ಪ್ರಸಿದ್ದವಾದ ‘ಮೈಸೂರು ಪಾಕ್’ ಇನ್ಮುಂದೆ “ಮೈಸೂರು ಶ್ರೀ”

ಜೈಪುರ: ಪಹಲ್ಗಾಮ್ ನಲ್ಲಿ ಪಾಕ್ ದಾಳಿ ಬಳಿಕ ಭಾರತೀಯ ಸೇನೆ ನಡೆಸಿದ್ದ ಅಪರೇಷನ್ ಸಿಂಧೂರ ಸೇನಾ ಕರ‍್ಯಾಚರಣೆ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಲೇ ಇದ್ದು, ಇದೀಗ ಭಾರತದಲ್ಲಿ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಭಾರತದ ಮೇಲೆ ಉಗ್ರರು ದಾಳಿ ಮಾಡಿದ ನಂತರ ಅನೇಕ ರೀತಿಯಲ್ಲಿ ಪಾಕ್ ಗೆ ವಿರೋಧ ವ್ಯಕ್ತವಾಗುತ್ತಲೇ ಇವೆ. ಇದೀಗ ಪಾಕ್ ಗೆ ವಿರೋಧ ವ್ಯಕ್ತ ಪಡಿಸುವಲ್ಲಿ ಸ್ವೀಟ್ ಶಾಪ್ ಗಳೂ ಕೂಡ ಸೇರ್ಪಡೆಯಾಗಿದ್ದು, ವಿನೂತನ ರೀತಿಯಲ್ಲಿ ‘ಪಾಕ್’ ವಿರುದ್ಧ […]

ಪ್ರಸಿದ್ದವಾದ ‘ಮೈಸೂರು ಪಾಕ್’ ಇನ್ಮುಂದೆ “ಮೈಸೂರು ಶ್ರೀ” Read More »

ಮೂರು ವರ್ಷದ ಬಳಿಕ ಮರಳಿದ ಕೊರೊನ : ಕೇರಳದಲ್ಲಿ ಗರಿಷ್ಠ ಪ್ರಕರಣ

ಮತ್ತೆ ಟೆಸ್ಟಿಂಗ್, ಮಾಸ್ಕ್, ಐಸೋಲೇಷನ್ ನಿಯಮಗಳು ಶುರು ನವದೆಹಲಿ: ಕೊರೊನ ಸೋಂಕು ಮೂರು ವರ್ಷಗಳ ಮತ್ತೆ ದೇಶಕ್ಕೆ ಕಾಲಿಟ್ಟಿದೆ. 2022ರಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಒಮಿಕ್ರಾನ್ ತಳಿಯ ಜೆಎನ್1 ಪ್ರಭೇದ ಮತ್ತೆ ಹಾವಳಿ ಶುರು ಮಾಡಿದೆ. ಜೆಎನ್1 ಉಪ ತಳಿಗಳಾದ ಎನ್‌ಬಿ.1.8.1 ಮತ್ತು ಎಲ್‌ಎಫ್.7 ತಳಿಗಳ ಕಾಟ ಶುರುವಾಗಿದೆ. ಸಿಂಗಾಪುರ, ಹಾಂಕಾಂಗ್, ಥೈಲ್ಯಾಂಡ್‌ ಸೇರಿ ದಕ್ಷಿಣ ಏಷ್ಯಾದಲ್ಲಿ ಕಾಣಿಸಿಕೊಂಡಿರುವ ವೈರಾಣು ಭಾರತಕ್ಕೂ ಕಾಲಿಟ್ಟಿದ್ದು, ಹಲವು ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ನಿಧಾನಗತಿಯಲ್ಲಿ ಏರುತ್ತಿದೆ. ಕರ್ನಾಟಕದಲ್ಲಿ ಒಟ್ಟು 35 ಕೋವಿಡ್ ಸಕ್ರಿಯ

ಮೂರು ವರ್ಷದ ಬಳಿಕ ಮರಳಿದ ಕೊರೊನ : ಕೇರಳದಲ್ಲಿ ಗರಿಷ್ಠ ಪ್ರಕರಣ Read More »

