತನ್ನ ನಿರ್ಧಾರವನ್ನು ಈಗಾಗಲೇ ಬಿಸಿಸಿಐಗೆ ತಿಳಿಸಿದ್ದು, ಆದರೆ ಬಿಸಿಸಿಐ ನಿವೃತ್ತಿ ನೀಡಲು ಒಪ್ಪದೆ ನಿರ್ಧಾರ ಪುನಃಪರಿಶೀಲಿಸಲು ಕೇಳಿಕೊಂಡಿದೆ ಎನ್ನಲಾಗಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಜೂನ್ 20ರಿಂದ ಶುರುವಾಗಲಿದೆ. ಈ ಸರಣಿಗೂ ಮುನ್ನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಇದರ ಬೆನ್ನಲ್ಲೇ ವಿರಾಟ್ […]

ರೋಹಿತ್‌ ಶರ್ಮಾ ಬೆನ್ನಲ್ಲೇ ವಿರಾಟ್‌ ಕೊಹ್ಲಿ ಟೆಸ್ಟ್‌ಗೆ ವಿದಾಯ Read More »

ಹೊಸತನದೊಂದಿಗೆ ಮುಳಿಯ |  ಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ

ಮುಳಿಯ ನೂತನ ನವೀಕೃತ ವಿಸ್ತೃತ  ಆಭರಣ ಮಳಿಗೆಯ ಅನಾವರಣ ಪ್ರಯುಕ್ತ ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆಯನ್ನು ಸೃಷ್ಟಿಸಿದೆ. ಈ ಪ್ರಯುಕ್ತ ಮೇ.11 ರಂದು  ಪುತ್ತೂರಿನ ಸುಲೋಚನಾ ಟವರ್ಸ್‌ನ ಅಪರಂಜಿ ರೂಫ್‌ ಗಾರ್ಡನ್‌ 3 ನೇ ಮಹಡಿಯಲ್ಲಿ ವಿವಿಧ ಕೃಷಿ ವಿಷಯಗಳು ಹಾಗೂ ಕೃಷಿ ಮಾರುಕಟ್ಟೆಯನ್ನು ಕೇಂದ್ರೀಕರಿಸಿ ಕೃಷಿ ಗೋಷ್ಟಿ ನಡೆಯಲಿದೆ ಎಂದು ಮುಳಿಯ ಗೋಲ್ಡ್‌ ಮತ್ತು ಡೈಮಂಡ್‌ ಆಡಳಿತ ಮಂಡಳಿಯ ಕೇಶವ ಪ್ರಸಾದ್‌ ಮುಳಿಯ ಹಾಗೂ ಕೃಷ್ಣ ನಾರಾಯಣ ಮುಳಿಯ ತಿಳಿಸಿದ್ದಾರೆ. ಕರಾವಳಿ ಜಿಲ್ಲೆಯ ಆರ್ಥಿಕ ವ್ಯವಹಾರದಲ್ಲಿ

ಹೊಸತನದೊಂದಿಗೆ ಮುಳಿಯ |  ಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ Read More »

ಪಾಕ್‌ ಶೆಲ್‌ ದಾಳಿಯಲ್ಲಿ ಭಾರತದ ಅಧಿಕಾರಿ ಸಾವು; ಇಬ್ಬರಿಗೆ ಗಂಭೀರ ಗಾಯ

ಯುದ್ಧದ ಕರ್ತವ್ಯದಲ್ಲಿದ್ದ ಅಧಿಕಾರಿಗೆ ಬಡಿದ ಶೆಲ್‌ ಶ್ರೀನಗರ: ಕಾಶ್ಮೀರದ ರಾಜೋರಿ ಜಿಲ್ಲೆಯಲ್ಲಿ ಪಾಕಿಸ್ಥಾನ ನಾಗರಿಕರ ಮೇಲೆ ಶನಿವಾರ ಮುಂಜಾನೆ ನಡೆಸಿದ ಶೆಲ್‌ ದಾಳಿಯಲ್ಲಿ ಸರಕಾರಿ ಅಧಿಕಾರಿಯೊಬ್ಬರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜಿಲ್ಲಾ ಹೆಚ್ಚುವರಿ ಅಭಿವೃದ್ಧಿ ಆಯುಕ್ತ ರಾಜ್‌ಕುಮಾರ್‌ ಥಾಪಾ ಎಂಬವರು ಮೃತಪಟ್ಟು ಅವರ ಕಚೇರಿಯ ಇಬ್ಬರು ಸಿಬ್ಬಂದಿ ಶೆಲ್‌ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಸರಕಾರ ತಿಳಿಸಿದೆ. ಶೆಲ್‌ ಬಡಿದಾಗ ಥಾಪಾ ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಕೂಡಲೇ ಸರಕಾರಿ ಮೆಡಿಕಲ್‌ ಕಾಲೇಜಿಗೆ ದಾಖಲಿಸಿದರೂ ಥಾಪಾ

