ದೇವರಾಜ ಅರಸು ದಾಖಲೆ ಬ್ರೇಕ್‌ ಮಾಡುವತ್ತ ಸಿದ್ದರಾಮಯ್ಯ

ದೀರ್ಘಾವಧಿಗೆ ರಾಜ್ಯದ ಸಿಎಂ ಆಗಿ ಅಧಿಕಾರ ಚಲಾಯಿಸಿದ ದಾಖಲೆ ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ (ಜ.6) ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಲಿದ್ದು, ಅತಿಹೆಚ್ಚು ಅವಧಿಗೆ ರಾಜ್ಯದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಎಂಬ ಇತಿಹಾಸ ಸೃಷ್ಟಿಸಲಿದ್ದಾರೆ. ಜ.7 ಕಳೆದರೆ ಸಿದ್ದರಾಮಯ್ಯ ಅವರೇ ರಾಜ್ಯದಲ್ಲಿ ಅತಿಹೆಚ್ಚು ಕಾಲ ಆಡಳಿತ ನಡೆಸಿದ ಮುಖ್ಯಮಂತ್ರಿ ಎನಿಸಿಕೊಳ್ಳಲಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಿ ಕ್ರಮ ಕೈಗೊಂಡಿದ್ದ ದೇವರಾಜ ಅರಸರು ಏಳೂವರೆ ವರ್ಷ ಮುಖ್ಯಮಂತ್ರಿಯಾಗಿದ್ದರು. ಅರಸು ತಮ್ಮ ಏಳೂವರೆ ವರ್ಷದ […]

ದೇವರಾಜ ಅರಸು ದಾಖಲೆ ಬ್ರೇಕ್‌ ಮಾಡುವತ್ತ ಸಿದ್ದರಾಮಯ್ಯ Read More »

ಸೋಷಿಯಲ್‌ ಮೀಡಿಯಾದಲ್ಲಿ ಪ್ರಚೋದನಕಾರಿ ಪೋಸ್ಟ್ : ಸ್ವಯಂಪ್ರೇರಿತ ಕೇಸ್‌ ದಾಖಲಿಸಿದ ಪೊಲೀಸರು

ಗೋಮಾಂಸ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಂಗಳೂರು: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ ಡಿ.27ರಂದು ನಾರ್ಲಪದವು ಪ್ರದೇಶದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಿಗೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಗೂ ಬೆದರಿಕೆ ಕಾಮೆಂಟ್ ಮಾಡಿದ ಕುರಿತು ಬಜಪೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ನಾರ್ಲಪದವು ಎಂಬಲ್ಲಿ ಅಬ್ದುಲ್ ಸತ್ತಾರ್ ಎಂಬವರು ಮಗಳನ್ನು ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ಆರೋಪದ ಕುರಿತು ಒಂದು ಪ್ರಕರಣ ದಾಖಲಾಗಿದ್ದು, ಇದೇ

ಸೋಷಿಯಲ್‌ ಮೀಡಿಯಾದಲ್ಲಿ ಪ್ರಚೋದನಕಾರಿ ಪೋಸ್ಟ್ : ಸ್ವಯಂಪ್ರೇರಿತ ಕೇಸ್‌ ದಾಖಲಿಸಿದ ಪೊಲೀಸರು Read More »

ಸುಳ್ಯ : ತಾಯಿ, ಮಗುವಿನ ಮೃತದೇಹ ಕೆರೆಯಲ್ಲಿ ಪತ್ತೆ

ಸುಳ್ಯ: ತಾಯಿ ಮತ್ತು ಮೂರು ವರ್ಷದ ಮಗುವಿನ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಿಯಾಲ ಗ್ರಾಮದಲ್ಲಿ ಭಾನುವಾರ ನಡೆದಿದೆ. ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಆರ್ವಾರ ಹರೀಶ್ ಎಂಬವರ ಪತ್ನಿ ಮಧುಶ್ರೀ (34) ಹಾಗೂ ಅವರ ಮೂರು ವರ್ಷದ ಮಗು ಧನ್ವಿ ಮೃತರು. ಹರೀಶ್ ಅವರು ತಂದೆ, ತಾಯಿ, ಪತ್ನಿ, ಮಗುವಿನೊಂದಿಗೆ ಆರ್ವಾರ ಮನೆಯಲ್ಲಿ ವಾಸಿಸುತ್ತಿದ್ದು, ಶನಿವಾರ ರಾತ್ರಿ ಮಲಗಿದ್ದ ತಾಯಿ, ಮಗು ಭಾನುವಾರ ಬೆಳಗ್ಗೆ ಕಾಣೆಯಾಗಿದ್ದರು. ಹುಡುಕಾಡಿದಾಗ

