ಇಂದಿನಿಂದ ಮೂರು ದಿನ ಡಿ.ಕೆ ಶಿವಕುಮಾರ್‌ಗೆ ಪೂರ್ಣ ವಿಶ್ರಾಂತಿ

ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳೆಲ್ಲ ರದ್ದು ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅನಾರೋಗ್ಯದಿಂದ ಬಳಲುತ್ತಿದ್ದು, ಈ ಹಿನ್ನಲೆಯಲ್ಲಿ ಅವರು ಮಂಗಳವಾರದಿಂದ ಮೂರು ದಿನ ಸಂಪೂರ್ಣ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ. ಇಂದಿನಿಂದ ಮೂರು ದಿನ ಅವರು ಯಾರನ್ನೂ ಭೇಟಿ ಆಗಲ್ಲ. ಈ ಬಗ್ಗೆ ಡಿ.ಕೆ ಶಿವಕುಮಾರ್ ತನ್ನ ಸಾಮಾಜಿಕ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದು, ನಾಳೆಯಿಂದ ಮೂರು ದಿನಗಳ ಕಾಲ ಯಾರನ್ನೂ ಭೇಟಿ ಆಗಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಯಾರನ್ನೂ ಭೇಟಿ ಆಗಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ […]

ಇಂದಿನಿಂದ ಮೂರು ದಿನ ಡಿ.ಕೆ ಶಿವಕುಮಾರ್‌ಗೆ ಪೂರ್ಣ ವಿಶ್ರಾಂತಿ Read More »

ಅಚ್ಚರಿ ಹುಟ್ಟಿಸಿದ ಉಪರಾಷ್ಟ್ರಪತಿ ದಿಢೀರ್‌ ರಾಜೀನಾಮೆ

ಅನಾರೋಗ್ಯದ ಹಿನ್ನೆಲೆಯಲ್ಲಿ ಹುದ್ದೆ ತೊರೆದ ಜಗದೀಪ್ ಧನ್‌ಖರ್ ನವದೆಹಲಿ : ದಿಢೀರ್‌ ಬೆಳವಣಿಗೆಯೊಂದರಲ್ಲಿ ಮುಂಗಾರು ಅಧಿವೇಶನದ ಮೊದಲ ದಿನವೇ ಉಪರಾಷ್ಟ್ರಪತಿ ಜಗದೀಪ್ ಧನ್‌ಖರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಅಚ್ಚರಿ ಹುಟ್ಟಿಸಿದ್ದಾರೆ.ಜಗದೀಪ್ ಧನ್‌ಖರ್ 2022ರ ಆಗಸ್ಟ್‌ನಲ್ಲಿ ಭಾರತದ ಉಪರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಕೆಲ ದಿನಗಳ ಹಿಂದೆ ಉತ್ತರಖಂಡದ ನೈನಿತಾಲ್‌ನ ಕುಮಾವೂನ್ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿದ್ದ ವೇಳೆ ಉಪರಾಷ್ಟ್ರಪತಿ ಜಗದೀಪ್ ಧನ್‌ಖರ್ ಮೂರ್ಛೆ ಹೋಗಿದ್ದರು. ನಿನ್ನೆ ಬೆಳಗ್ಗೆ ಕೂಡ ತಮ್ಮ ಕಚೇರಿಯಲ್ಲಿ ಕುಸಿದು ಬಿದ್ದಿದ್ದರು ಎನ್ನಲಾಗಿದೆ. ಹೃದಯ

ಅಚ್ಚರಿ ಹುಟ್ಟಿಸಿದ ಉಪರಾಷ್ಟ್ರಪತಿ ದಿಢೀರ್‌ ರಾಜೀನಾಮೆ Read More »

ಖರ್ಗೆ ಪ್ರಧಾನಿ ಆಗಬಹುದು ಎಂದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ

ಬೆಂಗಳೂರು: ಕಾಂಗ್ರೆಸ್‌ಗೆ ದಲಿತರ ಮೇಲೆ ಕಾಳಜಿ ಇದ್ದರೆ ಮಲ್ಲಿಕಾರ್ಜುನ ಖರ್ಗೆಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಿ ಎಂದು ಬಿಜೆಪಿ ವ್ಯಂಗ್ಯ ಮಾಡುತ್ತದೆ. ನಮ್ಮ ಆಶಯ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಆಗಲಿ ಎಂಬುದೇ ಆಗಿದೆ ಎಂದು ಸಿ ಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಈ ಸೆಪ್ಟೆಂಬರ್ ತಿಂಗಳಲ್ಲಿ 75 ವರ್ಷ ತುಂಬಿ ಅವರು ಬಿಜೆಪಿ ನಿಯಮದಂತೆ ಅಧಿಕಾರ ತ್ಯಜಿಸಲಿದ್ದಾರೆ. ಇದು ರಾಜಕೀಯ ಬದಲಾವಣೆಗೆ ಕಾರಣವಾಗಬಹುದು. ಬಿಜೆಪಿಗೆ ಬೆಂಬಲ ನೀಡಿದ ಪಕ್ಷಗಳು

