ಸಂಭವವೀಯ ದಾಳಿಯ ಸಾಧ್ಯತೆ: ಇರಾನ್ ತೊರೆಯುವಂತೆ ಭಾರತೀಯರಿಗೆ ಮುನ್ನೆಚ್ಚರಿಕೆ

ನವದೆಹಲಿ: ಇರಾನಿನ ಮೇಲೆ ಅಮೇರಿಕಾ ವೈಮಾನಿಕ ದಾಳಿ ಸಂಭವಿಸುವ ಸಾಧ್ಯತೆ ಇದ್ದು, ಆದಷ್ಟು ಬೇಗ ಇರಾನ್ ತೊರೆಯುವಂತೆ ಭಾರತೀಯರಿಗೆ ಭಾರತ ರಾಯಭಾರ ಕಚೇರಿ ಮುನ್ನೆಚ್ಚರಿಕೆ ನೀಡಿದೆ. ವಿದ್ಯಾರ್ಥಿಗಳು, ಯಾತ್ರಿಕರು, ಉದ್ಯಮಿಗಳು ಸೇರಿದಂತೆ ಭಾರತೀಯ ಮೂಲದ ಎಲ್ಲರಿಗೂ ಸರ್ಕಾರ ಈ ಮುನ್ನೆಚ್ಚರಿಕೆ ನೀಡಿರುವುದಾಗಿದೆ. ಹಾಗೆಯೇ ಪ್ರತಿಭಟನೆಗಳು ನಡೆಯುವ ಸ್ಥಳಕ್ಕೆ ಹೋಗದಂತೆಯೂ ಸೂಚನೆ ನೀಡಲಾಗಿದೆ. ಇರಾನ್‌ನಲ್ಲಿರುವವರು ತಮ್ಮ ಪಾಸ್‌ಪೋರ್ಟ್ ಮತ್ತು ಇತರೆ ಗುರುತಿನ ದಾಖಲೆಗಳನ್ನು ಸದಾ ಕೈಯಲ್ಲಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಸಹಾಯಕ್ಕಾಗಿ ರಾಯಭಾರ ಕಚೇರಿಯ […]

ಸಂಭವವೀಯ ದಾಳಿಯ ಸಾಧ್ಯತೆ: ಇರಾನ್ ತೊರೆಯುವಂತೆ ಭಾರತೀಯರಿಗೆ ಮುನ್ನೆಚ್ಚರಿಕೆ Read More »

ಮನೆಗೆ ಬಂದು ಕಾರಿನ ಗಾಜು ಒಡೆದ ಮೆಸ್ಕಾಂ ಸಿಬ್ಬಂದಿ

ಸುಳ್ಯ: ಮನೆಯಲ್ಲಿ ತಂದೆ ಮತ್ತು ತಾಯಿ ಮಾತ್ರವೇ ಇದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಬಂದು‌‌ ಕಾರಿನ ಗಾಜನ್ನು ಹೆಲ್ಮೆಟಿನಿಂದ ಹೊಡೆದು ಹಾನಿ ಮಾಡಿರುವುದಾಗಿ ಬಾಲಚಂದ್ರ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬ ಬೈಕಿನಲ್ಲಿ ಬಂದು ಗೇಟಿನೊಳಕ್ಕೆ ಪ್ರವೇಶಿಸಿ ಈ ಕೃತ್ಯ ಎಸಗಿದ್ದಾನೆ. ಆತನನ್ನು ಮನೆಯಲ್ಲಿ ಇದ್ದವರು ಪ್ರಶ್ನೆ ಮಾಡಿದ್ದು, ಆತ ಉತ್ತರಿಸದೇ ಜಾಗ ಖಾಲಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಹಾನಿಯಾದ ಗಾಜಿನ ಮೌಲ್ಯ ಐದು ಸಾವಿರ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಾಹಿತಿ

ಮನೆಗೆ ಬಂದು ಕಾರಿನ ಗಾಜು ಒಡೆದ ಮೆಸ್ಕಾಂ ಸಿಬ್ಬಂದಿ Read More »