ಪಾಕ್‌ ಶೆಲ್‌ ದಾಳಿಯಲ್ಲಿ ಭಾರತದ ಅಧಿಕಾರಿ ಸಾವು; ಇಬ್ಬರಿಗೆ ಗಂಭೀರ ಗಾಯ Read More »

ಪರಮಾಣು ಬಾಂಬ್‌ ಬಳಕೆಗೆ ಮುಂದಾಯಿತೇ ಪಾಕ್‌?

ದೆಹಲಿಯತ್ತ ಬ್ಯಾಲಿಸ್ಟಿಕ್‌ ಮಿಸೈಲ್‌ ಪ್ರಯೋಗ ಇಸ್ಲಾಮಾಬಾದ್‌: ಭಾರತದ ದಾಳಿಗೆ ತತ್ತರಿಸಿದ ಪಾಕಿಸ್ಥಾನ ಈಗ ಪರಮಾಣು ಶಸ್ತ್ರಾಸ್ತ್ರ ಬಳಕೆಯ ಬಗ್ಗೆ ನಿರ್ಧಾರ ಕೈಗೊಳ್ಳುವ ತುರ್ತು ಸಭೆ ಕರೆದಿದೆ. ಪ್ರಧಾನಿ ಶೆಹಬಾಜ್ ಷರೀಫ್ ನ್ಯಾಶನಲ್‌ ಕಮಾಂಡ್‌ ಅಥಾರಿಟಿ ತುರ್ತು ಸಭೆಯನ್ನು ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ನ್ಯಾಶನಲ್‌ ಕಮಾಂಡ್‌ ಅಥಾರಿಟಿ ಪಾಕಿಸ್ಥಾನದ ಪರಮಾಣು ಶಸ್ತ್ರಾಸ್ತ್ರಗಳ ನಿಯಂತ್ರಣ ಮತ್ತು ಕಾರ್ಯಾಚರಣೆಯ ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಸ್ಥೆಯಾಗಿದೆ. ಯುದ್ಧದ ಸಂದರ್ಭದಲ್ಲಿ ಮಾತ್ರ ಈ ಸಭೆಯನ್ನು ಕರೆಯಲಾಗುತ್ತದೆ. ಭಾರತ ಮತ್ತು ಪಾಕಿಸ್ಥಾನ ಎರಡೂ ಪರಮಾಣು

ಪರಮಾಣು ಬಾಂಬ್‌ ಬಳಕೆಗೆ ಮುಂದಾಯಿತೇ ಪಾಕ್‌? Read More »

ಯುವಕನೋರ್ವನನ್ನು ಮನೆ ಅಂಗಳದಲ್ಲೇ ಇರಿದು ಹತ್ಯೆ

ನೆಲ್ಯಾಡಿ: ಯುವಕನೋರ್ವನನ್ನು ಮನೆ ಅಂಗಳದಲ್ಲೇ ಇರಿದು ಹತ್ಯೆ ನಡೆಸಿದ ಘಟನೆ ನೆಲ್ಯಾಡಿಯ ಮಾದೇರಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಮೃತ ಯುವಕನನ್ನು ಮಾದೇರಿ ನಿವಾಸಿ ಶರತ್ ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎಂದು ಹೇಳಲಾಗಿದೆ. ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.

