ಮೆಟ್ರೋ ನಿಲ್ದಾಣದಲ್ಲಿ ಬೇರ್ಪಟ್ಟ ಮಗು ಮರಳಿ ತಾಯಿಯ ಮಡಿಲಿಗೆ

ಬೆಂಗಳೂರು: ನಮ್ಮ ಮೆಟ್ರೋ‌ದಲ್ಲಿ ‌ತಾಯಿಯಿಂದ ಬೇರೆಯಾಗಿದ್ದ ‌6 ವರ್ಷದ ಮಗು ಮರಳಿ ತಾಯಿಯ ಮಡಿಲು ಸುರಕ್ಷಿತವಾಗಿ ಸೇರಿದ ಘಟನೆ ನಡೆದಿದೆ. ನ. 1 ರಂದು ಮಧ್ಯಾಹ್ನದ ವೇಳೆಗೆ 6 ವರ್ಷದ ಹೆಣ್ಣು ಮಗುವೊಂದು ಕೆಂಪೇಗೌಡ ಮೆಟ್ರೋ ನಿಲ್ದಾಣ ಮೆಜೆಸ್ಟಿಕ್‌ನಲ್ಲಿ ‌ತಾಯಿಯಿಂದ ಬೇರ್ಪಟ್ಟಿತ್ತು. ಪ್ರಯಾಣಿಕರೊಬ್ಬರು ಬೇರ್ಪಟ್ಟ ಮಗುವನ್ನು ಭದ್ರತಾ‌ ಸಿಬ್ಬಂದಿಗೆ ಒಪ್ಪಿಸಿದ್ದರು. ಮಗು ಸಿಕ್ಕ ಬಗ್ಗೆ ಮೆಟ್ರೋ ಸಿಬ್ಬಂದಿ ಎಲ್ಲಾ ಮೆಟ್ರೋ ನಿಲ್ದಾಣಗಳಿಗೂ ಮಾಹಿತಿ ನೀಡಿದ್ದು, ಮಗುವನ್ನು ಮೆಟ್ರೋ ನಿಲ್ದಾಣದಲ್ಲೇ ಸುರಕ್ಷಿತವಾಗಿ ಕೂರಿಸಿಕೊಂಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ‌ನಿಲ್ದಾಣ ನಿಯಂತ್ರಕರು […]

ಮೆಟ್ರೋ ನಿಲ್ದಾಣದಲ್ಲಿ ಬೇರ್ಪಟ್ಟ ಮಗು ಮರಳಿ ತಾಯಿಯ ಮಡಿಲಿಗೆ Read More »

ಪುತ್ತೂರು: ‘ಜ್ಞಾನ ಚಕ್ಷು’ ಸ್ಮರಣಶಕ್ತಿ ಶಿಬಿರದ ಯಶಸ್ವಿ ಸಮಾರೋಪ – ಮಕ್ಕಳ ಪ್ರತಿಭೆಗೆ ಮೆಚ್ಚುಗೆ

ಪುತ್ತೂರು: ಕೇಪುಳು ಶಿರಡಿ ಸಾಯಿ ಮಂದಿರದ ಆವರಣದಲ್ಲಿ ಅಕ್ಟೋಬರ್ 21 ರಂದು ಪ್ರಾರಂಭವಾಗಿದ್ದ, ಮಕ್ಕಳಿಗೆ 10 ದಿನಗಳ ಕಾಲ ಸ್ಮರಣಶಕ್ತಿ ಮತ್ತು ಸಾಮರ್ಥ್ಯ ಹೆಚ್ಚಿಸುವ ‘ಜ್ಞಾನ ಚಕ್ಷು’ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಭಾನುವಾರ, ನವೆಂಬರ್ 02, 2025 ರಂದು ಯಶಸ್ವಿಯಾಗಿ ನೆರವೇರಿತು. ಬೆಳಿಗ್ಗೆ 9:30ಕ್ಕೆ ಪೂಜೆ, ಭಜನೆ ಮತ್ತು ಪೋಷಕರಿಗೆ ವಿಶೇಷ ಉಪನ್ಯಾಸದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಬೆಳಿಗ್ಗೆ 11:30ಕ್ಕೆ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.ಸಮಾರಂಭಕ್ಕೆ ಡಾ. ಉದಯಕೃಷ್ಣ ಬಿ, ಪ್ರೊ. ಸೀತಾರಾಮ ಕೇವಳ, ಶ್ರೀ ನಾರಾಯಣ

