24 ಕಳ್ಳತನ, ಕೊಲೆಯತ್ನ ಪ್ರಕರಣಗಳ ಆರೋಪಿ ಸೆರೆ

ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದವ ಸಿಸಿಬಿ ಪೊಲೀಸರ ಬಲೆಗೆ ಮಂಗಳೂರು : 24 ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಜನಾಡಿ ಕಲ್ಕಟ್ಟ ಬದ್ರಿಯ ನಗರದ ಮೊಹಮ್ಮದ್ ಅಬ್ದುಲ್ ಫಯಾನ್(27) ಸೆರೆಯಾದ ಆರೋಪಿ. ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ವಿವಿಧ ಕಳವು, ಕೊಲೆಯತ್ನ, ಕಾರಾಗೃಹದಲ್ಲಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ಪ್ರಕರಣಗಳು ಸೇರಿದಂತೆ 24 ಪ್ರಕರಣಗಳಲ್ಲಿ ಭಾಗಿಯಾಗಿರುವ ಈತ ನ್ಯಾಯಾಲಯದಿಂದ […]

24 ಕಳ್ಳತನ, ಕೊಲೆಯತ್ನ ಪ್ರಕರಣಗಳ ಆರೋಪಿ ಸೆರೆ Read More »

ಇಂದಿನಿಂದ ಮ್ಯಾಚೆಂಸ್ಟರ್​ನಲ್ಲಿ ನಾಲ್ಕನೇ ಟೆಸ್ಟ್‌ ಪಂದ್ಯ : ಭಾರತದ ಪಾಲಿಗೆ ನಿರ್ಣಾಯಕ

ಗೆಲ್ಲುವುದು ಅಥವಾ ಡ್ರಾ ಸಾಧಿಸಿದರಷ್ಟೇ ಟೀಮ್‌ ಇಂಡಿಯಾ ಸರಣಿ ಆಸೆ ಜೀವಂತ ಲಂಡನ್‌ : ಭಾರತ-ಇಂಗ್ಲೆಂಡ್‌ ಐದು ಪಂದ್ಯಗಳ ಟೆಸ್ಟ್‌ ಸರಣಿಯ ನಾಲ್ಕನೇ ಪಂದ್ಯ ಇಂದಿನಿಂದ ಮ್ಯಾಚೆಂಸ್ಟರ್​ನಲ್ಲಿ ಪ್ರಾರಂಭವಾಗಲಿದೆ. ನಾಲ್ಕನೇ ಟೆಸ್ಟ್ ಪಂದ್ಯ ಟೀಮ್ ಇಂಡಿಯಾ ಪಾಲಿಗೆ ಅತ್ಯಂತ ನಿರ್ಣಾಯಕ. ಸರಣಿಯಲ್ಲಿ ಇಂಗ್ಲೆಂಡ್ ಈಗಾಗಲೇ 2-1 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದು, ಹೀಗಾಗಿ ಮ್ಯಾಚೆಂಸ್ಟರ್​ನಲ್ಲಿ ಭಾರತ ತಂಡ ಗೆಲ್ಲುವುದು ಅಥವಾ ಡ್ರಾ ಸಾಧಿಸುವುದು ಅನಿವಾರ್ಯ. ಮೂರನೇ ಟೆಸ್ಟ್‌ನಲ್ಲಿ ಗೆಲ್ಲುವ ಚಿನ್ನದಂಥ ಅವಕಾಶವನ್ನು ಕೈಚೆಲ್ಲಿ ಭಾರತ ಈಗ ಪೇಚಾಡುತ್ತಿದೆ. ಆದರೆ

ಇಂದಿನಿಂದ ಮ್ಯಾಚೆಂಸ್ಟರ್​ನಲ್ಲಿ ನಾಲ್ಕನೇ ಟೆಸ್ಟ್‌ ಪಂದ್ಯ : ಭಾರತದ ಪಾಲಿಗೆ ನಿರ್ಣಾಯಕ Read More »