ಸುಳ್ಯ : ತಾಯಿ, ಮಗುವಿನ ಮೃತದೇಹ ಕೆರೆಯಲ್ಲಿ ಪತ್ತೆ Read More »

ಓಂ ಶಕ್ತಿ ರಥಯಾತ್ರೆ ಮೇಲೆ ಕಲ್ಲು ತೂರಾಟ : ಮೂವರಿಗೆ ಗಾಯ

ರಾತ್ರಿ ರಥಯಾತ್ರೆ ನಡೆಯುತ್ತಿದ್ದಾಗ ಕಲ್ಲು ತೂರಿದ ಅನ್ಯಕೋಮಿನವರು ಬೆಂಗಳೂರು: ದೇವಿಯ ತೇರು ಎಳೆಯುತ್ತಿರುವ ವೇಳೆ ತೇರಿನ ಮೇಲೆ ಹಾಗೂ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ಎಸೆದಿರುವ ಘಟನೆ ಬೆಂಗಳೂರಿನ ಜೆಜೆ ನಗರದ ವಿಎಸ್ ಗಾರ್ಡನ್‌ನ ಓಂ ಶಕ್ತಿ ದೇವಸ್ಥಾನದ ಬಳಿ ಭಾನುವಾರ ರಾತ್ರಿ ನಡೆದಿದ್ದು, ಇಲ್ಲಿನ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಮೂವರಿಗೆ ಕಲ್ಲೇಟು ಬಿದ್ದಿರುವ ಬಗ್ಗೆ ಆರೋಪ ಕೇಳಿಬಂದಿದೆ. ಕಲ್ಲು ಎಸೆದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಮಗು, ಯುವತಿ, ವಯಸ್ಕ ಮಹಿಳೆಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಕಿಡಿಗೇಡಿಗಳನ್ನು

ಓಂ ಶಕ್ತಿ ರಥಯಾತ್ರೆ ಮೇಲೆ ಕಲ್ಲು ತೂರಾಟ : ಮೂವರಿಗೆ ಗಾಯ Read More »

ಬಾಂಗ್ಲಾದೇಶದಲ್ಲಿ ಐಪಿಎಲ್‌ ಬ್ಯಾನ್‌

ಕೆಕೆಆರ್‌ ತಂಡದಿಂದ ಬಾಂಗ್ಲಾದ ಆಟಗಾರನನ್ನು ಕೈಬಿಟ್ಟದ್ದಕ್ಕೆ ಪ್ರತಿಕಾರದ ಕ್ರಮ ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ದಾಳಿಯನ್ನು ಖಂಡಿಸಿ ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ (ಐಪಿಎಲ್‌) ಬಾಂಗ್ಲಾದೇಶದ ಆಟಗಾರರನ್ನು ಕೈ ಬಿಡುವಂತೆ ಪ್ರತಿಭಟನೆಗಳು ನಡೆದಿದ್ದವು. ಇದಕ್ಕೆ ಮಣಿದು ಬಿಸಿಸಿಐ ಶಾರೂಕ್‌ ಖಾನ್‌ ಒಡೆತನದ ಕೆಕೆಆರ್ ತಂಡದಲ್ಲಿದ್ದ ಬಾಂಗ್ಲಾದ ಮುಸ್ತಫಿಝುರ್ ರೆಹಮಾನ್ ಅವರನ್ನು ಕೈ ಬಿಡುವಂತೆ ಸೂಚಿಸಿತ್ತು. ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಮುಸ್ತಫಿಝುರ್ ರೆಹಮಾನ್ ಅವರನ್ನು ತಂಡದಿಂದ ಕೈ ಬಿಟ್ಟಿದೆ. ಇದರ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಐಪಿಎಲ್ ನಿಷೇಧಿಸಲು ಮುಂದಾಗಿದ್ದಾರೆ. ಬಾಂಗ್ಲಾದೇಶದ

ಬಾಂಗ್ಲಾದೇಶದಲ್ಲಿ ಐಪಿಎಲ್‌ ಬ್ಯಾನ್‌ Read More »