ಪುತ್ತೂರು: ‘ಜ್ಞಾನ ಚಕ್ಷು’ ಸ್ಮರಣಶಕ್ತಿ ಶಿಬಿರದ ಯಶಸ್ವಿ ಸಮಾರೋಪ – ಮಕ್ಕಳ ಪ್ರತಿಭೆಗೆ ಮೆಚ್ಚುಗೆ Read More »

ಕನ್ನಡ, ತುಳು ಭಾಷೆಗಳ ಬಗ್ಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?

ಉಡುಪಿ: ಕೇಂದ್ರ ವಿತ್ತ ಸಚಿವೆ ‌ನಿರ್ಮಲಾ ಸೀತಾರಾಮನ್ ಅವರು ದಕ್ಷಿಣ ಭಾರತದ ಭಾಷೆಗಳ ಶ್ರೀಮಂತಿಕೆ ಮತ್ತು ಸಾಂಸ್ಕೃತಿಕ ವೈಭವವನ್ನು ಶ್ಲಾಘಿಸಿದ್ದಾರೆ. ವಿಶೇಷವಾಗಿ ಕನ್ನಡ ಮತ್ತು ತುಳು ಭಾಷೆಗಳ ಸಾಂಸ್ಕೃತಿಕ ಶ್ರೀಮಂತಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಖಾಸಗಿ ಮಾಧ್ಯಮದ ಜೊತೆಗೆ ಮಾತನಾಡಿರುವ ಅವರು, ಕನ್ನಡ ಭಾಷಾ ಶಕ್ತಿ ಅದ್ಭುತ. ಕನ್ನಡದ ಆಳವಾದ ಆಧ್ಯಾತ್ಮಿಕತೆಯನ್ನು ದಾಸ ಸಾಹಿತ್ಯ, ಕೀರ್ತನೆಗಳು ಪ್ರತಿಬಿಂಬಿಸುತ್ತವೆ. ನಾನು ತುಳು ಭಾಷೆಯನ್ನು ಸಹ ಇಷ್ಟಪಡುತ್ತಿದ್ದು, ಅದು ಅದರ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಉಳಿಸಿಕೊಂಡು ಮುನ್ನಡೆಯುತ್ತಿದೆ ಎಂದು ಹೇಳಿದ್ದಾರೆ. ಕನ್ನಡ

ಕನ್ನಡ, ತುಳು ಭಾಷೆಗಳ ಬಗ್ಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು? Read More »

ಕಲಬೆರಕೆ ಶೇಂದಿ ಸೇವನೆ: 15 ಜನರು ಅಸ್ವಸ್ಥ

ತುಮಕೂರು: ಕಲಬೆರಕೆ ಶೇಂದಿ ಸೇವಿಸಿ 15 ಮಂದಿ ಅಸ್ವಸ್ಥರಾದ ಘಟನೆ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಆಂಧ್ರ ಗಡಿ ಭಾಗದಲ್ಲಿ ನಡೆದಿದೆ. ಅಸ್ವಸ್ಥರಾದವರಲ್ಲಿ ‌ತೆರಿಯೂರು ಗ್ರಾಮದ 10 ಮಂದಿ ಮತ್ತು ಆಂಧ್ರದ ಚೋಳೂರು ಗ್ರಾಮದ 5 ಮಂದಿ ಸೇರಿದ್ದು, ಇವರಲ್ಲಿ ಇಬ್ಬರು ಗಂಭೀರವಾಗಿದ್ದಾರೆ. ಅಸ್ವಸ್ಥರನ್ನು ಹಿರಿಯೂರು ಮತ್ತು ಬೆಂಗಳೂರಿನ ಆಸ್ಪತ್ರೆ ಗಳಿಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಘಟನಾ ‌ಸ್ಥಳಕ್ಕೆ ಕೊಡಿಗೇನಹಳ್ಳಿ ಮತ್ತು ಆಂಧ್ರದ ಚೋಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಲಬೆರಕೆ ಶೇಂದಿ ಸೇವನೆ: 15 ಜನರು ಅಸ್ವಸ್ಥ Read More »