ಧರ್ಮಸ್ಥಳ ಪ್ರಕರಣ : ಇಂದಿನಿಂದ ಎಸ್‌ಐಟಿ ತನಿಖೆ ಶುರು

ತನಿಖಾ ತಂಡಕ್ಕೆ ಹೆಚ್ಚುವರಿಯಾಗಿ 20 ಪೊಲೀಸ್‌ ಅಧಿಕಾರಿಗಳ ನೇಮಕ ಮಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಡಲಾಗಿದೆ ಎಂದು ಆರೋಪಿಸಿದ ಪ್ರಕರಣದ ತನಿಖೆ ನಡೆಸಲು ರಾಜ್ಯ ಸರ್ಕಾರ ರಚಿಸಿದ ಎಸ್‌ಐಟಿ ಬುಧವಾರದಿಂದ ತನಿಖೆ ಆರಂಭಿಸಲಿದೆ. ನಾಲ್ವರು ಐಪಿಎಸ್‌ ಅಧಿಕಾರಿಗಳ ಎಸ್‌ಐಟಿ ತಂಡ ರಚಿಸಲಾಗಿದ್ದು, ಇದಕ್ಕೆ ನಿನ್ನೆ ಮತ್ತೆ 20 ಅಧಿಕಾರಿಗಳನ್ನು ನೇಮಿಸಲಾಗಿದೆ. ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ನೇತೃತ್ವದ ವಿಶೇಷ ತನಿಖಾ ತಂಡ ಇಂದು ಧರ್ಮಸ್ಥಳಕ್ಕೆ ತೆರಳಿ ಮೊದಲು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅನಾಮಿಕ ವ್ಯಕ್ತಿ ನೀಡಿದ ದೂರಿನ

ಧರ್ಮಸ್ಥಳ ಪ್ರಕರಣ : ಇಂದಿನಿಂದ ಎಸ್‌ಐಟಿ ತನಿಖೆ ಶುರು Read More »

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಹೈಕಮಾಂಡ್ ತೀರ್ಮಾನಿಸುತ್ತದೆ: ಸತೀಶ್ ಜಾರಕಿಹೊಳಿ

ವಿಜಯಪುರ: ಸಿಎಂ ‌ಸ್ಥಾನದಲ್ಲಿ ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಮುಂದುವರೆಯುವುದಾಗಿ ಹೇಳಿಕೊಂಡಿದ್ದಾರೆ. ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಹೇಳಿದ್ದಾರೆ. ಹೀಗಿರುವಾಗ ಇದರಲ್ಲಿ ಮುಸುಕಿನ ಗುದ್ದಾಟದ ಪ್ರಶ್ನೆ ಎಲ್ಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಕೇಳಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಬಗ್ಗೆ ಸಿ ಎಂ, ಡಿಸಿಎಂ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಮತ್ತೆ ನಾವೇನು ‌ಮಾತನಾಡಲು ಸಾಧ್ಯ. ನಮ್ಮಲ್ಲಿ ಏನಿದ್ದರೂ ಹೈಕೋರ್ಟ್ ನಿರ್ಧಾರ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯೂ

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಹೈಕಮಾಂಡ್ ತೀರ್ಮಾನಿಸುತ್ತದೆ: ಸತೀಶ್ ಜಾರಕಿಹೊಳಿ Read More »

ಜಗದೀಪ್ ಧನ್ಕರ್ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ: ಪ್ರಧಾನಿ ಮೋದಿ ಟ್ವೀಟ್