ಮಗಳು ಅನ್ಯ ಜಾತಿಯ ಯುವಕನನ್ನು ಮದುವೆಯಾದ ದುಃಖದಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ

ಕಾಲುಗಳಿಗೆ ಹಗ್ಗ ಕಟ್ಟಿಕೊಂಡು ಕೆರೆಗೆ ಹಾರಿದ ಕುಟುಂಬ ಮೈಸೂರು: ಮಗಳು ಅನ್ಯ ಜಾತಿಯವನನ್ನು ಮದುವೆಯಾದ ಹಿನ್ನೆಲೆಯಲ್ಲಿ ಮರ್ಯಾದೆಗೆ ಅಂಜಿ ಒಂದೇ ಕುಟುಂಬದ ಮೂವರು ಕಾಲುಗಳಿಗೆ ಹಗ್ಗ ಕಟ್ಟಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಶನಿವಾರ ಮೈಸೂರಿನ ಎಚ್‌.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ. ಮಹದೇವಸ್ವಾಮಿ, ಪತ್ನಿ ಮಂಜುಳಾ ಹಾಗೂ ಕಿರಿಯ ಮಗಳು ಹರ್ಷಿತಾ ಮೃತ ದುರ್ದೈವಿಗಳು. ಮಹದೇವಸ್ವಾಮಿ ಅವರಿಗೆ ಅರ್ಪಿತಾ ಹಾಗೂ ಹರ್ಷಿತಾ ಎಂಬ ಇಬ್ಬರು ಹೆಣ್ಣುಮಕ್ಕಳು. ಮಹದೇವಸ್ವಾಮಿ ಕುಟುಂಬ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಊರು

ಮಗಳು ಅನ್ಯ ಜಾತಿಯ ಯುವಕನನ್ನು ಮದುವೆಯಾದ ದುಃಖದಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ Read More »

ಬಾರ್ಯ ಕ್ಷೇತ್ರದಲ್ಲಿ ಪತ್ತನಾಜೆ ತಂಬಿಲ ಸೇವೆ

ಉಪ್ಪಿನಂಗಡಿ ಸಮೀಪದ ಬಾರ್ಯ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಪರಿವಾರ ದೈವಗಳಾದ ಗ್ರಾಮ ದೈವ ಪಂಜುರ್ಲಿ , ಮರುಳು ಧೂಮಾವತಿ ಮತ್ತು ರಾಜನ್ ದೈವಗಳಿಗೆ ವಾರ್ಷಿಕ ತಂಬಿಲ ಸೇವೆ ಸಂಪ್ರದಾಯದಂತೆ ಪತ್ತನಾಜೆಯಂದು ಕ್ಷೇತ್ರದಲ್ಲಿ ನಡೆಯಿತು. ಕ್ಷೇತ್ರದ ಆಡಳಿತ ಟ್ರಸ್ಟಿನ ಅಧ್ಯಕ್ಷ ಮತ್ತು ದೈವದ ಗುರಿಕ್ಕಾರ ಭಾಸ್ಕರ ನೂರಿತ್ತಾಯ ಬಾರ್ಯ ನೇತೃತ್ವದಲ್ಲಿ ನಡೆದ ತಂಬಿಲ ಸೇವೆಯಲ್ಲಿ ಅರ್ಚಕ ಗುರುಪ್ರಸಾದ್ ನೂರಿತ್ತಾಯರು ಸಹಕರಿಸಿದರು . ದೇವಳದ ಆಡಳಿತ ಟ್ರಸ್ಟಿನ ಪದಾಧಿಕಾರಿಗಳಾದ ಶೇಷಪ್ಪ ಸಾಲಿಯಾನ್, ಪ್ರಶಾಂತ ಪೈ ಬಾರ್ಯ, ನಾರಾಯಣಗೌಡ ,

