ಮಂಗಳೂರು : ಕಾರಿನಲ್ಲಿ ಸಾಗಿಸುತ್ತಿದ್ದ 123 ಕೆಜಿ ಗಾಂಜಾ ವಶ, ಮೂವರ ಸೆರೆ

5 ಮೊಬೈಲ್‌, ಕಾರು ಸಹಿತ 46.20 ಲ.ರೂ. ಸೊತ್ತು ವಶಪಡಿಸಿಕೊಂಡ ಪೊಲೀಸರು ಮಂಗಳೂರು : ಮೂಡುಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮದ ಕಾಂತಾವರ ಕ್ರಾಸ್‌ನ ಮಠದಕೆರೆ ಎಂಬಲ್ಲಿ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಗಾಂಜಾ ಸಹಿತ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕಾಸರಗೋಡು ಜಿಲ್ಲೆಯ ಆಡೂರಿನ ಮಸೂದ್ ಎಂ.ಕೆ. (45), ಕಾಸರಗೋಡು ಜಿಲ್ಲೆಯ ದೇಲಂಪಾಡಿಯ ಮುಹಮ್ಮದ್ ಆಶಿಕ್ (24) ಮತ್ತು ಸುಬೇರ್ (30) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸಾಗಾಟಕ್ಕೆ ಬಳಸಿದ ಎರಡು ಕಾರು […]

ಮಂಗಳೂರು : ಕಾರಿನಲ್ಲಿ ಸಾಗಿಸುತ್ತಿದ್ದ 123 ಕೆಜಿ ಗಾಂಜಾ ವಶ, ಮೂವರ ಸೆರೆ Read More »

ಉಪ್ಪಿನಂಗಡಿ : ವಿವಾಹಿತ ಮಹಿಳೆ ನಾಪತ್ತೆ

ಉಪ್ಪಿನಂಗಡಿ : ಇಲ್ಲಿನ 34ನೇ ನೆಕ್ಕಿಲಾಡಿ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಹಾವೇರಿ ಮೂಲದ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಸಂಕ್ರಿಕೊಪ್ಪ ನಿವಾಸಿ ಭೀಮಪ್ಪ ಎಂಬವರ ಪತ್ನಿ ರೇಷ್ಮಾ ಮಲಲಿ ಭಜಂತ್ರಿ (26) ನಾಪತ್ತೆಯಾದ ಮಹಿಳೆಯಾಗಿದ್ದು, ಆಕೆ ಪತಿಯೊಂದಿಗೆ 34ನೇ ನೆಕ್ಕಿಲಾಡಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಭೀಮಪ್ಪ ನಾಗರ ಪಂಚಮಿಯ ಹಬ್ಬಕ್ಕಾಗಿ ಜು.26ರಂದು ಹಾವೇರಿಗೆ ಹೋಗಿ ಜು.30ರಂದು ಹಿಂತಿರುಗಿ ಬರುವಾಗ ಮನೆಯಲ್ಲಿದ್ದ ಪತ್ನಿ ನಾಪತ್ತೆಯಾಗಿದ್ದರು.

ಉಪ್ಪಿನಂಗಡಿ : ವಿವಾಹಿತ ಮಹಿಳೆ ನಾಪತ್ತೆ Read More »

ಪುತ್ತೂರು : ರಿಕ್ಷಾ ಡಿಕ್ಕಿ ಹೊಡೆದು ಪಾದಚಾರಿ ಸಾವು

ಪುತ್ತೂರು: ಕೌಡಿಚಾರ್ – ರೆಂಜ ರಸ್ತೆಯ ಪಾಪೆಮಜಲು ಎಂಬಲ್ಲಿ ರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ಪಾಪೆಮಜಲು ನಿವಾಸಿ ಸುಭಾಷ್ (50) ಮೃತಪಟ್ಟವರು. ಅವರು ಶುಕ್ರವಾರ ರಾತ್ರಿ ವೇಳೆ ರಸ್ತೆ ದಾಟುತ್ತಿದ್ದಾಗ ಅವರಿಗೆ ರಿಕ್ಷಾ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಪುತ್ತೂರು : ರಿಕ್ಷಾ ಡಿಕ್ಕಿ ಹೊಡೆದು ಪಾದಚಾರಿ ಸಾವು Read More »