ನವದೆಹಲಿ: ಉಪರಾಷ್ಟ್ರಪತಿ ಹುದ್ದೆ ಅಲಂಕಿರಿಸ್ದದ ಜಗದೀಪ್ ಧನ್ಕರ್ ಅವರು ತಮ್ಮ ಸ್ಥಾನಕ್ಕೆ ಅನಾರೋಗ್ಯದ ನೆಪವೊಡ್ಡಿ ರಾಜೀನಾಮೆ ನೀಡಿದ್ದು, ಈ ಸಂಬಂಧ ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ. ತಮ್ಮ ಸಾಮರ್ಥ್ಯಕ್ಕೆ ಸರಿಯಾಗಿ ಧನ್ಕರ್ ಅವರಿದೆ ದೇಶಕ್ಕಾಗಿ ಸೇವೆ ಸಲ್ಲಿಸಲು ಹಲವಾರು ಅವಕಾಶಗಳು ಲಭಿಸಿವೆ. ಅವರಿಗೆ ಉತ್ತಮ ಆರೋಗ್ಯ ಲಭಿಸಲಿ ಎಂದು ಹಾರೈಸುವುದಾಗಿ ‌ತಿಳಿಸಿದ್ದಾರೆ. ಧನ್ಕರ್ ಅವರು ಅನಾರೋಗ್ಯವನ್ನು ಕಾರಣವನ್ನಾಗಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಪತ್ರ ಬರೆದಿದ್ದರು. ಈ ಬೆಳವಣಿಗೆ ಸಾರ್ವಜನಿಕ

ಜಗದೀಪ್ ಧನ್ಕರ್ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ: ಪ್ರಧಾನಿ ಮೋದಿ ಟ್ವೀಟ್ Read More »

ದರ್ಶನ್ ಪರ ವಕೀಲ ವಿಚಾರಣೆಗೆ ಗೈರು: ಜಾಮೀನು ಭವಿಷ್ಯ ಮುಂದೂಡಿದ ಸುಪ್ರೀಂ ಕೋರ್ಟ್

ಬೆಂಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ರೇಣುಕಾಸ್ವಾಮಿ ‌ಮರ್ಡರ್ ಕೇಸ್‌‌ನಲ್ಲಿ ಆರೋಪಿ ದರ್ಶನ್ ತೂಗುದೀಪ್‌ಗೆ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ವಿಚಾರಣೆ ಇಂದು ನಡೆಯಬೇಕಿತ್ತು. ಆದರೆ ದರ್ಶನ್ ಪರ ವಕೀಲರ ಗೈರುಹಾಜರಿಯಿಂದ ಪ್ರಕರಣದ ವಿಚಾರಣೆಯನ್ನು ಜುಲೈ 24 ಕ್ಕೆ ಮುಂದೂಡಲಾಗಿದೆ. ದರ್ಶನ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಬೇಕಾಗಿತ್ತು. ಆದರೆ ಅವರು ಈ ಪ್ರಕರಣದ ವಿಚಾರಣೆಗೆ ಗೈರಾಗಿದ್ದಾರೆ. ದರ್ಶನ್ ಪರ ಮತ್ತೊಬ್ಬ ವಕೀಲ

ದರ್ಶನ್ ಪರ ವಕೀಲ ವಿಚಾರಣೆಗೆ ಗೈರು: ಜಾಮೀನು ಭವಿಷ್ಯ ಮುಂದೂಡಿದ ಸುಪ್ರೀಂ ಕೋರ್ಟ್ Read More »

