ಸಿದ್ದರಾಮಯ್ಯನವರಿಂದ ಅವಮಾನಕ್ಕೊಳಗಾಗಿದ್ದ ಪೊಲೀಸ್‌ ಅಧಿಕಾರಿಯ ವಿಆರ್‌ಎಸ್‌ ಅರ್ಜಿ ಸ್ವೀಕಾರಕ್ಕೆ ಸೂಚನೆ

ಡೆಡ್‌ಲೈನ್‌ ಒಳಗೆ ಅರ್ಜಿ ಹಿಂಪಡೆಯದಿದ್ದರೆ ರಾಜೀನಾಮೆ ಅಂಗೀಕಾರ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಸಾರ್ವಜನಿಕ ವೇದಿಕೆಯಲ್ಲಿ ಅವಮಾನಕ್ಕೊಳಗಾಗಿದ್ದ ಹಿನ್ನೆಲೆಯಲ್ಲಿ ಧಾರವಾಡ ಎಎಸ್‌ಪಿ ನಾರಾಯಣ ಬರಮಣ್ಣಿ ಸ್ವಯಂ ನಿವೃತ್ತಿ ಕೋರಿ ಸಲ್ಲಿಸಿದ್ದ ಮನವಿಯನ್ನು ಸ್ವೀಕರಿಸಲು ಸರ್ಕಾರ ಸೂಚನೆ ನೀಡಿದೆ. ಉನ್ನತ ಪೊಲೀಸ್‌ ಅಧಿಕಾರಿಯನ್ನು ಕಾಂಗ್ರೆಸ್‌ ಸಭೆಯ ವೇದಿಕೆಯಲ್ಲಿ ಸಾರ್ವಜನಿಕರ ಎದುರೇ ಹೀನಾಯವಾಗಿ ನಡೆಸಿಕೊಂಡ ಕುರಿತು ಭಾರಿ ಟೀಕೆ ವ್ಯಕ್ತವಾಗಿದ್ದರೂ ಸರ್ಕಾರ ರಾಜೀನಾಮೆ ಅಂಗೀಕರಿಸಲು ಸೂಚನೆ ನೀಡಿರುವುದು ಆಶ್ಚರ್ಯ ಮೂಡಿಸಿದೆ. ಗೃಹ ಇಲಾಖೆ ನಾರಾಯಣ ಬರಮಣ್ಣಿ ಅವರ ಸ್ವಯಂ ನಿವೃತ್ತಿ ಮನವಿಯನ್ನು […]

ಸಿದ್ದರಾಮಯ್ಯನವರಿಂದ ಅವಮಾನಕ್ಕೊಳಗಾಗಿದ್ದ ಪೊಲೀಸ್‌ ಅಧಿಕಾರಿಯ ವಿಆರ್‌ಎಸ್‌ ಅರ್ಜಿ ಸ್ವೀಕಾರಕ್ಕೆ ಸೂಚನೆ Read More »

ನಕಲಿ ಪ್ರಮಾಣಪತ್ರ ಸೃಷ್ಟಿಸಿ ಮಂಗಳೂರು ಮಹಾನಗರ ಪಾಲಿಕೆಗೆ ಲಕ್ಷಾಂತರ ರೂ. ವಂಚನೆ

4500ಕ್ಕೂ ಅಧಿಕ ಉದ್ದಿಮೆ ನಕಲಿ ಸರ್ಟಿಫಿಕೆಟ್‌ ಸೃಷ್ಟಿಸಿರುವ ಅನುಮಾನ ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯಲ್ಲಿ ದಿನಕ್ಕೊಂದು ಅವ್ಯವಹಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ನಗರಪಾಲಿಕೆ ನೀಡುವ ಪ್ರಮಾಣಪತ್ರವನ್ನೇ ನಕಲಿಯಾಗಿ ಸೃಷ್ಟಿಸಿ ತೆರಿಗೆ ವಂಚಿಸಿದ ಪ್ರಕರಣ ಬಯಲಾಗಿದ್ದು, ಇದರ ಹಿಂದೆ ಬೃಹತ್‌ ಜಾಲ ಇರುವ ಅನುಮಾನ ವ್ಯಕ್ತವಾಗಿದೆ. ನಕಲಿ ತೆರಿಗೆ ನೋಂದಣಿ ಜಾಲವೊಂದು ಇದರ ಹಿಂದೆ ಇದೆ ಎನ್ನಲಾಗಿದೆ. ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸಿ ಲಕ್ಷಾಂತರ ರೂ. ವಂಚನೆ ಮಾಡಲಾಗಿದೆ. ಮಹಾನಗರ ಪಾಲಿಕೆ ನೀಡುವ ಸರ್ಟಿಫಿಕೇಟ್​​ನ್ನೇ ವಂಚಕರು ಕಂಪ್ಯೂಟರ್ ತಂತ್ರಜ್ಞಾನ ಬಳಸಿ