ಹತ್ತನೇ ತರಗತಿ ವಿದ್ಯಾರ್ಥಿನಿಯ ಮೃತದೇಹ ಕೆರೆಯಲ್ಲಿ ಪತ್ತೆ

ವಿಟ್ಲ: ನಗರದ ಕೊಡಂಗಾಯಿ ಬಳಿಯ ಮೂರುಕಜೆಯ ವಿದ್ಯಾ ಸಂಸ್ಥೆಯೊಂದರ ಹತ್ತನೇ ತರಗತಿಯ ವಿದ್ಯಾರ್ಥಿನಿಯ ಶವ ಕೆರೆಯಲ್ಲಿ ಪತ್ತೆಯಾಗಿದೆ. ಬೆಂಗಳೂರು ಮೂಲದ ವೈಗಲಕ್ಷ್ಮೀ ಎಂಬಾಕೆಯೇ ಮೃತ ವಿದ್ಯಾರ್ಥಿನಿ. ಆಕೆ ನಿನ್ನೆಯಿಂದ ನಾಪತ್ತೆಯಾಗಿದ್ದು, ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ‌ಮರಣೋತ್ತರ ಪರೀಕ್ಷಾ ಹಿನ್ನೆಲೆಯಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ಹತ್ತನೇ ತರಗತಿ ವಿದ್ಯಾರ್ಥಿನಿಯ ಮೃತದೇಹ ಕೆರೆಯಲ್ಲಿ ಪತ್ತೆ Read More »

ಖಾಸಗಿ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ

ದಾವಣಗೆರೆ: ಇಂಜೆಕ್ಷನ್ ಓವರ್‌ಡೋಸ್ ಚುಚ್ಚಿಕೊಂಡು ವೈದ್ಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ. ಮಹಾರಾಷ್ಟ್ರ ಮೂಲದ ಸಿದ್ಧಾರ್ಥ ತ್ರಯಂಬಕೆ(30) ಮೃತಪಟ್ಟ ವಿದ್ಯಾರ್ಥಿ. ಸಿದ್ಧಾರ್ಥ ಅವರು ದಾವಣಗೆರೆಯ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಚರ್ಮರೋಗ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದರು. ಅವರು ಓವರ್ ಡೋಸ್ ಇಂಜೆಕ್ಷನ್ ಚುಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವುದಾಗಿದೆ. ಸಿದ್ದಾರ್ಥ ಅವರ ಕೋಣೆ ಲಾಕ್ ಆಗಿದ್ದ ಕಾರಣ ಸಂದೇಹದಿಂದ ಇತರ ವಿದ್ಯಾರ್ಥಿಗಳು ಬಾಗಿಲು ಒಡೆದು ಪರಿಶೀಲನೆ ಮಾಡಿದ್ದಾರೆ. ಆಗ ಈ ಘಟನೆ

ಖಾಸಗಿ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ Read More »

ಅಂತಾರಾಜ್ಯ ‌ಡ್ರಗ್ಸ್ ಮಾರಾಟಗಾರರ ಬಂಧನ

ಮಂಗಳೂರು: ಅಂತರಾಜ್ಯ ಗಾಂಜಾ ಮಾರಾಟ ಜಾಲವನ್ನು ಬೇಧಿಸಿರುವ ಮಂಗಳೂರು ನಗರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ಅವರಿಂದ 22 ಕೆ.ಜಿ. 250 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆದಿದ್ದಾರೆ. ಪಣಂಬೂರು ಠಾಣಾ ವ್ಯಾಪ್ತಿಯ ಜೋಕಟ್ಟೆ ಕ್ರಾಸ್ ರೈಲ್ವೆ ಬ್ರಿಡ್ಜ್ ಹತ್ತಿರ ಅಕ್ರಮ ಗಾಂಜಾ ಮಾರಾಟ ನಡೆಯುತ್ತಿರುವ ಖಚಿತ ಮಾಹಿತಿಯನ್ವಯ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳನ್ನು ಬಂಧಿಸಿರುವುದಾಗಿದೆ. ಆರೋಪಿಗಷನ್ನು ಕರಣ್ ಬಾಬು ರಾಮ್ ಜಾದವ್, ಸಮೀರ್ ಶಾ, MH ಮಯ್ಯದಿ, ಇಬ್ರಾಹಿಂ ಕರೀಂ ಎಂದು ಗುರುತಿಸಲಾಗಿದೆ. ಆರೋಪಿಗಳ

ಅಂತಾರಾಜ್ಯ ‌ಡ್ರಗ್ಸ್ ಮಾರಾಟಗಾರರ ಬಂಧನ Read More »

