ಮಂಗಳೂರು – ಮಸ್ಕತ್ AIR ವಿಮಾನ ರದ್ದು ಬೇಡ: ಕ್ಯಾ. ಬ್ರಿಜೇಶ್ ಚೌಟ ಮನವಿ

ಮಂಗಳೂರು: ಮಸ್ಕತ್ ಮತ್ತು ಮಂಗಳೂರು ನಡುವಿನ AIR ವಿಮಾನ ಹಾರಾಟವನ್ನು ರದ್ದು ಮಾಡುವ ಪ್ರಸ್ತಾಪ ಸರಿಯಾಗಿಲ್ಲ. ಈ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು ಎಂದು AIR ಸಂಸ್ಥೆಗೆ ಸೂಚನೆ ನೀಡುವಂತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನಾಗರಿಕ ವಿಮಾನಯಾನ ಸಚಿವರಿಗೆ ಮನವಿ ಸಲ್ಲಿಸಿ ಪತ್ರ ಬರೆದಿದ್ದಾರೆ. ಒಮಾನ್‌ನಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಕರಾವಳಿ ಭಾಗದ ಜನರು ಉದ್ಯೋಗದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಎರಡೂ ರಾಷ್ಟ್ರಗಳ ನಡುವಿನ ವಿಮಾನ ಹಾರಾಟ ರದ್ದು ಮಾಡಿದರೆ ತೊಂದರೆಯಾಗುತ್ತದೆ. ಹಾಗಾಗಿ ಏಕಾಏಕಿ […]

ಮಂಗಳೂರು – ಮಸ್ಕತ್ AIR ವಿಮಾನ ರದ್ದು ಬೇಡ: ಕ್ಯಾ. ಬ್ರಿಜೇಶ್ ಚೌಟ ಮನವಿ Read More »

ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ವಿಚಾರಣೆಗೆ ಹಾಜರಾಗಲು ತಿಮರೋಡಿ ಮನೆಗೆ ನೊಟೀಸ್ ಹಚ್ಚಿದ ಪೊಲೀಸರು

ಬೆಳ್ತಂಗಡಿ: ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಇರಿಸಿದ ಆರೋಪದಲ್ಲಿ ವಿಚಾರಣೆಗೆ ಹಾಜರಾಗುವಂತೆ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಪೊಲೀಸರು ನೊಟೀಸ್ ಹಚ್ಚಿ ಬಂದಿದ್ದಾರೆ. ಧರ್ಮಸ್ಥಳ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಆರೋಪಿ ಚಿನ್ನಯ್ಯ‌ನಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ತಿಮರೋಡಿಯ ಮನೆಗೆ SIT ಅಧಿಕಾರಿಗಳು ದಾಳಿ ನಡೆಸಿದ್ದರು. ಈ‌ವೇಳೆ ಅವರ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಪತ್ತೆಯಾಗಿತ್ತು. ಈ‌ ಪ್ರಕರಣವನ್ನು SIT ಪೊಲೀಸರು ಬೆಳ್ತಂಗಡಿ ಪೊಲೀಸರಿಗೆ ವರ್ಗಾವಣೆ ಮಾಡಿದ್ದರು. ಅದರಂತೆ ತಿಮರೋಡಿ ಮನೆಗೆ ಮಹಜರು ನಡೆಸುವ ಸಲುವಾಗಿ ಸೆ. 18 ರಂದು ಪೊಲೀಸರು

ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ವಿಚಾರಣೆಗೆ ಹಾಜರಾಗಲು ತಿಮರೋಡಿ ಮನೆಗೆ ನೊಟೀಸ್ ಹಚ್ಚಿದ ಪೊಲೀಸರು Read More »

ಸಿಎಂ ‌ಸಿದ್ದರಾಮಯ್ಯರನ್ನು ನಿಂದಿಸಿ ಪೋಸ್ಟ್: ಮಾಜಿ ಯೋಧ ಅರೆಸ್ಟ್

ಹಾಸನ: ಸಿಎಂ ‌ಸಿದ್ದರಾಮಯ್ಯ ಅವರನ್ನು ಅವಹೇಳನ ಮಾಡಿದ ಆರೋಪದಡಿ ಸಕಲೇಶಪುರದ ನಿವೃತ್ತ ಯೋಧ ವಸಂತ ಕುಮಾರ್ (40) ಎಂಬವರನ್ನು ಸಿಸಿಬಿ ‌ಸೈಬರ್ ಪೊಲೀಸರು ಬಂಧಿಸಿದ್ದಾರೆ. ಸೇನಾ ನಿವೃತ್ತಿಯ ಬಳಿಕ ವಸಂತ ಕುಮಾರ್ ಅವರು ಸ್ವಗ್ರಾಮದಲ್ಲೇ ಕೃಷಿ ಕಾರ್ಯಗಳನ್ನು ಮಾಡಿಕೊಂಡಿದ್ದರು. ಸಿ ಎಂ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕನ್ನಡ ಬರುತ್ತದೆಯೇ? ಎಂದು ಪ್ರಶ್ನೆ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಹನುಮ ಭಕ್ತ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ವಸಂತ್ ಕುಮಾರ್ ಅವರು