ಬಾರ್ಯ ಕ್ಷೇತ್ರದಲ್ಲಿ ಪತ್ತನಾಜೆ ತಂಬಿಲ ಸೇವೆ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪತ್ತನಾಜೆ ಉತ್ಸವ | ಪಲ್ಲಕ್ಕಿ ಉತ್ಸವ, ವಸಂತ ಪೂಜೆ | ಸಾವಿರಾರು ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಫಲವಸ್ತುಗಳ ವಿತರಣೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ರಾತ್ರಿ ಪತ್ತನಾಜೆ ಉತ್ಸವ ” ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಉತ್ಸವದ ಬಳಿಕ ಭಕ್ತರಿಗೆ ಪ್ರಸಾದ ರೂಪದಲ್ಲಿ ಫಲವಸ್ತುಗಳನ್ನು ವಿತರಣೆ ಮಾಡಲಾಯಿತು. ಉತ್ಸವದ ಅಂಗವಾಗಿ ಬೆಳಗ್ಗೆ ಮತ್ತು ಮಧ್ಯಾಹ್ನ ವಿಶೇಷ ಪೂಜೆ, ಸಂಜೆ ಶ್ರೀ ದೇವರ ನಿತ್ಯ ಬಲಿ ಉತ್ಸವು ಉಡಿಕೆ, ಚೆಂಡೆ, ವಾದ್ಯ ಸುತ್ತು, ಪಲ್ಲಕಿ ಉತ್ಸವ ಮತ್ತು ಸೇವೆಯ ಬಳಿಕ ವಸಂತ ಪೂಜೆ ¸ಸೇವೆ ಮಾಡಿಸಿದ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪತ್ತನಾಜೆ ಉತ್ಸವ | ಪಲ್ಲಕ್ಕಿ ಉತ್ಸವ, ವಸಂತ ಪೂಜೆ | ಸಾವಿರಾರು ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಫಲವಸ್ತುಗಳ ವಿತರಣೆ Read More »

ಅಮಿತ್‌ ಷಾ ನಿಂದನೆ : ರಾಹುಲ್‌ ಗಾಂಧಿಗೆ ಜಾಮೀನು ರಹಿತ ವಾರಂಟ್‌ ಜಾರಿ

ಹೊಸದಿಲ್ಲಿ: ಕಾಂಗ್ರೆಸ್ ಸಂಸದ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತೆ ಕಾನುನಿನ ಉರುಳಿನಲ್ಲಿ ಸಿಲುಕಿದ್ದಾರೆ. ಕೆಂದ್ರ ಗೃಹ ಸಚಿವ ಅಮಿತ್‌ ಷಾ ಅವರನ್ನು ನಿಂದಿಸಿದ ಪ್ರಕರಣದಲ್ಲಿ ಸಂಕಷ್ಟಕ್ಕೆ ಗುರಿಯಾಗಿದ್ದು, ಜಾರ್ಖಂಡ್‌ನ ಚೈಬಸ ಸಂಸದ-ಶಾಸಕರ ನ್ಯಾಯಾಲಯ ಅವರಿಗೆ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ. ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವುದರಿಂದ ರಾಹುಲ್ ಗಾಂಧಿಗೆ ವಿನಾಯಿತಿ ನೀಡಬೇಕು ಎಂಬ ಅವರ ಪರ ವಕೀಲರ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಜೂನ್ 16ರಂದು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಬೇಕು ಎಂದು ರಾಹುಲ್ ಗಾಂಧಿ ಅವರಿಗೆ

ಅಮಿತ್‌ ಷಾ ನಿಂದನೆ : ರಾಹುಲ್‌ ಗಾಂಧಿಗೆ ಜಾಮೀನು ರಹಿತ ವಾರಂಟ್‌ ಜಾರಿ Read More »