ಖರ್ಗೆ ಪ್ರಧಾನಿ ಆಗಬಹುದು ಎಂದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ Read More »

ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ NEET, CET  /JEE ಫೌಂಡೇಶನ್‍ ತರಬೇತಿ ಆರಂಭ

ಪುತ್ತೂರು: ಏಳ್ಮುಡಿಯಲ್ಲಿರುವ ಪ್ರಭು ಬಿಲ್ಡಿಂಗ್‍ ನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ NEET, CET, JEE ಫೌಂಡೇಶನ್‍ ತರಬೇತಿ ಆರಂಭಗೊಂಡಿದೆ. ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕೋರ್ಸ್ ನ ಸದುಪಯೋಗ ಪಡೆದುಕೊಳ್ಳಬಹುದು. ನುರಿತ, ಅನುಭವಿ ಅಧ್ಯಾಪಕರಿಂದ ತರಬೇತಿ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ‘ಪ್ರೇರಣಾ’, ಮೊದಲ ಮಹಡಿ, ಪ್ರಭು ಬಿಲ್ಡಿಂಗ್‍, ಕೆನರಾ ಬ್ಯಾಂಕ್‍ ಬಳಿ, ಅರುಣಾ ಥಿಯೇಟರ್ ಎದುರು, ಮುಖ್ಯ ರಸ್ತೆ ಪುತ್ತೂರು.  8904877721, 7204977721 ಹಾಗೂ 08251-200721 ನಂಬರನ್ನು ಸಂಪರ್ಕಿಸಬಹುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ NEET, CET  /JEE ಫೌಂಡೇಶನ್‍ ತರಬೇತಿ ಆರಂಭ Read More »

GST ನೊಟೀಸ್ ನೀಡುವ ಮೂಲಕ ಬಡವರಿಗೆ ಬಿಜೆಪಿಯಿಂದ ಕಿರುಕುಳ: ಡಿ.ಕೆ. ಶಿವಕುಮಾರ್

ಬೆಂಗಳೂರು: ಬಿಜೆಪಿಯವರು ಬೆಣ್ಣೆ ತಿಂದು ಕಾಂಗ್ರೆಸ್ ಮೂತಿಗೆ ಒರೆಸುವ ತಂತ್ರ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಸಣ್ಣ ವ್ಯಾಪಾರಿಗಳಿಗೆ GST ನೊಟೀಸ್ ಜಾರಿ ಮಾಡುವ ಮೂಲಕ ಬಿಜೆಪಿ ಬಡವರಿಗೆ ಕಿರುಕುಳ ನೀಡುತ್ತಿದೆ. ಈ ನೀತಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಕೇಂದ್ರ ಸರ್ಕಾರ 2019 ರಲ್ಲೇ ವಹಿವಾಟು ಮಿತಿ ನಿಗದಿ ಮಾಡಿ ಇದನ್ನು ಪಾಲಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೂ ‌ಸೂಚಿಸಿದೆ. ಸಣ್ಣ ವ್ಯಾಪಾರದ ಮೂಲಕ ಜೀವನ ಕಟ್ಟಿಕೊಂಡ 14 ಸಾವಿರ ವ್ಯಾಪಾರಿಗಳಿಗೆ ಈಗಾಗಲೇ ನೊಟೀಸ್

GST ನೊಟೀಸ್ ನೀಡುವ ಮೂಲಕ ಬಡವರಿಗೆ ಬಿಜೆಪಿಯಿಂದ ಕಿರುಕುಳ: ಡಿ.ಕೆ. ಶಿವಕುಮಾರ್ Read More »