ನಕಲಿ ಪ್ರಮಾಣಪತ್ರ ಸೃಷ್ಟಿಸಿ ಮಂಗಳೂರು ಮಹಾನಗರ ಪಾಲಿಕೆಗೆ ಲಕ್ಷಾಂತರ ರೂ. ವಂಚನೆ Read More »

ಹೆರಿಗೆ ಬಳಿಕ ವಿಪರೀತ ರಕ್ತ ಸ್ರಾವದಿಂದ ಮಹಿಳೆ ಮೃತ್ಯು | ಪ್ರಕರಣ ದಾಖಲು

ಪುತ್ತೂರು: ಹೆರಿಗೆ ಬಳಿಕ ವಿಪರೀತ ರಕ್ತಸ್ರಾವ ಉಂಟಾಗಿ ಕರ್ನೂರಿನ ಮಹಿಳೆಯೋರ್ವರು ಮೃತರಾದ ಘಟನೆ ನಡೆದಿದ್ದು, ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. ಕರ್ನೂರು ಮೊಹಮ್ಮದ್ ಬಶೀರ್ ಕೆ.ಎ.ಅವರ ಪತ್ನಿ ಆಯಿಷತ್ ಸೌಜಾನ ಮೃತಪಟ್ಟವರು. ಆಯಿಷತ್ ಸೌಜಾನ ಅವರನ್ನು ಜೂ.27ರಂದು ಹೆರಿಗೆಗಾಗಿ ಆಕೆಯ ಗಂಡ ಕಾಸರಗೋಡು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆಕೆಯ ಆರೈಕೆಯಲ್ಲಿ ಜುಬೈದಾ ಕಾವು ಅವರು ಇದ್ದರು. ಜು.1ರಂದು ಬೆಳಿಗ್ಗೆ, 05.30 ಗಂಟೆಗೆ ಆಯಿಷತ್ ಸೌಜಾನರಿಗೆ ಸಾಮಾನ್ಯ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆ ಬಳಿಕ

ಹೆರಿಗೆ ಬಳಿಕ ವಿಪರೀತ ರಕ್ತ ಸ್ರಾವದಿಂದ ಮಹಿಳೆ ಮೃತ್ಯು | ಪ್ರಕರಣ ದಾಖಲು Read More »

ಪ್ರಧಾನಿ ಮೋದಿ ಅವರಿಗೆ ಘಾನಾದ ಅತ್ಯುನ್ನತ ಪುರಸ್ಕಾರ ಪ್ರದಾನ

ನವದೆಹಲಿ: ಪ್ರಧಾನಿ ಮೋದಿ ಅವರು ಆಫ್ರಿಕನ್ ದೇಶಗಳ ಪ್ರವಾಸದಲ್ಲಿದ್ದು, ಅವರಿಗೆ ಘಾನಾದಲ್ಲಿ ‘ದಿ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ’ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಅಲ್ಲಿನ ಅಧ್ಯಕ್ಷ‌ ಮಹಾನ್ ಅವರು ಪ್ರಧಾನಿ ಮೋದಿ ಅವರಿಗೆ ಘಾನಾದ ಅತ್ಯುನ್ನತ ಗೌರವವನ್ನು ನೀಡಿ ಪುರಸ್ಕರಿಸಿರುವುದಾಗಿದೆ. ಪುರಸ್ಕಾರ ಪಡೆದ ಪ್ರಧಾನಿ ಮೋದಿ ಅವರು ಮಾತನಾಡಿದ್ದು, ಘಾನಾದ ಈ ಅತ್ಯುನ್ನತ ಗೌರವ ಪಡೆದಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ಜುಲೈ 9 ರ

ಪ್ರಧಾನಿ ಮೋದಿ ಅವರಿಗೆ ಘಾನಾದ ಅತ್ಯುನ್ನತ ಪುರಸ್ಕಾರ ಪ್ರದಾನ Read More »