ಹೂವಿನ ಸ್ಟಾಲ್‍ ಮೇಲೆ ಬಿದ್ದ ತೆರವಾದ ಕಟ್ಟಡದ ಗೋಡೆ : ಮಹಿಳೆಗೆ ಗಾಯ

ಪುತ್ತೂರು: ನಗರದ ಮಹಿಳಾ ಪೊಲೀಸ್ ಠಾಣೆಯ ಬಳಿ ಇತ್ತೇಚೆಗೆ ತೆರವಾದ ಕಟ್ಟಡದ ಪಕ್ಕದ ಕಟ್ಟಡದ ಗೋಡೆಯ ಭಾಗವೊಂದು ಜರಿದು ಬಿದ್ದ ಪರಿಣಾಮ ಹೂವಿನ ವ್ಯಾಪಾರಿ ಮಹಿಳೆಯೊಬ್ಬರು ಗಾಯಗೊಂಡ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಕಳೆದ ಕೆಲವು ಸಮಯದಿಂದ ವಿನಾಯಕ ಪ್ಲವರ್ ಸ್ಟಾಲ್ ನ ಮಾಲಕತ್ವದ ಹೂವಿನ ಅಂಗಡಿ ಮೇಲೆ ಗೋಡೆ ಜರಿದು ಬಿದ್ದಿದೆ. ಈ ಸಂದರ್ಭ ಗಾಯಗೊಂಡ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು. ಸ್ಥಳಕ್ಕೆ ಅರುಣ್ ಕುಮಾರ್ ಪುತ್ತಿಲ, ಉಮೇಶ್ ಕೋಡಿಬೈಲು, ಪ್ರಜ್ವಲ್ ಘಾಟೆ ಭೇಟಿ ನೀಡಿದರು.

ಹೂವಿನ ಸ್ಟಾಲ್‍ ಮೇಲೆ ಬಿದ್ದ ತೆರವಾದ ಕಟ್ಟಡದ ಗೋಡೆ : ಮಹಿಳೆಗೆ ಗಾಯ Read More »

ಸಮುದ್ರದಲ್ಲಿ ಹಡಗು ಅವಘಡ : ನೀರುಪಾಲಾದ ಅಪಾಯಕಾರಿ ಬೃಹತ್‌ ಕಂಟೇನರ್‌ಗಳು

ಕರಾವಳಿ ಜನರಿಗೆ ಎಚ್ಚರಿಕೆ ನೀಡಿದ ನೈಸರ್ಗಿಕ ವಿಕೋಪ ನಿರ್ವಹಣೆ ಪ್ರಾಧಿಕಾರ ತಿರುನಂತಪುರಂ: ಕೊಚ್ಚಿಗೆ ಬರುತ್ತಿದ್ದ ಸರಕು ಸಾಗಣೆ ಹಡಗು ಅವಘಡಕ್ಕೀಡಾಗಿ ಅದರಲ್ಲಿದ್ದ ತೈಲ ತುಂಬಿದ ಕಂಟೇನರ್‌ಗಳು ಸಮುದ್ರ ಪಾಲಾಗಿದ ಘಟನೆ ಅರಬ್ಬಿ ಸಮುದ್ರದಲ್ಲಿ ಸಂಭವಿಸಿದ್ದು, ಈ ಕಂಟೇನರ್‌ಗಳು ದಡಕ್ಕೆ ಬಂದರೆ ಹತ್ತಿರ ಹೋಗದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಸುಮಾರು 10 ದೊಡ್ಡ ಕಂಟೇನರ್‌ಗಳು ಸಮುದ್ರ ಪಾಲಾಗಿದ್ದು, ಮೀನುಗಾರರಲ್ಲಿ ಆತಂಕ ಸೃಷ್ಟಿಯಾಗಿದೆ. ಕಂಟೇನರ್‌ಗಳು ದಡಕ್ಕೆ ಬಂದರೆ ಅವುಗಳ ಬಳಿ ತೆರಳದಂತೆ ಕೇರಳ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಪ್ರಾಧಿಕಾರ

ಸಮುದ್ರದಲ್ಲಿ ಹಡಗು ಅವಘಡ : ನೀರುಪಾಲಾದ ಅಪಾಯಕಾರಿ ಬೃಹತ್‌ ಕಂಟೇನರ್‌ಗಳು Read More »

ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ನೀಡಬೇಕು: ಸೀತಾರಾಮ ಕೇವಳ | ಕಡಬ ಸರಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ ಸಮಾರಂಭ

