ಕಾರು ಬಾಂಬ್‌ ಸ್ಫೋಟಿಸಿದ್ದು ಡಾ.ಉಮರ್‌ : ಡಿಎನ್‌ಎ ಪರೀಕ್ಷೆಯಲ್ಲಿ ದೃಢ

ಕಾರು ಚಲಾಯಿಸಿದ ವ್ಯಕ್ತಿಯ ಡಿಎನ್‌ಎ ಕುಟುಂಬವರೊಂದಿಗೆ ಮ್ಯಾಚ್‌ ನವದೆಹಲಿ: ಕೆಂಪುಕೋಟೆ ಬಳಿ ಕಾರ್ ಬಾಂಬ್‌ ಸ್ಫೋಟ ಮಾಡಿದ್ದು ಡಾ. ಉಮರ್ ನಬಿ ಎನ್ನುವುದು ಡಿಎನ್‌ಎ ಪರೀಕ್ಷೆಯಲ್ಲಿ ದೃಢಡಪಟ್ಟಿದೆ. ಐ20 ಕಾರನ್ನು ಚಲಾಯಿಸಿದ ವ್ಯಕ್ತಿ ಡಾ.ಉಮರ್‌ ಎಂದು ತನಿಖಾಧಿಕಾರಿಗಳು ಶಂಕಿಸಿದ್ದರು. ಹೀಗಿದ್ದರೂ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡುವಾಗ ಮೃತ ವ್ಯಕ್ತಿ ಉಮರ್‌ ಎನ್ನುವುದಕ್ಕೆ ವೈಜ್ಞಾನಿಕ ದಾಖಲೆಯ ಅಗತ್ಯ ಇತ್ತು. ಈ ಕಾರಣಕ್ಕೆ ಪುಲ್ವಾಮಾದಲ್ಲಿರುವ ಉಮರ್‌ ಕುಟುಂಬಸ್ಥರ ಡಿಎನ್‌ಎ ಸಂಗ್ರಹಿಸಲಾಗಿತ್ತು. ಸ್ಫೋಟದ ನಂತರ ಡಾ.ಉಮರ್‌ ಕಾಲು ಸ್ಟಿಯರಿಂಗ್ ವೀಲ್ ಮತ್ತು ಆಕ್ಸಿಲರೇಟರ್ […]

ಕಾರು ಬಾಂಬ್‌ ಸ್ಫೋಟಿಸಿದ್ದು ಡಾ.ಉಮರ್‌ : ಡಿಎನ್‌ಎ ಪರೀಕ್ಷೆಯಲ್ಲಿ ದೃಢ Read More »

ಗೃಹ ಸಚಿವರ ಟೀಕೆ ಆರೋಪ : ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಂಧನ

ಪ್ರತಿಭಟನೆ ಸಭೆಯಲ್ಲಿ ಡಾ.ಜಿ.ಪರಮೇಶ್ವರ ಅವರನ್ನು ಟೀಕಿಸಿದ್ದಕ್ಕೆ ಬಂಧನ ಬೆಂಗಳೂರು: ಗೃಹಸಚಿವ ಡಾ.ಜಿ.ಪರಮೇಶ್ವರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸಂತೋಷ್ ಕೊಟ್ಯಾನ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ನೀಡಲಾಗುತ್ತಿರುವ ಸೌಲಭ್ಯವನ್ನು ಖಂಡಿಸಿ ಮಂಗಳವಾರ ನಡೆದಿದ್ದ ಬಿಜೆಪಿ ನೇತೃತ್ವದ ಪ್ರತಿಭಟನೆಯಲ್ಲಿ ಸಂತೋಷ್ ಕೊಟ್ಯಾನ್ ಮಾತನಾಡಿದ್ದರು. ಈ ವೇಳೆ ಅವರು ಗೃಹಸಚಿವ ಡಾ.ಪರಮೇಶ್ವರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾಗಿ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದರು. ಕಾಂಗ್ರೆಸ್ ಕಾರ್ಯಕರ್ತರ ದೂರಿನ