ಅನಿಲ್ ಅಂಬಾನಿ ಒಡೆತನದ 3 ಸಾವಿರ ಕೋಟಿ ರೂ. ಆಸ್ತಿ ಮುಟ್ಟುಗೋಲು: ಯಾಕೆ ಗೊತ್ತಾ?

ನವದೆಹಲಿ: ಜಾರಿ ನಿರ್ದೇಶನಾಲಯವು ಅನಿಲ್ ಅಂಬಾನಿ ಅವರ ರಿಲಯನ್ಸ್ ಗ್ರೂಪ್‌ಗೆ ಸಂಬಂಧಿಸಿದ ಕಂಪನಿಗಳ 3000 ಕೋಟಿ ರೂ. ಗಳಿಗೂ ಹೆಚ್ಚಿನ ಆಸ್ತಿಯನ್ನು ಮುಟ್ಟುಗೋಲು ‌ಹಾಕಿದೆ. ರಿಲಯನ್ಸ್ ಕಂಪನಿಗಳ ವಿರುದ್ಧದ ಹಣ ವರ್ಗಾವಣೆಯ ತನಿಖೆಯ ಭಾಗವಾಗಿ ED ಈ ಕ್ರಮ ಕೈಗೊಂಡಿದೆ ಎಂದು ತಿಳಿದು ಬಂದಿದೆ. ಅಂಬಾನಿ ಅವರ ಮುಂಬೈನ ಪಾಲಿ ಹಿಲ್‌ ನಲ್ಲಿರುವ ನಿವಾಸವೂ ಸೇರಿದಂತೆ ಅವರ ಕಂಪನಿಗಳ ಇತರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಫೆಡರಲ್ ತನಿಖಾ ಸಂಸ್ಥೆ ಪಿಎಂಎಲ್ಎ ಅಡಿಯಲ್ಲಿ ನಾಲ್ಕು ತಾತ್ಕಾಲಿಕ ಆದೇಶಗಳನ್ನು ಹೊರಡಿಸಿರುವುದಾಗಿದೆ.

ಅನಿಲ್ ಅಂಬಾನಿ ಒಡೆತನದ 3 ಸಾವಿರ ಕೋಟಿ ರೂ. ಆಸ್ತಿ ಮುಟ್ಟುಗೋಲು: ಯಾಕೆ ಗೊತ್ತಾ? Read More »

ಬೀಡಿ ಕಂಪನಿ ಮಾಲಕನನ್ನು ಗುಂಡಿಕ್ಕಿ ಸಾಯಿಸಿ ಆತ್ಮಹತ್ಯೆ ಮಾಡಿಕೊಂಡ ಮಗ

ಕುಡಿತದ ವಿಚಾರವಾಗಿ ನಡೆದ ತಂದೆ-ಮಗನ ಜಗಳ ಇಬ್ಬರ ಸಾವಿನಲ್ಲಿ ಅಂತ್ಯ ನವದೆಹಲಿ : ಭಾರತದ ಪ್ರಮುಖ ಬೀಡಿ ಬ್ರ್ಯಾಂಡ್ ದಿನೇಶ್ ಬೀಡಿಯ ಮಾಲೀಕರಾಗಿದ್ದಸುರೇಶ್ ಚಂದ್ ಎಂಬವರನ್ನು ಅವರ ಮಗನೇ ಗುಂಡು ಕೊಲೆ ಮಾಡಿ ಬಳಿಕ ತಾನೂ ಅದೇ ರಿಲಾಲ್ವರ್‌ನಿಂದ ಗುಂಡಿಕ್ಕಿಕೊಂಡು ಅತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಮಥುರಾದ ವೃಂದಾವನದಲ್ಲಿ ನಡೆದಿದೆ. ಕುಡಿತದ ವಿಚಾರವಾಗಿ ತಂದೆ ಮತ್ತು ಮಗನ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಸುರೇಶ್ ಚಂದ್ ಅಗರ್ವಾಲ್ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಅವರ ಮಗ ನರೇಶ್ ಅಗರ್ವಾಲ್​ಗೆ