ಯುವಕನೋರ್ವನನ್ನು ಮನೆ ಅಂಗಳದಲ್ಲೇ ಇರಿದು ಹತ್ಯೆ Read More »

ನೆಲ್ಯಾಡಿಯಲ್ಲಿ ಮನೆಯಂಗಳದಲ್ಲೇ ಯುವಕನ ಕೊಲೆ

ನೆಲ್ಯಾಡಿ : ಮನೆಯಂಗಳದಲ್ಲೇ ಚಾಕುವಿನಿಂದ ಇರಿದು ಯುವಕನನ್ನು ಹತ್ಯೆ ಮಾಡಿದ ಘಟನೆ ಶುಕ್ರವಾರ ರಾತ್ರಿ ನೆಲ್ಯಾಡಿ ಹೊರಠಾಣೆ ವ್ಯಾಪ್ತಿಯ ಮಾದೇರಿ ಸಮೀಪ ನಡೆದಿದೆ. ಮೃತ ಯುವಕನನ್ನು ಮಾದೇರಿ ನಿವಾಸಿ ಶರತ್ ಎಂದು ಗುರುತಿಸಲಾಗಿದೆ. ಮನೆಯ ಅಂಗಳದಲ್ಲಿ ಶರತ್‌ನನ್ನು ಚಾಕುವಿನಿಂದ ಇರಿದು ಕೊಲೆಗೈಯಲಾಗಿದ್ದು, ಕೌಟುಂಬಿಕ ಕಲಹ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನೆಲ್ಯಾಡಿಯಲ್ಲಿ ಮನೆಯಂಗಳದಲ್ಲೇ ಯುವಕನ ಕೊಲೆ Read More »

ಮೇ 15ರ ತನಕ 32 ವಿಮಾನ ನಿಲ್ದಾಣಗಳು ಬಂದ್‌

ಗಡಿಭಾಗದಲ್ಲಿರುವ ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಸ್ಥಗಿತ ನವದೆಹಲಿ : ಭಾರತ ಮತ್ತು ಪಾಕಿಸ್ಥಾನ ನಡುವೆ ಉದ್ವಿಗ್ನ ಪರಿಸ್ಥಿತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೇ 15ರ ಬೆಳಗ್ಗೆ 5.29ರವರೆಗೆ ದೇಶಾದ್ಯಂತ 32 ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲು ಸರಕಾರ ಆದೇಶಿಸಿದೆ. ಪಾಕಿಸ್ಥಾನ ನಡೆಸುತ್ತಿರುವ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರಕಾರ ಹೇಳಿದೆ. ಈ ಹಿಂದೆ ಮೇ 10ರ ವರೆಗೆ ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವ ತೀರ್ಮಾನ ಘೋಷಿಸಲಾಗಿತ್ತು. ಇದೀಗ ಪರಿಸ್ಥಿತಿ ಬಿಗಡಾಯಿಸಿರುವ ಕಾರಣ

ಮೇ 15ರ ತನಕ 32 ವಿಮಾನ ನಿಲ್ದಾಣಗಳು ಬಂದ್‌ Read More »

ಪಾಕಿಸ್ಥಾನದ ಮೂರು ವಾಯುನೆಲೆಗಳನ್ನು ಧ್ವಂಸ ಮಾಡಿದ ಭಾರತ : ಅಪಾರ ಶಸ್ತ್ರಾಸ್ತ್ರ ನಾಶ

ಗಡಿ ಭಾಗದಲ್ಲಿ ನಿನ್ನೆ ರಾತ್ರಿ ಭಾರಿ ಸಮರ ಡ್ರೋನ್‌, ಕ್ಷಿಪಣಿ ದಾಳಿ ಮಾಡಿದ ಪಾಕ್‌ ನವದೆಹಲಿ : ಪಾಕಿಸ್ಥಾನದ ಮೂರು ಪ್ರಮುಖ ವಾಯುನೆಲೆಗಳಿಗೆ ಭಾರತ ನಿನ್ನೆ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ದಾಳಿ ಮಾಡಿ ಭಾರಿ ಹಾನಿ ಉಂಟು ಮಾಡಿದೆ. ರಾವಲ್ಪಿಂಡಿಯ ನೂರ್‌ಖಾನ್‌, ಚಕ್ವಾಲ್‌ನ ಮುರಿಡ್‌ ಮತ್ತು ಶೋರ್‌ಕೋಟ್‌ನ ರಫೀಕಿ ವಾಯುನೆಲೆಗಳ ಮೇಲೆ ಕ್ಷಿಪಣಿ ಹಾರಿಸಲಾಗಿದ್ದು, ಪಾಕಿಸ್ಥಾನದ ಅಪಾರ ಶಸ್ತ್ರಾಸ್ತ್ರಗಳು ಮತ್ತು ಸ್ವತ್ತುಗಳು ನಾಶವಾಗಿವೆ. ಈ ದಾಳಿಯಿಂದ ಭಾರತ ಮತ್ತು ಪಾಕಿಸ್ಥಾನ ನಡುವಿನ ಯುದ್ಧ ಇನ್ನಷ್ಟು ತೀವ್ರಗೊಂಡಿದೆ. ಈ