ಮರಳು ಬ್ಲಾಕ್‍ ಗಳ ಕಡತಗಳಲ್ಲಿ ವ್ಯತ್ಯಾಸ | ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್‍ | ಪುತ್ತೂರು ಉಪ ವಿಭಾಗ ಮಟ್ಟದ ಮರಳು ಸಮಿತಿ ಸಭೆ

ಪುತ್ತೂರು: ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕುಗಳಲ್ಲಿ ಗುರುತಿಸಿದ ಮರಳು ಬ್ಲಾಕ್‌ ಗಳ ಕಡತಗಳಲ್ಲಿ ವ್ಯತ್ಯಾಸ ಕಂಡು ಬರುತ್ತಿದ್ದು, ಈ ಕುರಿತು ಪುತ್ತೂರು ಸಹಾಯಕ ಆಯುಕ್ತರಾದ ಸ್ಟೆಲ್ಲಾ ವರ್ಗೀಸ್ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡದ್ದು ಮಂಗಳವಾರ ಸಹಾಯಕ ಆಯುಕ್ತರ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಪುತ್ತೂರು ಉಪ ವಿಭಾಗ ಮಟ್ಟದ ಮರಳು ಸಮಿತಿ ಸಭೆಯಲ್ಲಿ. ಕಡತಗಳಲ್ಲಿ ಸಮಸ್ಯೆಗಳಿರುವುದನ್ನು ಯಾರೂ ಗಮನಿಸುವುದಿಲ್ಲವಾ? ಸಮಿತಿಯವರೆಗೆ ಯಾಕೆ ಸಮಸ್ಯೆಯ ಕಡತಗಳನ್ನು ತರುವುದು ಯಾಕೆ? ತಪ್ಪುಗಳನ್ನು ನನ್ನ ಹಂತದವರೆಗೆ ತರುವುದಾದರೆ ತಳ ಹಂತದಲ್ಲಿ ಏನು ಮಾಡುತ್ತಿದ್ದೀರಿ? ಸಂಬಂಧಪಟ್ಟ

ಮರಳು ಬ್ಲಾಕ್‍ ಗಳ ಕಡತಗಳಲ್ಲಿ ವ್ಯತ್ಯಾಸ | ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್‍ | ಪುತ್ತೂರು ಉಪ ವಿಭಾಗ ಮಟ್ಟದ ಮರಳು ಸಮಿತಿ ಸಭೆ Read More »

ಭಾರೀ ಮಳೆ ಹಿನ್ನಲೆ : ಇಂದು ಕಡಬ ತಾಲೂಕಿನಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ

ಕಡಬ: ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕಡಬ ತಾಲೂಕಿನಾದ್ಯಂತ ವ್ಯಾಪಕ ಮಳೆ ಮುಂದುವರಿದಿದ್ದು, ಮುಂಜಾಗ್ರತಾ ಕ್ರಮವಾಗಿ ಕಡಬ ತಾಲೂಕಿನ ಎಲ್ಲಾ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿಗೆ ಇಂದು (ಜು.3) ರಜೆ  ಘೋಷಿಸಲಾಗಿದೆ. ತಾಲೂಕಿನಲ್ಲಿ ಮಳೆ ಸುರಿಯುತ್ತಿರುವುದರಿಂದ ಸಾರ್ವಜನಿಕರು ನದಿ, ತೋಡುಗಳ ಬಳಿ ಹೋಗುವುದಾಗಲಿ, ವಿದ್ಯುತ್ ಕಂಬದ ಸಮೀಪ ಹೋಗುವುದನ್ನು ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಪ್ರಾಕೃತಿಕವಾಗಿ ಯಾವುದೇ ಘಟನೆಗಳು ಸಂಭವಿಸಿದಲ್ಲಿ ಸಾರ್ವಜನಿಕರು ತಕ್ಷಣ ಸಂಬಂಧ ಪಟ್ಟ ಪಂಚಾಯತ್, ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ

ಭಾರೀ ಮಳೆ ಹಿನ್ನಲೆ : ಇಂದು ಕಡಬ ತಾಲೂಕಿನಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ Read More »