ಗೃಹ ಸಚಿವರ ಟೀಕೆ ಆರೋಪ : ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಂಧನ Read More »

ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್: ವಿಶೇಷ ಸ್ಪರ್ಧೆಯ ಫಲಿತಾಂಶ

ಪುತ್ತೂರು: ನಗರದ ಮುಖ್ಯರಸ್ತೆಯ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ದೀಪಾವಳಿ ಹಬ್ಬದ ವಿಶೇಷಫೋಟೋ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ಬೆಳಕಿನ ಹಬ್ಬದ ಸಂದರ್ಭದಲ್ಲಿ ಕುಟುಂಬದೊಂದಿಗೆ ಕಳೆದಂತಹ ಸುಂದರ ಕ್ಷಣದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಪೇಜ್ ಫೋಲೋ ಹಾಗೂ ಟ್ಯಾಗ್ ಮಾಡಿ ಹೆಚ್ಚು ಶೇರ್‌ಗಳನ್ನು ಪಡೆಯುವ ಕುಟುಂಬದ ಪೋಸ್ಟ್‌ಗಳಿಗೆ ಆಕರ್ಷಕ ಬಹುಮಾನವನ್ನು ಗೆಲ್ಲುವ ಸ್ಪರ್ಧೆಯನ್ನು ಆಯೋಜಿಸಿದ್ದರು. ಈ ಸ್ಪರ್ಧೆಯಲ್ಲಿ ಮಂಗಳೂರಿನ ಅನನ್ಯ ಅವರು ಡೈಮಂಡ್ ಪೆಂಡೆಂಟ್ ವಿಜೇತರಾಗಿರುತ್ತಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್: ವಿಶೇಷ ಸ್ಪರ್ಧೆಯ ಫಲಿತಾಂಶ Read More »

ನ.16: ಲಿಹಾನ್ ‌ಮೆಡಿಕಲ್ ಶುಭಾರಂಭ

ಪುತ್ತೂರು: ಹರ್ಷಿತ್ ಮತ್ತು ಕೃತಿ ಅವರ ಮಾಲಕತ್ವದಲ್ಲಿ ಪುಷ್ಪಾ ಸ್ಕ್ವೇರ್, ಬೈಪಾಸ್, ತೆಂಕಿಲದಲ್ಲಿ (ವಿವೇಕಾನಂದ ಶಾಲೆಯ ಸಮೀಪ) ನೂತನ ಔಷಧ ಅಂಗಡಿ ಲಿಹಾನ್ ಮೆಡಿಕಲ್ ನವೆಂಬರ್ 16 ರಂದು ಶುಭಾರಂಭವಾಗಲಿದೆ. ಈ ಕಾರ್ಯಕ್ರಮಕ್ಕೆ ಎಲ್ಲರನ್ನೂ ಪ್ರೀತಿಪೂರ್ವಕವಾಗಿ ಸಂಸ್ಥೆಯ ಮಾಲಕರು ಆಹ್ವಾನಿಸಿರುವುದಾಗಿ ಪ್ರಕಟಣೆಯಲ್ಲಿ ‌ತಿಳಿಸಿದ್ದಾರೆ.

ನ.16: ಲಿಹಾನ್ ‌ಮೆಡಿಕಲ್ ಶುಭಾರಂಭ Read More »