ಲವ್‌ ಜಿಹಾದ್‌ ಆರೋಪಿ ಕಾಡಿನಲ್ಲಿ ಆತ್ಮಹತ್ಯೆ

ಮದುವೆಯಾಗಲು ನಿರಾಕರಿಸಿದ ಮಹಿಳೆಯನ್ನು ಕೊಂದು ಪಲಾಯನ ಮಾಡಿದ್ದ ರಫೀಕ್‌ ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಭಾರಿ ಪ್ರತಿಭಟನೆಗೆ ಕಾರಣವಾಗಿರುವ ಲವ್‌ ಜಿಹಾದ್‌ ಕೇಸ್‌ ದಿಢೀರ್‌ ಟ್ವಿಸ್ಟ್‌ ಪಡೆದುಕೊಂಡಿದೆ. ಲವ್‌ ಜಿಹಾದ್‌ ಮಾಡಿ ಹಿಂದು ಮಹಿಳೆಯ ಕೊಲೆ ಎಸಗಿದ ಆರೋಪಿಯೂ ಸಾವಿಗೆ ಶರಣಾಗಿದ್ದಾನೆ. ಮದುವೆಗೆ ಒಪ್ಪದಿದ್ದಕ್ಕೆ ವಿಚ್ಛೇದಿತ ಮಹಿಳೆಯ ಬರ್ಬರ ಹತ್ಯೆ ಮಾಡಿದ್ದ ಆರೋಪಿ ರಫೀಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶನಿವಾರ ರಂಜಿತಾ ಎಂಬಾಕೆಯನ್ನು ಕೊಲೆಗೈದು ಪರಾರಿಯಾಗಿ ಅರಣ್ಯದಲ್ಲಿ ಅಡಗಿದ್ದ ಆರೋಪಿ ರಫೀಕ್‌ನ(30) ಮೃತದೇಹ

ಲವ್‌ ಜಿಹಾದ್‌ ಆರೋಪಿ ಕಾಡಿನಲ್ಲಿ ಆತ್ಮಹತ್ಯೆ Read More »

ಕಾಂಗ್ರೆಸ್‌ ನಾಯಕನ ಗನ್‌ಮ್ಯಾನ್‌ ಬಂದೂಕಿನಿಂದ ಸಿಡಿದ ಗುಂಡಿನಿಂದ ರಾಜಶೇಖರ್‌ ಸಾವು

ಬಳ್ಳಾರಿ ಬ್ಯಾನರ್‌ ಗಲಾಟೆ ಸಂದರ್ಭದಲ್ಲಿ ಗುಂಡು ಹಾರಿಸಿದ್ದ ಸತೀಶ್‌ ರೆಡ್ಡಿಯ ಗನ್‌ಮ್ಯಾನ್‌ಗಳು ಬಳ್ಳಾರಿ : ಬ್ಯಾನರ್​​ ಅಳವಡಿಕೆ ವಿಚಾರವಾಗಿ ಶಾಸಕರಾದ ಜನಾರ್ದನ ರೆಡ್ಡಿ ಮತ್ತು ಭರತ್​​ ರೆಡ್ಡಿ ಬೆಂಬಲಿಗರ ಮಾರಾಮಾರಿ ವೇಳೆ ಬುಲೆಟ್​​ ತಗುಲಿ ಮೃತಪಟ್ಟಿದ್ದ ಕಾಂಗ್ರೆಸ್​​ ಕಾರ್ಯಕರ್ತನ ಸಾವಿನ ಕೇಸ್​​ಗೆ ಸ್ಫೋಟಕ ತಿರುವು ಸಿಕ್ಕಿದೆ. ಸತೀಶ್ ರೆಡ್ಡಿ ಗನ್‌ಮ್ಯಾನ್ ಫೈರ್​​ ಮಾಡಿದ್ದ ಬಂದೂಕಿನ ಬುಲೆಟ್​​ ತಗುಲಿ ಯುವಕ ರಾಜಶೇಖರ್​​ ಮೃತಪಟ್ಟಿದ್ದಾರೆ ಎಂಬುದು ದೃಢಪಟ್ಟಿದೆ ಎನ್ನಲಾಗಿದೆ. 12 ಎಂಎಂ ಬುಲೆಟ್​​ನಿಂದ ರಾಜಶೇಖರ್​​ ಜೀವ ಹೋಗಿದ್ದು, ಸತೀಶ್ ರೆಡ್ಡಿ

ಕಾಂಗ್ರೆಸ್‌ ನಾಯಕನ ಗನ್‌ಮ್ಯಾನ್‌ ಬಂದೂಕಿನಿಂದ ಸಿಡಿದ ಗುಂಡಿನಿಂದ ರಾಜಶೇಖರ್‌ ಸಾವು Read More »

ಕಾರಿನಲ್ಲಿ ಅಡಗಿಸಿಟ್ಟಿದ್ದ 21 ಕೆ.ಜಿ. ಗಾಂಜಾ ವಶ : ಇಬ್ಬರ ಬಂಧನ

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಾರಾಟ ಮಾಡಲು ತಂದಿದ್ದ ಡ್ರಗ್ಸ್‌ ಮಂಗಳೂರು: ಹೊಸ ವರ್ಷಾಚರಣೆಗೆಂದು ಮಾರಾಟ ಮಾಡಲು ತಂದಿದ್ದ 21.450 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿರುವ ಮಂಗಳೂರು ಪೊಲೀಸರು ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ. ಶನಿವಾರ ಖಚಿತ ಮಾಹಿತಿಯ ಮೇರೆಗೆ ಸುರತ್ಕಲ್ ಪೊಲೀಸರು ಈ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಗ್ರಾಮದ ಪರಮೇಶ್ವರಿ ನಗರದ 2ನೇ ಕ್ರಾಸ್‌ನಲ್ಲಿರುವ ಬೆನಕ ಎಂಬ ಮನೆಯ ಬಳಿ ಮಾರಾಟಕ್ಕಾಗಿ ಕಾರಿನಲ್ಲಿ ಗಾಂಜಾ ಸಂಗ್ರಹಿಸಲಾಗಿದೆ ಎಂಬ ಮಾಹಿತಿಯ ಮೇರೆಗೆ ಪೊಲೀಸರು ದಾಳಿ

