ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ INVESTITURE ಸಮಾರಂಭ

ಪುತ್ತೂರು: ಕೃಷ್ಣನಗರದಲ್ಲಿ ಶಿಕ್ಷಣ ಕೈಂಕರ್ಯ ನಡೆಸುತ್ತಿರುವ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನ 2025-26ನೇ ಸಾಲಿನ ವಿದ್ಯಾರ್ಥಿ ಸರಕಾರದ ಪದಗ್ರಹಣ ಸಮಾರಂಭ – IVESTITURE – ಶಾಲಾ ತೆರೆದ ಸಭಾಂಗಣದಲ್ಲಿ ನಡೆಯಿತು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಶಣ ನಿರ್ದೇಶಕರಾದ ಬಾಲಚಂದ್ರ ಬಾರ್ತಿಕುಮೇರು ಮುಖ್ಯ ಪದಗ್ರಹಣ ಅಧಿಕಾರಿಗಳಾಗಿ ಆಗಮಿಸಿದ್ದರು. ಮಾತನಾಡುತ್ತಾ ಅವರು ‘ಶಾಲೆಯಲ್ಲಿ ಎರಡು ನಾಯಕರು ಮುಖ್ಯ – ಪ್ರಾಂಶುಪಾಲರು ಮತ್ತು ವಿದ್ಯಾರ್ಥಿ ನಾಯಕ’ ಎಂದರು.ನಾಯಕರು ಸಶಕ್ತವಾಗಿದ್ದಾಗ ದೇಶವಾಗಲೀ, ಸಂಸ್ಥೆಯಾಗಲೀ ದೃಢವಾಗಿರುತ್ತದೆ ಎಂದು ಪ್ರತಿಪಾದಿಸಿದರು. ವಿದ್ಯಾರ್ಥಿ ಸರಕಾರದ ವಿವಿಧ […]

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ INVESTITURE ಸಮಾರಂಭ Read More »

ಹಿಂದೂ ಮುಖಂಡನ ಮೊಬೈಲ್‌ನಲ್ಲಿ ರಾಜಕಾರಣಿಯ ವಿಡಿಯೋ ಪತ್ತೆ : ಕರಾವಳಿಯಲ್ಲಿ ಸಂಚಲನ

ಬಸ್‌ಗೆ ಕಲ್ಲು ತೂರಿದ ಪ್ರಕರಣದಲ್ಲಿ ಸೆರೆಯಾದ ಸಂದರ್ಭದಲ್ಲಿ ಬಯಲಾದ ಇನ್ನೊಂದು ರಹಸ್ಯ ಮಂಗಳೂರು : ಅಪಘಾತವೆಸಗಿದ ಖಾಸಗಿ ಬಸ್​ಗೆ ಕಲ್ಲು ತೂರಿ ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಇತ್ತೀಚೆಗೆ ಸೆರೆಯಾಗಿದ್ದ ಹಿಂದೂ ಮುಖಂಡ ಸಮಿತ್‌ರಾಜ್ ಧರೆಗುಡ್ಡೆಯ ಮೊಬೈಲ್‌ನಲ್ಲಿ ಕೆಲವು ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದು, ಇದರಲ್ಲಿ ಕರಾವಳಿಯ ಓರ್ವ ರಾಜಕಾರಣಿಯ ಔಿಡಿಯೋ ಇದೆ ಎಂಬ ವಿಚಾರ ಸಂಚಲನವುಂಟುಮಾಡಿದೆ. ಮೊಬೈಲ್​ನಲ್ಲಿ ಕರಾವಳಿಯ ರಾಜಕಾರಣಿಯೊಬ್ಬರ ಅಶ್ಲೀಲ ವಿಡಿಯೋ ಪತ್ತೆ ಆಗಿರುವ ಬಗ್ಗೆ ಕರಾವಳಿಯಲ್ಲಿ ಭಾರಿ ಚರ್ಚೆ ಶುರುವಾಗಿದೆ. ಮೂಡುಬಿದಿರೆ ಪೊಲೀಸರ ತನಿಖೆ ವೇಳೆ

ಹಿಂದೂ ಮುಖಂಡನ ಮೊಬೈಲ್‌ನಲ್ಲಿ ರಾಜಕಾರಣಿಯ ವಿಡಿಯೋ ಪತ್ತೆ : ಕರಾವಳಿಯಲ್ಲಿ ಸಂಚಲನ Read More »