ರಾಹುಲ್ ಸಿಕ್ಕರೆ ಸಂಪುಟ ಪುನಾರಚನೆ ಚರ್ಚೆ: ಸಿಎಂ ಸಿದ್ದರಾಮಯ್ಯ

ಮೈಸೂರು: ನವದೆಹಲಿ ಭೇಟಿಯ ಸಮಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿಕ್ಕಿದಲ್ಲಿ ಸಂಪುಟ ಪುನಾರಚನೆ ಬಗ್ಗೆ ಮಾತುಕತೆ ಮಾಡುತ್ತೇನೆ. ಇಲ್ಲವಾದಲ್ಲಿ ಇಲ್ಲ ಎಂದು ಸಿ ಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ದೆಹಲಿ ಪ್ರವಾಸ ಮಾಹಿತಿ ನೀಡಿದ ಅವರು, ನ.15ಕ್ಕೆ ದೆಹಲಿಗೆ ಹೋಗುತ್ತೇನೆ. ಕಪಿಲ್ ಸಿಬಲ್‌ ಅವರ ಕಾರ್ಯಕ್ರಮೆ ಇದ್ದು, ಅದಕ್ಕಾಗಿ ದೆಹಲಿಗೆ ಹೋಗುತ್ತೇನೆ. ಆ ದಿನವೇ ಹೋಗಿ ಮತ್ತೆ ವಾಪಸ್‌ ಬರುವ ಯೋಜನೆ ಇದೆ. ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಭೇಟಿಗೆ ಸಮಯ ಕೇಳಿದ್ದೇನೆ. ಅವರು ಸಮಯ

ರಾಹುಲ್ ಸಿಕ್ಕರೆ ಸಂಪುಟ ಪುನಾರಚನೆ ಚರ್ಚೆ: ಸಿಎಂ ಸಿದ್ದರಾಮಯ್ಯ Read More »

ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಲು ಆಗ್ರಹಿಸಿ ಪತ್ರ ಬರೆದ ಕಾಂಗ್ರೆಸ್‌ ಶಾಸಕ ರಾಜು ಕಾಗೆ

ಬೆಳಗಾವಿ ಅಧಿವೇಶನದಲ್ಲಿ ವಿಚಾರ ಪ್ರಸ್ತಾಪ ಮಾಡಲು ತಯಾರಿ ಬೆಂಗಳೂರು: ಉತ್ತರ ಕರ್ನಾಟಕ ಪ್ರತ್ಯೇಕ ‌ರಾಜ್ಯದ ಕೂಗು ಮತ್ತೆ ಮುನ್ನೆಲೆಗೆ ಬಂದಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಈ ಬಗ್ಗೆ ಶಾಸಕ ರಾಜು ಕಾಗೆ ಪತ್ರ ಬರೆದಿದ್ದಾರೆ. ರಾಜು ಕಾಗೆ ಪತ್ರದ ಬೆನ್ನಲ್ಲೇ ಉತ್ತರ ಕರ್ನಾಟಕ ಹೋರಾಟ ಸಮಿತಿ, ಉತ್ತರ ಕರ್ನಾಟಕ ವಿಕಾಸ ವೇದಿಕೆಯಿಂದ ಮೂರು ಬೇಡಿಕೆಗಳಿಗೆ ಆಗ್ರಹ ವ್ಯಕ್ತವಾಗಿದೆ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಇವನ್ನು ಈಡೇರಿಸದಿದ್ದರೆ ಸುವರ್ಣ ವಿಧಾನಸೌಧದ ಮೇಲೆ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಎಚ್ಚರಿಕೆ

ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಲು ಆಗ್ರಹಿಸಿ ಪತ್ರ ಬರೆದ ಕಾಂಗ್ರೆಸ್‌ ಶಾಸಕ ರಾಜು ಕಾಗೆ Read More »