ಚಿನ್ನ ಕದ್ದ ಆರೋಪ: ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಮಹಿಳೆ

ಕಾಸರಗೋಡು: ನೆರೆಮನೆಯಿಂದ ಚಿನ್ನ ಕದ್ದ ಆರೋಪ ಹೊತ್ತಿದ್ದ ಮಹಿಳೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನಾಲತ್ತಡ್ಕದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಜಸೀಲಾ(24) ಎಂದು ಗುರುತಿಸಲಾಗಿದೆ. ಜಸೀಲಾ ಸಾವಿಗೂ ಮುನ್ನ ವಿಡಿಯೋ ಒಂದನ್ನು ಮಾಡಿದ್ದು, ಅದರಲ್ಲಿ ತಾನು ಯಾವ ಚಿನ್ನವನ್ನೂ ಕದ್ದಿಲ್ಲ. ನಾನೇನೂ ತಪ್ಪು ಮಾಡಿಲ್ಲ. ನಾನು ಚಿನ್ನ ಕದ್ದಿದ್ದಾಗಿ ಆರೋಪಿಸಿ ಪೊಲೀಸರು ಮನೆಯನ್ನು ಶೋಧಿಸಿದರು. ಇದರಿಂದ ನನ್ನ ಮನೆಯವರು ತೀವ್ರ ನೊಂದಿದ್ದಾರೆ. ನಾನು ಕದ್ದಿದ್ದರೆ ಅಲ್ಲವೇ ಕೊಡುವುದು. ಇಲ್ಲವಾದರೆ ಎಲ್ಲಿಂದ ತಂದು ಕೊಡಲಿ. ನಾನು ಸತ್ತರೆ

ಚಿನ್ನ ಕದ್ದ ಆರೋಪ: ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಮಹಿಳೆ Read More »

ಮಂಗಳೂರು ನಗರದಲ್ಲೂ ಚಿರತೆ ಓಡಾಟ!

ಜನವಸತಿ ಪ್ರದೇಶದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುವ ಚಿರತೆಯಿಂದ ಆತಂಕ ಮಂಗಳೂರು: ನಗರದ ಮರೋಳಿ ಮತ್ತು ಶಕ್ತಿನಗರ ಪರಿಸರದಲ್ಲಿ ಚಿರತೆ ಆಗಾಗ ಕಾಣಿಸಿಕೊಳ್ಳುತ್ತಿದ್ದು, ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಭಾನುವಾರ ಬೆಳಗ್ಗೆಯೂ ಚಿರತೆ ಪ್ರತ್ಯಕ್ಷವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಫೆಬ್ರವರಿ 17ರಿಂದ ಶಕ್ತಿನಗರ, ಮರೋಳಿ ಮತ್ತು ಹತ್ತಿರದ ರೈಲ್ವೆ ಹಳಿ ಬಳಿ ಪ್ರತಿದಿನ ಚಿರತೆ ಕಾಣಿಸಿಕೊಳ್ಳುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಶಕ್ತಿನಗರದ ಮನೆಯೊಂದರ ಕಾಂಪೌಂಡ್ ಒಳಗೆ ಚಿರತೆಯು ಗೇಟ್ ಮೂಲಕ ಪ್ರವೇಶಿಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಸತಿ

ಮಂಗಳೂರು ನಗರದಲ್ಲೂ ಚಿರತೆ ಓಡಾಟ! Read More »

ಬುಲೆಟ್‌ನಲ್ಲಿ ಜಾಲಿ ರೈಡ್‌ ಮಾಡುವಾಗ ಅಪಘಾತ : ಓರ್ವ ಯುವತಿ ಸಾವು, ಇನ್ನೋರ್ವ ಗಂಭೀರ

ಹೆಲ್ಮೆಟ್‌ ಧರಿಸದೆ ಬೈಕ್‌ ಚಲಾಯಿಸುವಾಗ ಹಂಪ್‌ನಲ್ಲಿ ಪಲ್ಟಿ ಬೆಂಗಳೂರು : ಬುಲೆಟ್ ಬೈಕ್‌ನಲ್ಲಿ ಸ್ನೇಹಿತೆಯರಿಬ್ಬರು ಜಾಲಿ ರೈಡ್‌ ಮಾಡುವಾಗ ಅಪಘಾತ ಸಂಭವಿಸಿದ ಓರ್ವ ಯುವತಿ ಮೃತಪಟ್ಟು ಇನ್ನೋರ್ವ ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನದಲ್ಲಿ ಸಂಭವಿಸಿದೆ. ಬೈಕ್‌ ವೇಗವಾಗಿ ಚಲಾಯಿಸುವಾಗ ಹಂಪ್ಸ್ ಕಾಣದೆ ಬೈಕ್‌ ಪಲ್ಟಿಯಾಗಿ ಯುವತಿಯವರು ರಸ್ತೆಗೆ ಹಾರಿ ಬಿದ್ದಿದ್ದು, ಪರಿಣಾಮ ಓರ್ವ ಯುವತಿ ಸಾವನ್ನಪ್ಪಿದ್ದಾಳೆ. ಹಾಸನ ನಗರ ಕೈಗಾರಿಕಾ ಪ್ರದೇಶದಲ್ಲಿ ಈ ಅಪಘಾತ ನಡೆದಿದ್ದು, ಇಬ್ಬರೂ ಹೆಲ್ಮೆಟ್‌ ಧರಿಸಿರಲಿಲ್ಲ ಎನ್ನಲಾಗಿದೆ. ಸತ್ಯಮಂಗಲ ಬಡಾವಣೆಯ ಪ್ರಿಯಾ

