ಪುತ್ತೂರಿಗೆ ತಂದ ದೂರದೃಷ್ಟಿಯ ಯೋಜನೆಗಳೇ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲಿದೆ : ಸಂಜೀವ ಮಠಂದೂರು ವಿಶ್ವಾಸ

ಪುತ್ತೂರು: ಅಧಿಕಾರಸ್ಥರಿಗೆ ಸವಾಲು ಅನೇಕವಂತೆ. ಆದ್ದರಿಂದ ಕೇಂದ್ರದಲ್ಲಿ, ರಾಜ್ಯದಲ್ಲಿ, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಧಿಕಾರರೂಢ ಬಿಜೆಪಿ ಕಡೆ ತೂರಿ ಬರುವ ಪ್ರಶ್ನೆಗಳ, ಸವಾಲುಗಳ ಸಂಖ್ಯೆ ಅಧಿಕವೇ. ಮಾಡಿರುವ ಅಭಿವೃದ್ಧಿ ಕಾರ್ಯಗಳೇಷ್ಟೇ ಇರಲಿ, ಅವುಗಳನ್ನು ಬದಿಗೊತ್ತಿ ವಿವಾದಗಳ ಹುಡುಕಾಟದಲ್ಲಿವೆಯೇ ವಿಪಕ್ಷಗಳು ಎನ್ನುವುದು ಚುನಾವಣೆ ಸಂದರ್ಭ ಸಾಮಾನ್ಯವಾಗಿ ಕೇಳಿಬರುವ ಪ್ರಶ್ನೆ. ಮತ್ತೊಮ್ಮೆ ಅಧಿಕಾರ ಪಡೆದೇ ತೀರಬೇಕು ಎನ್ನುವ ಹಪಹಪಿಯಲ್ಲಿರುವ ವಿಪಕ್ಷಗಳು, ಸಣ್ಣ – ಪುಟ್ಟ ವಿವಾದಗಳ ವಿಜೃಂಭಣೆಯಲ್ಲಿವೆ ಎನ್ನುವ ಮಾತು ಕೇಳಿಬರುತ್ತಿವೆ. ಹಾಗಾದರೆ ಬಿಜೆಪಿ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳೇನು? […]

ಪುತ್ತೂರಿಗೆ ತಂದ ದೂರದೃಷ್ಟಿಯ ಯೋಜನೆಗಳೇ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲಿದೆ : ಸಂಜೀವ ಮಠಂದೂರು ವಿಶ್ವಾಸ Read More »

ದಾರಿ ದೀಪ : ಪದವಿ ಮೆಟ್ಟಿಲು ಹತ್ತದೆ ಸಿ.ಎ. ಮುಗಿಸಿದ ಚತುರ

ಯಶಸ್ಸಿನ ಹಿಂದಿನ ಗುಟ್ಟು ತೆರೆದಿಟ್ಟ ರಘುರಾಮ್ ಪ್ರಭು ಕನಸುಗಳು ಯಾರಿಗಿಲ್ಲ ಹೇಳಿ. ಎಲ್ಲರೂ ಕನಸು ಕಾಣುತ್ತಾರೆ. ಅದು ಹಗಲೋ, ಇರುಳೋ? ಅಂತು ಕನಸು ಕನಸೇ! ಆದರೆ ನನಸು? ಕಠಿಣ ದುಡಿಮೆ, ತಾಳ್ಮೆ, ಅಧಮ್ಯ ಉತ್ಸಾಹ ಜೊತೆಗೊಂದಿಷ್ಟು ಪ್ರೋತ್ಸಾಹ ಸಿಕ್ಕರೆ ಯಶಸ್ಸು ಕಟ್ಟಿಟ್ಟ ಬುತ್ತಿ. ನಮ್ಮ ಕನಸುಗಳು ನನಸಾಗಲೂ ಪರಿಶ್ರಮವೆಂಬ ಅಸ್ತ್ರದಿಂದ ಮಾತ್ರ ಸಾದ್ಯ. ಸದಾ ಅದರಲ್ಲೆ ನಮ್ಮ ಮನಸು ಹೊರಳಿದರೆ ಕನಸು ನನಸಾಗಲು ಸಾಧ್ಯ. ನಮ್ಮ ಸುತ್ತಮುತ್ತಲು ಪುಷ್ಪವರಳಿ ಪರಿಮಳ ಹರಡಿದಂತೆ ಸಾಧನೆಯ ಸುದ್ದಿ ಎಲ್ಲೆಲ್ಲೋ ಹರಡಿ