ಪಾಕಿಸ್ಥಾನದ ಮೂರು ವಾಯುನೆಲೆಗಳನ್ನು ಧ್ವಂಸ ಮಾಡಿದ ಭಾರತ : ಅಪಾರ ಶಸ್ತ್ರಾಸ್ತ್ರ ನಾಶ Read More »

ಭಾರತ ಪಾಕಿಸ್ತಾನ ಯುದ್ದ ಕಾರ್ಮೋಡ ಹಿನ್ನಲೆ | ಮಂಗಳೂರಿನ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ

ಮಂಗಳೂರು: ಪೆಹಲ್ಗಾಮ್ ನಲ್ಲಿ ಉಗ್ರರು ಅಮಾನುಷವಾಗಿ ಭಾರತೀಯರ ಹತ್ಯೆ ಮಾಡಿದ್ದಾರೆ. ಅದಕ್ಕೆ ಸಮರ್ಥವಾಗಿ ಉತ್ತರ ಕೊಡೋ‌ ಕೆಲಸ ಪ್ರಧಾನಿ ಮೋದಿ ಹಾಗೂ ಸೈನಿಕರು ಮಾಡಿದ್ದಾರೆ. ದೇಶದ ಜನ ಕಾಯ್ತಾ ಇದ್ದ ಉತ್ತರವನ್ನು ಕೊಡೋ ಕೆಲಸ ಆಗಿದೆ. ಪಾಪಿ ಪಾಕಿಸ್ತಾನದ ಪಾಪದ ಕೊಡ ತುಂಬಿದೆ ಎಂದು ಅನಿಸುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್‍ ಹೇಳಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ 25 ವರ್ಷಗಳಿಂದಲೂ ಉಗ್ರರನ್ನ ಸಾಕಿ ನಮ್ಮ ದೇಶದೆ ಮೇಲೆ ಛೂ ಬಿಡೋ ಕೆಲಸ ಪಾಕಿಸ್ತಾನ

ಭಾರತ ಪಾಕಿಸ್ತಾನ ಯುದ್ದ ಕಾರ್ಮೋಡ ಹಿನ್ನಲೆ | ಮಂಗಳೂರಿನ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ Read More »

ಪ್ರೊ.ರಾಮಕೃಷ್ಣ ಕೊಲೆ ಪ್ರಕರಣ | ಡಾ.ರೇಣುಕಾಪ್ರಸಾದ್ ಸಹಿತ ಎಲ್ಲಾ ಆರೋಪಿಗಳು ದೋಷಮುಕ್ತ

ಸುಳ್ಯ : ಪ್ರೊ.ಎ.ಎನ್.ರಾಮಕೃಷ್ಣ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಲ್ಲ ಆರೋಪಿಗಳನ್ನೂ ಪ್ರಕರಣದಿಂದ ದೋಷಮುಕ್ತಗೊಳಿಸಲಾಗಿದೆ. ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿರುವುದಾಗಿ ತಿಳಿದುಬಂದಿದೆ. 2011 ರಲ್ಲಿ ಪ್ರೊ.ರಾಮಕೃಷ್ಣರ ಹತ್ಯೆ ನಡೆದಿದ್ದು,  ಈ ಪ್ರಕರಣ ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದು 2016 ರಲ್ಲಿ ಈ ಪ್ರಕರಣ ತಪ್ಪಿ ಹೋಗಿತ್ತು. ಈ ತೀರ್ಪಿನ ವಿರುದ್ಧ ಸರಕಾರ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿ, ವಿಚಾರಣೆ ನಡೆದು 2023 ರಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಿತ್ತು. ಇದರ ವಿರುದ್ಧ ಶಿಕ್ಷೆಗೊಳಗಾದವರು ಸುಪ್ರೀಂಕೋರ್ಟಿನ ಮೆಟ್ಟಿಲೇರಿದ್ದರು. ಸುಪ್ರೀಂಕೋರ್ಟು

ಪ್ರೊ.ರಾಮಕೃಷ್ಣ ಕೊಲೆ ಪ್ರಕರಣ | ಡಾ.ರೇಣುಕಾಪ್ರಸಾದ್ ಸಹಿತ ಎಲ್ಲಾ ಆರೋಪಿಗಳು ದೋಷಮುಕ್ತ Read More »

error: Content is protected !!
Scroll to Top