ಪುತ್ತೂರು : ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಪುತ್ತೂರು : ನ್ಯಾಯಾಲಯದಿಂದ ಜಾಮೀನು ಪಡೆದ ಬಳಿಕ 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿರುವ ಪುತ್ತೂರು ಪೊಲೀಸರು ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಕೊಡಗು ಜಿಲ್ಲೆಯ ಸೋಮವಾರ ಪೇಟೆ ನಿವಾಸಿ ಮಹಮ್ಮದ್ ಹನೀಫ್ (55) ಎಂದು ಗುರುತಿಸಲಾಗಿದೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ 35/2001 ಕಲಂ: 379 ಜೊತೆಗೆ 34 ಭಾ.ದಂ.ಸಂ ನೇ ಪ್ರಕರಣದಲ್ಲಿ ಆರೋಪಿ 2018 ರಲ್ಲಿ ಜಾಮೀನು ಪಡೆದ ನಂತರ, ನ್ಯಾಯಾಲಯದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ

ಪುತ್ತೂರು : ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ Read More »

ಧರ್ಮಸ್ಥಳ ಪ್ರಕರಣ : ಮೂಳೆಗಳು ಎಫ್‌ಎಸ್‌ಎಲ್‌ಗೆ ರವಾನೆ

ಇನ್ನು ಗುರುತು ಮಾಡಿದ ಐದು ಸ್ಥಳಗಳ ಅಗೆತ ಮಾತ್ರ ಬಾಕಿ ಬೆಂಗಳೂರು: ಧರ್ಮಸ್ಥಳದ ನೇತ್ರಾವತಿ ದಂಡೆಯ ಪಾಯಿಂಟ್‌ 6ರಲ್ಲಿ ಸಿಕ್ಕಿದ ಅಸ್ಥಿಪಂಜರದ ಮೂಳೆಗಳನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌ಗೆ) ಕಳುಹಿಸಲಾಗಿದೆ. ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಪ್ರಕರಣವನ್ನು ಬೆನ್ನತ್ತಿದ ವಿಶೇಷ ತನಿಖಾ ತಂಡಕ್ಕೆ ನೇತ್ರಾವತಿ ತಟದ ಪಾಯಿಂಟ್ 6ರಲ್ಲಿ ಅಸ್ಥಿಪಂಜರದ ಮೂಳೆಗಳು, ತಲೆಬುರುಡೆ ಸಿಕ್ಕಿದೆ. ಸುಮಾರು 25 ಮೂಳೆಗಳನ್ನು ಎಸ್‌ಐಟಿ ತಂಡ ಬೆಂಗಳೂರಿನ ಎಫ್‌ಎಸ್‌ಎಲ್‌ಗೆ ರವಾನಿಸಿದೆ. ಬೆಂಗಳೂರಿನ ಪ್ರಯೋಗಾಲಯದಲ್ಲಿ ಮೂಳೆಗಳ ಲಿಂಗ, ವಯಸ್ಸು, ಎತ್ತರ, ಗಾತ್ರ ಪತ್ತೆ ಪರೀಕ್ಷೆ

ಧರ್ಮಸ್ಥಳ ಪ್ರಕರಣ : ಮೂಳೆಗಳು ಎಫ್‌ಎಸ್‌ಎಲ್‌ಗೆ ರವಾನೆ Read More »