ಬುಲೆಟ್‌ನಲ್ಲಿ ಜಾಲಿ ರೈಡ್‌ ಮಾಡುವಾಗ ಅಪಘಾತ : ಓರ್ವ ಯುವತಿ ಸಾವು, ಇನ್ನೋರ್ವ ಗಂಭೀರ Read More »

ಅಕ್ಷಯ ಕಾಲೇಜಿನ ಎನ್‌ಎಸ್‌ಎಸ್ ಸೇವಾ ಶಿಬಿರ

ಸಂಪ್ಯ: ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಇದರ ನೇತೃತ್ವದಲ್ಲಿ ‘ನನ್ನ ಭಾರತಕ್ಕಾಗಿ ಯುವ ಜನತೆ, ಡಿಜಿಟಲ್ ಸಾಕ್ಷರತೆಗಾಗಿ ಯುವಜನತೆ’ ಎಂಬ ಶಿರೋನಾಮೆಯೊಂದಿಗೆ ವಾರ್ಷಿಕ ವಿಶೇಷ ಶಿಬಿರ 2025-26 ಪ್ರಾರಂಭ ಗೊಂಡಿತು. ಶಿಬಿರವನ್ನು ಶ್ರೀ ರಾಮಚಂದ್ರ ಪದವಿಪೂರ್ವ ವಿದ್ಯಾಲಯ ಅಯೋಧ್ಯಾ ನಗರ ಪೆರ್ನೆ ಇಲ್ಲಿ ಆಯೋಜಿಸಲಾಯಿತು. ಹರೀಶ್ ಭಂಡಾರಿ ಟಿ, ವಕೀಲರು ಉಚ್ಚನ್ಯಾಯಾಲಯ, ಬೆಂಗಳೂರು ಸಂಚಾಲಕರು ಶ್ರೀ ರಾಮಚಂದ್ರ ವಿದ್ಯಾಲಯ ಅಯೋಧ್ಯಾ ನಗರ ಪೆರ್ನೆ ಇವರು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಜಯಂತ ನಡುಬೈಲು

ಅಕ್ಷಯ ಕಾಲೇಜಿನ ಎನ್‌ಎಸ್‌ಎಸ್ ಸೇವಾ ಶಿಬಿರ Read More »

ಸ್ನೇಹಮಯಿ ಕೃಷ್ಣ ವಿರುದ್ಧ ಇನ್ನೊಂದು ಕೇಸ್‌

ದೂರು ನೀಡಿದ ಎರಡು ತಿಂಗಳ ಬಳಿಕ ಎಫ್‌ಐಆರ್‌ ದಾಖಲು ಬೆಂಗಳೂರು: ಮುಡಾ ಹಗರಣದ ದೂರುದಾರ, ಸಾಮಾಜಿಕ ಕಾರ್ಯಕರ್ತ ಸ್ನೇಹಿಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.ಪವಿತ್ರ ಎಂಬ ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬೆದರಿಕೆ ಹಾಗೂ ಪ್ರೊ.ಮೈಲಾರಪ್ಪ ವಿರುದ್ಧ ಕೊಟ್ಟಿರುವ ಕೇಸ್ ವಾಪಸ್ ಪಡೆದುಕೊಳ್ಳುವಂತೆ ಬೆದರಿಕೆ ಹಾಗೂ ಒತ್ತಡ ಹಾಕುತ್ತಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಸ್ನೇಹಮಯಿ ಕೃಷ್ಣ ಅವರನ್ನು ಎ1 ಆರೋಪಿಯನ್ನಾಗಿ

ಸ್ನೇಹಮಯಿ ಕೃಷ್ಣ ವಿರುದ್ಧ ಇನ್ನೊಂದು ಕೇಸ್‌ Read More »

error: Content is protected !!
Scroll to Top