ಬೀಡಿ ಕಂಪನಿ ಮಾಲಕನನ್ನು ಗುಂಡಿಕ್ಕಿ ಸಾಯಿಸಿ ಆತ್ಮಹತ್ಯೆ ಮಾಡಿಕೊಂಡ ಮಗ Read More »

ರಾಜ್ಯೋತ್ಸವದಂದು ಒಂದು ಹೃದಯೋತ್ಸವ

ಪುತ್ತೂರು: ಇಡೀ ಕರ್ನಾಟಕದಂತೆ ಪುತ್ತೂರು ಸಹ ರಾಜ್ಯೋತ್ಸವದ ಗುಂಗಿನಲ್ಲಿತ್ತು, ನವೆಂಬರ್ 1ನೇ ಶನಿವಾರದಂದು. ಆದರೆ ನತದೃಷ್ಟ ಕುಟುಂಬವೊಂದು ವಾಹನಾಪಘಾತದಲ್ಲಿ ಸಿಲುಕಿ ನೆರವಿಗಾಗಿ ರೋದಿಸುತ್ತಿತ್ತು. ಹೌದು, ಪರ್ಪುಂಜದ Abroad Auditorium ಬಳಿ ವೇಗವಾಗಿ ಬರುತ್ತಿದ್ದ ಕಾರೊಂದು ಆಟೋರಿಕ್ಷಾವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ ಹೃದಯವಿದ್ರಾವಕ ದೃಶ್ಯ ನಡುರಸ್ತೆಯಲ್ಲಿ ಮೂಡಿತ್ತು.ಆಟೋರಿಕ್ಷಾ ಚಲಾಯಿಸುತ್ತಿದ್ದ ಬನ್ನೂರಿನ ಹನೀಫ್ ತನ್ನ ಕುಟುಂಬ ಸದಸ್ಯರನ್ನು ಕರೆದೊಯ್ಯುತ್ತಿದ್ದರು. ಕಾರು ಮತ್ತು ಆಟೋಗಳ ಮುಖಾಮುಖಿ ಡಿಕ್ಕಿಯ ರಭಸಕ್ಕೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ. ಅನ್ನು ಓವರ್‌ಟೇಕ್ ಮಾಡುವ ವೇಳೆ ನಿಯಂತ್ರಣ ತಪ್ಪಿ

ರಾಜ್ಯೋತ್ಸವದಂದು ಒಂದು ಹೃದಯೋತ್ಸವ Read More »

ಬಸ್​ಗೆ ಡಿಕ್ಕಿ ಹೊಡೆದ ಲಾರಿ : 20 ಜನರು ಸಾವು

ಹೈದರಾಬಾದ್: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಬಳಿಯ ಮಿರ್ಜಗುಡದಲ್ಲಿ ಹೈದರಾಬಾದ್-ಬಿಜಾಪುರ ಹೆದ್ದಾರಿಯಲ್ಲಿ ಸೋಮವಾರ ಬೆಳಗ್ಗೆ ಬಸ್​ಗೆ ಲಾರಿ ಡಿಕ್ಕಿಹೊಡೆದು ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿ 24 ಜನ ಗಾಯಗೊಂಡಿದ್ದಾರೆ. ಜಲ್ಲಿ ತುಂಬಿದ್ದ ಟ್ರಕ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. ಟ್ರಕ್ ಅತಿ ವೇಗದಲ್ಲಿ ಚಲಿಸುತ್ತಿದ್ದದ್ದು ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಅಪಘಾತ ನಡೆದ ಸ್ಥಳದ ಬಳಿ ಅಪಾಯಕಾರಿ ತಿರುವು ಇದೆ. ಈ ಜಾಗದಲ್ಲಿ ಅತಿ ವೇಗದಲ್ಲಿ ಬಂದ ಲಾರಿ