ಗಣರಾಜ್ಯೋತ್ಸವ ಉಗ್ರರ ಟಾರ್ಗೆಟ್‌

ಜ.26ರಂದು ದಿಲ್ಲಿಯಲ್ಲಿ ಭಾರಿ ವಿಧ್ವಂಸಕ ಕೃತ್ಯ ಎಸಗಲು ಸಂಚು ಮಾಡಿದ್ದರು ಉಗ್ರರು ನವದೆಹಲಿ : ಜನವರಿ 26ರಂದು ಗಣರಾಜ್ಯೋತ್ಸವದ ದಿನ ಕೆಂಪುಕೋಟೆ ಸೇರಿದಂತೆ ದೆಹಲಿಯಲ್ಲಿ ಬೃಹತ್‌ ಮಟ್ಟದ ಸ್ಫೋಟ ನಡೆಸುವುದು ಉಗ್ರರ ಸಂಚಾಗಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಕೆಂಪುಕೋಟೆ ಸಮೀಪ ನವೆಂಬರ್ 10ರಂದು ಕಾರಿನಲ್ಲಿದ್ದ್‌ ಬಾಂಬ್‌ ಸ್ಫೋಟ ಗೊಂಡು 10ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಎನ್​ಐಎ ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಇಬ್ಬರು ಶಂಕಿತರ ವಿಚಾರಣೆ ನಡೆಸುವಾಗ ಹಲವು ವಿಚಾರಗಳು ಬಹಿರಂಗಗೊಂಡಿವೆ. ದೆಹಲಿ ಸ್ಫೋಟ ಪ್ರಕರಣದಲ್ಲಿ

ಗಣರಾಜ್ಯೋತ್ಸವ ಉಗ್ರರ ಟಾರ್ಗೆಟ್‌ Read More »

ಬಂಟ್ವಾಳ : ಅತ್ತೆ ಮನೆಯಲ್ಲಿದ್ದ ಮುಂಬೈಯ ಯುವತಿ ನಾಪತ್ತೆ

ಬಂಟ್ವಾಳ : ಬೆಂಜನಪದವಿನಲ್ಲಿರುವ ಅತ್ತೆಯ ಮನೆಯಲ್ಲಿ ವಾಸವಾಗಿದ್ದ ಮುಂಬೈ ಮೂಲದ ಅವಿವಾಹಿತ ಯುವತಿಯೊಬ್ಬರು ನವೆಂಬರ್ 9ರಿಂದ ಕಾಣೆಯಾಗಿರುವ ಕುರಿತು ದೂರು ದಾಖಲಾಗಿದೆ. ಬೆಂಜನಪದವಿನ ಶಿವಾಜಿನಗರದ ನಿವಾಸಿ ಮರಿಯಾ ಆಲ್ಬರ್ಟ್ ಡಿಸೋಜಾ ನಾಪತ್ತೆಯಾದ ಯುವತಿ. ಮರಿಯಾ ಒಂದು ವರ್ಷದ ಹಿಂದೆ ತನ್ನ ತಾಯಿಯನ್ನು ಕಳೆದುಕೊಂಡಿದ್ದು, ನಂತರ ಬೆಂಜನಪದವಿನಲ್ಲಿರುವ ತನ್ನ ಅತ್ತೆ ಮೊಲ್ಲಿ ಟೆಲ್ಲಿಸ್ ಅವರೊಂದಿಗೆ ವಾಸವಾಗಿದ್ದಳು. ಆಕೆಯ ತಂದೆ ಆಲ್ಬರ್ಟ್ ಡಿಸೋಜಾ ಮುಂಬೈಯಲ್ಲಿ ನೆಲೆಸಿದ್ದಾರೆ. ನವೆಂಬರ್ 9ರಂದು, ಆಕೆಯ ಅತ್ತೆ ಚರ್ಚ್‌ಗೆ ಹೋಗಿದ್ದರು. ಈ ವೇಳೆ ಮರಿಯಾ ಮನೆಯಿಂದ

ಬಂಟ್ವಾಳ : ಅತ್ತೆ ಮನೆಯಲ್ಲಿದ್ದ ಮುಂಬೈಯ ಯುವತಿ ನಾಪತ್ತೆ Read More »