ಪ್ಯಾರಾಲಿಂಪಿಕ್ ಕ್ರೀಡಾಪಟುವಿಗೆ ಬಹುಮಾನ ನೀಡದ ರಾಜ್ಯ ಸರ್ಕಾರ: ದಂಡ ವಿಧಿಸಿದ ಹೈ ಕೋರ್ಟ್

ಬೆಂಗಳೂರು: ಕೈಗಳಿಲ್ಲದಿದ್ದರೂ‌ ಪ್ಯಾರಾಲಿಂಪಿಕ್ಸ್‌ಯ ಈಜು ಸ್ಪರ್ಧೆಯಲ್ಲಿ ಯಶ ಗಳಿಸಿದ ವಿಶ್ವಾಸ್ ಕೆ. ಎಸ್. ಅವರನ್ನು ಗೌರವಿಸದ ಹಿನ್ನೆಲೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ದಂಡ ವಿಧಿಸಿದ್ದು, ಕ್ರೀಡಾಪಟುವಿಗೆ ಬಹುಮಾನ ನೀಡುವಂತೆಯೂ ಆದೇಶಿಸಿದೆ. ಪ್ಯಾರಾಲಿಂಪಿಕ್ಸ್‌‌ನಲ್ಲಿ ಅಂತರಾಷ್ಟ್ರೀಯ ವೇದಿಕೆಯಲ್ಲಿ ಜಯಶಾಲಿಯಾದಾಗ ಅವರನ್ನು ಸರ್ಕಾರ ಗೌರವಿಸುವ ಕೆಲಸ ಮಾಡಬೇಕು. ಹಾಗೆಯೇ ಅವರ ಹಕ್ಕುಗಳನ್ನು ಹತ್ತಿಕ್ಕದ ಹಾಗೆಯೂ ಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ವಿಶ್ವಾಸ್ ಅವರು 2017 ಮತ್ತು 2023 ರಲ್ಲಿ ಪ್ಯಾರಾಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದರೂ ಅವರಿಗೆ ಬಹುಮಾನ ನೀಡಲಾಗಿಲ್ಲ. ಈ ಸಂಬಂಧ

ಪ್ಯಾರಾಲಿಂಪಿಕ್ ಕ್ರೀಡಾಪಟುವಿಗೆ ಬಹುಮಾನ ನೀಡದ ರಾಜ್ಯ ಸರ್ಕಾರ: ದಂಡ ವಿಧಿಸಿದ ಹೈ ಕೋರ್ಟ್ Read More »

ಉಪರಾಷ್ಟ್ರಪತಿ ಜಗದೀಪ್‌ ಧನ್ಕರ್‌ ರಾಜೀನಾಮೆಗೆ ಕಾರಣ ಅನಾರೋಗ್ಯವಲ್ಲ!

ಹೈಕೋರ್ಟ್‌ ನ್ಯಾಯಾಧೀಶ ಯಶವಂತ್‌ ವರ್ಮಾ ಮನೆಯಲ್ಲಿ ಕೋಟಿಗಟ್ಟಲೆ ಹಣ ಪತ್ತೆಯಾದ ಪ್ರಕರಣದ ಜೊತೆಗೆ ತಳಕು ಹಾಕಿಕೊಂಡಿದೆ ಧನ್ಕರ್‌ ದಿಢೀರ್‌ ನಿರ್ಧಾರ ನಿನ್ನೆ ರಾತ್ರಿ ರಾಜಧಾನಿಯ ರಾಜಕೀಯ ಪಡಸಾಲೆಯಲ್ಲಿ ನಡೆದ್ದಾದರೂ ಏನು…? ನವದೆಹಲಿ: ಉಪರಾಷ್ಟ್ರಪತಿ ಜಗದೀಪ್‌ ಧನ್ಕರ್‌ ಅವರ ಹಠಾತ್‌ ರಾಜೀನಾಮೆ ನಿರ್ಧಾರ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಆಡಳಿತ ಮತ್ತು ವಿಪಕ್ಷ ಎರಡೂ ಕಡೆಯವರಿಗೂ ಉಪರಾಷ್ಟ್ರಪತಿಯವರ ಈ ದಿಢೀರ್‌ ನಿರ್ಧಾರ ಅಚ್ಚರಿಗೆ ಮತ್ತು ಆಘಾತ ನೀಡಿದೆ. ಧನ್ಕರ್‌ ರಾಜೀನಾಮೆಗೆ ಅನಾರೋಗ್ಯದ ಕಾರಣ ನೀಡಿದ್ದರೂ ಒಳಗಿನ ಗುಟ್ಟು

ಉಪರಾಷ್ಟ್ರಪತಿ ಜಗದೀಪ್‌ ಧನ್ಕರ್‌ ರಾಜೀನಾಮೆಗೆ ಕಾರಣ ಅನಾರೋಗ್ಯವಲ್ಲ! Read More »