ಸಿಎಂ ‌ಸಿದ್ದರಾಮಯ್ಯರನ್ನು ನಿಂದಿಸಿ ಪೋಸ್ಟ್: ಮಾಜಿ ಯೋಧ ಅರೆಸ್ಟ್ Read More »

ಆಳಂದ ಕ್ಷೇತ್ರದಲ್ಲಿ ಮತ ಅಕ್ರಮ: ಡಿ ಕೆ ಶಿವಕುಮಾರ್ ಏನಂದ್ರು ಗೊತ್ತಾ?

ಬೆಂಗಳೂರು: ಚುನಾವಣಾ ಆಯೋಗ ಆಳಂದ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತ ಅಕ್ರಮದ ಬಗ್ಗೆ ಸಿಐಡಿ ತನಿಖೆಗೆ ಅಸಹಕಾರ ತೋರಿರುವುದನ್ನು ‌ನೋಡಿದರೆ, ಇದರಲ್ಲಿ ಅವರೂ ಭಾಗವಹಿಸಿರುವ ಬಗ್ಗೆ ಸಂದೇಹ ಮೂಡುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈ ಬಗ್ಗೆ ಎಲ್ಲಾ ರೀತಿಯ ಮಾಹಿತಿಗಳನ್ನು ನಮ್ಮಿಂದ ಪಡೆದು ಮಾಧ್ಯಮ ಹೇಳಿಕೆ ನೀಡಿದ್ದಾರೆ. ಆಳಂದ ಮಾತ್ರವಲ್ಲದೆ ಇತರ ಕ್ಷೇತ್ರಗಳಲ್ಲಿಯೂ ಮತ ಅಕ್ರಮ ನಡೆದಿರುವುದಾಗಿ ಅವರು ಆರೋಪಿಸಿದ್ದಾರೆ. ಆಳಂದ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆ

ಆಳಂದ ಕ್ಷೇತ್ರದಲ್ಲಿ ಮತ ಅಕ್ರಮ: ಡಿ ಕೆ ಶಿವಕುಮಾರ್ ಏನಂದ್ರು ಗೊತ್ತಾ? Read More »

ಸೆ.21ರಂದು ಸಂಭವಿಸಲಿದೆ ಖಂಡಗ್ರಾಸ ಸೂರ್ಯ ಗ್ರಹಣ

ಒಂದೇ ತಿಂಗಳಲ್ಲಿ ನಡೆಯುತ್ತಿರುವ ಎರಡನೇ ಖಗೋಲ ನೆರಳು-ಬೆಳಕಿನಾಟ ಬೆಂಗಳೂರು: ಈ ವರ್ಷದ ಕೊನೆಯ ಸೂರ್ಯ ಗ್ರಹಣ ಮಹಾಲಯ ಅಮವಾಸ್ಯೆ ದಿನವಾದ ಸೆ.21ರಂದು ಸಂಭವಿಸಲಿದೆ. ಆ ಮೂಲಕ ಖಗೋಳದಲ್ಲಿ ನಡೆಯಲಿರುವ ಮತ್ತೊಂದು ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಖಗೋಲ ಆಸಕ್ತರು ತುದಿಗಾಲಲ್ಲಿ ನಿಂತಿದ್ದಾರೆ. ಕೇವಲ ಹದಿನೈದು ದಿನಗಳ ಅಂತರದಲ್ಲಿ ಸೂರ್ಯ-ಚಂದ್ರ ಗ್ರಹಣಕ್ಕೆ ಖಗೋಳ ಸಾಕ್ಷಿಯಾಗುತ್ತಿದ್ದು, ವಿಜ್ಞಾನದ ಆಸಕ್ತರಿಗೆ ಇದು ಸಾಕಷ್ಟು ಮಹತ್ವ ಪಡೆದುಕೊಂಡಿರುವ ಖಗೋಲ ವಿದ್ಯಮಾನವಾಗಿದೆ. ಒಂದು ವಾರದ ಹಿಂದೆಯಷ್ಟೇ ರಾಹುಗ್ರಸ್ತ ಚಂದ್ರ ಗ್ರಹಣ ಸಂಭವಿಸಿತ್ತು. ಇದಾದ ಹದಿನೈದು ದಿನಗಳ ಅಂತರದಲ್ಲಿ