ಬಾಲಿವುಡ್‌ ನಟ ಗೋವಿಂದ ತಡರಾತ್ರಿ ಆಸ್ಪತ್ರೆಗೆ ದಾಖಲು

ಮನೆಯಲ್ಲಿ ಹಠಾತ್‌ ಕುಸಿದು ಬಿದ್ದ ನಟ ಮುಂಬೈ : ಬಾಲಿವುಡ್ ಹಿರಿಯ ನಟ ಗೋವಿಂದ ಅವರನ್ನು ನಿನ್ನೆ ತಡರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಮುಂಬೈಯಲ್ಲಿರುವ ತನ್ನ ನಿವಾಸದಲ್ಲಿ ಮಂಗಳವಾರ ರಾತ್ರಿ ಕುಸಿದು ಬಿದ್ದಿದ್ದು, ಅವರನ್ನು ಜುಹುವಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವಿಚಾರವನ್ನು ಅವರ ಗೆಳೆಯ ಹಾಗೂ ಅವರ ಕಾನೂನು ಸಲಹೆಗಾರ ಲಲಿತ್ ಬಿಂದಲ್ ಖಚಿತಪಡಿಸಿದ್ದಾರೆ. ತಡರಾತ್ರಿ ಗೋವಿಂದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಈ ಸಂದರ್ಭದಲ್ಲಿ ಎಮರ್ಜೆನ್ಸಿ ವಾರ್ಡ್​ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿದೆ. ಅವರಿಗೆ ಹಲವು

ಬಾಲಿವುಡ್‌ ನಟ ಗೋವಿಂದ ತಡರಾತ್ರಿ ಆಸ್ಪತ್ರೆಗೆ ದಾಖಲು Read More »

ಟೆರರ್‌ ಡಾಕ್ಟರ್‌ ಡಾ.ಶಾಹೀನ್‌ ಕೃತ್ಯದಿಂದ ತಂದೆಗೆ ಆಘಾತ

2900 ಕೆಜಿ ಸ್ಫೋಟಕ ಪ್ರಕರಣದಲ್ಲಿ ಸೆರೆಯಾಗಿರುವ ಡಾ.ಶಾಹೀನ್‌ ನವದೆಹಲಿ: ಸ್ಫೋಟಕ ಸಾಗಣೆ ಸಂಬಂಧಿಸಿದಂತೆ ಅರೆಸ್ಟ್‌ ಆಗಿರುವ ಲಖನೌ ಮೂಲದ ವೈದ್ಯೆ ಡಾ. ಶಾಹೀನ್‌ಳ ಕೃತ್ಯ ತಂದೆ ಸೈಯದ್‌ ಅಹ್ಮದ್‌ ಅನ್ಸಾರಿಗೆ ಆಘಾತವುಂಟುಮಾಡಿದೆ. ಸೈಯದ್‌ ಅಹ್ಮದ್‌ ಅನ್ಸಾರಿಗೆ 3 ಮಕ್ಕಳು. ಶೊಯೇಬ್, ಶಾಹೀನ್ ಮತ್ತು ಪರ್ವೇಜ್. ಹಿರಿಯ ಪುತ್ರ ಶೊಯೇಬ್ ಜೊತೆ ಈಗ ವಾಸವಾಗಿದ್ದಾರೆ. ಎರಡನೆಯವಳು ಶಾಹೀನ್. ಮೂರನೇಯವನು ಪರ್ವೇಜ್ ಅನ್ಸಾರಿ. ಶಾಹೀನ್‌ಗೆ ಮಹಾರಾಷ್ಟ್ರದ ವ್ಯಕ್ತಿಯ ಜೊತೆ ಮದುವೆಯಾಗಿತ್ತು. ಆಕೆ ಫರೀದಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದಳು. ನನ್ನ ಮಗಳು ಇಂತಹ

ಟೆರರ್‌ ಡಾಕ್ಟರ್‌ ಡಾ.ಶಾಹೀನ್‌ ಕೃತ್ಯದಿಂದ ತಂದೆಗೆ ಆಘಾತ Read More »

error: Content is protected !!
Scroll to Top