ರಾಜ್ಯದಲ್ಲಿನ್ನು VIP ವಾಹನಗಳ ಸೈರನ್‌ಗಿಲ್ಲ ಅವಕಾಶ: ಪೊಲೀಸ್ ಮಹಾನಿರ್ದೇಶಕರಿಂದ ಮಹತ್ವದ ಆದೇಶ

ಬೆಂಗಳೂರು: ಗಣ್ಯ ವ್ಯಕ್ತಿಗಳ ವಿಐಪಿ ಸಂಚಾರದ ವೇಳೆ ಸೈರನ್ ‌ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ಅವರು ಮಹತ್ವದ ಆದೇಶ‌ ಹೊರಡಿಸಿದ್ದಾರೆ. ಶಬ್ಧ ಮಾಲಿನ್ಯ ತಪ್ಪಿಸುವುದು ಮುತ್ತು ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಸೈರನ್ ‌ನಿಷೇಧಿಸಲಾಗಿದೆ. ಜೊತೆಗೆ ಗಣ್ಯ ವ್ಯಕ್ತಿಗಳ ವಾಹನಗಳ ಸೈರನ್ ಶಬ್ದದಿಂದ ಅವರು ಸಂಚರಿಸುವ ಮಾರ್ಗದ ಬಗ್ಗೆ ಅನಧಿಕೃತ ವ್ಯಕ್ತಿಗಳಿಗೂ ಮಾಹಿತಿ ಸಿಗುತ್ತದೆ. ಕೆಲ ಸಂದರ್ಭದಲ್ಲಿ ಇದು ಅಪಾಯಕ್ಕೂ ‌ಕಾರಣವಾಗುತ್ತದೆ ಎಂಬ ಕಾರಣಕ್ಕೆ ಸೈರನ್ ‌ನಿಷೇಧಕ್ಕೆ ಮುಂದಾಗಿರುವುದಾಗಿದೆ‌. ಸಾರ್ವಜನಿಕ ಸ್ಥಳಗಳಲ್ಲಿ

ರಾಜ್ಯದಲ್ಲಿನ್ನು VIP ವಾಹನಗಳ ಸೈರನ್‌ಗಿಲ್ಲ ಅವಕಾಶ: ಪೊಲೀಸ್ ಮಹಾನಿರ್ದೇಶಕರಿಂದ ಮಹತ್ವದ ಆದೇಶ Read More »

ಆರ್ಯಾಪು ನಿವಾಸಿ ವಿಶ್ವನಾಥ ನಾಯ್ಕ ನಿಧನ

ಪುತ್ತೂರು: ತಾಲೂಕಿನ ಆರ್ಯಾಪು ಗ್ರಾಮದ ಮೇಗಿನ‌ ಪಂಜ ನಿವಾಸಿ, ಅರ್ಯಾಪು ಗ್ರಾಪಂನ ಮಾಜಿ ಅಧ್ಯಕ್ಷೆ ಸರಸ್ವತಿ ಅವರ ಪತಿ ವಿಶ್ವನಾಥ ನಾಯ್ಕ(42) ಅವರು ಸೋಮವಾರ ಬೆಳಗ್ಗೆ ನಿಧನರಾದರು. ಕೂಲಿ ಕಾರ್ಮಿಕರಾಗಿದ್ದ ವಿಶ್ವನಾಥ ಅವರು ಭಾನುವಾರ ಸಂಜೆ ಅಸ್ವಸ್ಥತೆಗೆ ಒಳಗಾಗಿದ್ದರು. ಅವರನ್ನು ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ಅವರು ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಆರ್ಯಾಪು ನಿವಾಸಿ ವಿಶ್ವನಾಥ ನಾಯ್ಕ ನಿಧನ Read More »

ಆನೆ ದಾಳಿಯಿಂದ ಮಹಿಳೆ ಮೃತಪಟ್ಟ ಪ್ರಕರಣ | ಅರಣ್ಯ ಇಲಾಖೆಯಿಂದ 20 ಲಕ್ಷ ಪರಿಹಾರ

ಪುತ್ತೂರು: ಕೆಲದಿನಗಳ ಹಿಂದೆ ಕೊಳ್ತಿಗೆ ಗ್ರಾಮದ ಕಣಿಯಾರ್ ಎಂಬಲ್ಲಿ ಆನೆ ದಾಳಿಯಿಂದ ಮೃತಪಟ್ಟಿದ್ದ ಕಾರ್ಮಿಕೆ ಸೆಲ್ಲಮ್ಮ ಅವರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 20 ಲಕ್ಷ ಪರಿಹಾರ ಮಂಜೂರಾಗಿದೆ. ಎ.29 ರಂದು ಬೆಳಗ್ಗಿನ ಜಾವ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ವೇಳೆ ದಿಡೀರನೆ ಕಾಡಿನ ಕಡೆಯಿಂದ ಬಂದ ಆನೆ ಸೆಲ್ಲಮ್ಮ ಅವರ‌ಮೇಲೆ ದಾಳಿ ನಡೆಸಿ ಅವರನ್ನು ಕೊಂದು ಹಾಕಿತ್ತು. ಮೃತ ಸೆಲ್ಲಮ್ಮ ಅವರ ಕುಟುಂಬಕ್ಕೆ ಶಾಸಕ ಅಶೋಕ್ ರೈ ಅವರ ಶಿಫಾರಸ್ಸಿನಂತೆ 20 ಲಕ್ಷ ಪರಿಹಾರ ಮಂಜೂರಾಗಿದೆ. ಮಂಜೂರಾತಿ ಪತ್ರವನ್ನು