ಸೆ.21ರಂದು ಸಂಭವಿಸಲಿದೆ ಖಂಡಗ್ರಾಸ ಸೂರ್ಯ ಗ್ರಹಣ Read More »

ಶಾಂತಿಗೋಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮಹಾಸಭೆ

ರೂ 153’556.21 ನಿವ್ವಳ ಲೀ ಗೇ 74 ಪೈಸೆ ಬೋನಸ್ ಶೇಕಡ 10 ಡಿವಿಡೆಂಟ್ ಪುತ್ತೂರು : ಶಾಂತಿಗೋಡು ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆಯು ಸೆಪ್ಟೆಂಬರ್ 16ರಂದು ಸಂಘದ ಆವರಣದಲ್ಲಿ ನಡೆಯಿತ ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಪ್ರವೀಣ್ ಶೆಟ್ಟಿ ಮಾತನಾಡಿ ಸಂಘದಲ್ಲಿ 99118.78 ಲೀ ಹಾಲು ಖರೀದಿ ಹಾಗೂ 5831.50 ಲೀ ಸ್ಥಳೀಯವಾಗಿ ಹಾಲು ಮಾರಾಟ ಮಾಡಲಾಗಿದೆ ಸಂಘವು ರೂ 3,53,479.36 ಹಾಲು ವ್ಯಾಪಾರ ಲಾಭ ರೂ 25,496.42 ಪಶುಆಹಾರ ಮತ್ತು

ಶಾಂತಿಗೋಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮಹಾಸಭೆ Read More »

ಕಂಬಳಕ್ಕೆ ಸಿಗಲಿದೆ ರಾಜ್ಯದ ಕ್ರೀಡೆ ಎಂಬ ಅಧಿಕೃತ ಮಾನ್ಯತೆ

ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆಗೆ ಹಿರಿದಾದ ಸ್ಥಾನಮಾನ ಮಂಗಳೂರು: ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆಯಾಗಿರುವ ಕಂಬಳಕ್ಕೆ ರಾಜ್ಯ ಕ್ರೀಡೆಯಾಗಿ ಮಾನ್ಯತೆ ನೀಡಲು ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ಈ ಮೂಲಕ ಒಂದು ಕಾಲದಲ್ಲಿ ನಿಷೇಧದ ತೂಗುಕತ್ತಿಯಲ್ಲಿ ನೇತಾಡುತ್ತಿದ್ದ ಕಂಬಳ ಈಗ ರಾಜ್ಯದ ಅಧಿಕೃತ ಕ್ರೀಡೆ ಎಂಬ ಹಿರಿದಾದ ಮಾನ್ಯತೆ ಪಡೆದುಕೊಂಡು ಮೆರೆಯಲಿದೆ. ಏನು ಲಾಭ? ಕಂಬಳವನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ರಾಜ್ಯ ಕ್ರೀಡೆಯಾಗಿ ಘೋಷಿಸಿದರೆ ರಾಜ್ಯದ ಕ್ರೀಡಾ ಪ್ರಾಧಿಕಾರದಿಂದ ಉಳಿದ ಕ್ರೀಡೆಗಳಿಗೆ

ಕಂಬಳಕ್ಕೆ ಸಿಗಲಿದೆ ರಾಜ್ಯದ ಕ್ರೀಡೆ ಎಂಬ ಅಧಿಕೃತ ಮಾನ್ಯತೆ Read More »

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನಿಂದ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ l ಪಾಣಾಜೆ ಹಾಲುತ್ಪಾದಕರ ಸಹಕಾರ ಸಂಘದ ಸಭಾಭವನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.)ಪುತ್ತೂರು ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪುತ್ತೂರು ಇದರ ಸಹಯೋಗದಲ್ಲಿ ಮೂರನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ,ಸಾಮೂಹಿಕ ವಿವಾಹ ಮತ್ತು ಹಿಂದವಿ ಸಾಮ್ರಾಜ್ಯೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಭವನದಲ್ಲಿ ಮಾತೆಯರಿಂದ ದೀಪವನ್ನು ಬೆಳಗಿಸುವ ಮೂಲಕ ಉದ್ಘಾಟನೆಗೊಂಡಿತು. ಪುತ್ತಿಲ ಪರಿವಾರ ಸೇವಾ ಟ್ರಸ್ಟಿನ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಶ್ರೀನಿವಾಸ ಕಲ್ಯಾಣೋತ್ಸವದ ಎರಡು ದಿವಸಗಳ ಕಾರ್ಯಕ್ರಮದ ಸಂಪೂರ್ಣ ವಿವರಣೆ ನೀಡಿ,ಆರ್ಲಪದವು ಜನತೆಯ ಸಂಪೂರ್ಣ ಸಹಕಾರ