ಬಸ್​ಗೆ ಡಿಕ್ಕಿ ಹೊಡೆದ ಲಾರಿ : 20 ಜನರು ಸಾವು Read More »

ಕೆ-ಸೆಟ್‌ ಪರೀಕ್ಷೆ ಬರೆಯಲು ಬಂದ ಮಹಿಳೆಯರ ಕಿವಿಯೋಲೆ, ಮೂಗುತಿ ಬಿಚ್ಚಿಸಿದ ಸಿಬ್ಬಂದಿ

ರಾಜ್ಯಾದ್ಯಂತ ಆಕ್ರೋಶ ವ್ಯಕ್ತ; ಧಾರ್ಮಿಕ ಭಾವನೆಗೆ ಘಾಸಿ ಮಾಡಿದ ಆರೋಪ ಬೆಂಗಳೂರು: ನಿನ್ನೆ ರಾಜ್ಯಾದ್ಯಂತ ನಡೆದ ಕೆ-ಸೆಟ್ ಪರೀಕ್ಷೆ ಬರೆಯಲು ಬಂದ ಮಹಿಳೆಯರ ಕಿವಿಯೋಲೆ, ಮೂಗುತಿಯನ್ನು ಬಿಚ್ಚಿಸಿರುವ ಕ್ರಮ ವಿವಾದದ ಸ್ವರೋಪ ಪಡೆದುಕೊಂಡಿದೆ. ಕೆಇಎ ಮಾಡಿಕೊಂಡ ಈ ಯಡವಟ್ಟಿಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕೆಲವು ತಿಂಗಳ ಹಿಂದೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(NEET) ಬರೆಯಲು ಬಂದಿದ್ದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ರಾಜ್ಯವ್ಯಾಪಿ ಸುದ್ದಿಯಾಗಿತ್ತು. ಪ್ರಕರಣಕ್ಕೆ

ಕೆ-ಸೆಟ್‌ ಪರೀಕ್ಷೆ ಬರೆಯಲು ಬಂದ ಮಹಿಳೆಯರ ಕಿವಿಯೋಲೆ, ಮೂಗುತಿ ಬಿಚ್ಚಿಸಿದ ಸಿಬ್ಬಂದಿ Read More »

ಅಫಘಾನಿಸ್ತಾನದಲ್ಲಿ ಮತ್ತೆ ಪ್ರಬಲ ಭೂಕಂಪ : ಹಲವು ಮಂದಿ ಸಾವು

6.3 ತೀವ್ರತೆಯ ಭೂಕಂಪದಿಂದ ಅನೇಕ ಕಟ್ಟಡಗಳು ಧರಾಶಾಯಿ ಕಾಬೂಲ್ : ಆಫ್ಘಾನಿಸ್ತಾನದಲ್ಲಿ ಸೋಮವಾರ ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿ ಕನಿಷ್ಠ 7 ಮಂದಿ ಸಾವನ್ನಪ್ಪಿ 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅನೇಕ ಕಟ್ಟಡಗಳು ಧರೆಗುರುಳಿವೆ. ಸೋಮವಾರ ಮುಂಜಾನೆ ಉತ್ತರ ಅಫ್ಘಾನಿಸ್ತಾನದ ಮಜಾರ್-ಎ ಶರೀಫ್ ನಗರದ ಬಳಿ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಹತ್ತಾರು ಕಟ್ಟಡಗಳು ನೆಲಕ್ಕುರುಳಿವೆ. ಪರಿಣಾಮ ಕನಿಷ್ಠ ಏಳು ಜನರು ಸಾವನ್ನಪ್ಪಿ ಸುಮಾರು 150 ಜನರು ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಅಧಿಕಾರಿಗಳು ಸೋಮವಾರ

ಅಫಘಾನಿಸ್ತಾನದಲ್ಲಿ ಮತ್ತೆ ಪ್ರಬಲ ಭೂಕಂಪ : ಹಲವು ಮಂದಿ ಸಾವು Read More »

error: Content is protected !!
Scroll to Top