ಧರ್ಮಸ್ಥಳ ಕೇಸ್: ಏಳನೇ ಪಾಯಿಂಟ್‌ನಲ್ಲೂ ‌ಸಿಗಲಿಲ್ಲ ಕಳೇಬರದ ಕುರುಹು

ಧರ್ಮಸ್ಥಳ: ನೂರಾರು ಹೆಣಗಳನ್ನು ಹೂತು ಹಾಕಲಾಗಿದೆ ಎಂಬ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ SIT ಇಂದೂ ಸಹ ಅನಾಮಿಕ ದೂರುದಾರ ‌ಗುರುತಿಸಿದ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದೆ. ನಿನ್ನೆ ಆರನೇ ಪಾಯಿಂಟ್‌ನಲ್ಲಿ ಕಾರ್ಯಾಚರಣೆ ನಡೆಸಿದ್ದು, ಈ ಸಂದರ್ಭದಲ್ಲಿ ಮಾನವ ದೇಹದ ಅವಶೇಷಗಳು ಪತ್ತೆಯಾಗಿತ್ತು. ಇಂದು ಏಳನೇ ಪಾಯಿಂಟ್‌ನಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಇದರಲ್ಲಿ ಸುಮಾರು ಆರು ಅಡಿಗಳಷ್ಟು ಗುಂಡಿಯಲ್ಲಿ ಹುಡುಕಿದರೂ ಯಾವುದೇ ಶವದ ಕುರುಹುಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಅಧಿಕಾರಿಗಳು ಎಂಟನೇ ಪಾಯಿಂಟ್ ಬಳಿ ಉತ್ಖನನ ಆರಂಭ ಮಾಡಿದ್ದು, ಅಲ್ಲೇನಾದರೂ

ಧರ್ಮಸ್ಥಳ ಕೇಸ್: ಏಳನೇ ಪಾಯಿಂಟ್‌ನಲ್ಲೂ ‌ಸಿಗಲಿಲ್ಲ ಕಳೇಬರದ ಕುರುಹು Read More »

ಆ. 10: ಒಕ್ಕಲಿಗ ಗೌಡ ಸೇವಾ ಸಂಘ (ರಿ) ಕಡಬ ತಾಲೂಕು ಮಾತೃ ಸಮಿತಿಯಿಂದ ಆಟಿಡೊಂಜಿ ದಿನ

ಕಡಬ: ಒಕ್ಕಲಿಗ ಗೌಡ ಸೇವಾ ಸಂಘ (ರಿ) ಕಡಬ ತಾಲೂಕು ಇದರ ಮಾತೃ ಸಮಿತಿಯ ಆಶ್ರಯದಲ್ಲಿ , ತಾಲೂಕು ಮಹಿಳಾ ಘಟಕದ ನೇತೃತ್ವದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಲಿದೆ. ಒಕ್ಕಲಿಗ ಸಮುದಾಯ ಭವನ ಹೊಸಮಠದಲ್ಲಿ ಆಗಸ್ಟ್ 10 ಭಾನುವಾರ ಬೆಳಗ್ಗೆ ಗಂಟೆ 9 ರಿಂದ ಕಾರ್ಯಕ್ರಮ ಆರಂಭವಾಗಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು ವಹಿಸಿಕೊಳ್ಳಲಿದ್ದು, ರಾಜ್ಯ ಒಕ್ಕಲಿಗರ ಸಂಘ ಬೆಂಗಳೂರು ಇದರ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ. ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಆ. 10: ಒಕ್ಕಲಿಗ ಗೌಡ ಸೇವಾ ಸಂಘ (ರಿ) ಕಡಬ ತಾಲೂಕು ಮಾತೃ ಸಮಿತಿಯಿಂದ ಆಟಿಡೊಂಜಿ ದಿನ Read More »

ಉಪರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ: ಡೇಟ್ ಫಿಕ್ಸ್

ನವದೆಹಲಿ: ಜಗದೀಪ್ ಧನ್ಕರ್ ಅವರ ರಾಜೀನಾಮೆಯಿಂದ ತೆರವಾಗಿರುವ ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಸೆ. 9 ರಂದು ಚುನಾವಣೆ ನಡೆಸಲು ಚುನಾವಣಾ ಆಯೋಗ ದಿನ ನಿಗದಿ ಮಾಡಿದೆ. ಚು. ಆಯೋಗದ ಪ್ರಕಾರ ಆ. 7 ರಂದು ಉಪರಾಷ್ಟ್ರಪತಿ ಚುನಾವಣೆಯ ಅಧಿಸೂಚನೆ ಬಿಡುಗಡೆಯಾಗಲಿದೆ. ಆ. 29 ನಾಮಪತ್ರ ‌ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಆ.22 ರಿಂದ ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದೆ. ಆ. 25 ರ ವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ಇದೆ. ಸೆ. 9 ರಂದು ಬೆಳಗ್ಗೆ 10 ಗಂಟೆಯಿಂದ

ಉಪರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ: ಡೇಟ್ ಫಿಕ್ಸ್ Read More »

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣ ದೋಷಿ ಎಂದ ನ್ಯಾಯಾಲಯ

ಬೆಂಗಳೂರು: ಮನೆ ಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ‌ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಕಳೆದ ಹದಿನಾಲ್ಕು ತಿಂಗಳುಗಳಿಂದ ಜೈಲು ಹಕ್ಕಿಯಾಗಿರುವ ಪ್ರಜ್ವಲ್ ಸದ್ಯ ಕೋರ್ಟ್ ನೀಡಿರುವ ತೀರ್ಪಿನಿಂದ ಮತ್ತೆ ಜೈಲಿನಲ್ಲೇ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಆಗಸ್ಟ್ 2 ರಂದು ಪ್ರಕಟಿಸುವುದಾಗಿ ಕೋರ್ಟ್ ಹೇಳಿದೆ. ಸಿಐಡಿ ತನಿಖಾಧಿಕಾರಿಗಳು ಮತ್ತು ಆರೋಪಿಯ ಪರ ವಕೀಲರಿಂದ ಕೆಲವು ಸ್ಪಷ್ಟನೆಗಳ ಅಗತ್ಯತೆ

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣ ದೋಷಿ ಎಂದ ನ್ಯಾಯಾಲಯ Read More »

ಯುಪಿಐ ಬಳಕೆಗೆ ಹೊಸ ರೂಲ್ಸ್

ನವದೆಹಲಿ: UPI ಬಳಕೆಯನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗಿದೆ. ಬ್ಯಾಂಕ್ ಖಾತೆಯಲ್ಲಿ ಬಾಕಿ ಉಳಿದ ಮೊತ್ತ ಪರಿಶೀಲನೆಗೆ ಮಿತಿ ಹಾಕಲಾಗಿದ್ದು, ನಿತ್ಯ 50 ಬಾರಿ ಮಾತ್ರವೇ ಪರಿಶೀಲನೆ ಮಾಡಬಹುದಾಗಿದೆ. ಆಫ್ ಪೀಕ್ ಅವರ್ ಅಥವಾ ಕಡಿಮೆ ವಹಿವಾಟಿನ ವೇಳೆ ಸ್ವಯಂ ಪಾವತಿಗಳು ನಡೆಯಲಿವೆ. ಯುಪಿಐ ಪಾವತಿ ವಿಫಲ ಅಥವಾ ಸ್ಥಗಿತವಾದ ಸಂದರ್ಭದಲ್ಲಿ ಈ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂದು ತಿಳಿಯಲು ಮೂರು ಮಿತಿಗಳನ್ನು ನೀಡಲಾಗಿದ್ದು, ಒಂದು ಮಿತಿ ರಿಂದ ಇನ್ನೊಂದಕ್ಕೆ 90 ನಿಮಿಷ

ಯುಪಿಐ ಬಳಕೆಗೆ ಹೊಸ ರೂಲ್ಸ್ Read More »

error: Content is protected !!
Scroll to Top