ಸೆ.27-28 : ವಿಜಯ ಸಾಮ್ರಾಟ್ ವತಿಯಿಂದ ಪಿಲಿಗೊಬ್ಬು 2025 ಸೀಸನ್‍3 | ಪೂರ್ವಭಾವಿ ಸಭೆ

ಪುತ್ತೂರು: ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪುತ್ತೂರು ಮಹಾತೋಭಾರ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ಸೆ.27 ಹಾಗೂ 28 ರಂದು ನಡೆಯುವ ಪಿಲಿಗೊಬ್ಬು-2025 ಸೀಸನ್-3 ಇದರ ಪೂರ್ವಭಾವಿ ಸಭೆ ದರ್ಬೆ ಶ್ರೀರಾಮ ಸೌಧದ ಕಟ್ಟಡದಲ್ಲಿ ಇಂದು ನಡೆಯಿತು. ಸಂಸ್ಥೆಯ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ವ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಯ ಕುರಿತು ಚರ್ಚೆ ನಡೆಸಲಾಯಿತು. ವೇದಿಕೆಯಲ್ಲಿ ಪಿಲಿಗೊಬ್ಬು ಸಮಿತಿಯ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಪ್ರಧಾನ ಕಾರ್ಯದರ್ಶಿ ಶರತ್ ಆಳ್ವ ಕೂರೇಲು, ಉಪಾಧ್ಯಕ್ಷ ಶಂಕರ್ ಭಟ್

ಸೆ.27-28 : ವಿಜಯ ಸಾಮ್ರಾಟ್ ವತಿಯಿಂದ ಪಿಲಿಗೊಬ್ಬು 2025 ಸೀಸನ್‍3 | ಪೂರ್ವಭಾವಿ ಸಭೆ Read More »

ಮುಂಬಯಿ: ಶಿಷ್ಯನನ್ನೇ ಲೈಂಗಿಕ ಸುಖಕ್ಕೆ ಬಳಸಿಕೊಂಡ ಶಿಕ್ಷಕಿ

ಪಂಚತಾರಾ ಹೋಟೆಲ್‌ಗಳಲ್ಲಿ ಶಿಷ್ಯನ ಮೇಲೆ ದೌರ್ಜನ್ಯ ಎಸಗಿದ ಪ್ರತಿಷ್ಠಿತ ಶಾಲೆಯ ಶಿಕ್ಷಕಿ ಮುಂಬೈ: ಪ್ರತಿಷ್ಠಿತ ಶಾಲೆಯ ಶಿಕ್ಷಕಿಯೊಬ್ಬಳು ತನ್ನ ಹದಿಹರೆಯದ ಶಿಷ್ಯನನ್ನೇ ಲೈಂಗಿಕ ಸುಖಕ್ಕೆ ಬಳಸಿಕೊಂಡ ಆಘಾತಕಾರಿ ಘಟನೆ ಮುಂಬಯಿಯಲ್ಲಿ ಬೆಳಕಿಗೆ ಬಂದಿದೆ. 11ನೇ ತರಗತಿ ವಿದ್ಯಾರ್ಥಿಯ ಜೊತೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದಲ್ಲಿ 40ರ ಹರೆಯದ ಶಿಕ್ಷಕಿಯನ್ನು ಪೋಕ್ಸೊ ಕಾಯ್ದೆಯ ಅಡಿ ಬಂಧಿಸಲಾಗಿದೆ. ಮುಂಬೈನ ಪ್ರಖ್ಯಾತ ಶಾಲೆಯ 40 ವರ್ಷದ ಇಂಗ್ಲಿಷ್‌ ಶಿಕ್ಷಕಿ ಕಳೆದ ಒಂದು ವರ್ಷದಲ್ಲಿ 16 ವರ್ಷದ ವಿದ್ಯಾರ್ಥಿಯ ಮೇಲೆ ಹಲವು ಬಾರಿ

ಮುಂಬಯಿ: ಶಿಷ್ಯನನ್ನೇ ಲೈಂಗಿಕ ಸುಖಕ್ಕೆ ಬಳಸಿಕೊಂಡ ಶಿಕ್ಷಕಿ Read More »

ಎಣ್ಮೂರು ಶ್ರೀ ಸೀತಾರಾಮಾಂಜನೇಯ ಭಜನಾ ಮಂದಿರದ ವಾರ್ಷಿಕ ಹಬ್ಬ ಆಚರಣಾ ಸಮಿತಿ ರಚನೆ | ಅಧ್ಯಕ್ಷರಾಗಿ ನಾಗೇಶ್‍ ಆಳ್ವ, ಕಾರ್ಯದರ್ಶಿಯಾಗಿ ಸಚಿನ್ ಆರೆಂಬಿ ಆಯ್ಕೆ