ಮಾಲ್ಡೀವ್ಸ್ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರಿಗೆ ಆಹ್ವಾನ

ಭಾರತದ ಜೊತೆಗೆ ಸ್ನೇಹ ಸಂಬಂಧ ಮರು ಸ್ಥಾಪಿಸಲು ಮಾಲ್ಡೀವ್ಸ್ ಪರದಾಟ ನವದೆಹಲಿ: ಕೆಲ‌ ಸಮಯಗಳ ಹಿಂದೆ ವಿನಾ ಕಾರಣ ಭಾರತದ ಜೊತೆಗೆ ಸಂಬಂಧ ಹಾಳು ಮಾಡಿಕೊಂಡಿದ್ದ ದ್ವೀಪ ರಾಷ್ಟ್ರ ಮಾಲ್ಡಿವ್ಸ್‌ ಈಗ ಮತ್ತೆ ಭಾರತದ ಜೊತೆಗೆ ಸ್ನೇಹ ಸಂಪಾದನೆ ಮಾಡಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝಿ ಜುಲೈ 26 ರಂದು ನಡೆಯುವ ಅಲ್ಲಿನ ಸ್ವಾತಂತ್ರ್ಯ ದಿನಾಚರಣೆ ಮುಖ್ಯ ಅತಿಥಿಯಾಗಿ ಭಾಗವಹಿಸಲು ಭಾರತದ ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ

ಮಾಲ್ಡೀವ್ಸ್ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರಿಗೆ ಆಹ್ವಾನ Read More »

ಪುತ್ತೂರು ತಾಲೂಕಿನ 18 ಸರ್ಕಾರಿ ಶಾಲೆಗಳಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್‌ ಮೀಡಿಯಂ ಕಲಿಕೆ

ದ.ಕ. ಜಿಲ್ಲೆಯ 115 ಸೇರಿ ರಾಜ್ಯದ 4,134 ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಬೋಧನೆಗೆ ಅನುಮತಿ ಮಂಗಳೂರು: ಪುತ್ತೂರಿನ 18 ಸೇರಿ ದಕ್ಷಿಣ ಕನ್ನಡ ಜಿಲ್ಲೆಯ 115 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 2025–26ನೇ ಶೈಕ್ಷಣಿಕ ವರ್ಷದಿಂದ ಇಂಗ್ಲಿಷ್‌ ಮಾಧ್ಯಮ ಶುರುವಾಗಲಿದೆ. ರಾಜ್ಯದ ಒಟ್ಟು 4,134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇತರ ಮಾಧ್ಯಮಗಳ ಜೊತೆಗೆ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಹೊಸದಾಗಿ ಪ್ರಾರಂಭಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ 115 ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು

ಪುತ್ತೂರು ತಾಲೂಕಿನ 18 ಸರ್ಕಾರಿ ಶಾಲೆಗಳಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್‌ ಮೀಡಿಯಂ ಕಲಿಕೆ Read More »

ಅಪಘಾತದಲ್ಲಿ ಗಾಯಗೊಂಡಿದ್ದ ಯುವ ವೈದ್ಯ ಸಾವು

ಸುಳ್ಯದ ಸೋಂಣಂಗೇರಿ ಸಮೀಪ ಸಂಭವಿಸಿದ ಅಪಘಾತ ಮಂಗಳೂರು : ಸುಳ್ಯ ಸಮೀಪ ಸೋಣಂಗೇರಿ ಸಮೀಪ ಕೆಲದಿನಗಳ ಹಿಂದೆ ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ್ದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವ ವೈದ್ಯರೊಬ್ಬರು ಚಿಕಿತ್ಸೆ ಫಲನೀಡದೆ ಮೃತಪಟ್ಟಿದ್ದಾರೆ. ಕಲ್ಲುಗುಂಡಿಯ ಡಾ.ಶಮಂತ್ ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಆಸ್ಪತ್ರೆಯಲ್ಲಿ ಜುಲೈ 4ರಂದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಕಾಲಿಗೆ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಾಲು ತೀವ್ರವಾಗಿ ಜಖಂಗೊಂಡಿದ್ದ

ಅಪಘಾತದಲ್ಲಿ ಗಾಯಗೊಂಡಿದ್ದ ಯುವ ವೈದ್ಯ ಸಾವು Read More »

ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ

ಪಾಟ್ನಾ : ವಿಧಾನಸಭೆ ಚುನಾವಣೆಗೆ ಅಣಿಯಾಗುತ್ತಿರುವ ಬಿಹಾರದಲ್ಲಿ ಉದ್ಯಮಿ ಹಾಗೂ ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಅವರನ್ನು ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಪಾಟ್ನಾದ ಅವರ ಮನೆಯ ಮುಂದೆಯೇ ಗುಂಡಿಕ್ಕಿ ಕೊಂದಿದ್ದಾರೆ. ಗಾಂಧಿ ಮೈದಾನ ಪೊಲೀಸ್ ಠಾಣೆ ಪ್ರದೇಶದ ಪನಾಚೆ ಎಂಬ ಹೋಟೆಲ್ ಬಳಿ ಈ ಘಟನೆ ನಡೆದಿದ್ದು, ಖೇಮ್ಕಾ ಮನೆಗೆ ತೆರಳುತ್ತಿದ್ದಾಗದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೋಟೆಲ್ ಪಕ್ಕದಲ್ಲಿರುವ ‘ಟ್ವಿನ್ ಟವರ್’ ಸೊಸೈಟಿಯಲ್ಲಿ ಗೋಪಾಲ್ ಖೇಮ್ಕಾ ವಾಸವಾಗಿದ್ದರು. ಗುಂಡಿನ ದಾಳಿಗೆ ಖೇಮ್ಕಾ ಸ್ಥಳದಲ್ಲೇ ಪ್ರಾಣ

ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ Read More »

ಮೇಯಲು ಬಿಟ್ಟ ದನಗಳನ್ನು ಕಾರಿನಲ್ಲಿ ತುಂಬಿಸಿ ಕೊಂಡೊಯ್ದ ದುರುಳರು | ಪ್ರಕರಣ ದಾಖಲು

ಬಿ.ಸಿ.ರೋಡ್ : ಮೇಯಲು ಬಿಟ್ಟಿದ್ದ ದನಗಳನ್ನು ಇಬ್ಬರು ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ತುಂಬಿಸಿ ಕೊಂಡೊಯ್ದ ಕುರಿತು ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಮ್ಮುಂಜೆ ಗ್ರಾಮದ ಕಲಾಯಿ ಹೌಸ್ ಎಂಬಲ್ಲಿ ನಡೆದಿದೆ. ಮಲ್ಲೂರು ಗ್ರಾಮದ ಘಟ್ಟಬೆಟ್ಡು ನಿವಾಸಿ ಜಗದೀಶ್ ಕುಲಾಲ್ ರವರಲ್ಲಿ 12 ದನಗಳಿದ್ದು ಜೂನ್ 28ರಂದು ಮೇಯಲು ಬಿಟ್ಡಿದ್ದು, ಇದರಲ್ಲಿ ಎರಡು ಗಂಡು ಕರುಗಳು ಕಾಣೆಯಾಗಿದೆ. ಈ ಬಗ್ಗೆ ಸ್ಥಳಿಯರಲ್ಲಿ ವಿಚಾರಿಸಿದ್ದು ಕಲಾಯಿ ಹೌಸ್ ಎಂಬಲ್ಲಿ ರಸ್ತೆ ಕಾಣುವಂತೆ ಸಿಸಿ

ಮೇಯಲು ಬಿಟ್ಟ ದನಗಳನ್ನು ಕಾರಿನಲ್ಲಿ ತುಂಬಿಸಿ ಕೊಂಡೊಯ್ದ ದುರುಳರು | ಪ್ರಕರಣ ದಾಖಲು Read More »

ಮಳೆ ದಾಖಲೆಯಲ್ಲಿ ಚಿರಾಪುಂಜಿಯನ್ನು ಹಿಂದಿಕ್ಕಿದ ಉಡುಪಿ

ಒಂದು ತಿಂಗಳಲ್ಲಿ 1,140 ಮಿ.ಮೀ ಮಳೆ ಸುರಿದು ಹೊಸ ದಾಖಲೆ ಉಡುಪಿ: ಮೇಘಾಲಯದ ಚಿರಾಪುಂಜಿ ದೇಶದಲ್ಲಿ ಅತ್ಯಧಿಕ ಮಳೆಯಾಗುವ ಪ್ರದೇಶ ಎಂಬ ದಾಖಲೆ ಅನೇಕ ವರ್ಷಗಳಿಂದ ಇದೆ. ಆದರೆ ಈ ಸಲ ಉಡುಪಿ ಜಿಲ್ಲೆ ಮಳೆ ದಾಖಲೆಯಲ್ಲಿ ಚಿರಾಪುಂಜಿಯನ್ನು ಹಿಂದಿಕ್ಕಿದೆ. ಜೂನ್‌ ತಿಂಗಳಲ್ಲಿ ಉಡುಪಿಯಾದ್ಯಂತ ದಾಖಲೆಯ ಮಳೆ ಸುರಿದಿದ್ದು, ಕರ್ನಾಟಕದಲ್ಲಿ ಅತ್ಯಧಿಕ ಮಳೆಯಾಗುವ ಆಗುಂಬೆಯನ್ನೂ ಹಿಂದಿಕ್ಕಿದೆ. ಜೂನ್ ತಿಂಗಳ ಮಳೆ ಲೆಕ್ಕಾಚಾರದಲ್ಲಿ ಉಡುಪಿ ಜಿಲ್ಲೆ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಒಂದು ತಿಂಗಳಲ್ಲಿ 1,140 ಮಿ.ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ

ಮಳೆ ದಾಖಲೆಯಲ್ಲಿ ಚಿರಾಪುಂಜಿಯನ್ನು ಹಿಂದಿಕ್ಕಿದ ಉಡುಪಿ Read More »

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಆರೋಪಿ ರನ್ಯಾಳ 34.12 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು

ಬೆಎಂಗಳೂರಿನ ಮನೆ, ನಿವೇಶನ ಇನ್ನಿತರ ಆಸ್ತಿ ಜಪ್ತಿ ಬೆಂಗಳೂರು : ಚಿನ್ನ ಕಳ್ಳ ಸಾಗಾಟ ಪ್ರಕರಣದಲ್ಲಿ ಬಂಧಿತಳಾಗಿರುವ ನಟಿ ರನ್ಯಾ ರಾವ್​​ಗೆ ಸೇರಿದ 34.12 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಬೆಂಗಳೂರಿನ ಅರ್ಕಾವತಿ ಬಡವಾಣೆಯಲ್ಲಿನ ನಿವೇಶನ, ವಿಕ್ಟೋರಿಯಾ ಲೇಔಟ್​ನಲ್ಲಿನ ಮನೆ, ಅನೇಕಲ್​ನಲ್ಲಿನ ಕೃಷಿ ಜಮೀನು ಮತ್ತು ತುಮಕೂರಿನಲ್ಲಿನ ಜಮೀನನ್ನು ಇಡಿ ಜಪ್ತಿ ಮಾಡಿದೆ. ಸಿಬಿಐ ಮತ್ತು ರೆವಿನ್ಯೂ ಗುಪ್ತಚರ ನಿರ್ದೇಶನಾಲಯ (ಡಿಆರ್​ಐ) ಒಪ್ಪಿಗೆ ಮೇರೆಗೆ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿದೆ.

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಆರೋಪಿ ರನ್ಯಾಳ 34.12 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು Read More »

ಪಿಲಿಕುಳ ಜೈವಿಕ ಉದ್ಯಾನದಲ್ಲಿ ಪ್ರಾಣಿಗಳ ನಿಗೂಢ ಸಾವು

ಒಂಬತ್ತು ಅಪರೂಪದ ಪ್ರಾಣಿಗಳು ಮೃತಪಟ್ಟಿರುವುದು ಬಹಿರಂಗ ಮಂಗಳೂರು: ಮಂಗಳೂರಿನ ವಾಮಂಜೂರು ಸಮೀಪ ಇರುವ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಕೆಲವು ಪ್ರಾಣಿಗಳು ನಿಗೂಢವಾಗಿ ಮೃತಪಟ್ಟಿವೆ. ಕೇವಲ ಒಂದು ವಾರದಲ್ಲೇ 2 ಕೃಷ್ಣಮೃಗ, 5 ಪುನುಗು ಬೆಕ್ಕು, 1 ಬಿಳಿಗೂಬೆ ಹಾಗೂ 1 ಬರಿಂಕ ಸೇರಿದಂತೆ ಒಟ್ಟು 9 ಪ್ರಾಣಿಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಪಿಲಿಕುಳ ಜೈವಿಕ ಉದ್ಯಾನವನದೊಳಗೆ ನೀರು ನುಗ್ಗಿ, ಕಂಪೌಂಡ್ ಕುಸಿದು ಪ್ರಾಣಿಗಳಿಗೆ ತೊಂದರೆಯಾಗಿತ್ತು. ಈ ಬಗ್ಗೆ ವನ್ಯಜೀವಿ ಸಂರಕ್ಷಕ ಭುವನ್ ದೇವಾಡಿಗ ಅವರು ಸೆಂಟ್ರಲ್

ಪಿಲಿಕುಳ ಜೈವಿಕ ಉದ್ಯಾನದಲ್ಲಿ ಪ್ರಾಣಿಗಳ ನಿಗೂಢ ಸಾವು Read More »

error: Content is protected !!
Scroll to Top