ದಾರಿ ದೀಪ : ಪದವಿ ಮೆಟ್ಟಿಲು ಹತ್ತದೆ ಸಿ.ಎ. ಮುಗಿಸಿದ ಚತುರ Read More »

ಶ್ರೀ ಕ್ಷೇತ್ರ ಧ. ಗ್ರಾಮಾಭಿವೃದ್ಧಿ ಯೋಜನೆಯ ಸ್ವರ್ಣಶ್ರೀ ಒಕ್ಕೂಟದ ತ್ರೈಮಾಸಿಕ ಸಭೆ

ಪುತ್ತೂರು: ಶ್ರೀ ಕ್ಷೇತ್ರ ಧ. ಗ್ರಾಮಾಭಿವೃದ್ಧಿ ಯೋಜನೆಯ ಸ್ವರ್ಣಶ್ರೀ ಒಕ್ಕೂಟದ ತ್ರೈಮಾಸಿಕ ಸಭೆ ಮಂಗಳವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಭಾಂಗಣದಲ್ಲಿ ನಡೆಯಿತು. ಒಕ್ಕೂಟದ ಅಧ್ಯಕ್ಷ ರತ್ನಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಮೇಲ್ವಿಚಾರಕಿ ಯೊಗೀಶ್ವರಿ, ಸೇವಾ ಪ್ರತಿನಿಧಿ ಆಶಾಲತಾ ಯೋಜನೆಯ ಮಾಹಿತಿ ನೀಡಿದರು. ಸುಜ್ಞಾನ ತಂಡದ ಶ್ರೀಧರ್ ಕೆ. ಉಪಸ್ಥಿತರಿದ್ದರು. ಶಾರದಾಂಬಾ ತಂಡದ ರಾಜಾರಾಮ್ ವರದಿ ವಾಚಿಸಿದರು. ಸುಜ್ಞಾನ ತಂಡದ ವೀಣಾ ಸ್ವಾಗತಿಸಿ, ಶಾರದಾಂಬಾ ತಂಡದ ಉದಯಶಂಕರ್ ವಂದಿಸಿದರು. ಸುಜ್ಞಾನ ತಂಡದ ಸತೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಶ್ರೀ ಕ್ಷೇತ್ರ ಧ. ಗ್ರಾಮಾಭಿವೃದ್ಧಿ ಯೋಜನೆಯ ಸ್ವರ್ಣಶ್ರೀ ಒಕ್ಕೂಟದ ತ್ರೈಮಾಸಿಕ ಸಭೆ Read More »

ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆ | ಒಕ್ಕಲಿಗ ಸ್ವಸಹಾಯ ಸಂಘದ ಸದಸ್ಯರಿಗೆ ಸೀರೆ ಸಮವಸ್ತ್ರ

ಪುತ್ತೂರು: ಒಕ್ಕಲಿಗ ಸ್ವಸಹಾಯ ಸಂಘದ ಸುಮಾರು 5 ಸಾವಿರ ಮಹಿಳೆಯರು ಜ. 22ರಂದು ನಡೆಯಲಿರುವ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆ ಕಾರ್ಯಕ್ರಮದಲ್ಲಿ ಸಮವಸ್ತ್ರ ತೊಟ್ಟು, ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ. ಒಕ್ಕಲಿಗ ಸ್ವಸಹಾಯ ಸಂಘದಲ್ಲಿ ಸುಮಾರು 8 ಸಾವಿರ ಸದಸ್ಯರಿದ್ದು, ಇದರಲ್ಲಿ 5 ಸಾವಿರ ಮಂದಿ ಮಹಿಳೆಯರು. ಅವರಿಗೆ ಸಮವಸ್ತ್ರ ವಿತರಣೆ ಮಾಡಲಿದ್ದು, ಸಾಂಕೇತಿಕವಾಗಿ ಮಂಗಳವಾರ ಸಮಿತಿಯ ಕಾರ್ಯಾಲಯದಲ್ಲಿ ಸಮವಸ್ತ್ರ ವಿತರಿಸಲಾಯಿತು. ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ

ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆ | ಒಕ್ಕಲಿಗ ಸ್ವಸಹಾಯ ಸಂಘದ ಸದಸ್ಯರಿಗೆ ಸೀರೆ ಸಮವಸ್ತ್ರ Read More »

ವಿವೇಕಾನಂದ ಕಾಲೇಜು ರಸ್ತೆಯ ರೈಲ್ವೇ ಮೇಲ್ಸೆತುವೆ ವಿಸ್ತರಣೆಗೆ 5.34 ಕೋಟಿ ರೂ. | ಶಾಸಕ ಸಂಜೀವ ಮಠಂದೂರು ಮಾಹಿತಿ

ಪುತ್ತೂರು: ನೆಹರೂನಗರದ ವಿವೇಕಾನಂದ ಕಾಲೇಜು ರಸ್ತೆಯ ರೈಲ್ವೇ ಮೇಲ್ಸೆತುವೆ ವಿಸ್ತರಣೆಗೆ 5.34 ಕೋಟಿ ರೂ. ಮಂಜೂರಾಗಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಅವರ ಪ್ರಯತ್ನ, ನಮ್ಮ ಒತ್ತಾಯಕ್ಕೆ ಬೆಲೆ ಸಿಕ್ಕಂತಾಗಿದೆ. ಈ ಹಿಂದೆ ತಾನು ಕೂಡ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದು, ರೈಲ್ವೇ ಓವರ್ ಬ್ರಿಡ್ಜಿನ ಅಗತ್ಯತೆಯನ್ನು ತಿಳಿಸಿದ್ದು, ನಮ್ಮೆಲ್ಲರ ಪ್ರಯತ್ನ ಫಲ ನೀಡಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ರೈಲ್ವೇ ಇಲಾಖೆಯ ಸೌತ್ ವೆಸ್ಟರ್ನ್ ವಿಭಾಗ ಅನುದಾನ ಮಂಜೂರುಗೊಳಿಸಿ

ವಿವೇಕಾನಂದ ಕಾಲೇಜು ರಸ್ತೆಯ ರೈಲ್ವೇ ಮೇಲ್ಸೆತುವೆ ವಿಸ್ತರಣೆಗೆ 5.34 ಕೋಟಿ ರೂ. | ಶಾಸಕ ಸಂಜೀವ ಮಠಂದೂರು ಮಾಹಿತಿ Read More »

ಜ. 22: ದಕ್ಷಿಣ ಕನ್ನಡದಲ್ಲಿ ಸಂಘಟನೆ ಮಾಡಿದ್ದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆ

ಪುತ್ತೂರು: 1979ರಲ್ಲಿ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ದಕ್ಷಿಣ ಕನ್ನಡಕ್ಕೆ ಬಂದಿದ್ದರು. ಆಗ ಒಕ್ಕಲುತನ ಮಾಡುತ್ತಿದ್ದ ಮನೆಗಳಲ್ಲಿ ನಿಂತು, ಇಲ್ಲಿನ ಕೃಷಿ ಕಾರ್ಯದ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದರು. ಸಂಘಟನೆಯ ಕಾರ್ಯಕ್ಕೂ ಚಾಲನೆ ನೀಡಿ, ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನ ನಿರ್ಮಾಣಕ್ಕೆ, ಕೊಂಬೆಟ್ಟು ಐಟಿಐ ನಿರ್ಮಾಣಕ್ಕೆ ಕಾರಣಕರ್ತರಾದರು. ಅವರ ಈ ಎಲ್ಲಾ ಕೆಲಸಗಳನ್ನು ನೆನಪಿಸಿಕೊಳ್ಳುವ ಹಿನ್ನೆಲೆಯಲ್ಲಿ ಜ. 22ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ

ಜ. 22: ದಕ್ಷಿಣ ಕನ್ನಡದಲ್ಲಿ ಸಂಘಟನೆ ಮಾಡಿದ್ದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆ Read More »

ಮದ್ಯ ಸೇವನೆ ವಯೋಮಿತಿ ಇಳಿಸಲು ಚಿಂತನೆ

ಈ ನಿಯಮ ಜಾರಿಗೆ ಬಂದರೆ ಹದಿಹರೆಯದವರಿಗೂ ಸಿಗುತ್ತದೆ ಮದ್ಯ ಬೆಂಗಳೂರು: ಮದ್ಯ ಖರೀದಿ ಮತ್ತು ಸೇವನೆಯ ವಯಸ್ಸಿನ ಮಿತಿಯನ್ನು ಇಳಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ. ಕರ್ನಾಟಕ ಅಬಕಾರಿ ಕಾಯ್ದೆ 1965ರ ಪ್ರಕಾರ ಮದ್ಯ ಖರೀದಿಸುವ ವಯಸ್ಸು 21 ವರ್ಷ ಇದೆ. ಈಗ ಈ ಮಿತಿಯನ್ನು 18 ವರ್ಷಕ್ಕೆ ಇಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಕುರಿತು ಅಬಕಾರಿ ಇಲಾಖೆ ಜ.9ರಂದು ಕರಡು ಪ್ರಕಟಿಸಿದ್ದು, 30 ದಿನಗಳಲ್ಲಿ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದು

ಮದ್ಯ ಸೇವನೆ ವಯೋಮಿತಿ ಇಳಿಸಲು ಚಿಂತನೆ Read More »

ಅವರ ಸಿನೆಮಾ, ಬದುಕು, ರಾಜಕೀಯ ಎಲ್ಲವೂ ವರ್ಣರಂಜಿತ

ತಮಿಳುನಾಡಿನ ಚಹರೆಯನ್ನೇ ಬದಲಾಯಿಸಿದ ಮಹಾನಾಯಕ! ತಮಿಳುನಾಡಿನ ಸಿನಿಮಾ ರಂಗ, ರಾಜಕೀಯ ಮತ್ತು ಸಾಂಸ್ಕೃತಿಕ ಅಸ್ಮಿತೆಯ ಚಹರೆಯನ್ನು ಬದಲಾಯಿಸಿದ ಓರ್ವ ವ್ಯಕ್ತಿ ಇದ್ದರೆ ಅದು ಎಂ.ಜಿ. ರಾಮಚಂದ್ರನ್. ಅವರ ಬದುಕಿನ ಪ್ರತಿ ಪುಟವೂ ಅವರ ಸಿನೆಮಾಗಳ ಹಾಗೆ ವರ್ಣರಂಜಿತ ಮತ್ತು ಸ್ಫೂರ್ತಿದಾಯಕ ಸಂಗತಿ. ಅನಾಥ ಬಾಲ್ಯದ ಅಸಹಾಯಕತೆ ನಿಮಗೆ ಆಶ್ಚರ್ಯ ಆಗಬಹುದು ಏಕೆಂದರೆ ಎಂ.ಜಿ.ಆರ್. ಹುಟ್ಟಿದ್ದು ತುಳುನಾಡಿನಲ್ಲಿ ಅಲ್ಲ. ಅವರು ಹುಟ್ಟಿದ್ದು ಶ್ರೀಲಂಕಾದಕ್ಯಾಂಡಿಯಲ್ಲಿ. ಅದೂ ಮಲಯಾಳಿ ಕುಟುಂಬದಲ್ಲಿ. ಎರಡೂವರೆ ವರ್ಷ ಪ್ರಾಯದಲ್ಲಿ ಅಪ್ಪನನ್ನು ಕಳೆದುಕೊಂಡಾಗ ತನ್ನ ಇಬ್ಬರು ಗಂಡು