ಎಣ್ಮೂರು: ಎಣ್ಮೂರು ಶ್ರೀ ಸೀತಾರಾಮಾಂಜನೇಯ ಭಜನಾ ಮಂದಿರದ ವಾರ್ಷಿಕ ಹಬ್ಬ ಆಚರಣಾ ಸಮಿತಿಯನ್ನು ಬುಧವಾರ ರಚಿಸಲಾಯಿತು. ಸಮಿತಿ ಅಧ್ಯಕ್ಷರಾಗಿ ನಾಗೇಶ್‍ ಆಳ್ವ, ಕಾರ್ಯದರ್ಶಿಯಾಗಿ ಸಚಿನ್‍ ಆರೆಂಬಿ ಆಯ್ಕೆಯಾದರು. ಉಳಿದಂತೆ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಭಜನಾ ಮಂದಿರ, ಆಚರಣಾ ಸಮಿತಿ ಪ್ರಮುಖರು ಉಪಸ್ಥಿತರಿದ್ದರು.

ಎಣ್ಮೂರು ಶ್ರೀ ಸೀತಾರಾಮಾಂಜನೇಯ ಭಜನಾ ಮಂದಿರದ ವಾರ್ಷಿಕ ಹಬ್ಬ ಆಚರಣಾ ಸಮಿತಿ ರಚನೆ | ಅಧ್ಯಕ್ಷರಾಗಿ ನಾಗೇಶ್‍ ಆಳ್ವ, ಕಾರ್ಯದರ್ಶಿಯಾಗಿ ಸಚಿನ್ ಆರೆಂಬಿ ಆಯ್ಕೆ Read More »

ಮದುವೆಯಾಗುವುದಾಗಿ ನಂಬಿಸಿ ವಂಚನೆ ಪ್ರಕರಣ | ಸಂತ್ರಸ್ತೆ ಮನೆಗೆ ಜನವಾದಿ ಮಹಿಳಾ ಸಂಘಟನೆ, ಸಾಮರಸ್ಯ ಮಂಗಳೂರು ಸಹಿತ ವಿವಿಧ ಮಹಿಳಾ ಸಂಘಟನೆಗಳ ಪ್ರಮುಖರು ಭೇಟಿ

ಪುತ್ತೂರು : ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿಯನ್ನಾಗಿಸಿ ನಂತರ ಮದುವೆಗೆ ನಿರಾಕರಿಸಿದ ಪ್ರಕರಣದ ಸಂತ್ರಸ್ಥೆ ನಿವಾಸಕ್ಕೆ ಜನವಾದಿ ಮಹಿಳಾ ಸಂಘಟನೆ, ಸಾಮರಸ್ಯ ಮಂಗಳೂರು ಸಹಿತ ವಿವಿಧ ಮಹಿಳಾ ಸಂಘಟನೆಗಳ ಪ್ರಮುಖರು ಭೇಟಿ ನೀಡಿ ಧೈರ್ಯ ತುಂಬಿದರು. ಮದುವೆಯಾಗುವ ಭರವಸೆ ನೀಡಿ, ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ನಂತರ ರಾಜಕೀಯ ಬೆಂಬಲದಿಂದ ತಲೆ ಮರೆಸಿಕೊಂಡಿರುವ ಕೃಷ್ಣ ರಾವ್ ನನ್ನು ಬಂಧಿಸಬೇಕು. ಗರ್ಭಪಾತಕ್ಕೆ ಒತ್ತಾಯಿಸಿ ಹಣದ ಆಮಿಷ ಒಡ್ಡಿದ ಸಂಘಟನೆಗಳ ಪ್ರಮುಖರನ್ನು ತನಿಖೆಗೆ ಒಳಪಡಿಸಬೇಕು ಎಂದು ಮಹಿಳಾ ನಾಯಕರು ಈ ಸಂದರ್ಭ

ಮದುವೆಯಾಗುವುದಾಗಿ ನಂಬಿಸಿ ವಂಚನೆ ಪ್ರಕರಣ | ಸಂತ್ರಸ್ತೆ ಮನೆಗೆ ಜನವಾದಿ ಮಹಿಳಾ ಸಂಘಟನೆ, ಸಾಮರಸ್ಯ ಮಂಗಳೂರು ಸಹಿತ ವಿವಿಧ ಮಹಿಳಾ ಸಂಘಟನೆಗಳ ಪ್ರಮುಖರು ಭೇಟಿ Read More »

error: Content is protected !!
Scroll to Top