ದುಬೈನಲ್ಲಿ ಕ್ರೀಡಾಕೂಟ: ಕೊಡಗು–ದಕ್ಷಿಣ ಕನ್ನಡ ಗೌಡ ಸಮಾಜದ ‘ಕ್ರಿಕೆಟ್ ಸೀಸನ್-6’, ‘ತ್ರೋಬಾಲ್ ಸೀಸನ್-1’ ಅದ್ದೂರಿ ಯಶಸ್ವಿ
ದುಬೈ: ಅನಿವಾಸಿ ಕನ್ನಡಿಗರ ಪ್ರಮುಖ ಸಂಘಟನೆಯಾದ ಕೊಡಗು–ದಕ್ಷಿಣ ಕನ್ನಡ ಗೌಡ ಸಮಾಜ ದುಬೈ ವತಿಯಿಂದ ಆಯೋಜಿಸಲಾಗಿದ್ದ ‘ಕ್ರಿಕೆಟ್ ಸೀಸನ್–6’ ಹಾಗೂ ಪ್ರಥಮ ವರ್ಷದ ‘ತ್ರೋಬಾಲ್ ಸೀಸನ್-1’ ಕ್ರೀಡಾಕೂಟವು ಫೆಬ್ರವರಿ 15 ರಂದು ದುಬೈನಲ್ಲಿ ಅತ್ಯಂತ ವೈಭವದಿಂದ ಜರುಗಿತು. ಈ ಬಾರಿಯ ಕ್ರೀಡಾಕೂಟದ ಆಕರ್ಷಕ ವಿಜೇತ ಟ್ರೋಫಿಗಳನ್ನು ಸಂಘದ ಉಪಾಧ್ಯಕ್ಷ ಸುರೇಶ್ ಕುಂಪಲ ಅವರು ತಮ್ಮ ತಾಯಿ ದಿ. ಕಮಲ ಅವರ ಸ್ಮರಣಾರ್ಥವಾಗಿ ಪ್ರಾಯೋಜಿಸಿದ್ದರು. ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಮೋಹನ್ ಕಡಂಬಳ, ಉಪಾಧ್ಯಕ್ಷ ಸುರೇಶ್ ಕುಂಪಲ ಹಾಗೂ ಸಲಹೆಗಾರರಾದ […]