ಕಡಬ: ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಶನಿವಾರ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ನ್ಯೂಸ್ ಪುತ್ತೂರು ಇದರ ಅಧ್ಯಕ್ಷ ಸೀತಾರಾಮ ಕೇವಳ ಮಾತನಾಡಿ, ವಿದ್ಯಾರ್ಥಿಗಳು ಗುರುಗಳಿಗಿಂತಲೂ ಹೆಚ್ಚಿನ ಸಾಧನೆ ಮಾಡಿದಾಗ ನಿಜವಾದ ಗುರುಕಾಣಿಕೆ ನೀಡಿದಂತಾಗುತ್ತದೆ. ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ನೀಡುವುದು ನಮ್ಮ ಕರ್ತವ್ಯವಾಗಬೇಕು. ಇಲ್ಲಿ ಕಾಲೇಜಿನ ಅಭಿವೃದ್ಧಿ ಮಂಡಳಿ ಬೆವರಿಳಿಸಿ ದುಡಿದು ಗಳಿಸಿದ ಸ್ವಂತ ಸಂಪಾದನೆಯ ಒಂದು ಭಾಗವನ್ನು ಕಾಲೇಜಿನ ಬಿಸಿ ಊಟದ ವ್ಯವಸ್ಥೆಗೆ ನೀಡುತ್ತಿದ್ದಾರೆ. ವಿದ್ಯಾರ್ಥಿಗಳಾದ ನೀವು ದುಡಿದು ಗಳಿಸಿ ಮುಂದಿನ

ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ನೀಡಬೇಕು: ಸೀತಾರಾಮ ಕೇವಳ | ಕಡಬ ಸರಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ ಸಮಾರಂಭ Read More »

ಬೆಳ್ಳಾರೆ ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ‌ ದರ್ಜೆ ಕಾಲೇಜು | ಶಿಕ್ಷಣದ ನಂತರದ ಸವಾಲುಗಳು ಮತ್ತು ಅವಕಾಶಗಳು ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ | ದಿನಪತ್ರಿಕೆ ಓದುವುದನ್ನು ತಪ್ಪದೇ ರೂಢಿಸಿಕೊಳ್ಳಿ : ಬಿ.ವಿ.ಸೂರ್ಯನಾರಾಯಣ

ಬೆಳ್ಳಾರೆ : ವಿದ್ಯಾರ್ಥಿ ಜೀವನದಲ್ಲಿ ಉದ್ಯೋಗಕ್ಕೆ ಪೂರಕವಾಗಿ ಸುತ್ತಮುತ್ತಲಿನ ಆಗು ಹೋಗುಗಳನ್ನು ಸದಾ ಗಮನಿಸುತ್ತಿರಬೇಕು. ಆ ಗಮನ ಹರಿಸುವಿಕೆಯ ಚಟುವಟಿಕೆಯಲ್ಲಿ ದಿನಪತ್ರಿಕೆ ಓದುವುದು ಮುಖ್ಯವಾದದು ಎಂದು ವಿಶ್ರಾಂತ ಪ್ರಾಂಶುಪಾಲ‌ ಬಿ.ವಿ.ಸೂರ್ಯನಾರಾಯಣ ಹೇಳಿದರು. ಬೆಳ್ಳಾರೆ ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ‌ ದರ್ಜೆ ಕಾಲೇಜು ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಮೇ 24 ರಂದು ಕಾಲೇಜಿನ ಸಭಾಂಗಣದಲ್ಲಿ ಶಿಕ್ಷಣದ ನಂತರದ ಸವಾಲುಗಳು ಮತ್ತು ಅವಕಾಶಗಳು ವಿಷಯದ ಬಗ್ಗೆ ಅವರು ಉಪನ್ಯಾಸ ನೀಡಿದರು. ಉದ್ಯೋಗ ಸಂಬಂಧಿತ ಅವಕಾಶಗಳ ಬಗ್ಗೆ ದಿನಪತ್ರಿಕೆಗಳು

ಬೆಳ್ಳಾರೆ ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ‌ ದರ್ಜೆ ಕಾಲೇಜು | ಶಿಕ್ಷಣದ ನಂತರದ ಸವಾಲುಗಳು ಮತ್ತು ಅವಕಾಶಗಳು ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ | ದಿನಪತ್ರಿಕೆ ಓದುವುದನ್ನು ತಪ್ಪದೇ ರೂಢಿಸಿಕೊಳ್ಳಿ : ಬಿ.ವಿ.ಸೂರ್ಯನಾರಾಯಣ Read More »

error: Content is protected !!
Scroll to Top