ಕಾರಿನಲ್ಲಿ ಅಡಗಿಸಿಟ್ಟಿದ್ದ 21 ಕೆ.ಜಿ. ಗಾಂಜಾ ವಶ : ಇಬ್ಬರ ಬಂಧನ Read More »

ರೈಲು ನಿಲ್ದಾಣದಲ್ಲಿ ಭೀಕರ ಬೆಂಕಿ ಅವಘಡ : ನೂರಾರು ವಾಹನಗಳು ಸುಟ್ಟು ಕರಕಲು

ಪಾರ್ಕಿಂಗ್‌ ಪ್ರದೇಶದಲ್ಲಿ ಸಂಭವಿಸಿದ ಅವಘಡದಲ್ಲಿ 500ಕ್ಕೂ ಅಧಿಕ ಬೈಕ್‌ಗಳು ಭಸ್ಮ ತ್ರಿಶ್ಶೂರ್ : ತ್ರಿಶ್ಶೂರ್ ರೈಲು ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ನೂರಾರು ಬೈಕ್‌ಗಳು ಸುಟ್ಟು ಕರಕಲಾಗಿವೆ. ಬೈಕ್ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ ಅನಾಹುತ ಸಂಭಿಸಿದ್ದು, 2ನೇ ಪ್ಲಾಟ್‌ಫಾರ್ಮ್‌ ತನಕ ವ್ಯಾಪಿಸಿದೆ. ನಿಲ್ಲಿಸಲಾಗಿದ್ದ ನೂರಾರು ಬೈಕ್‌ಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಘಟನೆ ಬೆಳಗ್ಗೆ ಸುಮಾರು 6.15ರ ವೇಳೆಗೆ ನಡೆದಿದೆ ಎಂದು ವರದಿಯಾಗಿದೆ. ರೈಲು ನಿಲ್ದಾಣದ ಎರಡನೇ ಗೇಟ್ ಸಮೀಪ ಇರುವ ಬೈಕ್ ಪಾರ್ಕಿಂಗ್

ರೈಲು ನಿಲ್ದಾಣದಲ್ಲಿ ಭೀಕರ ಬೆಂಕಿ ಅವಘಡ : ನೂರಾರು ವಾಹನಗಳು ಸುಟ್ಟು ಕರಕಲು Read More »

ಧರ್ಮಸ್ಥಳ ಕೇಸ್‌ : ಪೂರ್ಣ ತನಿಖಾ ವರದಿ ಸಲ್ಲಿಸಲು ಕೋರ್ಟ್‌ ಆದೇಶ

ಮಂಗಳೂರು: ನೂರಾರು ಶವ ಹೂತಿಟ್ಟ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಪೂರ್ಣ ವರದಿಯನ್ನು ಸಲ್ಲಿಸುವಂತೆ ವಿಶೇಷ ತನಿಖಾ ತಂಡಕ್ಕೆ ಬೆಳ್ತಂಗಡಿ ನ್ಯಾಯಾಲಯ ಆದೇಶಿಸಿದೆ. ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಿದ ಪ್ರಕರಣದ ತನಿಖೆ ನಡೆಸಿದ ಎಸ್‌ಐಟಿ ನ.20ರಂದು ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ತನಿಖೆಯ ಪ್ರಾಥಮಿಕ ವರದಿ ಸಲ್ಲಿಸಿತ್ತು. ಶನಿವಾರ ನಡೆದ ವಿಚಾರಣೆ ವೇಳೆ ಆದಷ್ಟು ಶೀಘ್ರವಾಗಿ ತನಿಖೆ ನಡೆಸಿ ಅಂತಿಮ ವರದಿಯನ್ನು ಸಲ್ಲಿಸಬೇಕೆಂದು ಬೆಳ್ತಂಗಡಿ ಹೆಚ್ಚುವರಿ ನ್ಯಾಯಾಲಯದ

ಧರ್ಮಸ್ಥಳ ಕೇಸ್‌ : ಪೂರ್ಣ ತನಿಖಾ ವರದಿ ಸಲ್ಲಿಸಲು ಕೋರ್ಟ್‌ ಆದೇಶ Read More »

error: Content is protected !!
Scroll to Top