ಆನೆ ದಾಳಿಯಿಂದ ಮಹಿಳೆ ಮೃತಪಟ್ಟ ಪ್ರಕರಣ | ಅರಣ್ಯ ಇಲಾಖೆಯಿಂದ 20 ಲಕ್ಷ ಪರಿಹಾರ Read More »

ಧರ್ಮಸ್ಥಳ ಪ್ರಕರಣದ ತನಿಖೆಗಾಗಿ ಸರಕಾರ ಎಸ್‍ ಐಟಿ ರಚಿಸಿರುವುದು ಸ್ವಾಗತಾರ್ಹ : ವಿಶ್ವ ಹಿಂದೂ ಪರಿಷತ್‍

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಢಳದ ಪ್ರಕರಣದಲ್ಲಿ ಸರಕಾರ ಎಸ್‍ ಐಟಿ ರಚಿಸಿ ತನಿಖೆಗೆ ಆದೇಶಿಸಿರುವುದು ಸ್ವಾಗತಾರ್ಹ. ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಶವಗಳನ್ನು ಹೂತಿರುವ ಆರೋಪದ ತನಿಖೆಗಾಗಿ ಸರ್ಕಾರ ಎಸ್‍ ಐಟಿ ರಚಿಸಿ ತನಿಖೆಗೆ ಆದೇಶಿಸಿದ ನಿರ್ಧಾರವನ್ನು ವಿಶ್ಟ ಹಿಂದೂ ಪರಿಷದ್ ಸ್ಟಾಗತಿಸುತ್ತಿದೆ. ತನಿಖೆಯು ನಿಷ್ಪಕ್ಷಪಾತವಾಗಿ ನಡೆಯಲಿ ಹಾಗೂ ವಿಷಯದ ಸತ್ಯಾಸತ್ಯತೆ ಸಮಾಜಕ್ಕೆ ತಿಳಿಯಲಿ ಎಂದು ವಿಶ್ವ ಹಿಂದೂ ಪರಿಷತ್‍ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧರ್ಮಸ್ಥಳ ಪ್ರಕರಣದ ತನಿಖೆಗಾಗಿ ಸರಕಾರ ಎಸ್‍ ಐಟಿ ರಚಿಸಿರುವುದು ಸ್ವಾಗತಾರ್ಹ : ವಿಶ್ವ ಹಿಂದೂ ಪರಿಷತ್‍ Read More »

ಸಿದ್ದರಾಮಯ್ಯ ಅವರದ್ದು ಹೋರಾಟದ ಹಿನ್ನೆಲೆ ಅಲ್ಲ : ಬಿ.ವೈ. ವಿಜಯೇಂದ್ರ

ವಿಜಯನಗರ: ಸಿ ಎಂ ಸಿದ್ದರಾಮಯ್ಯ ಅವರು ಅಹಿಂದ ಹೆಸರು ಬಳಸಿಕೊಂಡು ಡಾ. ಜಿ. ಪರಮೇಶ್ವರ್, ಖರ್ಗೆ ಅವರನ್ನು ತುಳಿಯುವ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ‌ಬಿ. ವೈ. ವಿಜಯೇಂದ್ರ ಹೇಳಿದ್ದಾರೆ. ವಿಜಯನಗರದ ಕಾನಾಮಡುಗು ದಾಸೋಹ ಮಠಕ್ಕೆ ಭೇಟಿ ನೀಡಿದ ಅವರು ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದರು‌. ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಾಧನಾ ಸಮಾವೇಶ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಮಾಡಿದ ಕಾರ್ಯಕ್ರಮ. ಈ ಸಮಾವೇಶದ ಮೂಲಕ ಹೈಕಮಾಂಡ್ ಅನ್ನು ಬೆದರಿಸುವ ಪ್ರಯತ್ನ ಮಾಡಿದ್ದಾರೆ

ಸಿದ್ದರಾಮಯ್ಯ ಅವರದ್ದು ಹೋರಾಟದ ಹಿನ್ನೆಲೆ ಅಲ್ಲ : ಬಿ.ವೈ. ವಿಜಯೇಂದ್ರ Read More »

error: Content is protected !!
Scroll to Top