ಅವರ ಸಿನೆಮಾ, ಬದುಕು, ರಾಜಕೀಯ ಎಲ್ಲವೂ ವರ್ಣರಂಜಿತ Read More »

ಮೊರಾರ್ಜಿ ವಸತಿ ಶಾಲೆಯ 80 ಮಕ್ಕಳು ಅಸ್ವಸ್ಥ

ಕೆಟ್ಟು ಹೋದ ಆಹಾರ ಸೇವನೆ ಶಂಕೆ ಶಿವಮೊಗ್ಗ: ಇಲ್ಲಿನ ಗೋಂದಿಚಟ್ನ ಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸುಮಾರು ಎಂಬತ್ತು ವಿದ್ಯಾರ್ಥಿಗಳು ಸೋಮವಾರ ಮಧ್ಯಾಹ್ನದ ಊಟ ಮುಗಿಸಿದ ಬಳಿಕ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.ಮಕ್ಕಳು ಅಸ್ವಸ್ಥಗೊಳ್ಳಲು ಆಹಾರ ಕಾರಣವೇ ಅಥವಾ ನೀರು ಕಾರಣವೇ ಎನ್ನುವುದು ಸ್ಪಷ್ಟವಾಗಿಲ್ಲ. ಮಧ್ಯಾಹ್ನದ ಚಪಾತಿ, ಅನ್ನ ಸಾಂಬಾರು ಸೇವಿಸಿದ ಬಳಿಕ ಮಕ್ಕಳಲ್ಲಿ ವಾಂತಿ ಮತ್ತು ಬೇಧಿ ಆರಂಭವಾಗಿದೆ.ಸುಮಾರು 250ಕ್ಕೂ ಹೆಚ್ಚು ಮಕ್ಕಳಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಮಧ್ಯಾಹ್ನ ಚಪಾತಿ

ಮೊರಾರ್ಜಿ ವಸತಿ ಶಾಲೆಯ 80 ಮಕ್ಕಳು ಅಸ್ವಸ್ಥ Read More »

ಮತ್ತೆ ಬಂದ ಮಾಸ್ಕ್‌, ಸ್ಯಾನಿಟೈಸರ್‌, ಸೋಷಿಯಲ್‌ ಡಿಸ್ಟನ್ಸ್‌

ಕೇರಳದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯಗೊಳಿಸಿ ಆದೇಶ ತಿರುವನಂತಪುರ : ಕೊರೊನ ವೈರಸ್‌ನ ಹೊಸ ತಳಿ ಪತ್ತೆಯಾದ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಕೋವಿಡ್ ಹೆಚ್ಚಳವಾಗುವ ಅಪಾಯದಲ್ಲಿರುವುದರಿಂದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹೇಳಿದೆ. ಎಲ್ಲಾ ಸಾರ್ವಜನಿಕ ಸ್ಥಳಗಳು, ಕೆಲಸದ ಸ್ಥಳಗಳು ಮತ್ತು ಸಭೆ ಸಮಾರಂಭಗಳಲ್ಲಿ ಜನರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಸಾಮಾಜಿಕ ಅಂತರವನ್ನು ಪಾಲಿಸುವಂತೆ ರಾಜ್ಯ ಸರ್ಕಾರ ತನ್ನ ಆದೇಶದಲ್ಲಿ ಜನರಿಗೆ ನಿರ್ದೇಶನ ನೀಡಿದೆ. ಇದಲ್ಲದೆ

ಮತ್ತೆ ಬಂದ ಮಾಸ್ಕ್‌, ಸ್ಯಾನಿಟೈಸರ್‌, ಸೋಷಿಯಲ್‌ ಡಿಸ್ಟನ್ಸ್‌ Read More »

error: Content is protected !!
Scroll to Top