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನಿಂದ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ l ಪಾಣಾಜೆ ಹಾಲುತ್ಪಾದಕರ ಸಹಕಾರ ಸಂಘದ ಸಭಾಭವನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಆರು ಸಾವಿರ ಮತದಾರರನ್ನು ಡಿಲೀಟ್‌ ಮಾಡಿಲ್ಲ, ಅರ್ಜಿ ತಿರಸ್ಕರಿಸಲಾಗಿದೆ : ರಾಹುಲ್‌ ಗಾಂಧಿ ಆರೋಪಕ್ಕೆ ಸ್ಪಷ್ಟನೆ

ಆನ್‌ಲೈನ್‌ ಮೂಲಕ ಮತದಾರರ ಹೆಸರು ಅಳಿಸುವುದು ಅಸಾಧ್ಯ ಎಂದ ಚುನಾವಣಾ ಆಯೋಗ ಬೆಂಗಳೂರು: ಕರ್ನಾಟಕದ ಆಳಂದದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಕುರಿತು ರಾಹುಲ್‌ ಗಾಂಧಿ ಮಾಡಿರುವ ಆರೋಪಗಳಿಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ನಿನ್ನೆ ದೆಹಲಿಯಲ್ಲಿ ರಾಹುಲ್‌ ಗಾಂಧಿ ಸುದ್ದಿಗೋಷ್ಠಿ ನಡೆಸಿ ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಆರು ಸಾವಿರಕ್ಕೂ ಅಧಿಕ ಮತಕಳ್ಳತನವಾಗಿದೆ. ಮತದಾರರ ಹೆಸರುಗಳನ್ನು ಆನ್‌ಲೈನ್‌ ಮೂಲಕ ಅಳಿಸಿ ಹಾಕಲಾಗಿದೆ ಎಂದು ಆರೋಪಿಸಿ ಇದಕ್ಕೆ ಇಬ್ಬರು ಸಾಕ್ಷಿಧಾರರನ್ನೂ ಹಾಜರುಪಡಿಸಿದ್ದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಆಳಂದ ಕ್ಷೇತ್ರದಲ್ಲಿ

ಆರು ಸಾವಿರ ಮತದಾರರನ್ನು ಡಿಲೀಟ್‌ ಮಾಡಿಲ್ಲ, ಅರ್ಜಿ ತಿರಸ್ಕರಿಸಲಾಗಿದೆ : ರಾಹುಲ್‌ ಗಾಂಧಿ ಆರೋಪಕ್ಕೆ ಸ್ಪಷ್ಟನೆ Read More »

ಜಾತಿ ಗಣತಿಗೆ ಸಚಿವರಿಂದಲೇ ವಿರೋಧ : ಸಭೆಯಲ್ಲಿ ತೀವ್ರ ಆಕ್ರೋಶ

ಹೊಸದಾಗಿ 331 ಜಾತಿಗಳ ಸೇರ್ಪಡೆಗೆ ಆಕ್ಷೇಪ ಬೆಂಗಳೂರು: ಜಾತಿ ಜನಗಣತಿ ಜೇನುಗೂಡಿಗೆ ಮತ್ತೆ ಕೈ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಕ್ಕಟ್ಟಿಗೆ ಸಿಲುಕಿದ್ದಾರೆ. ಮುಂದಿನ ಸೋಮವಾರದಿಂದ ಆರಂಭವಾಗಬೇಕಿದ್ದ ಜಾತಿ ಜನಗಣತಿಗೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಕಾಂಗ್ರೆಸ್‌ ಸಚಿವರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಸೋಮವಾರದಿಂದ ಜಾತಿ ಗಣತಿ ಪ್ರಾರಂಭವಾಗುವುದು ಅನುಮಾನ ಎನ್ನಲಾಗಿದೆ. ಸಂಪುಟ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿರುವುದರಿಂದ ಸಚಿವರ ವಿಶೇಷ ಸಭೆ ನಡೆಸಲಾಯಿತು. ಅಲ್ಲೂ ಆಕ್ರೋಶ ಶಮನವಾಗಿಲ್ಲ. ಲಿಂಗಾಯತ ಸಮುದಾಯದ ಸಚಿವರು ಜಾತಿ ಗಣತಿ ಬಗ್ಗೆ

ಜಾತಿ ಗಣತಿಗೆ ಸಚಿವರಿಂದಲೇ ವಿರೋಧ : ಸಭೆಯಲ್ಲಿ ತೀವ್ರ ಆಕ್ರೋಶ Read More »

error: Content is protected !!
Scroll to Top