ವಿಟ್ಲದಲ್ಲಿ ಕಾರಿಗೆ ಮಿನಿ ಟಿಪ್ಪರ್‌ ಡಿಕ್ಕಿ : ನವವಿವಾಹಿತ ಸಾವು

ಸಹೋದರಿ ಮತ್ತು ಮಗುವಿಗೆ ಗಂಭೀರ ಗಾಯ ವಿಟ್ಲ: ವಿಟ್ಲ ಸಮೀಪದ ವೀರಕಂಬ ಗ್ರಾಮದ ಕೆಲಿಂಜ ಜಂಕ್ಷನ್‌ನಲ್ಲಿ ಮಿನಿ ಟಿಪ್ಪರ್ ಮತ್ತು ಆಲ್ಟೊ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ, ಕಾರಿನ ಚಾಲಕ ಮೃತಪಟ್ಟು, ಅವರ ಸಹೋದರಿ ಹಾಗೂ ಮಗು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಸೋಮವಾರ ಸಂಭವಿಸಿದೆ. ಅನೀಶ್ ಅನಂತಾಡಿ (34) ಮೃತ ದುರ್ದೈವಿ. ಕಲ್ಲಡ್ಕದಿಂದ ವಿಟ್ಲ ಕಡೆಗೆ ತೆರಳುತ್ತಿದ್ದ ಆಲ್ಟೊ ಕಾರಿಗೆ, ವಿಟ್ಲದಿಂದ ಕಲ್ಲಡ್ಕ ಕಡೆಗೆ ಚಲಿಸುತ್ತಿದ್ದ ಮಿನಿ ಟಿಪ್ಪರ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಸ್ಥಳೀಯರು

ವಿಟ್ಲದಲ್ಲಿ ಕಾರಿಗೆ ಮಿನಿ ಟಿಪ್ಪರ್‌ ಡಿಕ್ಕಿ : ನವವಿವಾಹಿತ ಸಾವು Read More »

ನಿಮಿಷಾ ಗಲ್ಲು ಶಿಕ್ಷೆ ರದ್ದು? : ಧರ್ಮ ಬೋಧಕ ಪೌಲ್ ವಿಡಿಯೋದಲ್ಲಿ ಹೇಳಿದ್ದೇನು?

ಸನಾ: ಯೆಮನ್ ‌ಪ್ರಜೆಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಮರಣದಂಡನೆಗೆ ಗುರಿಯಾದ ಕೇರಳದ ನರ್ಸ್ ನಿಮಿಷಾ ಪ್ರಿಯ ಮರಣದಂಡನೆಯನ್ನು ಅಲ್ಲಿನ ಸರ್ಕಾರ ರದ್ದು ಮಾಡಿದೆ ಎಂಬ ಮಾಹಿತಿ ತಿಳಿದು ಬಂದಿದೆ. ನಿಮಿಷಾ ಮರಣದಂಡನೆ ರದ್ದು ಮಾಡುವಂತೆ ಯೆಮನ್ ಸರ್ಕಾರದ ಜೊತೆ ಭಾರತ ಮಾತುಕತೆ ನಡೆಸಿತ್ತು. ಹಾಗೆಯೇ ಭಾರತದ ಧಾರ್ಮಿಕ ಮುಖಂಡರು ಸಹ ಯೆಮನ್ ಧಾರ್ಮಿಕ ಮುಖಂಡರ ಜೊತೆಗೆ ಮಾತುಕತೆ ನಡೆಸಿದ್ದರು. ಇವೆಲ್ಲದರ ಫಲ ಎಂಬಂತೆ ನಿಮಿಷಾ ಮರಣದಂಡನೆ ಶಿಕ್ಷೆಯನ್ನು ರದ್ದು ಮಾಡಲಾಗಿರುವುದಾಗಿ ಧರ್ಮಬೋಧಕ, ಜಾಗತಿಕ ಶಾಂತಿ ಪ್ರವರ್ತಕ ಡಾ.

ನಿಮಿಷಾ ಗಲ್ಲು ಶಿಕ್ಷೆ ರದ್ದು? : ಧರ್ಮ ಬೋಧಕ ಪೌಲ್ ವಿಡಿಯೋದಲ್ಲಿ ಹೇಳಿದ್ದೇನು? Read More »

error: Content is protected !!
Scroll to Top